Assam Floods: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ, ಆಸರೆ ಕಳೆದುಕೊಂಡ ಜನರ ಸಂಕಟ, ಪರದಾಟ - Vistara News

ದೇಶ

Assam Floods: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ, ಆಸರೆ ಕಳೆದುಕೊಂಡ ಜನರ ಸಂಕಟ, ಪರದಾಟ

ಅಸ್ಸಾಂನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ.

VISTARANEWS.COM


on

assam flood
ತುಂಬಿದ ಪ್ರವಾಹದಲ್ಲಿ ಶವ ಹೊತ್ತು ಸಾಗುತ್ತಿರುವ ದೃಶ್ಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುವಾಹಟಿ : ಭೀಕರ ಪ್ರವಾಹಕ್ಕೆ ಅಸ್ಸಾಂ ಭಾಗಶಃ ಮುಳುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅದೆಷ್ಟೋ ಜನರು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳುವ ಜತೆ, ತಮ್ಮವರ ಪ್ರಾಣ ಉಳಿಸಿಕೊಳ್ಳಲೂ ಹೋರಾಡುತ್ತಿದ್ದಾರೆ. ಮನೆಯ ದನ-ಕರುಗಳನ್ನು, ಮತ್ತಿತರ ಸಾಕುಪ್ರಾಣಿಗಳನ್ನೂ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಮಳೆ ನಿಂತರೂ ಹನಿ ನಿಲ್ಲಲ್ಲ ಎಂಬ ಮಾತಿದೆ. ಅದರಂತೆ ಇಲ್ಲಿ ಮಳೆ ನಿಂತಿದ್ದರೂ ಅದು ಸೃಷ್ಟಿಸಿಹೋದ ಪ್ರವಾಹ ತಗ್ಗಿಲ್ಲ.

ಪ್ರವಾಹದ ನೀರಲ್ಲೇ ಹಸುಗಳನ್ನ ಕರೆದುಕೊಂಡು ಸಾಗುತ್ತಿರುವ ದೃಶ್ಯ

ಅಸ್ಸಾಂನಲ್ಲಿ ಕಳೆದ ವಾರವರೆಲ್ಲ ನಿರಂತರವಾಗಿ ವರುಣ ಅಬ್ಬರಿಸಿದ್ದ, ಇದರಿಂದಾಗಿ ನದಿ, ತೊರೆಗಳು ಅಪಾಯಮಟ್ಟ ಮೀರಿ ಉಕ್ಕಿ ಹರಿದಿವೆ. ಇದರ ಪರಿಣಾಮ ಸುಮಾರು 32ಕ್ಕೂ ಹೆಚ್ಚು ಜಿಲ್ಲೆಗಳ ಸಣ್ಣ ಸಣ್ಣ ಗ್ರಾಮಗಳು ಅಕ್ಷರಶಃ ನಡುಗಡ್ಡೆಯಾಗಿದ್ದವು. ಊಟ-ನೀರು ಇಲ್ಲದೆ ಜನರು ಸಂಕಷ್ಟಪಡುವಂತಾಗಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಸದ್ಯಕ್ಕೆ ಅಸ್ಸಾಂನಲ್ಲಿ ಮಳೆ ನಿಂತಿದೆ. ಆದರೆ ಜನರ ಬವಣೆ ಮಾತ್ರ ತಪ್ಪಿಲ್ಲ. ಅದೆಷ್ಟೋ ಭಾಗಗಳಲ್ಲಿ ನೀರು ನಿಂತೇ ಇದೆ. ಪ್ರವಾಹದ ಬಳಿಕ ಜನರು ಮನೆಗಳಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳು ಪ್ರವಾಹದಿಂದ ಮುಳುಗಿ ಹೋಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಪ್ರವಾಹದ ಭೀಕರತೆ ಮಧ್ಯೆ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ. 5 ರಿಂದ 8 ಅಡಿಯಷ್ಟು ನೀರಿನಲ್ಲಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಮತ್ತೊಂದೆಡೆ ತುಂಬಿ ಹರಿಯುತ್ತಿರುವ ನೀರಿನಲ್ಲಿ ಒಂದಷ್ಟು ಮಂದಿ ಶವವನ್ನು ಹೊತ್ತು ಸಾಗುತ್ತಿರುವ ದೃಶ್ಯವಂತೂ ಮನಸಿಗೆ ಘಾಸಿ ಉಂಟು ಮಾಡದೇ ಇರದು. ಇನ್ನೊಂದೆಡೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನ ತುಂಬಿ ಹರಿಯುತ್ತಿರುವ ನೀರಿನಲ್ಲಿ ತೆಪ್ಪ ಮಾಡಿ ಅದರಲ್ಲಿ ಮಲಗಿಸುತ್ತಿರುವುದನ್ನು ನೋಡಬಹುದು. ಹಾಗೇ ಬಾಲಕಿಯೊಬ್ಬಳು ತನ್ನ ತಮ್ಮನನ್ನು ಹೆಗಲ ಮೇಲೆ ಹೊತ್ತುಕೊಂಡು ಸೊಂಟಮಟ್ಟದ ನೀರಿನಲ್ಲಿ ಹೋಗುವುದನ್ನು ಕಾಣಬಹುದು. ಇವೆಲ್ಲ ವಿಡಿಯೋ-ಫೋಟೋಗಳು ವೈರಲ್‌ ಆಗುತ್ತಿವೆ.

ಮೂವರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಪ್ರವಾಹದ ನೀರಲ್ಲಿ ಸಾಗುತ್ತಿರುವ ತಂದೆ

ಈಗಾಗಲೇ ಅಸ್ಸಾಂನ ಭೀಕರ ಪ್ರವಾಹದಿಂದ 127 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಲ್ಚಾರ್, ಬರ್ಪೇಟಾ. ದಾರಂಗ್, ಚಚಾರ್, ಮೊರಿಗಾನ್ ಮತ್ತು ಕರಿಮಂಗಜ್ ಜಿಲ್ಲೆಗಳಲ್ಲಿ ಪ್ರವಾಹದ ಅನಾಹುತಗಳು ಹೆಚ್ಚಾಗಿದ್ದು, ಅಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸವನ್ನ ಅಸ್ಸಾಂನ ಎನ್​ಡಿಆರ್​ಎಫ್​ ತಂಡ ಮಾಡುತ್ತಿದೆ.

ಇದನ್ನು ಓದಿ| Assam rain: ರಣಭೀಕರ ಮಳೆಗೆ ಅಸ್ಸಾಂ ಅತಂತ್ರ, ಸಾವಿನ ಸಂಖ್ಯೆ 100ಕ್ಕೇರಿಕೆ, ಲಕ್ಷಾಂತರ ಜನರು ಬೀದಿಪಾಲು

ತಮ್ಮನನ್ನ ಹೊತ್ತು ಪ್ರಾಣದ ಹಂಗು ತೊರೆದು ಪ್ರವಾಹದ ನೀರಲ್ಲಿ ಸಾಗುತ್ತಿರುವ ಬಾಲಕಿ

ಅಸ್ಸಾಂನಲ್ಲಿ ಪ್ರವಾಹದಿಂದ ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ಅಸ್ಸಾಂ ಸರ್ಕಾರ ಮಾತ್ರ ಮಹಾರಾಷ್ಟ್ರದ ಶಾಸಕರ ಸುರಕ್ಷತೆ ನೋಡಿಕೊಳ್ಳುವಲ್ಲಿ ನಿರತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಹಿಮಂತಾ ಬಿಸ್ವಾ ಶರ್ಮಾ ಕೇವಲ ತೋರಿಕೆಗೆ ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಮೀಕ್ಷೆ ಮಾಡಿ ಸುಮ್ಮನಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅವರೇನೂ ಕ್ರಮ ಕೈಗೊಳ್ಳುತ್ತಿಲ್ಲ. ಅವರ ಗಮನವೆಲ್ಲಾ ಮಹಾರಾಷ್ಟ್ರ ಶಿವಸೇನೆ ಶಾಸಕರ ಮೇಲೆಯೇ ಇದೆ ಎಂದು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ: Weather Report | ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಹಗರಣ ಎಂದು ಆರೋಪಿಸಿದ ರಾಹುಲ್ ಗಾಂಧಿ

Stock market Crash : ಷೇರು ಮಾರುಕಟ್ಟೆ ಪತನವು ಭಾರತ ಕಂಡ “ಅತಿದೊಡ್ಡ ಷೇರು ಮಾರುಕಟ್ಟೆ ಹಗರಣ” ಎಂದು ಆರೋಪಿಸಿರು ರಾಹುಲ್ ಗಾಂಧಿ, ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಜನರಿಗೆ ಹೂಡಿಕೆ ಸಲಹೆಯನ್ನು ನೀಡಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

VISTARANEWS.COM


on

Stock market Crash
Koo

ನವದೆಹಲಿ: ಜೂನ್ 4 ರಂದು ಷೇರು ಮಾರುಕಟ್ಟೆ ಏಕಾಏಕಿ ಪತನಗೊಂಡು (Stock market Crash) ಹೂಡಿಕೆದಾರರಿಗೆ 30 ಲಕ್ಷ ಕೋಟಿ ರೂಪಾಯಿ ನಷ್ಟವಾಗಿರುವುದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಸೇರಿಕೊಂಡು ಮಾಡಿರುವ ಹಗರಣ ಎಂದು ಕಾಂಗ್ರೆಸ್​​ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗುರುವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು ಈ ಬಗ್ಗೆ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಫಲಿತಾಂಶ ಪ್ರಕಟಣೆಗೆ ಕೆಲವೇ ದಿನಗಳ ಮೊದಲು ಷೇರು ಮಾರುಕಟ್ಟೆಯ ಬಗ್ಗೆ ಏಕೆ ಹೇಳಿಕೆ ನೀಡಿದ್ದರು. ಭಾರತೀಯ ಚುನಾವಣಾ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಆಗಿದೆ ಎಂದು ಹೇಳಿದರು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಏಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಷೇರುಗಳನ್ನು ತಿರುಚಿದ್ದಕ್ಕಾಗಿ ಸೆಬಿಯಿಂದ ತನಿಖಗೆ ಒಳಪಟ್ಟಿರುವ ವ್ಯವಹಾರ ಗುಂಪಿನ ಒಡೆತನದ ಒಂದೇ ಮಾಧ್ಯಮಕ್ಕೆ ಅವರಿಬ್ಬರೂ ಏಕೆ ಸಂದರ್ಶನ ನೀಡಿದರು ಎಂದು ರಾಹುಲ್​ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಲೋಕ ಚುನಾವಣೆಯ ಸಮಯದಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರು ಷೇರು ಮಾರುಕಟ್ಟೆಯ ಬಗ್ಗೆ ಹೇಳಿಕೆ ನೀಡಿದ್ದು ಇದೇ ಮೊದಲ ಬಾರಿಗೆ. ನಾವು ಈ ಬಗ್ಗೆ ತನಿಖೆ ನಡೆಸಲು ಜಂಟಿ ಸಮಿತಿಯನ್ನು ಒತ್ತಾಯಿಸುತ್ತೇವೆ. ಇದು ಹಗರಣ ಎಂದು ನಮಗೆ ಮನವರಿಕೆಯಾಗಿದೆ. ಭಾರತೀಯ ಚಿಲ್ಲರೆ ಹೂಡಿಕೆದಾರರ ವೆಚ್ಚದಲ್ಲಿ ಯಾರೋ ಸಾವಿರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಇದಕ್ಕೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಕುಮ್ಮಕ್ಕು ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೇ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಹೊಸ ಎತ್ತರವನ್ನು ತಲುಪಲಿದೆ ಎಂದು ಹೇಳಿದ್ದರು. ಜೂನ್ 4 ರಂದು, ಬಿಜೆಪಿ ದಾಖಲೆಯ ಮತಗಳೊಂದಿಗೆ ಗೆಲ್ಲುವಾಗ ಷೇರು ಮಾರುಕಟ್ಟೆಯೂ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ಎನ್​ಡಿಟಿವಿ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: Kangana Ranaut : ರೈತ ವಿರೋಧಿ ಹೇಳಿಕೆ ನೀಡಿದ್ದಕ್ಕೆ ಕೋಪ;​ ನಟಿ, ಸಂಸದೆ ಕಂಗನಾ ರಣಾವತ್​ಗೆ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿಯಿಂದಲೇ ಕಪಾಳಮೋಕ್ಷ

ಮೇ 13 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ನನ್ನ ಅಭಿಪ್ರಾಯದಲ್ಲಿ, ಜೂನ್ 4 ರೊಳಗೆ ಷೇರು ಖರೀದಿಸಿ. ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಹೆಚ್ಚಾಗಲಿದೆ” ಎಂದು ಎನ್​ಡಿಟಿವಿ ಸಂದರ್ಶನದಲ್ಲೇ ಹೇಳಿದ್ದರು. ಈ ಮಾಧ್ಯಮ ವ್ಯವಹಾರ ಸಂಸ್ಥೆಯೊಂದರ ಒಡೆತನಕ್ಕೆ ಸೇರಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಹುಲ್ ಹೇಳಿದ್ದಾರೆ.

ದೊಡ್ಡ ಹಗರಣ : ರಾಹುಲ್ ಆರೋಪ

ಕೋಟ್ಯಂತರ ಜನರ ದುಡ್ಡು ನಷ್ಟವಾಗಲು ನೇರವಾಗಿ ಪ್ರಧಾನಿ, ಕೇಂದ್ರ ಗೃಹ ಸಚಿವರೇ ಹೊಣೆ. ಚುನಾವಣಾ ಫಲಿತಾಂಶಗಳ ನೈಜ ಡೇಟಾವನ್ನು ಹೊಂದಿರುವವರು, ಐಬಿ ವರದಿಗಳನ್ನು ಹೊಂದಿರುವವರು, ತಮ್ಮದೇ ಆಂತರಿಕ ಅಂಕಿ ಅಂಶಗಳನ್ನು ಹೊಂದಿರುವವರು, ಚಿಲ್ಲರೆ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು ಸಲಹೆ ನೀಡಿರುವುದು ದೊಡ್ಡ ಹಗರಣ ಎಂದು ಅವರು ಆರೋಪಿಸಿದ್ದಾರೆ.

ಷೇರು ಖರೀದಿ ಮಾಡಲು ಹೇಳಿಕೆ ನೀಡುವ ಮೊಲದು ಚುನಾವಣೋತ್ತರ ಸಮೀಕ್ಷೆಗಳನ್ನು ಬಿತ್ತರಿಸಲಾಯಿತು. ನೈಜ ಅಂಕಿ- ಅಂಶ ಮೋದಿ ಸೇರಿದಂತೆ ಬಿಜೆಪಿಯ ಬಳಿ ಇತ್ತು. ಅವರಿಗೆ ಏನಾಗುತ್ತದೆ ಎಂದು ಗೊತ್ತಿತ್ತು. ಆದರೂ 5 ಲಕ್ಷ ಹೂಡಿಕೆದಾರರಿಗೆ ವಂಚನೆ ಮಾಡಲಾಗಿದೆ ಎಂದು ರಾಹುಲ್ ಅರೋಪಿಸಿದ್ದಾರೆ.

Continue Reading

ರಾಜಕೀಯ

Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!

18ನೇ ಲೋಕಸಭೆಯಲ್ಲಿ (Lok Sabha Election 2024) ಈ ಬಾರಿ ಇಂಡಿಯಾ ಒಕ್ಕೂಟದ 233, ಎನ್ ಡಿಎ ಒಕ್ಕೂಟದ 293 ಹಾಗೂ ಇತರೆ ಪಕ್ಷಗಳ 17 ಮಂದಿ ಸೇರಿ 41 ಪಕ್ಷಗಳ ಒಟ್ಟು 543 ಸದಸ್ಯರು ಸಂಸತ್ತನ್ನು ಪ್ರವೇಶಿಸಲಿದ್ದಾರೆ. ಕಳೆದ ಬಾರಿ 543 ಸದಸ್ಯರ ಸದನದಲ್ಲಿ 36 ಪಕ್ಷಗಳ ಸಂಸದರು ಇದ್ದರು.

VISTARANEWS.COM


on

By

Lok Sabha Election 2024
Koo

ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ (Lok Sabha Election 2024) ಈ ಬಾರಿ 41 ರಾಜಕೀಯ ಪಕ್ಷಗಳು (political parties) ಪ್ರತಿನಿಧಿಗಳು ಪ್ರವೇಶ ಪಡೆದಿದ್ದಾರೆ. ಬುಧವಾರ ವಿಸರ್ಜನೆಗೊಂಡ 17ನೇ ಲೋಕಸಭೆಯಲ್ಲಿ 36 ಪಕ್ಷಗಳ ಸಂಸದರಿದ್ದರು (MPs) ಎಂದು ಚುನಾವಣೋತ್ತರ ಅಂಕಿಅಂಶಗಳು ತೋರಿಸುತ್ತವೆ.

543 ಸದಸ್ಯರ ಸದನದಲ್ಲಿ ಬಿಜೆಪಿ (BJP) 240, ಕಾಂಗ್ರೆಸ್ (congress) 99 ಸ್ಥಾನಗಳನ್ನು ಹೊಂದಿದೆ. ಈ ಎರಡು ದೊಡ್ಡ ಪಕ್ಷಗಳು ಒಟ್ಟು 339 ಸಂಸದರನ್ನು ಹೊಂದಿವೆ. ಬಿಜೆಪಿ ಈ ಬಾರಿ 63 ಸ್ಥಾನಗಳನ್ನು ಕಳೆದುಕೊಂಡಿದೆ. 2014 ರಲ್ಲಿ ಬಿಜೆಪಿ 282 ಮತ್ತು 2019 ರಲ್ಲಿ 303 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ 2014ರಲ್ಲಿ 44, 2019ರಲ್ಲಿ 52 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 99 ಸ್ಥಾನಗಳಿಗೆ ಏರಿದೆ.

ಬಿಜೆಪಿ ತನ್ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಹಾಯದಿಂದ ಕೇಂದ್ರದಲ್ಲಿ ಸತತ ಮೂರನೇ ಬಾರಿ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್ 8ರಂದು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. . ಲೋಕಸಭೆಯಲ್ಲಿ ಎನ್‌ಡಿಎ ಪಕ್ಷಗಳು ಒಟ್ಟು 293 ಸ್ಥಾನಗಳನ್ನು ಗೆದ್ದಿವೆ.

ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟವು 233 ಸಂಸದರನ್ನು ಹೊಂದಿದ್ದು, ಸಮಾಜವಾದಿ ಪಕ್ಷ (SP) ಉತ್ತರ ಪ್ರದೇಶದಿಂದ 37 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅನಂತರ ಅತಿ ದೊಡ್ಡ ಪಕ್ಷವಾಗಿ ಸಮಾಜವಾದಿ ಪಕ್ಷ ಹೊರಹೊಮ್ಮಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 29 ಮತ್ತು ತಮಿಳುನಾಡಿನ ಡಿಎಂಕೆ 22 ಸ್ಥಾನಗಳನ್ನು ಗಳಿಸಿದೆ.

ಇದನ್ನೂ ಓದಿ: HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್‌ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?


ರಾಷ್ಟ್ರೀಯ ಪಕ್ಷಗಳಿಗೆ ಶೇ. 64ರಷ್ಟು ಸ್ಥಾನ

ಥಿಂಕ್-ಟ್ಯಾಂಕ್ ಪಿ ಆರ್ ಎಸ್ ವಿಶ್ಲೇಷಣೆಯ ಪ್ರಕಾರ, “ರಾಷ್ಟ್ರೀಯ ಪಕ್ಷಗಳು” ಎಂದು ಗುರುತಿಸಲ್ಪಡುವ ರಾಜಕೀಯ ಸಂಘಟನೆಗಳು ಈ ಬಾರಿಯಾ ಚುನಾವಣೆಯಲ್ಲಿ 346 ಅಥವಾ ಶೇ. 64 ಸ್ಥಾನಗಳನ್ನು ಗಳಿಸಿದರೆ, ಪ್ರಾದೇಶಿಕ ಪಕ್ಷಗಳು 197 ಅಥವಾ ಶೇ. 33ರಷ್ಟು ಸ್ಥಾನಗಳನ್ನು ಗೆದ್ದವು. ಎನ್‌ಡಿಎ ಪಕ್ಷಗಳ ಏಳು ಸ್ವತಂತ್ರ ಅಭ್ಯರ್ಥಿಗಳು 17 ಸ್ಥಾನಗಳನ್ನು ಗೆದ್ದಿದ್ದಾರೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಗಳಲ್ಲಿ 751 ಪಕ್ಷಗಳು ಸ್ಪರ್ಧಿಸಿದ್ದವು. 2009ಕ್ಕಿಂತ ಇದರಲ್ಲಿ 104ರಷ್ಟು ಹೆಚ್ಚಾಗಿದೆ. 368 ಪಕ್ಷಗಳಿಂದ ನಾಮನಿರ್ದೇಶಿತರು ಕಣದಲ್ಲಿದ್ದರು. 2014ರಲ್ಲಿ 464 ಮತ್ತು 2019ರಲ್ಲಿ 677 ಪಕ್ಷಗಳ ಬೆಂಬಲಿಗರು ಕಣದಲ್ಲಿದ್ದರು ಎಂದು ಎಡಿಆರ್ ತಿಳಿಸಿದೆ.

Continue Reading

ರಾಜಕೀಯ

Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ಸುರೇಶ್ ಗೋಪಿ (Suresh Gopi) ಮಲಯಾಳಂ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ಇವರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಸುರೇಶ್‌ ಗೋಪಿ ಜೀವನದ ಹಿನ್ನೋಟ ಇಲ್ಲಿದೆ.

VISTARANEWS.COM


on

By

Suresh Gopi
Koo

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ ಬಹುತೇಕ ಬಿಜೆಪಿಗೆ (BJP) ಬೇಸರವನ್ನು ಉಂಟು ಮಾಡಿದ್ದರೂ ಕಮ್ಯುನಿಸ್ಟ್ (Communist) ಆಡಳಿತವಿರುವ ಕೇರಳದಲ್ಲಿ (kerala) ಒಂದು ಖಾತೆ ತೆರೆದು ಸಂಭ್ರಮ ಪಡುವಂತೆ ಮಾಡಿದೆ. ಹಲವು ಹಲವು ದಶಕಗಳ ಸುದೀರ್ಘ ಕಾಯುವಿಕೆಯ ಬಳಿಕ ಮೊದಲ ಬಾರಿಗೆ ಕೇರಳದಲ್ಲಿ ಕಮಲ ಅರಳಿದೆ. ಈ ಸಾಧನೆ ಬಿಜೆಪಿ ನಾಯಕ ಮತ್ತು ನಟ ಸುರೇಶ್ ಗೋಪಿ (Suresh Gopi) ಅವರದ್ದು.

ಸಮಾಜ ಸೇವೆಗಾಗಿ ಹೆಸರುವಾಸಿಯಾಗಿರುವ ಸುರೇಶ್ ಗೋಪಿ ಅವರು ತ್ರಿಶೂರ್ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಕೇಸರಿ ಪಕ್ಷದ ಸುರೇಶ್ ಗೋಪಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ “ತ್ರಿಶೂರ್ ನಂ ಎಡುಕ್ಕುವ (ತ್ರಿಶೂರ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ), ಎನಿಕ್ಕು ವಿಷ ತ್ರಿಶೂರ್ (ನನಗೆ ತ್ರಿಶೂರ್ ಬೇಕು)” ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸಿದ್ದರು.


ಬಿಜೆಪಿಗೆ ಐತಿಹಾಸಿಕ ಗೆಲುವು

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಸುರೇಶ್ ಗೋಪಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ನ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಮತ್ತು ಮಾಜಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಅವರನ್ನು 73,573 ಮತಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿದರು.


ಯಾರು ಸುರೇಶ್ ಗೋಪಿ?

ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿರುವ ಸುರೇಶ್ ಗೋಪಿ ಮಲಯಾಳಂ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ಇವರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ.

ಕೊಲ್ಲಂನಲ್ಲಿ ಚಲನಚಿತ್ರ ವಿತರಕ ಗೋಪಿನಾಥನ್ ಪಿಳ್ಳೈ ಮತ್ತು ಅವರ ಪತ್ನಿ ಜ್ಞಾನಲಕ್ಷ್ಮಿ ಅವರ ಮೂವರು ಮಕ್ಕಳಲ್ಲಿ ಸುರೇಶ ಗೋಪಿ ಕೂಡ ಒಬ್ಬರು. ಪ್ರಾಣಿಶಾಸ್ತ್ರದಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ನಟ, ಟಿವಿ ನಿರೂಪಕ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ ತಮ್ಮ ವಿನಮ್ರ ಸ್ವಭಾವ ಮತ್ತು ಸಮಾಜ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ.


ಬಹುಬೇಡಿಕೆಯ ನಟ

ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಸುರೇಶ್ ಗೋಪಿ, 1965ರಲ್ಲಿ ಓಡೈಲ್ ನಿನ್ನಲ್ಲಿ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅನಂತರ ಅವರು 1986ರಲ್ಲಿ ನೀರಮುಲ್ಲಾ ರಾವುಕಲ್ ಚಿತ್ರಕ್ಕೆ ಪ್ರವೇಶ ಮಾಡಿದರು. 1992ರಲ್ಲಿ ತಲಸ್ತಾನಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿದರು. ಏಕಲವ್ಯನ್ ಚಿತ್ರದ ಮೂಲಕ ಅವರು ಚಿತ್ರರಂಗದ ಅದ್ಭುತ ತಾರೆಯಾಗಿ ಗುರುತಿಸಿಕೊಂಡರು.

ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಕಲಿಯಾಟಂನಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 2015ರ ಬಳಿಕ ಚಿತ್ರರಂಗದಿಂದ ದೂರವಾದ ಅವರು 2020 ರಲ್ಲಿ ವರಣೆ ಅವಶ್ಯಮುಂದ್ ಚಿತ್ರದೊಂದಿಗೆ ಮತ್ತೆ ಬಣ್ಣ ಹಚ್ಚಿದರು.


ನಿರೂಪಕನಾಗಿಯೂ ಸೈ

2012ರಲ್ಲಿ ಸುರೇಶ್ ಗೋಪಿ ಅವರು ಕೌನ್ ಬನೇಗಾ ಕರೋಡ್ ಪತಿಯ ಮಲಯಾಳಂ ಆವೃತ್ತಿಯಾದ ನಿಂಗಲ್ಕ್ಕುಮ್ ಆಕಾಂ ಕೋಡೀಶ್ವರನ್ ಕಾರ್ಯಕ್ರಮದೊಂದಿಗೆ ಟಿವಿ ಶೋ ನಿರೂಪಣೆಗೆ ಇಳಿದರು. ಇದರಲ್ಲಿ ಅವರು ಲಕ್ಷಾಂತರ ಮಂದಿಯ ಹೃದಯವನ್ನು ಗೆದ್ದರು.

ವೈವಾಹಿಕ ಜೀವನ

ಸುರೇಶ್ ಗೋಪಿ ಅವರು ನಟಿ ಅರ್ಣಮುಲಾ ಪೊನ್ನಮ್ಮ ಅವರ ಮೊಮ್ಮಗಳು ರಾಧಿಕಾ ನಾಯರ್ ಅವರನ್ನು 1990 ರಲ್ಲಿ ವಿವಾಹವಾದರು. ಇವರಿಗೆ ಗೋಕುಲ್ ಸುರೇಶ್, ಭಾಗ್ಯ ಸುರೇಶ್, ಭವ್ನಿ ಸುರೇಶ್ ಮತ್ತು ಮಾಧವ್ ಸುರೇಶ್ ಎಂಬ ನಾಲ್ಕು ಮಕ್ಕಳಿದ್ದಾರೆ. ಗೋಕುಲ್ ಸುರೇಶ್ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ನಟನೆಗೆ ಕಾಲಿಟ್ಟಿದ್ದಾರೆ.


ಬದುಕಿನಲ್ಲಿ ನಡೆದ ದುರಂತ

ಸುರೇಶ್ ಗೋಪಿ ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅವರು ತಮ್ಮ ಮೊದಲ ಭೇಟಿಯಲ್ಲಿ ತಮ್ಮ ಪತ್ನಿ ರಾಧಿಕಾ ಅವರಿಗೆ ಇದನ್ನು ಹೇಳಿದ್ದರು. ರಾಧಿಕಾ ಅವರು ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಲಕ್ಷ್ಮಿ ಎಂದು ಹೆಸರಿಟ್ಟರು. 1992ರ ಜೂನ್ 6ರಂದು, ದಂಪತಿ ತಮ್ಮ ಒಂದೂವರೆ ವರ್ಷದ ಮಗಳೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿಂದ ಸುರೇಶ್ ತಮ್ಮ ಶೂಟಿಂಗ್‌ಗಾಗಿ ಕೊಚ್ಚಿಗೆ ಹೋದರೆ ರಾಧಿಕಾ ಮತ್ತು ಲಕ್ಷ್ಮಿ ಸುರೇಶ್ ಅವರ ಸಹೋದರನೊಂದಿಗೆ ತಮ್ಮ ಮನೆಗೆ ಮರಳಲು ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು, ಈ ಭೀಕರ ಅಪಘಾತದಲ್ಲಿ ಸುರೇಶ್ ಮತ್ತು ರಾಧಿಕಾ ತಮ್ಮ ಒಂದೂವರೆ ವರ್ಷದ ಮಗಳು ಲಕ್ಷ್ಮಿಯನ್ನು ಕಳೆದುಕೊಂಡರು. ಕೆಲವು ದಿನಗಳ ಕಾಲ ರಾಧಿಕಾ ಪ್ರಜ್ಞಾಹೀನರಾಗಿದ್ದರು. ಸುರೇಶ್ ಮತ್ತು ರಾಧಿಕಾ ಸದಾ ಲಕ್ಷ್ಮಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.


ರಾಜಕೀಯ ಜೀವನ

ಕಾಲೇಜಿನಲ್ಲಿದ್ದಾಗ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಸಕ್ರಿಯ ಸದಸ್ಯರಾಗಿದ್ದಾಗ ಸುರೇಶ್ ಗೋಪಿ ರಾಜಕೀಯದಲ್ಲಿ ಆಸಕ್ತಿಯನ್ನು ಪ್ರಾರಂಭಿಸಿದರು. 2016ರ ಏಪ್ರಿಲ್ ನಲ್ಲಿ ಸುರೇಶ್ ಗೋಪಿ ಅವರು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. 2016ರ ಅಕ್ಟೋಬರ್‌ನಲ್ಲಿ ಅವರು ಬಿಜೆಪಿ ಸೇರಿದರು.

ಇದನ್ನೂ ಓದಿ: Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

2019ರ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆದರೆ ಈ ಬಾರಿ ಮತ್ತೆ ತ್ರಿಶೂರ್‌ನಿಂದ ಕಣಕ್ಕೆ ಇಳಿದ ಅವರು ಭರ್ಜರಿ ಬಹುಮತದೊಂದಿಗೆ ಐತಿಹಾಸಿಕ ವಿಜಯ ದಾಖಲಿಸಿದರು.


ಸಮಾಜ ಸೇವೆ

ದತ್ತಿ ಕಾರ್ಯಗಳಿಂದಾಗಿ ಸುರೇಶ್ ಅವರು ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ನಿರಾಶ್ರಿತರಿಗೆ ಸೂರು ಕಲ್ಪಿಸುವುದರಿಂದ ಹಿಡಿದು, ಹಿಂದುಳಿದವರ ಸಂಪೂರ್ಣ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವವರೆಗೆ ಅವರ ಮಾನವೀಯ ಕಾರ್ಯಗಳು ಸಾಕಷ್ಟಿವೆ. ಇವರ ಸಮಾಜ ಸೇವೆಯ ಕುರಿತು ನಟ ಜಯರಾಮ್ ಹೇಳುವುದು ಹೀಗೆ.. ರಾಜಕಾರಣಿಗಳಾದ ಮೇಲೆ ಹಲವರು ಸಮಾಜ ಸೇವೆ ಮಾಡುತ್ತಾರೆ. ಆದರೆ ಸುರೇಶ್ ಗೋಪಿ ಇದಕ್ಕೆ ಅಪವಾದ. ರಾಜಕೀಯಕ್ಕೆ ಬರುವ ಮುನ್ನವೇ ಅವರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯತೊಡಗಿದರು. ಅದೂ ಪ್ರಚಾರವಿಲ್ಲದೆ. ಯಾರಾದರೂ ಕಷ್ಟವನ್ನು ಅವರ ಮುಂದೆ ಹೇಳಿಕೊಂಡರೆ ಸಾಕು ಅವರ ಕಣ್ಣುಗಳು ತೇವವಾಗುತ್ತವೆ ಎನ್ನುತ್ತಾರೆ ಅವರು.

Continue Reading

ಪ್ರಮುಖ ಸುದ್ದಿ

Kangana Ranaut: ನಟಿ, ಸಂಸದೆ ಕಂಗನಾ ರಣಾವತ್​ಗೆ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿಯಿಂದಲೇ ಕಪಾಳಮೋಕ್ಷ!

Kangana Ranaut :ಕಂಗನಾ ರಣಾವತ್​ ಈ ಬಗ್ಗೆ ದೂರು ನೀಡಿದ್ದು, ಮಹಿಳಾ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಂಗನಾ ಅವರಿಗೆ ಹೊಡೆದ ಮಹಿಳೆಯನ್ನು ಕುಲ್ವಿಂದರ್ ಕೌರ್ ಎಂದು ಹೆಸರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಕಂಗನಾ ರಣಾವತ್​ ವಿಮಾನದ ಮೂಲಕ ದೆಹಲಿಗೆ ಹೊರಟಿದ್ದರು. .

VISTARANEWS.COM


on

Kangana Ranaut
Koo

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದ ನಟಿ ಕಂಗನಾ ರಣಾವತ್ (Kangana Ranaut )​​ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ನಟ-ರಾಜಕಾರಣಿ ತನ್ನ ಫೋನ್ ಅನ್ನು ಟ್ರೇಯಲ್ಲಿ ಇಡಲು ನಿರಾಕರಿಸಿದ್ದರು. ಅಲ್ಲದೆ ಆ ಬಳಿಕ ಭದ್ರತಾ ಸಿಬ್ಬಂದಿಯನ್ನು ತಳ್ಳಿದ್ದರು. ಇದರಿಂದ ಕೋಪಗೊಂಡ ಅವರು ಮುಖದ ಮೇಲೆ ಹೊಡೆದಿದ್ದಾರೆ ಎನ್ನಲಾಗಿದೆ. ಆದರೆ ಇನ್ನೊಂದು ಮೂಲಗಳ ಪ್ರಕಾರ ನಟಿ ಈ ಹಿಂದೆ ರೈತ ಸಂಘಟನೆಗಳು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುವಾಗ ಅವರ ವಿರುದ್ಧ ಹೇಳಿಕೆ ನೀಡಿದ್ದರು. ಈ ಕೋಪ ರೈತ ಕುಟುಂಬಕ್ಕೆ ಸೇರಿದ್ದ ಭದ್ರತಾ ಸಿಬ್ಬಂದಿಗೆ ಇತ್ತು. ಏರ್​ಪೋರ್ಟ್​ನಲ್ಲಿ ಅವರು ಎದುರಾದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದಿಲ್ಲಿಯಲ್ಲಿ ಧರಣಿ ಕುಳಿತ ರೈತರ ವಿರುದ್ಧ ಕಂಗನಾ ಹೇಳಿಕೆ ನೀಡಿದ್ದಳು, ಆ ರೈತರ ಗುಂಪಿನಲ್ಲಿ ನನ್ನ ಅಮ್ಮ ಕೂಡ ಇದ್ದರು ಎಂದು ಆ ಮಹಿಳಾ ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದಾಳೆ.

ಕಂಗನಾ ರಣಾವತ್​ ಈ ಬಗ್ಗೆ ದೂರು ನೀಡಿದ್ದು, ಮಹಿಳಾ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಂಗನಾ ಅವರಿಗೆ ಹೊಡೆದ ಮಹಿಳೆಯನ್ನು ಕುಲ್ವಿಂದರ್ ಕೌರ್ ಎಂದು ಹೆಸರಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಕಂಗನಾ ರಣಾವತ್​ ವಿಮಾನದ ಮೂಲಕ ದೆಹಲಿಗೆ ಹೊರಟಿದ್ದರು.

ಇದನ್ನೂ ಓದಿ: Prajwal Revanna : ಪ್ರಜ್ವಲ್​ ರೇವಣ್ಣ ಮತ್ತೆ ನಾಲ್ಕು ದಿನ ಎಸ್​​ಐಟಿ ಕಸ್ಟಡಿಗೆ

ಕಂಗನಾ ಅವರು ಗುರುವಾರ ಮಧ್ಯಾಹ್ನ 3.30ಕ್ಕೆ ಏರ್​ಪೋರ್ಟ್​ಗೆ ಬಂದಿದ್ದರು. ಕಂಗನಾ ರಣಾವತ್​ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಗಾಗಿ ಬರುತ್ತಿದ್ದಾಗ ಕುಲ್ವಿಂದರ್ ಕೌರ್​ ಕೈ ಎತ್ತಿದರು. ಕಂಗನಾ ಕೂಡ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಸಿಬ್ಬಂದಿ ರೈತರ ಚಳವಳಿ ಕುರಿತು ನೀಡಿದ್ದ ಹೇಳಿಕೆಯಿಂದ ನನಗೆ ನೋವಾಗಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಅವರನ್ನು ಪ್ರಸ್ತುತ, ವಿಮಾನ ನಿಲ್ದಾಣದಲ್ಲಿರುವ ಕಮಾಂಡೆಂಟ್ ಕೋಣೆಯಲ್ಲಿ ಕುಳಿತಿರಿಸಲಾಗಿದೆ. ಕಂಗನಾ ದೆಹಲಿಗೆ ತೆರಳಿದ್ದಾರೆ.

ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

ನೇರಳೆ ಬಣ್ಣದ ಸೀರೆಯುಟ್ಟು ದೆಹಲಿಗೆ ಹೊರಟ ಕಂಗನಾ ರಣಾವತ್!

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು ರಾಜಕೀಯದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಇದೀಗ ಬಣ್ಣದ ಲೋಕಕ್ಕೆ ಬೈಬೈ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಕಂಗನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದೆಹಲಿಗೆ ಹೊರಡುವ ಮೊದಲು ತಾಯಿ ಆಶಾ ರಣಾವತ್‌ ಅವರಿಂದ ಆಶೀರ್ವಾದ ಪಡೆದು ಹೋಗುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನೇರಳೆ-ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಮಿಂಚಿದ್ದಾರೆ.

ಮೊದಲ ಚಿತ್ರಕ್ಕೆ “ದೆಹಲಿ ಕರೆಯುತ್ತಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಎರಡನೇ ಫೋಟೋದಲ್ಲಿ ತಾಯಿ ಆಶಾ ಅವರನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಮೂರನೇ ಫೋಟೊದಲ್ಲಿ ಸೆಲ್ಫಿ ತೆಗೆದುಕೊಂಡು, “ಸಂಸತ್ತಿಗೆ ಹೋಗುವ ದಾರಿಯಲ್ಲಿʼʼ ಎಂದು ಬರೆದುಕೊಂಡಿದ್ದಾರೆ. ಕಂಗನಾ ರಣಾವತ್ ಬಾಲಿವುಡ್ ತೊರೆಯಲು ನಿರ್ಧಾರ ಮಾಡಿದ್ದರೆ, ಇಂದಿರಾ ಗಾಂಧಿಯವರ ಜೀವನಾಧಾರಿತ ‘ಎಮರ್ಜೆನ್ಸಿ’ ಸಿನಿಮಾ ಕಂಗನಾ ಅವರ ಕೊನೆಯ ಚಿತ್ರವಾಗಲಿದೆ. ಈ ಸಿನಿಮಾ ಹಲವು ದಿನಗಳಿಂದ ಚರ್ಚೆಯಲ್ಲಿದೆ. ರಿಲೀಸ್‌ಗೆ ಸಮಯ ಸಿಗುತ್ತಿಲ್ಲ. ಈಗ ರಾಜಕೀಯದ ಗದ್ದಲದಲ್ಲಿ ಕಂಗನಾ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಫ್ಯಾನ್ಸ್‌ಗೆ ಕುತೂಹಲ ಹೆಚ್ಚಿದೆ.

ಕಂಗನಾ ಬಾಲಿವುಡ್ ತೊರೆಯಲು ನಿರ್ಧರಿಸಿದರೆ, ಅಭಿಮಾನಿಗಳು ಖಂಡಿತವಾಗಿಯೂ ಅವರನ್ನು ಬೆಳ್ಳಿತೆರೆಯಲ್ಲಿ ಮಿಸ್ ಮಾಡಿಕೊಳ್ಳುತ್ತಾರೆ. ಕಂಗನಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ತೆರೆ ಮೇಲೆ ಬರುವ ಕಂಗನಾ ಸಿನಿಮಾಗಾಗಿಯೇ ಕಾಯುವ ಫ್ಯಾನ್ಸ್ ಕೂಡ ಇದ್ದಾರೆ.

Continue Reading
Advertisement
TA Sharavana congratulated former CM hd Kumaraswamy who was elected to Lok Sabha from Mandya
ಬೆಂಗಳೂರು53 seconds ago

TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

Stock market Crash
ಪ್ರಮುಖ ಸುದ್ದಿ4 mins ago

Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಹಗರಣ ಎಂದು ಆರೋಪಿಸಿದ ರಾಹುಲ್ ಗಾಂಧಿ

Lok Sabha Election 2024
ರಾಜಕೀಯ5 mins ago

Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!

Fancy Handbags Fashion
ಫ್ಯಾಷನ್11 mins ago

Fancy Handbags Fashion: ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ಸಾಥ್‌!

Suresh Gopi
ರಾಜಕೀಯ16 mins ago

Suresh Gopi: ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿರುವ ಸುರೇಶ್‌ ಗೋಪಿ ಜೀವನದಲ್ಲಿ ನಡೆದಿತ್ತೊಂದು ಘೋರ ದುರಂತ

Karnataka weather Forecast
ಮಳೆ42 mins ago

Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ

Kangana Ranaut
ಪ್ರಮುಖ ಸುದ್ದಿ49 mins ago

Kangana Ranaut: ನಟಿ, ಸಂಸದೆ ಕಂಗನಾ ರಣಾವತ್​ಗೆ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿಯಿಂದಲೇ ಕಪಾಳಮೋಕ್ಷ!

ಕರ್ನಾಟಕ1 hour ago

Valmiki Corporation Scam: ರಾಜೀನಾಮೆ ಸ್ವಯಂಪ್ರೇರಿತ, ಯಾರ ಒತ್ತಡಕ್ಕೂ ಮಣಿದಿಲ್ಲ: ಬಿ.ನಾಗೇಂದ್ರ

Parachute Pants Fashion
ಫ್ಯಾಷನ್1 hour ago

Parachute Pants Fashion: ಪ್ಯಾರಾಶೂಟ್‌ ಪ್ಯಾಂಟ್ಸ್; ಟೀನೇಜ್‌ ಹುಡುಗಿಯರ ಹೊಸ ಟ್ರೆಂಡ್‌!

Actress Hema:
ಪ್ರಮುಖ ಸುದ್ದಿ1 hour ago

Actress Hema: ರೇವ್ ಪಾರ್ಟಿಯಲ್ಲಿ ಡ್ರಗ್ಸ್​ ಸೇವಿಸಿದ ಪ್ರಕರಣ; ನಟಿ ಹೇಮಾಗೆ ಮತ್ತೆ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌