ಮಂತ್ರಿ ಗ್ರೂಪ್ ಸಿಎಂಡಿಗೆ ಇಡಿ‌ಯಿಂದ ಸಮನ್ಸ್ ಜಾರಿ - Vistara News

ಪ್ರಮುಖ ಸುದ್ದಿ

ಮಂತ್ರಿ ಗ್ರೂಪ್ ಸಿಎಂಡಿಗೆ ಇಡಿ‌ಯಿಂದ ಸಮನ್ಸ್ ಜಾರಿ

ಹಣಕಾಸು ವಹಿವಾಟಿನಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್‌ನ ಎಂಡಿ ಸುಶೀಲ್‌ ಪಾಂಡುರಂಗ ಅವರಿಗೆ ಇಡಿ ವಿಚಾರಣೆಗೆ ಸಮನ್ಸ್‌ ನೀಡಿದೆ.

VISTARANEWS.COM


on

sushil panduranga mantri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಣಕಾಸು ಅಕ್ರಮಕ್ಕೆ ಸಂಬಂಧಿಸಿದ ಮಂತ್ರಿ ಗ್ರೂಪ್‌ನ ಚೇರ್‌ಮನ್‌, ಎಂಡಿ ಸುಶೀಲ್ ಪಾಂಡುರಂಗ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.

ದಕ್ಷಿಣ ಭಾರತದ ಅತೀ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಗ್ರೂಪ್‌ ಮೇಲೆ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಲೆಕ್ಕಪತ್ರದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ದಾಖಲೆಗಳ ಸಮೇತ ಇಡಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಆ ಮಾಹಿತಿ ಆಧಾರದಲ್ಲಿ ನೊಟೀಸ್ ಜಾರಿ ಮಾಡಲಾಗಿದೆ.

ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್‌ನ ಉಪ ಸೆಕ್ಷನ್‌ 50(2)(3) ಅಡಿಯಲ್ಲಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಇಡಿ ಅಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವೈಯಕ್ತಿಕ ಹಾಗೂ ಮಂತ್ರಿ ಗ್ರೂಪ್‌ ಸಂಸ್ಥೆಯ ಅನೇಕ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ಕಂಡುಬಂದಿವೆ. ಜೂನ್ 26ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಇದನ್ನೂ ಓದಿ: ಜುಲೈ ಕೊನೆಯಲ್ಲಿ ಯಾವಾಗಲಾದರೂ ಬನ್ನಿ ಸಾಕು; ಸೋನಿಯಾ ಗಾಂಧಿ ಮನವಿಗೆ ಇ ಡಿ ಸ್ಪಂದನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Ballari News: ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

Illegal ganja storage in Ballari Arrest of two accused Rs 19 10 lakh Valuable ganja seized
Koo

ಬಳ್ಳಾರಿ: ನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು (Ballari News) ವಶಪಡಿಸಿಕೊಳ್ಳಲಾಗಿದೆ.

ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರು. ಮೌಲ್ಯದ 19 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಅಕ್ರಮ ಶೇಖರಣೆ ಪ್ರಕರಣದಲ್ಲಿ ನಗರದ ರಾಣಿತೋಟದ ಬೀರಪ್ಪಗುಡಿ ಹತ್ತಿರದ ನಿವಾಸಿ ವಾಹೀದ್‌ (38) ಹಾಗೂ ರೂಪನಗುಡಿ ರಸ್ತೆಯ ಮಾರಮ್ಮದೇವಿ ಗುಡಿ ಬಳಿಯ ಪಿ. ಚಾಂದ್ ಬಾಷಾ (40) ಅವರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಪತ್ತೆಯಾಗಬೇಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಕೂಲಿ ಕೆಲಸ ಮಾಡಿಕೊಂಡಿರುವ ಬಂಧಿತ ಇಬ್ಬರು ಆರೋಪಿಗಳ ಬಳಿ ನಾಪತ್ತೆಯಾಗಿರುವ ನಾಲ್ವರು ಗಾಂಜಾವನ್ನು ತಂದಿಡುತ್ತಿದ್ದರು. ಬಳಿಕ ಇದನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಬಳಿಕ ಈ ಪ್ರಕರಣದ ಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಎಸ್ಪಿ ಹೇಳಿದರು.

ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ರಾಯದುರ್ಗ ಕಡೆಗಳಿಂದ ಗಾಂಜಾ ಅಕ್ರಮವಾಗಿ ಬಳ್ಳಾರಿಗೆ ಪೂರೈಕೆಯಾಗುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ. ಗಾಂಜಾ ಪೂರೈಕೆ ಮಾಡುವ ಒಂದು ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಗಡಿಪ್ರದೇಶದಲ್ಲಿ ಈ ರೀತಿಯ ಅಕ್ರಮ ಮಾದಕ ದ್ರವ್ಯಗಳ ಸಾಗಾಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಈ ವರ್ಷದಲ್ಲಿ 13 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿದೆ. ಬಳ್ಳಾರಿಗೆ ಪೂರೈಕೆಯಾಗುವ ಅಕ್ರಮ ಗಾಂಜಾ ಎಲ್ಲಿ ಸರಬರಾಜಾಗುತ್ತದೆ ಎಂಬುದರ ಕಡೆ ನಿಗಾ ಇಡಲಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಪೂರೈಕೆ ಮಾಡಲಾಗುತ್ತಿದೆಯೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಂ, ಮಾದಕ ದ್ರವ್ಯ ಅಪರಾಧ ಕುರಿತು ಜಾಗೃತಿ ಮೂಡಿಸುವ ಕಾರ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 45 ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆದಿವೆ ಎಂದು ಎಸ್ಪಿ ರಂಜೀತ್ ಕುಮಾರ್ ಬಂಡಾರು ವಿವರಿಸಿದರು.

ಗಾಂಜಾ ಪ್ರಕರಣವನ್ನು ಬೇಧಿಸಿದ ಸೈಬರ್‌ ಹಾಗೂ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ವಿತರಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಈ ವೇಳೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಇದ್ದರು.

Continue Reading

ದೇಶ

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Arvind Kejriwal: ಅರವಿಂದ್‌ ಕೇಜ್ರಿವಾಲ್‌ ಅವರು ಸಿಬಿಐ ಕಸ್ಟಡಿಯಲ್ಲಿರುವಾಗ ಮನೆಯಿಂದ ತರುವ ಊಟ ಮಾಡಬಹುದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಬಹುದು ಹಾಗೂ ಪ್ರತಿ ದಿನ ಅರ್ಧ ಗಂಟೆ ಪತ್ನಿಯನ್ನು ಮತ್ತು ಇನ್ನರ್ಧ ಗಂಟೆ ವಕೀಲರನ್ನು ಭೇಟಿಯಾಗಬಹುದು ಎಂದು ನ್ಯಾಯಾಲಯವು ಅನುಮತಿ ನೀಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Excise Policy Case) ನಡೆದಿದೆ ಎನ್ನಲಾದ ಪ್ರಕರಣದಲ್ಲಿ ತಿಹಾರ ಜೈಲುಪಾಲಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರೀಗ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಮೂರು ದಿನ ಸಿಬಿಐ ಕಸ್ಟಡಿಗೆ ವಹಿಸಿ ಬುಧವಾರ (ಜೂನ್‌ 26) ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ಅರವಿಂದ್‌ ಕೇಜ್ರಿವಾಲ್‌ ಅವರು ಕೋರ್ಟ್‌ಗೆ ವಿಶೇಷ ಮನವಿ ಮಾಡಿದ್ದಾರೆ. “ತಿಹಾರ ಜೈಲಿಗೆ ಹೋಗುವಾಗ ಪ್ಯಾಂಟ್‌ ಹಿಡಿದುಕೊಂಡೇ ಹೋಗಬೇಕಾಗಿದೆ. ಹಾಗಾಗಿ, ನನಗೊಂದು ಬೆಲ್ಟ್‌ ಬಳಸಲು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದ್ದಾರೆ. ಇದಕ್ಕೆ ನ್ಯಾಯಾಲಯವು ಅನುಮತಿ ನೀಡಿದೆ.

ಅರವಿಂದ್‌ ಕೇಜ್ರಿವಾಲ್‌ ಅವರು ಸಿಬಿಐ ಕಸ್ಟಡಿಯಲ್ಲಿರುವಾಗ ಮನೆಯಿಂದ ತರುವ ಊಟ ಮಾಡಬಹುದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಬಹುದು ಹಾಗೂ ಪ್ರತಿ ದಿನ ಅರ್ಧ ಗಂಟೆ ಪತ್ನಿಯನ್ನು ಮತ್ತು ಇನ್ನರ್ಧ ಗಂಟೆ ವಕೀಲರನ್ನು ಭೇಟಿಯಾಗಬಹುದು ಎಂದು ಅನುಮತಿ ನೀಡಿದೆ. ಹಾಗೆಯೇ, ಓದಲು ಭಗವದ್ಗೀತೆ, ಒಂದು ಬೆಲ್ಟ್‌ ಬಳಕೆ ಮಾಡಲು ಕೂಡ ರೋಸ್‌ ಅವೆನ್ಯೂ ಕೋರ್ಟ್‌ ಸಮ್ಮತಿ ಸೂಚಿಸಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಮನೆಯ ಊಟ ಸೇವಿಸಲು ಅನಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Arvind Kejriwal

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು. ಅದರಂತೆ ಅವರು ಜೈಲಿಗೆ ತೆರಳಿದ್ದರು.

ಇದನ್ನೂ ಓದಿ: Arvind Kejriwal : ಜಾಮೀನು ಅರ್ಜಿ ವಿಚಾರಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಸಿಬಿಐ

Continue Reading

Latest

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Railway New Rules : ಇನ್ನು ಮುಂದೆ ರೈಲಿನ ಮಧ್ಯದ ಸೀಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಸೀಟ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ಭದ್ರಗೊಳಿಸಿದ್ದು ಖಚಿತಪಡಿಸಿಕೊಳ್ಳಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು. ಕೆಳಗಿನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಅನಾನುಕೂಲ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ.

VISTARANEWS.COM


on

Railway New Rules
Koo

ನವದೆಹಲಿ: ಭಾರತೀಯ ರೈಲ್ವೆಯು (Railway) ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವು ನಿಯಮವನ್ನು (Railway New Rules) ಜಾರಿಗೆ ತಂದಿದೆ. ಪ್ರಯಾಣಿಕರ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರೈಲು ಪ್ರಯಾಣವನ್ನು ಆರಾಮದಾಯಕವಾಗಿಲು ಈ ಬದಲಾವಣೆಗಳನ್ನು ತರಲಾಗಿದೆ. ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಬರ್ತ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ನಿಮ್ಮ ಬರ್ತ್ ಅನ್ನು ಭದ್ರಗೊಳಿಸಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು.

ಭಾರತೀಯ ರೈಲ್ವೆಯ ಕೈಪಿಡಿ, ಸಂಪುಟ-1ರ ಪ್ಯಾರಾ 652ರ ತಿದ್ದುಪಡಿಯ ಮೂಲಕ 3 ಹಂತದ ಸ್ಲೀಪರ್ ಕೋಚ್ ಗಳ ಮಧ್ಯಮ ಬರ್ತ್ ಗಳಲ್ಲಿ ಮಲಗುವ ಪ್ರಯಾಣಿಕರ ವಸತಿಗೆ ಸಂಬಂಧಿಸಿದ ಸುತ್ತೋಲೆಯಲ್ಲಿ ಭಾರತೀಯ ರೈಲ್ವೆ ಈ ತಿದ್ದುಪಡಿಯನ್ನು ಮಾಡಿದೆ. ಎಸಿ ಮತ್ತು ಸ್ಲೀಪರ್ ಕೋಚ್ ಗಳಲ್ಲಿ ಮಧ್ಯಮ ಬರ್ತ್ ಅನ್ನು ನಿಗದಿಪಡಿಸಿದ ಪ್ರಯಾಣಿಕರು ರೈಲು ಪ್ರಯಾಣದ ಸಮಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಬರ್ತ್ ಅನ್ನು ತೆರೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ಹಿಂದೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಒಟ್ಟು 9 ಗಂಟೆಗಳ ಕಾಲ ತೆರೆದಿಡಬಹುದಾಗಿದ್ದ ಬರ್ತ್ ಅನ್ನು 8 ಗಂಟೆಗಳ ಕಾಲಾವಧಿಗೆ ಇಳಿಸಲಾಗಿದೆ. ಕೆಳ ಬರ್ತ್ ನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಹಿನೆಲೆಯಲ್ಲಿ ಈ ಬಗ್ಗೆ ಪ್ರಯಾಣಿಕರು ದೂರು ದಾಖಲಿಸಿದ ಕಾರಣ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ. ಈ ಷರತ್ತಿನ ಮೂಲಕ ಕೆಳ ಬರ್ತ್ ಪ್ರಯಾಣಿಕರು ಬೆಳಗ್ಗೆ 6 ಗಂಟೆಯ ನಂತರ ತಮ್ಮ ಬರ್ತ್ ಅನ್ನು ಮಡಚುವಂತೆ ಮಧ್ಯಮ ಬರ್ತ್ ಪ್ರಯಾಣಿಕರಿಗೆ ವಿನಂತಿಸಬಹುದು. ಸೈಡ್ ಲೋವರ್ ಬರ್ತ್ ನ ಪ್ರಯಾಣಿಕರು ಹಗಲಿನಲ್ಲಿ ಸೈಡ್ ಮೇಲಿನ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಆದರೆ ಸೈಡ್ ಮೇಲಿನ ಬರ್ತ್ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಡ್ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಭಾರತೀಯ ರೈಲ್ವೆ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಎಲ್ಲಾ ವಿಧದ ಸೈಡ್ ಬರ್ತ್ ಪ್ರಯಾಣಿಕರಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಆದರೆ ಭಾರತೀಯ ರೈಲ್ವೆಯ ಈ ನಿಯಮ ಅನಾರೋಗ್ಯ ಪೀಡಿತ ವ್ಯಕ್ತಿಗಳು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ವಿನಾಯಿತಿ ನೀಡಲು ಹಾಗೂ ಅವರಿಗೆ ಹೆಚ್ಚು ಕಾಲ ಮಲಗಲು ಅವಕಾಶ ನೀಡುವಂತೆಯೂ ಅವಕಾಶ ಕಲ್ಪಿಸಿದೆ.
ಇತ್ತೀಚೆಗೆ ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಮಧ್ಯಮ ಬರ್ತ್ ನಲ್ಲಿ ಮಲಗಿದ್ದ ಪ್ರಯಾಣಿಕ ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಬರ್ತ್ ಕುಸಿದು ಕೆಳ ಬರ್ತ್‌ನಲ್ಲಿ ಮಲಗಿದ್ದ 62 ವರ್ಷದ ವ್ಯಕ್ತಿಯ ಮೇಲೆ ಬಿದ್ದಿತ್ತು. ಇದರಿಂದ ಆ ವ್ಯಕ್ತಿಯ ಕತ್ತಿನ ಮೂಳೆ ಮುರಿದು ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದನ್ನು ಸ್ಮರಿಸಬಹುದು.

Continue Reading

ಕ್ರೀಡೆ

IND vs ENG Semi Final: ಗಯಾನದಲ್ಲಿ ಭಾರೀ ಗಾಳಿ-ಮಳೆ ಶುರು; ರದ್ದಾಗುತ್ತಾ ಸೆಮಿಫೈನಲ್​ ಪಂದ್ಯ?

IND vs ENG Semi Final: ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಜೋರು ಮಳೆ ಸುರಿಯಲು ಆರಂಭವಾಗಿದೆ. ಸದ್ಯ ಬೀಸುತ್ತಿರುವ ಗಾಳಿ ಮಳೆಯನ್ನು ಗಮನಿಸುವಾಗ ಇದು ನಿಲ್ಲುವಂತೆ ಕಾಣುತ್ತಿಲ್ಲ.

VISTARANEWS.COM


on

IND vs ENG Semi Final
Koo

ಪ್ರೊವಿಡೆನ್ಸ್‌: ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಗಯಾನದಲ್ಲಿ ಭಾರೀ ಮಳೆ ಸುರಿಯಲು ಆರಂಭಗೊಂಡಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್​(IND vs ENG Semi Final) ನಡುವಣ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯ ನಡೆಯುವುದು ಅನುಮಾನ ಎನ್ನಲಡ್ಡಿಯಿಲ್ಲ. ಗಾಳಿ ಮಳೆಯ ವಿಡಿಯೊವನ್ನು ಎಎನ್​ಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ದಿನೇಶ್​ ಕಾರ್ತಿಕ್​ ಅವರು ಮೈದಾನವನ್ನು ಕವರ್​ನಿಂದ ಮುಚ್ಚಿದ ಫೋಟೊ ಮತ್ತು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪಂದ್ಯಕ್ಕೂ 2 ದಿನ ಮುನ್ನವೇ ಹವಾಮಾನ ಇಲಾಖೆ ಪಂದ್ಯಕ್ಕೆ ಶೇ.88ರಷ್ಟು ಮಳೆ ಎಚ್ಚರಿಕೆ ನೀಡಿತ್ತು. ಜತೆಗೆ ಪಂದ್ಯ ನಡೆಯುವುದು ಕೂಡ ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಇದೀಗ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಜೋರು ಮಳೆ ಸುರಿಯಲು ಆರಂಭವಾಗಿದೆ. ಸದ್ಯ ಬೀಸುತ್ತಿರುವ ಗಾಳಿ ಮಳೆಯನ್ನು ಗಮನಿಸುವಾಗ ಇದು ನಿಲ್ಲುವಂತೆ ಕಾಣುತ್ತಿಲ್ಲ.

ಇತ್ತಂಡಗಳ ಈ ಪಂದ್ಯಕ್ಕೆ ಭಾರೀ ಮಳೆ ಭೀತಿ ಇದ್ದರೂ ಕೂಡ ಮೀಸಲು ದಿನದ ಸೌಲಭ್ಯವೂ ಇಲ್ಲ. ಹೆಚ್ಚುವರಿ 250 ನಿಮಿಷವನ್ನು ನೀಡಲಾಗಿದ್ದರೂ, ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 10 ಓವರ್​ ಆಡುವುದು ಅಗತ್ಯವಾಗಿದೆ. ಒಂದೊಮ್ಮೆ ಪಂದ್ಯ ನಡೆಯದೇ ಇದ್ದರೆ ಸೂಪರ್​-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ನೇರವಾಗಿ ಫೈನಲ್​ ಪ್ರವೇಶಿಸಲಿದೆ.

​2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

ಇದನ್ನೂ ಓದಿ IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ

ಬಲಾಬಲ

ಭಾರತ ಮತ್ತು ಇಂಗ್ಲೆಂಡ್​ ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯ ಗೆದ್ದಿದ್ದರೆ, ಇಂಗ್ಲೆಂಡ್​ 11 ಪಂದ್ಯಗಳನ್ನು ಗೆದ್ದಿದೆ. ಕಳೆದ 2 ವರ್ಷಗಳಿಂದ ಇಂಗ್ಲೆಂಡ್​ ವಿರುದ್ಧ ಭಾರತ ಗೆಲುವು ಕಂಡಿಲ್ಲ. 2022ರ ಟಿ20 ವಿಶ್ವಕಪ್(T20 World Cup 2024)​ ಸೆಮಿಫೈನಲ್​ ಪಂದ್ಯದ ಬಳಿಕ ಉಭಯ ತಂಡಗಳು ಇದುವರೆಗೂ ಟಿ20ಯಲ್ಲಿ ಮುಖಾಮುಖಿಯಾಗಿಲ್ಲ. ಆ ಪಂದ್ಯದಲ್ಲಿ ಭಾರತ 10 ವಿಕೆಟ್​ ಸೋಲು ಕಂಡಿತ್ತು. ಅಂದಿನ ಸೋಲಿಗೆ ಈ ಬಾರಿಯ ಸೆಮಿ ಕಾದಾಟದಲ್ಲಿ ಭಾರತ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್​ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಭಾರತ:
 ರೋಹಿತ್​ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ/ ಸಂಜು ಸ್ಯಾಮ್ಸನ್​, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

ಇಂಗ್ಲೆಂಡ್​: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

Continue Reading
Advertisement
Illegal ganja storage in Ballari Arrest of two accused Rs 19 10 lakh Valuable ganja seized
ಕರ್ನಾಟಕ30 mins ago

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Arvind Kejriwal
ದೇಶ31 mins ago

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Karnataka Weather Forecast
ಮಳೆ33 mins ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

Railway New Rules
Latest33 mins ago

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Ashada Sale 2024
ಫ್ಯಾಷನ್40 mins ago

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Fishermen Arrest
ದೇಶ1 hour ago

Fishermen Arrest: ಶ್ರೀಲಂಕಾ ನೌಕಾಪಡೆಯ ನಾವಿಕ ಸಾವು; 10 ಭಾರತೀಯ ಮೀನುಗಾರರ ವಿರುದ್ಧ ಕೇಸ್‌ ದಾಖಲು

IND vs ENG Semi Final
ಕ್ರೀಡೆ2 hours ago

IND vs ENG Semi Final: ಗಯಾನದಲ್ಲಿ ಭಾರೀ ಗಾಳಿ-ಮಳೆ ಶುರು; ರದ್ದಾಗುತ್ತಾ ಸೆಮಿಫೈನಲ್​ ಪಂದ್ಯ?

Bitcoin Scam
ಕರ್ನಾಟಕ2 hours ago

Bitcoin Scam: ಬಿಟ್‌ಕಾಯಿನ್‌ ಕೇಸ್; ಪೊಲೀಸರ ಮೇಲೆ ಜೀಪ್‌ ಹತ್ತಿಸಿದ್ದ DySP ಶ್ರೀಧರ್‌ ಪೂಜಾರ್‌ಗೆ ಜಾಮೀನು!

IND vs ENG
ಕ್ರೀಡೆ2 hours ago

IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ

Viral News
Latest2 hours ago

Viral News: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ33 mins ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ8 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌