ಸ್ಯಾಂಡಲ್​ವುಡ್​ ನಿರ್ದೇಶಕ-ನಿರ್ಮಾಪಕರ ನಡುವೆ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ.ಶೇಖರ್​ ಪೊಲೀಸರಿಗೆ ದೂರು - Vistara News

ಸಿನಿಮಾ

ಸ್ಯಾಂಡಲ್​ವುಡ್​ ನಿರ್ದೇಶಕ-ನಿರ್ಮಾಪಕರ ನಡುವೆ ಗಲಾಟೆ; ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ.ಶೇಖರ್​ ಪೊಲೀಸರಿಗೆ ದೂರು

ಇನ್ನೂ ಹದಿನೆಂಟೂವರೆ ಲಕ್ಷ ರೂ.ಬಾಕಿ ಉಳಿಸಿಕೊಂಡಿರುವ ಕಡ್ಡಿಪುಡಿ ಚಂದ್ರು ವಿರುದ್ಧ ನಕಲಿ ಸಹಿ ಆರೋಪವೂ ಎದ್ದಿದೆ. ‘ನನಗೆ ಎಲ್ಲ ಹಣ ನೀಡಿದ್ದಾಗಿ ದಾಖಲಿಸಿ ನಕಲಿ ಸಹಿ ಮಾಡಿದ್ದಾರೆ ಎಂದೂ ಪಿ.ಸಿ.ಶೇಖರ್​ ದೂರಿದ್ದಾರೆ.

VISTARANEWS.COM


on

sandalwood director PC Shekhar Police complaint against Kaddipudi Chandru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚೆಗೆ ತೆರೆಕಂಡ ‘ಲವ್​ ಬರ್ಡ್ಸ್​’ ಸಿನಿಮಾದ ನಿರ್ದೇಶಕ ಪಿ.ಸಿ.ಶೇಖರ್ (Director PC Shekhar) ಅವರು ಕನ್ನಡದ ನಿರ್ಮಾಪಕ, ನಟ ಕಡ್ಡಿಪುಡಿ ಚಂದ್ರು (ಎಂ.ಚಂದ್ರು) ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಣಕಾಸಿನ ವಿಷಯದಲ್ಲಿ ಪಿ.ಸಿ.ಶೇಖರ್​ ಮತ್ತು ಕಡ್ಡಿಪುಡಿ ಚಂದ್ರು ನಡುವೆ ವಿವಾದ ಎದ್ದಿದ್ದು, ಅದೀಗ ಪೊಲೀಸರ ಎದುರು ಹೋಗಿದೆ. ನಿರ್ಮಾಪಕ ಕಡ್ಡಿಪುಡಿ ಚಂದ್ರು ಅವರು ತಮಗೆ ನೀಡಬೇಕಾದ ಸಂಭಾವನೆಯನ್ನು ಪೂರ್ಣವಾಗಿ ನೀಡಿಲ್ಲ ಎಂದು ನಿರ್ದೇಶಕ ಪಿ.ಸಿ ಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ

ಅವರ ಲವ್​ ಬರ್ಡ್ಸ್ ಸಿನಿಮಾದಲ್ಲಿ 20 ಲಕ್ಷಕ್ಕೆ ನಿರ್ದೇಶಕರಾಗಿ ಕೆಲಸ ಮಾಡಲು ಒಪ್ಪಂದವಾಗಿತ್ತು. ಆದರೆ ಸಿನಿಮಾ ಎಡಿಟಿಂಗ್​​ಗಾಗಿ 5 ಲಕ್ಷ ರೂಪಾಯಿ ಹೆಚ್ಚುವರಿ ಹಣ ನೀಡುವ ಬಗ್ಗೆ ಮಾತುಕತೆಯಾಗಿತ್ತು. ಅಂದರೆ ಒಟ್ಟು 25 ಲಕ್ಷ ರೂಪಾಯಿಯನ್ನು ನಿರ್ಮಾಪಕರು ನನಗೆ ಕೊಡಬೇಕಿತ್ತು. ಆದರೆ ಇದುವರೆಗೆ ಒಟ್ಟು ಆರೂವರೆ ಲಕ್ಷ ರೂ. ಮಾತ್ರ ನೀಡಿದ್ದಾರೆ. ಉಳಿದ ಹಣ ಕೇಳಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಸೆನ್ಸಾರ್​ ಮತ್ತು ಇತರ ಸಂಗತಿಗಳನ್ನು ನನ್ನ ಗಮನಕ್ಕೆ ತರದೆ ಮಾಡಿ ಮುಗಿಸಿದ್ದಾರೆ ಎಂದು ಪಿ.ಸಿ.ಶೇಖರ್ ಹೇಳಿದ್ದಾರೆ.

ಇನ್ನೂ ಹದಿನೆಂಟೂವರೆ ಲಕ್ಷ ರೂ.ಬಾಕಿ ಉಳಿಸಿಕೊಂಡಿರುವ ಕಡ್ಡಿಪುಡಿ ಚಂದ್ರು ವಿರುದ್ಧ ನಕಲಿ ಸಹಿ ಆರೋಪವೂ ಎದ್ದಿದೆ. ‘ನನಗೆ ಎಲ್ಲ ಹಣ ನೀಡಿದ್ದಾಗಿ ದಾಖಲಿಸಿ ನಕಲಿ ಸಹಿ ಮಾಡಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಪಿ.ಸಿ.ಶೇಖರ್​ಗೆ ಅವಕಾಶ ಕೊಡಬೇಡಿ ಎಂದು ಹಲವಾರು ನಿರ್ಮಾಪಕರಿಗೆ ಹೇಳಿದ್ದಾರೆ’ ಎಂದು ಪಿ.ಸಿ.ಶೇಖರ್​ ತಿಳಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ARM Teaser: ಮಲಯಾಳಿ ಹಿರೋನ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ನಟ ರಕ್ಷಿತ್ ಶೆಟ್ಟಿ

ಪಿ.ಸಿ.ಶೇಖರ್​ ಅವರು ಕನ್ನಡ ಚಿತ್ರರಂಗದಲ್ಲಿ 2010ರಿಂದಲೂ ಸಕ್ರಿಯರಾಗಿದ್ದು, ದಿ ಟೆರರಿಸ್ಟ್​, ರಾಗಾ, ಇತ್ತೀಚೆಗೆ ತೆರೆಕಂಡ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ಲವ್​ ಬರ್ಡ್ಸ್​ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಕಡ್ಡಿಪುಡಿ ಚಂದ್ರು ಎಂದೇ ಖ್ಯಾತರಾದ ನಿರ್ಮಾಪಕ ಎಂ.ಚಂದ್ರು ಅವರು ‘ಕಡ್ಡಿಪುಡಿ, ಸ್ವಯಂವರ‘ ಇತ್ಯಾದಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ‘ಕೃಷ್ಣನ್​ ಲವ್​ ಸ್ಟೋರಿ, ಸಾಗರ ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Suhana Khan: ಬ್ರೇಕಪ್‌ ಬಗ್ಗೆ ಓಪನ್‌ ಆಗಿ ಮಾತನಾಡಿದ ಶಾರುಖ್‌ ಪುತ್ರಿ ಸುಹಾನಾ ಖಾನ್‌; ವಿಡಿಯೊ ಇಲ್ಲಿದೆ

Suhana Khan: ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಅವರು ಬ್ರೇಕಪ್‌ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ತೆರೆಕಂಡ ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಸುಹಾನಾ ಸದ್ಯ ತಮ್ಮ ತಂದೆಯೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ ಅವರ ಬ್ರೇಕಪ್‌ ಸುದ್ದಿ ವೈರಲ್‌ ಆಗಿದೆ. ಆ ಬಗೆಗಿನ ವಿವರ ಇಲ್ಲಿದೆ.

VISTARANEWS.COM


on

Suhana Khan
Koo

ಮುಂಬೈ: ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ಪುತ್ರಿ ಸುಹಾನಾ ಖಾನ್‌ (Suhana Khan) ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದೀಗ ಸುಹಾನಾ ಖಾನ್‌ ತಮ್ಮ ಬ್ರೇಕಪ್‌ ಘೋಷಿಸಿದ್ದಾರೆ. ಅರೇ! ಇದೇನಾಯ್ತು ಎಂದು ಅಚ್ಚರಿಗೆ ಒಳಗಾಗುವ ಮುನ್ನ ಈ ಸುದ್ದಿಯನ್ನು ಪೂರ್ತಿ ಓದಿ. ಅಷ್ಟಕ್ಕೂ ಅವರು ಸಂಬಂಧ ಮುರಿದುಕೊಂಡಿದ್ದ ಗೆಳೆಯನ ಜತೆ ಅಲ್ಲ. ಇಲ್ಲಿದೆ ಈ ಬಗೆಗಿನ ಪೂರ್ತಿ ವಿವರ.

ಸುಹಾನಾ ಖಾನ್‌ ಅಭಿನಯಿಸಿರುವ ಹೊಸ ಜಾಹೀರಾತು ಪ್ರಸಾರವಾಗಿದೆ. ಅದರಲ್ಲಿ ಆಕೆ ತಾನು ಸೋಪ್‌ನೊಂದಿಗೆ ಬ್ರೇಕಪ್‌ ಮಾಡಿಕೊಂಡು ಬಾಡಿ ವಾಶ್‌ನ ಸಖ್ಯ ಬೆಳೆಸಿರುವುದಾಗಿ ತಿಳಿಸಿದ್ದಾರೆ. ಹೌದು, ಭಾರತದ ಜನಪ್ರಿಯ ಲಕ್ಸ್‌ ಬ್ರ್ಯಾಂಡ್‌ನ ರೂಪದರ್ಶಿಯಾಗಿ ಸುಹಾನಾ ಖಾನ್‌ ನಟಿಸಿದ್ದಾರೆ. ಅದರಲ್ಲಿ ಅವರು ಇನ್ನು ಮುಂದೆ ಸೋಪ್‌ ಬಳಕೆ ಬಿಟ್ಟು ಬಾಡಿ ವಾಶ್‌ ಉಪಯೋಗಿಸುವುದಾಗಿ ತಿಳಿಸಿದ್ದಾರೆ.

ಶಾರುಖ್‌ ಖಾನ್‌ ಸುಮಾರು 19 ವರ್ಷಗಳಿಂದ ಲಕ್ಸ್‌ ಉತ್ಪನ್ನದ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಂಪನಿ ಅವರನ್ನು ಕೈಬಿಟ್ಟು ಅವರ ಪುತ್ರಿಗೆ ಮಣೆ ಹಾಕಿದೆ. ಅದರಂತೆ ಸುಹಾನಾ ಕಾಣಿಸಿಕೊಂಡಿರುವ ಲಕ್ಸ್‌ನ ಮೊದಲ ಜಾಹೀರಾತು ಮಂಗಳವಾರ ಪ್ರಸಾರವಾಗಿದೆ.

ಬಾತ್‌ರೂಮ್‌ನಲ್ಲಿ ಸುಹಾನಾ ಓಡಾಡುತ್ತಿರುವುದನ್ನು ತೋರಿಸುವ ಮೂಲಕ ಜಾಹೀರಾತು ಆರಂಭವಾಗುತ್ತದೆ. ಈ ವೇಳೆ ಅವರು ಸೋಪ್‌ನೊಂದಿಗೆ ಬ್ರೇಕಪ್‌ ಮಾಡಿಕೊಂಡಿರುವುದಾಗಿ ತಿಳಿಸುತ್ತಾರೆ. ಸೋಪ್‌ನ ಸುಗಂಧ ಕೆಲವು ಹೊತ್ತಿನಲ್ಲೇ ಮಾಯವಾಗುತ್ತದೆ. ಹೀಗಾಗಿ ಲಕ್ಸ್‌ನ ಹೊಸ ಉತ್ಪನ್ನ ಬಾಡಿ ವಾಶ್‌ ಬಳಸುವುದಾಗಿ ತಿಳಿಸುತ್ತಾರೆ. ಸದ್ಯ ಶಾರುಖ್‌ ಪುತ್ರಿಯ ಈ ಜಾಹೀರಾತು ಸಾಕಷ್ಟು ವೈರಲ್‌ ಆಗಿದೆ.

ಶಾರುಖ್‌ ಖಾನ್‌ ನೆನಪಿಸಿಕೊಂಡ ಅಭಿಮಾನಿಗಳು

ಈ ಜಾಹೀರಾತನ್ನು ನೋಡಿದ ಅನೇಕರಿಗೆ ಶಾರುಖ್‌ ಖಾನ್‌ ನೆನಪಿಗೆ ಬಂದಿದ್ದಾರೆ. ಅವರು 2005ರಲ್ಲಿ ಮೊದಲ ಬಾರಿ ಲಕ್ಸ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡ ರೀತಿಯನ್ನು ಸ್ಮರಿಸಿಕೊಂಡಿದ್ದಾರೆ. ಅದರಲ್ಲಿ ಶಾರುಖ್‌ ಬಾತ್‌ ಟಬ್‌ ಬಳಿ ಬರುತ್ತಾರೆ. ಅಲ್ಲಿ ಹೇಮಾ ಮಾಲಿನಿ, ಜೂಹು ಚಾವ್ಲಾ, ಕರೀನಾ ಕಪೂರ್‌ ಮತ್ತು ಶ್ರೀದೇವಿ ನಿಂತಿರುತ್ತಾರೆ. ಸದ್ಯ ಇದನ್ನೂ ಫ್ಯಾನ್ಸ್‌ ಪ್ರಸ್ತಾವಿಸಿದ್ದಾರೆ.

ಇದನ್ನೂ ಓದಿ: Suhana Khan: ಹಣೆಗೆ ಬಿಂದಿ ಇಟ್ಟು ಫೋಟೊ ಹಂಚಿಕೊಂಡ ಶಾರುಖ್‌ ಖಾನ್‌ ಪುತ್ರಿ

ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸದ್ಯ ಅವರು ಶಾರುಖ್‌ ಖಾನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ತಂದೆ-ಮಗಳು ಜತೆಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Continue Reading

ಸ್ಯಾಂಡಲ್ ವುಡ್

Kannada New Movie: ‘ಕನ್ನಡ ಮಾಧ್ಯಮ’ ಸಿನಿಮಾಕ್ಕೆ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಸಾಥ್; ಮೋಷನ್ ಪೋಸ್ಟರ್ ರಿಲೀಸ್

Kannada New Movie: ಕನ್ನಡದ ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಕನ್ನಡ ಚಿತ್ರತಂಗದ ಹೊಸ ಪ್ರತಿಭೆಗಳಿಗೆ ಯಾವತ್ತೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅದರಂತೆ ಇದೀಗ ಹೊಸಬರ ಪ್ರಯತ್ನ ‘ಕನ್ನಡ ಮಾಧ್ಯಮ’ ಸಿನಿಮಾಕ್ಕೆ ಸಾಥ್‌ ನೀಡಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಸೋಮವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದ್ದಾರೆ. ʼʼಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿʼʼ ಎಂದು ಹೇಳಿದ್ದಾರೆ.

VISTARANEWS.COM


on

Kannada New Movie
Koo

ಬೆಂಗಳೂರು: ಕಲ್ಕಿ ಪ್ರೊಡಕ್ಷನ್‌ನಲ್ಲಿ ವೆಂಕಟೇಶ್ ಎಸ್‌. ನಿರ್ಮಿಸುತ್ತಿರುವ ʼಕನ್ನಡ ಮಾಧ್ಯಮʼ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಸೋಮವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು (Kannada New Movie).

ದೊಡ್ಡರಂಗೇಗೌಡ ಮಾತನಾಡಿ, ”ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ. ಗೀತೆ ಪ್ರಸ್ತುತಿyಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲು ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿʼʼ ಎಂದು ಹೇಳಿದರು.

ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ”ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ‘ಕನ್ನಡ ಮಾಧ್ಯಮ’ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನ ಪಾತ್ರ ಮಾಡುತ್ತಿದ್ದೇನೆ” ಎಂದರು.

‘ಕನ್ನಡ ಮಾಧ್ಯಮ’ ಸಿನಿಮಾಗೆ ಅಖಿಲ್ ಪುತ್ತೂರು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಂದಹಾಗೇ ಅಖಿಲ್ ಅವರಿಗಿದು ನಿರ್ದೇಶಕನಾಗಿ ಮೊದಲ ಪ್ರಯತ್ನ. ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ –ಬರೆಯುವುದರ ಜತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮದ ಪ್ರಾಮುಖ್ಯತೆಯನ್ನು ತಿಳಿಸುವ ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್, ವಾಣಿ, ಅಖಿಲ್, ಜಾಹ್ನವಿ, ಚಿನ್ಮಯ್, ಶಿವಮೊಗ್ಗ ರಾಮಣ್ಣ, ಪ್ರದೀಪ್ ಕುಮಾರ್ ಮತ್ತಿತರರು ನಟಿಸುತ್ತಿದ್ದಾರೆ.

ಸಿ.ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ಒದಗಿಸುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ತಿಂಗಳ 7ರಿಂದ ಶೂಟಿಂಗ್ ಶುರುವಾಗ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Continue Reading

ಸಿನಿಮಾ

Hassan Pen Drive Case: ಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ; ಕಿಡಿ ಕಾರಿದ ಬಹುಭಾಷಾ ನಟಿ ಪೂನಂ ಕೌರ್

Hassan Pen Drive Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಇದೀಗ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಪೂನಂ ಕೌರ್ ಪ್ರತಿಕ್ರಿಯಿಸಿದ ಜೆಡಿಎಸ್‌ ಮುಖಂಡನ ವಿರುದ್ಧ ಕಿಡಿಕಾರಿದ್ದಾರೆ. ʼಈ ರೀತಿಯ ಕೃತ್ಯ ಎಸಗಿದ ಪ್ರಜ್ವಲ್ ರೇವಣ್ಣ ಅವರನ್ನು ಬಿಡಬೇಡಿʼʼ ಎಂದು ಅವರು ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಪ್ರಜ್ವಲ್‌ ಬಳಿ ದುಡ್ಡು ಹಾಗೂ ಅಧಿಕಾರ ಇದೆ. ಹೀಗಾಗಿ ಅವರ ವಿರುದ್ಧ ಧ್ವನಿ ಎತ್ತಿದರೂ, ದೂರು ಕೊಟ್ಟರೂ ಶಿಕ್ಷೆಯಾಗುತ್ತದೆ ಎನ್ನುವ ಬಗ್ಗೆ ಗ್ಯಾರಂಟಿ ಇಲ್ಲʼʼ ಎಂದು ಅವರು ಹೇಳಿದ್ದಾರೆ.

VISTARANEWS.COM


on

Hassan Pen Drive Case
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೀಗ ಈ ಬಗ್ಗೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಪೂನಂ ಕೌರ್ (Poonam Kaur) ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ.

ʼʼಪ್ರಜ್ವಲ್ ರೇವಣ್ಣ ಮೃಗಕ್ಕಿಂತ ಕಡೆ. 2,900ಕ್ಕೂ ಹೆಚ್ಚು ವಿಡಿಯೊಗಳನ್ನು ಮಾಡಿದ್ದಾರೆ ಎಂದರೆ ಅವರೆಷ್ಟು ವಿಕೃತ ಮನೋಭಾವ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಾಣಿಗಳು ಕೂಡ ರೀತಿ ಮಾಡೋದಿಲ್ಲʼʼ ಎಂದು ಹೇಳಿದ್ದಾರೆ. ʼʼಈ ರೀತಿಯ ಕೃತ್ಯ ಎಸಗಿದ ಪ್ರಜ್ವಲ್ ರೇವಣ್ಣ ಅವರನ್ನು ಬಿಡಬೇಡಿʼʼ ಎಂದು ಅವರು ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಪ್ರಜ್ವಲ್‌ ಬಳಿ ದುಡ್ಡು ಹಾಗೂ ಅಧಿಕಾರ ಇದೆ. ಹೀಗಾಗಿ ಅವರ ವಿರುದ್ಧ ಧ್ವನಿ ಎತ್ತಿದರೂ, ದೂರು ಕೊಟ್ಟರೂ ಶಿಕ್ಷೆಯಾಗುತ್ತದೆ ಎನ್ನುವ ಬಗ್ಗೆ ಗ್ಯಾರಂಟಿ ಇಲ್ಲʼʼ ಎಂದು ಪೂನಂ ಕೌರ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ʼʼಹೀಗಾಗಿ ನಾನು ಕೈ ಮುಗಿದು ಬೇಡಿಕೊಳ್ತಿನಿ. ಪ್ರಜ್ಚಲ್‌ಗೆ ಯಾರು ವೋಟ್ ಹಾಕಬೇಡಿ. ಅಂತಹವರು ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇರೋದಿಲ್ಲʼʼ ಎಂದು ಹೇಳಿದ್ದಾರೆ.

ʼʼಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಪ್ರತಿ ಮನೆಯ ಹೆಣ್ಣು ಮಗಳು ಎಚ್ಚರವಾದಾಗ ಮಾತ್ರ ದೇಶದ ಹೆಣ್ಣು ಮಕ್ಕಳು ಬಚವಾಗಲು ಸಾಧ್ಯ. ನಮ್ಮ ದೇಶ ರಾವಣ ರಾಜ್ಯದ ಕಡೆ ಹೋಗುತ್ತಿದೆಯಾ ಅಥವಾ ರಾಮರಾಜ್ಯದ ಕಡೆ ಹೋಗುತ್ತಿದೆಯಾ ?ʼʼ ಎಂದೂ ಅವರು ಪ್ರಶ್ನಿಸಿದ್ದಾರೆ.

ಪೂನಂ ಕೌರ್‌ ಹಿನ್ನೆಲೆ

ಪೂನಂ ಕೌರ್‌ ಪಂಜಾಬಿ ಕುಟುಂಬಕ್ಕೆ ಸೇರಿದ ಹೈದರಾಬಾದ್ ಹುಡುಗಿ. ತೇಜ ನಿರ್ದೇಶನದ ‘ಒಕ್ಕ ವಿಚಿತ್ರಂ’ ತೆಲುಗು ಚಿತ್ರದ ಮೂಲಕ 2006ರಲ್ಲಿ ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ಕನ್ನಡ, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದರು. 2008ರಲ್ಲಿ ತೆರೆಕಂಡ ಟಿ.ನಾಗಣ್ಣ ನಿರ್ದೇಶನದ, ಶಿವರಾಜಕುಮಾರ್ ಅಭಿನಯಿಸಿದ ‘ಬಂಧು-ಬಳಗ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ತಮ್ಮ 15 ವರ್ಷದ ಸಿನಿಕೆರಿಯರ್‌ನಲ್ಲಿ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ʼನಾತಿಚರಾಮಿʼ ತೆಲುಗು ಚಿತ್ರದ ಬಳಿಕ ಪೂನಂ ಬಣ್ಣ ಹಚ್ಚಿಲ್ಲ.

ಸ್ಫೋಟಕ ಹೇಳಿಕೆ ನೀಡಿದ ಮಾಜಿ ಕಾರು ಚಾಲಕ

ಈ ಮಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್‌ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವಿಡಿಯೊಗಳು ನನ್ನ ಬಳಿ ಇತ್ತು. ನಾನಿದನ್ನು ದೇವರಾಜೇಗೌಡ ಅವರಿಗೆ ಕೊಟ್ಟಿದ್ದೆ. ಅವರು ಇದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್‌ ರೇವಣ್ಣ ಕೇಸ್‌; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್‌ ಏನು?

ಕಾರ್ತಿಕ್ ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೊ ಮಾಡಿದ್ದು, ವಿಡಿಯೊ ಲೀಕ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸವನ್ನು ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು. ಹಿಂಸೆ ಕೊಟ್ಟರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ. ಆ ಸಮಯದಲ್ಲಿ ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವಿಡಿಯೊ ರಿಲೀಸ್ ಮಾಡಬಾರದು ಎಂದು ಅಂದು ನನ್ನ ವಿರುದ್ಧ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದರು. ನಿನ್ನ ಬಳಿ ಇರುವ ವಿಡಿಯೊ, ಫೋಟೊಗಳನ್ನು ಕೊಡು. ನಾನು ಯಾರಿಗೂ ತೋರಿಸುವುದಿಲ್ಲ ಎಂದು ದೇವರಾಜೇಗೌಡ ಕೇಳಿದ್ದರು. ಅವರನ್ನು ನಂಬಿ ನನ್ನ ಬಳಿಯಿದ್ದ ವಿಡಿಯೊದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಏನೋ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Mahanati Show: ʼಮಹಾನಟಿ ಶೋʼ ವಿರುದ್ಧ ಮೆಕ್ಯಾನಿಕ್‌ಗಳ ಆಕ್ರೋಶ; ಸ್ಪರ್ಧಿ ಗಗನಾ, ರಮೇಶ್‌ ಅರವಿಂದ್‌ ಸೇರಿ ಐವರ ವಿರುದ್ಧ ಮತ್ತೊಂದು ದೂರು

Mahanati Show: ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ʼಮಹಾನಟಿʼ ರಿಯಾಲಿಟಿ ಶೋ ಸ್ಪರ್ಧಿ ಗಗನಾ ಹಾಗೂ ಜಡ್ಜ್‌ಗಳಾ ನಟ ರಮೇಶ್‌ ಅರವಿಂದ್‌, ನಟಿ ಪ್ರೇಮಾ ಸೇರಿ ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮೆಕ್ಯಾನಿಕ್‌ ಮಿತ್ರ ವೆಲ್‌ಫೇರ್‌ ಅಸೋಸಿಯೇಷನ್‌ ದೂರು ನೀಡಿದೆ.

VISTARANEWS.COM


on

Mahanati Show
Koo

ಬೆಂಗಳೂರು: ʼಮಹಾನಟಿʼ ರಿಯಾಲಿಟಿ ಶೋ (Mahanati Show) ಸ್ಪರ್ಧಿ ಗಗನಾ ಹೇಳಿಕೆಯಿಂದ ಮೆಕ್ಯಾನಿಕ್‌ ವರ್ಗಕ್ಕೆ ನೋವಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ದ್ವಿಚಕ್ರವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದೂರು ನೀಡಿದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ, ಅಪಮಾನಿಸಲಾಗಿದೆ ಎಂದು ಆರೋಪಿಸಿ ʼಮಹಾನಟಿʼ ರಿಯಾಲಿಟಿ ಶೋ ನಡೆಸುವ ಜೀ ವಾಹಿನಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖ ನಟ, ನಟಿಯರು ಹಾಗೂ ಸ್ಪರ್ಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಕ್ಯಾನಿಕ್‌ ಮಿತ್ರ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಆರ್‌.ನಾಗೇಶ್‌ ನೇತೃತ್ವದಲ್ಲಿ ಪದಾಧಿಕಾರಿಗಳು, ಸುಬ್ರಮಣ್ಯನಗರ ಪೊಲೀಸ್‌ ಠಾಣೆಗೆ ದೂರು‌ ನೀಡಿದ್ದಾರೆ.

ಮಹಾನಟಿ ಶೋ ಜಡ್ಜ್‌ಗಳಾದ ನಟಿ ಪ್ರೇಮಾ, ನಟ ರಮೇಶ್‌ ಅರವಿಂದ್‌, ನಿರ್ದೇಶಕ ತರುಣ್‌ ಸುಧೀರ್‌, ನಿರೂಪಕಿ ಅನುಶ್ರೀ ಹಾಗೂ ಸ್ಪರ್ಧಿ ಗಗನಾ ವಿರುದ್ಧ ದೂರು ದಾಖಲಾಗಿದೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಎಂಬ ರಿಯಾಲಿಟಿ ಶೋನ ಒಂದು ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ತೀರಾ ಕೆಟ್ಟದಾಗಿ ಅಪಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಕೋಟ್ಯಂತರ ಜನರು ನೋಡುತ್ತಾರಾದ್ದರಿಂದ ನಮಗೆ ಆಗಿರುವ ಅವಮಾನಕ್ಕೆ ಎಣೆಯೇ ಇಲ್ಲದಂತಾಗಿದೆ. ಈ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ, ಕಾರ್ಯಕ್ರಮದ ಜಡ್ಜ್ ಆಗಿರುವ ನಟ ರಮೇಶ್ ಅರವಿಂದ್ ಅವರು ಸ್ಪರ್ಧಿಯೊಬ್ಬರಿಗೆ ಟಾಸ್ಕ್ ನೀಡುತ್ತಾರೆ. ನಿಮ್ಮ ತಂಗಿ ಒಬ್ಬ ಮೆಕ್ಯಾನಿಕ್ ಜತೆ ಓಡಾಡುವುದನ್ನು ನೀವು ನೋಡುತ್ತೀರಿ. ನಿಮ್ಮ ತಂಗಿ ಮನೆಗೆ ಬಂದಾಗ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿ, ಅಭಿನಯಿಸಲು ಹೇಳುತ್ತಾರೆ. ಈ ಸಂದರ್ಭದಲ್ಲಿ ಸ್ಪರ್ಧಿ ಹೇಳುವ ಮಾತುಗಳು ಮೆಕ್ಯಾನಿಕ್ ಸಮುದಾಯಕ್ಕೆ ಅಪಮಾನಕಾರಿಯಾಗಿರುತ್ತದೆ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ | Mahanati Show: ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕೆಟ್ಟ ಡೈಲಾಗ್‌ ಹೊಡೆದ ಗಗನಾ; ರಮೇಶ್‌ ಸೇರಿ ಹಲವರ ವಿರುದ್ಧ ದೂರು!

“ನೋಡು ಐಶು, ನೀನು ಅವನ ಜತೆ ಬೈಕಲ್ಲಿ ಸುತ್ತಾಡೋದನ್ನು ನಾನು ನೋಡಿದೆ. ಬಿದ್ರೆ ಯಾವಾಗೂ, ತುಪ್ಪದ ಕೊಳದಲ್ಲಿ ಬೀಳಬೇಕೇ ಹೊರತು ಕೊಚ್ಚೆಯ ಕೊಳೆಯಲ್ಲಿ ಬೀಳಬಾರದು. ಇದನ್ನ ನೆನಪಿಟ್ಕೋ. ಲೈಫು ನೀನು ಅಂದುಕೊಂಡಷ್ಟು ಈಜಿಯಾಗಿರೋದಿಲ್ಲ. ದುಡ್ಡು ಇಂಪಾರ್ಟೆಂಟ್ ಅಲ್ಲ, ಪ್ರೀತಿನೇ ಇಂಪಾರ್ಟೆಂಟ್ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡು ಯಾವಾಗಲೂ ಬೇಕು. ಪ್ರೀತಿ ಮಾಡ್ಕೊಂಡೇ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರ ಆಗಲ್ಲ. ನೀನು ಮೆಕಾನಿಕ್ ಜತೆನೇ ಹೋಗಿ ಅವನ ಜತೆ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರೆ ತಪ್ಪಾಗುತ್ತೆ” ಎಂದು ಆಕೆ ಹೇಳುತ್ತಾರೆ.

ಸ್ಪರ್ಧಿ ಇಷ್ಟು ಕೆಟ್ಟದಾಗಿ ಒಂದು ದೊಡ್ಡ ಶ್ರಮಿಕ ವರ್ಗದ ಬಗ್ಗೆ ಮಾತನಾಡುತ್ತಿದ್ದರೂ ಜಡ್ಜ್‌ಗಳಾದ ರಮೇಶ್ ಅರವಿಂದ್, ನಟಿ ಪ್ರೇಮ, ನಿರ್ದೇಶಕ ತರುಣ್ ಸುಧೀರ್, ಆಂಕರ್ ಅನುಶ್ರೀ ಮತ್ತು ಅತಿಥಿಗಳಾಗಿ ಪಾಲ್ಗೊಂಡಿದ್ದ ನಟ ನಟಿಯರು ಹೀಗೆ ಮಾತನಾಡುವುದು ತಪ್ಪು ಎಂದು ಹೇಳುವ ಬದಲಾಗಿ, ಆಕೆಯ ಮಾತುಗಳಿಗೆ ಚಪ್ಪಾಳೆ ಹೊಡೆದು, ಪ್ರೋತ್ಸಾಹಿಸುತ್ತಾರೆ.

ಮೆಕ್ಯಾನಿಕ್ ವೃತ್ತಿಯೂ ಎಲ್ಲ ವೃತ್ತಿಗಳ ಹಾಗೆಯೇ ಗೌರವಾನ್ವಿತ ವೃತ್ತಿ. ಎಂಜಿನಿಯರ್, ಡಾಕ್ಟರ್, ಬ್ಯುಸಿನೆಸ್ ಮ್ಯಾನ್, ಪೊಲೀಸ್, ಮಿಲಿಟರಿಯಿಂದ ಹಿಡಿದು ಚಪ್ಪಲಿ ಹೊಲೆಯುವ ಕಾಯಕದವರೆಗೆ ಎಲ್ಲ ವೃತ್ತಿಗಳೂ ಶ್ರೇಷ್ಠ ವೃತ್ತಿಗಳೇ ಆಗಿವೆ. ಯಾವ ವೃತ್ತಿಯೂ ಕನಿಷ್ಠವಲ್ಲ, ಯಾವ ವೃತ್ತಿ ಮಾಡುವವನೂ ಕೊಚ್ಚೆ ಅಲ್ಲ. ಇದು ಈ ಮಹಾನಟ ನಟಿಯರಿಗೆ ಅರ್ಥವಾಗದೇ ಇರುವುದು ಆಶ್ಚರ್ಯಕರವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಮಹಾನಟಿ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ಕೆಲಸ ಮಾಡುವವರು ಕೊಚ್ಚೆ ಎಂದು ನಿಂದಿಸಲಾಗಿದೆ. ಮೆಕಾನಿಕ್ ಮನೆಯವರು ಗ್ರೀಸ್ ತಿಂದು ಬದುಕುತ್ತಾರೆ ಎಂದು ಬಿಂಬಿಸಲಾಗಿದೆ. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವೂ ಆಗಿರುವುದರಿಂದ, ನಮ್ಮ ಬಗ್ಗೆ ಇಷ್ಟು ಕೊಳಕಾಗಿ ನಿಂದಿಸಿರುವುದರಿಂದ ನಾವುಗಳು ತಲೆ ಎತ್ತಿಕೊಂಡು ಓಡಾಡದಂತಾಗಿದೆ. ಇದೇ ಮಾತುಗಳನ್ನು ವೈದ್ಯ, ಪೊಲೀಸ್, ವಕೀಲ, ಪತ್ರಕರ್ತ, ಚಿತ್ರನಟರು ಅಥವಾ ಇನ್ಯಾವುದೇ ವೃತ್ತಿಪರ ಸಮುದಾಯದ ವಿರುದ್ಧ ಮಾತನಾಡಿದ್ದರೆ ಅವರು ಸುಮ್ಮನೆ ಇರುತ್ತಿದ್ದರೆ? ಅದಕ್ಕೂ ರಮೇಶ್ ಅರವಿಂದ್ ಅವರಾದಿಯಾಗಿ ಎಲ್ಲರೂ ಆಕೆಯನ್ನು ಹೊಗಳಿ ಅಟ್ಕ್ಕೇರಿಸುತ್ತಾರೆ. ಆ ಸಂದರ್ಭದಲ್ಲಿ ಇಡೀ ಒಂದು ಶ್ರಮಿಕ ವರ್ಗವನ್ನು ಕೊಚ್ಚೆ ಗುಂಡಿಯಲ್ಲಿರುವವರು ಹಾಗೂ ತಮ್ಮ ಕುಟುಂಬದವರಿಗೆ ಅನ್ನಕ್ಕೆ ಬದಲಾಗಿ ಗ್ರೀಸನ್ನು ತಿನ್ನಿಸುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಒಂದು ಶ್ರಮಿಕ ಸಮುದಾಯವನ್ನು ಕೊಚ್ಚೆ ಗುಂಡಿಯಲ್ಲಿರುವವರು, ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವ ಈ ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿ ಮುಖ್ಯಸ್ಥರು, ಜಡ್ಜ್‌ಗಳಾದ ರಮೇಶ್ ಅರವಿಂದ್ ಮತ್ತು ಪ್ರೇಮ, ತರುಣ್ ಸುಧೀರ್, ಆಂಕರ್ ಅನುಶ್ರೀ, ಸ್ಪರ್ಧಿ ಗಗನ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವ, ಸಮಾಜದಲ್ಲಿ ಅಶಾಂತಿ ಹರಡುವ, ಒಂದಿಡೀ ಶ್ರಮಿಕ ಸಮುದಾಯವನ್ನು ಕೊಚ್ಚೆ ಎಂದು ನಿಂದಿಸಿ ಅವರ ಆತ್ಮಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಸಂಘ ಕೋರಿದೆ.

Continue Reading
Advertisement
Kaladarpana-Art Reflects
ಬೆಂಗಳೂರು3 hours ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ3 hours ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ3 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest4 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ4 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ4 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ4 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ4 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Lok Sabha Election
Lok Sabha Election 20244 hours ago

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ22 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌