Olectra Greentech Ltd. posted a net profit in Q4, Increased demand for e-busesOlectra Greentech Ltd: 4ನೇ ತ್ರೈಮಾಸಿಕದಲ್ಲಿ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್‌ಗೆ ಭರ್ಜರಿ ಲಾಭ; ಇ-ಬಸ್‍ಗಳಿಗೆ ಹೆಚ್ಚಿದ ಬೇಡಿಕೆ - Vistara News

ವಾಣಿಜ್ಯ

Olectra Greentech Ltd: 4ನೇ ತ್ರೈಮಾಸಿಕದಲ್ಲಿ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್‌ಗೆ ಭರ್ಜರಿ ಲಾಭ; ಇ-ಬಸ್‍ಗಳಿಗೆ ಹೆಚ್ಚಿದ ಬೇಡಿಕೆ

Olectra Greentech Ltd: ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಕಂಪನಿಯಿಂದ ಎಲೆಕ್ಟ್ರಿಕ್ ಟಿಪ್ಪರ್‌ಗಳ ಮಾರಾಟ ಆರಂಭವಾಗಿದ್ದು, 2022-23ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 17 ಇ-ಟಿಪ್ಪರ್‌ಗಳ ಹಸ್ತಾಂತರವಾಗಿದೆ.

VISTARANEWS.COM


on

Olectra Greentech Ltd. posted a net profit in Q4, Increased demand for e-buses
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್: ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ (ಒಜಿಎಲ್) 2023 ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು 2022-23ರ ಹಣಕಾಸು ವರ್ಷದ ಲೆಕ್ಕಪರಿಶೋಧಿತ ಸ್ವತಂತ್ರ ಮತ್ತು ಏಕೀಕೃತ ಫಲಿತಾಂಶಗಳನ್ನು ಪ್ರಕಟಿಸಿದ್ದು, ನಿರ್ದೇಶಕರ ಮಂಡಳಿ ಸಭೆಯಲ್ಲಿ ಫಲಿತಾಂಶಗಳನ್ನು ಅನುಮೋದಿಸಲಾಗಿದೆ.

ವರದಿಯಂತೆ ಪ್ರಸಕ್ತ ವರ್ಷದಲ್ಲಿ, ಒಲೆಕ್ಟ್ರಾ ಇ-ಬಸ್‌ಗಳ ಅತಿ ಹೆಚ್ಚು ವಿತರಣೆಯನ್ನು ದಾಖಲಿಸಿದೆ. 2021-22ರಲ್ಲಿ 259 ಇದ್ದ, ಇ-ಬಸ್‍ಗಳ ವಿತರಣೆ 2022-23ರಲ್ಲಿ 563ಕ್ಕೆ ಏರಿಕೆಯಾಗಿದೆ. ಬಲವಾದ ಬೇಡಿಕೆ ಮುಂದುವರಿದಿದ್ದು, ಒಟ್ಟು ಆರ್ಡರ್‌ಗಳ ಸಂಖ್ಯೆ 3,394 ಯುನಿಟ್‌ಗಳಷ್ಟಿದೆ. ಇನ್ನು ಕಂಪನಿಯ ಕ್ರೋಡೀಕೃತ ಮೊತ್ತ 1,090.76 ಕೋಟಿ ರೂ. ಆಗಿದ್ದು ಶೇ.84ರಷ್ಟು ಏರಿಕೆಯಾಗಿದೆ. ಇಬಿಐಟಿಡಿಎ 153.97 ಕೋಟಿ ರೂ.ಗೆ ಅಂದರೆ ಶೇ.14 ಏರಿಕೆಯಾಗಿದೆ. ಕಂಪನಿಯಿಂದ ಎಲೆಕ್ಟ್ರಿಕ್ ಟಿಪ್ಪರ್‌ಗಳ ಮಾರಾಟ ಆರಂಭವಾಗಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 17 ಇ-ಟಿಪ್ಪರ್‌ಗಳ ಹಸ್ತಾಂತರವಾಗಿದೆ.

ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸ್ವತಂತ್ರ ಫಲಿತಾಂಶಗಳು

  • ಕಂಪನಿಯ ನಾಲ್ಕನೇ ತ್ರೈಮಾಸಿಕ ಆದಾಯವು 368.4 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ವೃದ್ಧಿ ಕಂಡಿದೆ.
  • 2023ರ ಆದಾಯವು 1,134.41 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ.94ರಷ್ಟು ಹೆಚ್ಚಳವಾಗಿದೆ.
  • ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 27.81 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 17.47 ಕೋಟಿ ರೂ. ಲಾಭಗಳಿಸಿತ್ತು.
  • ಈ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ 70.70 ಕೋಟಿ ರೂ.ಗಳಾಗಿದ್ದು, ಕಳೆದ ಅವಧಿಗೆ ಹೋಲಿಸಿದರೆ ಇದು ಶೇ.98ರಷ್ಟು ಏರಿಕೆಯಾಗಿದೆ.

ಸಂಸ್ಥೆಯ ಈ ಧನಾತ್ಮಕ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸಿಎಂಡಿ ಕೆ.ವಿ.ಪ್ರದೀಪ್ ಅವರು, 2023ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ನಮ್ಮ ಸ್ವತಂತ್ರ ಮತ್ತು ಏಕೀಕೃತ ಆದಾಯ ಮತ್ತು ಲಾಭದಾಯಕತೆ ಎರಡರಲ್ಲೂ ಬಲವಾದ ಬೆಳವಣಿಗೆಯನ್ನು ವರದಿ ಮಾಡಲು ನಾವು ಸಂತೋಷಪಡುತ್ತೇವೆ. ಪೂರೈಕೆ ಸರಪಳಿ ಮತ್ತು ಇತರ ಸ್ಥೂಲ ಸವಾಲುಗಳು ಮುಂದುವರಿದಿದ್ದರೂ, ನಮ್ಮ ಗಮನವು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ನಮ್ಮ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇದು ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ನಮ್ಮ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ | Adani Group : ಮ್ಯಾನ್ಮಾರ್‌ ಬಂದರನ್ನು ಭಾರಿ ಡಿಸ್ಕೌಂಟ್‌ನಲ್ಲಿ ಮಾರಿದ ಅದಾನಿ ಗ್ರೂಪ್‌, ಕಾರಣವೇನು?

ದೇಶದ ಸ್ವಚ್ಛ ಚಲನಶೀಲತೆಯ ಕಾರ್ಯಸೂಚಿಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ ಮತ್ತು ಮುಂಬರುವ ವರ್ಷಗಳಲ್ಲಿ ಬಲವಾದ ಬೆಳವಣಿಗೆಯ ಪಥವನ್ನು ಎದುರು ನೋಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

Vodafone Idea: ಜುಲೈ 4ರಿಂದ ವೋಡಾಫೋನ್‌ ಐಡಿಯಾ ಶುಲ್ಕಗಳನ್ನು ಶೇ. 10ರಷ್ಟು ಹಾಗೂ ಶೇ.23ರಷ್ಟು ಏರಿಕೆ ಮಾಡಲು ತೀರ್ಮಾನಿಸಿದೆ. 28 ದಿನಗಳ ಪ್ಲಾನ್‌ಗೆ 179 ರೂ. ಬದಲಾಗಿ 199 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, 84 ದಿನಗಳವರೆಗೆ 1.5 ಜಿಬಿ ಪ್ಲಾನ್‌ಗೆ 719ರ ಬದಲಾಗಿ 859 ರೂ. ಪಾವತಿಸಬೇಕಾಗುತ್ತದೆ.

VISTARANEWS.COM


on

Vodafone Idea
Koo

ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕಳೆದ ಕೆಲ ದಿನಗಳಿಂದ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸುತ್ತಿವೆ. ರಿಲಯನ್ಸ್‌ ಜಿಯೋ (Reliance Jio) ಹಾಗೂ ಏರ್‌ಟೆಲ್‌ (Airtel) ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ವೋಡಾಫೋನ್‌ ಐಡಿಯಾ (Vodafone Idea) ಸಂಸ್ಥೆಯೂ ಬೆಲೆಯೇರಿಕೆಗೆ ಮುಂದಾಗಿದೆ. ಇದು ಕೂಡ ಕೋಟ್ಯಂತರ ಗ್ರಾಹಕರಿಗೆ ಮೊಬೈಲ್‌ ರಿಚಾರ್ಜ್‌ ಮಾಡಿಸಿಕೊಳ್ಳುವಲ್ಲಿ ಹೊರೆ ಎನಿಸಲಿದೆ.

ಹೌದು, ಜುಲೈ 4ರಿಂದ ವೋಡಾಫೋನ್‌ ಐಡಿಯಾ ಶುಲ್ಕಗಳನ್ನು ಶೇ. 10ರಷ್ಟು ಹಾಗೂ ಶೇ.23ರಷ್ಟು ಏರಿಕೆ ಮಾಡಲು ತೀರ್ಮಾನಿಸಿದೆ. 28 ದಿನಗಳ ಪ್ಲಾನ್‌ಗೆ 179 ರೂ. ಬದಲಾಗಿ 199 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, 84 ದಿನಗಳವರೆಗೆ 1.5 ಜಿಬಿ ಪ್ಲಾನ್‌ಗೆ 719ರ ಬದಲಾಗಿ 859 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ವಾರ್ಷಿಕ ಯೋಜನೆಯ ಮೊತ್ತವನ್ನು 2,899 ರೂ.ನಿಂದ 3,499 ರೂ.ಗೆ ಏರಿಕೆ ಮಾಡಿದೆ. ಆದರೆ, 365 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು ಹಾಗೂ 24 ಜಿಬಿ (ಪ್ರತಿದಿನ ಅಲ್ಲ) ಇಂಟರ್‌ನೆಟ್‌ ಪ್ಲಾನ್‌ ಬೆಲೆಯೇರಿಕೆ ಮಾಡಿಲ್ಲ. ಅದು ಮೊದಲಿನಂತೆ ಶೇ.1,799 ರೂ. ಇರಲಿದೆ.

ಜಿಯೋ ಪ್ಲಾನ್‌ ಬೆಲೆಯೇರಿಕೆ ಎಷ್ಟು?

28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್‌ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್‌ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.

2 ಹಾಗೂ 3 ತಿಂಗಳ ಪ್ಲಾನ್‌

ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್‌, ಅನ್‌ಲಿಮಿಟೆಡ್‌ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್‌ ಕರೆ, 6 ಜಿಬಿ ಇಂಟರ್‌ನೆಟ್‌ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್‌ ಕಾಲ್ಸ್‌ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ತೆರಬೇಕಾಗಿದೆ.

ವಾರ್ಷಿಕ ಹಾಗೂ ಡೇಟಾ ಆ್ಯಡ್‌ ಆನ್‌ಗೆ ಎಷ್ಟು ಏರಿಕೆ

336 ದಿನಗಳವರೆಗೆ ಅನ್‌ಲಿಮಿಟೆಡ್‌ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್‌ ಆನ್‌ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್‌ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್‌ ಟೆಲಿಕಾಮ್‌ ಕಂಪನಿ ಎನಿಸಿದೆ.

ಇದನ್ನೂ ಓದಿ: 5G Spectrum: 11,300 ಕೋಟಿ ರೂ. ಮೌಲ್ಯದ 5ಜಿ ತರಂಗ ಹರಾಜು; ಭಾರ್ತಿ ಏರ್‌ಟೆಲ್‌ ಮುಂಚೂಣಿ

Continue Reading

ವಾಣಿಜ್ಯ

Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೂ ಮುನ್ನ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರು ವಾರಣಾಸಿಯಲ್ಲಿ ಮಗ್ಗದ ಮಾಲೀಕರು ಮತ್ತು ನೇಕಾರರನ್ನು ಭೇಟಿ ಮಾಡಿ ಸೀರೆಗಳನ್ನು ಖರೀದಿ ಮಾಡಿ, ನೇಕಾರರ ಕೌಶಲಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಅವರು ಐವತ್ತಕ್ಕೂ ಹೆಚ್ಚು ಸೀರೆಗಳನ್ನು ಖರೀದಿಸಿದ್ದಾರೆ. ಇವು ಯಾವ ಮಾದರಿ ಸೀರೆ, ದರ ಎಷ್ಟು ಇತ್ಯಾದಿ ಮಾಹಿತಿ ಇಲ್ಲಿದೆ.

VISTARANEWS.COM


on

By

Nita Ambani
Koo

ಎಲ್ಲ ಸಂದರ್ಭಕ್ಕೂ ಸೂಕ್ತವಾಗುವ ಬನಾರಸಿ ಸೀರೆಗಳು (Banarasi sari) ಎಲ್ಲರಿಗೂ ಇಷ್ಟವಾಗುತ್ತದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Radhika Wedding) ಅವರ ಮದುವೆಗೂ ಮುನ್ನ ಬನಾರಸಿ ಸೀರೆಗಳನ್ನು ಖರೀದಿ ಮಾಡಲು ರಿಲಯನ್ಸ್ ಫೌಂಡೇಶನ್‌ನ (Reliance Foundation) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರು ವಾರಣಾಸಿಗೆ (varanasi) ತೆರಳಿ ಐವತ್ತರಿಂದ ಅರವತ್ತು ಸೀರೆಗಳನ್ನು ಖರೀದಿಸಿದರು.

ವಾರಣಾಸಿಯಲ್ಲಿ ಮಗ್ಗದ ಮಾಲೀಕರು ಮತ್ತು ನೇಕಾರರನ್ನು ಭೇಟಿ ಮಾಡಿದ ಅವರು ಸೀರೆಗಳನ್ನು ಖರೀದಿ ಮಾಡಿದರು. ಇದಕ್ಕೂ ಮೊದಲು ಹಲವಾರು ಬನಾರಸಿ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳನ್ನು ಹೊಟೇಲ್ ಗೆ ಕರೆಸಿ ಮಾತನಾಡಿದ ಅವರು ಬಳಿಕ ಸೀರೆಗಳನ್ನು ಸ್ವತಃ ಆಯ್ಕೆ ಮಾಡಿದರು. ನೇಕಾರರ ಕೌಶಲಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಾಲಿವುಡ್, ಹಾಲಿವುಡ್ ಮತ್ತು ಇತರ ದೇಶಗಳ ಅನೇಕ ಅತಿಥಿಗಳು ಅನಂತ್ ಅಂಬಾನಿ ಅವರ ವಿವಾಹದಲ್ಲಿ ಪಾಲ್ಗೊಳ್ಳುವುದರಿಂದ ಬನಾರಸಿ ಸೀರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಅಂಬಾನಿ ಕುಟುಂಬ ಸೀರೆಗಳಿಗೆ ಆರ್ಡರ್ ಮಾಡಿದ್ದು, ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಲಕ್ಕಾ ಬೂಟಿ ಸೀರೆ

ನೀತಾ ಅಂಬಾನಿ ಅವರ ಲಕ್ಕಾ ಬೂಟಿ ಸೀರೆಯನ್ನು ಇಷ್ಟಪಟ್ಟಿದ್ದಾರೆ ಎಂದು ಬನಾರಸಿ ಕೈಮಗ್ಗ ನೇಕಾರ ಛೋಟೆ ಲಾಲ್ ಪಾಲ್ ತಿಳಿಸಿದ್ದಾರೆ. ಅಂಬಾನಿ ಕುಟುಂಬವು ಭಾರತದ ಪ್ರಸಿದ್ಧ ವ್ಯಾಪಾರ ಕುಟುಂಬವಾಗಿದೆ. ನೀತಾ ಅಂಬಾನಿ ತನ್ನ ಮಗನ ಮದುವೆಯಲ್ಲಿ ನಾನು ತಯಾರಿಸಿದ ಸೀರೆಯನ್ನು ಧರಿಸಿದರೆ ಅನಂತರ ಎಲ್ಲರೂ ಅದನ್ನು ಟಿವಿಯಲ್ಲಿ ನೋಡುತ್ತಾರೆ. ಅವರು ನನ್ನ ಸೀರೆಯನ್ನು ಇಷ್ಟಪಟ್ಟಿದ್ದಾರೆ ಎಂದರು.


ನಾವು ಬನಾರಸ್‌ನ ಹಳೆಯ ಕುಶಲಕರ್ಮಿಗಳು. ನಾವು ಮೂರನೇ ತಲೆಮಾರಿನವರು. ನಮ್ಮ ಅಜ್ಜ ಮತ್ತು ತಂದೆ ನೇಕಾರರು. ನಾವು ತಯಾರಿಸುವ ಸೀರೆಗೆ ಲಖ ಬೂಟಿ ಎಂದು ಕರೆಯಲಾಗುತ್ತದೆ. ಈ ಸೀರೆಯ ವಿಶೇಷತೆ ಎಂದರೆ ಆಂಚಲ್ ಬಳಿ ಒಂದು ಮೂಲೆ ಇದೆ. ಒಮ್ಮೆ ಮಗ್ಗವನ್ನು ಸ್ಥಾಪಿಸಿದಾಗ, ಸಂಪೂರ್ಣ ಸೀರೆಯನ್ನು ಸಿದ್ಧಪಡಿಸುತ್ತೇವೆ. ಆದರೆ ವಿಶೇಷ ಸೀರೆಯನ್ನು ತಯಾರಿಸಲು ಮಗ್ಗವನ್ನು ಮೂರು ಬಾರಿ ತಯಾರಿಸಲಾಗುತ್ತದೆ/ ಇದನ್ನು ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ, ಇದನ್ನು ತಯಾರಿಸಲು 60 ರಿಂದ 62 ದಿನಗಳು ಬೇಕಾಗುತ್ತದೆ ಎಂದು ಹೇಳಿದರು.

ನೇಕಾರರ ಜೊತೆಗೆ ಸೀರೆ ತಯಾರಿಸಲು ಸಹಾಯ ಮಾಡಲು ಇನ್ನೂ 20ರಿಂದ 25 ಕಾರ್ಮಿಕರು ಅಗತ್ಯವಿದೆ. ಮೊದಲು ತಯಾರಿ ಇದೆ. ವಿವರಣೆ ಮುಗಿದಿದೆ. ವಿನ್ಯಾಸವನ್ನು ರಚಿಸಲಾಗಿದೆ. ನಕ್ಷೆಯನ್ನು ರಚಿಸಲಾಗಿದೆ. ವಿನ್ಯಾಸ ಮುಗಿದ ಮೇಲೆ ಸೀರೆಯನ್ನು ಕೈಮಗ್ಗಕ್ಕೆ ಕಳುಹಿಸಲಾಗುತ್ತದೆ. ಇಪ್ಪತ್ತೈದು ಜನರ ಕೈಗಳಲ್ಲಿ ಸೀರೆ ಸಂಪೂರ್ಣ ವಿನ್ಯಾಸಗೊಳ್ಳುತ್ತದೆ.


ಪ್ರತಿ ಸೀರೆಯು ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಹೊಂದಿರುವ ನಿಜವಾದ ಝರಿಯನ್ನು ಬಳಸಿ ಕೈಯಿಂದ ಮಾಡಲ್ಪಟ್ಟಿದೆ. ಶೇ. 58-60ರಷ್ಟು ಬೆಳ್ಳಿ ಮತ್ತು ಶೇ. 1.5ರಷ್ಟು ಚಿನ್ನದ ಲೇಪನವನ್ನು ಅನ್ವಯಿಸಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ದಾರಗಳ ಸೀರೆಗಳ ಬೆಲೆ 1.5 – 2 ಲಕ್ಷ ರೂ. ಗಳಿಂದ 5- 6 ಲಕ್ಷ ರೂ. ಗಳವರೆಗೆ ಇರುತ್ತದೆ.

ಈ ಸೀರೆಗಳನ್ನು ತಯಾರಿಸಲು ಬಹಳ ಸಮಯ ಬೇಕಾಗುತ್ತದೆ. ನೀತಾ ಅಂಬಾನಿ ಅವರು ಹಜಾರಾ ಬುಟಿ ಎಂದು ಕರೆಯಲ್ಪಡುವ ವಿಶಿಷ್ಟವಾದ ಸೀರೆಯನ್ನು ಖರೀದಿಸಿದ್ದಾರೆ. ಇದು 35,000 ಬೆಳ್ಳಿಯ ಬೂಟಿಗಳನ್ನು ಒಳಗೊಂಡಿದೆ. ಹಜಾರಾ ಬುಟಿ ಸೀರೆಯನ್ನು 40- 45 ದಿನಗಳಲ್ಲಿ ತಯಾರಿಸಲಾಗುತ್ತದೆ.


ಅನಂತ್-ರಾಧಿಕಾ ಮದುವೆ

ಜುಲೈ 12ರಂದು ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ಮುನ್ನ ನೀತಾ ಅಂಬಾನಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಮುಂಬಯಿನಲ್ಲಿ ಪುರಾತನ ಹಿಂದೂ ವೈದಿಕ ಸಂಪ್ರದಾಯದಂತೆ ನಡೆಯಲಿದೆ ಎನ್ನಲಾಗಿದೆ.

ಮಂಗಳಕರ ಶುಭ ವಿವಾಹ ಎಂದೂ ಕರೆಯಲ್ಪಡುವ ವಿವಾಹ ಸಮಾರಂಭವು ಶುಕ್ರವಾರ ಮುಖ್ಯ ಸಮಾರಂಭಗಳ ಮೂಲಕ ಪ್ರಾರಂಭವಾಗಲಿದೆ. ಆಚರಣೆಯ ವಾತಾವರಣವನ್ನು ಸಂಪೂರ್ಣವಾಗಿ ಆನಂದಿಸಲು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಲು ಅತಿಥಿಗಳಿಗೆ ಸೂಚಿಸಲಾಗಿದೆ. ಜುಲೈ 13ರಂದು ಶುಭ್ ಆಶೀರ್ವಾದ್ , ಕೊನೆಯ ದಿನವಾದ ಜುಲೈ 14ರಂದು ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

Post Office: ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ; ಬಡ್ಡಿಯ ಪಟ್ಟಿ ಇಲ್ಲಿದೆ

Post Office: 2024-25ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಸಿಗುತ್ತಿದ್ದ ಬಡ್ಡಿದರವೇ ಮುಂದುವರಿಯಲಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಯಾವೆಲ್ಲ ಯೋಜನೆಗಳ ಬಡ್ಡಿದರ ಎಷ್ಟಿದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

Post Office
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024-25) ಎರಡನೇ ತ್ರೈಮಾಸಿಕದ ಅವಧಿಗೆ (ಜುಲೈ-ಸೆಪ್ಟೆಂಬರ್‌ 2024) ಕೇಂದ್ರ ಸರ್ಕಾರವು ಪೋಸ್ಟ್‌ ಆಫೀಸ್‌ (Post Office) ಉಳಿತಾಯ ಯೋಜನೆ ಸೇರಿ ಯಾವುದೇ ಕಿರು ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿಲ್ಲ. ಇದರಿಂದಾಗಿ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY) ಸೇರಿ ಹಲವು ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಬದಲಾವಣೆಯಾಗದ ಕಾರಣ ಸಣ್ಣ ಪ್ರಮಾಣದಲ್ಲಿ ಠೇವಣಿ ಮಾಡುವವರಿಗೆ ಯಾವುದೇ ಅನುಕೂಲ ಆಗಿಲ್ಲ.

ಬಡ್ಡಿದರದ ಪಟ್ಟಿ ಹೀಗಿದೆ

ಯೋಜನೆಗಳುಬಡ್ಡಿದರ
ಉಳಿತಾಯ ಖಾತೆಯ ಠೇವಣಿ4%
1 ವರ್ಷ ಪೋಸ್ಟ್‌ ಆಫೀಸ್‌ ಠೇವಣಿ6.9%
2 ವರ್ಷ ಪೋಸ್ಟ್‌ ಆಫೀಸ್‌ ಠೇವಣಿ7%
3 ವರ್ಷ ಪೋಸ್ಟ್‌ ಆಫೀಸ್‌ ಠೇವಣಿ7.1%
5 ವರ್ಷ ಪೋಸ್ಟ್‌ ಆಫೀಸ್‌ ಠೇವಣಿ7.5%
5 ವರ್ಷ ರೆಕರಿಂಗ್‌ ಡೆಪಾಸಿಟ್‌ (RD)6.7%
ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್ (NSC)‌7.7%
ಕಿಸಾನ್‌ ವಿಕಾಸ್‌ ಪತ್ರ7.5%
ಪಿಪಿಎಫ್‌7.1%
ಸುಕನ್ಯಾ ಸಮೃದ್ಧಿ ಖಾತೆ8.2%
ಹಿರಿಯ ನಾಗರಿಕರ ಉಳಿತಾಯ ಯೋಜನೆ8.2%

“2024-25ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಸಿಗುತ್ತಿದ್ದ ಬಡ್ಡಿದರವೇ ಮುಂದುವರಿಯಲಿದೆ” ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕಿರು ಉಳಿತಾಯ ಯೋಜನೆಗಳ ಮೂಲಕ ಠೇವಣಿ ಇರಿಸಿದವರಿಗೆ ತುಸು ನಿರಾಸೆಯಾದಂತಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇತ್ತು.

Job Alert

ಮತ್ತೊಂದೆಡೆ, ಭವಿಷ್ಯ ನಿಧಿ ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಬಡ್ಡಿ ಮೊತ್ತ ಜಮೆಯಾಗುವುದನ್ನು ಕಾಯುತ್ತಿದ್ದಾರೆ. ಅಂತಹವರಿಗೆ ಇದೀಗ ಸಿಹಿ ಸುದ್ದಿ. ಜುಲೈ ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ ಸದಸ್ಯರ ಖಾತೆಗೆ ತಲುಪಬಹುದು. ಇದಕ್ಕಾಗಿ ಶೀಘ್ರದಲ್ಲೇ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆ ಇದೆ.

ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ ಆರ್ಥಿಕ ವರ್ಷ 2024 ಕ್ಕೆ ಶೇ. 8.25ರ ಬಡ್ಡಿ ದರವನ್ನು ಅನುಮೋದಿಸಿದೆ. ಆದರೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲು ಹಣಕಾಸು ಸಚಿವಾಲಯವು ಇನ್ನೂ ಕಾಯುತ್ತಿದೆ. ಸಾರ್ವತ್ರಿಕ ಚುನಾವಣೆಗಳಿಂದಾಗಿ ಇದು ವಿಳಂಬವಾಗಿದೆ. ಇದು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: EPFO Balance Check: ಜುಲೈ ಅಂತ್ಯದಲ್ಲಿ ಪಿಎಫ್ ಖಾತೆಗೆ ಬಡ್ಡಿ ಹಣ ಬರಲಿದೆ; ಪರಿಶೀಲಿಸುವುದು ಹೇಗೆ?

Continue Reading

ಪ್ರಮುಖ ಸುದ್ದಿ

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

Airtel Price Hike: ರಿಲಯನ್ಸ್ ಜಿಯೋ ತನ್ನ ಮೊಬೈಲ್‌ ಡೇಟಾ ಯೋಜನೆಗಳಲ್ಲಿ 12%ರಿಂದ 25%ವರೆಗೆ ಹೆಚ್ಚಳವನ್ನು ಘೋಷಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್‌ ಇಂದು ತನ್ನ ಟೆಲಿಕಾಂ ಸುಂಕ ದರಗಳನ್ನು 10-21%ರಷ್ಟು ಹೆಚ್ಚಿಸಿತು. ಹೊಸ ದರವು ಜುಲೈ 3ರಿಂದ ಜಾರಿಗೆ ಬರಲಿದೆ.

VISTARANEWS.COM


on

airtel price hike
Koo

ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಇಂಟರ್‌ನೆಟ್‌ ಸೇವಾದಾತ (internet provider) ಕಂಪನಿ ಭಾರ್ತಿ ಏರ್‌ಟೆಲ್‌ (Bharti Airtel) , ತನ್ನ ಡೇಟಾ ದರಗಳನ್ನು (Airtel price hike) ಶೇ.21ರಷ್ಟು ಹೆಚ್ಚಿಸಿದೆ. ನಿನ್ನೆ ಇದರ ಪ್ರತಿಸ್ಪರ್ಧಿ ರಿಲಯನ್ಸ್‌ ಜಿಯೊ (Reliance Jio) ಡೇಟಾ ದರಗಳನ್ನು (Data Price) ಏರಿಸಿದ ಬಿನ್ನಲ್ಲೇ ಇದು ಬಂದಿದೆ.

ರಿಲಯನ್ಸ್ ಜಿಯೋ ತನ್ನ ಮೊಬೈಲ್‌ ಡೇಟಾ ಯೋಜನೆಗಳಲ್ಲಿ 12%ರಿಂದ 25%ವರೆಗೆ ಹೆಚ್ಚಳವನ್ನು ಘೋಷಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್‌ ಇಂದು ತನ್ನ ಟೆಲಿಕಾಂ ಸುಂಕ ದರಗಳನ್ನು 10-21%ರಷ್ಟು ಹೆಚ್ಚಿಸಿತು. ಹೊಸ ದರವು ಜುಲೈ 3ರಿಂದ ಜಾರಿಗೆ ಬರಲಿದೆ.

ಕೆಲವು ಪರಿಷ್ಕೃತ ದರಗಳು ಹೀಗಿವೆ:

ಡೇಟಾ
ಅವಧಿ ಹಿಂದಿನ ದರ ಹೊಸ ದರ
ವಾಯಿಸ್‌ ಕಾಲ್‌ ಪ್ಲಾನ್‌
2 GB
28179199
8 GB 84455509
ಡೈಲಿ ಡೇಟಾ ಪ್ಲಾನ್‌
1.5 ಜಿಬಿ28299349
2.5 ಜಿಬಿ, 28, 359, 409
3 ಜಿಬಿ, 28, 399, 449
Add- On ಪ್ಲಾನ್‌
111922
212933

ಗ್ರಾಹಕರ ಮೇಲಿನ ಹೆಚ್ಚಿನ ಹೊರೆಗಳನ್ನು ನಿವಾರಿಸುವ ಸಲುವಾಗಿ, ಎಂಟ್ರಿ ಲೆವೆಲ್‌ ಪ್ಲಾನ್‌ಗಳಲ್ಲಿ ಅತ್ಯಂತ ಸಾಧಾರಣ ಬೆಲೆ ಏರಿಕೆ (ದಿನಕ್ಕೆ 70 ಪೈಸೆಗಿಂತ ಕಡಿಮೆ) ಮಾಡಲಾಗಿದೆ ಎಂದು ಭಾರ್ತಿ ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ಟೆಲಿಕಾಂ ಕಂಪನಿಗಳು ಆರ್ಥಿಕವಾಗಿ ಆರೋಗ್ಯಕರ ವ್ಯವಹಾರ ಮಾಡಬೇಕು ಎಂದಿದ್ದರೆ ಮೊಬೈಲ್ ಸರಾಸರಿ ಆದಾಯ (ಎಆರ್‌ಪಿಯು) 300 ರೂ.ಗಿಂತ ಹೆಚ್ಚಾಗಿರಬೇಕು ಎಂದು ಭಾರ್ತಿ ಏರ್ಟೆಲ್ ಹೇಳಿದೆ. “ಈ ಮಟ್ಟದ ಎಆರ್‌ಪಿಯು ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್‌ನಲ್ಲಿ ಅಗತ್ಯವಿರುವ ಗಣನೀಯ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಂಡವಾಳದ ಮೇಲೆ ಸಾಧಾರಣ ಆದಾಯವನ್ನು ನೀಡುತ್ತದೆ” ಎಂದು ಅದು ಹೇಳಿದೆ.

ಇಂದು ಭಾರ್ತಿ ಏರ್ಟೆಲ್ ಷೇರುಗಳು ಬಿಎಸ್ಇಯಲ್ಲಿ ಸುಮಾರು 2% ಏರಿಕೆಯಾಗಿ 1496.80 ರೂ.ಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್ಟೆಲ್ ಎರಡೂ ಜೂನ್ 28ರ ಆರಂಭಿಕ ವಹಿವಾಟಿನಲ್ಲಿ ಹೆಚ್ಚಿನ ಲಾಭ ಗಳಿಸಿದವು.

ಇದನ್ನೂ ಓದಿ: Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್;‌ ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ

Continue Reading
Advertisement
Kalki 2898 AD box office day 2 prediction Prabhas
ಟಾಲಿವುಡ್2 mins ago

Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

US Presidential Election
ವಿದೇಶ17 mins ago

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

IND vs SA Final
ಕ್ರೀಡೆ20 mins ago

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

Sadhguru Jaggi Vasudev
ಆರೋಗ್ಯ20 mins ago

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Kannada New Movie niveditha Shivarajkumar frefly cinema sudharani join
ಸಿನಿಮಾ31 mins ago

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Actor Darshan
ಕರ್ನಾಟಕ50 mins ago

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Amarnath Yatra
ದೇಶ58 mins ago

Amarnath Yatra: ವ್ಯಾಪಕ ಬಿಗಿ ಭದ್ರತೆಯೊಂದಿಗೆ ಈ ಬಾರಿಯ ಅಮರನಾಥ ಯಾತ್ರೆ ಆರಂಭ; ಪವಿತ್ರ ಗುಹೆಯತ್ತ ಹೊರಟ ಮೊದಲ ತಂಡ

BBMP Scam
ಬೆಂಗಳೂರು1 hour ago

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Assam Tour
ಪ್ರವಾಸ2 hours ago

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Ashada Month
ಧಾರ್ಮಿಕ2 hours ago

Ashada Month: ಆಷಾಢವನ್ನು ಅಶುಭ ತಿಂಗಳು ಅನ್ನುವುದೇಕೆ? ಇದಕ್ಕಿದೆ ವೈಜ್ಞಾನಿಕ ಕಾರಣ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌