LIC Stock 2.5 lakh crore rupees huge loss for LIC stock investors in a single year what is the reasonLIC Stock : ಎಲ್‌ಐಸಿ ಷೇರು ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ಭಾರಿ ನಷ್ಟ

ವಾಣಿಜ್ಯ

LIC Stock : ಎಲ್‌ಐಸಿ ಷೇರು ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ಭಾರಿ ನಷ್ಟ

LIC Stock ಎಲ್‌ಐಸಿಯ ಆರಂಭಿಕ ಷೇರು ಬಿಡುಗಡೆಯಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ನಿರಾಸೆಯಾಗಿದೆ. ಕಳೆದೊಂದು ವರ್ಷದಲ್ಲಿ ಹೂಡಿಕೆದಾರರಿಗೆ 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ. ವಿವರ ಇಲ್ಲಿದೆ.

VISTARANEWS.COM


on

LIC Stock 2.5 lakh crore rupees huge loss for LIC stock investors in a single year what is the reason
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಕಳೆದ ವರ್ಷ ಸಂಚಲನ ಮೂಡಿಸಿದ್ದ ಎಲ್‌ಐಸಿಯ ಐಪಿಒದಲ್ಲಿ ಹೂಡಿಕೆ ಮಾಡಿದ್ದವರಿಗೆ ಕಳೆದೊಂದು ವರ್ಷದಲ್ಲಿ ಭಾರಿ ನಿರಾಸೆಯಾಗಿದೆ. (LIC Stock) ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ನಷ್ಟದ ಆಘಾತ ಎದುರಿಸುವಂತಾಗಿದೆ. (Life Insurance Corporation India-LIC)

2022ರ ಮೇ 17ರಂದು ಎಲ್‌ಐಸಿ ಷೇರು ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿತ್ತು. ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಈ ಮಟ್ಟದಿಂದ ದರದಲ್ಲಿ 40% ಇಳಿಕೆಯಾಗಿದೆ. ಇದರ ಪರಿಣಾಮ ಎಲ್‌ಐಸಿಯ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಸರ್ಕಾರ ಈಗಲೂ ಎಲ್‌ಐಸಿಯಲ್ಲಿ 96.5% ಷೇರು ಪಾಲನ್ನು ಹೊಂದಿದೆ. ಮ್ಯೂಚುವಲ್‌ ಫಂಡ್‌ಗಳು ಮತ್ತು ಎಫ್‌ಐಐಗಳು ಎಲ್‌ಐಸಿಯಲ್ಲಿ ಕಳೆದೊಂದು ವರ್ಷದಲ್ಲಿ ಹೂಡಿಕೆಯನ್ನು ತಗ್ಗಿಸಿವೆ. ಎಲ್‌ಐಸಿಯಲ್ಲಿ ರಿಟೇಲ್‌ ಹೂಡಿಕೆದಾರರ ಸಂಖ್ಯೆಯೂ ಇಳಿದಿದೆ.

ಇದನ್ನೂ ಓದಿ: Adani stocks : ಇತರ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಗೆ ಮಿತಿ ವಿಧಿಸಲು ಎಲ್‌ಐಸಿ ನಿರ್ಧಾರ

ಎಲ್‌ಐಸಿಯಲ್ಲಿ ಈಗ 33 ಲಕ್ಷ ರಿಟೇಲ್ ಹೂಡಿಕೆದಾರರು ಇದ್ದು,‌ ಕಳೆದ ಒಂದು ವರ್ಷದಲ್ಲಿ 6.87 ಲಕ್ಷ ಮಂದಿ ನಿರ್ಗಮಿಸಿದ್ದಾರೆ. ಇನ್ನೂ ಅನೇಕ ಹೂಡಿಕೆದಾರರು ಹೂಡಿಕೆಯಲ್ಲಿ ಸರಾಸರಿ ನಷ್ಟ ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ.

21,000 ಕೋಟಿ ರೂ. ಗಾತ್ರದ ಎಲ್‌ಐಸಿ ಐಪಿಒ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇದುವರೆಗಿನ ಅತಿ ದೊಡ್ಡ ಐಪಿಒ ಆಗಿದೆ. ಹೊಸ ಹೂಡಿಕೆದಾರರನ್ನು ಆರಂಭದಲ್ಲಿ ಆಕರ್ಷಿಸಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಉಂಟಾಗಿರುವ ಷೇರು ದರ ಕುಸಿತದ ಪರಿಣಾಮ ಲಕ್ಷಾಂತರ ರಿಟೇಲ್‌ ಹೂಡಿಕೆದಾರರು ನಷ್ಟಕ್ಕೀಡಾಗಿದ್ದಾರೆ. ಈಗ ಎಲ್‌ಐಸಿ ಷೇರು ದರ 568 ರೂ.ಗಳಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

Sensex Crash: ರಾಜಕೀಯ ಅನಿಶ್ಚಿತತೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಲ್ &ಟಿ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೇರಿದಂತೆ ದೊಡ್ಡ ಸಂಸ್ಥೆಗಳ ಷೇರುಗಳು ವ್ಯಾಪಕ ಮಾರಾಟವನ್ನು ಕಂಡವು. ಈ ಪ್ರಮುಖ ಕಂಪನಿಗಳ ಸೂಚ್ಯಂಕದ ಕುಸಿತವು ಒಟ್ಟಾರೆ ಕುಸಿತ 80 ಪ್ರತಿಶತದಷ್ಟು ಪಾಲು ಹೊಂದಿದೆ. ಷೇರು ಮಾರುಕಟ್ಟೆಗಳ ಮೇಲೆ ಗಣನೀಯವಾಗಿ ಕೆಳಮುಖ ಒತ್ತಡ ಬೀರಿದೆ.

VISTARANEWS.COM


on

Sensex crash
Koo

ಮುಂಬಯಿ : ಎಫ್ ಐಐ ಹೊರಹರಿವು ಮತ್ತು ಯುಎಸ್ ಬಾಂಡ್ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ಕುಸಿತ (Sensex Crash) ಕಂಡಿವೆ. ಬಿಎಸ್ಇ (BSE) ಸೆನ್ಸೆಕ್ಸ್ 1,132 ಪಾಯಿಂಟ್ಸ್ ಕುಸಿದು 72,334 ಕ್ಕೆ ತಲುಪಿದ್ದರೆ, ನಿಫ್ಟಿ 50 370 ಪಾಯಿಂಟ್ಸ್ ಕುಸಿದು 21,932 ಕ್ಕೆ ತಲುಪಿದೆ. ಬಿಎಸ್ಇ ಸೂಚ್ಯಂಕವು ಅಂತಿಮವಾಗಿ 1,062 ಪಾಯಿಂಟ್​​ ಅಂದರೆ ಶೇಕಡಾ 1.45 ರಷ್ಟು ಕುಸಿದು 72,404 ಕ್ಕೆ ಕೊನೆಗೊಂಡಿತು. ನಿಫ್ಟಿ 50 ಕೂಡ 345 ಪಾಯಿಂಟ್ ಅಂದರೆ ಶೇಕಡಾ 1.55 ರಷ್ಟು ಕುಸಿದು 21,958 ಕ್ಕೆ ತಲುಪಿದೆ.

ಮಾರುಕಟ್ಟೆಗಳಲ್ಲಿ, ಬಿಎಸ್ಇ ಮಿಡ್​ಕ್ಯಾಪ್​ ಸೂಚ್ಯಂಕವು ಶೇಕಡಾ 2 ರಷ್ಟು ಕುಸಿದರೆ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 2.4 ರಷ್ಟು ಕುಸಿದಿದೆ. “ಮಾರುಕಟ್ಟೆಯ ಕುಸಿತಕ್ಕೆ ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಗಳ ಸುತ್ತಲಿನ ಅನಿಶ್ಚಿತತೆ ಕಾರಣವಾಗಿದೆ. ಈ ಅನಿಶ್ಚಿತತೆಯು ಭಾರತದ ಚಂಚಲತೆಯ ಮಾಪಕವಾದ ಇಂಡಿಯಾ ವಿಐಎಕ್ಸ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇದು 52 ವಾರಗಳ ಗರಿಷ್ಠ 19 ಕ್ಕೆ ತಲುಪಿದೆ, ಇದು ಮಾರುಕಟ್ಟೆ ಆತಂಕವನ್ನು ಸೂಚಿಸಿದೆ. ಲಾರ್ಜ್ ಕ್ಯಾಪ್ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಗಳಿಕೆಯ ಇಳಿಕೆಯು ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿದೆ ಎಂದು ಷೇರು ಮಾರುಕಟ್ಟೆ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಅನಿಶ್ಚಿತತೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಲ್ &ಟಿ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೇರಿದಂತೆ ದೊಡ್ಡ ಸಂಸ್ಥೆಗಳ ಷೇರುಗಳು ವ್ಯಾಪಕ ಮಾರಾಟವನ್ನು ಕಂಡವು. ಈ ಪ್ರಮುಖ ಕಂಪನಿಗಳ ಸೂಚ್ಯಂಕದ ಕುಸಿತವು ಒಟ್ಟಾರೆ ಕುಸಿತ 80 ಪ್ರತಿಶತದಷ್ಟು ಪಾಲು ಹೊಂದಿದೆ. ಷೇರು ಮಾರುಕಟ್ಟೆಗಳ ಮೇಲೆ ಗಣನೀಯವಾಗಿ ಕೆಳಮುಖ ಒತ್ತಡಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮೇ ತಿಂಗಳಾದ್ಯಂತ ತಮ್ಮ ಹೂಡಿಕೆಗಳನ್ನು ಸಕ್ರಿಯವಾಗಿ ಮಾರಾಟ ಮಾಡುತ್ತಿದ್ದಾರೆ. ಒಟ್ಟು ಮಾರಾಟ 15,863.14 ಕೋಟಿ ರೂ. ಆಗಿದ್ದು ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಮೇ 8 ರಂದು ವಿದೇಶಿ ಹೂಡಿಕೆದಾರರು 6,669.10 ಕೋಟಿ ರೂ.ಗಳ ಈಕ್ವಿಟಿಗಳನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆದಾರರು 2025ರ ಹಣಕಾಸು ವರ್ಷದಲ್ಲಿ ಇದುವರೆಗೆ 13,747 ಕೋಟಿ ರೂ.ಗಳ ಈಕ್ವಿಟಿಗಳನ್ನು ಹಿಂತೆಗೆದುಕೊಂಡಿದ್ದಾರೆ.

ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ (ಡಿಐಐ) ಕಡಿಮೆ ಖರೀದಿ ಚಟುವಟಿಕೆಯು ಮಾರುಕಟ್ಟೆಯ ಚಂಚಲತೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕಳೆದ ಒಂದು ತಿಂಗಳಲ್ಲಿ, ನಿಫ್ಟಿ ಶೇಕಡಾ 1.5 ರಷ್ಟು ಕುಸಿದರೆ, ಶಾಂಘೈ ಕಾಂಪೊಸಿಟ್ ಶೇಕಡಾ 2.62 ಮತ್ತು ಹ್ಯಾಂಗ್ ಸೆಂಗ್ ಶೇಕಡಾ 8.8 ರಷ್ಟು ಏರಿಕೆಯಾಗಿದೆ. ಚೀನಾ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳು ಸುಮಾರು 10 ಪಿಇಗಳೊಂದಿಗೆ ಇಳಿಕೆ ಕಂಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಲೋಕ ಸಭಾ ಚುನಾವಣೆಯ ಆರಂಭಿಕ ಮೂರು ಹಂತಗಳಲ್ಲಿ ಕಂಡುಬಂದ ಕಡಿಮೆ ಮತದಾನವು ಮಾರುಕಟ್ಟೆಗಳ ಆತಂಕ ಹೆಚ್ಚಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

ಮನಿ-ಗೈಡ್

Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Money Guide: ರಾಷ್ಟ್ರೀಯ ಪಿಂಚಣಿ ಯೋಜನೆ (NPS) ದೇಶದಲ್ಲಿರುವ ಅತ್ಯುತ್ತಮ ನಿವೃತ್ತಿ ಯೋಜನೆ ಎನಿಸಿಕೊಂಡಿದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದನ್ನು ಹೇಗೆ ಸರಿಪಡಿಸಬಹುದು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅಗತ್ಯ. ಅದಕ್ಕಾಗಿ ಈಗಲೇ ಒಂದಷ್ಟು ಮೊತ್ತವನ್ನು ಕೂಡಿಡಲು ಆರಂಭಿಸಬೇಕು ಎಂದು ಸಲಹೆ ನೀಡುತ್ತಾರೆ ಆರ್ಥಿಕ ತಜ್ಞರು. ಇದಕ್ಕಾಗಿ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಕೂಡ ಒಂದು. ಎನ್‌ಪಿಎಸ್‌ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಆದರೆ ಕೆಲವೊಮ್ಮೆ ಅನೇಕ ಕಾರಣಗಳಿಂದ ಎನ್‌ಪಿಎಸ್‌ ಖಾತೆ ನಿಷ್ಕ್ರೀಯವಾಗುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ಸರಿಪಡಿಸಬಹುದು? ಮುಂತಾದ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ಸ್ಥಗಿತಗೊಂಡ ಎನ್‌ಪಿಎಸ್‌ ಖಾತೆಯನ್ನು ಸಕ್ರಿಯಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಈ ಕುರಿತಾದ ವಿವರ ಇಲ್ಲಿದೆ.

ಯಾಕಾಗಿ ಖಾತೆ ಸ್ಥಗಿತಗೊಳ್ಳುತ್ತದೆ?

ಕನಿಷ್ಠ ಪಾವತಿಯ ಕೊರತೆ: ಟೈರ್ 1 ಎನ್‌ಪಿಎಸ್‌ ಖಾತೆಗಳಿಗೆ ವಾರ್ಷಿಕ ಕನಿಷ್ಠ 1,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದೊಳಗೆ ಈ ನಿಯಮ ಪಾಲಿಸದಿದ್ದರೆ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಟೈರ್ 1 ಸ್ಥಗಿತಗೊಂಡರೆ ಟೈರ್ 2 ಖಾತೆಗಳು ಸಹ ನಿಷ್ಕ್ರಿಯವಾಗುತ್ತವೆ.

ಅಪೂರ್ಣ ಕೆವೈಸಿ ಪ್ರಕ್ರಿಯೆ: ಎನ್‌ಪಿಎಸ್‌ ಖಾತೆಗಳಿಗೆ ಕೆವೈಸಿ (Know Your Customer) ಅಪ್‌ಡೇಟ್‌ ಮಾಡುವುದು ಕಡ್ಡಾಯಗೊಳಿಸಲಾಗಿದೆ. ನೋಂದಣಿ ವೇಳೆ ಅಪೂರ್ಣ ಮಾಹಿತಿ ನೀಡಿದ್ದರೆ ಅಥವಾ ಸೂಕ್ತ ದಾಖಲೆ ಒದಗಿಸದಿದ್ದರೆ ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಳ್ಳುತ್ತದೆ.

ದಾಖಲಾತಿ ನಮೂನೆ ಸಲ್ಲಿಕೆಯ ವಿಳಂಬ: ತಾಂತ್ರಿಕ ದೋಷ ಅಥವಾ ಕೇಂದ್ರ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ (CRA) ದಾಖಲಾತಿ ನಮೂನೆಯನ್ನು ಸಲ್ಲಿಸುವಲ್ಲಿನ ವಿಳಂಬವು ಖಾತೆ ಸ್ಥಗಿತಗೊಳಿಸಲು ಕಾರಣವಾಗಬಹುದು.

ಆನ್‌ಲೈನ್‌ ಮೂಲಕ ಹೀಗೆ ಸಕ್ರಿಯಗೊಳಿಸಿ

ಕನಿಷ್ಠ ಕೊಡುಗೆ ಪಾವತಿಸಿ / ದಂಡ ಕಟ್ಟಿ: ಎನ್‌ಪಿಎಸ್‌ ಅಕೌಂಟ್‌ಗೆ ಲಾಗಿನ್‌ ಆಗಿ Contribution ವಿಭಾಗಕ್ಕೆ ತೆರಳಿ. ನಿಮ್ಮ ಖಾತೆ ಸ್ಥಗಿತಗೊಂಡ ಅವಧಿಯಿಂದ ತೊಡಗಿ ಇದುವರೆಗೆ ತಿಂಗಳಿಗೆ ಕನಿಷ್ಠ 500 ರೂ. ಪಾವತಿಸಿ. ಹೆಚ್ಚುವರಿಯಾಗಿ 100 ರೂ. ದಂಡವನ್ನೂ ಕಟ್ಟಿ.

ದೃಢೀಕರಣ ಮತ್ತು ಖಾತೆ ಪುನರುಜ್ಜೀವನ: ಆನ್‌ಲೈನ್‌ ಪಾವತಿಯನ್ನು ಯಶಸ್ವಿಯಾಗಿ ಮಾಡಿದ ನಂತರ ಇಮೇಲ್ ಅಕೌಂಟ್‌ಗೆ ದೃಢೀಕರಣದ ಸಂದೇಶ ಬರುತ್ತದೆ. ಬಳಿಕ ಪಿಎಫ್‌ಆರ್‌ಡಿಎ ನಿಮ್ಮ ಖಾತೆಯನ್ನು ಪರಿಶೀಲಿಸಿ ಕೆಲವೇ ದಿನಗಳಲ್ಲಿ ಅದನ್ನು ಮತ್ತೆ ಸಕ್ರಿಯಗೊಳಿಸುತ್ತದೆ.

ಆಫ್‌ಲೈನ್‌ ಮೂಲಕ ಸಕ್ರಿಯಗೊಳಿಸುವ ವಿಧಾನ

ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ: ದಂಡ ಸಹಿತ ಬಾಕಿ ಇರುವ ಮೊತ್ತವನ್ನು ಪಾವತಿಸಿ. ಬಳಿಕ ಎನ್‌ಪಿಎಸ್‌ ವೆಬ್‌ಸೈಟ್‌ನಿಂದ UOS-S10-A ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿ. ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಪ್ಯಾನ್‌ ಕಾರ್ಡ್‌ ಪ್ರತಿಯನ್ನು ಲಗತ್ತಿಸಿ. ಇದನ್ನು ನಿಮ್ಮ ಪಿಒಪಿ ಶಾಖೆ (ಬ್ಯಾಂಕ್ ಅಥವಾ ನಿಯೋಜಿತ ಏಜೆನ್ಸಿ)ಗೆ ನೀಡಿ. ಪಿಒಪಿ ನಿಮ್ಮ ಮನವಿಯನ್ನು ಪರಿಶೀಲಿಸಿ ಪಿಎಫ್‌ಆರ್‌ಡಿಎಗೆ ಕಳುಹಿಸುತ್ತದೆ. ಕೆಲವೇ ದಿನಗಳಲ್ಲಿ ಖಾತೆ ಸಕ್ರಿಯಗೊಂಡಿರುವ ಬಗ್ಗೆ ಎಸ್‌ಎಂಎಸ್‌ ಅಥವಾ ಇಮೇಲ್‌ಗೆ ಮಾಹಿತಿ ರವಾನೆಯಾಗುತ್ತದೆ.

ಆಧಾರ್ ದೃಢೀಕರಣ ಕಡ್ಡಾಯ

ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಿಂದ ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ ಜಾರಿಗೆ ಬಂದಿದೆ.  

ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

Continue Reading

ದೇಶ

Air India Express: 30 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌; ಇಂದು 74 ವಿಮಾನಗಳ ಹಾರಾಟ ರದ್ದು

Air India Express: ಸಾಮೂಹಿಕ ಅನಾರೋಗ್ಯದ ರಜೆ ಹಾಕಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನ 30 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಸಿಬ್ಬಂದಿ ಕೊರತೆಯಿಂದ ಗುರುವಾರ ಸುಮಾರು 74 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಬುಧವಾರ ಸುಮಾರು 86 ವಿಮಾನಗಳ ಹಾರಾಟ ರದ್ದಾಗಿತ್ತು.

VISTARANEWS.COM


on

Air India Express
Koo

ನವದೆಹಲಿ: ಸಾಮೂಹಿಕ ಅನಾರೋಗ್ಯದ ರಜೆ (Sick Leave) ಹಾಕಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನದ 30 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಈ ಅವಧಿಯೊಳಗೆ ಆಗಮಿಸದಿದ್ದರೆ ಶಿಸ್ತು ಕ್ರಮ ನಡೆಸಲಾಗುವುದು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಗುರುವಾರ ಸುಮಾರು 74 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಬುಧವಾರ ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಸುಮಾರು 86 ವಿಮಾನಗಳ ಹಾರಾಟ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.

30ಕ್ಕೂ ಹೆಚ್ಚು ಸಿಬ್ಬಂದಿಗೆ ನೀಡಲಾದ ವಜಾ ಪತ್ರದಲ್ಲಿ, ಸಾಮೂಹಿಕ ರಜೆಯು ʼಯಾವುದೇ ಸಮರ್ಥನೀಯ ಕಾರಣವಿಲ್ಲದೆ ಪೂರ್ವ ನಿಯೋಜಿತ ಮತ್ತು ಸಂಘಟಿತ ಕೆಲಸದಿಂದ ದೂರವಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆʼ ಎಂದು ಉಲ್ಲೇಖಿಸಲಾಗಿದೆ. “ನಿಮ್ಮ ಪ್ರತಿಭಟನೆ ಕಾರಣದಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು. ಇದು ಕಂಪನಿಯ ಪ್ರಯಾಣಿಕರಿಗೆ ಭಾರಿ ಅನಾನುಕೂಲತೆಯನ್ನು ಉಂಟು ಮಾಡಿದೆ. ನಿಮ್ಮ ಕೃತ್ಯವು ಸಾರ್ವಜನಿಕ ಹಿತಾಸಕ್ತಿಯನ್ನು ವಿರುದ್ಧವಾಗಿದೆ. ಜತೆಗೆ ಕಂಪನಿಗೆ ಗಂಭೀರ ವಿತ್ತೀಯ ನಷ್ಟವನ್ನು ಉಂಟು ಮಾಡಿದೆʼʼ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಚೆನ್ನೈಯಿಂದ ಕೋಲ್ಕತ್ತಾ, ಚೆನ್ನೈಯಿಂದ ಸಿಂಗಾಪುರ, ತಿರುಚ್ಚಿಯಿಂದ ಸಿಂಗಾಪುರ ಮತ್ತು ಜೈಪುರದಿಂದ ಮುಂಬೈಗೆ ತೆರಳು ವಿಮಾನಗಳು ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಗೆ ಕಾರಣವೇನು?

ಟಾಟಾ ಗ್ರೂಪ್‌ ಜತೆಗೆ ಏರ್‌ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಆರಂಭವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲ ಕಾರಣಗಳಿಂದ ಏರ್‌ ಇಂಡಿಯಾ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Air India | ಏರ್‌ ಇಂಡಿಯಾದಲ್ಲಿ ವಿಸ್ತಾರ, ಏರ್‌ ಏಷ್ಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಲೀನ ಶೀಘ್ರ

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಯೊಂದೇ ಅಲ್ಲ! ಹೀಗೆ ಮಾಡಿಯೂ ಸಮೃದ್ಧಿ ಹೊಂದಬಹುದು!

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನ ಆಚರಿಬಹುದಾದ ಹಲವು ಸಂಪ್ರದಾಯಗಳಿವೆ. ಈ ಬಗ್ಗೆ ಅರಿತುಕೊಂಡು ನೀವು, ಕುಟುಂಬದೊಂದಿಗೆ ಅಕ್ಷಯ ತೃತಿಯವನ್ನು (Akshaya Tritiya 2024) ಆಚರಿಸಿ.

VISTARANEWS.COM


on

By

Akshaya Tritiya 2024
Koo

ಪವಿತ್ರ ಯುಗ ಮತ್ತು ಸತ್ಯ ಯುಗದ ಆರಂಭವನ್ನು ಸೂಚಿಸುವ ಅಕ್ಷಯ ತೃತೀಯ (Akshaya Tritiya 2024) ವೈಶಾಖ ಮಾಸದ ಮೂರನೇ ಚಂದ್ರನ ದಿನ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನವು ಹಿಂದೂ (hindu) ಸಂಸ್ಕೃತಿಯಲ್ಲಿ (culture) ಬಹಳ ಮಹತ್ವವನ್ನು ಹೊಂದಿದೆ. ಹೀಗಾಗಿ ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಹೂಡಿಕೆ ಮಾಡಲು, ಚಿನ್ನ (gold) ಅಥವಾ ಆಸ್ತಿಯನ್ನು (property) ಖರೀದಿಸಲು, ಮದುವೆ ಅಥವಾ ಇತರ ಶುಭ ಸಂದರ್ಭಗಳಿಗೆ ಉತ್ತಮ ಸಮಯ ಎಂದೇ ಪರಿಗಣಿಸಲಾಗಿದೆ.

‘ಅಕ್ಷಯ’ ಎಂಬ ಹೆಸರಿನ ಅರ್ಥ ಶಾಶ್ವತ ಮತ್ತು ‘ತೃತೀಯ’ ಎಂದರೆ ಮೂರನೇ ಚಂದ್ರನ ದಿನವನ್ನು ಸೂಚಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ವಿಷ್ಣು ದೇವರು ಆರನೇ ಅವತಾರವಾದ ಪರಶುರಾಮನ ರೂಪದಲ್ಲಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಗಂಗಾ ದೇವಿಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂದೂ ಹೇಳಲಾಗುತ್ತದೆ.

ಅಕ್ಷಯ ತೃತಿಯವನ್ನು ಪವಿತ್ರ ನದಿಗಳಲ್ಲಿ ವಿಶೇಷವಾಗಿ ಗಂಗಾದಲ್ಲಿ ಸ್ನಾನ ಮಾಡಲು ಮತ್ತು ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ 2024 ಅನ್ನು ಮೇ 10 ರಂದು ಶುಕ್ರವಾರ ಆಚರಿಸಲಾಗುತ್ತಿದೆ.

ಅಕ್ಷಯ ತೃತೀಯವನ್ನು ಸರಿಯಾದ ರೀತಿಯಲ್ಲಿ ಆಚರಿಸಲು ಅನುಸರಿಸಬೇಕಾದ ಕೆಲವು ಪ್ರಮುಖ ಆಚರಣೆಗಳಿವೆ. ಅವುಗಳ ಪರಿಚಯ ಇಲ್ಲಿದೆ.


ಚಿನ್ನ ಖರೀದಿಸಿ

ಅಕ್ಷಯ ತೃತೀಯದಲ್ಲಿ ಹೆಚ್ಚಿನ ಜನರು ಅನುಸರಿಸುವ ಪ್ರಮುಖ ಸಂಪ್ರದಾಯವೆಂದರೆ ಚಿನ್ನ ಖರೀದಿ. ಈ ದಿನದಂದು ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ಸ್ವಾಗತಿಸುತ್ತದೆ ಎಂಬ ನಂಬಿಕೆ ಇದೆ. ಜನರು ಈ ದಿನದಂದು ಚಿನ್ನದ ಆಭರಣಗಳು, ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ.


ಚಾರಿಟಿ

ಅಕ್ಷಯ ತೃತೀಯದ ಪ್ರಮುಖ ಅಂಶವೆಂದರೆ ದಾನ. ಈ ದಿನದಂದು ಅಗತ್ಯವಿರುವವರಿಗೆ ದಾನ ನೀಡುವುದು ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅನೇಕ ಜನರು ಆಹಾರ, ಬಟ್ಟೆ, ಹಣ ಅಥವಾ ಇತರ ರೀತಿಯ ದಾನವನ್ನು ಹಿಂದುಳಿದವರಿಗೆ ದಾನ ಮಾಡುತ್ತಾರೆ. ಈ ಅಭ್ಯಾಸವು ನಿರ್ಗತಿಕರಿಗೆ ಸಹಾಯ ಮಾಡುವುದಲ್ಲದೆ ಸಹಾನುಭೂತಿ ಮತ್ತು ಸಹಾನುಭೂತಿಯ ಭಾವವನ್ನು ಬೆಳೆಸುತ್ತದೆ.


ಮರಗಳನ್ನು ನೆಡುವುದು

ಇದು ಪ್ರಕೃತಿಗೆ ಮರಳಿ ನೀಡುವ ಮತ್ತು ಗ್ರಹಕ್ಕೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವ ಒಂದು ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜನರು ಪರಿಸರ ಸುಸ್ಥಿರತೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಕ್ಷಯ ತೃತೀಯವು ಹೆಚ್ಚು ಮರಗಳನ್ನು ನೆಡಲು ಮತ್ತು ಹಸಿರು ವಾತಾವರಣವನ್ನು ನಿರ್ಮಿಸಲು ಉತ್ತಮ ಅವಕಾಶವಾಗಿದೆ. ಮರಗಳನ್ನು ನೆಡುವ ಮೂಲಕ ನಾವು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ತಡೆಯಬಹುದು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಉಪವಾಸ

ಅಕ್ಷಯ ತೃತೀಯಕ್ಕೆ ಸಂಬಂಧಿಸಿದ ಇತರ ಪ್ರಮುಖ ಆಚರಣೆಗಳು ಉಪವಾಸ, ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪೂಜೆಗಳು ಮತ್ತು ಪ್ರಾರ್ಥನೆಗಳನ್ನು ಮಾಡುತ್ತೇವೆ. ಸ್ವೀಕರಿಸಿದ ಎಲ್ಲಾ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಿರಂತರ ಮಾರ್ಗದರ್ಶನ ಮತ್ತು ರಕ್ಷಣೆಯನ್ನು ಪಡೆಯಲು ಈ ದಿನ ಸೂಕ್ತವಾಗಿದೆ. ಅನೇಕ ಜನರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಮನೆಯಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಹೀಗೆ ಮಾಡುವ ಮೂಲಕವೂ ಜೀವನದಲ್ಲಿ ಸಮೃದ್ಧಿ, ನೆಮ್ಮದಿ ಹೊಂದಬಹುದು.

Continue Reading
Advertisement
Mureder Case
ಪ್ರಮುಖ ಸುದ್ದಿ1 hour ago

Murder Case : ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

Akshaya Tritiya Bala Rama Silver Idol gift from Sri Sai Gold Palace in bengaluru
ಬೆಂಗಳೂರು2 hours ago

Sri Sai Gold Palace: ಅಕ್ಷಯ ತೃತೀಯ; ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಶ್ರೀ ಬಾಲ ರಾಮನ ಬೆಳ್ಳಿ ವಿಗ್ರಹ ಉಡುಗೊರೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Padma Awards 2024
ಪ್ರಮುಖ ಸುದ್ದಿ4 hours ago

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Prajwal Revanna Case
ಪ್ರಮುಖ ಸುದ್ದಿ5 hours ago

Prajwal Revanna Case : ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲು

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ6 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ6 hours ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ6 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ6 hours ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ6 hours ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ6 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ7 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ8 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ14 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ14 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ15 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು15 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ15 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು17 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌