ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ‘ಹಲ್ಲಿ‘ ಹಿಂದೆ ಬಿದ್ದ ಪಾಕಿಸ್ತಾನಿ ಜನ; ನಾಲ್ಕೇ ಹನಿ ಎಣ್ಣೆ ಸಾಕೆಂದ ವ್ಯಾಪಾರಿ! - Vistara News

ವಿದೇಶ

ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ‘ಹಲ್ಲಿ‘ ಹಿಂದೆ ಬಿದ್ದ ಪಾಕಿಸ್ತಾನಿ ಜನ; ನಾಲ್ಕೇ ಹನಿ ಎಣ್ಣೆ ಸಾಕೆಂದ ವ್ಯಾಪಾರಿ!

ಪಾಕಿಸ್ತಾನದ ಸಿಂಧ್​ ಮತ್ತು ಪಂಜಾಬ್​ ಪ್ರಾಂತ್ಯಗಳಲ್ಲಿ ಇದೇ ಕಾರಣಕ್ಕೆ ಹಲ್ಲಿ ಬೇಟೆ ಹೆಚ್ಚಾಗಿದೆ. ತಮ್ಮ ಬಿಲದಿಂದ ಹೊರಬಂದ ಸರೀಸೃಪಗಳನ್ನು ಮುಲಾಜಿಲ್ಲದೆ ಕೊಂದು ಕಾಳಸಂತೆಗೆ ತರಲಾಗುತ್ತಿದೆ ಎಂದೂ ವರದಿಯಾಗಿದೆ.

VISTARANEWS.COM


on

Pakistani Men use Lizard Oil for sexual stamina
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಕಿಸ್ತಾನದಲ್ಲೀಗ ಹಲ್ಲಿ ಎಣ್ಣೆಗೆ ಭರ್ಜರಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ರಾವಲ್ಪಿಂಡಿಯಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಹಲ್ಲಿ ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ಹಲ್ಲಿ ತೈಲ ಮಾರಾಟ ಜೋರಾಗಿದೆ. ವ್ಯಾಪಾರಿಗಳು ಎದುರಲ್ಲಿ ಸತ್ತ ಹಲ್ಲಿಗಳನ್ನು ಇಟ್ಟುಕೊಂಡು, ಅಲ್ಲೇ ಒಂದು ಗ್ಯಾಸ್​ ಒಲೆ ಇಟ್ಟು, ಎಣ್ಣೆಯನ್ನು ತಯಾರಿಸಿ ಗ್ರಾಹಕರಿಗೆ ಕೊಡುತ್ತಿದ್ದಾರೆ.

ಜೀವಂತ ಹಲ್ಲಿಯೆಂದರೇ ವಿಷ ಎಂದು ಪರಿಗಣಿಸಿ, ಕಂಡರೆ ಸಾಕು ಗಲೀಜು, ಅಪಶಕುನ ಎಂದು ಭಾವಿಸುವವರಿಗೆ ಪಾಕಿಸ್ತಾನದಲ್ಲಿ ಹಲ್ಲಿಗೆ ಬೇಡಿಕೆ ಬಂದಿದೆ ಎಂದರೆ ಅಚ್ಚರಿ-ಕುತೂಹಲ ಎನ್ನಿಸಬಹುದು. ಅಲ್ಲಿನ ಪುರುಷರು ಹಲ್ಲಿ ಎಣ್ಣೆ ಹಿಂದೆ ಬಿದ್ದು ಮತ್ತೇನಕ್ಕೂ ಅಲ್ಲ, ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು. ಕಾಮ ಉದ್ದೀಪನವಾದ ವಯಾಗ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಿ ಹಲವು ವರ್ಷಗಳೇ ಕಳೆದು ಹೋಗಿವೆ. ವಯಾಗ್ರಾ, ಅಶ್ಲೀಲ ಸಿನಿಮಾಗಳು, ವಿಡಿಯೊಗಳೆಲ್ಲ ಇಸ್ಲಾಂ ಮೌಲ್ಯಕ್ಕೆ ವಿರೋಧಿ ಎಂಬ ಭಾವನೆ ಮುಸ್ಲಿಮರಲ್ಲಿ ಇದೆ. ವಯಾಗ್ರವನ್ನು ನಿಷೇಧಿಸಿರುವ ಕಾರಣ ಪುರುಷರು ಕಾಮ ಉತ್ತೇಜನಕ್ಕೆ ಪರ್ಯಾಯ ಮಾರ್ಗವಾಗಿ ಈ ಹಲ್ಲಿ ಎಣ್ಣೆಯನ್ನು ಕಂಡುಕೊಂಡಿದ್ದಾರೆ.

ರಾವಲ್ಪಿಂಡಿಯ ರಾಜಾ ಬಜಾರ್​ ಎಂಬಲ್ಲಿ ಒಟ್ಟು ನಾಲ್ವರು ವ್ಯಾಪಾರಿಗಳು ಇದೇ ಕಾಯಕ ಮಾಡಿಕೊಂಡಿದ್ದಾರೆ. ಹಲ್ಲಿ ಎಣ್ಣೆಯ ಬಾಟಲಿ, ಸತ್ತ ಹಲ್ಲಿಗಳು ಜತೆಗೊಂದು ಗ್ಯಾಸ್​ ಸ್ಟವ್​ ಇಟ್ಟುಕೊಂಡು ಕುಳಿತಿರುತ್ತಾರೆ. ಆ ವ್ಯಾಪಾರಿಗಳನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ ಯಾಸಿರ್​ ಅಲಿ ಎಂಬಾತ ಉತ್ತರಿಸಿ ‘ಹಲ್ಲಿ ಎಣ್ಣೆಯ ನಾಲ್ಕೇನಾಲ್ಕು ಹನಿಗಳನ್ನು ಅಗತ್ಯ ಸ್ಥಳಕ್ಕೆ ಹಾಕಿ, ಮಸಾಜ್ ಮಾಡಿದರೆ ಸಾಕು. ಇದು ಮ್ಯಾಜಿಕ್ ಮಾಡುತ್ತದೆ. ಖಂಡಿತವಾಗಿಯೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಸ್ನೇಹಿತೆಯೊಂದಿಗೆ ಹೋಟೆಲ್​​ನಲ್ಲಿ ತಂಗಿದ್ದವ, ಮದ್ಯ ದೊಂದಿಗೆ ವಯಾಗ್ರ ಮಾತ್ರೆ ಸೇವಿಸಿ ಸಾವು; ವೈದ್ಯರು ನೀಡಿದ ಎಚ್ಚರಿಕೆ ಏನು?

ಪಾಕಿಸ್ತಾನದ ಸಿಂಧ್​ ಮತ್ತು ಪಂಜಾಬ್​ ಪ್ರಾಂತ್ಯಗಳಲ್ಲಿ ಇದೇ ಕಾರಣಕ್ಕೆ ಹಲ್ಲಿ ಬೇಟೆ ಹೆಚ್ಚಾಗಿದೆ. ತಮ್ಮ ಬಿಲದಿಂದ ಹೊರಬಂದ ಸರೀಸೃಪಗಳನ್ನು ಮುಲಾಜಿಲ್ಲದೆ ಕೊಂದು ಕಾಳಸಂತೆಗೆ ತರಲಾಗುತ್ತಿದೆ ಎಂದೂ ವರದಿಯಾಗಿದೆ. ಇನ್ನೂ ಕೆಲವರು ಈಗಾಗಲೇ ಖರೀದಿಸಿ ಹೋದವರು ತಿರುಗಿಬಿದ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಬಳಕೆ ಮಾಡಿದ್ದೇವೆ. ಇದೊಂದು ಉಪಯೋಗವಿಲ್ಲದ ಎಣ್ಣೆ. ಬ್ಯಾಕ್ಟೀರಿಯಾದಿಂದ ತುಂಬಿದೆ. ಇನ್​ಫೆಕ್ಷನ್ ಆಗುತ್ತದೆ ಎಂದೂ ಹೇಳಿದ್ದಾರೆ.

(ವಿ.ಸೂ.: ಹಲ್ಲಿ ಎಣ್ಣೆ ಕಾಮೋತ್ತೇಜಕ ಎಂಬುದು ಇದುವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಹೊರತು ವೈದ್ಯಕೀಯ ಕ್ಷೇತ್ರದಿಂದ ಅನುಮೋದನೆಯನ್ನೂ ಪಡೆದಿಲ್ಲ. ನಾವಿಲ್ಲಿ ಪ್ರಕಟಿಸಿದ್ದು ಸುದ್ದಿಯನ್ನು ಮಾತ್ರ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

Ebrahim Raisi: ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನವಾಗಿದೆ ಎಂಬುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದರೆ, ಇನ್ನೂ ಕೆಲವು ಮಾಧ್ಯಮಗಳು ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ ಎಂದು ವರದಿ ಮಾಡಿವೆ. ಹಾಗಾಗಿ, ಹೆಲಿಕಾಪ್ಟರ್‌ ಪತನವಾಗಿದೆಯೋ, ತುರ್ತು ಲ್ಯಾಂಡ್‌ ಆಗಿದೆಯೋ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗಿಲ್ಲ. ಆದಾಗ್ಯೂ, ಭದ್ರತಾ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಜರ್‌ಬೈಜಾನ್‌ನಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ ಎಂಬುದಾಗಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇರಾನ್‌ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ರಾಯಿಟರ್ಸ್‌ ಪ್ರಕಾರ, ಹೆಲಿಕಾಪ್ಟರ್‌ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ವರದಿ ಪ್ರಕಟಿಸಿದೆ. ಆದಾಗ್ಯೂ, ಇರಾನ್‌ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇರಾನ್‌ ಬೆಂಗಾವಲು ಪಡೆ ಇದ್ದ ಹೆಲಿಕಾಪ್ಟರ್‌ ಪತನಗೊಂಡಿದೆ. ಅದರಲ್ಲಿ, ಇಬ್ರಾಹಿಂ ರೈಸಿ ಅವರು ಇದ್ದರೋ, ಇಲ್ಲವೋ ಎಂಬುದರ ಮಾಹಿತಿ ನಿಖರವಾಗಿಲ್ಲ. ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ತೆರಳುತ್ತಿದೆ ಎಂಬುದಾಗಿ ಸಚಿವರೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಬಿಬಿಸಿ ವರದಿ ತಿಳಿಸಿದೆ. ಅಜರ್‌ಬೈಜಾನ್‌ ಸಮೀಪದ ಜೋಲ್ಫಾ ಎಂಬ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ಮಾಹಿತಿ ನೀಡಿವೆ. ಪತನಗೊಂಡಿರುವ ಹೆಲಿಕಾಪ್ಟರ್‌ ಪತ್ತೆಹಚ್ಚಲು ಸಿಬ್ಬಂದಿಯು ಹರಸಾಹಸ ಪಡುತ್ತಿದೆ ಎಂದು ಕೂಡ ತಿಳಿದುಬಂದಿದೆ.

ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ ಪತನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತುರ್ತು ಭೂಸ್ಪರ್ಶ ಮಾಡಿದ ಕಾರಣದಿಂದಾಗಿ ಯಾರಿಗೂ ಅಪಾಯವಾಗಿಲ್ಲ ಎಂದು ಮತ್ತೊಂದಿಷ್ಟು ಮೂಲಗಳು ತಿಳಿಸಿವೆ.

ಇದನ್ನೂ ಓದಿ: US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Continue Reading

ಪ್ರವಾಸ

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಭಾರತೀಯರು ರಷ್ಯಾಕ್ಕೆ ವೀಸಾ ಇಲ್ಲದೇ (Russia Tourism) ತೆರಳಬಹುದು. ಈ ಕುರಿತು ಮಾತುಕತೆ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ರಷ್ಯಾ ಮತ್ತು ಭಾರತವು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯದ ಮೂಲಕ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

By

Russia Tourism
Koo

ವಿಶ್ವವನ್ನು ಸುತ್ತಬೇಕು (world tour) ಎನ್ನುವ ಆಸೆ ಉಳ್ಳ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು (indians) ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ (Russia Tourism) ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯಾಣದ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಯೋಜನೆ ರೂಪಿಸುತ್ತಿವೆ.

ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮಾನದಂಡಗಳನ್ನು ಅಂತಿಮಗೊಳಿಸಲು ಸಮಾಲೋಚನೆಗಳನ್ನು ಜೂನ್‌ ನಿಂದ ಪ್ರಾರಂಭಿಸಲಿದೆ. ವೀಸಾ ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸಿದ ಅನಂತರ ಭಾರತೀಯರು ರಷ್ಯಾಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕಿ ನಿಕಿತಾ ಕೊಂಡ್ರಾಟ್ಯೆವ್, ಭಾರತವು ಆಂತರಿಕ ರಾಜ್ಯ ಸಮನ್ವಯದ ಅಂತಿಮ ಹಂತದಲ್ಲಿದೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.

ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

ರಷ್ಯಾ ಮತ್ತು ಭಾರತದ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಜೂನ್‌ನಲ್ಲಿ ಪ್ರಯಾಣವನ್ನು ಸರಾಗಗೊಳಿಸುವ ದ್ವಿಪಕ್ಷೀಯ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಸಮಾಲೋಚನೆಗಳನ್ನು ಪ್ರಾರಂಭಿಸುತ್ತವೆ. ಅಂತಿಮಗೊಳಿಸುವಿಕೆಯ ಅನಂತರ ರಷ್ಯಾ ಮತ್ತು ಭಾರತವು ಒಟ್ಟಾಗಿ ವೀಸಾ- ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸುತ್ತದೆ ಎಂದು ರಷ್ಯಾದ ಸಚಿವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಯಾವಾಗ ಸಾಧ್ಯವಾಗುತ್ತದೆ?

ಕಜಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ “ರಷ್ಯಾ- ಇಸ್ಲಾಮಿಕ್ ವರ್ಲ್ಡ್: ಕಜಾನ್‌ಫೋರಮ್ 2024” ಭಾಗದಲ್ಲಿ ಸಚಿವರು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

“ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವಂತೆ ರಷ್ಯಾ ಮತ್ತು ಭಾರತವು ತಮ್ಮ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ಸಜ್ಜಾಗಿದೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಸುತ್ತಿನ ಸಮಾಲೋಚನೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ. ಇದು ದ್ವಿಪಕ್ಷೀಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಯಾರಿಗಿದೆ ಅವಕಾಶ?

ರಷ್ಯಾ ಈಗ ಚೀನಾ ಮತ್ತು ಇರಾನ್‌ನ ಜನರಿಗೆ ತನ್ನ ವೀಸಾ ಮುಕ್ತ ಪ್ರವಾಸಿ ವಿನಿಮಯ ಕಾರ್ಯಕ್ರಮದ ಮೂಲಕ ವೀಸಾ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುತ್ತದೆ. ಸಚಿವರ ಪ್ರಕಾರ, ಕಾರ್ಯಕ್ರಮದ ಯಶಸ್ಸನ್ನು ಭಾರತದೊಂದಿಗೆ ಪುನರಾವರ್ತಿಸುವ ಗುರಿಯನ್ನು ದೇಶ ಹೊಂದಿದೆ. ರಷ್ಯಾ ಮತ್ತು ಚೀನಾ ನಡುವೆ ಮತ್ತು ರಷ್ಯಾ ಮತ್ತು ಇರಾನ್ ನಡುವೆ ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯವು 2023ರ ಆಗಸ್ಟ್ 1ರಂದು ಪ್ರಾರಂಭವಾಯಿತು.

Continue Reading

ದೇಶ

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸುವ ಸಮಾವೇಶ, ಸಭೆಗಳಲ್ಲಿ ಜನರಿಗೆ ಚೀನಾ ಸಂವಿಧಾನದ ಪ್ರತಿ ಪ್ರದರ್ಶಿಸುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಪ್ರತಿಯು ನೀಲಿ ಕವರ್‌ ಹೊಂದಿದೆ. ಚೀನಾ ಸಂವಿಧಾನದ ಮೂಲ ಪ್ರತಿಯು ಕೆಂಪು ಕವರ್‌ ಹೊಂದಿದೆ ಎಂಬುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

VISTARANEWS.COM


on

Constitution
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳ ನಾಯಕರ ಹೇಳಿಕೆಗಳು ಮೊನಚಾಗಿವೆ. ಆರೋಪ, ಪ್ರತ್ಯಾರೋಪ, ವಾಗ್ದಾಳಿ, ವಾಗ್ಬಾಣಗಳ ಜತೆಗೆ ವೈಯಕ್ತಿಕ ನಿಂದನೆ, ಆರೋಪಗಳು ಕೂಡ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ರಾಹುಲ್‌ ಗಾಂಧಿ ಅವರು ಸಭೆ-ಸಮಾವೇಶಗಳಲ್ಲಿ ಜನರಿಗೆ ಚೀನಾ ಸಂವಿಧಾನ ಪ್ರದರ್ಶಿಸುತ್ತಿದ್ದಾರೆ” ಎಂದು ಸಿಎಂ ಆರೋಪಿಸಿದ್ದಾರೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

“ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸುವ ಸಮಾವೇಶ, ಸಭೆಗಳಲ್ಲಿ ಜನರಿಗೆ ಚೀನಾ ಸಂವಿಧಾನದ ಪ್ರತಿ ಪ್ರದರ್ಶಿಸುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಪ್ರತಿಯು ನೀಲಿ ಕವರ್‌ ಹೊಂದಿದೆ. ಚೀನಾ ಸಂವಿಧಾನದ ಮೂಲ ಪ್ರತಿಯು ಕೆಂಪು ಕವರ್‌ ಹೊಂದಿದೆ. ರಾಹುಲ್‌ ಗಾಂಧಿ ಅವರು ಚೀನಾ ಸಂವಿಧಾನವನ್ನು ಜನರಿಗೆ ಪ್ರದರ್ಶಿಸುತ್ತಿದ್ದಾರೆಯೇ? ಈ ಕುರಿತು ಪರಿಶೀಲನೆ ಆಗಬೇಕು” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅಸ್ಸಾಂ ಮುಖ್ಯಮಂತ್ರಿ ಪೋಸ್ಟ್‌ ಮಾಡಿದ್ದಾರೆ.

“ನಮ್ಮ ಸಂವಿಧಾನವು ನೀಲಿ ಕವರ್‌ ಹೊಂದಿದ್ದು, ಮೂಲಭೂತ ಕರ್ತವ್ಯಗಳ ಬಗ್ಗೆ ಉಲ್ಲೇಖವಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂಬುದಾಗಿ ಮೂಲಭೂತ ಕರ್ತವ್ಯವು ತಿಳಿಸುತ್ತದೆ. ಆದರೆ, ರಾಹುಲ್‌ ಗಾಂಧಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಚೀನಾ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ತಿರುಗಾಡುತ್ತಿರಬಹುದು” ಎಂದು ಕೂಡ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ತಿರುಗೇಟು

ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಕಾಂಗ್ರೆಸ್‌ ಶಾಸಕ ಅಬ್ದುಲ್‌ ರಶೀದ್‌ ಮೊಂಡಲ್‌ ತಿರುಗೇಟು ನೀಡಿದ್ದಾರೆ. “ಭಾರತ ಸಂವಿಧಾನದ ಕವರ್‌ಗಳ ಬಣ್ಣವು ಬೇರೆ ಬೇರೆ ಇದೆ. ಕವರ್‌ ಬಣ್ಣ ಬೇರೆಯಾದರೂ ಸಂವಿಧಾನದ ಆಶಯಗಳು ಒಂದೇ ಆಗಿವೆ. ಅಷ್ಟಕ್ಕೂ ನಾವು ಬಣ್ಣವನ್ನು ಓದುವುದಿಲ್ಲ. ಸಂವಿಧಾನದ ಆಶಯ, ಉದ್ದೇಶಗಳನ್ನು ಪಾಲಿಸುತ್ತೇವೆ” ಎಂದಿದ್ದಾರೆ. “ಭಾರತ ಸಂವಿಧಾನದ ಪಾಕೆಟ್‌ ಎಡಿಷನ್‌ನ ಪ್ರತಿಯು ನೀಲಿ ಬಣ್ಣದ ಕವರ್‌ ಹೊಂದಿದೆ” ಎಂದು ಕೂಡ ಕೆಲ ಜಾಲತಾಣಿಗರು ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Himanta Biswa Sarma: ಬಿಜೆಪಿಗೆ ಏಕೆ 400 ಸೀಟುಗಳು ಬೇಕೇಬೇಕು? ಹಿಮಂತ ಬಿಸ್ವ ಶರ್ಮಾ ಉತ್ತರ ಹೀಗಿದೆ!

Continue Reading

ವಿದೇಶ

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Covid 19: ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ ಎಂದು ಸಿಂಗಾಪುರ ಆರೋಗ್ಯ ಸಚಿವ ತಿಳಿಸಿದ್ದಾರೆ.

VISTARANEWS.COM


on

Covid 19
Koo

ಸಿಂಗಾಪುರ: ಭಾರತ ಸೇರಿ ಜಗತ್ತನ್ನೇ ಪಿಡುಗಿನಂತೆ ಕಾಡಿದ ಕೊರೊನಾ ಸೋಂಕು (Covid 19) ಈಗ ಸಿಂಗಾಪುರದಲ್ಲಿ ಹೊಸದೊಂದು ಅಲೆ ಸೃಷ್ಟಿಸಿದೆ. ಸಿಂಗಾಪುರದಲ್ಲಿ (Singapore) ಕಳೆದ ಒಂದು ವಾರದಲ್ಲಿಯೇ (ಮೇ 5-11) 25,900 ಪ್ರಕರಣಗಳು ದಾಖಲಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವ ಓಂಗ್‌ ಯೆ ಕುಂಗ್‌ (Ong Ye Kung) ಅವರು ಖಡಕ್‌ ಆದೇಶ ಹೊರಡಿಸಿದ್ದಾರೆ. ಸಿಂಗಾಪುರದಲ್ಲಿ ಏಕಾಏಕಿ ಮಹಾಮಾರಿಯ ಹೊಸ ಅಲೆ ಸೃಷ್ಟಿಯಾಗಿರುವುದರಿಂದ ಭಾರತಕ್ಕೂ ಭೀತಿ ಎದುರಾಗಿದೆ.

“ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಜೂನ್‌ ಅಂತ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವ ಜತೆಗೆ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕನ್ನು ನಿಗ್ರಹಿಸಲು ಸೂಚಿಸಲಾಗಿದೆ” ಎಂದು ಓಂಗ್‌ ಯೆ ಕುಂಗ್‌ ತಿಳಿಸಿದ್ದಾರೆ.

ಮೇ 5ಕ್ಕಿಂತ ಮೊದಲಿನ ಒಂದು ವಾರದಲ್ಲಿ ಸಿಂಗಾಪುರದಲ್ಲಿ 13,700 ಕೇಸ್‌ಗಳು ದಾಖಲಾಗಿದ್ದವು. ಆದರೆ, ಒಂದೇ ವಾರದ ಅಂತರದಲ್ಲಿ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 181ರಿಂದ 250ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ಸರಾಸರಿ ಮೂವರು ಸೋಂಕಿತರು ಐಸಿಯು ಸೇರುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಸೇರಿ ಹಲವು ವೈದ್ಯಕೀಯ ಸೌಕರ್ಯಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಭಾರತಕ್ಕೂ ಇದೆ ಹೊಸ ಅಲೆಯ ಭೀತಿ

ಸಿಂಗಾಪುರದಿಂದ ಭಾರತಕ್ಕೆ ಬರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಭಾರತಕ್ಕೂ ಹೊಸ ಸೋಂಕಿನ ಅಲೆಯ ಭೀತಿ ಇದ್ದೇ ಇದೆ. ಹಾಗೊಂದು ವೇಳೆ, ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟ ಜಾಸ್ತಿಯಾದರೆ ಭಾರತಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮದ ಕುರಿತು ವರದಿಗಳು ಬಹಿರಂಗವಾದ ಬೆನ್ನಲ್ಲೇ ಹೊಸ ತಳಿಯ ಸೋಂಕು ಹರಡುವ ಭೀತಿಯು ಜನರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading
Advertisement
IPL 2024 Eliminato
ಕ್ರೀಡೆ8 mins ago

IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

Tourist boat capsizes
ಕರ್ನಾಟಕ21 mins ago

Tourist Boat Capsizes: ತದಡಿ ಬಳಿ ಮಗುಚಿದ ಪ್ರವಾಸಿಗರ ಬೋಟ್; 40 ಪ್ರವಾಸಿಗರ ರಕ್ಷಣೆ

RR vs KKR
ಕ್ರೀಡೆ38 mins ago

RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

Parliament Security
ದೇಶ48 mins ago

Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

Dangerous Bike Stunt
ಕರ್ನಾಟಕ56 mins ago

Dangerous Bike Stunt: ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ಓಡಿಸಿದ ಯುವಕ ಅರೆಸ್ಟ್‌

Narendra Modi
ದೇಶ2 hours ago

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

SRH vs PBKS
ಕ್ರೀಡೆ2 hours ago

SRH vs PBKS: ಆರ್​ಸಿಬಿಯ ಸಿಕ್ಸರ್​ ದಾಖಲೆ ಮುರಿದ ಹೈದರಾಬಾದ್​

Drowned in Lake
ಕರ್ನಾಟಕ2 hours ago

Drown in Lake: ಮೀನು ಹಿಡಿಯಲು ಕೆರೆಗೆ ಹೋಗಿದ್ದ ಇಬ್ಬರು ನೀರು ಪಾಲು

Bengaluru Rain
ಕರ್ನಾಟಕ3 hours ago

Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಸಂಚಾರ ಅಸ್ತವ್ಯಸ್ತ

Kantara Movie
ಸಿನಿಮಾ3 hours ago

Kantara Movie: ದಾಖಲೆ ಮೊತ್ತಕ್ಕೆ ಕಾಂತಾರ ಸಿನಿಮಾದ ಡಿಜಿಟಲ್‌ ರೈಟ್ಸ್‌ ಮಾರಾಟ; ಅಬ್ಬಾ ಇಷ್ಟು ಕೋಟಿನಾ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ8 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ10 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌