Summer Tips: ಮಕ್ಕಳಿಗಾಗಿ ಬೇಸಿಗೆಯಲ್ಲಿ ಈ ದಿಢೀರ್‌ ಐಸ್‌ಕ್ಯಾಂಡಿಗಳನ್ನು ಮಾಡದಿದ್ದರೆ ಹೇಗೆ! - Vistara News

ಆಹಾರ/ಅಡುಗೆ

Summer Tips: ಮಕ್ಕಳಿಗಾಗಿ ಬೇಸಿಗೆಯಲ್ಲಿ ಈ ದಿಢೀರ್‌ ಐಸ್‌ಕ್ಯಾಂಡಿಗಳನ್ನು ಮಾಡದಿದ್ದರೆ ಹೇಗೆ!

ಈ ಬಗೆಬಗೆಯ ಐಸ್‌ಕ್ಯಾಂಡಿಗಳನ್ನು (ice candy) ಮಾಡುವುದೂ ಸುಲಭ. ಮಕ್ಕಳಿಗೂ ಇಷ್ಟ. ಬೇಸಿಗೆಯಲ್ಲಿ (summer tips) ಮಕ್ಕಳ ದಾಹವನ್ನೂ ಇಂಗಿಸುವ ಸುಲಭೋಪಾಯ.

VISTARANEWS.COM


on

ice candy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆ ಎಂಬ ಕಾಲ ಎಷ್ಟೇ ಕಷ್ಟ ಎನಿಸಿದರೂ ಅದರ ಖುಷಿ ಬೇಸಿಗೆಯಲ್ಲಿ ನಾವು ಹೊಟ್ಟೆಗಿಳಿಸುವ ತಂಪು ತಂಪು ಆಹಾರಗಳಲ್ಲಿದೆ. ತಣ್ಣನೆಯ ತಾಜಾ ಮಾವಿನಹಣ್ಣು, ಹಲಸಿನ ಹಣ್ಣು, ಕಲ್ಲಂಗಡಿ, ಲಿಚಿ ಮತ್ತಿತರ ಥರಹೇವಾರಿ ಹಣ್ಣುಗಳು, ಮನಸೋ ಇಚ್ಛೆ ಸವಿಯಬಹುದಾದ ಬಗೆಬಗೆಯ ಸ್ವಾದಗಳ ಐಸ್‌ಕ್ರೀಮುಗಳು, ಶೇಕ್‌ಗಳು, ಐಸ್‌ಕ್ಯಾಂಡಿಗಳು (Ice candy) ಹೀಗೆ ಬೇಸಿಗೆ ಇಷ್ಟ ಎನ್ನಲು ನೂರಾರು ಕಾರಣಗಳು. ಮಕ್ಕಳ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಆಗಾಗ ಏನಾದರೊಂದು ತಿನ್ನಲು ಕೊಡುತ್ತಿರಬೇಕಾದುದು ಬಹಳಷ್ಟು ಹೆತ್ತವರ ತಲೆನೋವು. ಮಕ್ಕಳು ಮನೆಯಲ್ಲಿದ್ದು, ಗೆಳೆಯರನ್ನೋ ಗೆಳತಿಯರನ್ನೋ ಸೇರಿಸಿ ರಜೆಯ ಮಜಾ (summer tips) ಅನುಭವಿಸುತ್ತಿರಲು, ಹೆತ್ತವರು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಮಕ್ಕಳ ಖುಷಿಗೆ ಬಗೆಬಗೆಯ ತಿನಿಸು, ಹೊಸಹೊಸ ರುಚಿಗಳನ್ನು ಮಾಡುವುದೇ ಹೆತ್ತವರಿಗೆ ಚಾಲೆಂಜು. ಅದರಲ್ಲೂ, ಹೆತ್ತವರು ತಮ್ಮ ಕೆಲಸದ ನಡುವೆ ಮಕ್ಕಳ ರಜೆಯಲ್ಲಿ ಸಮಯ ಹೊಂದಿಸಿಕೊಳ್ಳಬೇಕಾಗುವುದು ಇನ್ನೊಂದು ದೊಡ್ಡ ಕೆಲಸ. ಇಂಥ ಸಮಯದಲ್ಲಿ ಆಪತ್ಬಾಂಧವನ ಹಾಗೆ ಕಾಪಾಡುವುದು ಸುಲಭದ ರೆಸಿಪಿಗಳಾದ ಐಸ್‌ಕ್ಯಾಂಡಿಗಳು. ಈ ಬಗೆಬಗೆಯ ಐಸ್‌ಕ್ಯಾಂಡಿಗಳನ್ನು ಮಾಡುವುದೂ ಸುಲಭ. ಮಕ್ಕಳಿಗೂ ಇಷ್ಟ. ಬೇಸಿಗೆಯಲ್ಲಿ ಮಕ್ಕಳ ದಾಹವನ್ನೂ ಇಂಗಿಸುವ ಸುಲಭೋಪಾಯ. ಹಾಗಾದರೆ ಬನ್ನಿ, ಮಕ್ಕಳಿಗಾಗಿ ಬೇಸಿಗೆಯಲ್ಲಿ ಯಾವೆಲ್ಲ ಐಸ್‌ಕ್ಯಾಂಡಿಗಳನ್ನು ಮನೆಯಲ್ಲೇ ಮಾಡಬಹುದು ಎಂದು ನೋಡೋಣ.

1. ಮಾವಿನ ಹಣ್ಣಿನ ಐಸ್‌ಕ್ಯಾಂಡಿ: ಬೇಸಿಗೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಐಸ್‌ಕ್ಯಾಂಡಿ ಮಾಡದಿದ್ದರೆ ಹೇಗೆ ಹೇಳಿ. ಮಾವಿನಹಣ್ಣಿನ ಸಿಪ್ಪೆ ತೆಗೆದು ಅದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು. ಸ್ವಲ್ಪ ನೀರು, ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿ, ಐಸ್‌ಕ್ಯಾಂಡಿ ಮೌಲ್ಡ್‌ ಅಥವಾ ಅಚ್ಚಿನಲ್ಲಿ ಸುರಿದು, ಕಡ್ಡಿ ಇಟ್ಟು ಫ್ರೀಜರ್‌ನಲ್ಲಿ ಡೀಪ್‌ ಫ್ರೀಜ್‌ ಮಾಡಿದರೆ ಮುಗೀತು, ಮ್ಯಾಂಗೋ ಐಸ್‌ಕ್ಯಾಂಡಿ ರೆಡಿ.

2. ಕಲ್ಲಂಗಡಿ ಐಸ್‌ಕ್ಯಾಂಡಿ: ಬೇಸಿಗೆಯಲ್ಲಿ ಬಿಸಿಲಲ್ಲಿ ಸುತ್ತಿ ಡಿಹೈಡ್ರೇಶನ್‌ ಸಮಸ್ಯೆಳನ್ನು ಎದುರಿಸುವ ಮಕ್ಕಳಿಗೆ ಕಲ್ಲಂಗಡಿ ಹಣ್ಣು ತಿನ್ನಲು ಕೊಟ್ಟ್ರೆ ಬಹುತೇಕರು ಮುಖ ಕಿವುಚುತ್ತಾರೆ. ಅದನ್ನೇ ಐಸ್‌ಕ್ಯಾಂಡಿ ಮಾಡಿ ಕೊಟ್ಟ್ರೆ ಚಪ್ಪರಿಸುತ್ತಾರೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಸಿಪ್ಪೆ ಹಾಗೂ ಬೀಜಗಳನ್ನು ಪ್ರತ್ಯೇಕಿಸಿ, ಸಕ್ಕರೆ ಹಾಗೂ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಬೇಕಿದ್ದ್ರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು ಐಸ್‌ಕ್ಯಾಂಡಿ ಅಚ್ಚಿನೊಳಗೆ ಸುರಿದು ಕಡ್ಡಿ ಇಟ್ಟು ಫ್ರೀಜ್‌ ಮಾಡಿ. ಕಲ್ಲಂಗಡಿ ಹಣ್ಣಿನ ಐಸ್‌ ಕ್ಯಾಂಡಿ ಎಂಬ ಗುರುತೇ ಹತ್ತದು.

ಇದನ್ನೂ ಓದಿ: Summer Tips: ಬೇಸಿಗೆಯ ಸಾಥಿ: ಮಣ್ಣಿನ ಮಡಕೆಯ ತಂಪು ನೀರು ಕುಡಿದು ಆರೋಗ್ಯ ಹೆಚ್ಚಿಸಿ!

3. ಕಿವಿ ಹಾಗೂ ನಿಂಬೆಹಣ್ಣಿನ ಐಸ್‌ಕ್ಯಾಂಡಿ: ಕಿವಿ ಹಣ್ಣು ಕಂಡರೆ ಆಗದ ಮಕ್ಕಳು ಈ ಐಸ್‌ಕ್ಯಾಂಡಿಗೆಮಾತ್ರ ನೋ ಎನ್ನಲಾರರು. ಕಿವಿ ಹಣ್ಣಿನ ಸಿಪ್ಪೆಸುಲಿದು, ನಿಂಬೆ ರಸ ಸೇರಿಸಿ, ಬೇಕಾದಷ್ಟು ಸಕ್ಕರೆ ಸೇರಿಸಿ ನೀರು ಹಾಕಿ ಮಿಕ್ಸಿಯಲ್ಲಿ ತಿರುಗಿಸಿ ಅಚ್ಚಿಗೆ ಹುಯ್ಯಿರಿ. ಕಟ್ಟಿ ಇಟ್ಟು ಫ್ರೀಜ್‌ ಮಾಡಿ. ಇದೇ ಮಾದರಿಯಲ್ಲಿ ಲಿಚಿ ಹಣ್ಣಿನ ಐಸ್‌ ಕ್ಯಾಂಡಿಯೂ ಬಹಳ ರುಚಿಕಟ್ಟಾಗಿರುತ್ತದೆ.

ನಿಮ್ಮ ಮಕ್ಕಳಿಗೆ ಯಾವ ಹಣ್ಣು ಇಷ್ಟವೋ ಆ ಎಲ್ಲ ಹಣ್ಣುಗಳಿಂದಲೂ ಇಂಥ ಐಸ್‌ಕ್ಯಾಂಡಿಗಳನ್ನು ನಾವು ಮನೆಯಲ್ಲೇ ತಯಾರಿಸಬಹುದು. ಮಕ್ಕಳು ಮನೆಯಲ್ಲಿಯೇ ಮಾಡಿದ ಐಸ್‌ಕ್ಯಾಂಡಿ ತಿನ್ನುತ್ತಿದ್ದಾರೆ ಎಂಬ ನೆಮ್ಮದಿಯೂ ನಿಮಗಾಗುತ್ತದೆ. ಅಷ್ಟೇ ಅಲ್ಲ, ಹಣ್ಣುಗಳು ಬೇರೆ ರೂಪಗಳಲ್ಲಿ ಮಕ್ಕಳ ಹೊಟ್ಟೆ ಸೇರುತ್ತದೆ ಎಂಬ ಧನ್ಯತೆಯೂ ನಿಮ್ಮದು.

ಇದನ್ನೂ ಓದಿ:  Summer Tips: ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂಬುದರ 7 ಸೂಚನೆಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಯುರ್ವೇದ ಸೂಚಿಸುವ ಏಳು ಗಿಡಮೂಲಿಕೆ ಪಾನೀಯಗಳು ಇವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು (Diabetes Management Tips) ನಿಯಂತ್ರಿಸಬಹುದು.

VISTARANEWS.COM


on

By

Diabetes Management Tips
Koo

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುವ ಕಾಯಿಲೆ ರಕ್ತದೊತ್ತಡ (blood pressure) ಮತ್ತು ಮಧುಮೇಹ (diabetes). ರಕ್ತದೊತ್ತಡವಾದರೆ ಬಹುಬೇಗನೆ ತನ್ನ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಮಧುಮೇಹ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ನೀವಾಗಿದ್ದರೆ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ (insulin) ಉತ್ಪಾದನೆಯನ್ನು ಹೆಚ್ಚಿಸುವ ಹಲವು ಆಯುರ್ವೇದ ಗಿಡಮೂಲಿಕೆಯ (Ayurvedic herbal) ಪಾನೀಯಗಳಿವೆ.

ಮಧುಮೇಹವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನ ನಡೆಸಲು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪುರಾತನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೈಸರ್ಗಿಕ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಮಧುಮೇಹದ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಏಳು ಪ್ರಸಿದ್ಧ ಆಯುರ್ವೇದ ಪಾನೀಯಗಳಿವೆ.

ಆಯುರ್ವೇದವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಆಯುರ್ವೇದದ ಪಾನೀಯಗಳು ಔಷಧೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ದೈನಂದಿನ ಜೀವನದಲ್ಲಿ ಸೇರಿಸಲು ನೆಚ್ಚಿನ ವಿಧಾನವಾಗಿದೆ. ಇದು ಕೇವಲ ರುಚಿಕರವಲ್ಲ ಆದರೆ ಸುಧಾರಿತ ಸೇರಿದಂತೆ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.


ದಾಲ್ಚಿನ್ನಿ ಮತ್ತು ಮೆಂತ್ಯ

ದಾಲ್ಚಿನ್ನಿ ಮತ್ತು ಮೆಂತ್ಯ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ದಾಲ್ಚಿನ್ನಿ ಮತ್ತು ಮೆಂತ್ಯಯೊಂದಿಗೆ ಒಂದು ಕಪ್ ಚಹಾ ಮಾಡಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಪದಾರ್ಥಗಳು ಮಧುಮೇಹ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯನ್ನು ಆಯುರ್ವೇದದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಬಹುದು. ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು.


ನೆಲ್ಲಿಕಾಯಿ

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆಮ್ಲಾ ಜ್ಯೂಸ್ ಮಧುಮೇಹವನ್ನು ನಿರ್ವಹಿಸಲು ಪ್ರಸಿದ್ಧವಾದ ಆಯುರ್ವೇದ ಟಾನಿಕ್ ಆಗಿದೆ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾವು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳನ್ನು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಅಗತ್ಯ ಸಂಯುಕ್ತವಾದ ಕರ್ಕ್ಯುಮಿನ್ ಸ್ವಾಭಾವಿಕವಾಗಿ ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಬಲ್ಲದು.

ಬೇವಿನ ಎಲೆ

ಔಷಧೀಯ ಗುಣಗಳು ಸಮೃದ್ಧವಾಗಿರುವ ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಸ್ವಲ್ಪ ಕಹಿಯಾಗಿದ್ದರೂ, ಬೇವಿನ ಎಲೆಯ ಚಹಾವು ಪರಿಣಾಮಕಾರಿ ಆಯುರ್ವೇದ ಪಾನೀಯವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


ನಿಂಬೆ ಮತ್ತು ಶುಂಠಿ

ನಿಂಬೆ ಮತ್ತು ಶುಂಠಿ ಆರೋಗ್ಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಶುಂಠಿ ಮತ್ತು ನಿಂಬೆಯ ಬೆಚ್ಚಗಿನ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ತ್ರಿಫಲ

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವು ಮೂರು ಹಣ್ಣುಗಳನ್ನು ಒಳಗೊಂಡಿದೆ: ಆಮ್ಲಾ, ಬಿಭಿಟಕಿ ಮತ್ತು ಹರಿತಕಿ. ತ್ರಿಫಲಾ ಚಹಾವು ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಈ ತೋಫು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

VISTARANEWS.COM


on

Health Benefits Of Tofu
Koo

ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ ಈ ವಸ್ತುವಿನ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲವಿದೆ. ಅದೂ ಪನೀರ್‌ನ ಒಂದು ಬಗೆ ಎಂದು ಭಾವಿಸಿದವರಿದ್ದಾರೆ. ಹಾಲಿನಿಂದಲೇ ಮಾಡಿದ್ದು ಎಂದು ತಿಳಿದವರಿದ್ದಾರೆ. ಆದರೆ ʻತೋಫುʼ ಎಂಬ ಹೆಸರು ಕೇಳಿ ಇದೇನು ಸಸ್ಯಜನ್ಯವೋ, ಪ್ರಾಣಿಜನ್ಯವೋ ಎಂಬ ಗೊಂದಲಕ್ಕೆ ಬಿದ್ದವರೂ ಇದ್ದಾರೆ. ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಇದು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

Tofu

ಏನಿದು ತೋಫು?

ಸರಳವಾಗಿ ಹೇಳುವುದಾದರೆ ಸೋಯಾ ಹಾಲಿನ ಪನೀರ್‌ ಎಂದು ತಿಳಿಯಬಹುದು. ನೋಡುವುದಕ್ಕೆ ಪನೀರ್‌ನಂತೆಯೇ ಇದ್ದರೂ, ಇವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸೋಯಾ ಹಾಲಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಉಪ್ಪನ್ನು ಸೇರಿಸಿ, ಹಸುವಿನ ಹಾಲಿನಂತೆಯೇ ಒಡೆಸಿ ಪನೀರ್‌ ರೀತಿಯಲ್ಲಿ ಕಾಣುವಂತೆಯೇ ತೋಫುವನ್ನು ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು ಚಚ್ಚೌಕವಾಗಿ ಕತ್ತರಿಸಲಾಗುತ್ತದೆ. ಇದು ಸಂಪೂರ್ಣ ಸಸ್ಯಜನ್ಯ ಉತ್ಪನ್ನ. ವೇಗನ್‌ಗಳಿಗೆ ಹೇಳಿ ಮಾಡಿಸಿದ ಆಹಾರ. ಇದನ್ನು ಎಲ್ಲರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಲಾಭಗಳಿವೆ. ಏನು ಪ್ರಯೋಜನಗಳಿವೆ ಸೋಯಾ ಹಾಲಿನ ಪನೀರ್‌ ಅಥವಾ ತೋಫು ಸೇವನೆಯಿಂದ?

paneer tofu

ಅತ್ತ್ಯುತ್ತಮ ಪ್ರಾಣಿಜನ್ಯ ಪ್ರೊಟೀನ್

ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ 181 ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

weight loss

ತೂಕ ಇಳಿಕೆಗೆ ಸೂಕ್ತ

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ಆಗಾಗ ಕಾಡುವ ಕಳ್ಳ ಹಸಿವನ್ನು ದೂರ ಮಾಡಿ, ದೇಹದಲ್ಲಿ ಅನಗತ್ಯ ಕೊಬ್ಬು ಜಮಾಯಿಸುವುದನ್ನು ಸಹ ತಡೆಯಬಹುದು. ಹೀಗಾಗಿ ತೂಕ ಇಳಿಸುವವರಿಗೆ ಇದು ಸೂಕ್ತವಾದ ಆಹಾರವಿದು.

Heart Health In Winter

ಹೃದಯದ ಮಿತ್ರ

ತೋಫುವಿನಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನ ಪ್ರಮಾಣ ಅತಿ ಕಡಿಮೆ. ಇದರಲ್ಲಿ ಇರುವ ಐಸೊಫ್ಲೇವನ್‌ಗಳು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ಗಳ ಜಮಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಹೀಗೆ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ಸೋಯಾ ಪನೀರ್‌ ನೆರವಾಗುತ್ತದೆ.

heart attack and Diabetes control

ಮಧುಮೇಹ ನಿಯಂತ್ರಣ

ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಇಂಥ ಆಹಾರಗಳು ಮಧುಮೇಹಿಗಳಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತವೆ. ಗರ್ಭಾವಸ್ಥೆಯ ಮಧುಮೇಹ ಹೊಂದಿದವರ ಮೇಲೆ ನಡೆಸಿದ ಪ್ರಯೋಗದಲ್ಲಿ, ಆರು ವಾರಗಳವರೆಗೆ ಹೆಚ್ಚಿನ ಪ್ರಮಾಣದ ಸೋಯ್‌ ಪ್ರೊಟೀನ್‌ ಸೇವಿಸಿದ ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದು ದಾಖಲಾಗಿದೆ.

ealthy internal organs of human digestive system / highlighted blue organs

ಜೀರ್ಣಾಂಗಗಳು ಕ್ಷೇಮ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

Bone Health In Winter

ಮೂಳೆಗಳ ಸಾಂದ್ರತೆ ರಕ್ಷಣೆ

ತೋಫು ತಯಾರಿಸುವ ಪ್ರಕ್ರಿಯೆಯಲ್ಲಿಯೇ ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಇದರಲ್ಲಿ ಸೇರಿಕೊಳ್ಳುತ್ತವೆ. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಈ ಖನಿಜಗಳು ಅಗತ್ಯವಾಗಿ ಬೇಕು. ಹಾಗಾಗಿ ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

ಇದನ್ನೂ ಓದಿ: Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

ಜಾಗ್ರತೆ ಮಾಡಿ

ಹಾಗೆಂದು ಇದನ್ನು ಮಿತಿಮೀರಿಯೂ ತಿನ್ನುವಂತಿಲ್ಲ. ಸೋಯ್‌ ಅಲರ್ಜಿ ಇರುವವರು, ಥೈರಾಯ್ಡ್‌ ತೊಂದರೆಗಳು ಇರುವವರು, ಅದರಲ್ಲೂ ಮುಖ್ಯವಾಗಿ ಹೈಪೊ ಥೈರಾಯ್ಡ್‌ ಇರುವವರು, ಕಿಡ್ನಿ ಕಲ್ಲು ಇರುವವರು ಇದನ್ನು ಮಿತವಾಗಿ ಬಳಸುವುದು ಸೂಕ್ತ. ಹೆಚ್ಚಿನ ಪ್ರೊಟೀನ್‌ ಮತ್ತು ನಾರು ಸೇವನೆಯಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ, ಡಯರಿಯಾ ಕಾಡಬಹುದು. ಹಾಗಾಗಿ ತೋಫು ಒಳ್ಳೆಯದೇ ಆದರೂ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

Continue Reading

ಆರೋಗ್ಯ

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

ಕಾಫಿ ಮತ್ತು ಚಹಾ ಸೇವನೆ (Tea Tips) ಭಾರತ ಉಪಖಂಡದ ಸಂಸ್ಕೃತಿ ಎನಿಸಿದೆ. ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಐಸಿಎಂಆರ್‌ ಗಮನ ಸೆಳೆದಿದೆ. ಚಾ-ಕಾಪಿ ಕುಡಿಯುವುದಕ್ಕೆ ಮಿತಿ ಎಷ್ಟು, ಯಾವಾಗ ಕುಡಿಯಬಹುದು ಎಂಬಿತ್ಯಾದಿ ಮಾಹಿತಿಗಳನ್ನೂ ನೀಡಿದೆ. ಈ ಲೇಖನ ಓದಿ, ಟೀ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ.

VISTARANEWS.COM


on

Tea Tips
Koo

ಭಾರತೀಯರಿಗೆ ಕಾಫಿ-ಚಹಾ ಇಲ್ಲದೆ (Tea Tips) ಬೆಳಗಾಗುವುದೇ ಇಲ್ಲ. ಆದರೆ ಅತಿಯಾಗಿ ಕೆಫೇನ್‌ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ವಿಸ್ತೃತವಾದ ನಿರ್ದೇಶನಗಳನ್ನು ನೀಡಿದ್ದು, ಕೆಫೇನ್‌ ಎಷ್ಟು ಸೇವಿಸಬಹುದು ಮತ್ತು ಯಾವಾಗ ಸೇವಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದೆ. ಮಾತ್ರವಲ್ಲ, ಅತಿಯಾದ ಕೆಫೇನ್‌ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ಜೊತೆಗೂಡಿ, 17 ಹೊಸ ಆಹಾರಕ್ರಮದ ನಿರ್ದೇಶನಗಳನ್ನು ಐಸಿಎಂಆರ್‌ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿಯೇ ಬಿಡುಗಡೆ ಮಾಡಲಾಗಿರುವ ಈ ಮಾರ್ಗದರ್ಶಿ ಸೂತ್ರಗಳು ಆರೋಗ್ಯಕರ ಆಹಾರ ಕ್ರಮವನ್ನು ದೇಶದೆಲ್ಲೆಡೆ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿವೆ. ಈ ನಿರ್ದೇಶನಗಳಲ್ಲಿ ಅತಿಯಾಗಿ ಕಾಫಿ-ಚಹಾ ಸೇವನೆಯ ಅಡ್ಡ ಪರಿಣಾಮಗಳನ್ನೂ ತಿಳಿಸಲಾಗಿದೆ.

Cup of Tea

ಹೆಚ್ಚಾದರೆ ಏನಾಗುತ್ತದೆ?

ಕಾಫಿ-ಚಹಾ ಹೆಚ್ಚು ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ. ಚಹಾ, ಕಾಫಿ ಹೆಚ್ಚು ಕುಡಿಯುವುದರಿಂದ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಕೆಫೇನ್‌ ಪೇಯಗಳಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದಂಶ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಇದರಿಂದ ಕಬ್ಬಿಣದಂಶದ ಕೊರತೆಯಾಗಿ ಅನೀಮಿಯ ಉಂಟಾಗಬಹುದು. ಜೊತೆಗೆ, ಕಾಫಿ-ಟೀ ಸೇವನೆ ಹೆಚ್ಚಾದರೆ ರಕ್ತದೊತ್ತಡ ಸ್ಥಿರವಾಗಿರದೆ, ಏರಿಳಿತ ಕಾಣಬಹುದು. ಹೃದಯದ ತೊಂದರೆಗಳು ಅಂಟಿಕೊಳ್ಳಬಹುದು.

ಯಾವಾಗ ಸೇವಿಸಬಹುದು?

ಹೊಟ್ಟೆ ತೀವ್ರವಾಗಿ ಹಸಿದಿದ್ದಾಗ, ಆಹಾರದ ಜೊತೆಗೆ ಅಥವಾ ಆಹಾರ ಸೇವಿಸಿದ ತಕ್ಷಣ ಕೆಫೇನ್‌ ಸೇವನೆ ಸರಿಯಲ್ಲ. ಬದಲಿಗೆ, ಆಹಾರ ಸೇವಿಸಿದ ಒಂದು ತಾಸಿನ ನಂತರ ಕಾಫಿ, ಚಹಾ ಕುಡಿಯಬಹುದು. ಇವುಗಳನ್ನು ಅತಿಯಾಗಿ ಕುಡಿಯುವುದು ಕೇಂದ್ರ ನರಮಂಡಲವನ್ನು ಪ್ರಚೋದಿಸುತ್ತದೆ. ಈ ಮೂಲಕ ವ್ಯಸನವನ್ನೂ ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ಇರಿಸಿಕೊಳ್ಳುವುದು ಸೂಕ್ತ.

Black and green tea

ದಿನಕ್ಕೆ ಎಷ್ಟು?

ಇದರರ್ಥ ಕಾಫಿ-ಚಹಾ ಕುಡಿಯುವುದೇ ಬೇಡ ಎಂಬುದಲ್ಲ. ಬದಲಿಗೆ ಮಿತಿ ನಿಗದಿ ಮಾಡಿಕೊಳ್ಳಿ ಎನ್ನುತ್ತದೆ ಈ ನಿರ್ದೇಶನ. ದಿನಕ್ಕೆ 300 ಎಂ.ಜಿ.ಗಿಂತ ಹೆಚ್ಚು ಕೆಫೇನ್‌ ಸೇವನೆ ಸೂಕ್ತವಲ್ಲ. ಆದರೆ ಅದನ್ನು ಲೆಕ್ಕ ಹಾಕುವುದು ಹೇಗೆ? ತಾಜಾ ಡಿಕಾಕ್ಷನ್‌ ತೆಗೆದ 150 ಎಂ.ಎಲ್‌. ಕಾಫಿಯಲ್ಲಿ 80ರಿಂದ 120 ಎಂ.ಜಿ. ಕೆಫೇನ್‌ ಇರುತ್ತದೆ. ಅಷ್ಟೇ ಪ್ರಮಾಣದ ಇನ್‌ಸ್ಟಂಟ್‌ ಕಾಫಿಯಲ್ಲಿ 50ರಿಂದ 65 ಎಂ.ಜಿ. ಕೆಫೇನ್‌ ಇರುತ್ತದೆ. ಒಂದು ಸರ್ವಿಂಗ್‌ ಚಹಾದಲ್ಲಿ 30ರಿಂದ 65 ಎಂ.ಜಿ.ವರೆಗೂ ಕೆಫೇನ್‌ ದೇಹಕ್ಕೆ ದೊರೆಯುತ್ತದೆ. ಈ ಪ್ರಮಾಣಗಳನ್ನು ತಿಳಿದುಕೊಂಡರೆ, ಕೆಫೇನ್‌ ಎಷ್ಟು ಸೇವಿಸುತ್ತಿದ್ದೇವೆ ಎಂಬುದನ್ನು ಲೆಕ್ಕ ಹಾಕುವುದಕ್ಕೆ ಕಷ್ಟವಾಗುವುದಿಲ್ಲ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಹಾಲಿನ ಚಹಾ ಬೇಡ

ಭಾರತದಲ್ಲಿ ಚಹಾ ಎಂಬುದು ಪ್ರಾರಂಭವಾಗಿದ್ದು ಬ್ರಿಟೀಷರಿಂದ. ಇಂಗ್ಲಿಷ್‌ ಚಹಾ ಎಂದರೆ ಹಾಲು ಸೇರಿಸಿದ ಚಹಾ. ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ಲೆಮೆನ್‌ ಟೀ ಇತ್ಯಾದಿಗಳೆಲ್ಲ ನಂತರದಲ್ಲಿ ಬಂದಿದ್ದು. ಆದರೆ ಹಾಲು ಬೆರೆಸಿದ ಚಹಾಗಿಂತ ಬ್ಲ್ಯಾಕ್‌ ಟೀ ಸೇವಿಸುವುದು ಒಳ್ಳೆಯದು ಎಂಬುದು ಐಸಿಎಂಆರ್‌ ಅಭಿಮತ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬ್ಲ್ಯಾಕ್‌ ಟೀ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುವ ಸಂಭವವಿದೆ. ಜೊತೆಗೆ, ಹೊಟ್ಟೆಯ ಕ್ಯಾನ್ಸರ್‌ ಭೀತಿಯನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಹಾಲು ಬೆರೆಸಿದ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂಬುದು ಸಂಸ್ಥೆಯ ಕಿವಿಮಾತು.

Continue Reading

ವಿಜಯನಗರ

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

Food Department : ತಾಯಿ-ಮಗ ಜೀವಂತವಾಗಿದ್ದರೂ, ಬದುಕಿಲ್ಲ ಎಂದು ಪಡಿತರ ಚೀಟಿಯಿಂದ (BPL Card) ಹೆಸರನ್ನೇ ಡಿಲೀಟ್‌ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳದೇ ಆಹಾರ ಇಲಾಖೆಯ (ration card) ಅಧಿಕಾರಿಗಳ ಯಡವಟ್ಟಿಗೆ ಕಡು ಬಡತನದ ಕುಟುಂಬವೊಂದು ಪರದಾಡುತ್ತಿದೆ.

VISTARANEWS.COM


on

By

Food department deletes name from ration card list even though it is alive
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿದೆ. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಯಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ. ಆಹಾರ ಇಲಾಖೆ ಯಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಆಹಾರ ಇಲಾಖೆ ಯಾರದ್ದೋ ಮಾತು ಕೇಳಿ ಪಡಿತರ ಚೀಟಿಯಿಂದ ಹೆಸರು ಡಿಲೀಟ್ ಮಾಡಿದೆ. ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿಲ್ಲ.

ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಡಿತರ ಚೀಟಿಯಿಂದ ಹೆಸರು ತೆಗೆಯಬೇಕಾದರೆ ಅಧಿಕಾರಿಗಳು ಸ್ಪಾಟ್‌ ವಿಸಿಟ್‌ ಮಾಡಬೇಕು. ಪಡಿತರ ಚೀಟಿಯಲ್ಲಿ ಇರುವವರು ಬದುಕಿದ್ದಾರಾ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರಿಶೀಲಿಸದೇ ಹೀಗೆ ಅಂಜೀನಮ್ಮ ಹೆಸರು ತೆಗೆದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Star Holiday Fashion
ಫ್ಯಾಷನ್7 mins ago

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Prajwal Revanna Case Surrender Now Devegowda warning to Prajwal
ರಾಜಕೀಯ11 mins ago

Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

IPL 202
ಕ್ರೀಡೆ12 mins ago

IPL 2024: ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ಈ ಫ್ರಾಂಚೈಸಿ ಪರ ಆಡಿದರೆ ಉತ್ತಮ ಎಂದ ಆರ್​ಸಿಬಿ ಮಾಜಿ ನಾಯಕ

2024 Maruti Swift
ಆಟೋಮೊಬೈಲ್18 mins ago

2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

West Bengal Violence
ದೇಶ37 mins ago

West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ಪೊಲೀಸರಿಂದ ಲಾಠಿಚಾರ್ಜ್‌

Narendra Modi
ದೇಶ51 mins ago

Narendra Modi: ಪಾಕ್‌ ʼಬಂಡವಾಳʼ ಏನೆಂದು ಅಲ್ಲಿಗೇ ಹೋಗಿ ನೋಡಿ ಬಂದಿರುವೆ; ಕಾಂಗ್ರೆಸ್‌ ‘ಬಾಂಬ್’‌ ಹೇಳಿಕೆಗೆ ಮೋದಿ ಟಾಂಗ್!

Money Guide
ಮನಿ-ಗೈಡ್53 mins ago

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಸಂಜುಗಿಂತ ಪಂತ್​ ಬೆಸ್ಟ್​ ಎಂದ ಯುವರಾಜ್

ayodhya ram mandir 1
ಪ್ರಮುಖ ಸುದ್ದಿ1 hour ago

Ayodhya Ram Mandir: ಅಯೋಧ್ಯೆ ಶ್ರೀ ರಾಮನಿಗೆ ಬೆಳ್ಳಿಯ ಬಿಲ್ಲು- ಬಾಣ; ಪೂಜಿಸಿ ಕಳಿಸಿಕೊಟ್ಟ ಶೃಂಗೇರಿ ಶ್ರೀಗಳು

Highest Paid CEO
ವಾಣಿಜ್ಯ1 hour ago

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ12 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌