ಟ್ವೀಟ್‌ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್‌‌, ಪೊಲೀಸ್‌ ವಿಚಾರಣೆ ತೀವ್ರ - Vistara News

ದೇಶ

ಟ್ವೀಟ್‌ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್‌‌, ಪೊಲೀಸ್‌ ವಿಚಾರಣೆ ತೀವ್ರ

‌ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್‌‌ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಮಾಡುತ್ತಿದ್ದ ಟ್ವೀಟ್‌ ಹಿಂದಿನ ಸಂಚನ್ನು ಬಯಲಿಗೆಳೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

ಮೊಹಮ್ಮದ್‌ ಜುಬೇರ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಟ್ವೀಟ್‌ ಮಾಡಿ ಬಂಧನಕ್ಕೊಳಗಾಗಿರುವ ಪತ್ರಕರ್ತ ಮೊಹಮ್ಮದ್ ಜುಬೇರ್‌ನನ್ನು ದೆಹಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆಲ್ಟ್‌ ನ್ಯೂಸ್‌ (alt news) ಮಾಧ್ಯಮದಲ್ಲಿ ಫ್ಯಾಕ್ಟ್‌ ಚೆಕ್‌ ನೆಪದಲ್ಲಿ ಅನೇಕ ವಿವಾದ ಸೃಷ್ಟಿಸಿದ ಆರೋಪ ಜುಬೇರ್‌ ಮೇಲಿದೆ. ಈ ಮಾಧ್ಯಮದಲ್ಲಿ ಸಾಮಾನ್ಯವಾಗಿ ಹಿಂದುತ್ವ ವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ಸುದ್ದಿಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು. ಇದು ವಿವಾದದ ಕಿಡಿ ಎಬ್ಬಿಸುತ್ತಿತ್ತು. ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಭಾಗ 153 (ಉದ್ದೇಶಪೂರ್ವಕ ಕೋಮು ಗಲಭೆಗೆ ಪ್ರಚೋದನೆ ನೀಡುವುದು) ಹಾಗೂ ವಿಭಾಗ 295A (ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಪೊಲೀಸ್‌ ಇಲಾಖೆಯ ಇಂಟಲಿಜೆನ್ಸ್‌ ಫ್ಯೂಷನ್‌ ಹಾಗೂ ಸ್ಟ್ರಾಟಜಿಕ್‌ ಆಪರೇಷನ್ ವಿಭಾಗ ಜುಬೇರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈತ ದೇಶದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ ಹಾಳು ಮಾಡುವಂತಹ ಟ್ವೀಟ್‌ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2020ರಲ್ಲೂ ಕೋಮು ಪ್ರಚೋದನಕಾರಿ ಟ್ವೀಟ್‌ ಮಾಡಿದ ಆರೋಪದಲ್ಲಿ ಜುಬೇರ್‌ನನ್ನು ಬಂಧಿಸಲಾಗತ್ತು. ಆ ಪ್ರಕರಣದಲ್ಲಿ ಜುಬೇರ್‌ ವಿರುದ್ಧ ಆಕ್ಷೇಪಾರ್ಹ ಸಂಗತಿ ಕಂಡುಬಂದಿಲ್ಲ ಎಂದು ಹೇಳಲಾಗಿತ್ತು. ಈಗ ಮತ್ತೊಮ್ಮೆ ಅದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

ಜುಬೇರ್‌ ಮಾಡಿದ ಟ್ವೀಟ್‌ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದರು. ಈಗ ಆ ಟ್ವೀಟ್‌ಗಳನ್ನು ಡಿಲೀಟ್‌ ಮಾಡಲಾಗಿದ್ದು, ಪೊಲೀಸರು ಅಂಥವರ ಪತ್ತೆಗೂ ಪ್ರಯತ್ನಿಸುತ್ತಿದ್ದಾರೆ.

ಏನಿದು ಪ್ರಕರಣ?‌

ಜುಬೇರ್‌ 2018ರಲ್ಲಿ ಹಾಗೂ 2020ರಲ್ಲಿ ಮಾಡಿದ ಎರಡು ಟ್ವೀಟ್‌ಗಳು ವಿವಾದ ಸೃಷ್ಟಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ 2020ರಲ್ಲಿ ಈತನನ್ನು ಬಂಧಿಸಲಾಗಿತ್ತು.

ಮಾರ್ಚ್‌ 24, 2018ರಂದು ಜುಬೇರ್‌, ಮೊದಲು: ಹನಿಮೂನ್‌ ಹೋಟೆಲ್‌, 2014ರ ನಂತರ: ಹನುಮಾನ್‌ ಹೋಟೆಲ್‌ ಎಂದು ಮಾರ್ಪಾಟು ಮಾಡಿದ ಚಿತ್ರ ಪೋಸ್ಟ್‌ ಮಾಡಿದ್ದ. ಇದಕ್ಕೆ ಪರ-ವಿರೋಧವಾಗಿ ಅನೇಕ ಮಂದಿ ಪ್ರತಿಕ್ರಿಯಿಸಿದ್ದರು. ಇದು ಪ್ರಚೋದನಾಕಾರಿ ಟ್ವೀಟ್‌ ಎಂದು ಪೊಲೀಸರು ಪರಿಗಣಿಸಿದ್ದರು. ಈ ರೀತಿಯ ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಜುಬೇರ್‌ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೇರ್‌ನನ್ನು ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಲು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಒಂದು ದಿನ ಪೊಲೀಸ್‌ ಕಸ್ಟಡಿಗೆ ಒಳಪಡಿಸಲು ಅನುಮತಿ ನೀಡಿತ್ತು.

2020ರಲ್ಲಿ ಜುಬೇರ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ವೇಳೆ ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಆ ತನಿಖೆಯಲ್ಲಿ ಜುಬೇರ್‌ ವಿರುದ್ಧ ಯಾವುದೇ ಆಕ್ಷೇಪಾರ್ಹ ಸಂಗತಿ ಕಂಡಿಲ್ಲ ಎಂದು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಟ್ವೀಟ್‌ ಇನ್ನಷ್ಟು ಹೊಸ ಟ್ವೀಟ್‌ಗಳಿಗೆ ಕಾರಣವಾಗಿದ್ದು, ಕೋಮು ಪ್ರಚೋದನಕಾರಿಯಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಜುಬೇರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನು ನಿರಾಕರಿಸಿದ ನ್ಯಾಯಾಲಯ

ಜುಬೇರ್‌ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದಿರುವ ಪೊಲೀಸರು, ವಿಚಾರಣೆ ಮುಂದುವರಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ದಿನಕ್ಕೆ ಅರ್ಧಗಂಟೆಯ ಮಟ್ಟಿಗೆ ತಮ್ಮ ವಕೀಲರನ್ನು ಭೇಟಿ ಮಾಡಲು ನ್ಯಾಯಾಲಯ ಅನುಮತಿ ನೀಡಿದ್ದರೂ, ವಿಚಾರಣೆಗೆ ಆತ ಸಹಕರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಒಂದು ದಿನದ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿದ್ದು, ನ್ಯಾಯಾಲಯ ಇದಕ್ಕೆ ಸಮ್ಮತಿಸಿದೆ.

ಪ್ರತೀಕ್‌ ಸಿನ್ಹಾ ಪ್ರತಿಕ್ರಿಯೆ

ಈ ಪ್ರಕರಣದ ಹಿನ್ನೆಲೆಯಲ್ಲಿ ಆಲ್ಟ್‌ ನ್ಯೂಸ್‌ನ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಪೊಲೀಸರ ವಿರುದ್ಧ ಟ್ವೀಟ್‌ ಮಾಡಿದ್ದಾರೆ. ಜುಬೇರ್‌ ಅವರ ವಿರುದ್ಧ ಪೊಲೀಸರು 202ರಲ್ಲಿ ಮಾಡಿದ ಟ್ವೀಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ. ಆದರೆ, ಆ ಪ್ರಕರಣದಲ್ಲಿ ಬಂಧಿಸದಂತೆ ನ್ಯಾಯಾಲಯದ ಆದೇಶವಿದೆ. ಈಗ ಪೊಲೀಸರು ಜುಬೇರ್‌ ಅವರನ್ನು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ಇದಕ್ಕೆ ಯಾವುದೇ ನೋಟಿಸ್‌ ಅಥವಾ ಎಫ್‌ಐಆರ್‌ ಪ್ರತಿ ನೀಡಿಲ್ಲ ಎಂದು ಪ್ರತೀಕ್‌ ಸಿನ್ಹಾ ಆರೋಪಿಸಿದ್ದಾರೆ.

ಜುಬೇರ್‌ ಬಂಧನಕ್ಕೆ ಪ್ರತಿಪಕ್ಷ ಮುಖಂಡರ ವಿರೋಧ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ಬಿಜೆಪಿ ನಡೆಸುವ ಅಪರಾಧಗಳನ್ನು ಬಹಿರಂಗ ಪಡಿಸಿದವರಿಗೆ ಆಪತ್ತು ಕಾಡುತ್ತದೆ. ಸತ್ಯದ ಒಂದು ಬಾಯಿ ಮುಚ್ಚಿಸಿದರೆ, ಸತ್ಯದ ಸಾವಿರ ಬಾಯಿ ತೆರೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಡೆರೆಕ್‌ ಒಬ್ರೈನ್‌ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಅಸಾದುದ್ದೀನ್‌ ಮತ್ತು ಅನೇಕರು ಜುಬೇರ್‌ ಬಂಧನದ ವಿರುದ್ಧ ಟ್ವೀಟ್‌ ಮಾಡಿದರು.

ಜುಬೇರ್‌ ವಿರುದ್ಧ ಮತ್ತಿತರ ಪ್ರಕರಣಗಳು

ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮ್ಮದ್‌ ವಿರುದ್ಧ ನೀಡಿದ ವಿಡಿಯೋವನ್ನು ಮೊದಲು ಪ್ರಚಾರಕ್ಕೆ ತಂದಿದ್ದು ಜುಬೇರ್.‌ ನೂಪುರ್‌ ಶರ್ಮಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ದೇಶದ ಅನೇಕ ಭಾಗದಲ್ಲಿ ಭಾರಿ ಪ್ರಮಾಣದ ಗಲಭೆ ಉಂಟಾಗಿತ್ತು. ನಂತರ, ನೂಪುರ್‌ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.

ಈ ವರ್ಷದ ಆರಂಭದಲ್ಲಿ ಹರಿದ್ವಾರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌ ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಹಿಂಸಾಚಾರ ನಡೆಸುವ ಸಭೆ ನಡೆಸಲಾಗುತ್ತಿದೆ ಎಂಬ ವಿವಾದಾತ್ಮಕ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು ಎಂಬ ಆರೋಪ ಜುಬೇರ್‌ ಮೇಲಿದೆ.

ಇದನ್ನೂ ಓದಿ: Varanasi serial Bomb blast case: ಪ್ರಧಾನ ಆರೋಪಿ ವಲಿಯುಲ್ಲಾಗೆ ಮರಣದಂಡನೆ ಶಿಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Job Alert: ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವಿವಿಧ ವಿಷಯಗಳಲ್ಲಿನ ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆ ಇದಾಗಿದೆ. ಒಟ್ಟು 164 ಹುದ್ದೆ ಖಾಲಿ ಇದೆ. ಬಿಇ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2. ದೇಶದ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಿ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (National Fertilizers Limited) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವಿವಿಧ ವಿಷಯಗಳಲ್ಲಿನ ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆ ಇದಾಗಿದೆ. ಒಟ್ಟು 164 ಹುದ್ದೆ ಖಾಲಿ ಇದೆ (NFL Recruitment 2024). ಬಿಇ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2 (Job Alert).

ಹುದ್ದೆಗಳ ವಿವರ

ಮ್ಯಾನೇಜ್‌ಮೆಂಟ್‌ ಟ್ರೈನಿ (ಕೆಮಿಕಲ್)- 56
ಮ್ಯಾನೇಜ್‌ಮೆಂಟ್‌ ಟ್ರೈನಿ (ಮೆಕ್ಯಾನಿಕಲ್)- 18
ಮ್ಯಾನೇಜ್‌ಮೆಂಟ್‌ ಟ್ರೈನಿ (ಎಲೆಕ್ಟ್ರಿಕಲ್)- 21
ಮ್ಯಾನೇಜ್‌ಮೆಂಟ್‌ ಟ್ರೈನಿ (ಇನ್ಸ್ಟ್ರುಮೆಂಟೇಶನ್)- 17
ಮ್ಯಾನೇಜ್‌ಮೆಂಟ್‌ ಟ್ರೈನಿ (ಕೆಮಿಕಲ್ ಲ್ಯಾಬ್)- 12
ಮ್ಯಾನೇಜ್‌ಮೆಂಟ್‌ ಟ್ರೈನಿ (ಸಿವಿಲ್)- 3
ಮ್ಯಾನೇಜ್‌ಮೆಂಟ್‌ ಟ್ರೈನಿ (ಫೈರ್ & ಸೇಫ್ಟಿ)- 5
ಮ್ಯಾನೇಜ್‌ಮೆಂಟ್‌ ಟ್ರೈನಿ (ಮಾಹಿತಿ ತಂತ್ರಜ್ಞಾನ)- 5
ಮ್ಯಾನೇಜ್‌ಮೆಂಟ್‌ ಟ್ರೈನಿ (ಮೆಟೀರಿಯಲ್ಸ್) -11
ಮ್ಯಾನೇಜ್‌ಮೆಂಟ್‌ ಟ್ರೈನಿ (ಎಚ್ಆರ್)- 16

ವಿದ್ಯಾರ್ಹತೆ ಮತ್ತು ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್ / ಬಿಎಸ್‌ಸಿ / ಎಂಬಿಎ / ಎಂಎಸ್‌ಸಿ / ಪಿಜಿ ಡಿಪ್ಲೋಮಾ / ಪಿಜಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು / ಮಾಜಿ ಯೋಧರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 700 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು. ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಆಯ್ಕೆಯಾದವರಿಗೆ 1 ವರ್ಷ ತರಬೇತಿ ನೀಡಲಾಗುತ್ತದೆ. ಬಳಿಕ 3 ವರ್ಷಗಳ ಒಪ್ಪಂದದ ಮೇರೆಗೆ ನೇಮ ಮಾಡಿಕೊಳ್ಳಲಾಗುತ್ತದೆ. ದೇಶದ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಮಾತ್ರ ಅರ್ಜಿ ಸಲ್ಲಿಸಿ. ಆಯ್ಕೆಯಾದವರಿಗೆ 40,000 ರೂ.-1,40,000 ರೂ. ಮಾಸಿಕ ವೇತನ ಲಭಿಸಲಿದೆ.

NFL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (https://careers.nfl.co.in/).

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://careers.nfl.co.in/).
  • ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
  • ಬಳಿಕ ಲಾಗಿನ್‌ ಆಗಿ ಸೂಕ್ತ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ +91-8660511568 ನಂಬರ್‌ಗೆ ಕರೆ ಮಾಡಿ.

ಇದನ್ನೂ ಓದಿ: Job Alert: ಕಾಟನ್‌ ಕಾರ್ಪೋರೇಷನ್‌ನಲ್ಲಿದೆ 214 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Continue Reading

ವೈರಲ್ ನ್ಯೂಸ್

Viral News: ಮಾನವನ ಬೆರಳಾಯ್ತು, ಇದೀಗ ಐಸ್‌ಕ್ರೀಂನಲ್ಲಿ ಹುಳ ಪತ್ತೆ; ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪ ಎಂದ ನೆಟ್ಟಿಗರು

Viral News: ನೀವು ಐಸ್‌ಕ್ರೀಂ ಪ್ರಿಯರೆ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. ಉತ್ತರ ಪ್ರದೇಶದ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಜರಿಹುಳ ಪತ್ತೆಯಾಗಿದೆ. ಸದ್ಯ ಈ ಫೋಟೊ, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ಮುಂಬೈಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿತ್ತು. ಆ ಘಟನೆ ಮರೆಯಾಗುವ ಮುನ್ನವೇ ಈ ಬೆಳವಣಿಗೆ ನಡೆದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

VISTARANEWS.COM


on

Viral News
Koo

ಲಕ್ನೋ: ಇತ್ತೀಚೆಗೆ ಮುಂಬೈಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿತ್ತು. ಈ ಶಾಕ್‌ನಿಂದ ಜನರು ಇನ್ನೂ ಹೊರ ಬಂದಿಲ್ಲ. ಅದಕ್ಕಿಂತ ಮೊದಲೇ ಇನ್ನೊಂದು ಅಂತಹ ಅವಾಂತರ ಎದುರಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ ಪ್ರತಿಷ್ಠಿತ ಬ್ರ್ಯಾಂಡ್‌ನ ಐಸ್‌ಕ್ರೀಂನಲ್ಲಿ ಜರಿಹುಳ (Centipede) ಕಂಡು ಬಂದಿದೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ (Viral News).

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್‌ 12ರಲ್ಲಿ ವಾಸವಾಗಿರುವ ದೀಪಾ ದೇವಿ ಎನ್ನುವ ಮಹಿಳೆ ತನ್ನ 5 ವರ್ಷದ ಮಗನಿಗೆ ಮಾವಿನ ಹಣ್ಣಿನ ಮಿಲ್ಕ್‌ ಶೇಕ್‌ ಮಾಡಿಕೊಡಲು ಆನ್‌ಲೈನ್‌ ಆ್ಯಪ್‌ ಮೂಲಕ ವೆನಿಲ್ಲಾ ಪ್ಲೇವರ್‌ನ ಐಸ್‌ಕ್ರೀಂ ಆರ್ಡರ್‌ ಮಾಡಿದ್ದರು. ಕೆಲಚೇ ಹೊತ್ತಲ್ಲಿ ಪಾರ್ಸಲ್‌ ಏನೋ ಆಕೆಯ ಕೈ ಸೇರಿತು. ಆದರೆ ಬಾಕ್ಸ್‌ ಓಪನ್‌ ಮಾಡಿದಾಗ ಅವರಿಗೆ ಆಘಾತ ಎದುರಾಗಿತ್ತು. ಬಾಕ್ಸ್‌ನ ಮುಚ್ಚಳ ತೆರೆಯುತ್ತಿದ್ದಂತೆ ಐಸ್‌ಕ್ರೀಂನಲ್ಲಿ ಹುದುಗಿದ್ದ ಜರಿಹುಳ ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಐಸ್‌ಕ್ರೀಂ ಬಂದ ಖುಷಿ ಜರ್ರನೆ ಕರಗಿ ಹೋಗಿತ್ತು.

ವಿಡಿಯೊ ವೈರಲ್‌

ಐಸ್‌ಕ್ರೀಂ ಬಾಕ್ಸ್‌ ಮತ್ತು ಅದರಲ್ಲಿನ ಹುಳವನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊದಲ್ಲಿ ದೀಪ ದೇವಿ ಅವರು ಬಾಕ್ಸ್‌ ಮುಚ್ಚಳ ತೆರೆಯುತ್ತಿದ್ದಂತೆ ಅದರಲ್ಲಿ ಹುಳ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಸದ್ಯ ಈ ಘಟನೆ ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹುಳ ಪತ್ತೆಯಾಗಿರುವ ಕುರಿತು ದೀಪಾ ದೇವಿ ಅವರು ಡೆಲಿವರಿ ಮಾಡಿರುವ ಆ್ಯಪ್‌ಗೆ ದೂರು ನೀಡಿದ್ದು, ಕೂಡಲೇ ಅವರು ಹಣವನ್ನು ಹಿಂದಿರುಗಿಸಿದ್ದಾರೆ. ಜತೆಗೆ ಐಸ್‌ಕ್ರೀಂ ಕಂಪನಿಗೆ ಮಾಹಿತಿ ರವಾನಿಸಿದ್ದಾರೆ.

ಈ ವಿಷಯ ಹೊರ ಬೀಳುತ್ತಿದ್ದಂತೆ ಕ್ರಮಕ್ಕೆ ಮುಂದಾದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸೆಕ್ಟರ್ -22 ರಲ್ಲಿರುವ ಆ್ಯಪ್‌ ಸ್ಟೋರ್‌ಗೆ ಭೇಟಿ ನೀಡಿ ಆ ಬ್ಯಾಚ್ ಐಸ್‌ಕ್ರೀಂ ಮಾರಾಟವನ್ನು ನಿಲ್ಲಿಸಿದೆ. ಜತೆಗೆ ಐಸ್‌ಕ್ರೀಂ ತಯಾರಿಕಾ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಭಾನುವಾರ ಪ್ರಕರಣ ದಾಖಲಾಗಿದೆ. ಇನ್ನು ಐಸ್‌ಕ್ರೀಂನಲ್ಲಿ ಏನೇನು ಪತ್ತೆಯಾಗುತ್ತವೋ ಎಂದು ನೆಟ್ಟಿಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

ಮಾನವನ ಬೆರಳು ಪತ್ತೆ

ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಮುಂಬೈಯ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜತೆಗೆ ತನ್ನ ಸಹೋದರನಿಗಾಗಿ ಮೂರು ಬಟರ್ ಸ್ಕಾಚ್ ಕೋನ್ ಐಸ್‌ಕ್ರೀಂ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಮನೆಗೆ ಬಂದ ಐಸ್‌ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿತ್ತು. ಆಗ ಆತ ಸೂಕ್ಷ್ಮವಾಗಿ ನೋಡಿದಾಗ ಮನುಷ್ಯನ ಕೈ ಬೆರಳು ಕಂಡು ಬಂದಿತ್ತು. ಅದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದ. ಈ ಸುದ್ದಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Continue Reading

ದೇಶ

Madrasa: ಬಕ್ರೀದ್‌ ಹಿನ್ನೆಲೆ ಮದರಸಾದಲ್ಲೇ ಗೋವುಗಳ ಬಲಿ; ನೂರಾರು ಹಿಂದುಗಳಿಂದ ದಾಳಿ, ಸೆಕ್ಷನ್‌ 144 ಜಾರಿ!

Madrasa: ಮೇಡಕ್‌ ಜಿಲ್ಲೆಯಲ್ಲಿರುವ ಮದರಸಾದ ಮೇಲೆ ಹಿಂದುಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಕಲ್ಲುತೂರಾಟ ನಡೆದಿದೆ. ಹಿಂದುಗಳು ಹಾಗೂ ಮುಸ್ಲಿಮರು ಗಾಯಗೊಂಡಿದ್ದಾರೆ. ಗಾಯಗೊಂಡ ಕೆಲ ಮುಸ್ಲಿಮರನ್ನು ಪ್ರಿನ್ಸೆಸ್‌ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದಷ್ಟು ಜನ ಆಸ್ಪತ್ರೆ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮದರಸಾ ಸುತ್ತಮುತ್ತಲೂ ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ.

VISTARANEWS.COM


on

Madrasa
Koo

ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿರುವ (Medak District) ಮದರಸಾವೊಂದರಲ್ಲಿ (Madrasa) ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿ ನೂರಾರು ಜನ ಮದರಸಾ ಮೇಲೆ ದಾಳಿ ನಡೆಸಿದ್ದಾರೆ. ಮದರಸಾದಲ್ಲಿ ಬಕ್ರೀದ್‌ ಹಬ್ಬದ (Bakrid) ಹಬ್ಬದ ಹಿನ್ನೆಲೆಯಲ್ಲಿ ಗೋವುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಡುತ್ತಲೇ ನೂರಾರ ಹಿಂದುಗಳು ಮದರಸಾ ಮೇಲೆ ದಾಳಿ ನಡೆಸಿದ್ದಾರೆ. ಮದರಸಾ ಆಡಳಿತ ಮಂಡಳಿ ಸಿಬ್ಬಂದಿ ಮೇಲೆ ಹಲ್ಲೆ, ಪೀಠೋಪಕರಣಗಳು, ಅಲ್ಲಿದ್ದ ವಾಹನಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮೇಡಕ್‌ ಜಿಲ್ಲೆಯಲ್ಲಿರುವ ಮಿನ್ಹಾಜ್‌ ಉಲ್‌ ಉಲೂಮ್‌ ಮದ್ರಸಾದಲ್ಲಿ ಶನಿವಾರ ರಾತ್ರಿ (ಜೂನ್‌ 15) ಗೋವುಗಳ ವಧೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಹಿಂದು ಸಂಘಟನೆಗಳ ನೂರಾರು ಕಾರ್ಯಕರ್ತರು ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ಮಸೀದಿ ಮೇಲೆ ದಾಳಿ ನಡೆಸಿದ್ದಾರೆ. ಹಿಂದುಗಳು ದಾಳಿ ನಡೆಸುತ್ತಲೇ ಮುಸ್ಲಿಮರು ಕೂಡ ಕಲ್ಲುತೂರಾಟದ ಮೂಲಕ ಪ್ರತಿದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಮರು ಗಾಯಗೊಂಡಿದ್ದಾರೆ. ಗಾಯಗೊಂಡ ಕೆಲ ಮುಸ್ಲಿಮರನ್ನು ಪ್ರಿನ್ಸೆಸ್‌ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದಷ್ಟು ಜನ ಆಸ್ಪತ್ರೆ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮದರಸಾ ಸುತ್ತಮುತ್ತಲೂ ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಹಲವು ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮದರಸಾ ಮೇಲೆ ನಡೆದ ದಾಳಿಯನ್ನು ಎಐಎಂಐಎಂ ಶಾಸಕ ಕೆ. ಕೌಸರ್‌ ಮಹಿಯುದ್ದೀನ್‌ ಖಂಡಿಸಿದ್ದಾರೆ. “ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದು ವಾಹಿನಿ ಸಂಘಟನೆಗಳ ಸಾವಿರಾರು ಜನರು ಮದರಸಾ ಮೇಲೆ ದಾಳಿ ನಡೆಸಿ, ಆಡಳಿತ ಮಂಡಳಿಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಮದರಸಾದಲ್ಲಿದ್ದ ಹಲವು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ, ಆಸ್ಪತ್ರೆಗೂ ಬಂದು ಇವರು ಗಲಾಟೆ ಮಾಡಿದ್ದಾರೆ. ಇದು ಖಂಡನೀಯವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Continue Reading

ವೈರಲ್ ನ್ಯೂಸ್

Shivraj Chouhan: ರೈಲಿನಲ್ಲಿ ಜನ ಸಾಮಾನ್ಯರಂತೆ ಪ್ರಯಾಣಿಸಿ ಸರಳತೆ ಮೆರೆದ ಶಿವರಾಜ್‌ ಸಿಂಗ್‌ ಚೌಹಾಣ್‌; ಸಚಿವರ ನಡೆಗೆ ವ್ಯಾಪಕ ಪ್ರಶಂಸೆ

Shivraj Chouhan: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾಗಿದ್ದಾರೆ. ದೆಹಲಿಯಿಂದ ಅವರು ಭೋಪಾಲ್‌ಗೆ ರೈಲಿನಲ್ಲಿ ತೆರಳಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜನ ಸಾಮಾನ್ಯರೊಂದಿಗೆ ಬೆರೆತು ಪ್ರಯಾಣ ಬೆಳೆಸಿದ ಅವರ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ಅವರ ವಿರುದ್ಧ ಬರೋಬ್ಬರಿ 8.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

VISTARANEWS.COM


on

Shivraj Chouhan
Koo

ಭೋಪಾಲ್‌: ಕೇಂದ್ರ ಸಚಿವ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Chouhan) ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣ ಬೆಳೆಸಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ. ಕೇಂದ್ರ ಸಚಿವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ (Viral News). ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ವಿದಿಶಾದಿಂದ ಜಯಗಳಿಸಿರುವ ಅವರು ದೆಹಲಿಯಿಂದ ಭೋಪಾಲ್‌ಗೆ ರೈಲಿನಲ್ಲಿ ತೆರಳಿದರು.

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಮ್ಮ ಪತ್ನಿಯೊಂದಿಗೆ ದೆಹಲಿಯಿಂದ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಸಂಚರಿಸಿದ್ದು, ಪ್ರಯಾಣದ ವೇಳೆ ರೈಲಿನಲ್ಲಿದ್ದ ಸಹಯಾತ್ರಿಕರೊಂದಿಗೆ ನಗು ನಗುತ್ತಾ ಮಾತನಾಡಿದರು. ಚಿಕ್ಕ ಮಕ್ಕಳನ್ನು ಎತ್ತಿ ಮುದ್ದಾಡಿ, ಫೋಟೊಗಳಿಗೆ ಪೋಸ್ ನೀಡಿದರು. ಕೆಲವರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಸಹ ಕಂಡುಬಂತು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ರೈಲು ಪ್ರಯಾಣದ ಚಿತ್ರಗಳನ್ನು ಹಂಚಿಕೊಂಡಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ಭಾರತೀಯ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಮುಂದಾಳತ್ವದಲ್ಲಿ ಭಾರತೀಯ ರೈಲ್ವೆ ನಿರ್ವಹಣೆ ಮತ್ತು ಕಾರ್ಯಾಚರಣೆಯ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ನವ ಭಾರತದ ವೇಗದ ಅಗತ್ಯಗಳನ್ನು ಪೂರೈಸಲು ಮತ್ತು ಪ್ರಯಾಣವನ್ನು ಸುರಕ್ಷಿತ ಮತ್ತು ಆರಾಮದಾಯಕವಾಗಿಸಲು ಭಾರತೀಯ ರೈಲ್ವೆ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಕಳೆದ ವರ್ಷ ನಡೆದ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿಯಾಗಿ ಹಲವು ಜನಪರ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಖ್ಯಾತಿ ಅವರದ್ದು. ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಅವರು ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಆಯ್ಕೆಯಾಗಿದ್ದಾರೆ. ಬುಡಕಟ್ಟು ನಾಯಕ ಅರ್ಜುನ್ ಮುಂಡಾ ಅವರ ಬದಲಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಹೊಣೆ ಹೊತ್ತಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ಅವರ ವಿರುದ್ಧ ಬರೋಬ್ಬರಿ 8.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

ಶಿವರಾಜ್ ಸಿಂಗ್ ಚೌಹಾಣ್‌ಗೆ ಸಿಗದ ಸಿಎಂ ಹುದ್ದೆ; ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯರು!

ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದ್ದರೂ ಮುಖ್ಯಮಂತ್ರಿಯಾಗಿ ಹೊಸ ಮುಖ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಪಾಲ ಮುಂಗುಭಾಯ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿ ಹೊರ ಬಂದಾಗ ಮಹಿಳಾ ಅಭಿಮಾನಿಗಳು ಅವರನ್ನು ಭೇಟಿ ಮಾಡಿ ತಮ್ಮ ದುಃಖ ವ್ಯಕ್ತಪಡಿಸಿದ್ದರು. ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಪ್ಪಿಕೊಂಡ ಮಹಿಳೆಯರು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೊ ವೈರಲ್ ಆಗಿತ್ತು.

Continue Reading
Advertisement
Job Alert
ಉದ್ಯೋಗ18 mins ago

Job Alert: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

murder case in Bengaluru rural
ಬೆಂಗಳೂರು ಗ್ರಾಮಾಂತರ18 mins ago

Murder case : ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದ ಬಾಯ್‌ಫ್ರೆಂಡ್‌ನನ್ನು ಕೊಂದು ಮುಗಿಸಿದ ಮಗ

V Cinemas multiplex inauguration by dolly dhanjay Ramesh arvind
ಸ್ಯಾಂಡಲ್ ವುಡ್18 mins ago

V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ

Petrol Diesel Price
ರಾಜಕೀಯ32 mins ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Team India Coach
ಕ್ರೀಡೆ45 mins ago

Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

murder Case
ಬೆಂಗಳೂರು ಗ್ರಾಮಾಂತರ51 mins ago

Murder Case : ಓವರ್‌ ಟೇಕ್‌ ವಿಷ್ಯಕ್ಕೆ ಯುವಕನ ಕೊಚ್ಚಿ ಕೊಂದ ದುಷ್ಕರ್ಮಿಗಳು; ಮಗನ ಶವ ಕಂಡು ತಂದೆ ಕಣ್ಣೀರು

R Ashok
ಕರ್ನಾಟಕ56 mins ago

R Ashok:‌ ದುಡ್ಡಿಗಾಗಿ ಕಾರ್ಪೊರೇಷನ್‌, ಯುಟಿಲಿಟಿ ಬಿಲ್ಡಿಂಗ್‌ ಅಡ ಇಡಲು ಸಿದ್ದರಾಮಯ್ಯ ಪ್ಲಾನ್; ಅಶೋಕ್‌ ಆರೋಪ

Viral News
ವೈರಲ್ ನ್ಯೂಸ್1 hour ago

Viral News: ಮಾನವನ ಬೆರಳಾಯ್ತು, ಇದೀಗ ಐಸ್‌ಕ್ರೀಂನಲ್ಲಿ ಹುಳ ಪತ್ತೆ; ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪ ಎಂದ ನೆಟ್ಟಿಗರು

Chandan Shetty Students Party Video Song Vidyarthi Vidyarthiniyare Movie
ಸ್ಯಾಂಡಲ್ ವುಡ್1 hour ago

Chandan Shetty: ಡಿವೋರ್ಸ್‌ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ!

Vijayanagara News
ವಿಜಯನಗರ2 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ2 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ24 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌