Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ - Vistara News

ವೈರಲ್ ನ್ಯೂಸ್

Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ

ಇಷ್ಟು ದಿನಗಳವರೆಗೆ ಪೆಟ್ರೋಲ್​ ಬಂಕ್​ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್​ ಬಂಕ್​​ಗಳೂ ಸ್ವೀಕರಿಸುತ್ತಿಲ್ಲ.

VISTARANEWS.COM


on

Petrol pump attendant retrieves petrol out of scooter For giving 2000 RS note in Uttar Pradesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2000 ರೂಪಾಯಿ ನೋಟನ್ನು ಆರ್​​ಬಿಐ ಹಿಂಪಡೆದ ಬೆನ್ನಲ್ಲೇ, ಎಲ್ಲರೂ ತಮ್ಮ ಬಳಿ ಇರುವ ನೋಟನ್ನು ಹೇಗಾದರೂ ದಾಟಿಸಬೇಕು ಎಂದೇ ಪ್ರಯತ್ನ ಮಾಡುತ್ತಿದ್ದಾರೆ. 2000 ರೂಪಾಯಿ ನೋಟನ್ನು (Rs 2,000 Notes) ಬದಲಿಸಿಕೊಳ್ಳಲು/ಬ್ಯಾಂಕ್​​ನಲ್ಲಿ ಡಿಪೋಸಿಟ್ ಇಡಲು ಆರ್​​ಬಿಐ ಸೆಪ್ಟೆಂಬರ್​ 30ರವರೆಗೆ ಸಮಯ ನೀಡಿದೆ. ಆದರೂ ಕೆಲವರು ಅಂಗಡಿಗಳಲ್ಲೋ, ಪೆಟ್ರೋಲ್ ಬಂಕ್​ಗಳಲ್ಲೋ ಅದನ್ನು ನಿಧಾನವಾಗಿ ದಾಟಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ಈ ಉಪಾಯ ಮಾಡಲು ಹೋದವನೊಬ್ಬನಿಗೆ ಪೆಟ್ರೋಲ್ ಬಂಕ್​ ಸಿಬ್ಬಂದಿಯೊಬ್ಬ ತಿರುಗೇಟು ನೀಡಿದ ಘಟನೆ ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ನಡೆದಿದೆ.

ಜಲೌನ್​​ನಲ್ಲಿರುವ ಪೆಟ್ರೋಲ್​ ಬಂಕ್ ಒಂದಕ್ಕೆ ತನ್ನ ಸ್ಕೂಟರ್ ತೆಗೆದುಕೊಂಡು ಹೋದವನೊಬ್ಬ ಪೆಟ್ರೋಲ್ ಹಾಕಿಸಿದ್ದಾನೆ. ಪೆಟ್ರೋಲ್ ಹಾಕಿಯಾದ ಬಳಿಕ 2000 ರೂಪಾಯಿ ನೋಟು ಕೊಡಲು ಯತ್ನಿಸಿದ. ಆದರೆ ಅದನ್ನು ತೆಗೆದುಕೊಳ್ಳಲು ಪೆಟ್ರೋಲ್​ ಬಂಕ್​​ನಲ್ಲಿದ್ದ ಪರಿಚಾರಕ ನಿರಾಕರಿಸಿದ. ಆದರೆ ಈತ ನನ್ನ ಬಳಿ ಬೇರೆ ಹಣವೇ ಇಲ್ಲ ಎಂದು ವಾದಿಸಿದ. ಆಗ ಪೆಟ್ರೋಲ್ ಬಂಕ್​ ಪರಿಚಾರಕ ಅವನನ್ನು ತಡೆದಿದ್ದಲ್ಲದೆ, ಆತನ ಸ್ಕೂಟರ್​ಗೆ ಆಗಷ್ಟೇ ಹಾಕಿದ್ದ ಪೆಟ್ರೋಲ್​​ನ್ನು ವಾಪಸ್ ತೆಗೆದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಅದನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Shivamogga News: ಪೆಟ್ರೋಲ್ ಟ್ಯಾಂಕರ್ ಪಲ್ಟಿ; 29 ಸಾವಿರ ಲೀಟರ್ ಪೆಟ್ರೋಲ್ ಮಣ್ಣುಪಾಲು

ಮೊದಲಿನಿಂದಲೂ ಹೀಗೊಂದು ಕ್ರಮ ಇದೆ. ದೊಡ್ಡಮೊತ್ತದ ನೋಟುಗಳಿಗೆ ಚಿಲ್ಲರೆ ಬೇಕು ಎಂದರೆ ಪೆಟ್ರೋಲ್​ ಬಂಕ್​​ನಲ್ಲಿ ಕೊಡಬೇಕು ಎಂದು. ಇಷ್ಟು ದಿನಗಳವರೆಗೆ ಪೆಟ್ರೋಲ್​ ಬಂಕ್​ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್​ ಬಂಕ್​​ಗಳೂ ಸ್ವೀಕರಿಸುತ್ತಿಲ್ಲ. ಇನ್ನೊಂದೆಡೆ ಮುಂಬಯಿ, ಬೆಂಗಳೂರು, ಕೋಲ್ಕತ್ತ ಮತ್ತು ಇತರ ಮಹಾನಗರದಗಳ ಹಲವು ಪೆಟ್ರೋಲ್​ಬಂಕ್​​ಗಳಲ್ಲಿ ಈಗ ಜನರು 2000 ರೂಪಾಯಿ ನೋಟು ಪಾವತಿಸಲು ಮುಂದಾಗುತ್ತಿದ್ದಾರೆ. 200-300 ರೂಪಾಯಿ ಪೆಟ್ರೋಲ್ ಹಾಕಿಸಿ, 2000 ರೂ.ಕೊಡುತ್ತಿದ್ದಾರೆ. ಕೆಲವು ಪೆಟ್ರೋಲ್​ ಬಂಕ್​ಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವಾಪಸ್ ಚಿಲ್ಲರೆ ಕೊಡುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ರಾಜಕೀಯ

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

ಮೊದಲ ಎರಡು ಮದುವೆ ವಿಫಲವಾದ ಬಳಿಕ ನಟ-ರಾಜಕಾರಣಿ ಪವನ್ ಕಲ್ಯಾಣ್ 2013ರಲ್ಲಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಅನ್ನಾ ಅವರಿಗೂ ಈ ಹಿಂದೆ ವಿವಾಹವಾಗಿ ಮಗಳನ್ನು ಹೊಂದಿದ್ದರು. ಈ ಮಗುವನ್ನು ಪವನ್ ದತ್ತು ಪಡೆದಿದ್ದಾರೆ. ಇವತ್ತು ಚುನಾವಣೆ ಗೆದ್ದು ಬಂದ ಪವನ್ ಗೆ ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದಾರೆ.

VISTARANEWS.COM


on

By

Anna Lezhneva
Koo

ಲೋಕಸಭಾ ಚುನಾವಣೆ-2024ರಲ್ಲಿ (Loksabha election-2024) ಆಂಧ್ರಪ್ರದೇಶದಲ್ಲಿ (andrapradesh) ಭರ್ಜರಿ ಗೆಲುವು ಸಾಧಿಸಿ ಮನೆಗೆ ಬಂದ ತೆಲುಗು ನಟ (Telugu actor), ರಾಜಕಾರಣಿ (politician) ಪವನ್ ಕಲ್ಯಾಣ್ (Pawan Kalyan) ಅವರನ್ನು ಪತ್ನಿ (wife) ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿದೆ. ಈ ನಡುವೆ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಆಂಧ್ರಪ್ರದೇಶ ರಾಜ್ಯ ಚುನಾವಣೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ತೆಲುಗು ನಟ- ರಾಜಕಾರಣಿ ಪವನ್ ಕಲ್ಯಾಣ್ ಅವರ ಐತಿಹಾಸಿಕ ಗೆಲುವು ಅವರ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಲ್ಲಿ ಹರ್ಷ ಮೂಡಿಸಿದೆ. ಫಲಿತಾಂಶದ ಅನಂತರ ಪವನ್ ಮನೆಗೆ ಮರಳಿದ್ದು, ಅವರನ್ನು ಅವರ ಪತ್ನಿ ಅನ್ನಾ ಲೆಜ್ನೆವಾ ಸ್ವಾಗತಿಸಿದರು. ರಾಜಕೀಯ ಪಯಣದುದ್ದಕ್ಕೂ ಪವನ್ ಜೊತೆಯಾಗಿ ನಿಂತಿರುವ ಅನ್ನಾ ಅವರು ಪವನ್ ಅವರನ್ನು ಸ್ವಾಗತಿಸಿದ ಕ್ಷಣವನ್ನು ಸೆರೆಹಿಡಿಯಲಾಗಿದೆ ಮತ್ತು ಅವರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಅನ್ನಾ ಲೆಜ್ನೆವಾ ಯಾರು?

ರಷ್ಯಾದ ರೂಪದರ್ಶಿ ಮತ್ತು ನಟಿಯಾಗಿರುವ ಅನ್ನಾ ಲೆಜ್ನೆವಾ ಅವರು 2011ರ ತೀನ್ ಮಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ಪವನ್ ಅವರನ್ನು ಭೇಟಿಯಾಗಿದ್ದರು. ಶೀಘ್ರದಲ್ಲೇ ಅವರು ಪ್ರೀತಿಸುವುದಾಗಿ ಪ್ರಕಟಿಸಿ 2013ರ ಸೆಪ್ಟೆಂಬರ್ 30ರಂದು ಮದುವೆಯಾದರು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ.

ಪವನ್ ಕಲ್ಯಾಣ್ ಅವರ ಹಿಂದಿನ ಮದುವೆಗಳು

ʼಗಬ್ಬರ್ ಸಿಂಗ್ʼ ಪವನ್ ಮೊದಲ ಬಾರಿಗೆ 1997ರಲ್ಲಿ 19 ವರ್ಷದ ಹುಡುಗಿ ನಂದಿನಿಯನ್ನು ವಿವಾಹವಾದರು. 2001ರಲ್ಲಿ ಪವನ್ ನಟಿ ರೇಣು ದೇಸಾಯಿ ಅವರೊಂದಿಗೆ ವಾಸ ಮಾಡಲು ತೊಡಗಿದರು. ಅವರಿಬ್ಬರಿಗೆ ಗಂಡು ಮಗುವಾಗಿತ್ತು. ಪವನ್ ತನ್ನ ಮೊದಲ ಹೆಂಡತಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದ ಕಾರಣ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಯಿತು. ಅನಂತರ ನ್ಯಾಯಾಲಯವು 2008ರಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿತು. ಅವರ ಎರಡನೇ ಮದುವೆಯು 2009ರಲ್ಲಿ ನಡೆಯಿತು. ಬಳಿಕ ಪವನ್ ಮತ್ತು ರೇಣು ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ದುರದೃಷ್ಟವಶಾತ್ ಇವರಿಬ್ಬರ ವೈವಾಹಿಕ ಜೀವನ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಯಾಯಿತು.


ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ

ಅನ್ನಾ ಮತ್ತು ಪವನ್ ದಂಪತಿ 2017ರಲ್ಲಿ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗುವಿಗೆ ಪೋಷಕರಾದರು. ಅನ್ನಾ ಅವರ ಮೊದಲ ಮದುವೆ ವಿಫಲವಾಗಿ ಹೆಣ್ಣು ಮಗುವಿನ ತಾಯಿಯಾಗಿದ್ದರು. ಈ ಮಗು ಪೋಲೆನಾ ಅಂಜನಾ ಪವನ್ನೋವಾಳನ್ನು ಪವನ್ ತನ್ನ ಸ್ವಂತ ಮಗಳಂತೆ ಸ್ವೀಕರಿಸಿದ್ದಾರೆ. ಈಗ ಇವರು ಮೂವರು ಮಕ್ಕಳ ಪೋಷಕರಾಗಿದ್ದಾರೆ.

ವಿಚ್ಛೇದನದ ವದಂತಿ

ಕಳೆದ ವರ್ಷ ಅನ್ನಾ ಮತ್ತು ಪವನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ತೆಲುಗು ತಾರೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅನ್ನಾ ಲೆಜ್ನೆವಾ ಹಾಜರಾಗದಿದ್ದಾಗ ಈ ಗುಲ್ಲು ಹಬ್ಬಿತ್ತು. ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಕೊನಿಡೆಲಾ ಅವರ ತೊಟ್ಟಿಲು ಸಮಾರಂಭವನ್ನು ಇವರು ತಪ್ಪಿಸಿಕೊಂಡರು. ಇದರಿಂದ ಅವರ ಪ್ರತ್ಯೇಕತೆಯ ವದಂತಿಗಳಿಗೆ ಉತ್ತೇಜನ ಸಿಕ್ಕಿತು. ಆದರೂ ಇತ್ತೀಚಿನ ವಿಡಿಯೋ ಗಳು ಈ ವದಂತಿಗಳನ್ನು ತಳ್ಳಿ ಹಾಕುವಂತೆ ಮಾಡಿದೆ.

ಇದನ್ನೂ ಓದಿ: Odisha Assembly Result 2024: ಬಿಜೆಡಿ ಭದ್ರ ಕೋಟೆಗೆ ಬಿಜೆಪಿ ಗ್ರ್ಯಾಂಡ್‌ ಎಂಟ್ರಿ! ಹಳೇ ದೋಸ್ತಿಗೆ ಸಕತ್‌ ಠಕ್ಕರ್‌ ಕೊಟ್ಟ ಕೇಸರಿ ಬಣ

ಆಂಧ್ರಪ್ರದೇಶದ ರಾಜ್ಯ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗೆದ್ದ ಅನಂತರ ಅನ್ನಾ ಲೆಜ್ನೇವಾ ಮತ್ತು ಪವನ್ ಕಲ್ಯಾಣ್ ಮತ್ತು ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ಪುತ್ರ ಅಕಿರಾ ನಂದನ್ ಸೇರಿದಂತೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.

Continue Reading

ದೇಶ

Election results 2024: ʼಎಲ್ಲಾ ಪಕ್ಷಗಳೂ ಹ್ಯಾಪಿ ಆಗಿವೆ..ಕಾರಣ ಇಲ್ಲಿದೆ ನೋಡಿʼ- ಫನ್ನಿ ಮೀಮ್ಸ್‌ಗೆ ನೆಟ್ಟಿಗರು ಫಿದಾ!

Election results 2024: ಎಲ್ಲಾ ಪಕ್ಷಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂಬ ವಿಚಾರಗಳನ್ನು ಇಟ್ಟುಕೊಂಡು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಬಹಳ ಮಜಾ ನೀಡುತ್ತಿವೆ. ಅತಿಹೆಚ್ಚು ಮೀಮ್ಸ್‌ ನಿತೀಶ್‌ ಕುಮಾರ್‌ ಮೇಲೆಯೇ ಇರುವುದು ಬಹಳ ವಿಶೇಷವಾಗಿದೆ. ಮೀಮ್ಸ್‌ ಮಾತ್ರವಲ್ಲದೇ ಕೆಲವೊಂದು ಫನ್ನಿ ಮೆಸೇಜ್‌ಗಳೂ ವಾಟ್ಸಾಪ್‌ನಲ್ಲಿ ಶೇರ್‌ ಆಗುತ್ತಿವೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

VISTARANEWS.COM


on

Election Results 2024
Koo

ನವದೆಹಲಿ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ(Election results 2024) ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಹೊರಬಿದ್ದಿದೆ. ಸ್ಪಷ್ಟ ಬಹುಮತ ಪಡೆದರೂ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬರಬೇಕಿದ್ದರೆ ನಿತೀಶ್‌ ಕುಮಾರ್‌(Nithish Kumar) ಮತ್ತು ಚಂದ್ರಬಾಬು ನಾಯ್ಡು(Chandrababu Naidu ಕಿಂಗ್‌ ಮೇಕರ್‌ಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನು ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಮೀಮ್ಸ್‌ಗಳು ಜನರನ್ನು ರಂಜಿಸುತ್ತಿವೆ.

ಎಲ್ಲಾ ಪಕ್ಷಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂಬ ವಿಚಾರಗಳನ್ನು ಇಟ್ಟುಕೊಂಡು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಬಹಳ ಮಜಾ ನೀಡುತ್ತಿವೆ. ಅತಿಹೆಚ್ಚು ಮೀಮ್ಸ್‌ ನಿತೀಶ್‌ ಕುಮಾರ್‌ ಮೇಲೆಯೇ ಇರುವುದು ಬಹಳ ವಿಶೇಷವಾಗಿದೆ. ಮೀಮ್ಸ್‌ ಮಾತ್ರವಲ್ಲದೇ ಕೆಲವೊಂದು ಫನ್ನಿ ಮೆಸೇಜ್‌ಗಳೂ ವಾಟ್ಸಾಪ್‌ನಲ್ಲಿ ಶೇರ್‌ ಆಗುತ್ತಿವೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

ಈ ಎಲೆಕ್ಷನ್‌ ಬಹಳ ಫನ್ನಿ ಆಗಿದೆ ಯಾಕಂದ್ರೆ…

  1. ಎಲ್ಲಾ ಪಕ್ಷಗಳು ಖುಷಿಯಲ್ಲಿ ಸಂಭ್ರಮಿಸುತ್ತಿವೆ.
  2. ಬಿಜೆಪಿ ಸರ್ಕಾರ ನಾವೇ ರಚಿಸುತ್ತೇವೆಂದು ಸಂಭ್ರಮಿಸುತ್ತಿದ್ದಾರೆ
  3. 100ಕ್ಕೂ ಹೆಚ್ಚು ಸೀಟ್‌ ಗೆದ್ದ ಖುಷಿಯಲ್ಲಿ ಕಾಂಗ್ರೆಸ್‌ ಕೂಡ ಸಂಭ್ರಮಿಸುತ್ತಿದೆ
  4. ಎಸ್‌ಪಿ, ಆರ್‌ಜೆಡಿ ತಮ್ಮ ಸ್ಥಾನಮಾನ ವಾಪಸ್‌ ಪಡೆದ ಖುಷಿಯಲ್ಲಿವೆ
  5. ಎನ್‌ಸಿಒಪಿ(ಎಸ್‌ಪಿ), ಶಿವಸೇನಾ(ಯುಬಿಟಿ) ತಮ್ಮನ್ನು ತಾವು ಬಾಸ್‌ ಎಂದು ಮತ್ತೊಮ್ಮೆ ಸಾಬೀತು ಪಡಿಸಿಕೊಂಡಿದೆ. ಹೀಗಾಗಿ ಅವುಗಳು ಖುಷಿಯಾಗಿವೆ
  6. ಟಿಎಂಸಿಯೂ ಖುಷಿಯಾಗಿದೆ. ಏಕೆಂದರೆ ಭಾರೀ ಸೋಲಿನಿಂದ ಅದು ತಮ್ಮ ಪಕ್ಷವನ್ನು ಕಾಪಾಡಿಕೊಂಡಿದೆ.
  7. ಇನ್ನು ಕೊನೆಯದಾಗಿ ಮತದಾರರ ಪ್ರಭು ಬಹಳ ಖುಷಿಯಲ್ಲಿದ್ದಾನೆ ಏಕೆಂದರೆ ತಾವು ಯಾರಿಗೆ ವೋಟ್‌ ಮಾಡಿದ್ದರೋ ಆ ಎಲ್ಲಾ ಪಕ್ಷಗಳು ಗೆದ್ದಿವೆ.
  8. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ತಮ್ಮ ತಮ್ಮ ಪಕ್ಷದ ಕಚೇರಿಯಲ್ಲಿ ಒಟ್ಟಾಗಿ ಸಂಭ್ರಮಾಚರಣೆ ನಡೆಸಿರುವುದು ಇದೇ ಮೊದಲು

ಹೀಗೆ ಹತ್ತು ಹಲವು ಕಾಮೆಡಿ ಫನ್ನಿ ಮೆಸೇಜ್‌ಗಳು, ಮೀಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್

Continue Reading

ಪ್ರಮುಖ ಸುದ್ದಿ

Pradeep Eshwar: ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಭರ್ಜರಿ ಗೆಲುವು; ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಘೋಷಣೆ?

Pradeep Eshwar: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಒಂದು ಮತದ ಲೀಡ್‌ನಿಂದ ಗೆದ್ದರೂ ರಾಜೀನಾಮೆ ನೀಡುವುದಾಗಿ ಶಾಸಕ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಗೆದ್ದಿರುವುದರಿಂದ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

VISTARANEWS.COM


on

Pradeep Eshwar
Koo

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ.ಸುಧಾಕರ್‌ ಭರ್ಜರಿ ಗೆಲುವು ದಾಖಲಿಸಿದ್ದರಿಂದ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಒಂದು ಮತದ ಲೀಡ್‌ನಿಂದ (Karnataka election results 2024) ಗೆದ್ದರೂ ರಾಜೀನಾಮೆ ನೀಡುವುದಾಗಿ ಶಾಸಕ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು. ಹೀಗಾಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ (Chikballapur Election Result 2024) ಬಿಜೆಪಿಯ ಡಾ.ಕೆ. ಸುಧಾಕರ್ (​Dr K Sudhakar) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 1,62,099 ಮತಗಳ ಅಂತರದಿಂದ ಜಯಭೇರಿ ಮೊಳಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಸುಧಾಕರ್ ಅವರು ಈ ಬಾರಿ ಲೋಕಸಭಾ ಟಿಕೆಟ್ ಪಡೆದು ಗೆದ್ದು ಬೀಗಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್‌ ಈಶ್ವರ್‌ ಈ ಹಿಂದೆ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್‌ ಮಾಡುತ್ತಿದ್ದಾರೆ.

ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಘೋಷಣೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟರ್. ‌

“ನನ್ನ ಮಾತಿಗೆ ನಾನು ಬದ್ಧ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು, ಶಾಸಕ ಸ್ಥಾನಕ್ಕೆ ಜೂನ್‌ 5ರಂದು ಬೆಳಗ್ಗೆ 5ಗಂಟೆಗೆ ರಾಜೀನಾಮೆ ನೀಡಲಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ನಾನೇ ನೇರ ಹೊಣೆ ಎಂದು” ಶಾಸಕ ಪ್ರದೀಪ್‌ ಈಶ್ವರ್‌ ಅವರು ಹೇಳಿದಂತಿರುವ ಪೋಸ್ಟರ್‌ ವೈರಲ್‌ ಮಾಡಲಾಗಿದೆ. ಆದರೆ, ಇದು ಶಾಸಕ ಪ್ರದೀಪ್‌ ಈಶ್ವರ್‌ ಅವರ ಅಧಿಕೃತ ಪೋಸ್ಟರ್‌ ಅಲ್ಲ. ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Chikballapur Election Result 2024 : ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಭರ್ಜರಿ ಗೆಲುವು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು ಕಾಂಗ್ರೆಸ್​ನ ಎಂ.ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.53.74ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಹಾಲಿ ಸಂಸದ ಬಚ್ಚೇಗೌಡರ ಬದಲಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಬಿಜೆಪಿ ಲೋಕಸಭಾ ಚುನಾವಣಾ ಟಿಕೆಟ್‌ ನೀಡಿತ್ತು. ಇದೀಗ ಸುಧಾಕರ್‌ ಅವರು ಭಾರಿ ಅಂತರರಿಂದ ಗೆಲುವು ದಾಖಲಿಸಿದ್ದು, ಕಾರ್ಯಕರ್ತರರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

Continue Reading

Lok Sabha Election 2024

Election Results 2024: ಧಾರವಾಡದ ಮತ ಎಣಿಕೆ ಕೇಂದ್ರಕ್ಕೆ ವಾಮಾಚಾರ! ಮರದಡಿ ಮೊಟ್ಟೆ ಇಟ್ಟ ಕಿಡಿಗೇಡಿಗಳು

Election Results 2024 : ಧಾರವಾಡದ ಮತ ಎಣಿಕೆ ಕೇಂದ್ರದಲ್ಲಿ ದುಷ್ಟರು ವಾಮಾಚಾರ (Black Magic) ನಡೆಸಿದರೆ, ಚಿಕ್ಕೋಡಿಯಲ್ಲಿ ಕಿಡಿಗೇಡಿಯೊಬ್ಬ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದ್ದಾನೆ.

VISTARANEWS.COM


on

By

Election Results 2024
Koo

ಧಾರವಾಡ: ಲೋಕಸಭೆ ಚುನಾವಣೆಯಲ್ಲಿ (Election Results 2024) ಗೆಲುವು -ಸೋಲಿನ ಲೆಕ್ಕಚಾರ ನಡೆಯುತ್ತಿರುವಾಗಲೇ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದ ಬಳಿ ದುಷ್ಕರ್ಮಿಗಳಿಂದ ವಾಮಾಚಾರ (Black Magic) ನಡೆದಿದೆ. ಮರದ ಪೊದೆಯಲ್ಲಿ ಎರಡು ಮೊಟ್ಟೆಗಳನ್ನು ಇಟ್ಟು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ಮರದಡಿ ಮೊಟ್ಟೆ ಇರುವುದನ್ನು ಕಂಡು ಕ್ಷಣಕಾಲ ಅಲ್ಲಿದ್ದವರು ಆತಂಕಗೊಂಡರು.

ಚುನಾವಣೆಯ ಫಲಿತಾಂಶದಲ್ಲಿ ಗೆಲವು ಸಾಧಿಸಲು ಯಾರಾದರೂ ಹೀಗೆ ಮಾಡಿದ್ದರಾ ಎಂಬ ಅನುಮಾನ ಮೂಡಿದೆ. ಮೊಟ್ಟೆಯನ್ನು ತಂದಿಟ್ಟವರು ಯಾರು? ನಿಜಕ್ಕೂ ಅಲ್ಲಿ ವಾಮಾಚಾರ ನಡೆದಿದ್ಯಾ ಅಥವಾ ಮರದಡಿ ಕುಳಿತಾಗ ಮರೆತು ಬಿಟ್ಟು ಹೋಗಿದ್ದರಾ ಎಂಬುದು ತಿಳಿದು ಬಂದಿಲ್ಲ.

ಅಂದಹಾಗೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ ಗೆಲುವು ಸಾಧಿಸಿದ್ದಾರೆ. ಐದನೆಯ ಬಾರಿಯೂ ಮತದಾರರು ಪ್ರಲ್ಹಾದ್ ಜೋಶಿ ಅವರನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ 6,82,400 ಮತ ಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ 5,87,397 ಮತ ಪಡೆದು, 95,003 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ:Election Results 2024: ಮೈತ್ರಿಕೂಟಕ್ಕೆ ಕಡಿಮೆ ಸ್ಥಾನ; ವಿಷಯ ತಿಳಿದು ಬಿಜೆಪಿ ಅಭಿಮಾನಿ ಹೃದಯಾಘಾತಕ್ಕೆ ಬಲಿ

ಚಿಕ್ಕೋಡಿಯಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದ ಕಿಡಿಗೇಡಿ

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಹಿನ್ನೆಲೆಯಲ್ಲಿ ಕಿಡಿಗೇಡಿಯೊಬ್ಬ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಾನೆ. ಚಿಕ್ಕೋಡಿಯ ಮತ ಎಣಿಕೆ ಕೇಂದ್ರದ ಹೊರವಲಯದಲ್ಲಿ ಘಟನೆ ನಡೆದಿದೆ. ಪಾಕಿಸ್ತಾನ್‌ಗೆ ಪ್ರಿಯಾಂಕಾ ಜಾರಕಿಹೊಳಿಗೆ ಜಿಂದಾಬಾದ್‌ ಎಂದು ಕೂಗಿದ್ದಾನೆ.

ಈ ಹಿಂದೆ ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್‌ ನೂತನ ಸದಸ್ಯ ನಾಸಿರ್ ಹುಸೇನ್ (Nasir Hussain) ಬೆಂಬಲಿಗರು ವಿಧಾನಸೌಧದೊಳಗೇ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಜೈಕಾರ ಕೂಗಿದ್ದರು. ದೇಶದ್ರೋಹದ (Sedition Case) ಕೆಲಸ ಮಾಡಿ ಉದ್ಧಟತನ ಮೆರೆದಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದವು.

ಫೆ. 27ರಂದು ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ (Vidhana Soudha) ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad) ಘೋಷಣೆ ಮಾಡಿದ ಪ್ರಕರಣಕ್ಕೆ (Sedition Case) ಸಂಬಂಧಿಸಿ ಬಂಧಿತರಾದ ಮೂವರಿಗೆ (Three Accused gets Bail) ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು (ಎಸಿಎಂಎಂ) ಷರತ್ತುಬದ್ಧ ಜಾಮೀನು (Bangalore Court) ನೀಡಿತ್ತು.

‌ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ಗೆ ಗೆಲವು

ಇನ್ನೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ವಿರುದ್ಧ 96,253 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 6,80,179 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೋಲ್ಲೆ 5,83,926 ಮತ ಪಡೆದು, 96,253 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿಯ ಭದ್ರಕೋಟೆಯನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ. ಚಿಕ್ಕೋಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದ್ದು, ಸಚಿವ ಸತೀಶ್ ಜಾರಕಿಹೊಳಿ ಹೋಳಿಗೆ ಗುಲಾಬಿ ಬಣ್ಣ ಹಂಚಿ ಸಂಭ್ರಮಾಚರಣೆ ಮಾಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Weather Forecast
ಮಳೆ25 mins ago

Karnataka Weather : ರಾಜ್ಯದ ಹಲವೆಡೆ ಮಳೆ ಅಲರ್ಟ್‌; ಬೆಂಗಳೂರಲ್ಲಿ ಹೇಗೆ?

Benefits of Poppy Seeds
ಆರೋಗ್ಯ55 mins ago

Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

Microplastics
ಆರೋಗ್ಯ1 hour ago

Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

narendra modi amit shah jp nadda election results 2024
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

World Environment Day
ಪರಿಸರ2 hours ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಗೆ ಜ್ವರ, ನಮಗೆಲ್ಲ ಬರೆ!

dina bhavishya
ಭವಿಷ್ಯ2 hours ago

Dina Bhavishya : ನಿಮ್ಮನ್ನು ದ್ವೇಷಿಸುತ್ತಿದ್ದವರಿಗೆ ನಿಮ್ಮ ಮೇಲೆ ದಿಢೀರ್‌ ಪ್ರೀತಿ!

Anna Lezhneva
ರಾಜಕೀಯ8 hours ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ8 hours ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ8 hours ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ8 hours ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ24 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌