horoscope today read your daily horoscope predictions for may 23, 2023Horoscope Today : ಮಿಥುನ ರಾಶಿಯವರಿಗೆ ಉತ್ಸಾಹದ ದಿನ; ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? - Vistara News

ಪ್ರಮುಖ ಸುದ್ದಿ

Horoscope Today : ಮಿಥುನ ರಾಶಿಯವರಿಗೆ ಉತ್ಸಾಹದ ದಿನ; ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಚೌತಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Horoscope Today daily horoscope
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ (23-05-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.

ತಿಥಿ: ಚೌತಿ 24:57 ವಾರ: ಮಂಗಳವಾರ
ನಕ್ಷತ್ರ: ಆರಿದ್ರಾ 12:37 ಯೋಗ: ಶೂಲ 16:44
ಕರಣ: ವಣಿಜ 12:04 ಇಂದಿನ ವಿಶೇಷ: ವರಚತುರ್ಥಿ ವ್ರತ, ಉಮಾವತಾರ ವ್ರತ.
ಅಮೃತಕಾಲ: ರಾತ್ರಿ 01 ಗಂಟೆ 48 ನಿಮಿಷದಿಂದ 03 ಗಂಟೆ 32 ನಿಮಿಷದವರೆಗೆ.

ಸೂರ್ಯೋದಯ : 05:53 ಸೂರ್ಯಾಸ್ತ : 06:40

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ಉತ್ಸಾಹದ ವಾತಾವರಣ ಇರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಬಂಧು ಮಿತ್ರರಿಂದ ಸಹಕಾರ. ಆರ್ಥಿಕ ಪ್ರಗತಿ ಸಾಧಾರಣ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಇದರಿಂದಾಗಿ ಕಾರ್ಯದಲ್ಲಿ ಯಶಸ್ಸು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ಶುಭ ಫಲ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಜೀವನದಲ್ಲಿ ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕವಾಗಿ ಪ್ರಗತಿ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪುರ್ಣವಾಗುವುದು. ಮನೆಯಲ್ಲಿ ಪರಸ್ಪರ ಸಹಕಾರ ಸಿಗುವುದು. ಉತ್ಸಾಹದ ದಿನವಿದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆಕರ್ಷಕ ವ್ಯಕ್ತಿತ್ವ ಹೊಂದಿರುವ ನೀವು ಇಂದು ಇತರರನ್ನು ಆಕರ್ಷಿಸುವಿರಿ. ಆರ್ಥಿಕ ಪ್ರಗತಿ ಸಾಧಾರಣ ವಿದ್ದರೂ ಸಮರ್ಥವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಪ್ರಗತಿ. ಮಡದಿಯ ಪ್ರೀತಿಗೆ ಸೋಲುವಿರಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗ ದೊರೆಯುವ ಭರವಸೆ ಮೂಡಲಿದೆ. ಆರ್ಥಿಕ ಪ್ರಗತಿ. ಪರಿಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಮನೆಯಲ್ಲಿ ಪರಸ್ಪರರ ಮಧ್ಯೆ ಕಲಹದಿಂದ ವಾತಾವರಣ ಹದಗೆಡಡಬಹುದು. ಕೆಲಸದಲ್ಲಿ ಹಿರಿಯರಿಂದ ಒತ್ತಡ, ಎಚ್ಚರಿಕೆ ವಹಿಸಿ. ಆರ್ಥಿಕ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಉತ್ತಮ. ಮನೆಯಲ್ಲಿ ಸಂತೋಷದ ದಿನ.
ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ನೀಡುವರು. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ, ನಿಮಗೆ ಇಂದು ಯಶಸ್ಸು ಸಿಗುವುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟು ಮಾಡಬಹುದು. ಉದಾಸೀನ ಮಾಡುವುದು ಬೇಡ. ಆಶಾವಾದಿಗಳಾಗಿರಿ. ಕುಲದೇವರನ್ನು ಸ್ಮರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಮದುವೆಯಾಗಿ ವರ್ಷಗಳೇ ಕಳೆದರೂ ಮಕ್ಕಳಾಗಿಲ್ಲವೇ? ಈ ವಿಡಿಯೋ ನೋಡಿ.
Horoscope Today

ಮಕರ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ಒತ್ತಡ ಉಂಟಾಗುವ ಸಾಧ್ಯತೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡವನ್ನು ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕು ಮಾತುಗಳಿಗೆ ದ್ವನಿಯಾಗಬೇಡಿ. ಉದ್ಯೋಗದಲ್ಲಿ ಮಿಶ್ರ ಫಲ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3

Horoscope Today

ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂವಾಗದಿರಲಿ. ಆರ್ಥಿಕ ನಷ್ಟ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ : ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

Rohit Sharma Birthday: ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ.

VISTARANEWS.COM


on

Rohit Sharma Birthday
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ನಾಯಕ, ಹಿಟ್​ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್​ ಅವರ ಪೂರ್ಣ ಹೆಸರು ರೋಹಿತ್ ಗುರುನಾಥ್ ಶರ್ಮಾ. ಏಕದಿನ ಕ್ರಿಕೆಟ್​​ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ಇವರದ್ದು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರೋಹಿತ್​ಗೆ ಬಿಸಿಸಿಐ, ಮುಂಬೈ ಇಂಡಿಯನ್ಸ್​ ಸೇರಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ನವೆಂಬರ್ 2013 ರಲ್ಲಿ, ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ, ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ 3 ಮಾದರಿಯ ನಾಯಕರಾಗಿದ್ದಾರೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಎಲ್ಲ ಲೀಗ್​ ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಸಾರಥ್ಯದಲ್ಲೇ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್​ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

CET Exam: ಸರ್ಕಾರ ರಚಿಸಿದ್ದ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಸಿಇಟಿ ಮರುಪರೀಕ್ಷೆ ನಡೆಸದೇ ಇರಲು ಹಾಗೂ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

VISTARANEWS.COM


on

CET exam 2024
Koo

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET exam 2024) ಪಠ್ಯೇತರ ಪ್ರಶ್ನೆಗಳಿಂದ ಉಂಟಾಗಿದ್ದ ಗೊಂದಲವನ್ನು ಸರ್ಕಾರ ಪರಿಹರಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯುಜಿಸಿಇಟಿ -2024ರ ನಾಲ್ಕು ವಿಷಯದ ಪರೀಕ್ಷೆಗಳಿಗೆ ತಾತ್ಕಾಲಿಕ ಸರಿ ಉತ್ತರಗಳನ್ನು (Key Answers) ಪ್ರಕಟಿಸಿದೆ.

ಮೇ 7ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದಿಂದ ಹೊರತಾದ 50 ಪ್ರಶ್ನೆಗಳನ್ನು ಕೇಳಿದ್ದು, ಇವುಗಳನ್ನು ಕೀ ಉತ್ತರದ ಪಟ್ಟಿಯಿಂದ ಕೈ ಬಿಡಲಾಗಿದೆ. ಉಳಿದ 190 ಪ್ರಶ್ನೆಗಳಿಗೆ ಕೀ ಉತ್ತರಗಳನ್ನು ಪ್ರಾಧಿಕಾರದ kea.kar.nic.in ವೆಬ್ಸೈಟ್‌ನನಲ್ಲಿ ಪ್ರಕಟಿಸಲಾಗಿದೆ. ಇವುಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪ್ರಾಧಿಕಾರದ ಆನ್ಲೈನ್ ಪೋರ್ಟಲ್‌ ಮೂಲಕ ಏಪ್ರಿಲ್ 30ರಂದು ಬೆಳಗ್ಗೆ 11ರಿಂದ ಮೇ 7ರ ಬೆಳಗ್ಗೆ 11ರೊಳಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಈ ಮೂಲಕ ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿ ಉಂಟಾಗಿದ್ದ ಗೊಂದಲ, ಮರುಪರೀಕ್ಷೆಗಳ ಆತಂಕ ಬಗೆಹರಿದಿದೆ. ಸರ್ಕಾರ ರಚಿಸಿದ್ದ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಸಿಇಟಿ ಮರುಪರೀಕ್ಷೆ ನಡೆಸದೇ ಇರಲು ಹಾಗೂ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ವೇಳೆ ಇನ್ನು ಮುಂದೆ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಈ ರೀತಿಯ ಲೋಪಗಳಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಏ.18 ಮತ್ತು 19ರಂದು ನಡೆಸಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು.

ಇದನ್ನೂ ಓದಿ: CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

Continue Reading

ಪ್ರಮುಖ ಸುದ್ದಿ

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Covishield Vaccine: ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

VISTARANEWS.COM


on

Covishield Vaccine
Koo

ಹೊಸದಿಲ್ಲಿ: ಕೊರೊನಾ (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ.

ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಪ್ರಕರಣದ ಮೊದಲ ದೂರುದಾರರಾದ ಜೇಮೀ ಸ್ಕಾಟ್ ಅವರು ಏಪ್ರಿಲ್ 2021ರಲ್ಲಿ ಲಸಿಕೆಯನ್ನು ಪಡೆದಿದ್ದೇನೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ನಂತರ ಶಾಶ್ವತ ಮಿದುಳಿನ ಗಾಯಕ್ಕೆ ಕಾರಣವಾಯಿತು. ಇದು ಮೆದುಳು ಚುರುಕಾಗಿರುವುದನ್ನು ತಡೆಯಿತು. ಆಸ್ಪತ್ರೆಯು ನಾನು ಸಾಯುತ್ತೇನೆ ಎಂದು ನನ್ನ ಹೆಂಡತಿಗೆ ಮೂರು ಬಾರಿ ಹೇಳಿದೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಟ್ರಾಜೆನೆಕಾ ಈ ಪ್ರಕರಣಗಳನ್ನು ವಿರೋಧಿಸಿದೆ. ಆದರೆ ಫೆಬ್ರವರಿಯಲ್ಲಿ ನ್ಯಾಯಾಲಯದ ದಾಖಲೆಗಳಲ್ಲಿ ಒಂದರಲ್ಲಿ “ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು” ಎಂದು ಹೇಳಿದೆ. TTS (ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್) ಮಾನವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುತ್ತದೆ.

“AZ ಲಸಿಕೆಯು ಬಹಳ ಅಪರೂಪದ ಸಂದರ್ಭಗಳಲ್ಲಿ TTSಗೆ ಕಾರಣವಾಗಬಹುದು ಎಂದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ. ಇದಲ್ಲದೆ, AZ ಲಸಿಕೆ (ಅಥವಾ ಯಾವುದೇ ಲಸಿಕೆ) ಅನುಪಸ್ಥಿತಿಯಲ್ಲಿ TTS ಸಹ ಸಂಭವಿಸಬಹುದು. ಯಾವುದೇ ವ್ಯಕ್ತಿಯಲ್ಲಿ ಅಸ್ವಸ್ಥತೆಯ ಕಾರಣವನ್ನು ತಜ್ಞರು ನೀಡುವ ಪುರಾವೆಗಳಿಂದ ದೃಢೀಕರಿಸಬೇಕಿದೆ” ಎಂದು ಅಸ್ಟ್ರಾಜೆನೆಕಾ ಹೇಳಿದೆ.

ಅಸ್ಟ್ರಾಜೆನೆಕಾ ಸ್ಕಾಟ್ಲೆಂಡ್‌ನಲ್ಲಿ ಈ ಕೇಸುಗಳನ್ನು ಎದುರಿಸುತ್ತಿದೆ. ಸಂತ್ರಸ್ತರಿಗೆ ಅದು ಪಾವತಿ ಮಾಡಬೇಕಾಗಬಹುದು. ಇತ್ತೀಚಿನ ಕಂಪನಿಯ ನಿಲುವು 2023ರ ಅದರ ನಿಲುವಿಗೆ ವಿರುದ್ಧವಾಗಿದೆ. ಅದರಲ್ಲಿ ಜೇಮೀ ಸ್ಕಾಟ್ ಅವರ ವಕೀಲರಿಗೆ “ಟಿಟಿಎಸ್ ಸಾಮಾನ್ಯ ಮಟ್ಟದಲ್ಲಿ ಲಸಿಕೆಯಿಂದ ಉಂಟಾಗುತ್ತದೆ ಎಂದು ನಾವು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿತ್ತು. ಲಸಿಕೆಯು “ದೋಷಯುಕ್ತ” ಮತ್ತು ಅದರ ಪರಿಣಾಮಕಾರಿತ್ವವು “ಅಗಾಧವಾಗಿ ಅತಿಯಾಗಿ ಹೇಳಲ್ಪಟ್ಟಿದೆ” ಎಂಬ ವಕೀಲರ ಮಾತುಗಳನ್ನು ಅಸ್ಟ್ರಾಜೆನೆಕಾ ನಿರಾಕರಿಸಿದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು.

ಇದನ್ನೂ ಓದಿ: Guarantee Scheme: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ಕೊಡಲೂ ಸರ್ಕಾರದಲ್ಲಿ ಹಣವಿಲ್ಲ?

Continue Reading

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading
Advertisement
Rohit Sharma Birthday
ಕ್ರೀಡೆ12 mins ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ18 mins ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Baba Ramdev
ದೇಶ23 mins ago

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

CET exam 2024
ಪ್ರಮುಖ ಸುದ್ದಿ43 mins ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Covishield Vaccine
ಪ್ರಮುಖ ಸುದ್ದಿ1 hour ago

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ದೇಶ1 hour ago

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Ayushman Bharat Diwas
ಆರೋಗ್ಯ2 hours ago

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Onion Benefits
ಆರೋಗ್ಯ2 hours ago

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

rajamarga column srikant bolla
ಅಂಕಣ2 hours ago

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Karnataka weather
ಕರ್ನಾಟಕ2 hours ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ4 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202420 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202421 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌