Mann Ki Baat; ಮನ್​ ಕೀ ಬಾತ್​​ನಲ್ಲಿ ’ತುರ್ತು ಪರಿಸ್ಥಿತಿ' ನೆನಪು; ಒಂದು ವಾರ ಮೊದಲು ಪ್ರಸಾರಕ್ಕೆ ಕಾರಣ ಏನು? - Vistara News

ದೇಶ

Mann Ki Baat; ಮನ್​ ಕೀ ಬಾತ್​​ನಲ್ಲಿ ’ತುರ್ತು ಪರಿಸ್ಥಿತಿ’ ನೆನಪು; ಒಂದು ವಾರ ಮೊದಲು ಪ್ರಸಾರಕ್ಕೆ ಕಾರಣ ಏನು?

PM Modi: ಜೂ.21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಯೋಗದ ಮಹತ್ವದ ಬಗ್ಗೆ ಇಂದಿನ ಮನ್​ ಕೀ ಬಾತ್​ನಲ್ಲಿ ತಿಳಿಸಿದರು. ಈ ಸಲದ ಥೀಮ್​ ಏನೆಂಬುದನ್ನೂ ಹೇಳಿದರು.

VISTARANEWS.COM


on

PM Modi
ಪ್ರಧಾನಿ ಮೋದಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್​​ನ (Mann Ki Baat) 102ನೇ ಆವೃತ್ತಿಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ಪ್ರತಿ ತಿಂಗಳ (PM Modi Mann Ki Baat) ಕೊನೇ ಭಾನುವಾರ ಪ್ರಸಾರವಾಗುತ್ತದೆ. ಆದರೆ ಈ ಸಲ ಮೂರನೇ ಭಾನುವಾರವೇ ಅಂದರೆ ಒಂದು ವಾರ ಮುಂಚಿತವಾಗಿಯೇ ಮನ್​ ಕೀ ಬಾರ್​ ಟೆಲಿಕಾಸ್ಟ್ ಆಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪ್ರಧಾನಿ ಮೋದಿ ಮನ್​ ಕೀ ಬಾತ್ ಪ್ರಾರಂಭದಲ್ಲೇ ಹೇಳಿದರು.

ತಾವು ಮುಂದಿನ ವಾರ ಅಮೆರಿಕ ಪ್ರವಾಸದಲ್ಲಿ ಇರುವುದರಿಂದ ಒಂದು ವಾರ ಮೊದಲೇ ಮನ್​ ಕೀ ಬಾತ್​ ಪ್ರಸಾರ ಆಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ‘ನಾನು ಮುಂದಿನ ವಾರ ಅಮೆರಿಕದಲ್ಲಿ ಇರುತ್ತೇನೆ. ಹೀಗೆ ಅಮೆರಿಕ ಪ್ರವಾಸಕ್ಕೆ ಹೋಗುವುದಕ್ಕೂ ಮೊದಲೇ ದೇಶದ ಜನರೊಂದಿಗೆ ‘ಮನ್​ ಕೀ ಬಾತ್​’ ಮೂಲಕ ಮಾತಾಡುವುದು ಒಳ್ಳೆಯದು ಎಂದು ನನಗೆ ಅನ್ನಿಸಿತು. ಈ ಮಾತುಗಳನ್ನು ಕೇಳಿ ನನ್ನನ್ನು ನೀವು ಹರಸಿ, ಆಶೀರ್ವದಿಸಿದರೆ ಅದು ನನಗೆ ಶಕ್ತಿ ಕೊಡುತ್ತದೆ’ ಎಂದು ಪ್ರಧಾನಿ ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭ ನೆನಪಿಸಿಕೊಂಡ ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್​ ಪ್ರಾರಂಭದಲ್ಲಿ ‘ತುರ್ತು ಪರಿಸ್ಥಿತಿ’ ಯನ್ನು ನೆನಪಿಸಿಕೊಂಡಿದ್ದಾರೆ. 1975ರ ಜೂನ್​ 25ರಂದು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ಎಮರ್ಜನ್ಸಿ ಪ್ರಸ್ತಾಪ ಮಾಡಿದ ಅವರು, ‘ಜೂನ್​ 25 ನಮ್ಮ ದೇಶದ ಇತಿಹಾಸದಲ್ಲಿ ಯಾವತ್ತಿಗೂ ಕರಾಳ ದಿನವಾಗಿಯೇ ಉಳಿದುಕೊಳ್ಳುತ್ತಿದೆ. ಇಂದು ನಾವು ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ಇತಿಹಾಸದಲ್ಲಿ ಆಗಿಹೋದ ಪ್ರಮಾದವನ್ನು ನೆನಪಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಆ ಕ್ಷಣ ಎಂದಿಗೂ ಕರಾಳದಿನವೇ ಆಗಿರುತ್ತದೆ. ಆ ದಿನವನ್ನು ನೆನಪಿಸಿಕೊಳ್ಳುವ ಮೂಲಕ ಇಂದಿನ ಯುವಜನರು, ಪೀಳಿಗೆಯವರು ಪ್ರಜಾಪ್ರಭುತ್ವದ ಮಹತ್ವ ಅರಿತುಕೊಳ್ಳಬೇಕು. ಅಂದು 1975ರಲ್ಲಿ ಅಂದಿನ ಪ್ರಧಾನಿ ತುರ್ತು ಪರಿಸ್ಥಿತಿ ಹೇರುವಾಗ ಲಕ್ಷಾಂತರ ಜನರು ವಿರೋಧಿಸಿದ್ದರು’ ಎಂದು ಪ್ರಧಾನಿ ಮೋದಿ ಹೇಳಿದರು.

ಎಲ್ಲರೂ ಯೋಗ ಮಾಡಿ

ಜೂ.21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಯೋಗದ ಮಹತ್ವದ ಬಗ್ಗೆ ಇಂದಿನ ಮನ್​ ಕೀ ಬಾತ್​ನಲ್ಲಿ ತಿಳಿಸಿದರು. ಈ ಬಾರಿಯ ಯೋಗ ದಿನದ ಥೀಮ್​ ಏನು ಎಂಬುದನ್ನೂ ಹೇಳಿದರು. ‘ಈ ಸಲ ‘ವಸುಧೈವ ಕುಟುಂಬಕಂ’ ಎಂಬ ಥೀಮ್​​ನಡಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲ್ಪಡುತ್ತದೆ. ಅಂದರೆ ಒಂದು ವಿಶ್ವ-ಒಂದು ಕುಟುಂಬ ಎಂಬ ಮನೋಭಾವದಡಿ, ಇಡೀ ಜಗತ್ತಿನ ಆರೋಗ್ಯಕ್ಕಾಗಿ ಯೋಗ ಎಂಬ ಆಶಯದೊಂದಿಗೆ ಯೋಗ ದಿನ ನಡೆಯುತ್ತದೆ’ ಎಂದು ತಿಳಿಸಿದರು. ಎಲ್ಲರೂ ಯೋಗ ಮಾಡುವಂತೆ ಕರೆ ಕೊಟ್ಟರು.

ಇದನ್ನೂ ಓದಿ: Mann Ki Baat: ಮೋದಿಯವರ ಮನ್​ ಕೀ ಬಾತ್​ ಒಂದು ಎಪಿಸೋಡ್​ಗೆ 8.3 ಕೋಟಿ ರೂ.ವೆಚ್ಚ?; ವೈರಲ್​ ಸಂದೇಶ ನಿಜವೇ?

ನೀರು ಸಂರಕ್ಷಣೆಗೆ ಒತ್ತು ಕೊಡಿ

ಗುಜರಾತ್​ ಕರಾವಳಿಯಲ್ಲಿ ಅಬ್ಬರಿಸಿ, ಹಾನಿ ಮಾಡಿದ ಬಿಪರ್ ಜಾಯ್​ ಚಂಡಮಾರುತ, ಮಳೆಯ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಗುಜರಾತ್ ಕರಾವಳಿ ಜನರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ನೀರು ಸಂರಕ್ಷಣೆಯ ಪ್ರಾಮುಖ್ಯತೆ ಸಾರಿದರು. ಉತ್ತರ ಪ್ರದೇಶದ, ಹಾಪುರ ಜಿಲ್ಲೆಯ ಜನರೆಲ್ಲ ಒಟ್ಟಾಗಿ, ಅಳಿವಿನಂಚಿನಲ್ಲಿರುವ ನದಿಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಇಡೀ ದೇಶದ ಜನರು ಈ ಕಾಯಕಕ್ಕೆ ಮುಂದಾಗಬೇಕು. ತಮ್ಮತಮ್ಮ ಪ್ರದೇಶದಲ್ಲಿ ನೀರು ಸಂರಕ್ಷಣೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

CBSE: 50% ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಭಾರೀ ಎಡವಟ್ಟು; ಶಾಲೆಗಳಿಗೆ ಸಿಬಿಎಸ್‌ಇ ಖಡಕ್‌ ಸೂಚನೆ

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸುಧಾರಿತ AI ಪರಿಕರಗಳ ಮೂಲಕ, ಸುಮಾರು 500 CBSE-ಸಂಯೋಜಿತ ಶಾಲೆಗಳಲ್ಲಿ 50% ಅಥವಾ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೆಲವು ವಿಷಯಗಳಲ್ಲಿ ಸಿದ್ಧಾಂತ ಮತ್ತು ಪ್ರಾಯೋಗಿಕ ಅಂಕಗಳ ನಡುವಿನ ಗಮನಾರ್ಹ ವ್ಯತ್ಯಾಸವನ್ನು ಪತ್ತೆಹಚ್ಚಿದೆ. ಹೀಗಾಗಿ ಅಂತಹ ಶಾಲೆಗಳಿಗೆ ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಶೀಲಿಸಬೇಕಿದೆ

VISTARANEWS.COM


on

CBSE
Koo

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಕಳೆದ ವರ್ಷಗಳ ಫಲಿತಾಂಶಗಳಲ್ಲಿ ಭಾರೀ ಯಡವಟ್ಟು ನಡೆದಿರುವುದನ್ನು ಪತ್ತೆ ಹಚ್ಚಿದೆ. ಕೆಲವು ವಿಷಯಗಳಲ್ಲಿ ಸಿದ್ಧಾಂತ(Theory) ಮತ್ತು ಪ್ರಾಯೋಗಿಕ(Practical) ಅಂಕಗಳಲ್ಲಿನ ವ್ಯತ್ಯಾಸ ಪತ್ತೆ ಆಗಿದ್ದು, ಸುಮಾರು 500 CBSE-ಸಂಯೋಜಿತ ಶಾಲೆಗಳಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ನಡುವಿನ ಅಂಕಗಳಲ್ಲಿ ಈ ವ್ಯತ್ಯಾಸ ಕಂಡುಬಂದಿದ್ದು, AI ಟೂಲ್‌ ಇದನ್ನು ಪತ್ತೆಹಚ್ಚಿದ್ದು, ಅಂತಹ ಶಾಲೆಗಳಿಗೆ ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆ(internal assessment procedures)ಯನ್ನು ಪರಿಶೀಲಿಸಲು ಶಿಕ್ಷಣ ಮಂಡಳಿಯು ಸಲಹೆ ನೀಡಿದೆ.

ಮಂಡಳಿಯು ಹೊರಡಿಸಿದ ಅಧಿಕೃತ ಸೂಚನೆಯಲ್ಲಿ, ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ನಿಖರವಾದ ಮೌಲ್ಯಮಾಪನದ ಅತ್ಯಗತ್ಯ ಎಂಬುದನ್ನು ಉಲ್ಲೇಖಿಸಿದೆ. ಇನ್ನು ಈ ಮೌಲ್ಯಮಾಪನವು ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಅನುಕೂಲ ಆಗುವ ರೀತಿಯಲ್ಲಿ ಪಾರದರ್ಶಕವಾಗಿ ನಡೆಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸುಧಾರಿತ AI ಪರಿಕರಗಳ ಮೂಲಕ, ಸುಮಾರು 500 CBSE-ಸಂಯೋಜಿತ ಶಾಲೆಗಳಲ್ಲಿ 50% ಅಥವಾ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕೆಲವು ವಿಷಯಗಳಲ್ಲಿ ಸಿದ್ಧಾಂತ ಮತ್ತು ಪ್ರಾಯೋಗಿಕ ಅಂಕಗಳ ನಡುವಿನ ಗಮನಾರ್ಹ ವ್ಯತ್ಯಾಸವನ್ನು ಪತ್ತೆಹಚ್ಚಿದೆ. ಹೀಗಾಗಿ ಅಂತಹ ಶಾಲೆಗಳಿಗೆ ತಮ್ಮ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆ(internal assessment procedures)ಯನ್ನು ಪರಿಶೀಲಿಸಬೇಕಿದೆ. CBSE-ಸಂಯೋಜಿತ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಯೋಗಿಕ ಪರೀಕ್ಷೆಗಳನ್ನು ಮೌಲ್ಯಮಾಪನ ಮಾಡುವಾಗ ಶಾಲೆಗಳು ನ್ಯಾಯಯುತವಾಗಿ ಮತ್ತು ನಿಖರತೆಗೆ ಆದ್ಯತೆ ನೀಡಬೇಕೆಂದು CBSE ಬಯಸುತ್ತದೆ ಎಂದು ಹೇಳಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮೇ, 13ರಂದು 12ನೇ ತರಗತಿ ಫಲಿತಾಂಶ (CBSE 12th Results 2024) ಇಂದು ಪ್ರಕಟವಾಗಿತ್ತು. ಈ ವರ್ಷದ ತೇರ್ಗಡೆ (Pass) ಪ್ರಮಾಣ ಶೇ.87.98ರಷ್ಟಿದೆ. 16,33,730 ಮಂದಿ ನೋಂದಾಯಿಸಿಕೊಂಡಿದ್ದು, ಅದರಲ್ಲಿ 16,21,224 ಮಂದಿ ಪರೀಕ್ಷೆ ಬರೆದು, 14,26,420 ಮಂದಿ ಪಾಸ್‌ ಆಗಿದ್ದಾರೆ. ಬೆಂಗಳೂರಿನಲ್ಲಿ (Bangalore CBSE 12th Results 2024) ಫಲಿತಾಂಶದ ಪ್ರಮಾಣ ಶೇ.96.95ರಷ್ಟಿದೆ.

ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್ 10ನೇ ತರಗತಿ ಬೋರ್ಡ್‌ ಪರೀಕ್ಷೆ ಮಾರ್ಚ್‌ 13 ರಂದು ಕೊನೆಗೊಂಡಿತು. ಈ ಪರೀಕ್ಷೆಯನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದಾದ್ಯಂತ ಬರೆದಿದ್ದಾರೆ. ಹಾಗೆಯೇ 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಏಪ್ರಿಲ್ 2 ರಂದು ಅಂತ್ಯಗೊಂಡಿತು.

ಇದನ್ನೂ ಓದಿ:Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಇಂದೇ ಸಚಿವ ನಾಗೇಂದ್ರ ರಾಜೀನಾಮೆ?

Continue Reading

Lok Sabha Election 2024

Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

Uddhav Thackeray: ಜೂನ್‌ 8ರಂದು ನರೇಂದ್ರ ಮೋಲದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬುಧವಾರ (ಜೂನ್‌ 5) ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಇಂಡಿ ಒಕ್ಕೂಟದ ಸಭೆಯಲ್ಲಿ ಉದ್ಧವ್ ಠಾಕ್ರೆ ಭಾಗವಹಿಸದಿರುವುದು ಅವರು ಎನ್‌ಡಿಎಗೆ ಮರಳುತ್ತಾರೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ.

VISTARANEWS.COM


on

Uddhav Thackeray
Koo

ಮುಂಬೈ: ಸುಮಾರು ಎರಡು ತಿಂಗಳು ಕಾಲ ಕಾಲ ನಡೆದ ಲೋಕಸಭಾ ಚುನಾವಣೆಯ ಪ್ರಕ್ರಿಯೆಗೆ ಜೂನ್‌ 4ರಂದು ಹೊರ ಬಿದ್ದ ಫಲಿತಾಂಶದ ಮೂಲಕ ತೆರೆ ಎಳೆಯಲಾಗಿದೆ (Election Results 2024). ಎಲ್ಲರ ನಿರೀಕ್ಷೆಯನ್ನು ಮೀರಿದ ರಿಸಲ್ಟ್‌ ಹೊರ ಬಿದ್ದಿದ್ದು, 294 ಕಡೆ ಗೆದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸರ್ಕಾರ ರಚನೆಗೆ ಮುಂದಾಗಿದೆ. ಜೂನ್‌ 8ರಂದು ನರೇಂದ್ರ ಮೋಲದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬುಧವಾರ (ಜೂನ್‌ 5) ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಇಂಡಿ ಒಕ್ಕೂಟದ ಸಭೆಯಲ್ಲಿ ಉದ್ಧವ್ ಠಾಕ್ರೆ (Uddhav Thackeray) ಭಾಗವಹಿಸದಿರುವುದು ಅವರು ಎನ್‌ಡಿಎಗೆ ಮರಳುತ್ತಾರೆ ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. ಹೀಗಾಗಿ ಸದ್ಯ ಎಲ್ಲರ ಕಣ್ಣ ಮಹಾರಾಷ್ಟ್ರದತ್ತ ನೆಟ್ಟಿದೆ.

ಸಾಂಗ್ಲಿ ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದು, ಈ ಕಾರಣಕ್ಕಾಗಿ ಅವರು ಎನ್‌ಡಿಎ ಜತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ. ಇಂಡಿ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್‌ ಪವಾರ್)‌ ಅವರ ಮಹಾ ವಿಕಾಸ್‌ ಅಘಾಡಿಯು ಈ ಬಾರಿ 3೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿಯೂ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) 9 ಸ್ಥಾನಗಳನ್ನು ಗೆದ್ದುಕೊಂಡಿದೆ.

2022ರಲ್ಲಿ ಶಿವಸೇನೆಯು ಇಬ್ಭಾಗವಾಗಿತ್ತು. ಬಿಜೆಪಿಯ ಜತೆ ಕೈ ಜೋಡಿಸಿದ್ದ ಶಿವಸೇನೆಯ ಹಿರಿಯ ನಾಯಕ ಏನನಾಥ ಸಿಂಧೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡಿತ್ತು. ಹೀಗಾಗಿ ಸದ್ಯ ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್‌ ಶಿಂಧೆ ಬಣ ಮತ್ತು ಉದ್ಧವ್‌ ಠಾಕ್ರೆ ಬಣ ಇದೆ. ಈ ಪೈಕಿ ಉದ್ಧವ್‌ ಠಾಕ್ರೆ ಬಣ ಇಂಡಿ ಒಕ್ಕೂಟದೊಂದಿಗೆ ಗುರುತಿಸಿಕೊಂಡಿದ್ದರೆ ಏಕನಾಥ್‌ ಶಿಂದೆ ನೇತೃತ್ವದ ಶಿವಸೇನೆ ಎನ್‌ಡಿಎ ಮಿತ್ರಪಕ್ಷವಾಗಿದೆ. ಸದ್ಯ ಉದ್ಧವ್‌ ಠಾಕ್ರೆ ನಡೆ ಕುತೂಹಲ ಮೂಡಿಸಿದೆ.

ಎನ್‌ಡಿಎಗೆ ಮೋದಿಯೇ ಸಾರಥಿ ಎಂದು ಸಭೆ ತೀರ್ಮಾನ

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನೇತೃತ್ವದಲ್ಲಿ ಬುಧವಾರ ಎನ್‌ಡಿಎ ಒಕ್ಕೂಟದ ಹೈಲೆವೆಲ್‌ ಸಭೆ ನಡೆದಿದೆ. ಈ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಜೆಡಿಯು, ಟಿಡಿಪಿ, ಎಲ್‌ಜೆಪಿ ಸೇರಿ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Devendra Fadnavis: ಮಹಾರಾಷ್ಟ್ರದಲ್ಲಿ ಬಿಜೆಪಿ ಕಳಪೆ ಸಾಧನೆ; ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಫಡ್ನವೀಸ್

Continue Reading

ದೇಶ

Postal Ballots: ಕೈ ಹಿಡಿದ ಅಂಚೆ ಮತಗಳು..ಕೊನೆಯ ಕ್ಷಣದಲ್ಲಿ ಸೋತು ಗೆದ್ದ ಅಭ್ಯರ್ಥಿಗಳಿವರು

Postal Ballots:ಶಿವಸೇನೆಯ ಶಿಂಧೆ ಬಣದ ರವೀಂದ್ರ ವೈಕಾರ್‌ ಮತ್ತು ಬಿಜೆಪಿ ರಬೀಂದ್ರ ನಾರಾಯಣ್‌ ಬೆಹೆರಾ ಅಂಚೆ ಮತಗಳ ಸಹಾಯದಿಂದ ಗೆಲುವು ಬೀರಿದ ಅಭ್ಯರ್ಥಿಗಳು. ಇವರಿಬ್ಬರೂ ಇವಿಎಂ ಮತಗಳ ಎಣಿಕೆಯಲ್ಲಿ ಸೋಲುಂಡಿದ್ದರು. ಬಳಿಕ ಅಂಚೆ ಮತಗಳ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದರು.

VISTARANEWS.COM


on

Postal Ballets
Koo

ನವದೆಹೆಲಿ: ಚುನಾವಣೆ(Election Results 2024) ಅಂದರೆ ಹಾಗೇನೆ. ಸೋಲು ಗೆಲುವಿನ ಆಟ.. ಇನ್ನೇನು ಸೋತೇ ಬಿಟ್ಟೆವು ಅನ್ನೋವಾಗ ಗೆದ್ದವರೂ ಇದ್ದಾರೆ. ಗೆಲುವು ನಮ್ಮದೇ ಅಂತಾ ಬೀಗುತ್ತಿದ್ದವರು ಕೊನೆಯ ಕ್ಷಣದಲ್ಲಿ ಸೋತಿರುವ ನಿದರ್ಶನಗಳೂ ಇವೆ. ಹೀಗೆ ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿವ ಇಬ್ಬರು ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ. ಮತಯಂತ್ರಗಳ ಮತ ಎಣಿಕೆಯಲ್ಲಿ ಸೋಲುಂಡಿದ್ದ ಈ ಇಬ್ಬರು ಅಂಚೆ ಮತಗಳ ಎಣಿಕೆ(Postal Ballots)ಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಶಿವಸೇನೆಯ ಶಿಂಧೆ ಬಣದ ರವೀಂದ್ರ ವೈಕಾರ್‌ ಮತ್ತು ಬಿಜೆಪಿ ರಬೀಂದ್ರ ನಾರಾಯಣ್‌ ಬೆಹೆರಾ ಅಂಚೆ ಮತಗಳ ಸಹಾಯದಿಂದ ಗೆಲುವು ಬೀರಿದ ಅಭ್ಯರ್ಥಿಗಳು. ಇವರಿಬ್ಬರೂ ಇವಿಎಂ ಮತಗಳ ಎಣಿಕೆಯಲ್ಲಿ ಸೋಲುಂಡಿದ್ದರು. ಬಳಿಕ ಅಂಚೆ ಮತಗಳ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದರು. ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಅಂದರೆ 1989 ಮತ್ತು 1998 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನಕಾಪಲ್ಲಿಯಿಂದ ಕೊನತ್ತಲ ರಾಮಕೃಷ್ಣ ಮತ್ತು ಬಿಹಾರದ ರಾಜಮಹಲ್‌ನಿಂದ ಸೋಮ್ ಮರಾಂಡಿ ಅವರು ಕ್ರಮವಾಗಿ ಒಂಬತ್ತು ಮತಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಅವರ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಮತಗಳ ಅಂತರದಿಂದ ರವೀಂದ್ರ ವೈಕರ್‌ ಗೆಲುವು ಸಾಧಿಸಿದ್ದಾರೆ. ಇನ್ನು ರಬೀಂದ್ರ ನಾರಾಯಣ್‌ ಬೆಹರಾ ಒಡಿಶಾದ ಜಾಜ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಅಂಚೆ ಮತಗಳು

ಅಂಚೆ ಮತಪತ್ರಗಳನ್ನು ಸಾಮಾನ್ಯವಾಗಿ ತಮ್ಮ ಕ್ಷೇತ್ರಗಳಿಂದ ದೂರದಲ್ಲಿರುವ ಸರ್ಕಾರಿ ನೌಕರರು, ಕೈದಿಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವವರು ಮತದಾನಕ್ಕೆ ಬಳಸುತ್ತಾರೆ. 2019 ರ ಲೋಕಸಭೆ ಚುನಾವಣೆಯವರೆಗೆ, ಇವಿಎಂ ಎಣಿಕೆಗೆ 30 ನಿಮಿಷಗಳ ಮೊದಲು ಅಂಚೆ ಮತಗಳ ಎಣಿಕೆಯನ್ನು ಮಾಡಲಾಗುತ್ತಿತ್ತು. ಇವಿಎಂ ಎಣಿಕೆ ಪೂರ್ಣಗೊಳ್ಳುವ ಮೊದಲು ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಬೇಕಿತ್ತು.

ಆದರೆ 2019 ರ ಚುನಾವಣೆಯ ನಂತರ ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಬದಲಿಸಿದೆ. ಏಕೆಂದರೆ ವಿದ್ಯುನ್ಮಾನವಾಗಿ ರವಾನೆಯಾಗುವ ಅಂಚೆ ಮತಪತ್ರ ವ್ಯವಸ್ಥೆ (ಇಟಿಪಿಬಿಎಸ್) ಪರಿಚಯಿಸಿದ ನಂತರ ಅಂಚೆ ಮತಪತ್ರಗಳ ಸಂಖ್ಯೆ ಹೆಚ್ಚಾಯಿತು. ಅಂಚೆ ಮತಗಳ ಎಣಿಕೆ ಪೂರ್ಣಗೊಳ್ಳುವವರೆಗೆ ಇವಿಎಂ ಮತಗಳ ಎಣಿಗೆ ಶುರು ಮಾಡಲು ಕಾಯಬೇಕಿಲ್ಲ ಎಂದು ಮೇ 18, 2019 ರಂದು ಅದು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಇನ್ನು ಇವಿಎಂ ಮತಗಳ ಎಣಿಕೆ ನಡೆಯುತ್ತಿರುವುದರಿಂದ ಆರಂಭದಲ್ಲೇ ಶಿವಸೇನೆಯ (ಯುಬಿಟಿ) ಕೀರ್ತಿಕರ್ ಮುನ್ನಡೆಯಲ್ಲಿದ್ದರು. ಆದರೆ ಮತ ಎಣಿಕೆ ಮುಂದುವರೆದಂತೆ ಮುನ್ನಡೆ ಕುಗ್ಗತೊಡಗಿತು. ಅಂತ್ಯದ ವೇಳೆಗೆ, ಕೇವಲ ಒಂದು ಮತದ ವ್ಯತ್ಯಾಸವಾಗಿತ್ತು – ಕೀರ್ತಿಕರ್ ವೈಕರ್ ಅವರ 4,51,094 ವಿರುದ್ಧ 4,51,095 ಮತಗಳನ್ನು ಪಡೆದರು. ನಂತರ ಅಂಚೆ ಮತಪತ್ರಗಳನ್ನು ಸೇರಿಸಲಾಯಿತು. ವೈಕರ್ ಅವರಿಗೆ 1,550 ಅಂಚೆ ಮತಪತ್ರಗಳನ್ನು ಹಾಕಿದ್ದರೆ, ಕೀರ್ತಿಕರ್ 1,501 ಅನ್ನು ಹೊಂದಿದ್ದರು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.

ಇದನ್ನೂ ಓದಿ:Praveen Nettaru Murder: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ವಿದೇಶಕ್ಕೆ ಪರಾರಿಯಾಗುತ್ತಿದ್ದಾಗಲೇ ಬಂಧನ

Continue Reading

ದೇಶ

Election results 2024: 280 ಸಂಸದರು ಮೊದಲ ಬಾರಿಗೆ ಲೋಕಸಭೆಗೆ ಎಂಟ್ರಿ! ಲಿಸ್ಟ್‌ನಲ್ಲಿದ್ದಾರೆ ಮಾಜಿ ಸಿಎಂಗಳು, ಸಿನಿ ತಾರೆಯರು, ಹೈಕೋರ್ಟ್‌ ಜಡ್ಜ್‌

Election results 2024:ಈ ಬಾರಿ ಒಟ್ಟು 280 ನೂತನ ಸಂಸದರು ಲೋಕಸಭೆಗ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ಕಾರ್ಯಕರ್ತರು ಹಾಗೂ ಮಾಜಿ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಸೇರಿದ್ದಾರೆ.

VISTARANEWS.COM


on

Lok Sabha Election 2024
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ(Election results 2024) ಹೊರಬಿದ್ದು, ಮತ್ತೊಮ್ಮೆ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಇನ್ನು ಈ ಬಾರಿ ಒಟ್ಟು 280 ನೂತನ ಸಂಸದರು ಲೋಕಸಭೆಗ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ಕಾರ್ಯಕರ್ತರು ಹಾಗೂ ಮಾಜಿ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಸೇರಿದ್ದಾರೆ.

ಇನ್ನು ಈ ಬಾರಿ ಉತ್ತರಪ್ರದೇಶದಿಂದ ಒಟ್ಟು 80 ಕ್ಷೇತ್ರಗಳಲ್ಲಿ ಬರೋಬ್ಬರಿ 45 ನೂತನ ಸಂಸದರು ಲೋಕಸಭೆಗೆ ಕಾಲಿಡುತ್ತಿದ್ದಾರೆ. ಅವರಲ್ಲಿ ಮೀರತ್‌ನಿಂದ ಚುನಾಯಿತರಾಗಿರುವ ಜನಪ್ರಿಯ ರಾಮಾಯಣ ಧಾರವಾಹಿಯ ನಟ ಅರುಣ್‌ ಗೋವಿಲ್‌, ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಮತ್ತು ದಲಿತ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಆಜಾದ್ ಆಜಾದ್ ಸಮಾಜ ಪಕ್ಷದ ನಗೀನಾ ಸೇರಿದ್ದಾರೆ.

ಈ ಬಾರಿ ಬಿಜೆಪಿಯು ಚುನಾವಣಾ ಹಿಮ್ಮುಖವನ್ನು ಎದುರಿಸಿದ ಮಹಾರಾಷ್ಟ್ರದಲ್ಲಿ ಶಾಲಾ ಶಿಕ್ಷಕ ಭಾಸ್ಕರ್ ಭಾಗೆ ಸೇರಿದಂತೆ 33 ನೂತನ ಸಂಸದರು ಲೋಕಸಭೆಗೆ ಚುನಾಯಿತರಾಗಿದ್ದಾರೆ. ಭಾಸ್ಕರ್‌ ಭಾಗೆ ಅವರು ಶರದ್ ಪವಾರ್ ಅವರ ಎನ್‌ಸಿಪಿಯಿಂದ ಬುಡಕಟ್ಟು ಸ್ಥಾನವಾದ ದಿಂಡೋರಿಯಲ್ಲಿ ಕಣಕ್ಕಿಳಿದಿದ್ದರು. ಅವರು ಬಿಜೆಪಿ ನಾಯಕಿ ಭಾರತಿ ಪವಾರ್ ಅವರನ್ನು ಸೋಲಿಸಿದ್ದರು. ಮಹಾರಾಷ್ಟ್ರದಿಂದ ಮೊದಲ ಅವಧಿಯ ಸದಸ್ಯರ ಪೈಕಿ ಮುಂಬೈ ಉತ್ತರದಿಂದ ಚುನಾಯಿತರಾದ ಬಿಜೆಪಿಯ ಪಿಯೂಷ್ ಗೋಯಲ್, ಅಮರಾವತಿಯಲ್ಲಿ ಬಿಜೆಪಿಯ ನವನೀತ್ ರಾಣಾ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಬಲ್ವಂತ್ ವಾಂಖೆಡೆ, ಅಕೋಲಾದಿಂದ ಮಾಜಿ ಕೇಂದ್ರ ಸಚಿವ ಸಂಜಯ್ ಧೋತ್ರೆ ಅವರ ಪುತ್ರ ಬಿಜೆಪಿಯ ಅನುಪ್ ಧೋತ್ರೆ, ಸಾಂಗಲಿಯಿಂದ ವಿಶಾಲ್ ಪಾಟೀಲ್ ಸೇರಿದ್ದಾರೆ.

ಚುನಾಯಿತರಾದ ಮಾಜಿ ಮುಖ್ಯಮಂತ್ರಿಗಳು

ಇನ್ನು ಈ ಬಾರಿ ವಿವಿಧ ರಾಜ್ಯಗಳಿಂದ ಮಾಜಿ ಮುಖ್ಯಮಂತ್ರಿಗಳೂ ಕಣಕ್ಕಿಳಿದು ತಮ್ಮ ರಾಜಕೀಯ ಭವಿಷ್ಯ ಪರೀಕ್ಷಿಸಿದ್ದರು. ಈ ಬಾರಿ ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ ರಾಣೆ (ರತ್ನಗಿರಿ-ಸಿಂಧುದುರ್ಗ), ತ್ರಿವೇಂದ್ರ ಸಿಂಗ್ ರಾವತ್ (ಹರಿದ್ವಾರ), ಮನೋಹರ್ ಲಾಲ್ (ಕರ್ನಾಲ್), ಬಿಪ್ಲಬ್ ಕುಮಾರ್ ದೇಬ್ (ತ್ರಿಪುರ ಪಶ್ಚಿಮ), ಜಿತನ್ ರಾಮ್ ಮಾಂಝಿ (ಗಯಾ), ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ್ ಶೆಟ್ಟರ್ (ಬೆಳಗಾವಿ) , ಚರಂಜಿತ್ ಸಿಂಗ್ ಚನ್ನಿ (ಜಲಂಧರ್) ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.

ಇನ್ನು ಈ ಬಾರಿ ಇಬ್ಬರು ಸಿನಿಮಾ ತಾರೆಯರು ರಾಜಕೀಯ ಅದೃಷ್ಟ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಸಂಸತ್‌ನ ಕೆಳಮನೆಗೆ ಕಾಲಿಡುತ್ತಿದ್ದಾರೆ. ಕೇರಳದ ತ್ರಿಶೂರ್‌ನಿಂದ ಸುರೇಶ್ ಗೋಪಿ ಮತ್ತು ಹಿಮಾಚಲಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿರುವ ಸಿನಿಮಾ ತಾರೆಯರು.

ರಾಜ್ಯಸಭಾ ಸದಸ್ಯರಾದ ಅನಿಲ್ ದೇಸಾಯಿ (ಶಿವಸೇನೆ ಯುಬಿಟಿ), ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಕೂಡ ಲೋಕಸಭೆಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಇನ್ನು ಈ ಬಾರಿ ಹಿಂದಿನ ರಾಜಮನೆತನದ ಛತ್ರಪತಿ ಶಾಹು (ಕೊಲ್ಹಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು), ಮತ್ತು ಕೃತಿ ದೇವಿ ದೆಬ್ಬರ್ಮನ್ (ತ್ರಿಪುರ ಪೂರ್ವ)ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಲಿದ್ದಾರೆ. ಬಂಗಾಳದ ತಾಲ್ಮುಕ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ.

ಇದನ್ನೂ ಓದಿ:Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

Continue Reading
Advertisement
Bhavani Revanna
ಪ್ರಮುಖ ಸುದ್ದಿ9 mins ago

Bhavani Revanna: ಕಿಡ್ನಾಪ್‌ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನು ಮರೆತೇ ಬಿಟ್ಟ ಎಸ್‌ಐಟಿ!

Aishwarya Arjun reception dates out
ಟಾಲಿವುಡ್16 mins ago

Aishwarya Arjun: ಅರ್ಜುನ್ ಸರ್ಜಾ ಪುತ್ರಿ ವಿವಾಹ; ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

Indonesia Open
ಕ್ರೀಡೆ16 mins ago

Indonesia Open: ಮತ್ತೆ ಮುಂದುವರಿದ ಸಿಂಧು ವೈಫಲ್ಯ; ಇಂಡೋನೇಷ್ಯಾ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು

CBSE
ದೇಶ18 mins ago

CBSE: 50% ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಭಾರೀ ಎಡವಟ್ಟು; ಶಾಲೆಗಳಿಗೆ ಸಿಬಿಎಸ್‌ಇ ಖಡಕ್‌ ಸೂಚನೆ

Uddhav Thackeray
Lok Sabha Election 202423 mins ago

Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

T20 World Cup 2024
ಕ್ರೀಡೆ31 mins ago

T20 World Cup 2024: ಒಮಾನ್​ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

Postal Ballets
ದೇಶ55 mins ago

Postal Ballots: ಕೈ ಹಿಡಿದ ಅಂಚೆ ಮತಗಳು..ಕೊನೆಯ ಕ್ಷಣದಲ್ಲಿ ಸೋತು ಗೆದ್ದ ಅಭ್ಯರ್ಥಿಗಳಿವರು

Megha Shetty Pose With R Madhavan
ಕಿರುತೆರೆ1 hour ago

Megha Shetty: ನಟ ಮಾಧವನ್​ ಭೇಟಿ ಮಾಡಿ ಖುಷಿ ಹಂಚಿಕೊಂಡ ಮೇಘಾ ಶೆಟ್ಟಿ!

valmiki corporation scam nagendra siddaramaiah
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಇಂದೇ ಸಚಿವ ನಾಗೇಂದ್ರ ರಾಜೀನಾಮೆ?

Sunil Chhetri
ಕ್ರೀಡೆ1 hour ago

Sunil Chhetri: ಭಾರತದ ಫುಟ್ಬಾಲ್ ಐಕಾನ್​​ ಸುನೀಲ್‌ ಚೆಟ್ರಿಗೆ ಇಂದು ವಿದಾಯ ಪಂದ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌