FD interest rates : ಐಒಬಿಯಲ್ಲಿ ಎಫ್‌ಡಿಗೆ 7.25%, ಹಿರಿಯ ನಾಗರಿಕರಿಗೆ 7.75% ಬಡ್ಡಿ ದರ - Vistara News

ಪ್ರಮುಖ ಸುದ್ದಿ

FD interest rates : ಐಒಬಿಯಲ್ಲಿ ಎಫ್‌ಡಿಗೆ 7.25%, ಹಿರಿಯ ನಾಗರಿಕರಿಗೆ 7.75% ಬಡ್ಡಿ ದರ

ಸಾರ್ವಜನಿಕ ವಲಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಸಿದೆ. ವಿವರ ಇಲ್ಲಿದೆ.

VISTARANEWS.COM


on

IOB
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸಾರ್ವಜನಿಕ ವಲಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ (Indian Overseas Bank ) ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಠೇವಣಿಗಳಿಗೆ ಏಪ್ರಿಲ್‌ 10, 2023ರಿಂದ ಪರಿಷ್ಕೃತ ಬಡ್ಡಿ ದರಗಳು (revised interest rate) ಅನ್ವಯಿಸಲಿದೆ ಎಂದು ಬ್ಯಾಂಕ್‌ ವೆಬ್‌ಸೈಟ್‌ ತಿಳಿಸಿದೆ.

ಸಾರ್ವಜನಿಕರಿಗೆ 7 – 29 ದಿನಗಳ ನಡುವೆ ಮೆಚ್ಯೂರ್‌ ಆಗುವ ನಿಶ್ಚಿತ ಠೇವಣಿಗಳಿಗೆ 4% ಬಡ್ಡಿ ದರ ಸಿಗಲಿದೆ. 30-90 ದಿನಗಳ ಅವಧಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.25% ಬಡ್ಡಿ ಸಿಗಲಿದೆ. 91-179 ದಿನಗಳಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.5 ಬಡ್ಡಿ ಸಿಗಲಿದೆ. 180-269 ದಿನಗಳಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.95% ಬಡ್ಡಿ ದೊರೆಯಲಿದೆ. 270-1 ವರ್ಷದ ಠೇವಣಿಗೆ 5.35%, 1-2 ವರ್ಷಕ್ಕೆ 6.5% ಬಡ್ಡಿ ಸಿಗಲಿದೆ. 444 ದಿನಗಳಲ್ಲಿ ಮೆಚ್ಯೂರ್‌ ಆಗುವ ಠೇವಣಿಗೆ 7.25% ಸಿಗಲಿದೆ.

ಹಿರಿಯ ನಾಗರಿಕರಿಗೆ ಐಒಬಿಯಲ್ಲಿ 2-3 ವರ್ಷದ ಠೇವಣಿಗೆ 7.55% ಬಡ್ಡಿ ಆದಾಯ ಸಿಗಲಿದೆ. 5 ವರ್ಷಗಳ ಠೇವಣಿಗೆ 7.25% ಬಡ್ಡಿ ದೊರೆಯಲಿದೆ.

ಅಂಚೆ ಇಲಾಖೆ ಉಳಿತಾಯ ಯೋಜನೆಗಳು ಈಗ ಆಕರ್ಷಕ:

ತೀರಾ ಇತ್ತೀಚಿನವರೆಗೂ ಅಂಚೆ ಇಲಾಖೆಯ ಟರ್ಮ್‌ ಡೆಪಾಸಿಟ್‌ಗಳು (post office term deposit) ಬ್ಯಾಂಕ್‌ಗಳ ಎಫ್‌ಡಿಗಿಂತ (fixed deposit) ಕಡಿಮೆ ಬಡ್ಡಿ ದರವನ್ನು ನೀಡುತ್ತಿದ್ದವು. ಆದರೆ ಇದೀಗ ಮತ್ತೆ ಪೈಪೋಟಿ ನೀಡಲು ಆರಂಭಿಸಿವೆ. ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ ಎರಡನೇ ಬಾರಿಗೆ ಪರಿಷ್ಕರಿಸಿ ಏರಿಸಿರುವುದು ಇದಕ್ಕೆ ಕಾರಣವಾಗಿದೆ.

ಉದಾಹರಣೆಗೆ ಎರಡು ವರ್ಷ ಅವಧಿಯ ಅಂಚೆ ಕಚೇರಿಯ ಟರ್ಮ್‌ ಡೆಪಾಸಿಟ್‌ ಈಗ 6.5% ಬಡ್ಡಿ ನೀಡುತ್ತಿವೆ. ಇದು ಬಹುತೇಕ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿಗೆ ಸಮವಾಗಿದೆ. 2022ರ ಮೇ ಬಳಿಕ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಸರಣಿ ರೂಪದಲ್ಲಿ ರೆಪೊ ದರವನ್ನು ಏರಿಸಿತ್ತು. ಇದರ ಪರಿಣಾಮ ನಿಶ್ಚಿತ ಠೇವಣಿಗಳ ಬಡ್ಡ ದರ ಏರಿಕೆಯಾಗಿದೆ.

2022ರ ಮೇಯಿಂದ 2023ರ ಫೆಬ್ರವರಿ ನಡುವೆ ಹೊಸ ಠೇವಣಿಗಳಿಗೆ weighted average domestic term deposit rate (ರಿಟೇಲ್‌ ಮತ್ತು ಸಗಟು) 2.22%ರಷ್ಟು ಏರಿಕೆಯಾಗಿದೆ. ಸರ್ಕಾರವು ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿ 2022-23ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕಕ್ಕೆ 0.30% ತನಕ, 2022-23ರ ಜನವರಿ-ಮಾರ್ಚ್‌ ಅವಧಿಗೆ 1.10% ತನಕ ಏರಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

World War 3: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಕುಶಾಲ್‌ ಕುಮಾರ್ ಅವರು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್‌ ಕುಮಾರ್‌ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

World War 3
Koo

ನವದೆಹಲಿ: ಅಫಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಜಾರಿಗೆ ಬಂದಿದ್ದು, ಮಾನವ ಹಕ್ಕುಗಳು ಸರ್ವನಾಶಗೊಂಡಿವೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಲೇ ಇದೆ. ಇದೆಲ್ಲದ ಕಾರಣ ನಾಸ್ಟ್ರಾಡಾಮಸ್‌ ಹಾಗೂ ಬಾಬಾ ವಂಗಾ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ, ಭಾರತದ ಜ್ಯೋತಿಷಿಯೊಬ್ಬರು ಮುಂದಿನ 48 ಗಂಟೆಗಳಲ್ಲಿಯೇ ಮೂರನೇ ಮಹಾಯುದ್ಧ ಆರಂಭವಾಗಲಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಭವಿಷ್ಯ ನುಡಿದಿರುವುದು ಸಂಚಲನ ಮೂಡಿಸಿದೆ.

ಹೌದು, ಹರಿಯಾಣದವರಾದ ಕುಶಾಲ್‌ ಕುಮಾರ್‌ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. “2024ರ ಜೂನ್‌ 18ರಿಂದಲೇ ಅಂದರೆ, ಮುಂದಿನ 48 ಗಂಟೆಗಳಲ್ಲಿಯೇ ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗಲಿದೆ. ತಮ್ಮನ್ನು ತಾವು ವೈದಿಕ ಜ್ಯೋತಿಷಿ ಎಂದು ಘೋಷಿಸಿಕೊಂಡಿರುವ ಕುಶಾಲ್‌ ಕುಮಾರ್‌ ಅವರು ಇದುವರೆಗೆ ನುಡಿದ ಭವಿಷ್ಯಗಳು ನಿಜವಾಗಿವೆ. ಜೂನ್‌ 18ರಂದೇ ಜಾಗತಿಕವಾಗಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆಯಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಜ್ಯೋತಿಷಿ ಕುಶಾಲ್‌ ಕುಮಾರ್.‌

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಕುಶಾಲ್‌ ಕುಮಾರ್ ಅವರು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್‌ ಕುಮಾರ್‌ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಕೊರಿಯಾ ಸೈನಿಕರು ದಕ್ಷಿಣ ಕೊರಿಯಾ ಗಡಿಗಳತ್ತ ನುಗ್ಗುತ್ತಿದ್ದಾರೆ. ಇಸ್ರೇಲ್‌ ಹಾಗೂ ಗಾಜಾ ನಡುವಿನ ಸಮರವು ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಉಕ್ರೇನ್‌ನಲ್ಲಿ ರಷ್ಯಾವಂತೂ ಮಾರಣಹೋಮ ನಡೆಸುತ್ತಿದೆ. ಇನ್ನು ಕಳೆದ ಜೂನ್‌ನಲ್ಲಿಯೇ ಜಮ್ಮು-ಕಾಶ್ಮೀರದಲ್ಲಿ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದೆಲ್ಲ ಕಾರಣದಿಂದಾಗಿ ಜಾಗತಿಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ, ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇದರಿಂದ ಜಾಗತಿಕ ಅಶಾಂತಿ ಸೃಷ್ಟಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?

Continue Reading

ಪ್ರಮುಖ ಸುದ್ದಿ

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

NCERT Textbooks: ಎನ್‌ಸಿಇಆರ್‌ಟಿ ಪಠ್ಯದಲ್ಲಿ ‘ಬಾಬ್ರಿ ಮಸೀದಿ’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಬಾಬ್ರಿ ಮಸೀದಿಯನ್ನು ಮೂರು ಅಂತಸ್ತಿನ ಗೊಮ್ಮಟ ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಅಯೋಧ್ಯೆಯ ಕುರಿತ ನಾಲ್ಕು ಪುಟಗಳ ಅಧ್ಯಾಯವನ್ನು ತೆಗೆದುಹಾಕಿದೆ. ಸೋಮನಾಥ ದೇವಾಲಯದಿಂದ ಅಯೋಧ್ಯೆವರೆಗೆ ಎಲ್‌.ಕೆ.ಅಡ್ವಾಣಿ ಅವರು ಕೈಗೊಂಡ ರಥಯಾತ್ರೆ, ಕರಸೇವೆ ಸೇರಿ ಹಲವು ಅಂಶಗಳನ್ನು ತೆಗೆದುಹಾಕಲಾಗಿದೆ.

VISTARANEWS.COM


on

NCERT Textbooks
Koo

ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿಯು (NCERT) 12ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ (NCERT Textbooks) ಕೆಲ ಬದಲಾವಣೆಗಳನ್ನು ಮಾಡಿದೆ. ಅದರಲ್ಲೂ, ರಾಜಕೀಯ ಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿ, ಕರಸೇವೆ ಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಿದೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.

ಎನ್‌ಸಿಇಆರ್‌ಟಿ ಪಠ್ಯದಲ್ಲಿ ‘ಬಾಬ್ರಿ ಮಸೀದಿ’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಬಾಬ್ರಿ ಮಸೀದಿಯನ್ನು ಮೂರು ಅಂತಸ್ತಿನ ಗೊಮ್ಮಟ ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಅಯೋಧ್ಯೆಯ ಕುರಿತ ನಾಲ್ಕು ಪುಟಗಳ ಅಧ್ಯಾಯವನ್ನು ತೆಗೆದುಹಾಕಿದೆ. ಸೋಮನಾಥ ದೇವಾಲಯದಿಂದ ಅಯೋಧ್ಯೆವರೆಗೆ ಎಲ್‌.ಕೆ.ಅಡ್ವಾಣಿ ಅವರು ಕೈಗೊಂಡ ರಥಯಾತ್ರೆ, ಕರಸೇವೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮಗೊಳಿಸಿದ್ದಕ್ಕೆ ಬಿಜೆಪಿ ನಾಯಕರ ವಿಷಾದದ ಹೇಳಿಕೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ.

Ayodhya Babri Masjid

ಬಾಬ್ರಿ ಮಸೀದಿ ಉಲ್ಲೇಖ ತೆಗೆದುಹಾಕಿದ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ ಅವರು ಇಂಡಿಯಾ ಟುಡೇ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. “ವಿದ್ಯಾರ್ಥಿಗಳು ಏಕೆ ಗಲಭೆ, ಹಿಂಸಾಚಾರ ಸೇರಿ ಹಲವು ನಕಾರಾತ್ಮಕ ಅಂಶಗಳ ಕುರಿತು ಕಲಿಯಬೇಕು. ಗುಜರಾತ್‌ ಹಿಂಸಾಚಾರ, ಬಾಬ್ರಿ ಮಸೀದಿ ನೆಲಸಮ ಸೇರಿ ಹಲವು ಅಂಶಗಳ ಕುರಿತು ಏಕೆ ಅಧ್ಯಯನ ಮಾಡಬೇಕು. ಅಷ್ಟಕ್ಕೂ, ನಾವು ಪಠ್ಯವನ್ನು ತಯಾರಿಸುವಾಗ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಿಲ್ಲ. ತಜ್ಞರ ಶಿಫಾರಸಿನಂತೆ ಬದಲಾವಣೆ ಮಾಡಲಾಗಿದೆ” ಎಂದು ತಿಳಿಸಿದರು.

ಬಾಬ್ರಿ ಮಸೀದಿ ಬದಲು ಮೂರು ಅಂತಸ್ತಿನ ಗುಮ್ಮಟ ಎಂದು ಪ್ರಸ್ತಾಪಿಸಿರುವುದು, ಗುಜರಾತ್‌ ಹಿಂಸಾಚಾರವನ್ನು ಕೈಬಿಟ್ಟಿರುವುದು ಸೇರಿ ಹಲವು ಅಂಶಗಳನ್ನು ಕೈಬಿಟ್ಟಿರುವ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದಾಗ್ಯೂ, ಎನ್‌ಸಿಇಆರ್‌ಟಿಯು ಬಳಿಕ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Textbook Revision: ಪಠ್ಯ ಪುಸ್ತಕ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ; ಯಾವ ಪಾಠಗಳಿಗೆ ಕೊಕ್‌?

Continue Reading

ಪ್ರಮುಖ ಸುದ್ದಿ

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Parenting Tips: ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

VISTARANEWS.COM


on

Parenting Tips
Koo

ಅಪ್ಪ ಅಮ್ಮನಾಗುವುದು ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ. ಆಗಷ್ಟೇ ಹೊಟ್ಟೆಯಿಂದ ಹೊರಬಂದ ಮಗುವಿಗೆ ಹೇಗೆ ಈ ಜಗತ್ತು ಹೊಸದೋ ಹಾಗೆಯೇ ಅಪ್ಪ ಅಮ್ಮಂದಿರಿಗೂ ಈ ಜಗತ್ತು ಹೊಸದೇ. ಮಗುವಿನ ಹಾಗೆ ಅವರೂ ಮಕ್ಕಳ ಲೋಕವನ್ನು ಕಣ್ಣು ಬಿಟ್ಟು ನೋಡಲು ಶುರು ಮಾಡುವ ಹೊತ್ತಿದು. ಮಗು ಬಂದ ಮೇಲೆ ಹೇಗಿರಬಹುದು ಎಂದು ಕನಸು ಕಾಣುತ್ತಾ ಒಂಬತ್ತು ತಿಂಗಳು ಕಳೆದ ಜೋಡಿಗೆ ಮಗುವಿನ ಲೋಕದ ಬಗ್ಗೆ ಕಂಡಿದ್ದ ಕನಸುಗಳೆಲ್ಲವೂ ಒಮ್ಮೆಲೆ ವಾಸ್ತವದಿಂದ ದೂರ ಇದೆ ಅನಿಸಬಹುದು. ಯಾಕೆಂದರೆ, ಆ ಸಮಯ ಬದುಕಿನ ಅತ್ಯಂತ ಮುಖ್ಯವಾದ ನೆನಪಿನಲ್ಲಿಟ್ಟುಕೊಳ್ಳುವ ಖುಷಿಯ ಗಳಿಗೆ ಎಂಬುದು ನಿಜವೇ ಆದರೂ, ಹೊಸ ಅಪ್ಪ ಅಮ್ಮಂದಿರಿಗೆ (Parenting Tips) ಈ ಹೊಸ ಲೋಕದಲ್ಲಿ ಸಾಕಷ್ಟು ಸವಾಲುಗಳು ದಿಢೀರ್‌ ಎದುರಾಗುತ್ತವೆ. ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ (Parents) ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

  1. ಮಗುವಿನ ಆಗಮನವಾದಾಗ ಅಷ್ಟರವರೆಗೆ ಮನೆಯಲ್ಲಿದ್ದ ಬದುಕಿನ ಕ್ರಮ, ವೇಳಾಪಟ್ಟಿ ಎಲ್ಲವೂ ಅಲ್ಲೋಲ ಕಲ್ಲೋಲವಾಗುತ್ತದೆ. ಇಂಥ ಸಂದರ್ಭ ಗಂಡ ತನ್ನ ಹೆಂಡತಿಯ ಬದಲಾದ ಹೊಸ ಪ್ರಪಂಚವನ್ನು ಪರಿಪೂರ್ಣ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಆಕೆಯ ದಿನಚರಿ ಸಂಪೂರ್ಣ ಬದಲಾಗಿರುತ್ತದೆಯಷ್ಟೇ ಅಲ್ಲ, ಆಕೆ, ಆಗಷ್ಟೇ ಹೆರಿಗೆಯಿಂದ ಮರುಜನ್ಮ ಪಡೆದಿರುತ್ತಾಳೆ. ಹೀಗಾಗಿ ಮಗುವಿಗೆ ಹೇಗೆ ಹೊಸ ಪ್ರಪಂಚವೋ ತಾಯಿಗೂ ಇದು ತಾಯಿಯಾಗಿ ಹೊಸ ಪ್ರಪಂಚ. ಹೊಸ ಜೀವದ ಪಾಲನೆ ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಗುವಿನ ಪಾಲನೆಯಲ್ಲಿ ಆಕೆಗೆ ನೆರವಿನ ಹಸ್ತವಾಗಿ ಗಂಡ ಯಾವಾಗಲೂ ಜೊತೆಗಿರಬೇಕು.
  2. ಮಾನಸಿಕವಾಗಿ, ದೈಹಿಕವಾಗಿ ಆತನ ಸಪೋರ್ಟ್‌ ಅತ್ಯಂತ ಅಗತ್ಯ. ಮುಖ್ಯವಾಗಿ ಹೆಂಡತಿಯ ನಿದ್ದೆಗಾಗಿ ಗಂಡನಾದವನು ಕೊಂಚ ತನ್ನ ನಿದ್ದೆಯನ್ನೂ, ಕೆಲಸದ ಒತ್ತಡವನ್ನೂ ಬದಿಗಿಡಬೇಕಾಗುತ್ತದೆ. ಹೆಂಡತಿ ಇಡೀ ದಿನ ಮಗುವನ್ನು ನೋಡಿಕೊಂಡು ಸುಸ್ತಾಗಿರುತ್ತಾಳೆ ಎಂಬುದನ್ನು ಅರಿತುಕೊಂಡು, ಕೆಲ ಗಂಟೆಗಳ ಕಾಲ ತಾನು ಮಗುವನ್ನು ನೋಡಿಕೊಳ್ಳುವುದು, ಆ ಸಮಯದಲ್ಲಿ ಹೆಂಡತಿ ಮಲಗುವುದು ಮಾಡಿದರೆ ಆಕೆಗೂ ವಿಶ್ರಾಂತಿ ಸಿಗುತ್ತದೆ. ರಾತ್ರಿಯಲ್ಲಿ ನಾಲ್ಕಾರು ಬಾರಿ ಎದ್ದು ಮಗುವಿಗೆ ಹಾಲುಣಿಸುವ ಸಂದರ್ಭ ಮಗುವಿನ ಅಮ್ಮನಿಗೆ ನಿದ್ದೆ ಸರಿಯಾಗಿ ಆಗಿರುವುದಿಲ್ಲ ಎಂಬುದನ್ನು ಅರಿಯುವ ಗಂಡನಿದ್ದರೆ ಹೆಂಡತಿಗೆ ಅದೇ ದೊಡ್ಡ ಸಪೋರ್ಟ್‌. ಒಂದಿಷ್ಟು ಹೊತ್ತು ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಗಂಡನಾದವನು ಹಂಚಿಕೊಂಡರೆ, ಅದು ದೊಡ್ಡ ಸಹಾಯವಾಗುತ್ತದೆ. ಉದಾಹರಣೆಗೆ ವೀಕೆಂಡಿನಲ್ಲಿ ಅಥವಾ ರಜಾ ದಿನಗಳಲ್ಲಿ, ಅಥವಾ ನಿತ್ಯವೂ ಅಪ್ಪ ಆಫೀಸಿನಿಂದ ಬಂದ ಮೇಲಿನ ಸ್ವಲ್ಪ ಹೊತ್ತು ಅಪ್ಪನ ಜೊತೆಗಿನ ಸಮಯ ಎಂದು ನಿಗದಿ ಮಾಡಿದರೆ ಕೊಂಚ ಅಮ್ಮನಿಗೂ ಸಮಯ ಸಿಗುತ್ತದೆ.
  3. ತಾಯಿಯಾದವಳು ಆರಂಭದಲ್ಲಿ ಮಗು ಮಲಗುವಾಗ ನಿದ್ದೆ ಮಾಡಿಬಿಡಬೇಕು. ಇದು ಹಿರಿಯರಾದಿಯಾಗಿ ಎಲ್ಲರೂ ನೀಡುವ ಬೆಸ್ಟ್‌ ಸಲಹೆ. ಯಾಕೆಂದರೆ, ಮಗು ಎದ್ದರೆ, ಆಕೆಗೆ ನಿದ್ದೆ ಸಿಗದು. ಮಗುವಿಗೆ ಒಂದು ನಿಗದಿತ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಅದೇ ಸಮಯದಲ್ಲಿ ಬೇರೆ ಕೆಲಸಗಳಿಗೆ ಕೈ ಹಾಕದೆ, ನಿದ್ದೆಯ ಮೇಲೆ ಗಮನ ಕೊಡುವುದು ಹೊಸ ತಾಯಂದಿರಿಗೆ ಅತ್ಯಂತ ಸೂಕ್ತ.
  4. ಬಾಟಲಿ ಹಾಲೂ ಅಭ್ಯಾಸ ಮಾಡಿ. ಎದೆ ಹಾಲು ಕುಡಿಸುವುದು ಒಂದು ದಿವ್ಯ ಅನುಭವ ಹೌದಾದರೂ ಅದು ಬೆಳೆಯುತ್ತಾ ಹೋದ ಮೇಲೆ ಕಷ್ಟ. ಆರಂಭದ ಆರು ತಿಂಗಳಲ್ಲಿ ಎದೆ ಹಾಲೇ ಹೆಚ್ಚು ಕುಡಿಸಿದರೂ ನಂತರ ನಿಧಾನವಾಗಿ ಬಾಟಲಿಯನ್ನು ಮಧ್ಯೆ ಮಧ್ಯೆ ಅಭ್ಯಾಸ ಮಾಡಿಸಿದರೆ, ಅಮ್ಮ ಹೊರಗೆ ಹೋಗಬೇಕಾದಾಗ ಸುಲಭವಾಗುತ್ತದೆ. ಮಗು ಬೇಗನೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ.
  5. ತೂಗುವ ತೊಟ್ಟಿಲನ್ನು ಮಗುವಿಗೆ ಬಳಸಿ. ಮಗುವನ್ನು ತೂಗಿ ಮಲಗಿಸುವುದನ್ನು ಅಭ್ಯಾಸ ಮಾಡಿ. ಕೈಯಲ್ಲಿ ಹಿಡಿದೇ ಮಲಗಿಸುವುದನ್ನು ಅಭ್ಯಾಸ ಮಾಡಿಸಿ ಬಿಟ್ಟರೆ ಮಗು ಬೇಗನೆ ಅಮ್ಮನ ಬೆಚ್ಚನೆಯ ಸ್ಪರ್ಶಕ್ಕೇ ಹೊಂದಿಕೊಂಡು ಬಿಡುತ್ತದೆ. ಅಮ್ಮ ಇಲ್ಲದಿದ್ದರೆ, ಸ್ಪರ್ಶ ಸಿಗದಿದ್ದರೆ ನಿದ್ದೆ ಮಾಡುವುದೇ ಇಲ್ಲ.
  6. ಮಗುವಿಗೆ ಹಾಲುಣಿಸುವ ಸಂದರ್ಭ ಆಗಾಗ ಏಳುವ ಕಾರಣ ಅಮ್ಮಂದಿರಿಗೆ ಹಸಿವಾಗುತ್ತದೆ. ಇಂತಹ ಸಂದರ್ಭಕ್ಕಾಗಿ, ಒಂದಿಷ್ಟು ಆರೋಗ್ಯಕರ ಹಣ್ಣು, ಒಣಹಣ್ಣು- ಬೀಜಗಳು ಇತ್ಯಾದಿಗಳನ್ನು ಜೊತೆಗಿಡಿ. ಇಲ್ಲವಾದರೆ ಹಾಲುಣಿಸುವ ತಾಯಿಗೇ ನಿಶ್ಯಕ್ತಿಯ ಸಮಸ್ಯೆ ಆರಂಭವಾಗುತ್ತದೆ.

ಇದನ್ನೂ ಓದಿ | Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Continue Reading

ದೇಶ

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Amit Shah: ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಕೂಡ ಜಮ್ಮು-ಕಾಶ್ಮೀರ ಭದ್ರತೆ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಎಲ್ಲ ಸೈನಿಕರನ್ನು ಗಡಿ ಸೇರಿ ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂಬುದಾಗಿ ಸೂಚಿಸಿದ್ದರು. ಈಗ ಅಮಿತ್‌ ಶಾ ಅವರೂ ಉನ್ನತ ಮಟ್ಟದ ಸಭೆ ನಡೆಸಿ, ಕಾಶ್ಮೀರದಲ್ಲಿ ಉಗ್ರವಾದವನ್ನು ನಿರ್ಮೂಲನೆ ಮಾಡಬೇಕು ಎಂಬುದಾಗಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ.

VISTARANEWS.COM


on

Amit Shah
Koo

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ಯಾತ್ರೆಗೆ ತೆರಳುವ ಹಿಂದುಗಳು, ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಕಣಿವೆಯಲ್ಲಿ ಭದ್ರತೆ ಕುರಿತು ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಜಮ್ಮು-ಕಾಶ್ಮೀರ ಭದ್ರತೆ ಕುರಿತು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. “ಜಮ್ಮುವಿನಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು” ಎಂಬುದು ಸೇರಿ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ, ಗುಪ್ತಚರ ಸಂಸ್ಥೆ (IB) ನಿರ್ದೇಶಕ ತಪನ್‌ ದೇಕಾ, ಸಿಆರ್‌ಪಿಎಫ್‌ ಮಹಾ ನಿರ್ದೇಶಕ ದಯಾಳ್‌ ಸಿಂಗ್‌ ಸೇರಿ ಹಲವು ಅಧಿಕಾರಿಗಳೊಂದಿಗೆ ಅಮಿತ್‌ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಜೂನ್‌ 26ರಿಂದ ಅಮರನಾಥ್‌ ಯಾತ್ರೆ ಕೈಗೊಳ್ಳಲಾಗುತ್ತದೆ. ಜೂನ್‌ 21ರಂದು ಶ್ರೀನಗರದಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಹಾಗಾಗಿ, ಕಾಶ್ಮೀರದ ಭದ್ರತೆಯು ಪ್ರಮುಖವಾಗಿದೆ.

“ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಕಾಶ್ಮೀರದಲ್ಲಿ ನಿಗ್ರಹಿಸಿದಂತೆ ಜಮ್ಮುವಿನಲ್ಲೂ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು. ಗಡಿಗಳನ್ನು ಇನ್ನಷ್ಟು ಭದ್ರಗೊಳಿಸಬೇಕು. ಒಳನುಸುಳುಕೋರರ ಮೇಲೆ ಹದ್ದಿನ ಕಣ್ಣಿಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು” ಎಂದು ಭದ್ರತಾ ಪಡೆಗಳಿಗೆ ಅಮಿತ್‌ ಶಾ ಸೂಚಿಸಿದರು. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಕೂಡ ಜಮ್ಮು-ಕಾಶ್ಮೀರ ಭದ್ರತೆ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಎಲ್ಲ ಸೈನಿಕರನ್ನು ಗಡಿ ಸೇರಿ ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂಬುದಾಗಿ ಸೂಚಿಸಿದ್ದರು.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ

Continue Reading
Advertisement
World War 3
ಪ್ರಮುಖ ಸುದ್ದಿ2 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ4 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ4 hours ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ4 hours ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ5 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ5 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ5 hours ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ6 hours ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ6 hours ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Lok Sabha Speaker
ದೇಶ6 hours ago

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ6 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ13 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌