Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ! - Vistara News

ಆಹಾರ/ಅಡುಗೆ

Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!

ಬೇಸಿಗೆಯಲ್ಲಿ ಮುಖ್ಯವಾಗಿ ದೇಹಕ್ಕೆ ಶಕ್ತಿಯನ್ನು, ಚೈತನ್ಯವನ್ನು ನೀಡುವ ಆಹಾರ ಪೂರೈಕೆ ಮಾಡುವುದು ನಮ್ಮ ಅಗತ್ಯ. ನಮ್ಮ ದೇಹಕ್ಕೆ ಬೇಕಾದ ಶಕ್ತಿವರ್ಧಕ ಆಹಾರಗಳ ವಿವರ ಇಲ್ಲಿದೆ.

VISTARANEWS.COM


on

hydrating foods
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವು ನಮ್ಮ ನಿತ್ಯದ ಕೆಲಸಗಳನ್ನು ಸರಾಗವಾಗಿ ಮಾಡಲು ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆದರೆ, ಬೇಸಗೆ ಬಂತೆಂದರೆ ಸಾಕು ಬಹಳ ಮಂದಿಗೆ, ಶಕ್ತಿ ಕುಂದುತ್ತದೆ. ತಲೆಸುತ್ತು, ನಿಃಶಕ್ತಿ ಸಾಮಾನ್ಯ. ಬಿಸಿಲಿನ ಝಳವೂ ಇದಕ್ಕೆ ಕಾರಣವೂ ಆಗಿರುವುದು ಹೌದಾದರೂ, ಬೇಸಿಗೆಯಲ್ಲಿ ದೇಹದ ಕಾರ್ಯ ನಿರ್ವಹಣೆ ಎಲ್ಲ ಕಾಲದಂತೆ ಇರುವುದಿಲ್ಲ. ದೇಹದ ಈ ಪರಿಸ್ಥಿತಿಯನ್ನು ನಾವು ಅರಿತುಕೊಂಡು, ಆರೋಗ್ಯಕರ ಆಹಾರ ಇಂತಹ ಸಮಯದಲ್ಲಿ ಅತ್ಯಂತ ಅಗತ್ಯ. ಮುಖ್ಯವಾಗಿ ದೇಹಕ್ಕೆ ಶಕ್ತಿಯನ್ನು, ಚೈತನ್ಯವನ್ನು ನೀಡುವ ಆಹಾರ ಪೂರೈಕೆ ಮಾಡುವುದು ನಮ್ಮ ಅಗತ್ಯ. ನಮ್ಮ ದೇಹಕ್ಕೆ ಬೇಕಾದ ಶಕ್ತಿವರ್ಧಕ ಆಹಾರಗಳ ವಿವರ ಇಲ್ಲಿದೆ.

೧. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌, ನಾರಿನಂಶ, ಪೊಟಾಶಿಯಂಗಳಿಂದ ಶ್ರೀಮಂತವಾಗಿದೆ. ಇದರಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶ ಗ್ಲುಕೋಸ್‌ ಹಾಗೂ ಫ್ರಕ್ಟೋಸ್‌ ಕೂಡಾ ಇದೆ. ಹಾಗಾಗಿ ಗಿಇದನ್ನು ದೇಹ ಬೇಗ ಹೀರಿಕೊಳ್ಳುವುದರಿಂದ ಇದನ್ನು ಬೇಗನೆ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ದೇಹಕ್ಕೆ ಸಹಾಯವಾಗುತ್ತದೆ. ಇದರ ಜೊತೆಗೆ ಬಾಳೆಹಣ್ಣಿನಲ್ಲಿ ವಿಟಮಿನ್‌ ಬಿ೬, ಇರುವುದರಿಂದ ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

೨. ಬೀಜಗಳು: ಬೀಜಗಳು ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನ ಆಗರ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ಸಮತೋಲನಗೊಳಿಸುತ್ತದೆ. ಜೊತೆಗೆ ಥಟ್ಟನೆ ಶಕ್ತಿಯನ್ನು ನೀಡುತ್ತದೆ. ಬೀಜಗಳಲ್ಲಿ ಕಬ್ಬಿಣಾಂಶ, ವಿಟಮಿನ್‌ ಇ ಇದ್ದು ಇವು ರೋಗ ನಿರೋಧಕಶಕ್ತಿಯನ್ನೂ ಹೆಚ್ಚಿಸುತ್ತವೆ.

೩. ಹರ್ಬಲ್‌ ಚಹಾ: ಗ್ರೀನ್‌ ಟೀ, ಶುಂಠಿ ಟೀ, ಕ್ಯಾಮೋಮೈಲ್‌ ಟೀ ಮತ್ತಿತರ ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಚಹಾಗಳು ಶಕ್ತಿವರ್ಧಕಗಳು. ಇವು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಯನ್ನು ನೀಡುತ್ತವೆ. ಹರ್ಬಲ್‌ ಚಹಾದಲ್ಲಿ ನಮ್ಮನ್ನು ರಿಲ್ಯಾಕ್ಸ್‌ ಮಾಡುವ ಗುಣಗಳಿದ್ದು, ಇವುಗಳು ನಮ್ಮ ಒತ್ತಡವನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.

herbal tea

೪. ಬೆರ್ರಿ ಹಣ್ಣುಗಳು: ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಸ್‌ಬೆರ್ರಿ ಮತ್ತಿತರ ಬೆರ್ರಿ ಹಣ್ಣುಗಳಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ದೇಹದ ಉರಿಯೂತವನ್ನು ಕಡಿಮೆ ಮಾಡಿ, ಒತ್ತಡವನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕ ಸಕ್ಕರೆಯ ಅಂಶವಿದ್ದು, ನಾರಿನಂಶವೂ ಹೇರಳವಾಗಿದೆ. ವಿಟಮಿನ್‌ ಸಿ ದೇಹಕ್ಕೆ ತತ್‌ಕ್ಷಣಕ್ಕೆ ಬೇಕಾದ ಶಕ್ತಿಯನ್ನು ನೀಡಿ, ತಲೆ ಸುತ್ತುವುದು ಹಾಗೂ ನಿಶಃಕ್ತಿಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ಬಾಯಿಹುಣ್ಣು ಬೇಗ ಗುಣವಾಗಬೇಕೇ? ಈ ಆಹಾರಗಳನ್ನು ಬಿಡಿ!

೫. ಧಾನ್ಯಗಳು: ನಿತ್ಯವೂ ಧಾನ್ಯಗಳ ಬಳಕೆ ಚೈತನ್ಯದಾಯಕ. ಕೆಂಪಕ್ಕಿಯೂ ಸೇರಿದಂತೆ ಇಡಿ ಧಾನ್ಯಗಳು, ಓಟ್ಸ್‌ ಇತ್ಯಾದಿಗಳ ಬಳಕೆ ದೇಹಕ್ಕೆ ನಾರಿನಂಶ, ವಿಟಮಿನ್‌ ಬಿ ಹಾಗೂ ಕಬ್ಬಿಣಾಂಶವನ್ನು ನೀಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನೂ ಸಮತೋಲನದಲ್ಲಿರಿಸುವುದಲ್ಲದೆ, ದೇಹಕ್ಕೆ ಪೂರ್ಣಪ್ರಮಾಣದ ಶಕ್ತಿಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.

soppu

೬. ಸೊಪ್ಪು ತರಕಾರಿ: ಹಸಿರು ಸೊಪ್ಪು ತರಕಾರಿಗಳಲ್ಲಿ ಹೇರಳವಾಗಿ ಕಬ್ಬಿಣಾಂಶವಿದ್ದು ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕ ಒದಗಿಸುವ ಮೂಲಕ ಚೈತನ್ಯವನ್ನೂ ನೀಡುತ್ತದೆ. ಇವುಗಳಲ್ಲಿ ಎಲ್ಲ ಬಗೆಯ ಖನಿಜಾಂಶಗಳೂ ಹೆಚ್ಚಿರುವುದರಿಂದ ಹಾಗೂ ವಿಟಮಿನ್‌ ಸಿ ಹಾಗೂ ಇ ಹೆಚ್ಚಿರುವುದರಿಂದ ಶಕ್ತಿವರ್ಧನೆಗೆ ಪೂರಕ ಆಹಾರವಾಗಿದೆ.

೭. ಮೀನು: ಸಾಲ್ಮನ್‌, ಟೂನಾ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಹೇರಳವಾಗಿದ್ದು ಮಿದುಳಿನ ಬೆಳವಣಿಗೆಗೆ ಒಳ್ಳೆಯದು. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾಗಿರುವ ವಿಟಮಿನ್‌ ಡಿ ಕೂಡಾ ಇದರಲ್ಲಿ ಲಭ್ಯವಿರುವುದರಿಂದ ಇದೂ ಕೂಡಾ ಶಕ್ತಿ ವರ್ಧನೆಗೆ ಅತ್ಯಂತ ಒಳ್ಳೆಯದು.

ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ? ಈ ಲೇಖನ ಓದಿ.

VISTARANEWS.COM


on

Health Tips Kannada Stay away from these foods to get rid of acne
Koo

ಬೆಂಗಳೂರು: ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ (Health Tips Kannada) ಮಂದಿ ಏನೆಲ್ಲ ಸರ್ಕಸ್‌ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು (foods to get rid of acne) ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

ಹಾಲು

ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್‌ ಐಜಿಎಫ್‌-1 ಹಾಗೂ ಬೊವಿನ್‌ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.

ಇದನ್ನೂ ಓದಿ: Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಅಯೋಡಿನ್

ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್‌ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಹುದು.

ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳು

ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್‌ ಸಿರಪ್‌, ಮೈದಾ, ಸಕ್ಕರೆ, ರಿಫೈನ್ಡ್‌ ಧಾನ್ಯಗಳು, ಸಾಸ್‌ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್‌ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್‌ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್‌, ಓಯ್ಸ್ಟರ್‌, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್‌ ಇವೆ.

ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್‌ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.

Continue Reading

ಲೈಫ್‌ಸ್ಟೈಲ್

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಕಲಬೆರಕೆ ಅಂದರೆ ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಕಲಬೆರಕೆಯ ಸುದ್ದಿಗಳು ಸುದ್ದಿಯೇ ಅಲ್ಲ ಎಂಬಂತಾಗಿದೆ. ನಮ್ಮ ಆಹಾರದ ಸುರಕ್ಷತೆಗೆ ನಾವೆಷ್ಟು ಗಮನ ನೀಡುತ್ತೇವೆ ಎಂಬುದಕ್ಕೆ ಇದು ಸಾಕ್ಷಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada adulterated food effect health
Koo

ಕಲಬೆರಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇತ್ತೀಚೆಗೆ ದೇಶದ (Food Tips Kannada) ರಾಜಧಾನಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಸುಮಾರು 15 ಟನ್‌ಗಳಷ್ಟು ಪ್ರಮಾಣದ ನಕಲಿ ಮತ್ತು ಕಲಬೆರಕೆಯ ಮಸಾಲೆ ಅಥವಾ ಸಾಂಬಾರ ಪದಾರ್ಥಗಳ ಸುದ್ದಿ ಬಹಳಷ್ಟನ್ನು ತಿಳಿಸುತ್ತದೆ. ಕೊಳೆತ ಎಲೆಗಳು, ಹುಳು ಹಿಡಿದ ಧಾನ್ಯಗಳು, ಮರದ ಪುಡಿ ಮುಂತಾದ ವಸ್ತುಗಳನ್ನು ಕಲಬೆರೆಕೆಗೆಂದು ಇರಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ನಾವೆಷ್ಟು ಅಜಾಗ್ರತೆ ಮಾಡುತ್ತೇವೆ ಎಂಬುದಕ್ಕೆ ಹಿಡಿದ ಕನ್ನಡಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ?

ಕಲಬೆರಕೆ ಎಂದರೆ

ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಆದರೆ ಇದನ್ನು ಮೂಲ ವಸ್ತುವಿನ ಬೆಲೆಗೆ ಮತ್ತು ಗುಣಮಟ್ಟದ ಖಾತ್ರಿಗೆ ಮಾರಲಾಗುತ್ತದೆ. ಇದಕ್ಕಾಗಿ ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ಬಗ್ಗೆ ವಿಸ್ತೃತವಾದ ಮಾಹಿತಿ ಇಲ್ಲಿದೆ.

ಅಗ್ಗದ ವಸ್ತುಗಳನ್ನು ಸೇರಿಸುವುದು

ಹಾಲಿಗೆ ನೀರು ಸೇರಿಸಿದಷ್ಟೇ ಲೀಲಾಜಾಲವಾಗಿ ಹಿಟ್ಟಿಗೆ ಸೀಮೆಸುಣ್ಣದ ಪುಡಿ ಬೆರೆಸುವುದು, ಅಚ್ಚ ಖಾರದ ಪುಡಿಗೆ ಅಥವಾ ಅರಿಶಿನ ಪುಡಿಗೆ ಬಣ್ಣ ಬರುವಂಥ ರಾಸಾಯನಿಕಗಳನ್ನು ಸೇರಿಸುವುದು, ದುಬಾರಿ ಬೆಲೆಯ ಆಲಿವ್‌ ಎಣ್ಣೆಗೆ ಅಗ್ಗದ ಯಾವುದೋ ಎಣ್ಣೆ ಬೆರೆಸುವುದು, ಅಂದರೆ ದುಬಾರಿ ಬೆಲೆಯ ವಸ್ತುವಿಗೆ ಅದರಂತೆಯೇ ಕಾಣುವ ಅಗ್ಗದ ಯಾವುದಾದರೂ ವಸ್ತುವನ್ನು ಸೇರಿಸಬಹುದು.

ಇದನ್ನೂ ಓದಿ: Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

ಸತ್ವಹೀನ ಮಾಡುವುದು

ವಸ್ತುಗಳ ಸತ್ವಗಳನ್ನು ತೆಗೆದು ಅವುಗಳನ್ನು ಹೊಸ ಹೆಸರಿನಲ್ಲಿ ಮಾರಾಟ ಮಾಡುವುದು. ಅಂದರೆ ಹಾಲಿನ ಕೊಬ್ಬಿನಂಶವನ್ನೆಲ್ಲ ತೆಗೆದು, ಅದನ್ನು ಪ್ರತ್ಯೇಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ, ಜೊತೆಗೆ ʻಸ್ಕಿಮ್‌ ಮಿಲ್ಕ್‌ʼ ಹೆಸರಿನಲ್ಲಿ ಕೊಬ್ಬು ರಹಿತ ಹಾಲನ್ನೂ ಮಾರಾಟ ಮಾಡಲಾಗುತ್ತದೆ. ಇದು ಮಾತ್ರವಲ್ಲ, ಹಲವಾರು ಮಸಾಲೆಗಳ ತೈಲದಂಶವನ್ನು ತೆಗೆಯುವುದು ಸಹ ಇದೇ ಸಾಲಿಗೆ ಸೇರಿಸಲಾಗುತ್ತದೆ.

ರಾಸಾಯನಿಕಗಳ ಬೆರಕೆ

ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಹಲವು ರೀತಿಯ ಅನಾರೋಗ್ಯಕರ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಈ ಪೈಕಿ ರಸಗೊಬ್ಬರಗಳು, ಕೀಟನಾಶಗಳು ಮುಂತಾದ ರಾಸಾಯನಿಕಗಳನ್ನು ಕಲಬೆರಕೆಗೆ ಬಳಸಲಾಗುತ್ತದೆ. ಕೆಲವನ್ನು ʻಕಲರ್‌-ಬೆರಕೆʼಯ ಉದ್ದೇಶದಿಂದ ಮಾಡಲಾಗುತ್ತದೆ.

ಮಾಲಿನ್ಯದ ಸಮಸ್ಯೆ

ಆಹಾರಕ್ಕೆ ಕೀಟಗಳು, ಬ್ಯಾಕ್ಟೀರಿಯಗಳು, ಟಾಕ್ಸಿನ್‌ಗಳು, ಭಾರೀ ಖನಿಜಗಳು ಸಹ ಸೇರಬಹುದು. ಇವುಗಳಲ್ಲಿ ಎಲ್ಲವೂ ಉದ್ದೇಶಪೂರ್ವಕವಾಗಿ ಬೆರಕೆಯಾಗುತ್ತವೆ ಎಂದೇನಿಲ್ಲ. ಕೆಲವೊಂದು ಅರಿವಿಲ್ಲದೆಯೇ ಶುದ್ಧ ಆಹಾರಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ.

ಕೃತಕ ಮಾಗಿಸುವಿಕೆ

ಬಾಳೆಗೊನೆ ತುರ್ತಾಗಿ ಹಣ್ಣಾಗಬೇಕೆ? ಎಥಿಲೀನ್‌ ಸೋಕಿದರಾಯ್ತು, ಬಲುಬೇಗ ಗೊನೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಾವು ಹಣ್ಣಾಗಬೇಕೆ? ಕ್ಯಾಲ್ಶಿಯಂ ಕಾರ್ಬೈಡ್‌ ಇದೆಯಲ್ಲ. ಹೀಗೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಿ, ಕಾಯಿಗಳನ್ನು ಮಾಗಿಸಿ ಹಣ್ಣಾಗಿಸಲಾಗುತ್ತದೆ. ಹಿಂದೆಯೂ ಇಂಥ ಕ್ರಮಗಳು ಬಳಕೆಯಲ್ಲಿದ್ದರೂ, ಅವುಗಳನ್ನು ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ. ಬದಲಿಗೆ ಹುಲ್ಲಿನಲ್ಲಿ ಹುದುಗಿಸುವುದು, ಪೆಟ್ಟಿಗೆಯನ್ನು ಉಬ್ಬೆ ಹಾಕುವಂಥ ಕ್ರಮಗಳು ಚಾಲ್ತಿಯಲ್ಲಿದ್ದವು.

ಆರೋಗ್ಯಕ್ಕೇನು ತೊಂದರೆ?

ಆಹಾರದ ಕಲಬೆರಕೆಯಿಂದ ಹೊಟ್ಟೆಯ ಆರೋಗ್ಯ ಬುಡಮೇಲಾಗಬಹುದು. ವಾಂತಿ, ಅತಿಸಾರ ಗಂಟಾಗಬಹುದು. ಹಣ್ಣುಗಳನ್ನು ಮಾಗಿಸಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂಬ ಆರೋಪವಂತೂ ಇದ್ದೇಇದೆ. ಬೇಗ ಬೆಳೆಯಲೆಂದು ಕೃತಕ ಹಾರ್ಮೋನುಗಳನ್ನು ನೀಡುವುದರಿಂದ, ಅವು ಗರ್ಭಕೋಶದ ಕ್ಯಾನ್ಸರ್‌ಗೆ ಎಷ್ಟರಮಟ್ಟಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಪೌಷ್ಟಿಕಾಂಶಗಳ ಕೊರತೆ

ಮೂಲ ಆಹಾರಕ್ಕೆ ಕಳಪೆ ವಸ್ತುಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ. ಶುದ್ಧ ಅಡುಗೆ ಎಣ್ಣೆಗೆ ಕಲುಷಿತ ಎಣ್ಣೆಗಳನ್ನು ಸೇರಿಸುವುದರಿಂದ ಅಗತ್ಯ ಸತ್ವಗಳ ಕೊರತೆ ಕಾಡುವುದು ಸಾಮಾನ್ಯ. ಮಾತ್ರವಲ್ಲ, ಕೆಟ್ಟ ಕೊಬ್ಬಿನ ಅಂಶವೂ ದೇಹದಲ್ಲಿ ಹೆಚ್ಚಾಗಿ, ಜೀವನಶೈಲಿಯ ರೋಗಗಳೆಲ್ಲ ಬೆನ್ನು ಬೀಳುತ್ತವೆ.

ಅಲರ್ಜಿಗಳು

ಪ್ಯಾಕೇಜಿಂಗ್‌ ಮೇಲೆ ಆಯಾ ವಸ್ತುಗಳಲ್ಲಿ ಏನೇನನ್ನು ಸೇರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯ. ಆದರೆ ಕಲಬೆರಕೆ ವಸ್ತುಗಳಲ್ಲಿಇಂಥ ಮಾಹಿತಿಗಳು ಇರುವುದಿಲ್ಲ, ಇದ್ದರೂ ಅದು ಸುಳ್ಳಾಗಿರುತ್ತದೆ. ಇದರಿಂದ ಅಲರ್ಜಿಗಳು ಕಾಣಬಹುದು. ಮುಖ, ಕಣ್ಣು ಅಥವಾ ತುಟಿಗಳು ಊದಿಕೊಳ್ಳಬಹುದು. ತುರಿಕೆ, ಮೈಮೇಲೆಲ್ಲ ಗುಳ್ಳೆಗಳು ಕಾಣಬಹುದು, ಉಸಿರಾಟದ ತೊಂದರೆಗಳು ಬರಬಹುದು.

Continue Reading

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading

ಆರೋಗ್ಯ

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

2022ರ ಏಪ್ರಿಲ್‌ನಲ್ಲಿ ‘ವಿಷಕಾರಿ’ ಶವರ್ಮಾ ಸೇವಿಸಿ 52ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರ್‌ನಲ್ಲಿ ಯುವಕ, ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಾಗಾದರೆ ಶವರ್ಮಾ ಆಹಾರ ಪ್ರಿಯರಿಗೆ ವಿಷಕಾರಿವಾಗುತ್ತಿರುವುದು (Toxic Shawarma) ಯಾಕೆ? ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Toxic Shawarma
Koo

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Continue Reading
Advertisement
IPL 2024
ಪ್ರಮುಖ ಸುದ್ದಿ3 hours ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ4 hours ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ4 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ4 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ4 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ4 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ4 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ4 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ6 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು6 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ9 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ9 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ9 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ10 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ10 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ16 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ21 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ23 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌