Amritpal Singh: ‘ಅಮೃತ್​ಪಾಲ್​ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್​ - Vistara News

ದೇಶ

Amritpal Singh: ‘ಅಮೃತ್​ಪಾಲ್​ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್​

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್​ ಐಜಿಪಿ ಸುಖ್​ಚೇನ್​ ಸಿಂಗ್​ ಗಿಲ್​ ಅವರು ‘ ಅಮೃತ್​ಪಾಲ್ ಸಿಂಗ್​ ರೊಡೆ ಹಳ್ಳಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸ್​ನ ಗುಪ್ತಚರ ವಿಭಾಗ ನೀಡಿತ್ತು‘ ಎಂದಿದ್ದಾರೆ.

VISTARANEWS.COM


on

Amritpal Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಖಲಿಸ್ತಾನಿ ನಾಯಕ, ದೇಶಭ್ರಷ್ಟ ಅಮೃತ್​ಪಾಲ್ ಸಿಂಗ್ (Amritpal Singh) ಇಂದು ಅರೆಸ್ಟ್ ಆಗಿದ್ದಾನೆ. ಪಂಜಾಬ್​ನ ಮೊಗಾ ಜಿಲ್ಲೆಯ ರೊಡಿ ಎಂಬ ಹಳ್ಳಿಯಲ್ಲಿ ಆತ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಅವನನ್ನು ಬಂಧಿಸಲಾಗಿದೆ (Amritpal Singh Arrested )ಎಂದು ಹೇಳಲಾಗಿತ್ತು. ​ ಆದರೆ ಇದೀಗ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ‘ಅಮೃತ್​ಪಾಲ್ ಸಿಂಗ್ ಆತನಾಗಿಯೇ ಬಂದು ಶರಣಾಗಿಲ್ಲ. ಬದಲಾಗಿ ನಾವೇ ಅವನನ್ನು ಬಂಧಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್​ ಐಜಿಪಿ ಸುಖ್​ಚೇನ್​ ಸಿಂಗ್​ ಗಿಲ್​ ಅವರು ‘ ಅಮೃತ್​ಪಾಲ್ ಸಿಂಗ್​ ರೊಡೆ ಹಳ್ಳಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸ್​ನ ಗುಪ್ತಚರ ವಿಭಾಗ ನೀಡಿತ್ತು. ಅಮೃತ್​ಸರ್ ಪೊಲೀಸರು ಮತ್ತು ಗುಪ್ತಚರ ದಳದ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ 6.45ರ ಹೊತ್ತಿಗೆ ಅಮೃತ್​ಪಾಲ್ ಸಿಂಗ್​​ನನ್ನು ಬಂಧಿಸಿದ್ದಾರೆ. ಆತ ಅಲ್ಲಿನ ರೊಡೆವಾಲ್​ ಗುರುದ್ವಾರ್​ನಲ್ಲಿಯೇ ಇದ್ದ. ಅವನು ಅಲ್ಲಿಂದ ಹೊರಬರುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ನಾವು ಪಾವಿತ್ರ್ಯತೆ ದೃಷ್ಟಿಯಿಂದ ಗುರುದ್ವಾರವನ್ನು ಪ್ರವೇಶ ಮಾಡಲಿಲ್ಲ. ಅಮೃತ್​ಪಾಲ್ ಸಿಂಗ್​ ಅವನಾಗೇ ಬಂದು ಶರಣಾಗಿಲ್ಲ. ಅವನು ಇದ್ದ ಜಾಗವನ್ನು ತಿಳಿದುಕೊಂಡು, ನಾವೇ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amritpal Singh: ಇದು ಅಂತ್ಯವಲ್ಲ ಎನ್ನುತ್ತ ಪೊಲೀಸರ ಎದುರು ಬಂದ ಅಮೃತ್​ಪಾಲ್​ ಸಿಂಗ್​; ಆತ ಶರಣಾಗಿದ್ದು ಯಾರ ಹುಟ್ಟೂರಲ್ಲಿ?

‘ರೊಡೆ ಹಳ್ಳಿಯಲ್ಲಿ ಅಮೃತ್​ಪಾಲ್​ ಸಿಂಗ್ ಇರುವ ಬಗ್ಗೆ ಗುಪ್ತಚರ ಇಲಾಖೆ ವಿಶೇಷ ಮಾಹಿತಿ ಸಿಗುತ್ತಿದ್ದಂತೆ ಇಡೀ ಹಳ್ಳಿಯನ್ನು ಪೊಲೀಸರು ಸುತ್ತುವರಿದಿದ್ದರು. ಅವನು ಅದೇನು ಮಾಡಿದರೂ ಅಲ್ಲಿಂದ ಹೊರಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಶರಣಾಗದೆ ಬೇರೆ ದಾರಿ ಅವನಿಗೆ ಇರಲಿಲ್ಲ. ಅಮೃತ್​ಪಾಲ್ ಅಡಗಿದ್ದ ಜಾಗ ಗುಪ್ತಚರ ಇಲಾಖೆಗೆ ಹೇಗೆ ತಿಳಿಯಿತು ಎಂಬುದನ್ನು ಬಹಿರಂಗ ಪಡಿಸಲು ಸಾಧ್ಯವೇ ಇಲ್ಲ. ಕಳೆದ ಹಲವು ತಿಂಗಳಿಂದಲೂ ಪಂಜಾಬ್​ ಪೊಲೀಸ್​ನ ವಿವಿಧ ಘಟಕಗಳು ಪರಸ್ಪರ ಸಹಕಾರದಲ್ಲಿ ಅಮೃತ್​ಪಾಲ್ ಪತ್ತೆ ಕಾರ್ಯ ನಡೆಸುತ್ತಿದ್ದರು. ಕೊನೆಗೂ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಐಜಿಪಿ ಸುಖ್​ಚೇನ್​ ಸಿಂಗ್​ ಗಿಲ್ ಹೇಳಿದ್ದಾರೆ.

ಅಸ್ಸಾಂ ಜೈಲಿಗೆ ಕರೆದೊಯ್ದಿದ್ದೇಕೆ?
ಅಮೃತ್​ಪಾಲ್ ಸಿಂಗ್​ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಅಸ್ಸಾಂನ ದಿಬ್ರುಗರ್​ ಜೈಲಿಗೆ ಕರೆದೊಯ್ಯಲಾಗಿದೆ. ಈಗಾಗಲೇ ಬಂಧಿತರಾಗಿರುವ ಅಮೃತ್​ಪಾಲ್​ ಸಿಂಗ್​​ನ ಸಹಾಯಕರಾದ ದಲ್ಜಿತ್​ ಸಿಂಗ್​ ಕಲ್ಸಿ, ಪಾಪಲ್​ಪ್ರೀತ್ ಸಿಂಗ್​, ಕುಲವಂತ್ ಸಿಂಗ್​ ಧಲಿವಾಲ್​, ವರೀಂದರ್​ ಸಿಂಗ್ ಜೋಹಾಲ್​, ಗುರ್ಮೀತ್ ಸಿಂಗ್​ ಬುಕ್ಕನ್​ವಾಲಾ, ಹರ್ಜಿತ್​ ಸಿಂಗ್​, ಭಗವಂತ್​ ಸಿಂಗ್, ಬಸಂತ್ ಸಿಂಗ್ ಮತ್ತು ಗುರಿಂದರ್​ಪಾಲ್ ಸಿಂಗ್​ ಔಜ್ಲಾರನ್ನೂ ಕೂಡ ದಿಬ್ರುಗಢ್​​​ ಜೈಲಿನಲ್ಲಿಯೇ ಇಡಲಾಗಿದೆ.

ಅಮೃತ್​ಪಾಲ್ ಸಿಂಗ್​​ ಮತ್ತು ಆತನ ಆಪ್ತರನ್ನು ಅಸ್ಸಾಂನ ದಿಭ್ರುಗಢ್​ ಜೈಲಿಗೆ ಸಾಗಿಸಿದ್ದೇಕೆ ಎಂಬ ಬಗ್ಗೆ ನಿಖರ ವಿವರವನ್ನು ಪೊಲೀಸರು ಕೊಟ್ಟಿಲ್ಲ. ಆದರೆ ದಿಭ್ರುಗಢ್​​ನ ಜೈಲು ಅತ್ಯಂತ ಭದ್ರವಾಗಿದೆ. ಅಸ್ಸಾಂನಲ್ಲಿ 1990ರ ದಶಕದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA)ಭಯೋತ್ಪಾದಕರ ಹಾವಳಿ ಜಾಸ್ತಿಯಿದ್ದ ಸಂದರ್ಭದಲ್ಲಿ ಆ ಸಂಘಟನೆಯ ಉನ್ನತ ಮಟ್ಟದ ಉಗ್ರರನ್ನು ಇದೇ ಜೈಲಿನಲ್ಲಿಯೇ ಇಡಲಾಗುತ್ತಿತ್ತು. ಉಗ್ರರನ್ನು ಇಡುವ ಜೈಲಾಗಿದ್ದರಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾರತದಲ್ಲೇ ಅತ್ಯಂತ ಹಳೆಯ ಮತ್ತು ಸುರಕ್ಷಿತವಾದ ಜೈಲು ಇದು. ಹೀಗಾಗಿ ಅಮೃತ್​ಪಾಲ್​ ಸಿಂಗ್ ಮತ್ತು ಇತರ ಖಲಿಸ್ತಾನಿ ಹೋರಾಟಗಾರರನ್ನು ಇಲ್ಲಿಯೇ ಇಡಲಾಗಿದೆ ಎಂದು ಹೇಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Narendra Modi: ಲೋಕಸಭಾ ಚುನಾವಣೆ ಫಲಿತಾಂಶದ 6 ತಿಂಗಳ ಬಳಿಕ ‘ರಾಜಕೀಯ ಭೂಕಂಪ’; ಮೋದಿನ ಮಾತಿನ ಮರ್ಮವೇನು?

VISTARANEWS.COM


on

Narendra Modi
Koo

ಕೋಲ್ಕತ್ತಾ: ಲೋಕಸಭಾ ಚುನಾವಣೆ (Lok Sabha Election)ಯ ಕೊನೆಯ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಜೂನ್‌ 4ರಂದು ಫಲಿತಾಂಶ ಹೊರ ಬೀಳಲಿದ್ದು, ಈಗಾಗಲೇ ಈ ಕುರಿತಾದ ಲೆಕ್ಕಾಚಾರ ಆರಂಭವಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಕಾಕ್ದ್ವೀಪ್‌ನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು, ಚುನಾವಣಾ ಫಲಿತಾಂಶ ಘೋಷಣೆಯಾದ ಆರು ತಿಂಗಳ ಬಳಿಕ ಬಹುದೊಡ್ಡ ಬದಲಾವಣೆಯಾಗಲಿದ್ದು, ‘ರಾಜಕೀಯ ಭೂಕಂಪ’ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಲ್ಲಿನ ಜನಸಂಖ್ಯಾಶಾಸ್ತ್ರವು ಒಳನುಸುಳುವಿಕೆಯಿಂದಾಗಿ ಬದಲಾಗುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ, ತೃಣಮೂಲ ಕಾಂಗ್ರೆಸ್ (TMC) ಅಕ್ರಮ ವಲಸಿಗರು ಬಂಗಾಳದಲ್ಲಿ ನೆಲೆಸಲು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಹೇಳಿದ್ದೇನು?

ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದೆ. ಈ ಮೂಲಕ ಮುಸ್ಲಿಮರಿಗೆ ʼಮೂಲʼ ಒಬಿಸಿಗಳ ಹಕ್ಕುಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. “ಬಂಗಾಳದ ಗಡಿ ಪ್ರದೇಶಗಳಲ್ಲಿನ ಜನಸಂಖ್ಯಾಶಾಸ್ತ್ರವನ್ನು ಒಳ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಬದಲಾಯಿಸಲಾಗುತ್ತಿದೆ. ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದನ್ನು ಟಿಎಂಸಿ ವಿರೋಧಿಸುತ್ತದೆ. ಟಿಎಂಸಿ ನಾಯಕರು ಸಿಎಎಯನ್ನು ಏಕೆ ವಿರೋಧಿಸುತ್ತಿದ್ದಾರೆ? ಸಿಎಎ ಬಗ್ಗೆ ಏಕೆ ಸುಳ್ಳು ಹೇಳುತ್ತಿದ್ದಾರೆ?ʼʼ ಎಂದು ಮೋದಿ ಪ್ರಶ್ನಿಸಿದ್ದಾರೆ.

ಮಾಟುವಾ ಸಮುದಾಯದ ಸದಸ್ಯರು ತಮಗೆ ಸಲ್ಲಬೇಕಾದ ಎಲ್ಲ ಗೌರವದೊಂದಿಗೆ ಭಾರತೀಯ ಪೌರತ್ವವನ್ನು ಪಡೆಯುತ್ತಾರೆ ಎಂದು ಮೋದಿ ಘೋಷಿಸಿದ್ದಾರೆ. ಹಿಂದುಗಳು ಮತ್ತು ಮಾಟುವಾಗಳು ಬಂಗಾಳದಲ್ಲಿ ನೆಲೆಸುವುದನ್ನು ಟಿಎಂಸಿ ವಿರೋಧೊಸುತ್ತದೆ ಎಂದು ಅವರು ಹೇಳಿದ್ದಾರೆ. ʼʼಪಶ್ಚಿಮ ಬಂಗಾಳದಲ್ಲಿ ಮೀಸಲಾತಿಯನ್ನು ದುರುಪಯೋಗಪಡಿಲಾಗುತ್ತಿದೆ. ಮುಸ್ಲಿಮರಿಗೆ ಅನುಕೂಲ ಮಾಡಿಕೊಟ್ಟು ಹಿಂದುಳಿದ ವರ್ಗ ಮತ್ತು ದಲಿತರಿಗೆ ಅನ್ಯಾಯ ಎಸಗಲಾಗುತ್ತಿದೆ. ಆ ಮೂಲಕ ಟಿಎಂಸಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆʼʼ ಎಂದು ದೂರಿದ್ದಾರೆ.

ʼʼಅಕ್ರಮ ಒಳನುಸುಳುವಿಕೆ ಕಾರಣದಿಂದ ರಾಜ್ಯದ ಸಾಕಷ್ಟು ಯುವ ಜನತೆ ಅವಕಾಶ ವಂಚಿತವಾಗುತ್ತಿದೆ. ಅಕ್ರಮ ವಲಸಿಗರು ಮುಂದೆ ನಿಮ್ಮ ಆಸ್ತಿ, ಜಾಗದ ಮೇಲೆ ಅತಿಕ್ರಮಣವನ್ನೂ ಮಾಡಬಹುದು. ಹೀಗಾಗಿ ಇಡೀ ದೇಶವೇ ಈ ಬಗ್ಗೆ ಆತಂಕಗೊಂಡಿದೆʼʼ ಎಂದು ಮೋದಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

ʼʼನಿಮ್ಮ ವೋಟು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಬಹುದು. ಜೂನ್‌ 4ರ ನಂತರ 6 ತಿಂಗಳೊಳಗೆ ರಾಜಕೀಯವಾಗಿ ಬಹಳಷ್ಟು ಬದಲಾವಣೆ ಕಂಡು ಬರಲಿದೆ. ವಂಶಪಾರಂಪರ್ಯ ರಾಜಕಾರಣದಲ್ಲಿ ಬೆಳೆಯುವ ರಾಜಕೀಯ ಪಕ್ಷಗಳು ತಾವಾಗಿಯೇ ಛಿದ್ರವಾಗುತ್ತವೆ. ಆ ಪಕ್ಷಗಳ ಕಾರ್ಯಕರ್ತರು ಸಹ ದಣಿದಿದ್ದಾರೆ. ಅವರೆಲ್ಲರೂ ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಅವರ ಪಕ್ಷಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದನ್ನು ಗಮನಿಸುತ್ತಿದ್ದಾರೆ” ಎಂದು ಪ್ರಧಾನಿ ವಿವರಿಸಿದ್ದಾರೆ. ಮೀನುಗಾರರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳು, ಉಜ್ವಲ ಮತ್ತು ಆಯುಷ್ಮಾನ್ ಭಾರತ್‌ ಮುಂತಾದ ಯೋಜನೆಗಳನ್ನು ಟಿಎಂಸಿ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದೂ ಮೋದಿ ಆರೋಪಿಸಿದ್ದಾರೆ.

Continue Reading

ದೇಶ

Monsoon: ವಾಡಿಕೆಗಿಂತ ಮುನ್ನವೇ ಲಗ್ಗೆ ಇಟ್ಟ ಮಾನ್ಸೂನ್‌; ಕೇರಳದಲ್ಲಿ ಮುಂಗಾರು ಆರಂಭ

Monsoon:ಹವಾಮಾನ ತಜ್ಞರ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಸಾಧಾರಣ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

VISTARANEWS.COM


on

Mansoon
Koo

ನವದೆಹಲಿ: ಈ ಬಾರಿಯ ಮುಂಗಾರು(Mansoon) ಇಂದು ಕೇರಳ(Kerala) ಮತ್ತು ಈಶಾನ್ಯ ರಾಜ್ಯ(North East states)ಗಳಿಗೆ ಲಗ್ಗೆ ಇಟ್ಟಿದೆ. ವಾಡಿಕೆಗಿಂತ ಎರಡು ದಿನ ಮುನ್ನವೇ ಮುಂಗಾರು ಆರಂಭವಾಗಿದೆ. ಈ ಬಾರಿ ಮೇ 30 ಮತ್ತು ಜೂ.1 ರಂದುಮುಂಗಾರು ಮಳೆ ಆಗಬೇಕಾಗಿತ್ತು. ರೆಮಲ್‌ ಚಂಡಮಾರುತ(Remal Cyclone)ದ ಪರಿಣಾಮವಾಗಿ ಕೇರಳ ಮತ್ತು ಜೂ. 5ರಂದು ಈಶಾನ್ಯ ರಾಜ್ಯಗಳಲ್ಲಿ ಈ ಬಾರಿ ವಾಡಿಕೆಗಿಂತ ಮೊದಲೇ ಮಳೆಯಾಗುತ್ತಿದೆ. ಇನ್ನು ಜು.15ರೊಳಗೆ ಇಡೀ ಭಾರತದಲ್ಲಿ ಮುಂಗಾರು ಮಳೆ ಆಗಲಿದೆ.

ಹವಾಮಾನ ತಜ್ಞರ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಸಾಧಾರಣ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ರಾಜ್ಯದಲ್ಲಿ ಮೇ 30ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಾರುತಗಳು (ಗಂಟೆಗೆ 40-50 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆ ಮತ್ತು ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ (30-40 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಗಳು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಇದನ್ನೂ ಓದಿ:Viral Video: ಬಾಯ್‌ಫ್ರೆಂಡನ್ನು ಹೆದರಿಸಲು ರೈಲ್ವೇ ಟ್ರ್ಯಾಕ್‌ಗೆ ಇಳಿದಳು.. ಆಮೇಲೆ ಆಗಿದ್ದೇ ಬೇರೆ! ಶಾಕಿಂಗ್‌ ವಿಡಿಯೋ ನೋಡಿ

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರವಾದ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಮೇಲೆ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 °C ಮತ್ತು 22 ° C ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

ಕ್ರೈಂ

Illegal Bangla Immigrants: ಸಿಸಿಬಿ ದಾಳಿ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Illegal Bangla Immigrants: ಬೆಂಗಳೂರಿನ ನಾಲ್ಕು ಡಿವಿಷನ್‌ಗಳಲ್ಲಿರುವ ಅಕ್ರಮ ನಿವಾಸಿಗಳ ಮನೆ ಮೇಲೆ ದಾಳಿ ನಡೆದಿದೆ. ಬಾಂಗ್ಲಾ ಗಡಿಭಾಗದಲ್ಲಿ ನುಸುಳಿ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಪ್ರಜೆಗಳು ಇವರಾಗಿದ್ದು, ದೇಶದಲ್ಲಿ ನೆಲೆಸುವುದಕ್ಕೆ ಯಾವುದೇ ಸೂಕ್ತ ದಾಖಲೆ ಇವರ ಬಳಿ ಇಲ್ಲ.

VISTARANEWS.COM


on

Illegal Bangla Immigrants
Koo

ಬೆಂಗಳೂರು: ಸೆಂಟ್ರಲ್‌ ಕ್ರೈಂ ಬ್ರಾಂಚ್‌ ಪೊಲೀಸರು (CCB police) ನಿನ್ನೆ ಮಧ್ಯರಾತ್ರಿ ಬೆಂಗಳೂರು (bangalore) ನಗರದ ಹಲವು ಕಡೆಗಳಲ್ಲಿ ದಾಳಿ (raid) ನಡೆಸಿದ್ದು, ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ನೂರಕ್ಕೂ ಅಧಿಕ ಬಾಂಗ್ಲಾದೇಶಿ (Illegal Bangla Immigrants) ವಲಸಿಗರನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ಮನೆ ಮೇಲೆ ಸಿಸಿಬಿ ಪೊಲೀಸರ ಮಿಡ್ ನೈಟ್ ಅಪರೇಷನ್ ನಡೆದಿದೆ. ಬೆಂಗಳೂರಿನ ನಾಲ್ಕು ಡಿವಿಷನ್‌ಗಳಲ್ಲಿರುವ ಅಕ್ರಮ ನಿವಾಸಿಗಳ ಮನೆ ಮೇಲೆ ದಾಳಿ ನಡೆದಿದೆ. ಬಾಂಗ್ಲಾ ಗಡಿಭಾಗದಲ್ಲಿ ನುಸುಳಿ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಪ್ರಜೆಗಳು ಇವರಾಗಿದ್ದು, ದೇಶದಲ್ಲಿ ನೆಲೆಸುವುದಕ್ಕೆ ಯಾವುದೇ ಸೂಕ್ತ ದಾಖಲೆ ಇವರ ಬಳಿ ಇಲ್ಲ.

ಗುಪ್ತಚರ ಮಾಹಿತಿ ಆಧರಿಸಿ ದಾಳಿ ಮಾಡಿರುವ ಸಿಸಿಬಿ ತಂಡ ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆವರೆಗೂ ಆಪರೇಷನ್ ನಡೆಸಿದೆ. ನೂರಕ್ಕೂ ಹೆಚ್ಚ ಅಕ್ರಮ ನಿವಾಸಿಗಳನ್ನು ಪತ್ತೆ ಹಚ್ಚಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇವರಲ್ಲಿ ಹಲವರು ವೋಟರ್‌ ಐಡಿ ಕೂಡ ಮಾಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಇವರೊಂದಿಗೆ, ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೆ ಇವರಿಗೆ ಬಾಡಿಗೆ ಮನೆಗಳನ್ನು ಹಾಗೂ ಕೊಠಡಿಗಳನ್ನು ನೀಡಿದವರನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಫ್ಯಾಕ್ಟರಿ, ಕೂಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹಲವರು ಕೆಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಗೊತ್ತಾಗಿದೆ.

ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ (Indian Citizenship) ನೀಡಿದೆ. ಸಿಎಎ (CAA) ಅಡಿಯಲ್ಲಿ ಪೌರತ್ವ ಕಲ್ಪಿಸಿರುವ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು 14 ಜನರಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಸಿಎಎ ನಿಯಮಗಳ ಜಾರಿಗೆ ಕೇಂದ್ರ ಸರ್ಕಾರವು ಕಳೆದ ಮಾರ್ಚ್​ 11ರಂದು ಅಧಿಸೂಚನೆ ಹೊರಡಿಸಿದೆ. ಆ ಮೂಲಕ ದೇಶದಲ್ಲಿ ಸಿಎಎ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ, 14 ಜನರಿಗೆ ಪ್ರಮಾಣಪತ್ರಗಳನ್ನು ನೀಡಿದೆ.

ಇದನ್ನೂ ಓದಿ: ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

Continue Reading

ವೈರಲ್ ನ್ಯೂಸ್

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

Viral News: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಸರ ಕಸಿದ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳರಿಬ್ಬರಿಗೆ ಬಸ್‌ ಚಾಲಕನೊಬ್ಬ ತಕ್ಕ ಪಾಠ ಕಲಿಸಿದ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಡುತ್ತಿದೆ. ಬಸ್‌ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ಕಳ್ಳರಿಬ್ಬರನ್ನು ಬೀಳಿಸಿದ್ದು, ಆತನ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

VISTARANEWS.COM


on

Viral News
Koo

ಚಂಡೀಗಢ: ಸರ ಕಳ್ಳತನ-ಸಾಮಾನ್ಯವಾಗಿ ನಾವು ಆಗಾಗ ಕೇಳುವ ಕ್ರೈಂ ಸುದ್ದಿ ಇದು. ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರು, ಮಕ್ಕಳ ಕುತ್ತಿಗೆಯಿಂದ ಚಿನ್ನದ ಸರ ಕಸಿಯುವ ಚಾಲಾಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಇರಲಿ, ಗ್ರಾಮಾಂತರ ಪ್ರದೇಶವೇ ಇರಲಿ ಈ ಕಳ್ಳರ ಕೃತ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ದ್ವಿಚಕ್ರ ವಾಹನದಲ್ಲಿ ಬರುವ ಖದೀಮರಿಗೆ ಒಂಟಿ ಮಹಿಳೆಯರೇ ಟಾರ್ಗೆಟ್‌. ಕೆಲವೊಮ್ಮೆ ಈ ಕೃತ್ಯ ಸಂತ್ರಸ್ತರಿಗೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ. ಈಗ ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಸದ್ಯ ಇಂತಹ ಚಾಲಕಿ ಕಳ್ಳರ ಕೈ ಚಳಕ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಫಾರ್‌ ಎ ಚೇಂಜ್‌ ಎಂಬಂತೆ ಈ ಘಟನೆಯ ಕೊನೆಯಲ್ಲಿ ಸಖತ್‌ ಟ್ವಿಸ್ಟ್‌ ಎದುರಾಗುತ್ತದೆ. ಅದು ಏನು ಎನ್ನುವುದನ್ನು ತಿಳಿಯಲು ಈ ವಿಡಿಯೊ ನೋಡಿ (Viral News).

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಸರ ಕಸಿದ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಾರೆ. ಇದನ್ನು ಗಮನಿಸಿದ ಬಸ್‌ ಡ್ರೈವರ್‌ ಎದುರಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಕಳ್ಳರಿಬ್ಬರನ್ನು ಬೀಳಿಸುತ್ತಾನೆ. ಅನಿರೀಕ್ಷಿತ ಆಘಾತದಿಂದ ಕಳ್ಳರು ತತ್ತರಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಬಸ್‌ ಚಾಲಕನ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್‌ಗಿರಿ ನೀಡಿದ್ದಾರೆ.

ಘಟನೆಯ ವಿವರ

ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್‌ ನಿಲ್ಲಿಸಿಕೊಂಡಿರುವ ದೃಶ್ಯವನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತಿದೆ. ಆತನ ʼಕ್ರೈಂ ಪಾರ್ಟನರ್‌ʼ ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಗರಿಸುವ ದೃಶ್ಯ ಹಿನ್ನಲೆಯಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ. ಬಳಿಕ ಆತ ಓಡಿ ಬಂದು ಬೈಕ್‌ ಏರುತ್ತಾನೆ. ಮೊದಲೇ ಬೈಕ್‌ ಸ್ಟಾರ್ಟ್‌ ಮಾಡಿ ಕಾದುಕೊಂಡಿದ್ದ ಇನ್ನೊಬ್ಬ ತಮ್ಮ ʼಮಿಷನ್‌ ಸಕ್ಸಸ್‌ʼ ಆದ ಖುಷಿಯಲ್ಲಿ ಬೈಕ್‌ ಓಡಿಸುತ್ತಾನೆ. ಆದರೆ ಅಷ್ಟರಲ್ಲಿ ʼರಿಯಲ್‌ ಹೀರೋʼನ ಎಂಟ್ರಿಯಾಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಬಸ್‌ ಚಾಲಕ ಬೇಕಂತಲೇ ಮುಂದಕ್ಕೆ ಬಂದು ಬೈಕ್‌ಗೆ ಮೆಲ್ಲನೆ ಡಿಕ್ಕಿ ಹೊಡೆಯುತ್ತಾನೆ.

ಇದರಿಂದ ಕಳ್ಳರಿಬ್ಬರು ಬೈಕ್‌ ಸಮೇತ ರಸ್ತೆಗೆ ಬಿದ್ದು ಬಿಡುತ್ತಾರೆ. ಬಸ್‌ ಚಾಲಕ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬೈಕ್‌ ನೆಲಕ್ಕೆ ಉರುಳುತ್ತಿದ್ದಂತೆ ಇಬ್ಬರೂ ʼಬದುಕಿದರೆ ಬೇಡಿಯಾದರೂ ತಿನ್ನಬಹುದುʼ ಎನ್ನುವಂತೆ ಅಲ್ಲಿಂದ ಓಡಿ ಹೋಗುತ್ತಾರೆ. ಬಳಿಕ ಅವರು ಸಿಕ್ಕಿ ಬಿದ್ದಿದ್ದಾರಾ ಅಥವಾ ಪರಾರಿಯಾಗಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

ಅದೇನೇ ಇರಲಿ ಸದ್ಯ ಬಸ್‌ ಚಾಲಕನ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಆತನೇ ನಿಜವಾದ ಹೀರೋ ಎಂದೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಖದೀಮರಿಗೆ ತಕ್ಕ ಪಾಠ ಕಲಿಸಲು ಇಂತಹ ಧೈರ್ಯವಂತರ ಅಗತ್ಯ ವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕಳ್ಳರ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಿದೆ. ಒಂದೊಳ್ಳೆ ಆ್ಯಕ್ಷನ್‌ ಸಿನಿಮಾ ನೋಡಿದ ಅನುಭವವಾಯಿತು ಎಂದು ಇನ್ನು ಕೆಲವರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸರ ಕಳ್ಳರಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

Continue Reading
Advertisement
Assault Case in Shivamogga
ಕ್ರೈಂ2 mins ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Team India Dream 11
ಕ್ರಿಕೆಟ್3 mins ago

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Shiva Rajkumar support Tamil Movie Non Voilance Cinema
ಸ್ಯಾಂಡಲ್ ವುಡ್9 mins ago

Shiva Rajkumar: ತಮಿಳಿನ ‘ನಾನ್ ವೈಲೆನ್ಸ್’ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್: ಫಸ್ಟ್ ಲುಕ್ ಔಟ್‌!

Narendra Modi
Lok Sabha Election 20249 mins ago

Narendra Modi: ಲೋಕಸಭಾ ಚುನಾವಣೆ ಫಲಿತಾಂಶದ 6 ತಿಂಗಳ ಬಳಿಕ ‘ರಾಜಕೀಯ ಭೂಕಂಪ’; ಮೋದಿನ ಮಾತಿನ ಮರ್ಮವೇನು?

Valmiki Corporation Scam
ಪ್ರಮುಖ ಸುದ್ದಿ12 mins ago

Valmiki Corporation Scam: ಹಗರಣದ ಆರೋಪಿ ಜೊತೆಗೆ ಸಚಿವ ನಾಗೇಂದ್ರ ಕ್ಲೋಸ್‌? ಫೋಟೋ ಬಿಡುಗಡೆ ಮಾಡಿದ ಬಿಜೆಪಿ

Mansoon
ದೇಶ21 mins ago

Monsoon: ವಾಡಿಕೆಗಿಂತ ಮುನ್ನವೇ ಲಗ್ಗೆ ಇಟ್ಟ ಮಾನ್ಸೂನ್‌; ಕೇರಳದಲ್ಲಿ ಮುಂಗಾರು ಆರಂಭ

Ravichandran Birthday Premaloka 2 update
ಸ್ಯಾಂಡಲ್ ವುಡ್33 mins ago

Ravichandran Birthday: `ಪ್ರೇಮಲೋಕ 2’ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ‘ಕ್ರೇಜಿ ಸ್ಟಾರ್’ ರವಿಚಂದ್ರನ್‌!

cylinder blast in Bengaluru
ಕ್ರೈಂ52 mins ago

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

T20 World Cup 2007
ಕ್ರಿಕೆಟ್1 hour ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ1 hour ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 mins ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌