BJP Reshuffle: 4 ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ; ಕರ್ನಾಟಕಕ್ಕೆ ಯಾರು? - Vistara News

ದೇಶ

BJP Reshuffle: 4 ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ; ಕರ್ನಾಟಕಕ್ಕೆ ಯಾರು?

BJP State Presidents: ತೆಲಂಗಾಣದಲ್ಲಿ ಇದೇ ವರ್ಷ ಡಿಸೆಂಬರ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗೇ, ಆಂಧ್ರಪ್ರದೇಶದಲ್ಲಿ 2024ರ ಜೂನ್​ನಲ್ಲಿ ವಿಧಾನಸಭೆ ಎಲೆಕ್ಷನ್ ನಡೆಯಲಿದೆ.

VISTARANEWS.COM


on

G. Kishan Reddy daggubati purandeswari Sunil Kumar Jakhar babulal marandi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2024ರ ಲೋಕಸಭೆ ಚುನಾವಣೆ (2024 Lok Sabha Election)ಗೆ ಇನ್ನೊಂದು ವರ್ಷವೂ ಇಲ್ಲ. ರಾಜಕೀಯ ವಲಯದಲ್ಲಿ, ರಾಷ್ಟ್ರೀಯ ಪಕ್ಷಗಳು-ಪ್ರಾದೇಶಿಕ ಪಕ್ಷಗಳಲ್ಲಿ ‘ಚುನಾವಣಾ ಚಟುವಟಿಕೆಗಳು’ ಪ್ರಾರಂಭವಾಗಿವೆ. ಇದೀಗ ಬಿಜೆಪಿ (Bharatiya Janata Party) ನಾಲ್ಕು ರಾಜ್ಯಗಳ ಬಿಜೆಪಿ ಮುಖ್ಯಸ್ಥರನ್ನು (BJP State Presidents) ಬದಲಿಸಿದೆ. ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳನ್ನು (BJP Reshuffle) ಮಾಡಲಾಗಿದೆ.

ಕರ್ನಾಟಕದಲ್ಲಿ ವಿಧಾನಸಭೆ ಮುಗಿದು, ಫಲಿತಾಂಶ ಹೊರಬಿದ್ದು, ಕಾಂಗ್ರೆಸ್​ ಸರ್ಕಾರ ರಚನೆಯಾಗಿದೆ. ಆದರೆ ಇಲ್ಲಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆ ನಡೆದಿಲ್ಲ. ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈಗಿರುವ ನಳಿನ್​ ಕುಮಾರ್ ಕಟೀಲ್​ ರಾಜೀನಾಮೆ ಕೊಟ್ಟರೆ, ಮುಂದಿನ ರಾಜ್ಯಾಧ್ಯಕ್ಷ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೇ ಅತಿಹೆಚ್ಚು ಸ್ಥಾನಗಳನ್ನು ತಂದುಕೊಡುವ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗಳೆಲ್ಲ ಖಾಲಿ ಇರುವಾಗಲೇ, ಇಲ್ಲಿ ವ್ಯವಸ್ಥೆ ಸರಿಪಡಿಸುವ ಮೊದಲೇ, ಅತ್ತ ಪಂಜಾಬ್​, ತೆಲಂಗಾಣ, ಜಾರ್ಖಂಡ, ಆಂಧ್ರಪ್ರದೇಶ ರಾಜ್ಯಗಳಿಗೆ ಬಿಜೆಪಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ.

ಕೇಂದ್ರ ಸಚಿವರಾಗಿರುವ ಜಿ.ಕಿಶನ್ ರೆಡ್ಡಿ ಅವರನ್ನು ತೆಲಂಗಾಣ ರಾಜ್ಯ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಷ್ಟು ದಿನ ಅಲ್ಲಿ ಬಂಡಿ ಸಂಜಯ್ ಕುಮಾರ್ ಇದ್ದರು. ಬಂಡಿ ಸಂಜಯ್ ಕುಮಾರ್ ಇತ್ತೀಚೆಗೆ ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದರು. ಹಾಗೇ, ಬಿಜೆಪಿ ಶಾಸಕ ಎಟೆಲಾ ರಾಜೇಂದರ್​ ಅವರನ್ನು ತೆಲಂಗಾಣ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಎಟೆಲಾ ರಾಜೇಂದರ್​ ಅವರು ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಈಗಿನ ಭಾರತ್​ ರಾಷ್ಟ್ರ ಸಮಿತಿ ಪಕ್ಷದಲ್ಲಿ ಇದ್ದವರು. 2021ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಸೋಮು ವೀರರಾಜು ಅವರು ಇಷ್ಟು ದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದ್ದರು. ಆದರೆ ಅವರನ್ನೀಗ ಹುದ್ದೆಯಿಂದ ಕೆಳಗೆ ಇಳಿಸಿ, ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದರೇಶ್ವರಿ ಅವರನ್ನು ರಾಜ್ಯ ಬಿಜೆಪಿ ಮುಖ್ಯಸ್ಥೆಯನ್ನಾಗಿ ಮಾಡಲಾಗಿದೆ. ಇವರು ತೆಲುಗು ದೇಶಂ ಪಾರ್ಟಿ ಸಂಸ್ಥಾಪಕ ಮುಖ್ಯಸ್ಥ ಎನ್​.ಟಿ.ರಾಮರಾವ್​ ಅವರ ಪುತ್ರಿ. 2014ರಲ್ಲಿ ತೆಲುಗು ದೇಶಂ ಪಾರ್ಟಿ ತೊರೆದು ಬಿಜೆಪಿ ಸೇರಿದ್ದರು. ಅವರೀಗ ರಾಜ್ಯಾಧ್ಯಕ್ಷೆಯಾಗಿದ್ದಾರೆ.

ಹಾಗೇ, ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸುನಿಲ್ ಜಾಖಡ್​ ಮತ್ತು ಜಾರ್ಖಂಡ್​ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಾಬುಲಾಲ್ ಮರಾಂಡಿ ನೇಮಕಗೊಂಡಿದ್ದಾರೆ. ಇದರಲ್ಲಿ ಸುನಿಲ್ ಜಾಖಡ್ ಅವರು ಕಾಂಗ್ರೆಸ್​ನಲ್ಲಿದ್ದವರು. ಕಳೆದ ವರ್ಷ ಮೇ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನು ಬಾಬುಲಾಲ್​ ಮರಾಂಡಿ ಅವರು ಜಾರ್ಖಂಡ್​ನ ಮೊದಲ ಮುಖ್ಯಮಂತ್ರಿಯಾಗಿದ್ದವರು, ಸದ್ಯ ಅಲ್ಲಿನ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು.

ಈ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಯಾವಾಗ?

ತೆಲಂಗಾಣದಲ್ಲಿ ಇದೇ ವರ್ಷ ಡಿಸೆಂಬರ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗೇ, ಆಂಧ್ರಪ್ರದೇಶದಲ್ಲಿ 2024ರ ಜೂನ್​ನಲ್ಲಿ, ಅಂದರೆ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಸಭೆ ಎಲೆಕ್ಷನ್ ನಡೆಯಲಿದೆ. ಇನ್ನು ಜಾರ್ಖಂಡ್​ನಲ್ಲಿ ಕೂಡ 2024ರಲ್ಲಿ, ಪಂಜಾಬ್​ನಲ್ಲಿ ವಿಧಾನಸಭೆ ಚುನಾವಣೆ ಸದ್ಯಕ್ಕಿಲ್ಲ. 2022ರಲ್ಲಷ್ಟೇ ಅಲ್ಲಿ ಎಲೆಕ್ಷನ್​ ಮುಗಿದಿದ್ದು, 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಮೇಲೆ ಹೆಚ್ಚಿನ ಒತ್ತುಕೊಡಲು ಶುರು ಮಾಡಿದೆ. ಆಂಧ್ರಪ್ರದೇಶದಲ್ಲಿ ಕಿರಣ್​ ಕುಮಾರ್ ರೆಡ್ಡಿ ಅವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯನನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ: BJP Karnataka: ಗೊಂದಲ ಇಲ್ಲ ಎಂದ ಬಿ.ಎಸ್‌. ಯಡಿಯೂರಪ್ಪ; ಸದನದಲ್ಲಿ ಅಶ್ವತ್ಥನಾರಾಯಣ-ಯತ್ನಾಳ್‌ ಗುಸುಗುಸು ಗುಟ್ಟೇನು?

ಕರ್ನಾಟಕದಲ್ಲಿ ಯಾರೂ ಇಲ್ಲ!

ಕರ್ನಾಟಕದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಇನ್ನೂ ನೇಮಕ ಮಾಡದೆ ಇರುವುದು ಟೀಕೆಗೆ ಕಾರಣವಾಗಿದೆ. ಇಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ), ಬಸವರಾಜ ಪಾಟೀಲ್ ಯತ್ನಾಳ್​, ಅಶ್ವತ್ಥ್​ ನಾರಾಯಣ್​ ಮತ್ತು ಆರ್.ಅಶೋಕ್ ಪ್ರಮುಖವಾಗಿ ರೇಸ್​​ನಲ್ಲಿದ್ದಾರೆ. ಹಾಗೇ, ಇನ್ನೊಂದೆಡೆ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಅಶ್ವತ್ಥ್​ ನಾರಾಯಣ್​, ವಿ.ಸೋಮಣ್ಣ ಮತ್ತಿತರರು ಫುಲ್ ಫೈಟ್​ನಲ್ಲಿದ್ದಾರೆ. ಆದರೆ ಈ ಸ್ಥಾನಗಳಿಗೆ ನಾಯಕರ ಆಯ್ಕೆ ಹೈಕಮಾಂಡ್​ಗೂ ಕಗ್ಗಂಟಾಗಲು ಇಲ್ಲಿನ ಬಿಜೆಪಿಯ ಆಂತರಿಕ ಕಾದಾಟವೇ ಕಾರಣವಾಗಿದೆ. ಸೋತ ಪಕ್ಷದಲ್ಲಿ ಪ್ರತಿಯೊಬ್ಬರೂ ಸ್ಥಾನಮಾನಕ್ಕಾಗಿ ಹುಡುಕುತ್ತಿರುವುದೇ ಸಮಸ್ಯೆ ತಂದೊಡ್ಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ರಾಯ್‌ಬರೇಲಿಯನ್ನೇ ಆಯ್ಕೆ ಮಾಡಿಕೊಂಡ ರಾಹುಲ್‌ ಗಾಂಧಿ; ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!

Rahul Gandhiರಾಹುಲ್‌ ಗಾಂಧಿ ಅವರು 2019ರಲ್ಲಿ ಉತ್ತರ ಪ್ರದೇಶ ಅಮೇಥಿ ಹಾಗೂ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನುಭವಿಸಿದ ಕಾರಣ ಅವರು ವಯನಾಡು ಸಂಸದರಾಗಿ ಮುಂದುವರಿದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು 2004ರಿಂದಲೂ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈಗ ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲು ತೀರ್ಮಾನಿಸಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ರಾಹುಲ್‌ ಗಾಂಧಿ ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲ, ಪ್ರಶ್ನೆಗೆ ತೆರೆಬಿದ್ದಿದೆ. ತಾಯಿ ಸೋನಿಯಾ ಗಾಂಧಿ (Sonia Gandhi) ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯನ್ನೇ ರಾಹುಲ್‌ ಗಾಂಧಿ (Rahul Gandhi) ಉಳಿಸಿಕೊಂಡಿದ್ದಾರೆ. ಇನ್ನು, ರಾಹುಲ್‌ ಗಾಂಧಿಯಿಂದ ತೆರವಾಗುವ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಪ್ರಿಯಾಂಕಾ ವಾದ್ರಾ (Priyanka Vadra) ಅವರು ವಯನಾಡಿನಿಂದ ಸ್ಪರ್ಧಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರು ಯಾವ ಕ್ಷೇತ್ರದ ಸಂಸದರಾಗಿ ಮುಂದುವರಿಯಬೇಕು ಎಂಬ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು. “ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲಿದ್ದಾರೆ. ವಯನಾಡು ಲೋಕಸಭೆ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಪಕ್ಷವು ತೀರ್ಮಾನ ತೆಗೆದುಕೊಂಡಿದೆ” ಎಂಬುದಾಗಿ ಖರ್ಗೆ ಮಾಹಿತಿ ನೀಡಿದರು.

ಸಭೆಯ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, “ನಾನು ವಯನಾಡಿನ ಜನತೆ ಜತೆ ಕಳೆದ ಐದು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ವರ್ಷಗಳಿಂದ ವಯನಾಡು ಸಂಸದನಾಗಿದ್ದ ನನಗೆ ಅಲ್ಲಿನ ಜನ ತೋರಿಸಿದ ಪ್ರೀತಿ, ಬೆಂಬಲ ಅಪಾರವಾದುದು. ಈಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ನಾನು ಕೂಡ ವಯನಾಡಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ” ಎಂದು ಹೇಳಿದರು.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭಾಗವಹಿಸಿದರು. ಇನ್ನು, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನನ್ನಾಗಿ ರಾಹುಲ್‌ ಗಾಂಧಿ ಅವರನ್ನೇ ಆಯ್ಕೆ ಮಾಡುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ರಾಹುಲ್‌ ಗಾಂಧಿ ಅವರು 2019ರಲ್ಲಿ ಉತ್ತರ ಪ್ರದೇಶ ಅಮೇಥಿ ಹಾಗೂ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನುಭವಿಸಿದ ಕಾರಣ ಅವರು ವಯನಾಡು ಸಂಸದರಾಗಿ ಮುಂದುವರಿದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು 2004ರಿಂದಲೂ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಯನಾಡು ಹಾಗೂ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ಕಾರಣ, ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿತ್ತು.

ಈಗ ರಾಹುಲ್‌ ಗಾಂಧಿ ಅವರು ತಾಯಿಯ ಕ್ಷೇತ್ರವಾದ ರಾಯ್‌ಬರೇಲಿಯನ್ನೇ ಉಳಿಸಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಪಡೆದಿರುವ ಕಾರಣ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವಂತಾಗಿತ್ತು. ಈಗ ಪ್ರಿಯಾಂಕಾ ವಾದ್ರಾ ಅವರು ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಇವರಿಗೆ ಇದೇ ಮೊದಲ ಚುನಾವಣೆ ಆಗಿದೆ. ಚುನಾವಣೆಗೂ ಮೊದಲು, ಪ್ರಿಯಾಂಕಾ ವಾದ್ರಾ ಅವರು ರಾಯ್‌ಬರೇಲಿಯಿಂದ, ರಾಹುಲ್‌ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Continue Reading

ಶಿಕ್ಷಣ

NEETPG 2024 : ಜೂ.23ಕ್ಕೆ ನೀಟ್‌ ಪಿಜಿ ಪರೀಕ್ಷೆ; ನಾಳೆಯಿಂದಲೇ ಪ್ರವೇಶ ಪತ್ರ ಬಿಡುಗಡೆ

NEETPG 2024 : ಜೂನ್‌ 23ಕ್ಕೆ ನೀಟ್‌ ಪಿಜಿ ಪರೀಕ್ಷೆ ನಡೆಯಲಿದ್ದು, ನಾಳೆ ಅಂದರೆ ಜೂನ್‌ 18ಕ್ಕೆ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.‌

VISTARANEWS.COM


on

By

NEETPG 2024
ಸಾಂದರ್ಭಿಕ ಚಿತ್ರ
Koo

ನವದೆಹಲಿ/ಬೆಂಗಳೂರು : ದೇಶಾದ್ಯಂತ ಸುಮಾರು 259 ಕೇಂದ್ರದಲ್ಲಿ ಜೂನ್‌ 23ಕ್ಕೆ ನೀಟ್ ಪಿಜಿ 2024 (NEETPG 2024) ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೂನ್‌ 18ಕ್ಕೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ನೋಂದಾಯಿಸಿ ಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನ ಅಧಿಕೃತ ವೆಬ್ಸೈಟ್ natboard.edu.in ಡೌನ್‌ಲೋಡ್‌ ಮಾಡಬಹುದು.

ಅರ್ಹ ಅಭ್ಯರ್ಥಿಗಳು ತಮ್ಮ ಲಾಗಿನ್ ಐಡಿ ಮೂಲಕ ನೀಟ್ ಪಿಜಿ ಹಾಲ್ ಟಿಕೆಟ್ 2024 ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಪ್ರವೇಶ ಪತ್ರ ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಬೇಕು.

ಇದನ್ನೂ ಓದಿ: PGCET 2024: ಪಿಜಿಸಿಇಟಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ; ಶುಲ್ಕ ಪಾವತಿಗೂ ಅವಕಾಶ

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

  1. -ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಅಧಿಕೃತ ವೆಬ್‌ಸೈಟ್‌ಗೆ nbe.edu.in ಹೋಗಿ.
  2. -ಮುಖಪುಟದಲ್ಲಿ “ನೀಟ್ ಪಿಜಿ” ಲಿಂಕ್ ಕ್ಲಿಕ್‌ ಮಾಡಿ. ಇದು ಸಾಮಾನ್ಯವಾಗಿ “ಪರೀಕ್ಷೆಗಳು” ಅಥವಾ “ಪ್ರಮುಖ ಲಿಂಕ್‌ಗಳು” ವಿಭಾಗದಲ್ಲಿ ಕಂಡುಬರುತ್ತದೆ.
  3. -ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ನಮೂದಿಸಿ.
  4. -ಒಮ್ಮೆ ಲಾಗ್ ಇನ್ ಆದ ನಂತರ, ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವ ಆಯ್ಕೆ ಇರುತ್ತದೆ.
  5. -ಡೌನ್ಲೋಡ್ ಮಾಡುವ ಮೊದಲು, ಪ್ರವೇಶ ಪತ್ರದಲ್ಲಿನ ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ನಿಮ್ಮ ಹೆಸರು, ಛಾಯಾಚಿತ್ರ, ಪರೀಕ್ಷಾ ದಿನಾಂಕ ಮತ್ತು ಪರೀಕ್ಷಾ ಕೇಂದ್ರದ ವಿವರಗಳು ಇರಲಿದೆ.
  6. -ಪ್ರವೇಶ ಪತ್ರವನ್ನು ಸೇವ್‌ ಮಾಡಲು ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ. ಫೈಲ್ ಸಾಮಾನ್ಯವಾಗಿ ಪಿಡಿಎಫ್ ರೂಪದಲ್ಲಿರುತ್ತದೆ.
  7. -ಪ್ರವೇಶ ಪತ್ರದ ಕನಿಷ್ಠ ಎರಡು ಪ್ರತಿಗಳ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ. ಪ್ರವೇಶ ಪತ್ರದಲ್ಲಿ ಫೋಟೋ ಅಂಟಿಸಲು ಜಾಗ ಇರಲಿದೆ.
  8. -ಪರೀಕ್ಷಾ ಕೇಂದ್ರಕ್ಕೆ ಏನು ತರಬೇಕು, ನಿಷೇಧಿತ ವಸ್ತುಗಳ ಬಗ್ಗೆ ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನ ಓದಿಕೊಳ್ಳಿ. ಯಾವ ಸಮಯದೊಳಗೆ ನೀವೂ ಪರೀಕ್ಷಾ ಕೇಂದ್ರದೊಳಗೆ ಇರಬೇಕು ಎಂಬುದನ್ನೂ ಸೂಚಿಸಲಾಗುತ್ತದೆ.

ಪರೀಕ್ಷಾ ಕೇಂದ್ರದಲ್ಲಿ ಇದೆಲ್ಲವೂ ನಿರ್ಬಂಧ

ಪಠ್ಯ ಸಾಮಗ್ರಿ (ಮುದ್ರಿತ ಅಥವಾ ಲಿಖಿತ), ಟಿಪ್ಪಣಿಗಳು, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ರೈಟಿಂಗ್ ಪ್ಯಾಡ್ ಹಾಗೂ ಮೊಬೈಲ್‌ ಫೋನ್, ಬ್ಲೂಟೂತ್, ಇಯರ್ ಫೋನ್‌ಗಳು, ಮೈಕ್ರೊಫೋನ್, ಹೆಲ್ತ್ ಬ್ಯಾಂಡ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್ ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಇನ್ನೂ ಹುಡುಗಿಯರು ಬ್ರೇಸ್ ಲೆಟ್ ಗಳು, ಉಂಗುರ, ಕಿವಿಯೋಲೆಗಳು, ನೋಸ್-ಪಿನ್, ಚೈನ್/ ನಂತಹ ಎಲ್ಲಾ ಆಭರಣಗಳು/ ಪೆಂಡೆಂಟ್‌, ಬ್ಯಾಡ್ಜ್, ಬ್ರೂಚ್ ಎಲ್ಲವನ್ನೂ ನಿಷೇಧಿಸಲಾಗಿದೆ. ಜತೆಗೆ ವ್ಯಾಲೆಟ್, ಕ್ಯಾಪ್ , ನೀರಿನ ಬಾಟೆಲ್‌ ಕೂಡ ಕೊಂಡೊಯ್ಯುವಂತಿಲ್ಲ.

ಜುಲೈ 15ರೊಳಗೆ ಫಲಿತಾಂಶ ಪ್ರಕಟ

ಇನ್ನೂ ನೀಟ್‌ ಪಿಜಿ ಫಲಿತಾಂಶವನ್ನು ಜುಲೈ 15ರೊಳಗಾಗಿ ಪ್ರಕಟಿಸಲಾಗುವುದು ಎಂದು ನ್ಯಾಷನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಷನ್‌ ಮೆಡಿಕಲ್‌ ಸೈನ್ಸ್‌ ತಿಳಿಸಿದೆ. ನೀಟ್-ಪಿಜಿ 2024 ಗೆ ಅರ್ಹತೆ ಪಡೆಯಲು ಇಂಟರ್ನ್ಶಿಪ್ ಪೂರ್ಣಗೊಳಿಸಲು ಕಟ್ ಆಫ್ ದಿನಾಂಕವನ್ನು ಆಗಸ್ಟ್‌ 15ಕ್ಕೆ ನಿಗದಿ ಪಡಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Air India Food: ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಭೀಕರ ಅನುಭವವಾಗಿದೆ. ವಿಮಾನದಲ್ಲಿ ಅವರು ಆರ್ಡರ್‌ ಮಾಡಿದ ಆಹಾರದಲ್ಲಿ ಮೆಟಲ್‌ ಬ್ಲೇಡ್‌ ಪತ್ತೆಯಾಗಿದೆ. ಈ ಕುರಿತು ಅವರು ಪೋಸ್ಟ್‌ ಮಾಡುತ್ತಲೇ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.

VISTARANEWS.COM


on

Air India Food
Koo

ಬೆಂಗಳೂರು: ಏರ್‌ ಇಂಡಿಯಾ ಸೇರಿ ಹಲವು ಸಂಸ್ಥೆಗಳ ವಿಮಾನಗಳಲ್ಲಿ ಪ್ರಯಾಣಿಕರು ಕುಡಿದು ಗಲಾಟೆ ಮಾಡುವುದು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವುದು, ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ಕೃತ್ಯಗಳು ಇತ್ತೀಚೆಗೆ ವರದಿಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಊಟದಲ್ಲಿ (Air India Food) ಮೆಟಲ್‌ ಬ್ಲೇಡ್‌ (Metal Blade) ಒಂದು ಸಿಕ್ಕಿದ್ದು, ಊಟ ಆರ್ಡರ್‌ ಮಾಡಿದ ವ್ಯಕ್ತಿಯು ಕಂಗಾಲಾಗಿದ್ದಾರೆ. ಹಾಗೆಯೇ, ತಮಗೆ ಆದ ಭೀಕರ ಅನುಭವವನ್ನು, ಮೆಟಲ್‌ ಬ್ಲೇಡ್‌ ಫೋಟೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಎಂಬ ಪತ್ರಕರ್ತ ಬೆಂಗಳೂರಿನಿಂದ ಸ್ಯಾನ್‌ ಪ್ರಾನ್ಸಿಸ್ಕೋಗೆ ಏರ್‌ ಇಂಡಿಯಾ ವಿಮಾನದಲ್ಲಿ ತೆರಳುವಾಗ ಅವರಿಗೆ ಇಂತಹ ಭೀಕರ ಅನುಭವವಾಗಿದೆ. “ಏರ್‌ ಇಂಡಿಯಾ ವಿಮಾನದಲ್ಲಿ ನಾನು ಆರ್ಡರ್‌ ಮಾಡಿದ ಸ್ವೀಟ್‌ ಪೊಟ್ಯಾಟೋ ಹಾಗೂ ಫಿಗ್‌ ಚಾಟ್‌ನಲ್ಲಿ ಬ್ಲೇಡ್‌ ರೀತಿ ಇರುವ ಮೆಟಲ್‌ ತುಣುಕು ಪತ್ತೆಯಾಗಿದೆ. ಅದೃಷ್ಟವಶಾತ್‌ ಇದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಏರ್‌ ಇಂಡಿಯಾ ಕೆಟರಿಂಗ್‌ ಸರ್ವಿಸ್‌ ಬಗ್ಗೆ ನನಗೆ ಇದ್ದ ಗೌರವ ಕಡಿಮೆಯಾಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಮ್ಯಾಥ್ಯೂರಸ್‌ ಪೌಲ್‌ ಕೂಡಲೇ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯಿಸಿದೆ. “ನಿಮಗೆ ಇಂತಹ ಕೆಟ್ಟ ಅನುಭವ ಆಗಿದ್ದಕ್ಕೆ ಕ್ಷಮೆ ಇರಲಿ. ನಾವು ಪ್ರಯಾಣಿಕರಿಗೆ ಸೇವೆ ನೀಡಬೇಕು ಎಂಬ ನಿರ್ದಿಷ್ಟ ಗುರಿ ಹೊಂದಿದ್ದು, ಆ ಗುರಿಗೆ ಇದು ಧಕ್ಕೆ ತರುವಂತಿದೆ. ಸೇವೆಯಲ್ಲಿ ಸಮಸ್ಯೆಯಾಗಿರುವುದಕ್ಕೆ ಕ್ಷಮೆ ಇರಲಿ. ನಾವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ” ಎಂಬುದಾಗಿ ಏರ್‌ ಇಂಡಿಯಾ ಪ್ರತಿಕ್ರಿಯಿಸಿದೆ. ಅಷ್ಟೇ ಅಲ್ಲ, ಏರ್‌ ಇಂಡಿಯಾ ಸಂಸ್ಥೆಯು ಮ್ಯಾಥ್ಯೂರಸ್‌ ಪೌಲ್‌ ಅವರಿಗೆ ಒಂದು ವರ್ಷದಲ್ಲಿ ಒಮ್ಮೆ ಉಚಿತವಾಗಿ ಟಿಕೆಟ್‌ ನೀಡಲಾಗುವುದು ಎಂದು ಆಫರ್‌ ನೀಡಿದೆ. ಆದರೆ, ಇದನ್ನು ಪತ್ರಕರ್ತ ನಿರಾಕರಿಸಿದ್ದಾರೆ.

ವೆಜ್‌ ಊಟದಲ್ಲಿ ಮೂಳೆಗಳು ಪತ್ತೆ

ಕೆಲ ತಿಂಗಳ ಹಿಂದೆಯೂ ಏರ್‌ ಇಂಡಿಯಾ ವಿಮಾನದಲ್ಲಿ ಆರ್ಡರ್‌ ಮಾಡಿದ ಸಸ್ಯಾಹಾರದ ಬದಲಿಗೆ ಚಿಕನ್‌ ಪೀಸ್‌ಗಳು ಇರುವ ಊಟ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ, ಫೋಟೊಗಳ ಸಮೇತ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

“ಏರ್‌ ಇಂಡಿಯಾ 582 ವಿಮಾನದಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಇದೇ ವೇಳೆ ನನಗೆ ನೀಡಿದ ವೆಜ್‌ ಮೀಲ್‌ನಲ್ಲಿ ಚಿಕನ್‌ ಪೀಸ್‌ಗಳು ದೊರೆತಿವೆ. ನಾನು ಕಲ್ಲಿಕೋಟೆಯಿಂದ ವಿಮಾನ ಹತ್ತಿದೆ. ಈ ವಿಮಾನವು 6.40 ಹೊರಡುವ ಬದಲು 7.40ಕ್ಕೆ ಹಾರಾಟ ಆರಂಭಿಸಿದೆ. ವಿಮಾನ ಹಾರಾಟ ವಿಳಂಬ ಮಾಡುವ ಜತೆಗೆ ಮಾಂಸಾಹಾರ ನೀಡಲಾಗಿದೆ. ಇದರ ಕುರಿತು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದರೆ, ಅವರು ಒಂದು ಸಾರಿ ಕೇಳಿ ಸುಮ್ಮನಾದರು. ಹಾಗಾಗಿ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಆಗ್ರಹಿಸುತ್ತಿದ್ದೇನೆ” ಎಂದು ವೀರಾ ಜೈನ್‌ ಎಂಬ ಮಹಿಳೆಯು ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: Mayank Agarwal: ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್? ಐಸಿಯುನಲ್ಲಿ ಚಿಕಿತ್ಸೆ

Continue Reading

ವೈರಲ್ ನ್ಯೂಸ್

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

ಖ್ಯಾತ ವೈದ್ಯರು ಪತ್ತೆ ಹಚ್ಚಲಾಗದ ಕಾಯಿಲೆಯನ್ನು ಮನೆ ಕೆಲಸದವಳು ಸುಲಭವಾಗಿ ಗುರುತಿಸಿದ್ದಾಳೆ ಎಂದು ಲಿವರ್ ಡಾಕ್ ಎಂದೇ ಜನಪ್ರಿಯವಾಗಿರುವ ಕೇರಳದ ಹೆಪಟಾಲಜಿಸ್ಟ್ ಸಿರಿಯಾಕ್ ಡಾ. ಅಬ್ಬಿ ಫಿಲಿಪ್ಸ್ ಎಕ್ಸ್ ನಲ್ಲಿ ಹೇಳಿಕೊಂಡಿದ್ದು ಭಾರಿ ವೈರಲ್ (Viral News) ಆಗಿದೆ. ಆ ರೋಗ ಯಾವುದು, ಅದರ ಲಕ್ಷಣಗಳು ಏನು ಗೊತ್ತೇ? ಇಲ್ಲಿದೆ ವರದಿ.

VISTARANEWS.COM


on

By

Viral news
Koo

ತಿರುವನಂತಪುರಂ: ಕುಟುಂಬದ ಸದಸ್ಯರಿಗೆ ಇದ್ದ ರೋಗವನ್ನು ಗುರುತಿಸಲು ಮನೆಯ ಹಿರಿಯರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಕೇರಳದ (kerala) ಹೆಪಟಾಲಜಿಸ್ಟ್ (hepatologist) ಒಬ್ಬರು ಎಕ್ಸ್ ನಲ್ಲಿ (x) ಹಂಚಿಕೊಂಡಿದ್ದು, ಭಾರಿ ವೈರಲ್ (Viral News) ಆಗಿದೆ. ಈ ರೋಗ ನಿರ್ಣಯ (identify a disease) ಮಾಡಲು ಸ್ವತಃ ವೈದ್ಯರು ಹೆಣಗಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಲಿವರ್ ಡಾಕ್ (Liver Doc) ಎಂದು ಜನಪ್ರಿಯವಾಗಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ವಯಸ್ಕರೊಬ್ಬರಿಗೆ ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರ, ಶೀತ, ಆಯಾಸ, ಸಂಧಿವಾತದಂತಹ ಲಕ್ಷಣಗಳನ್ನು ಕಂಡು ಎಲ್ಲ ಪರೀಕ್ಷೆಗಳನ್ನು ನಡೆಸಿದರು. ಆದರೆ ಎಲ್ಲವೂ ನಕಾರಾತ್ಮಕ ಫಲಿತಾಂಶ ನೀಡಿತ್ತು. ವೈರಲ್ ಹೆಪಟೈಟಿಸ್‌, ಕೋವಿಡ್ -19, ಇನ್ ಫ್ಲೂ ಯೆನ್ಸ್, ಡೆಂಗ್ಯೂ, ಎಬ್‌ಸ್ಟೈನ್ ಬಾರ್ ವೈರಸ್‌ ಎಲ್ಲವನ್ನೂ ಪರೀಕ್ಷಿಸಿದರು. ಆದರೆ ಎಲ್ಲವೂ ನೆಗೆಟಿವ್ ವರದಿ ನೀಡಿತ್ತು. ಇದರಿಂದ ಸ್ವತಃ ವೈದ್ಯರಿಗೆ ಹತಾಶೆ ಉಂಟಾಯಿತು. ಎಲ್ಲ ವೈದ್ಯಕೀಯ ಪುಸ್ತಕಗಳನ್ನು ನೋಡಿದರು. ಯಾವುದೇ ಪ್ರಯೋಜನವಾಗಲಿಲ್ಲ.

ಒಂದು ದಿನ ಮನೆಯ ಕೆಲಸದವಳು ಬಂದು ತಮ್ಮ ಮೊಮ್ಮಕ್ಕಳಲ್ಲಿ ಈ ದದ್ದು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಅಂಜಂಪಣಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದಳು. ಬಳಿಕ ಪಾರ್ವೊವೈರಸ್ ಬಿ 19 ಗಾಗಿ ಪರಿಶೀಲಿಸಿದಾಗ ಅದು ಪಾಸಿಟಿವ್ ಬಂದಿದೆ ಎಂದು ಡಾ. ಫಿಲಿಪ್ಸ್ ಹೇಳಿದ್ದಾರೆ.

17 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ವಯಸ್ಸಾದ ಸೇವಕಿಯೊಬ್ಬರು 10 ಸೆಕೆಂಡುಗಳಲ್ಲಿ ರೋಗವನ್ನು ಗುರುತಿಸಿದ್ದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.

ಇದನ್ನು ಐದನೇ ರೋಗ ಎಂದು ಕರೆಯಲಾಗುತ್ತದೆ. ಇದು ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ಇದು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಮತ್ತು ಬಾಯಿಯಲ್ಲಿರುವ ದ್ರವಗಳ ಮೂಲಕ ರೋಗ ಹರಡುತ್ತದೆ. ಕೆನ್ನೆಗಳ ಮೇಲೆ ಕೆಂಪು ದದ್ದುಗಳನ್ನು ಹೊಂದಿರುತ್ತದೆ. ದೇಹಕ್ಕೂ ಹರಡುತ್ತದೆ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.


ವೈರಲ್ ಆದ ಟ್ವೀಟ್

ಡಾ. ಫಿಲಿಪ್ ಅವರ ಈ ಟ್ವಿಟ್ ಭಾರೀ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇದು 4.18 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.

ಒಬ್ಬರು ಕೆಲವೊಮ್ಮೆ ಪ್ರಯೋಗಿಕ ಜ್ಞಾನವನ್ನು ಸಾಂಪ್ರದಾಯಿಕ ಜ್ಞಾನ ಸೋಲಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ಕೆಲವು ಸಂದರ್ಭದಲ್ಲಿ ವೈದ್ಯರಿಗಿಂತ ಹಿರಿಯರ ನಂಬಿಕೆಯೇ ನಿಜವಾಗುತ್ತದೆ ಎಂದು ತಿಳಿಸಿದ್ದಾರೆ.

Continue Reading
Advertisement
Health Tips Kannada
Latest31 seconds ago

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Petrol Diesel Price Hike
ಕರ್ನಾಟಕ19 mins ago

Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

International Yoga Day 2024
Latest39 mins ago

International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ?

Job Recruitment
ಉದ್ಯೋಗ42 mins ago

Job Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆಗಳಿಗೆ ಅರ್ಜಿ ಆಹ್ವಾನ

Rahul Gandhi
ದೇಶ55 mins ago

Rahul Gandhi: ರಾಯ್‌ಬರೇಲಿಯನ್ನೇ ಆಯ್ಕೆ ಮಾಡಿಕೊಂಡ ರಾಹುಲ್‌ ಗಾಂಧಿ; ವಯನಾಡಿನಲ್ಲಿ ಪ್ರಿಯಾಂಕಾ ಸ್ಪರ್ಧೆ!

Rahul Gandhi
ಕರ್ನಾಟಕ2 hours ago

Rahul Gandhi: ರಾಹುಲ್ ಗಾಂಧಿ ಬಗ್ಗೆ ವಿವಾದಾದ್ಮಕ ವಿಡಿಯೊ; ಯುಟ್ಯೂಬರ್‌ ವಿರುದ್ಧ ಎಫ್‌ಐಆರ್‌

Actor Chikkanna
ಕರ್ನಾಟಕ2 hours ago

Actor Chikkanna: ‌ದರ್ಶನ್‌ ಜತೆ ಪಾರ್ಟಿ ಮಾಡಿದ್ದು ನಿಜ; ಪೊಲೀಸರಿಗೆ ಸ್ಫೋಟಕ ಮಾಹಿತಿ ನೀಡಿದ ಚಿಕ್ಕಣ್ಣ!

Karnataka weather Forecast
ಮಳೆ2 hours ago

Karnataka Weather : ಬೆಂಗಳೂರು, ಚಿಕ್ಕಮಗಳೂರಲ್ಲಿ ಸುರಿದ ಧಾರಾಕಾರ ಮಳೆ

Viral Video
Latest2 hours ago

Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

Viral Video
Latest2 hours ago

Viral Video: ಗಂಭೀರ ಸ್ಥಿತಿಯಲ್ಲಿರುವ ಅಪ್ಪನ ಆಸೆ ಈಡೇರಿಕೆ; ಆಸ್ಪತ್ರೆಯ ಐಸಿಯುನಲ್ಲೇ ಮಗಳ ಮದುವೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು8 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು8 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌