ದಿನಗಟ್ಟಲೆ ಇಂಟರ್‌ನೆಟ್‌ ಶಟ್‌ಡೌನ್ ಆದರೆ ನೀವು ತಯಾರಿದ್ದೀರಾ? - Vistara News

ತಂತ್ರಜ್ಞಾನ

ದಿನಗಟ್ಟಲೆ ಇಂಟರ್‌ನೆಟ್‌ ಶಟ್‌ಡೌನ್ ಆದರೆ ನೀವು ತಯಾರಿದ್ದೀರಾ?

ಅಪಾಯಕಾರಿ ಗಾಳಿಸುದ್ದಿಗಳನ್ನು ತಡೆಯಲು ಸರ್ಕಾರ ದಿನಗಟ್ಟಲೆ ಇಂಟರ್‌ನೆಟ್‌ ತೆಗೆಯುವುದು ಈಗ ಸಾಮಾನ್ಯವಾಗಿದೆ. ಇಂಥ ಸನ್ನಿವೇಶದಲ್ಲಿ ಬದುಕುಳಿಯುವ ಬಗೆ ಯೋಚಿಸಿದ್ದೀರಾ?

VISTARANEWS.COM


on

internet shutdown
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಇತ್ತೀಚೆಗೆ ಯಾವುದೇ ಹಿಂಸಾಚಾರ, ಗಲಭೆ ಅಥವಾ ಪರೀಕ್ಷೆಗಳಾದಾಗ ಮೊಬೈಲ್‌ ಅಂತರ್ಜಾಲ ಸ್ಥಗಿತಗೊಳಿಸುವುದು ಸರ್ಕಾರದ ಮೊದಲ ನಡೆಯಾಗಿದೆ. ಕೇಳಲು ಇದು ವಿಚಿತ್ರವಾಗಿದೆ ಅನಿಸಿದರೂ, ಸರ್ಕಾರ ಭಾರತದಲ್ಲಿ ಯಾವುದೇ ತುರ್ತು ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಯಾವ ಸೂಚನೆಯನ್ನೂ ನೀಡದೆ ಅಂತರ್ಜಾಲ ಸ್ಥಗಿತಗೊಳಿಸುವ ಸಂದರ್ಭಗಳು ಇತ್ತೀಚೆಗೆ ಹೆಚ್ಚಿದೆ. ಚುನಾವಣೆಯಿರಲಿ, ಪರೀಕ್ಷೆಯಿರಲಿ, ಅಥವಾ ಯಾವುದೇ ಹಿಂಸಾಚಾರವಿರಲಿ ಇದ್ದಕ್ಕಿದ್ದಂತೆ ಭಾರತದ ನಗರವೊಂದರಲ್ಲಿ ಮೊಬೈಲ್‌ ಅಂತರ್ಜಾಲ ಸ್ಥಗಿತಗೊಂಡರೆ, ದಿನನಿತ್ಯದ ವ್ಯವಹಾರಗಳ ಮೇಲೆ ಆಗುವ ಪರಿಣಾಮ ದೊಡ್ಡದು. ಇದನ್ನು ಸಾಮಾನ್ಯರು ಪ್ರಶ್ನೆ ಮಾಡಿದರೆ ಸರ್ಕಾರ ಹಲವು ಕಾರಣಗಳನ್ನು ಹೇಳಿ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಬಹುದು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣಗಳನ್ನು ವಿವರಿಸಬಹುದು. ಆದರೆ, ಇದ್ದಕ್ಕಿದ್ದಂತೆ ಸಾಮಾನ್ಯನು ಬಳಸುವ ಸ್ಮಾರ್ಟ್‌ಫೋನ್‌ ಆಫ್‌ಲೈನ್‌ ಆಗುವ ಸಂದರ್ಭ ದಿಢೀರ್‌ ಎದುರಾದರೆ ಜನಸಾಮಾನ್ಯರು ಯಾವ ರೀತಿಯಲ್ಲಿ ತಯಾರಾಗಿರಬಹುದು ಎಂಬುದನ್ನು ತಿಳಿಯೋಣ.

೧. ಯಾವಾಗಲೂ ಮೊಬೈಲ್‌ ವ್ಯಾಲೆಟ್‌ಗಳ ಮುಖಾಂತರವೇ ನೀವು ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರೂ, ಅಂತರ್ಜಾಲವಿಲ್ಲದಂತ‌ ಪರಿಸ್ಥಿತಿ ಬರದು ಎಂದು ತಿಳಿದಿದ್ದರೂ ಎಂಥ ಸಂದರ್ಭಕ್ಕಾದರೂ ಕೈಯಲ್ಲಿ ಒಂದಿಷ್ಟು ದುಡ್ಡನ್ನು ಯಾವಾಗಲೂ ಇಟ್ಟುಕೊಂಡಿರುವುದು ಒಳ್ಳೆಯದು. ನೀವು ಯಾವುದೋ ಊರಿನ ಪ್ರವಾಸದ ಸಂದರ್ಭ ಇಂಥದ್ದೊಂದು ಸಂದರ್ಭ ದಿಢೀರ್‌ ಎದುರಾದರೆ, ಕೈಯಲ್ಲಿ ಹಣ ಇರುವುದು ಎಷ್ಟು ಮುಖ್ಯ ಎಂಬುದು ನಿಮಗೆ ಅರಿವಾಗುತ್ತದೆ.

೨. ಯಾವಾಗಲೂ ನಿಮ್ಮ ಆಧಾರ್‌ ಕಾರ್ಡ್‌ ಅಥವಾ ಯಾವುದೇ ದಾಖಲೆಗಳ ಪ್ರತಿ ನಿಮ್ಮ ಪರ್ಸ್‌ನಲ್ಲಿ ಇಟ್ಟಿರಿ. ನಿಮ್ಮ ಸ್ಮಾರ್ಟ್‌ಫೋನ್‌ ಗೂಗಲ್‌ ಡ್ರೈವ್‌ ಅಥವಾ ಇನ್ನಾವುದೋ ಆ್ಯಪ್‌ನಲ್ಲಿ ದಾಖಲೆಗಳು ಇವೆಯಲ್ಲ ಎಂಬ ನಿಶ್ಚಿಂತೆಯ ಪ್ರಯಾಣ ಬೇಡ. ಅಗತ್ಯ ಸಂದರ್ಭಗಳಲ್ಲೇ ಇಂತಹ ನಂಬಿಕೆಗಳು ಕೈಕೊಡುತ್ತವೆ. ಹಾಗಾಗಿ ಟಿಕೆಟ್‌ ಬುಕ್ಕಿಂಗ್‌ ಪ್ರತಿಗಳು, ಯಾವುದೇ ದಾಖಲೆಗಳು, ಹೊಟೆಲ್‌ ಬುಕ್ಕಿಂಗ್‌ ಪ್ರತಿಗಳ ಹಾರ್ಡ್‌ ಕಾಪಿ ನಿಮ್ಮಲ್ಲಿರಲಿ.

೩. ಗೂಗಲ್‌ ಮ್ಯಾಪ್‌ನಲ್ಲಿ ಆಫ್‌ಲೈನ್‌ ಮ್ಯಾಪನ್ನು ಡೌನ್‌ಲೋಡ್‌ ಮಾಡಿಟ್ಟುಕೊಂಡಿರಿ. ಎಲ್ಲೇ ಪ್ರಯಾಣ ಮಾಡುತ್ತಿದ್ದರೂ ಹೊಸ ಊರಿನಲ್ಲಿ ಮ್ಯಾಪ್‌ ಬಳಸುವ ಸಂದರ್ಭ ಬಂದಾಗಲೇ ಅಂತರ್ಜಾಲ ಕೈಕೊಟ್ಟರೆ ಆಫ್‌ಲೈನ್‌ ಮ್ಯಾಪ್‌ ಅಷ್ಟೇ ನಿಮ್ಮ ಕೈಹಿಡಿಯುತ್ತದೆ.

೪. ಮೊಬೈಲ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇರಲಿ. ಹೊಸ ಊರಿಗೆ ಹೋಗುವಾಗ, ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ರಿಚಾರ್ಜ್‌ ಮಾಡಲು ಮರೆತು ಇದ್ದಕ್ಕಿದ್ದಂತೆ ಇಂಥ ಸಂದರ್ಭ ಎದುರಾಗುವ ಸಂಭವವೂ ಇರಬಹುದು.

೫. ಮನೆಗೆ ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ ಇರಲಿ. ಸರ್ಕಾರ ಇದ್ದಕ್ಕಿದ್ದಂತೆ ಮೊಬೈಲ್‌ ಸೇವೆಗಳನ್ನು ಕಡಿತಗೊಳಿಸಿದರೆ, ಬ್ರಾಡ್‌ಬ್ಯಾಂಡ್‌ ನಿಮ್ಮ ಉಪಯೋಗಕ್ಕೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಕಡಿಮೆ ದರದಲ್ಲಿಯೂ ಸಿಗುತ್ತಿದೆ. ಅಲ್ಲದೆ, ಮೊಬೈಲ್‌ ಅಂತರ್ಜಾಲಕ್ಕಿಂತಲೂ ಮನೆಯಲ್ಲಿರುವ ಸಂದರ್ಭ ಬ್ರಾಡ್‌ಬ್ಯಾಂಡ್‌ ಹೆಚ್ಚು ಒಳ್ಳೆಯದು.

೬. ೨ಜಿ ಸಂದರ್ಭ ಸಿನಿಮಾ, ಹಾಡುಗಳನ್ನು ಡೌನ್‌ಲೋಡ್‌ ಮಾಡಿ ಕೇಳುವ ಕಾಲ ಇತ್ತು. ಆದರೆ ಈಗಿನ ನೆಟ್‌ಫ್ಲಿಕ್ಸ್‌ ಕಾಲದಲ್ಲಿ ಡೌನ್‌ಲೋಡ್‌ ಮಾಡುವ ಅಭ್ಯಾಸ ಬಹುತೇಕ ನಿಂತುಹೋಗಿದೆ. ಹಾಗಾಗಿ, ಇಂತಹ ಸಂದರ್ಭಕ್ಕಾಗಿ ಒಂದಿಷ್ಟಾದರೂ ಡೌನ್ಲೋಡ್‌ ಮಾಡಿಟ್ಟುಕೊಳ್ಳಿ.

೭. ಅಂತರ್ಜಾಲ ಭಾಗಶಃ ಕಡಿತವಾಗಿದ್ದಾಗ ವಿಪಿಎನ್‌ ಆ್ಯಪ್‌ ಅಂತರ್ಜಾಲದ ಜೊತೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಸಂಪೂರ್ಣ ಸ್ಥಗಿತದ ಸಂದರ್ಭ ವಿಪಿಎನ್‌ ಕೂಡಾ ಉಪಯೋಗಕ್ಕೆ ಬರುವುದಿಲ್ಲ. ಆದರೆ, ಇಂತಹುದನ್ನು ಪಾವತಿಸಿ ಇಟ್ಟುಕೊಳ್ಳುವುದು ಬಹಳ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ.

೮. ಬ್ಲೂಟೂತ್‌ ಮೆಶ್‌ ನೆಟ್‌ವರ್ಕ್‌ಗಳ ಬಗ್ಗೆ ತಿಳಿದಿದೀರಾ? ಬ್ರಿಡ್ಜ್‌ಫೈ, ಫೈರ್‌ಚಾಟ್‌ ಮತ್ತಿತರ ಆ್ಯಪ್‌ಗಳ ಮೂಲಕ ಹತ್ತಿರದಲ್ಲೇ ಇರುವ ಬೇರೆಯವರ ಅಂತರ್ಜಾಲವನ್ನು ಬ್ಲೂಟೂತ್‌ ಮುಖಾಂತರ ಬಳಸಬಹುದು.

೯. ಹಳೆಯ ೨ಜಿ ಸೆಟ್‌ ಬಹಳಷ್ಟು ತುರ್ತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಹಳೆಯ ಮೊಬೈಲೊಂದನ್ನು ಯಾವಾಗಲೂ ಇಟ್ಟುಕೊಳ್ಳಿ. ಇದರಲ್ಲಿರುವ ಟಾರ್ಚ್‌, ಎಫ್‌ ಎಂ ರೇಡಿಯೋ, ಕ್ಯಾಮರಾ, ಎಂಪಿ೩ಗಳು ಆಪದ್ಭಾಂಧವನೂ ಆಗಬಹುದು.

೧೦. ನೀವಿರುವ ನಗರ ಅಥವಾ ಊರು ಆಗಾಗ ಇಂಥ ಅಂತರ್ಜಾಲ ಸ್ಥಗಿತದಂತಹ ತೊಂದರೆಗಳನ್ನು ಅನುಭವಿಸುತ್ತಿರುವ ಪ್ರದೇಶವಾದರೆ, ಒಂದು ಸ್ಥಿರ ದೂರವಾಣಿ ಸಂಪರ್ಕವೊಂದನ್ನು ಪಡೆದುಕೊಳ್ಳುವುದು ಒಳ್ಳೆಯದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

water aerator : ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

VISTARANEWS.COM


on

water aerator
Koo

ಬೆಂಗಳೂರು : ಬೆಂಗಳೂರು ನಗರ ಹಾಗೂ ಕರ್ನಾಟಕದಾದ್ಯಂತ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಸಂಪರ್ಕಕ್ಕೆ ವಾಟರ್​ ಏರಿಯೇಟರ್​​ (water aerator) ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಏರಿಯೇಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಏರಿಯೇಟರ್‌ ಗೆ ಆನ್‌ಲೈನ್‌ ಫ್ಲಾಟ್‌ ಫಾರಂಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಹಾಗೂ ಫುಡ್​ ಡೆಲಿವರಿ ಆ್ಯಪ್​ ಸ್ವಿಗ್ಗಿ ಏರಿಯೇಟರ್​ ಸರಬರಾಜು ಮಾಡಲು ಆರಂಭಿಸಿದೆ.

ಅತ್ಯಂತ ವೇಗವಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವೇದಿಕೆಯಾಗಿರುವ ಸ್ವಿಗ್ಗಿ ಮಾರ್ಟ್‌ನಲ್ಲೂ ಏರಿಯೇಟರ್‌ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಅರ್ಥ ಫೋಕಸ್‌ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್‌ ಅನ್ನು ತಲುಪಿಸಲು ಆರಂಭಿಸಿದೆ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಈ ಮೂಲಕ ಬೆಂಗಳೂರು ಜಲಮಂಡಳಿಯ ನೀರಿನ ಸದ್ಬಳಕೆಯ ಮಹತ್ವಕಾಂಕ್ಷಿ ಯೋಜನೆಯಾದ ಏರಿಯೇಟರ್‌ ಅಳವಡಿಕೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಏರಿಯೇಟರ್‌ಗಳ ಬಳಕೆಯಿಂದ ಬಹಳಷ್ಟು ನೀರಿನ ಉಳೀತಾಯವನ್ನು ಮಾಡಬಹುದಾಗಿದೆ. ಕಿಚನ್‌ ಟ್ಯಾಪ್‌ಗಳಲ್ಲಿ ಅಳವಡಿಸುವುದರಿಂದ ಶೇಕಡಾ 70 ರಷ್ಟು ಮತ್ತು ಶವರ್‌ಗಳಿಂದ ಶೇಕಡಾ 50 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಸ್ವಿಗ್ಗಿ ಇಸ್ಟಾ ಮಾರ್ಟ್‌ನಲ್ಲಿ ಕಿಚನ್‌, ಬಾತ್‌ ಮತ್ತು ಬೇಸಿನ್‌ ಟ್ಯಾಪ್‌ ಹಾಗೂ ಶವರ್‌ಗಳಲ್ಲಿ ಅಳವಡಿಸಬಹುದಾದ ಫ್ಲೋ ರಿಸ್ಟ್ರಿಕ್ಟರ್‌ ಅನ್ನು ದಾಸ್ತುನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯನ್ನು ತಿಳಿಸಲಾಗಿದೆ.

ಮಾ.21ರಿಂದ ನಲ್ಲಿಗಳಿಗೆ ಏರಿಯೇಟರ್‌ ಕಡ್ಡಾಯ ಮಾಡಿದ್ದ ಬೆಂಗಳೂರು ಜಲಮಂಡಳಿ

ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ (Bangalore Water Crisis) ಉಲ್ಬಣವಾಗುತ್ತಿದೆ. ಹೀಗಾಗಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯುಎಸ್‌ಎಸ್‌ಬಿ), ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಮಾಡಿ (Aerators for Taps) ಆದೇಶ ಹೊರಡಿಸಿತ್ತು.

ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಲಿ ಕ್ರಮ ಕೈಗೊಂಡಿದ್ದು, ಮಾರ್ಚ್‌ 21 ರಿಂದ 31ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಲು ಸೂಚನೆ ನೀಡಿತ್ತು.

ಏರಿಯೇಟರ್‌ ಅಳವಡಿಕೆಯಿಂದ ಶೇ. 60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಾಗಲಿದೆ. ವಾಣಿಜ್ಯ ಮಳಿಗೆಗೆಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಷ್ ಬೇಸಿನ್, ಕಿಚನ್, ಕೈ ಮತ್ತು ಕಾಲು ತೊಳೆಯುವ ಸ್ಥಳಗಳು, ಸ್ವಚ್ಛತೆಗಾಗಿ ಮೀಸಲಿರುವ ನಲ್ಲಿಗಳಿಂದ ಹೆಚ್ಚಿನ ನೀರು ಪೋಲಾಗುವುದನ್ನು ತಡೆಯಲು ಕ್ರಮ ಏರಿಯೇಟರ್‌ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿತ್ತು.

Continue Reading

ತಂತ್ರಜ್ಞಾನ

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

ಸಾಮಾನ್ಯವಾಗಿ 1234, 0000, ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ (Four Digit PIN) ಅನ್ನು ಹೊಂದಿದ್ದರೆ ನಮ್ಮ ವಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ದಾಳಿಕೋರರಿಗೆ ಲಭ್ಯವಾಗುವುದು.

VISTARANEWS.COM


on

By

Four Digit PIN
Koo

ಸಾಮಾನ್ಯವಾಗಿ ನಾವು ನಾಲ್ಕು ಅಂಕೆಯ (Four Digit PIN) ಪಿನ್ ನಂಬರ್ ಹಾಕಬೇಕಾದಾಗ ನಮಗೆ ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಅಂಕೆಗಳನ್ನು (numbers) ಹಾಕುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ. ಯಾಕೆಂದರೆ ಸುಲಭವಾದ ಪಿನ್ ಸಂಖ್ಯೆಯು ಶೀಘ್ರದಲ್ಲಿ ಸೈಬರ್ ವಂಚಕರ (cyber attacks) ಪಾಲಾಗಬಹುದು. ಹೀಗಾಗಿ ಅತ್ಯಂತ ಸರಳ ಪಿನ್ ಗಳನ್ನು ನೀವು ಯಾವುದೇ ಉದ್ದೇಶಕ್ಕೆ ಬಳಸಿದ್ದರೆ ಕೂಡಲೇ ಅದನ್ನು ಬದಲಾಯಿಸುವುದು ಒಳ್ಳೆಯದು.

ಸಾಮಾನ್ಯವಾಗಿ ನಾವು 1234 ಅಥವಾ 0000 ಅಥವಾ ಜನ್ಮ ದಿನಾಂಕ (date of birth) ಅಥವಾ ಫೋನ್ ಸಂಖ್ಯೆಯಂತಹ (phone number) ವೈಯಕ್ತಿಕ ಮಾಹಿತಿಯನ್ನು ಆಧರಿಸಿದಂತಹ ದುರ್ಬಲ ಪಿನ್ ನಂಬರ್ ಅನ್ನು ನಾವು ಹೊಂದಿರುತ್ತೇವೆ. ಇದು ಸೈಬರ್ ದಾಳಿಕೋರರಿಗೆ ಸುಲಭವಾಗಿ ಸಿಗುತ್ತದೆ.

ವರ್ಷದಿಂದ ವರ್ಷಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಲೇ ಇದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಸೈಬರ್ ದಾಳಿಯ ಪ್ರಮಾಣ ಶೇ. 33ರಷ್ಟು ಹೆಚ್ಚಾಗಿದೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಸೈಬರ್ ದಾಳಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿ ತಿಳಿಸಿದೆ.

ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಮೂಲಕ ಸೈಬರ್ ಅಪರಾಧಿಗಳು ಜನರ ವ್ಯವಹಾರ ಖಾತೆಗಳು ಮತ್ತು ಸರ್ಕಾರದ ಖಾತೆಗಳ ಮೇಲೆ ದಾಳಿ ನಡೆಸುತ್ತಾರೆ. ಸೂಕ್ಷ್ಮ ಮಾಹಿತಿಯನ್ನು ಕದಿಯಲು, ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.


ಏನು ಕಾರಣ?

ಸೈಬರ್ ದಾಳಿಯಲ್ಲಿ ದಿಢೀರ್ ಏರಿಕೆಗೆ ಮುಖ್ಯ ಕಾರಣ ನಾವು ಬಳಸುವ ದುರ್ಬಲ ಪಿನ್ ಗಳು. ಇದು ಯಾವುದೇ ವ್ಯವಸ್ಥೆಯನ್ನು ಉಲ್ಲಂಘಿಸಲು ಸುಲಭವಾದ ಮಾರ್ಗವಾಗಿದೆ. ದುರ್ಬಲವಾದ ಪಿನ್ “1234” ಅಥವಾ “0000” ನಂತಹ ಸ್ಪಷ್ಟವಾಗಿರಬಹುದು ಅಥವಾ ಜನ್ಮ ದಿನಾಂಕ ಅಥವಾ ಫೋನ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಸುಲಭವಾಗಿ ಊಹಿಸಬಹುದಾಗಿದೆ.

ಸಾಮಾನ್ಯವಾದ ಪಿನ್‌ಗಳು ಯಾವುವು?

ಸೈಬರ್‌ ಸೆಕ್ಯುರಿಟಿ ಅಧ್ಯಯನವು ಅನೇಕರು ತಮ್ಮ ಭದ್ರತಾ ಕೋಡ್‌ಗಳಲ್ಲಿ ಸರಳ ಮಾದರಿಗಳ ಪಿನ್ ಗಳನ್ನು ಬಳಸುತ್ತಾರೆ ಎಂದು ತೋರಿಸಿದ್ದಾರೆ. ಪರೀಕ್ಷಿಸಿದ 3.4 ಮಿಲಿಯನ್ ಪಿನ್‌ಗಳಲ್ಲಿ ಸಾಮಾನ್ಯ ಮಾದರಿಗಳು ಹೀಗಿವೆ.

1234, 1111, 0000, 1212, 7777, 1004, 2000, 4444, 2222, 6969 ಈಗಾಗಲೇ ಈ ಮಾದರಿಯ ಪಿನ್ ಗಳು ಸೈಬರ್ ದಾಳಿಗೆ ತುತ್ತಾಗಿದ್ದು, ಯಾರಾದರೂ ಈಗಲೂ ಇಂತಹ ಪಿನ್ ಬಳಸುತ್ತಿದ್ದಾರೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಸರಳವಾದ ಅಥವಾ ಸುಲಭವಾಗಿ ಊಹಿಸಬಹುದಾದ ಪಿನ್ ಅನ್ನು ಆಯ್ಕೆ ಮಾಡುವುದರಿಂದ ಸೈಬರ್ ಅಪರಾಧಿಗಳಿಗೆ ನೀವು ಸುಲಭ ಗುರಿಯಾಗಬಹುದು. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ರಕ್ಷಿಸಲು ಪಿನ್ ಅನ್ನು ಆಯ್ಕೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಬಲವಾದ, ವಿಶಿಷ್ಟವಾದ ಪಿನ್ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಎಸ್ ಇ ಟಿ ಸೈಬರ್ ಸೆಕ್ಯುರಿಟಿ ತಜ್ಞ, ಜೇಕ್ ಮೂರ್, ಸರಳವಾದ ಪಾಸ್‌ಕೋಡ್‌ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ. ಇದು ಜನರನ್ನು ಸೈಬರ್‌ಟಾಕ್‌ಗಳಿಗೆ ಗುರಿಯಾಗಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಪರಿಣಿತ ಹ್ಯಾಕರ್‌ಗಳು ಸೀಮಿತ ಸಂಖ್ಯೆಯ ಪ್ರಯತ್ನಗಳಲ್ಲಿ ಪಾಸ್ಕೋಡ್ ಗಳನ್ನು ಊಹಿಸಿ ಶೀಘ್ರದಲ್ಲೇ ಖಾತೆಗಳಿಗೆ, ವಯಕ್ತಿಕ ಮಾಹಿತಿಗಳ ಮೇಲೆ ಕನ್ನ ಹಾಕಬಹುದು. ಸಾಮಾಜಿಕ ಮಾಧ್ಯಮ ಸೇರಿದಂತೆ ವೈಯಕ್ತಿಕ ಖಾತೆಗಳಿಗೆ ಜನ್ಮ ವರ್ಷಗಳು, ವೈಯಕ್ತಿಕ ಮಾಹಿತಿ ಅಥವಾ ಪುನರಾವರ್ತಿತ ಪಾಸ್‌ವರ್ಡ್‌ಗಳನ್ನು ಬಳಸದಂತೆ ಜಾಗತಿಕ ಸೈಬರ್‌ ಸೆಕ್ಯುರಿಟಿ ಸಲಹೆಗಾರರು ಶಿಫಾರಸು ಮಾಡುತ್ತಾರೆ. ಸುಲಭವಾಗಿ ಊಹಿಸಬಹುದಾದ ಪಿನ್‌ಗಳನ್ನು ಬಳಸುವುದರಿಂದ ಜನರು ಸುಲಭವಾಗಿ ದಾಳಿಕೋರರು ಬಲಿಯಾಗುತ್ತಾರೆ.

ಇದನ್ನೂ ಓದಿ: Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕಡಿಮೆ ಬಳಕೆಯ ಸಾಮಾನ್ಯ ಪಿನ್

ಕಡಿಮೆ ಬಳಸುವ ಆದರೆ ತೀರಾ ಸಾಮಾನ್ಯವಾದ 4-ಅಂಕಿಯ ಪಿನ್‌ಗಳು ಹೀಗಿವೆ. 8557, 8438, 9539,7063, 6827, 0859, 6793, 0738, 6835.

ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಪಾಸ್‌ಕೋಡ್‌ಗಳನ್ನು ಹ್ಯಾಕ್ ಮಾಡಬಹುದು. ಆದ್ದರಿಂದ ಹೆಚ್ಚುವರಿ ಭದ್ರತೆಗಾಗಿ ಪಾಸ್‌ವರ್ಡ್ ನಿರ್ವಾಹಕರನ್ನು ಬಳಸಲು ಶ್ರೀ ಮೂರ್ ಸಲಹೆ ನೀಡಿದ್ದಾರೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು ಮತ್ತು ಸಂಪೂರ್ಣವಾಗಿ ಯಾದೃಚ್ಛಿಕ ಕೋಡ್‌ಗಳನ್ನು ರಚಿಸಲು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

Car Care Tips: ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು.

VISTARANEWS.COM


on

Car Care tips
Koo

ಬೆಂಗಳೂರು: ಕೆಲವರಿಗೆ ಈ ಅಭ್ಯಾಸ ಇಲ್ಲ ಹಾಗೂ ಇನ್ನೂ ಕೆಲವರು ಈ ವಿಷಯದ ಬಗ್ಗೆ ನಿಧಾನವಾಗಿ ಜಾಗೃತರಾಗುತ್ತಿದ್ದಾರೆ. ಅದೇನೆಂದರೆ ವಸ್ತುಗಳ ಎಕ್ಸ್​ಪೈರಿ ಡೇಟ್​ (Expiry Date) ಪರಿಶೀಲನೆ ಮಾಡುವುದು. ಅಂದರೆ ತಾವು ಖರೀದಿಸುವ ಯಾವುದೇ ವಸ್ತುವಿನ ಉತ್ಪಾದನಾ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು. ಸಾಕಷ್ಟು ಮಂದಿ ಮನೆಗೆ ತರುವ ದೀನಸಿ ವಸ್ತುಗಳಿಗೆ ಮಾತ್ರ ಇದು ಸೀಮಿತ ಎಂದು ನಂಬಿ ದ್ದಾರೆ. ಆದರೆ, ಉತ್ಪಾದನಾ ಘಟಕವೊಂದರಲ್ಲಿ ತಯಾರಾಗುವ ಎಲ್ಲ ವಸ್ತುಗಳಿಗೂ ಎಕ್ಸ್​ಪೈರಿ ಡೇಟ್​ ಇರುತ್ತದೆ. ಹೀಗಾಗಿ ಈ ಸಲಹೆಯು ಕಾರಿನ ಬಿಡಿ ಭಾಗಗಳು ಮತ್ತು ಪರಿಕರಗಳಿಗೂ ಅನ್ವಯಿಸುತ್ತದೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ, ಬಹುತೇಕ ಕಾರು ಮಾಲೀಕರು ಈ ಬಗ್ಗೆ ಜಾಗೃತವಾಗಿಲ್ಲ. ಕೆಟ್ಟು ಕಳಚಿ ಬಿದ್ದ ಮೇಲೆ ಮಾತ್ರ ಸರಿಪಡಿಸುತ್ತಾರೆ. (Car Care Tips) ಇದು ಸರಿಯಾದ ಅಭ್ಯಾಸವಲ್ಲ ಎಂಬುದು ಸತ್ಯ.

ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಆದರೆ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ‘ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ’ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು. ಯಾಕೆಂದರೆ ಒಂದು ಭಾಗಕ್ಕೆ ಆಗಿರುವ ಹಾನಿಯು ವಾಹನದ ಸಂಪೂರ್ಣ ದಕ್ಷತೆಯನ್ನು ಹಾಳು ಮಾಡುವ ಜತೆಗೆ ಪ್ರಯಾಣವನ್ನು ಅಪಾಯಕ್ಕೆ ತಳ್ಳಬಹುದು. ಹೀಗಾಗಿ ನಿಮ್ಮ ಕಾರಿನಲ್ಲಿ ಯಾವೆಲ್ಲ ವಸ್ತುಗಳನ್ನು ಅವಧಿ ಮುಗಿದ ತಕ್ಷಣ ಬದಲಾಯಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಎಂಜಿನ್ ಆಯಿಲ್​

ಎಂಜಿನ್ ಆಯಿಲ್ ಎಂಜಿನ್​ ಒಳಗಿನ ಘರ್ಷಣೆಯನ್ನು ನಿಯಂತ್ರಿಸುವ ಬಹುಮುಖ್ಯ ದ್ರಾವಣ. 12ರಿಂದ 18 ತಿಂಗಳ ಒಳಗೆ ಎಂಜಿನ್ ಆಯಿಲ್ ಬದಲಾಯಿಸಬೇಕು ಹಾಗೂ ಬಳಸಲು ಶುರು ಮಾಡಿದ ಮೇಲೆ ಅದರ ಅವಧಿ ಮುಕ್ತಾಯಗೊಳ್ಳುತ್ತದೆ. ಅಥವಾ 10,000 ಕಿ.ಮೀ.ಗೆ ಬದಲಾವಣೆ ಮಾಡಲೇಬೇಕು. ಕೆಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಸರ್ವಿಸ್​ ಮಾಡಿದಾಗ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತಾರೆ. ಇದು ಎಂಜಿನ್​ ಒಳಗಿನ ಭಾಗಗಳ ಸವೆತ ಹಾಗೂ ಮುರಿತಕ್ಕೆ ಕಾರಣವಾಗುತ್ತದೆ.

ಬ್ರೇಕ್ ಆಯಿಲ್

ಕಾರಿನಲ್ಲಿ ಸುರಕ್ಷತೆ ಎಂದರೆ ಮೊದಲು ಬರುವುದು ಸೂಕ್ತವಾಗಿ ಕಾರ್ಯನಿರ್ವಹಿಸುವ ಬ್ರೇಕಿಂಗ್ ಸಿಸ್ಟಮ್​. ಬ್ರೇಕ್​ ವ್ಯವಸ್ಥೆಯಲ್ಲಿ ಬ್ರೇಕ್​ ಆಯಿಲ್​ ಕೆಲಸ ದೊಡ್ಡದು.. ಪ್ರತಿ 10,000 ಕಿ.ಮೀಗೆ ಬ್ರೇಕ್ ಆಯಿಲ್ ಬಾಳಿಕೆ ಮುಗಿಯುತ್ತದೆ. ಹೀಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬ್ರೇಕ್ ಆಯಿಲ್ ಅನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಆಯಿಲ್ ದಪ್ಪವಾದರೆ ಬ್ರೇಕಿಂಗ್ ದಕ್ಷತೆ ಇಳಿಯುತ್ತದೆ.

ಎಸಿ ರೆಫ್ರಿಜರೇಟರ್ ರೀಫಿಲ್​

ಎಸಿ ರೆಫ್ರಿಜರೇಟರ್ ಗ್ಯಾಸ್​ ರಿಫಿಲ್ ಮಾಡುವ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು. ಎಸಿ ವೆಂಟ್ ಗಳಿಂದ ಹೊರಬರುವ ಗಾಳಿಯು ಸಾಕಷ್ಟು ತಂಪಾಗಿಲ್ಲದಿದ್ದರೆ ವಾಹನದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಸರಿಯಿಲ್ಲ ಎಂದು ಅರ್ಥ. ಫಿಲ್ಟರ್ ಜತೆಗೆ ಎಸಿ ಗ್ಯಾಸ್​ ನ ಬಾಳಿಕೆಯೂ ಮುಗಿದಿದೆ ಎಂದರ್ಥ. ಹೀಗಾಗಿ ಅದನ್ನು ಅವಧಿ ಮುಗಿದಾಗ ಬದಲಾಯಿಸಬೇಕು.

ಟೈರ್ ಗಳು

ಕಾರನ್ನು ಓಡಿಸಿಲ್ಲ ಮತ್ತು ಸವೆದಿಲ್ಲ ಎಂದ ತಕ್ಷಣ ಕಾರಿನ ಟೈರಿನ ಬಾಳಿಕೆ ಮುಗಿದಿಲ್ಲ ಎಂದರ್ಥವಲ್ಲ. ಯಾಕೆಂದರೆ ಅದಕ್ಕೂ ಒಂದು ಎಕ್ಸ್​ಪಯರೀ ಡೇಟ್​ ಇದೆ. ಮೊದಲಾಗಿ 3 ಎಂಎಂಗಿಂತ ಕಡಿಮೆ ಥ್ರೆಡ್​ ಇದ್ದರೆ ಸವೆದಿದೆ ಎಂದರ್ಥ. ಆದರೆ, ಟೈರ್​ನ ಮೇಲೆ ಬರೆದಿರುವ ಎಕ್ಸ್​ಪಯರೀ ಡೇಟ್​ ಪರಿಶೀಲನೆ ಮಾಡಲೇಬೇಕು. ಹೊರ ಅಂಚಿ ಉತ್ಪಾದನಾ ವಾರ ಮತ್ತು ಉತ್ಪಾದನೆಯ ವರ್ಷವನ್ನು ಬರೆದಿರಲಾಗುತ್ತದೆ. ಉದಾಹರಣೆಗೆ ಡಾಟ್ ಸಂಖ್ಯೆ 5011 ಇದ್ದರೆ ಟೈರ್ ಅನ್ನು 2011 ರ 50 ನೇ ವಾರದಲ್ಲಿ ತಯಾರಿಸಲಾಗಿದೆ ಎಂದರ್ಥ.

ಕ್ಯಾಬಿನ್ ಏರ್ ಫಿಲ್ಟರ್

ಕ್ಯಾಬಿನ್ ಏರ್ ಫಿಲ್ಟರ್ ಕ್ಯಾಬಿನ್ ಏರ್ ಫಿಲ್ಟರ್ ಬಾಳಿಕೆ ಕಾರು ಚಾಲನೆ ಮಾಡುವ ಪ್ರದೇಶದ ಗಾಳಿಯ ಗುಣಮಟ್ಟ ಅವಲಂಬಿಸಿರುತ್ತದೆ. ಆದರೆ, ಕಾರನ್ನು 25,000 ಕಿ.ಮೀ ನಿಂದ 30,000 ಕಿ.ಮೀ ಓಡಿಸಿದ ನಂತರ ಅದನ್ನು ಬದಲಾಯಿಸಲೇಬೇಕು. ನೀವು ಡಿಫ್ರಾಸ್ಟ್ ಆನ್ ಮಾಡಿದಾಗ ಆದರೆ ಕ್ಯಾಬಿನ್ ನಲ್ಲಿ ಗಾಳಿಯ ಹರಿವು ತುಂಬಾ ದುರ್ಬಲವಾಗಿದ್ದರೆ ಬ್ಲೋವರ್ ಸ್ವಿಚ್ ಮೂಲಕ ಶಬ್ದ ಹೆಚ್ಚಾಗಿದ್ದರೆ ಫಿಲ್ಟರ್ ಬಾಳಿಕೆ ಮುಗಿದಿದೆ ಎಂದರ್ಥ.

ಏರ್ ಬ್ಯಾಗ್ ಗಳು

ಏರ್ ಬ್ಯಾಗ್ ಗಳು ಮತ್ತು ಸೀಟ್ ಟೈಟರ್ ಗಳ ಬಾಳಿಕ 10 ವರ್ಷಕ್ಕೆ ಮುಗಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಲ್ಟ್ ಹರಿದಿದ್ದರೆ ತಕ್ಷಣ ಬದಲಾಯಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸಾ ಕಿಟ್

ಪ್ರಥಮ ಚಿಕಿತ್ಸಾ ಕಿಟ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕಾರುಗಳಲ್ಲಿ ಇರುತ್ತವೆ. ಅದರು ಅಗತ್ಯ ಕೂಡ. ಆದರೆ, ಅದರಲ್ಲಿರುವ ಕೆಲವು ಮುಲಾಮುಗಳು ಮತ್ತು ಅನೇಕ ರೀತಿಯ ಡ್ರೆಸ್ಸಿಂಗ್ ವಸ್ತುಗಳು ಮುಕ್ತಾಯ ದಿನಾಂಕಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಕಿಟ್​ಗಳು ಉತ್ಪಾದನೆಯ ದಿನಾಂಕದಿಂದ 3 ರಿಂದ 5 ವರ್ಷಗಳ ಜೀವಿತಾವಧಿ ಹೊಂದಿರುತ್ತವೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಟೈಮಿಂಗ್ ಬೆಲ್ಟ್

ಇದು ಎಂಜಿನ್ ಒಳಗಿನ ಸಾಧನ. ಟೈಮಿಂಗ್ ಬೆಲ್ಟ್ ಬದಲಾಯಿಸುವ ಅವಧಿಯ ಅಂತರವು ಕಂಪನಿ ಮತ್ತು ಕಾರು ಮಾದರಿಯಿಂದ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು 60,000 ಮತ್ತು 80,000 ಕಿಲೋಮೀಟರ್ ನಡುವೆ ಬದಲಾಯಿಸಬೇಕು. ಕಂಪನಿ ಜತೆ ಈ ಬಗ್ಗೆ ಚರ್ಚೆ ನಡೆಸಬೇಕು. ದೋಷಯುಕ್ತ ಬೆಲ್ಟ್ ಅನ್ನು ಬಳಸಿದರೆ ಅದು ಕಾಲಾನಂತರದಲ್ಲಿ ಎಂಜಿನ್ ಹಾಳಾಗಲು ಕಾರಣವಾಗಬಹುದು.

Continue Reading

ಆರೋಗ್ಯ

UPI in Healthcare: ಆರೋಗ್ಯ ಕ್ಷೇತ್ರದಲ್ಲೂ ಡಿಜಿಟಲ್ ಕ್ರಾಂತಿ!

ಆರೋಗ್ಯ ಕ್ಷೇತ್ರದಲ್ಲೂ ಈಗ ಡಿಜಿಟಲ್ ಬಳಕೆ (UPI in Healthcare) ಹೆಚ್ಚಾಗಿದ್ದು, ನೋಂದಣಿ, ಓಪಿಡಿ ಟೋಕನ್ ಪಡೆಯಲು, ಪಾವತಿಗಳನ್ನು ನಡೆಸಲು ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಸ್ಕ್ಯಾನರ್ ಗಳನ್ನು ಬಳಸಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ

VISTARANEWS.COM


on

By

UPI in Healthcare
Koo

ಡಿಜಿಟಲ್ ಕ್ಷೇತ್ರದಲ್ಲಿ (digital wave) ಈಗ ಕ್ರಾಂತಿಯಾಗುತ್ತಿದೆ. ಎಲ್ಲ ಕಡೆಯೂ ಯುಪಿಐ ಆಧಾರಿತ ಪಾವತಿಗಳು (UPI in Healthcare) ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಆರೋಗ್ಯ ಕ್ಷೇತ್ರದಲ್ಲೂ (health sector) ಡಿಜಿಟಲ್ ಪಾವತಿ, ಇತರ ತಂತ್ರಜ್ಞಾನಗಳ ಬಳಕೆ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಭಾರತದ (India) ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತರಂಗ ಹೊರಹೊಮ್ಮುವ ಲಕ್ಷಣಗಳು ಕಾಣುತ್ತಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬರುತ್ತವೆ.

ಪ್ರತಿ ದಿನ ಸುಮಾರು ಒಂದು ಲಕ್ಷ ರೋಗಿಗಳು ಭಾರತದಾದ್ಯಂತ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಹೊರರೋಗಿ ವಿಭಾಗದಲ್ಲಿ (OPD) ತಮ್ಮನ್ನು ನೋಂದಾಯಿಸಿಕೊಳ್ಳಲು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಈ ಟ್ರೆಂಡ್ ವೇಗವನ್ನು ಪಡೆದಿರುವುದು ಕೇವಲ ಮೆಟ್ರೋಪಾಲಿಟನ್ ಪ್ರದೇಶಗಳಲ್ಲ. ಉತ್ತರ ಪ್ರದೇಶವು ಆಂಧ್ರಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ದೆಹಲಿಯಲ್ಲೂ ಹೆಚ್ಚಾಗಿ ಜನರು ಡಿಜಿಟಲ್ ಬಳಕೆಯನ್ನು ಹೆಚ್ಚಿಸಿದ್ದಾರೆ. ಯುಪಿಯಲ್ಲಿ, 86 ಲಕ್ಷಕ್ಕೂ ಹೆಚ್ಚು ಕ್ಯೂಆರ್ ಕೋಡ್ ಆಧಾರಿತ ನೋಂದಣಿಗಳನ್ನು ನೋಂದಾಯಿಸಲಾಗಿದೆ. ಕಾನ್ಪುರ್ ನಗರ ಮತ್ತು ಪ್ರಯಾಗ್‌ರಾಜ್ ನಲ್ಲೂ ಗರಿಷ್ಠ ನೋಂದಣಿಗಳು ನಡೆದಿವೆ.

ಎಲ್ಲ ವರದಿಗಳೂ ಡಿಜಿಟಲ್‌ನಲ್ಲಿ ಲಭ್ಯ

ರೋಗಿಗಳು ಸ್ಕ್ಯಾನಿಂಗ್ ಮಾಡುವುದಲ್ಲದೆ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಅಥವಾ ಬಳಸುತ್ತಿದ್ದಾರೆ. ಇದರರ್ಥ ಅವರು ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ ದಾಖಲೆಗಳು, ರೋಗನಿರ್ಣಯದ ವರದಿಗಳು ಮತ್ತು ಬಹು ಆರೋಗ್ಯ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಎಲ್ಲ ದಾಖಲೆ ಲಭ್ಯವಾಗುವುದರಿಂದ ಕಾಗದ ಆಧಾರಿತ ಪ್ರಿಸ್ಕ್ರಿಪ್ಷನ್‌ಗಳು ಅಥವಾ ವರದಿಗಳನ್ನು ಸಾಗಿಸುವ ಅಗತ್ಯವಿರುವುದಿಲ್ಲ.

1 ಲಕ್ಷ ಮಂದಿ ಬಳಕೆ

ಸರಕಾರದ ಅಂಕಿಅಂಶಗಳು ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಈ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ. ಇದು ಏಪ್ರಿಲ್ 2023 ಮತ್ತು ಏಪ್ರಿಲ್ 2024 ರ ನಡುವೆ ಮಾಸಿಕ ಟೋಕನ್‌ಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವನ್ನು ತೋರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ವಿಶೇಷ ಕರ್ತವ್ಯದ ಅಧಿಕಾರಿ ಹಿಮಾಂಶು ಬುರಾದ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


ಹೆಚ್ಚು ಬಳಸಿದ ಆಸ್ಪತ್ರೆಗಳು

ಏಪ್ರಿಲ್‌ನಲ್ಲಿ ಸ್ಕ್ಯಾನ್ ಮತ್ತು ಟೋಕನ್ ಹಂಚಿಕೆ ವೈಶಿಷ್ಟ್ಯವನ್ನು ಹೆಚ್ಚು ವ್ಯಾಪಕವಾಗಿ ಬಳಸಿದ ಉತ್ತಮ ಪ್ರದರ್ಶನ ನೀಡುವ ಆಸ್ಪತ್ರೆಗಳೆಂದರೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿ ಅನಂತರ AIIMS ಭೋಪಾಲ್ (ಮಧ್ಯಪ್ರದೇಶ), ಸರ್ಕಾರಿ ಜನರಲ್ ಆಸ್ಪತ್ರೆ, ಕಾಕಿನಾಡ (ಆಂಧ್ರ ಪ್ರದೇಶ) , ಗೌತಮ್ ಬುದ್ಧ ನಗರದಲ್ಲಿ (ಉತ್ತರ ಪ್ರದೇಶ) ಜಿಲ್ಲಾ ಸಂಯೋಜಿತ ಆಸ್ಪತ್ರೆ ಮತ್ತು ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜು.

ಅತೀ ಹೆಚ್ಚು ನೋಂದಣಿ

ಅಧಿಕೃತವಾಗಿ ‘ಸ್ಕ್ಯಾನ್ ಮತ್ತು ಶೇರ್’ ಎಂದು ಕರೆಯಲ್ಪಡುವ ವೈಶಿಷ್ಟ್ಯವನ್ನು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಅಕ್ಟೋಬರ್ 2022 ರಲ್ಲಿ ಪರಿಚಯಿಸಲಾಯಿತು. ಇದು ರೋಗಿಗಳಿಗೆ OPD ನೋಂದಣಿ ಕೌಂಟರ್‌ನಲ್ಲಿ ಇರಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ತ್ವರಿತ ನೋಂದಣಿಗಾಗಿ ಅವರ ABHA ಪ್ರೊಫೈಲ್ ಅನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.

ABHA ಎಂಬುದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಪೂರ್ಣ ರೂಪವಾಗಿದೆ. ABHA ಕಾರ್ಡ್ ABHA ID ಎಂಬ ವಿಶಿಷ್ಟ 14-ಅಂಕಿಯ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಸಂಪೂರ್ಣ ವೈದ್ಯಕೀಯ ಇತಿಹಾಸ, ಸಮಾಲೋಚನೆ ವಿವರಗಳು ಮತ್ತು ಪ್ರಿಸ್ಕ್ರಿಪ್ಷನ್‌ಗಳನ್ನು ABHA ID ಯಲ್ಲಿ ಸೇರಿಸಲಾಗಿದೆ.

ಈ ಸೇವೆಯು ಪ್ರಸ್ತುತ ಭಾರತದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 529 ಜಿಲ್ಲೆಗಳಾದ್ಯಂತ 4,694 ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳಲ್ಲಿ ಸಕ್ರಿಯವಾಗಿದೆ. ಮೇ 14ರಂದು 1.60 ಲಕ್ಷಕ್ಕೂ ಹೆಚ್ಚು ಟೋಕನ್‌ಗಳನ್ನು ಪಡೆಯಲಾಗಿದೆ ಎಂದು ಬುರಾದ್ ತಿಳಿಸಿದ್ದು, ಈ ಪ್ರವೃತ್ತಿಯು ಭಾರತೀಯರು ಡಿಜಿಟಲ್ ಆರೋಗ್ಯದ ಸೌಕರ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಕ್ರಮೇಣ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ರಚಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಸರಾಸರಿ, ಒಂದು ಲಕ್ಷ ರೋಗಿಗಳು ಈಗ ಪ್ರತಿದಿನ ಈ ಸೌಲಭ್ಯವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

ಶೀಘ್ರದಲ್ಲೇ ವಿಸ್ತರಣೆ

ಒಪಿಡಿ ಕೌಂಟರ್‌ಗಳಲ್ಲಿ ನೀಡಲಾಗುವ ಸ್ಕ್ಯಾನ್ ಮತ್ತು ಶೇರ್ ಸೇವೆಯು ತಂತ್ರಜ್ಞಾನ ಆಧಾರಿತ ಪರಿಹಾರವಾಗಿದ್ದು ಇದು ಸುಮಾರು ಒಂದು ಲಕ್ಷ ರೋಗಿಗಳಿಗೆ ಪ್ರತಿದಿನ ಆಸ್ಪತ್ರೆಯ ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ರೋಗಿಗಳು ತಮ್ಮ ಆರೋಗ್ಯ ಭೇಟಿಗಳ ಸಮಯದಲ್ಲಿ ಎದುರಿಸುವ ಹೊರೆಗಳನ್ನು ಕಡಿಮೆ ಮಾಡಲು, ನಾವು ಇದನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಔಷಧಾಲಯ ಕೌಂಟರ್‌ಗಳು ಮತ್ತು ಪ್ರಯೋಗಾಲಯಗಳನ್ನು ಈ ಸೇವೆಯಡಿ ಸೇರಿಸಲು ನಿರ್ಧರಿಸಿದ್ದೇವೆ ಎಂದರು.

ವಯಸ್ಸಾದ ರೋಗಿಗಳು, ಗರ್ಭಿಣಿಯರು ಮತ್ತು ಇತರ ನಾಗರಿಕರು ಆರೋಗ್ಯ ಸೇವೆಗಳನ್ನು ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ. ಹೆಚ್ಚುವರಿಯಾಗಿ, ABHA- ಆಧಾರಿತ ನೋಂದಣಿಗಳು ರೋಗಿಗಳಿಗೆ ಅವರ OPD ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳು, ಫಾರ್ಮಸಿ IPD ದಾಖಲೆಗಳು ಮತ್ತು ರೋಗನಿರ್ಣಯದ ವರದಿಗಳಿಗೆ ಇದು ಡಿಜಿಟಲ್ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತದೆ.

Continue Reading
Advertisement
AC visited Gandabommanahalli Goshala and inspected
ವಿಜಯನಗರ15 mins ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ20 mins ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ25 mins ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್32 mins ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್39 mins ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Siddharth Kak
ದೇಶ45 mins ago

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

Prajwal Revanna Case JDS calls CD Shivakumar pen drive gang
ರಾಜಕೀಯ46 mins ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Swati Maliwal
ದೇಶ52 mins ago

Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Irfan Pathan
ಕ್ರೀಡೆ54 mins ago

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Tatkal Tickets
ದೇಶ1 hour ago

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ46 mins ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ15 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ16 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌