Milan Fashion Week: ಮಿಲಾನ್‌ ಮಿಡ್‌ ಯಿಯರ್‌ ಫ್ಯಾಷನ್‌ ವೀಕ್‌ನಲ್ಲಿ ಸ್ಟ್ರೀಟ್‌ವೇರ್‌ಗೆ ಆದ್ಯತೆ - Vistara News

ಫ್ಯಾಷನ್

Milan Fashion Week: ಮಿಲಾನ್‌ ಮಿಡ್‌ ಯಿಯರ್‌ ಫ್ಯಾಷನ್‌ ವೀಕ್‌ನಲ್ಲಿ ಸ್ಟ್ರೀಟ್‌ವೇರ್‌ಗೆ ಆದ್ಯತೆ

ವರ್ಷದ ಮಧ್ಯದಲ್ಲಿ ನಡೆದ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (Milan Fashion Week) ಈ ಬಾರಿ ಹೆಚ್ಚಾಗಿ ಸ್ಟ್ರೀಟ್‌ವೇರ್‌ಗೆ ಆದ್ಯತೆ ನೀಡಲಾಗಿದೆ. ಜೊತೆಗೆ ಮುಂಬರುವ ಸೀಸನ್‌ಗಳಲ್ಲಿ ಡಿಕ್ಲೇರ್‌ ಆಗಬಹುದಾದ ಫ್ಯಾಷನ್‌ವೇರ್‌ಗಳನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Milan Fashion Week
ಚಿತ್ರಗಳು : ಮಿಲಾನ್‌ ಫ್ಯಾಷನ್‌ ವೀಕ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (Milan Fashion Week) ಈ ಬಾರಿ ಸ್ಟ್ರೀಟ್‌ವೇರ್‌ಗೆ ಆದ್ಯತೆ ನೀಡಲಾಗಿದೆ. ಅಲ್ಲದೇ, ಮುಂಬರುವ ಸೀಸನ್‌ಗಳಲ್ಲಿ ಡಿಕ್ಲೇರ್‌ ಆಗಬಹುದಾದ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ವೇರ್‌ಗಳನ್ನು ಪ್ರದರ್ಶಿಸಲಾಗಿದೆ.

Milan Fashion Week ramp walk

ಅಂತರಾಷ್ಟ್ರೀಯ ಮಟ್ಟದಲ್ಲಿ ವರ್ಷಕ್ಕೆ ಮೂರ್ನಾಲ್ಕು ಬಾರಿ ನಡೆಯುವ ಮಿಲಾನ್‌ ಫ್ಯಾಷನ್‌ ವೀಕ್‌, ಪ್ಯಾರೀಸ್‌ ಫ್ಯಾಷನ್‌ ವೀಕ್‌ ನಂತರದ ಸ್ಥಾನವನ್ನು ಗಳಿಸಿಕೊಂಡಿದೆ. ಇಲ್ಲಿ ನಡೆಯುವ ಫ್ಯಾಷನ್‌ ವೀಕ್‌ಗಳಲ್ಲಿ ಪಾಲ್ಗೊಳ್ಳುವುದೇ ಡಿಸೈನರ್‌ಗಳ ಹೆಗ್ಗಳಿಕೆ. ಇನ್ನು ಮಾಡೆಲ್‌ಗಳು ರ‍್ಯಾಂಪ್‌ ವಾಕ್‌ ಮಾಡುವುದು ಕೂಡ ಒಂದು ಸಾಧನೆಯೇ! ಆ ಮಟ್ಟಿಗೆ ಮಿಲಾನ್‌ ಫ್ಯಾಷನ್‌ ವೀಕ್‌ ಹೆಸರು ಗಳಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರೀಟಾ. ಅವರ ಪ್ರಕಾರ, ಈ ಬಾರಿ ಎಂದಿನಂತೆ ಊಹೆಗೂ ಮೀರಿದ ವೈವಿಧ್ಯಮಯ ವೇರಬಲ್‌ ಹಾಗೂ ನಾನ್‌ ವೇರಬಲ್‌ ಫ್ಯಾಷನ್‌ವೇರ್‌ಗಳ ಪ್ರದರ್ಶನಗೊಂಡಿವೆ.

Milan Fashion Week 2023

ಭಾರತೀಯ ಧ್ರುವ ಕುಮಾರ್‌ ಡಿಸೈನರ್‌ವೇರ್ಸ್‌

ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ ಧ್ರುವ ಕುಮಾರ್‌ರ, ಸೈನ್ಸ್‌ ಹಾಗೂ ಫಿಕ್ಷನ್‌ ಕಾನ್ಸೆಪ್ಟ್‌ನ ಫ್ಯಾನ್ಟಸಮ್‌ ಹೆಸರಿನಲ್ಲಿ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್‌ ವಾಕ್‌ ಮಾಡಿದರು. 1970ರ ದಶಕದ ಸ್ಕೈ –ಫೈ ಪ್ರಿಂಟ್ಸ್‌, ಕ್ರಾಪ್‌ ಸರ್ಕಲ್‌ ಪ್ಯಾಟರ್ನ್, ವೈಬ್ರೆಂಟ್‌ ಫ್ಲೋರಲ್ಸ್‌ನ ಯೂನಿಸೆಕ್ಸ್‌ ಡಿಸೈನರ್‌ವೇರ್‌ಗಳು ಹೈಲೈಟಾಗಿದ್ದವು.

Milan Fashion Week ramp walk

ಇನ್ನು ನ್ಯಾಚುರಲ್‌ ಫ್ಯಾಬ್ರಿಕ್‌ ಜೊತೆಗೆ ರಿಸೈಕಲ್‌ ಮಾಡಿದ ಫ್ಯಾಬ್ರಿಕ್‌ ಮಿಕ್ಸ್‌ ಮ್ಯಾಚ್‌ ಒಳಗೊಂಡ ಡಿಸೈನರ್‌ವೇರ್‌ಗಳು ಸೇರಿದ್ದವು. “ಭಾರತ ಇದೀಗ ಫ್ಯಾಷನ್‌ ಕ್ಷೇತ್ರದಲ್ಲಿ ದಾಪುಗಾಲಿನಲ್ಲಿ ಮುನ್ನೆಡೆಯುತ್ತಿದೆ. ಇದಕ್ಕೆ ತಕ್ಕಂತೆ ಡಿಸೈನರ್‌ಗಳು ಕೂಡ ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ವಿದೇಶಿ ಡಿಸೈನರ್‌ವೇರ್‌ಗಳೊಂದಿಗೆ ಕಾಂಪಿಟೇಷನ್‌ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ“ ಎಂದು ಮಾಧ್ಯಮದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Milan Fashion Week ramp

ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳ ಪಾಲ್ಗೊಳ್ಳುವಿಕೆ

ಇನ್ನು ನಮ್ಮ ರಾಷ್ಟ್ರದ ಸೀಸನ್‌ಗೆ ತದ್ವಿರುದ್ಧವಾಗಿ ಸಾಕಷ್ಟು ರಾಷ್ಟ್ರಗಳ ಸೀಸನ್ ಇರುವುದರಿಂದ ಸಮ್ಮರ್‌-ಸ್ಪ್ರಿಂಗ್‌ ಕಲೆಕ್ಷನ್‌ಗಳೇ ಹೆಚ್ಚಾಗಿ ಕಂಡು ಬಂದವು. ಇನ್ನು ವ್ಯಾಲೆಂಟೀನೊ. ಗಬಾನಾ, ಡಿಸ್ಕೌರ್ಡ್, ಅರ್ಮಾನಿ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳು ಭಾಗವಹಿಸಿದ್ದವು. ಈ ಮಧ್ಯ ವರ್ಷದ ಮಿಲಾನ್‌ ಫ್ಯಾಷನ್‌ ವೀಕ್‌ಗೆ ಕೊನೆಗೂ ತೆರೆ ಬಿದ್ದಿತು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Ramp News: ಲಿಟಲ್‌ ಐಕಾನ್ ಇಂಡಿಯಾ ಫ್ಯಾಷನ್‌ ರ‍್ಯಾಂಪ್‌ನಲ್ಲಿ ಮಕ್ಕಳ ಕಲರವ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Georgina Rodriguez : ಬಿಕಿನಿ ದಿನದಂದು ಬಗೆಬಗೆಯ ಬಿಕಿನಿಗಳಲ್ಲಿ ಮೈಮಾಟ ತೋರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇಯಸಿ ಜಾರ್ಜಿಯಾ ರೋಡ್ರಿಗಸ್​

Georgina Rodriguez: ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರೇಯಸಿ ಜಾರ್ಜಿನಾ ರೊಡ್ರಿಗಸ್ ತಮ್ಮ ಅದ್ಭುತ ಉಡುಪು ಆಯ್ಕೆಗಳಿಗೆ ಹೆಸರುವಾಸಿ. ಸುಂದರವಾದ ತಮ್ಮ ದೇಹವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಾರೆ. ಮನಮೋಹಕ ಗೌನ್ ಗಳು ಮತ್ತು ಉಡುಪುಗಳಿಂದ ಹಿಡಿದು ಕ್ಯಾಶುಯಲ್ ಉಡುಗೆಗಳು ಮತ್ತು ಸ್ಪೋರ್ಟಿ ಲುಕ್​ ತನಕ ಪ್ರತಿ ಬಾರಿಯೂ ಅಭಿಮಾನಿಗಳನ್ನು ಬೆಚ್ಚಿ ಬೀಳಿಸುತ್ತಾರೆ.

VISTARANEWS.COM


on

Georgina Rodriguez
Koo

ಬೆಂಗಳೂರು: ಪೋರ್ಚುಗಲ್​ನ ಖ್ಯಾತ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರೇಯಸಿ ಜಾರ್ಜಿಯ ರೋಡ್ರಿಗಸ್ (Georgina Rodriguez)​ ಜಗದ್ವಿಖ್ಯಾತ ಮಾಡೆಲ್​. ಹೀಗಾಗಿ ವಿಭಿನ್ನ ಡ್ರೆಸ್​ ಹಾಗೂ ಫ್ಯಾಶನೇಬಲ್ ಡ್ರೆಸ್​ನೊಂದಿಗೆ ಸದಾ ಮಿಂಚುತ್ತಾರೆ. ಅಂತೆಯೇ ಅವರು ಅವರು ಜುಲೈ 5ರಂದು ಫ್ಯಾಶನ್​ ಪ್ರಿಯರ್​ ಜಗತ್ತಿನಾದ್ಯಂತ ಆಚರಿಸುತ್ತಿರುವ ಬಿಕಿನಿ ಡೇ ಹಿನ್ನೆಲೆಯಲ್ಲಿ ಅತ್ಯಾಕರ್ಷಕ ಬಿಕಿನಿಗಳೊಂದಿಗೆ ಮಿಂಚಿದ್ದಾರೆ. ಅವರು ಕೆಲವೊಂದು ಬಿಕಿನಿ ಫೋಟೋಗಳು ಇಂಟರ್ನೆಟ್​ನಲ್ಲಿ ವೈರಲ್​ ಆಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರೇಯಸಿ ಜಾರ್ಜಿನಾ ರೊಡ್ರಿಗಸ್ ತಮ್ಮ ಅದ್ಭುತ ಉಡುಪು ಆಯ್ಕೆಗಳಿಗೆ ಹೆಸರುವಾಸಿ. ಸುಂದರವಾದ ತಮ್ಮ ದೇಹವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಾರೆ. ಮನಮೋಹಕ ಗೌನ್ ಗಳು ಮತ್ತು ಉಡುಪುಗಳಿಂದ ಹಿಡಿದು ಕ್ಯಾಶುಯಲ್ ಉಡುಗೆಗಳು ಮತ್ತು ಸ್ಪೋರ್ಟಿ ಲುಕ್​ ತನಕ ಪ್ರತಿ ಬಾರಿಯೂ ಅಭಿಮಾನಿಗಳನ್ನು ಬೆಚ್ಚಿ ಬೀಳಿಸುತ್ತಾರೆ. ಇದೀಗ ಅವರ ಅಸಾಧಾರಣ ಶೈಲಿಗಳಲ್ಲಿ ಒಂದು ಅವರ ವರ್ಣರಂಜಿತ ಮತ್ತು ರೋಮಾಂಚಕ ಬಿಕಿನಿಗಳು. ಬೀಚ್​​ನಲ್ಲಿ ರಜಾದಿನಗಳಲ್ಲಿದ್ದಾಗ ಅವರು ಬಿಕಿನಿಗಳ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಫ್ಯಾಷನ್ ಐಕಾನ್ ಆಗಿರುವ ಅವರು ಬಿಕಿನಿ ದಿನದಂದೂ ಅಂತಹ ಫೋಟೋಗಳನ್ನು ಫೋಸ್ಟ್​ ಮಾಡಿದ್ದಾರೆ.

ತನ್ನ ಮೊದಲ ನೋಟದಲ್ಲಿ, ಜಾರ್ಜಿನಾ ಚಿಕ್ ಬಿಳಿ ಬಿಕಿನಿ ಧರಿಸಿದ್ದಾರೆ. ಚಿನ್ನದ ಬಳೆಗಳು ಮತ್ತು ದಪ್ಪ ಕೆಂಪು ಲಿಪ್​ಸ್ಟಿಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ, ಅವರು ನೀಲಿ ಹೂವಿನ ಪ್ರಿಂಟ್ ಗಳೊಂದಿಗೆ ರೋಮಾಂಚಕ ಹಸಿರು ಬಿಕಿನಿಯಲ್ಲಿ ಕಾಣಿಸಕೊಂಡಿದ್ದಾರೆ. ಬೇಸಿಗೆಯ ಬಿರು ಬೇಸಿಗೆಯಲ್ಲಿ ತಂಪನ್ನು ತಂದಿದ್ದಾರೆ. ಬಳಿಕ ಜಾರ್ಜಿನಾ ಆಕರ್ಷಕ ನೀಲಿ ಬಿಕಿನಿಯಲ್ಲಿ ಮಿಂಚಿದ್ದಾರೆ. ಕಪ್ಪು ಸನ್​​ಗ್ಲಾಸ್​ಗಳನ್ನು ಧರಿಸಿದ ಅವರು ಮೊಹಕತೆಯನ್ನು ಬೀರಿದ್ದಾರೆ. ಅದು ಅವರ ಸುಂದರವಾದ ದೇಹದ ಉಬ್ಬು, ತಗ್ಗುಗಳು ಸಂಪೂರ್ಣವಾಗಿ ಹೈಲೈಟ್ ಆಗಿವೆ.

ಇನ್ನೊಂದು ಚಿತ್ರದಲ್ಲಿ ಸೂಕ್ಷ್ಮ ಚಿನ್ನ ಮತ್ತು ಪಚ್ಚೆ ಹಾರದೊಂದಿಗೆ ಜೋಡಿಯಾದ ಗುಲಾಬಿ ಬಿಕಿನಿಯಲ್ಲಿ ಅವರು ಮಿಂಚಿದ್ದಾರೆ. ಅವಳು ಇಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣುತ್ತಾರೆ. ಮುಂದುವರಿದ ಅವರು ಸಕ್ವಿನ್ಡ್ ಬಿಕಿನಿಯಲ್ಲಿ ತಿರುಗಿದ್ದಾರೆ. ಸನ್​ಗ್ಲಾಸ್​ ಮತ್ತು ಮತ್ತು ಸ್ಟೈಲಿಸ್ಟ್​​ ಆಭರಣಗಳೊಂದಿಗೆ ಅಲಂಕೃತಗೊಂಡದ್ದಾರೆ. ನೀಲಿ ಬಿಕಿನಿಯಲ್ಲಿ ಆಕರ್ಷಕ ನೀಲಿ ಬಣ್ಣದ ಪ್ರಿಂಟ್ ಗಳಿಂದ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli’s Phone Wallpaper: ಕೊಹ್ಲಿಯ ಮೊಬೈಲ್​ ​ ವಾಲ್​ ಪೇಪರ್​ನಲ್ಲಿರುವ ವ್ಯಕ್ತಿ ಯಾರು? ಇವರ ಹಿನ್ನಲೆ ಏನು?

Continue Reading

ಫ್ಯಾಷನ್

Zircon Jewellery Fashion: ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್‌ ಆಭರಣಗಳ ಹಂಗಾಮಾ!

Zircon Jewellery Fashion: ಧರಿಸಿದಾಗ ಮಿರಮಿರ ಮಿನುಗುವ ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಜಿರ್ಕೊನ್‌ ಜ್ಯುವೆಲರಿಗಳು ಇದೀಗ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿವೆ. ಯಾವ್ಯಾವ ವಿನ್ಯಾಸದವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ ಎಂಬುದರ ಕುರಿತಂತೆ ಜ್ಯುವೆಲ್‌ ಡಿಸೈನರ್‌ಗಳು ಮಾಹಿತಿ ನೀಡಿದ್ದಾರೆ. ಫ್ಯಾಷನ್‌ ಪ್ರಿಯರಿಗೆ ಉಪಯುಕ್ತ ಮಾಹಿತಿ ಇದು.

VISTARANEWS.COM


on

Zircon Jewellery Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಜಿರ್ಕೊನ್‌ ಜ್ಯುವೆಲರಿಗಳು (Zircon Jewellery Fashion) ಇದೀಗ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿವೆ. ಕತ್ತಿಗೆ ಧರಿಸಿದಾಗ ಮಿರಮಿರ ಮಿನುಗುವ ವೈವಿಧ್ಯಮಯ ಈ ಜ್ಯುವೆಲರಿಗಳು ಇದೀಗ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ.

ಹೈ ಫ್ಯಾಷನ್‌ ಜ್ಯುವೆಲರಿಗಳಿವು

“ಜಿರ್ಕೊನ್‌ ಜ್ಯುವೆಲರಿ ಹೈ ಫ್ಯಾಷನ್‌ ಜ್ಯುವೆಲರಿ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಬಂಗಾರ ಹಾಗೂ ಬಂಗಾರೇತರ ಲೋಹದಲ್ಲೂ ಈ ಆಭರಣಗಳು ಮಾರುಕಟ್ಟೆಗೆ ಆಗಮಿಸಿವೆ. ಬಂಗಾರದಲ್ಲಾದರೇ ಕೊಂಚ ದುಬಾರಿ ಎಂದೆನಿಸುವುದರಿಂದ ಮಹಿಳೆಯರು, ಇತರೇ ಲೋಹದಲ್ಲಿ ಲಭ್ಯವಿರುವ ಡಿಸೈನ್‌ಗಳಿಗೆ ಮನಸೋಲಲಾರಂಭಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಆಭರಣಗಳ ಅತ್ಯಾಕರ್ಷಕ ವಿನ್ಯಾಸ ಹಾಗೂ ಔಟ್‌ಲುಕ್‌” ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ಅಮನ್‌. ಅವರ ಪ್ರಕಾರ, ಜಿರ್ಕೊನ್‌ ಆಭರಣಗಳು ಮೊದಮೊದಲು ಯುವತಿಯರಿಗೆ ಮಾತ್ರ ಪ್ರಿಯವಾಗಿದ್ದವು. ಇದೀಗ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲರೂ ಧರಿಸಲಾರಂಭಿಸಿದ್ದಾರೆ. ಪ್ರತಿ ಮಹಿಳೆಯ ಬಳಿಯೂ ಈ ವಿನ್ಯಾಸದ ಒಂದಾದರೂ ಆಭರಣದ ಕಲೆಕ್ಷನ್‌ ಇದ್ದೇ ಇರುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Pregnancy Fashion: ಪ್ರೆಗ್ನೆನ್ಸಿ ಸ್ಟೈಲಿಂಗ್‌ನಲ್ಲಿ ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು!

ಟ್ರೆಂಡಿಯಾಗಿರುವ ಜಿರ್ಕೊನ್‌ ಆಭರಣಗಳು

ಜಿರ್ಕೊನ್‌ ಬ್ರೈಡಲ್‌ ಸೆಟ್‌, ಬ್ರೈಡಲ್‌ ಪರ್ಲ್‌, ಸಿಲ್ವರ್‌ ಗೋಲ್ಡ್ ಪಾಲಿಶ್‌ನ ಜಿರ್ಕೊನ್‌ ನೆಕ್ಲೇಸ್‌ ಹಾಗೂ ಇಯರಿಂಗ್ಸ್, ಜಿರ್ಕೊನ್‌ ಎಮರಾಲ್ಡ್, ರೂಬಿ ಸೆಟ್‌ ಸೇರಿದಂತೆ ನಾನಾ ಬಗೆಯವು ಆಭರಣಗಳ ಲೋಕದಲ್ಲಿ ಸದ್ಯ ಟ್ರೆಂಡಿಯಾಗಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ. ಇನ್ನು, ಕ್ಯೂಬಿಕ್ಸ್, ಜೆಮ್‌, ಟೀ ಡ್ರಾಪ್‌, ರೊಡಿಯಂ ಪ್ಲೇಟೆಡ್‌, ಸ್ಟೆರ್ಲಿಂಗ್‌, ಗೋಲ್ಡ್ ಪ್ಲೇಟೆಡ್‌, ಚೋಕರ್‌ ಸ್ಟೈಲ್‌, ಕಾಪರ್‌ ಅಲೋಯ್‌ ಶೈಲಿಯವು ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿದ್ದು, ಉದ್ಯೋಗಸ್ಥ ಮಹಿಳೆಯರಿಗೆ ಪ್ರಿಯವಾಗಿವೆ.

ಜಿರ್ಕೊನ್‌ ಜ್ಯುವೆಲರಿ ಆಯ್ಕೆ

  • ಜಿರ್ಕೊನ್‌ ಜ್ಯುವೆಲರಿಗಳಲ್ಲೂ ಲೆಕ್ಕವಿಲ್ಲದಷ್ಟು ಡಿಸೈನ್‌ಗಳು ಲಭ್ಯವಿರುವುದರಿಂದ ಆಯ್ಕೆ ಸುಲಭವೇನಲ್ಲ!
  • ಧರಿಸುವ ಮ್ಯಾಚಿಂಗ್‌ ಔಟ್‌ಫಿಟ್‌ಗೆ ತಕ್ಕಂತೆ ಆಯ್ಕೆ ಮಾಡಬಹುದು.
  • ಅಗಲವಾದ ಡಿಸೈನ್‌ನವನ್ನು ನೆಕ್‌ಲೈನ್‌ ಅಗಲವಾಗಿರುವ ಉಡುಪಿಗೆ ಧರಿಸಬಹುದು.
  • ಸಿಂಪಲ್‌ ಡಿಸೈನ್‌ನವನ್ನು ಎಲ್ಲಾ ಬಗೆಯ ಔಟ್‌ಫಿಟ್‌ಗೂ ಧರಿಸಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Pregnancy Fashion: ಪ್ರೆಗ್ನೆನ್ಸಿ ಸ್ಟೈಲಿಂಗ್‌ನಲ್ಲಿ ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು!

Pregnancy Fashion: ಪ್ರೆಗ್ನೆನ್ಸಿ ಸ್ಟೈಲ್‌ ಎಂದು ಗರ್ಭಿಣಿಯರು ಕಂಡಕಂಡದ್ದನ್ನೆಲ್ಲಾ ಧರಿಸುವುದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಯಾವ್ಯಾವ ಫ್ಯಾಷನ್‌ವೇರ್‌ ಧರಿಸುವುದು ಸೂಕ್ತ /ಸೂಕ್ತವಲ್ಲ ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್‌ ಒಂದಿಷ್ಟು ಸಿಂಪಲ್‌ ಸಲಹೆ ನೀಡಿದ್ದಾರೆ.

VISTARANEWS.COM


on

Pregnancy Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರೆಗ್ನೆನ್ಸಿ ಸ್ಟೈಲ್‌ಗೂ ನಾನಾ (Pregnancy Fashion) ರೂಲ್ಸ್ ಇವೆ. ಗರ್ಭಿಣಿಯರು ಈ ಸಮಯದಲ್ಲಿ ಕಂಡಕಂಡದ್ದನ್ನೆಲ್ಲಾ ಧರಿಸುವುದು ಒಳಿತಲ್ಲ! ಬದಲಿಗೆ ತಮ್ಮ ದೇಹಕ್ಕೆ ಹೊಂದುವಂತಹದ್ದನ್ನು ಧರಿಸುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹೌದು, ಇತ್ತೀಚೆಗೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ತಮ್ಮ ಕಲ್ಕಿ ಸಿನಿಮಾ ಪ್ರಮೋಷನ್‌ ಸಮಯದಲ್ಲಿ ಧರಿಸಿದ್ದ, ಉಸಿರುಗಟ್ಟಿಸುವ ಟೈಟ್‌ ಬಾಡಿಕಾನ್‌ ಡ್ರೆಸ್‌ ಹಾಗೂ ಹೈ ಹೀಲ್ಸ್ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇಂತಹ ಸಮಯದಲ್ಲೂ ದೀಪಿಕಾಗೆ ಹೈ ಹೀಲ್ಸ್ ಬೇಕಿತ್ತೇ! ಎಂದೆಲ್ಲಾ ಕಾಮೆಂಟ್‌ಗಳು ತೇಲಿಬಂದವು. ಗೈನಾಕಲಜಿಸ್ಟ್‌ಗಳು ಕೂಡ ಇದನ್ನುತಪ್ಪು ಎನ್ನುತ್ತಾರೆ. ಅವರು ಹೇಳುವಂತೆ, ಸ್ಟೈಲಿಂಗ್‌ ಹೆಸರಲ್ಲಿ ಯಾವುದೇ ಗರ್ಭಿಣಿ ಕೂಡ ಆರೋಗ್ಯಕ್ಕೆ ಮಾರಕವಾಗುವಂತಹ ಫ್ಯಾಷನ್‌ವೇರ್ಸ್ ಹಾಗೂ ಫುಟ್‌ವೇರ್‌ ಧರಿಸುವುದು ಸರಿಯಲ್ಲ! ಎನ್ನುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಈ ಸಂದರ್ಭದಲ್ಲಿ ಗರ್ಭಿಣಿಯರು ಯಾವ್ಯಾವ ಬಗೆಯ ಫ್ಯಾಷನ್‌ವೇರ್‌ ಧರಿಸುವುದು ಸೂಕ್ತ /ಸೂಕ್ತವಲ್ಲ! ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್‌ ವಿದ್ಯಾ ವಿವೇಕ್‌ ಒಂದಿಷ್ಟು ಸಿಂಪಲ್‌ ಸಲಹೆ ನೀಡಿದ್ದಾರೆ.

Pregnancy Fashion

ಟೈಟ್‌ ಫಿಟ್‌ ಡ್ರೆಸ್‌ಗಳನ್ನು ಅವಾಯ್ಡ್ ಮಾಡಿ

ಅಪರೂಪಕ್ಕೆ ಅಥವಾ ಫೋಟೋ ಶೂಟ್‌ಗೆ ಟೈಟ್‌ ಫಿಟ್‌ ಡ್ರೆಸ್‌ ತಾತ್ಕಲಿಕವಾಗಿ ಧರಿಸಿದರೇ ಓಕೆ. ಅದನ್ನು ದಿನಚರಿಯಲ್ಲಿ ರೂಢಿಸಿಕೊಳ್ಳಬಾರದು. ಟೈಟ್‌ಫೀಟ್‌ನಿಂದ ದೇಹದ ಸುಗಮ ರಕ್ತ ಸಂಚಾರಕ್ಕೆ ಧಕ್ಕೆಯುಂಟಾಗಬಹುದು.

Pregnancy Fashion

ಹೈ ಹೀಲ್ಸ್ ಫುಟ್‌ವೇರ್‌ ನಾಟ್‌ ಓಕೆ

ಗರ್ಭಿಣಿಯರು ಫ್ಲ್ಯಾಟ್‌ ಫುಟ್‌ವೇರ್‌ ಅಥವಾ ಶೂಗಳನ್ನು ಧರಿಸುವುದು ಉತ್ತಮ. ಇಲ್ಲವಾದಲ್ಲಿ, ನಡೆಯುವಾಗ ಬೆನ್ನಿನ ಹಿಂಭಾಗಕ್ಕೆ ಒತ್ತಡ ಹೆಚ್ಚಾಗಿ ನೋವು ಬರಬಹುದು. ಪಾದಗಳು ಊದಿಕೊಳ್ಳಬಹುದು. ಅವಘಡ ಉಂಟಾಗಿ ಎಡವಬಹುದಾದ ಸಂದರ್ಭವು ಎದುರಾಗಬಹುದು.

Pregnancy Fashion

ಬ್ರಿಥಬಲ್‌ ಫ್ಯಾಬ್ರಿಕ್‌ ಡ್ರೆಸ್‌ಗಳನ್ನು ಚೂಸ್‌ ಮಾಡಿ

ಉಸಿರುಗಟ್ಟಿಸುವಂತಹ ಉಡುಪುಗಳಿಗೆ ಆದ್ಯತೆ ನೀಡಬೇಕು. ಕಾಟನ್‌, ಲೆನಿನ್‌ ಹಾಗೂ ಹ್ಯಾಂಡ್‌ಲೂಮ್‌ನಂತಹ ಬ್ರಿಥೆಬಲ್‌ ಫ್ಯಾಬ್ರಿಕ್‌ ಡ್ರೆಸ್‌ಗಳನ್ನು ಧರಿಸುವುದು ಉತ್ತಮ.

Pregnancy Fashion

ದೊಗಲೆ ಉಡುಪುಗಳನ್ನು ಧರಿಸಿ

ಹೊಟ್ಟೆ ಭಾಗದಲ್ಲಿ ಟೈಟಾಗಿರದ ದೊಗಲೆ ಉಡುಪುಗಳು ಈ ಸಂದರ್ಭಕ್ಕೆ ಬೆಸ್ಟ್. ದೊಗಲೆ ಬೇಡ ಎನ್ನುವುದಾದಲ್ಲಿ, ಆದಷ್ಟೂ ಕೊಂಚ ಲೂಸಾಗಿರುವ ಅಥವಾ ಅಂಬ್ರೆಲ್ಲಾ ಕಟ್‌, ಎ ಲೈನ್‌ ಮತ್ತು ಫ್ಲೇರ್‌ ಇರುವಂತಹ ಉಡುಪುಗಳನ್ನು ಧರಿಸಬಹುದು.

ಇದನ್ನೂ ಓದಿ: Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

ಮನೋಲ್ಲಾಸ ತುಂಬುವ ಕಲರ್‌ಫುಲ್‌ ಡ್ರೆಸ್‌

ತಿಳಿ ವರ್ಣದ ಹಾಗೂ ಬ್ರೈಟ್‌ ಡ್ರೆಸ್‌ಗಳು ಮನೋಲ್ಲಾಸ ತುಂಬಬಹುದು. ಮೂಡ್‌ಸ್ವಿಂಗ್‌ನಿಂದ ಪಾರು ಮಾಡಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Monsoon Jacket Styling Tips: ಉಡುಪಿನ ಮೇಲೆ ಜಾಕೆಟ್‌ ಧರಿಸಿದಾಕ್ಷಣ ಕಂಪ್ಲೀಟ್‌ ಲುಕ್‌ ಬದಲಾಗುತ್ತದೆ. ಪದೇ ಪದೇ ಒಂದೇ ಜಾಕೆಟ್‌ ಧರಿಸಿದರೂ ಒಂದೇ ಬಗೆಯದ್ದಾಗಿ ಕಾಣಿಸುತ್ತದೆ. ಹಾಗಾದಲ್ಲಿ, ಎಲ್ಲಾ ಉಡುಪುಗಳ ಮೇಲೆ ಭಿನ್ನ-ವಿಭಿನ್ನವಾಗಿ ಹೇಗೆಲ್ಲಾ ಜಾಕೆಟ್‌ ಧರಿಸಿ ಸ್ಟೈಲಿಶ್‌ ಆಗಿ ಕಾಣಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Jacket Styling Tips
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಜಾಕೆಟ್‌ (Monsoon Jacket Styling Tips) ಧರಿಸಿಯೂ ಸ್ಟೈಲಿಶ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ಮಳೆಗಾಲದಲ್ಲಿ ಹೊರಗೆ ಹೋಗುವಾಗ ಧರಿಸಿದ ಉಡುಪಿನ ಮೇಲೆ ಜಾಕೆಟ್‌ ಧರಿಸುವುದು ಸಾಮಾನ್ಯ. ಆದರೆ, ಪದೇ ಪದೇ ಒಂದೇ ಜಾಕೆಟ್‌ ಧರಿಸಿದರಂತೂ ಪ್ರತಿ ಬಾರಿಯೂ ಒಂದೇ ಲುಕ್‌ನಲ್ಲಿ ಕಾಣಿಸುವುದು ಗ್ಯಾರಂಟಿ. ಹಾಗೆಂದು, ಎಲ್ಲರ ಬಳಿಯಲ್ಲೂ ಒಂದೊಂದು ಉಡುಪಿಗೂ ಒಂದೊಂದು ಜಾಕೆಟ್‌ ಸಂಗ್ರಹವಿರುವುದಿಲ್ಲ. ಬದಲಿಗೆ ಒಂದೆರೆಡು ಜಾಕೆಟ್‌ಗಳಲ್ಲೇ ಇಡೀ ಮಾನ್ಸೂನ್‌ ಸೀಸನ್‌ ಕಳೆಯಬೇಕಾಗುತ್ತದೆ. ಅಂತಹವರೂ ಕೂಡ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದಲ್ಲಿ, ಜಾಕೆಟ್‌ ಧರಿಸಿದ ಮೇಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಸ್ಟೈಲಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ ಕರಣ್‌ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

Monsoon Jacket Styling

ಕಾಶ್ಯುವಲ್‌ ಉಡುಪಿಗೆ ಜಾಕೆಟ್‌

ವೆಸ್ಟರ್ನ್‌ ಹಾಗೂ ಯಾವುದೇ ಕ್ಯಾಶುವಲ್‌ ಉಡುಪಿನ ಮೇಲೆ ಜಾಕೆಟ್‌ ಧರಿಸುವಂತವರು ಆದಷ್ಟೂ ಕಂಟೆಂಪರರಿ ಡಿಸೈನ್‌ನ ಜಾಕೆಟ್‌ ಧರಿಸುವುದು ಉತ್ತಮ. ಅದರಲ್ಲೂ ಧರಿಸುವ ಉಡುಪಿಗೆ ಜಾಕೆಟ್‌ ಹೊಂದುವುದು ಮುಖ್ಯ.

ಮಿನಿಮಲ್‌ ಆಕ್ಸೆಸರೀಸ್‌ ಇರಲಿ

ಜಾಕೆಟ್‌ ಧರಿಸಿದಾಗ ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ. ಯಾಕೆಂದರೇ, ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಆಕ್ಸೆಸರೀಸ್‌ ಧರಿಸದಿದ್ದರೂ ಓಕೆ.

Monsoon Jacket

ಎಥ್ನಿಕ್‌ ಡ್ರೆಸ್‌ಗೆ ಜಾಕೆಟ್‌

ಎಥ್ನಿಕ್‌ ಡ್ರೆಸ್‌ಗೆ ವೆಸ್ಟರ್ನ್ ಲುಕ್‌ ನೀಡುವ ಜಾಕೆಟ್‌ ಆಷ್ಟಾಗಿ ಹೊಂದದು. ಆದರೂ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮೇಕೋವರ್‌ ಮಾಡಿದಲ್ಲಿ ನೋಡಲು ಅಂದವಾಗಿ ಬಿಂಬಿಸಬಲ್ಲದು. ಇದಕ್ಕಾಗಿ ಧರಿಸುವ ಉಡುಪು ಪ್ರಿಂಟೆಡ್‌ನದ್ದಾಗಿದ್ದಲ್ಲಿ ಅದಕ್ಕೆ ಸಾದಾ ಸಾಲಿಡ್‌ ಶೇಡ್‌ನ ಜಾಕೆಟ್‌ ಧರಿಸುವುದು ಉತ್ತಮ. ಸಾದಾ ಡ್ರೆಸ್‌ಗೆ ಪ್ರಿಂಟೆಡ್‌ ಜಾಕೆಟ್‌ ಧರಿಸಬಹುದು.

ಫಂಕಿ ಲುಕ್‌ ಜಾಕೆಟ್‌ಗಾದಲ್ಲಿ

ಫಂಕಿ ಲುಕ್‌ ಇರುವಂತಹ ಜಾಕೆಟ್‌ಗಳನ್ನು ಧರಿಸುವುದಾದಲ್ಲಿ ಆದಷ್ಟೂ ವೆಸ್ಟರ್ನ್‌ ಲುಕ್‌ ಉಡುಪುಗಳನ್ನೇ ಮ್ಯಾಚ್‌ ಮಾಡಬೇಕಾಗುತ್ತದೆ. ಅದರಲ್ಲೂ ಸ್ಲಿಮ್‌ ಫಿಟ್‌ ಜಾಕೆಟ್‌ ಉತ್ತಮ.

Monsoon Styling

ಜಾಕೆಟ್‌ ಸೀರೆ

ಸೀರೆಗೂ ಜಾಕೆಟ್ಟಾ ಎಂದುಕೊಂಡರೇ, ಹೌದು. ಹೀಗೂ ಧರಿಸಬಹುದು. ಆದರೆ, ಸೀರೆಯ ಬಣ್ಣಕ್ಕೆ ಹೊಂದುವಂತಹ ಜಾಕೆಟ್‌ ಇದ್ದರೇ ಉತ್ತಮ. ಪಲ್ಲುವನ್ನು ಜಾಕೆಟ್‌ ಮೇಲೆ ಡ್ರೆಪ್‌ ಮಾಡಿದಲ್ಲಿ ಜಾಕೆಟ್‌ ಸೀರೆಯಂತೆ ಕಾಣಿಸಬಲ್ಲದು.

ಇದನ್ನೂ ಓದಿ: Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

ಪಸರ್ನಾಲಿಟಿಗೆ ತಕ್ಕಂತಿರಲಿ

ಜಾಕೆಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಹೆಸರಲ್ಲಿ ಮನ ಬಂದಂತೆ ಧರಿಸಿದರೇ ಚೆನ್ನಾಗಿ ಕಾಣದು. ಸ್ಲಿಮ್‌ ಇರುವವರಿಗೆ ಜಾಕೆಟ್‌ ಸ್ಟೈಲಿಂಗ್‌ ಓಕೆ. ಆದರೆ, ಪ್ಲಂಪಿಯಾಗಿರುವವರು ಮಾತ್ರ, ಇತರೇ ಡ್ರೆಸ್‌ಗಳೊಂದಿಗೆ ಜಾಕೆಟ್‌ ಧರಿಸುವಾಗ ಆದಷ್ಟೂ ಲೈಟ್‌ವೈಟ್‌ ಜಾಕೆಟ್‌ ಅಥವಾ ಸ್ಲಿಮ್‌ ಫಿಟ್‌ಜಾಕೆಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Sudha Murty
ಬೆಂಗಳೂರು38 seconds ago

Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

Neet UG
ದೇಶ13 mins ago

NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ

Assault case
ತುಮಕೂರು21 mins ago

Assault Case : ಜಮೀನು ವಿವಾದ; ನೀರಿನಲ್ಲಿ ಮುಳುಗಿಸಿ, ಕುಡುಗೋಲು, ಕಲ್ಲಿನಿಂದ ವ್ಯಕ್ತಿ ಮೇಲೆ ಹಲ್ಲೆ!

Samantha Ruth Prabhu Doctor Calls Health Illiterate
ಟಾಲಿವುಡ್21 mins ago

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

DK Shivakumar
ಕರ್ನಾಟಕ27 mins ago

DK Shivakumar: ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿಕೆಶಿ

Team India
ಕ್ರೀಡೆ37 mins ago

Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

Guarantee Schemes
ಕರ್ನಾಟಕ37 mins ago

Guarantee Schemes: ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ಕಸಿದು ಕೊಟ್ಟ ಸಿದ್ದರಾಮಯ್ಯ!

T20 World Cup
ಪ್ರಮುಖ ಸುದ್ದಿ38 mins ago

T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

Sexual Harassment
Latest48 mins ago

Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಕರ್ನಾಟಕ56 mins ago

Satish Jarkiholi: ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗುವುದು ತಪ್ಪು; ಎಚ್‌ಡಿಕೆ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lovers Fighting
ಚಿಕ್ಕಬಳ್ಳಾಪುರ57 mins ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

karnataka rain
ಮಳೆ4 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ5 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು6 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು7 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ11 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 day ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ1 day ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

ಟ್ರೆಂಡಿಂಗ್‌