Delhi Flood: ಸುಪ್ರೀಂಕೋರ್ಟ್​ವರೆಗೂ ಹರಿದು ಬಂದ ಯಮುನೆ; ಕುಡಿಯುವ ನೀರಿನ ಕೊರತೆ! - Vistara News

ದೇಶ

Delhi Flood: ಸುಪ್ರೀಂಕೋರ್ಟ್​ವರೆಗೂ ಹರಿದು ಬಂದ ಯಮುನೆ; ಕುಡಿಯುವ ನೀರಿನ ಕೊರತೆ!

ಮನೆಮನೆಗೆ ನುಗ್ಗುತ್ತಿರುವ ದೆಹಲಿಯ ಯಮುನೆಯ ಅಬ್ಬರ ಇಂದು ಕೂಡ ಮುಂದುವರಿದಿದೆ. ಇಂದು ರಾಜ್​ಘಾಟ್​ನಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಜನರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

VISTARANEWS.COM


on

Delhi Flood
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿಯಲ್ಲಿ ವಿಪರೀತ ಮಳೆ (Delhi Rain)ಯಾಗುತ್ತಿದೆ. ಯಮುನಾ ನದಿಯಂತೂ (Yamuna River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುರುವಾರ ನದಿಯಲ್ಲಿ ನೀರಿನ ಪ್ರಮಾಣ 208.46 ಮೀಟರ್​ಗೆ ಏರಿತ್ತು. ಅದು ಇಂದು ಬೆಳಗ್ಗೆ ಕಡಿಮೆಯಾಗಿದೆ. ಆದರೂ ಅಪಾಯದ ಮಟ್ಟವಾದ 205.33 ಮೀಟರ್​​ಗಿಂತಲೂ ಜಾಸ್ತಿ ಹರಿಯುತ್ತಿದೆ. ನದಿ ತೀರದಿಂದ ಸುಮಾರು 23,692 ಜನರನ್ನು ಸ್ಥಳಾಂತರ ಮಾಡಲಾಗಿದೆ. ದೆಹಲಿಯ ರಸ್ತೆಗಳೆಲ್ಲ ನದಿಗಳಾಗಿ ಮಾರ್ಪಟ್ಟಿವೆ. ಎಲ್ಲ ಮನೆಗಳು, ವೈದ್ಯಕೀಯ ಕೇಂದ್ರಗಳು, ಆಶ್ರಯ ಮನೆಗಳು, ಸ್ಮಶಾನಗಳಿಗೆಲ್ಲ ನೀರು ನುಗ್ಗಿದೆ (Delhi Flood).

ಮನೆಮನೆಗೆ ನುಗ್ಗುತ್ತಿರುವ ದೆಹಲಿಯ ಯಮುನೆಯ ಅಬ್ಬರ ಇಂದು ಕೂಡ ಮುಂದುವರಿದಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮತ್ತು ಇತರ ಸಚಿವರ ನಿವಾಸಗಳ ಬಳಿಯೂ ಪ್ರವಾಹ ಉಂಟಾಗಿದೆ. ಇಂದು ರಾಜ್​ಘಾಟ್​ನಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ಜನರಂತೂ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಂತೂ ಯಮುನಾ ನದಿ ಪ್ರವಾಹ ಸುಪ್ರೀಂಕೋರ್ಟ್​ವರೆಗೆ ಹೋಗಿತ್ತು. ಚರಂಡಿಗಳಿಂದ ನೀರು ಹಿಮ್ಮುಖವಾಗಿ ಹರಿದಿದೆ. ಸುಪ್ರಿಂಕೋರ್ಟ್​​ ಸಮೀಪದ ಮಥುರಾ ಮತ್ತು ಭಗವಾನ್ ದಾಸ್​ ರಸ್ತೆಗಳೆಲ್ಲ ಜಲಾವೃತಗೊಂಡಿವೆ.

ದೆಹಲಿಯಲ್ಲಿ ಅಬ್ಬರದ ಮಳೆಯಾಗುತ್ತಿದೆ. ಎಲ್ಲೆಲ್ಲೂ ಪ್ರವಾಹ. ಈ ಮಧ್ಯೆ ದೆಹಲಿಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಯಮುನಾ ನದಿ ನೀರಿನ ಮಟ್ಟ ಮಿತಿಮೀರಿದ್ದರಿಂದ ವಾಜಿರಾಬಾದ್, ಚಂದ್ರವಾಲ್ ಮತ್ತು ಓಖ್ಲಾ ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದೆ. ಹೀಗಾಗಿ ಶೇ.25ರಷ್ಟು ಪೂರೈಕೆ ಕಡಿತಗೊಳಿಸಲು ದೆಹಲಿ ಸರ್ಕಾರವೇ ನಿರ್ಧಾರ ಮಾಡಿದೆ. ದೆಹಲಿಯಲ್ಲಿ ಜುಲೈ 16ರವರೆಗೂ ಎಲ್ಲ ಶಾಲಾ-ಕಾಲೇಜುಗಳಿಗೂ ರಜಾ ನೀಡಲಾಗಿದೆ. ಅಗತ್ಯ ವಸ್ತುಗಳಲ್ಲದ, ಸರಕುಗಳನ್ನು ಹೊತ್ತು ಬರುವ ಲಾರಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Ramoji Rao Funeral: ರಾಮೋಜಿ ರಾವ್ ಪಾರ್ಥಿವ ಶರೀರ ಹೊತ್ತ ಚಂದ್ರಬಾಬು ನಾಯ್ಡು; ವಿಡಿಯೊ ನೋಡಿ

ರಾಮೋಜಿ ಫಿಲ್ಮ್ ಸಿಟಿ ಮತ್ತು ಈಟಿವಿ ನೆಟ್‌ವರ್ಕ್‌ನ ಸಂಸ್ಥಾಪಕ ರಾಮೋಜಿ ರಾವ್ (Ramoji Rao Funeral) ಅವರು ಶನಿವಾರ ನಿಧನರಾಗಿದ್ದು, ಭಾನುವಾರ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

VISTARANEWS.COM


on

By

Ramoji Rao Funeral
Koo

ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿ (Ramoji Film City) ಮತ್ತು ಈಟಿವಿ ನೆಟ್‌ವರ್ಕ್‌ನ (ETV Network) ಸಂಸ್ಥಾಪಕ 87 ವರ್ಷದ ರಾಮೋಜಿ ರಾವ್ (Ramoji Rao Funeral) ಅವರು ಶನಿವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಟಿಡಿಪಿ (TDP) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಭಾನುವಾರ ಪಾಲ್ಗೊಂಡರು. ರಾಮೋಜಿ ರಾವ್‌ ಅವರ ಪಾರ್ಥಿವ ಶರೀರ ಹೊರಲು ಚಂದ್ರಬಾಬು ನಾಯ್ಡು ಅವರು ಹೆಗಲು ಕೊಟ್ಟಿದ್ದು ಗಮನ ಸೆಳೆಯಿತು.

ಈ ಕುರಿತು ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಾಯ್ಡು ಅವರು ರಾಮೋಜಿ ಅವರ ಪಾರ್ಥಿವ ಶರೀರವನ್ನು ಸಾಗಿಸಲು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸೇರಿಕೊಂಡರು. ಅಂತ್ಯಕ್ರಿಯೆಯ ಸ್ಥಳದಲ್ಲಿ ಅಭಿಮಾನಿಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಅಂತಿಮ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದಾಗ ರಾಜಕೀಯ ನಾಯಕ ನಾಯ್ಡು ಅವರು ಮೆರವಣಿಗೆಯನ್ನು ಮುನ್ನಡೆಸಿದರು.


ರಾಮೋಜಿ ರಾವ್ ಅವರು ನಗರದ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಬೆಳಗಿನ ಜಾವ 3.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಜೂನ್ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಅನಂತರ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಬಳಿಕ ಅವರು ನಿಧನರಾದರು. ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲಂ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕರೆತರಲಾಗಿತ್ತು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಿಗೆ ಹಲವಾರು ಪ್ರಮುಖ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.


ಮೋದಿ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಶ್ರೀ ರಾಮೋಜಿ ರಾವ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಅವರು ಭಾರತೀಯ ಮಾಧ್ಯಮದಲ್ಲಿ ಕ್ರಾಂತಿಯನ್ನು ಮಾಡಿದ ದಾರ್ಶನಿಕರಾಗಿದ್ದರು. ಅವರ ಶ್ರೀಮಂತ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಗಮನಾರ್ಹ ಪ್ರಯತ್ನಗಳು, ಅವರು ಮಾಧ್ಯಮ ಮತ್ತು ಮನರಂಜನಾ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿದರು ಎಂದು ಹೇಳಿದ್ದರು.


ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರವಾದ ಉತ್ಸುಕರಾಗಿದ್ದರು. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬುದ್ಧಿವಂತಿಕೆಯಿಂದ ಪ್ರಯೋಜನ ಪಡೆಯಲು ಹಲವಾರು ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಅವರು ವರ್ಣಿಸಿದ್ದರು.

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್‌ಗೆ ಕಪಾಳಮೋಕ್ಷ; ಹೃತಿಕ್ ರೋಷನ್ ರಿಯಾಕ್ಷನ್‌ ಏನು?

ಮಹೇಶ್ ಬಾಬು ಸಂತಾಪ

ನಟ ಮಹೇಶ್ ಬಾಬು ಅವರು, ರಾಮೋಜಿ ರಾವ್ ಅವರ ಅಗಲುವಿಕೆಯಿಂದ ತೀವ್ರ ದುಃಖವಾಗಿದೆ. ಅವರ ಸಮಯಕ್ಕಿಂತ ಯಾವಾಗಲೂ ಮುಂದಿರುವ ದಾರ್ಶನಿಕ. ರಾಮೋಜಿ ಫಿಲ್ಮ್ ಸಿಟಿ ಅವರ ತೇಜಸ್ಸಿಗೆ ಮತ್ತು ಸಿನಿಮಾದ ಮೇಲಿನ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಅವರ ಪರಂಪರೆ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.

ರಿತೇಶ್ ದೇಶ್‌ಮುಖ್ ಸಂತಾಪ

ರಿತೇಶ್ ದೇಶ್‌ಮುಖ್ ಅವರು, ಐಕಾನ್, ಲೆಜೆಂಡ್ ಶ್ರೀ ರಾಮೋಜಿ ರಾವ್ ಅವರು ಇನ್ನಿಲ್ಲ ಎಂದು ತಿಳಿದು ನನಗೆ ತುಂಬಾ ದುಃಖವಾಗಿದೆ. ಹೊಸಬರಿಗೆ ಅವಕಾಶಗಳನ್ನು ನೀಡುವ ಅವರ ನಂಬಿಕೆಗೆ ಧನ್ಯವಾದಗಳು. ಅವರು ಯಾರೂ ಮಾಡದ ಕೆಲಸವನ್ನು ಮಾಡಲು ಧೈರ್ಯ ಮಾಡಿದರು. ಅವರ ಪರಂಪರೆಯು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Continue Reading

ದೇಶ

Modi 3.0 Cabinet: ಈ ನಾಲ್ಕು ಮಹತ್ವದ ಖಾತೆಗಳು ಬಿಜೆಪಿ ಕೈಯಲ್ಲೇ ಉಳಿಯಲಿವೆ!

Modi 3.0 Cabinet:ಎನ್‌ಡಿಎ ಒಕ್ಕೂಟದ ಯಾವ ಪಕ್ಷಕ್ಕೆ ಯಾವ ಖಾತೆ ನೀಡುತ್ತದೆ? ಬಿಜೆಪಿ ಎಷ್ಟು ಖಾತೆಗಳನ್ನು ತನ್ನ ಬಳಿ ಇರಿಸಿಕೊಳ್ಳಲಿದೆ ಎಂಬುದು ಈ ಕುತೂಹಕ್ಕೀಡು ಮಾಡಿರುವ ಸಂಗತಿ. ಅಧಿಕೃತ ಮಾಹಿತಿ ಪ್ರಕಾರ ಬಿಜೆಪಿ ಪ್ರಮುಖ ನಾಲ್ಕು ಖಾತೆಗಳನ್ನು ತನ್ನ ಬಳಿಯೇ ಇರಿಸಿಕೊಳ್ಳಲಿದೆ ಎನ್ನಲಾಗಿದೆ. ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಈ ಬಾರಿ ಹಳೆಯ ಮತ್ತು ಹೊಸ ಮುಖಗಳ ನಡುವೆ ಸಮತೋಲನ ಕಾಪಾಡಿಕೊಂಡು ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Modi 3.0 Cabinet
Koo

ನವದೆಹಲಿ: ಬಹುಮತದೊಂದಿಗೆ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇಂದು (ಜೂನ್‌ 9) ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಎಲ್ಲರಿಗೂ ಈ ಬಾರಿ ಪ್ರಧಾನಿ ಮೋದಿ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಇದ್ದೇ ಇದೆ. ಈಗಾಗಲೇ ಕೆಲವು ಅಧಿಕೃತ ಮೂಲಗಳ ಪ್ರಕಾರ ಈ ಬಾರಿ ಕೇಂದ್ರ ಸಚಿವ ಸಂಪುಟ(Modi 3.0 Cabinet)ದಲ್ಲಿ ಎನ್‌ಡಿಎ ಮೈತ್ರಿಕೂಟದ 34ಮಂದಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಮಿತ್ರ ಪಕ್ಷಗಳ ಸಹಾಯದೊಂದಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಖಾತೆ ಹಂಚಿಕೆಯೇ ಬಹಳಷ್ಟು ಸವಾಲಿನ ಕಾರ್ಯವಾಗಿದೆ.

ಹೀಗಿರುವಾಗ ಎನ್‌ಡಿಎ ಒಕ್ಕೂಟದ ಯಾವ ಪಕ್ಷಕ್ಕೆ ಯಾವ ಖಾತೆ ನೀಡುತ್ತದೆ? ಬಿಜೆಪಿ ಎಷ್ಟು ಖಾತೆಗಳನ್ನು ತನ್ನ ಬಳಿ ಇರಿಸಿಕೊಳ್ಳಲಿದೆ ಎಂಬುದು ಈ ಕುತೂಹಕ್ಕೀಡು ಮಾಡಿರುವ ಸಂಗತಿ. ಅಧಿಕೃತ ಮಾಹಿತಿ ಪ್ರಕಾರ ಬಿಜೆಪಿ ಪ್ರಮುಖ ನಾಲ್ಕು ಖಾತೆಗಳನ್ನು ತನ್ನ ಬಳಿಯೇ ಇರಿಸಿಕೊಳ್ಳಲಿದೆ ಎನ್ನಲಾಗಿದೆ. ಗೃಹ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳು ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಈ ಬಾರಿ ಹಳೆಯ ಮತ್ತು ಹೊಸ ಮುಖಗಳ ನಡುವೆ ಸಮತೋಲನ ಕಾಪಾಡಿಕೊಂಡು ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ನಾಲ್ಕು ಪ್ರಮುಖ ಸ್ಥಾನಗಳ ಜೊತೆಗೆ ಕೇಸರಿ ಪಕ್ಷವು ರೈಲ್ವೆ, ರಸ್ತೆ ಸಾರಿಗೆ, ಕಾನೂನು, ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣದಂತಹ ಇತರ ಕೆಲವು ಪ್ರಮುಖ ಸಚಿವಾಲಯಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇನ್ನು ಕಳೆದ ಸಚಿವ ಸಂಪುಟದ 10 ಸಚಿವರು ಈ ಬಾರಿಯೂ ಮುಂದುವರೆಯಲಿದ್ದಾರೆ. ಅಮಿತ್ ಶಾ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಮತ್ತು ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದು, ಅನುರಾಗ್ ಠಾಕೂರ್ ಅವರನ್ನು ಕೈಬಿಡಲಾಗಿದೆ.

ನಿತೀಶ್ ಕುಮಾರ್ ನೇತೃತ್ವದ JD(U) ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಒಬ್ಬ ರಾಜ್ಯ ಸಚಿವ (MoS) ಸ್ಥಾನ ಪಡೆಯಲಿದೆ. ಇನ್ನು ತೆಲುಗು ದೇಶಂ ಪಕ್ಷದ (ಟಿಡಿಪಿ) ಹೊಸದಾಗಿ ಚುನಾಯಿತರಾದ ಇಬ್ಬರು ಸಂಸದರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಲು ಸಿದ್ಧರಾಗಿದ್ದಾರೆ, ಇದು ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಸಜ್ಜಾಗಿದೆ ಎಂದು ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷವು ಭಾನುವಾರ ಖಚಿತಪಡಿಸಿದೆ.

ಟಿಡಿಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪುತ್ರ ರಾಮ್ ಮೋಹನ್ ನಾಯ್ಡು, ಯರ್ರಾನ್ ನಾಯ್ಡು (36) ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅತ್ಯಂತ ಕಿರಿಯ ಕೇಂದ್ರ ಕ್ಯಾಬಿನೆಟ್ ಸಚಿವರಾಗಲಿದ್ದಾರೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

Continue Reading

Lok Sabha Election 2024

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಐವರಿಗೆ ಸ್ಥಾನ; ವಿ.ಸೋಮಣ್ಣ ಅಚ್ಚರಿಯ ಆಯ್ಕೆ?

Modi 3.0 Cabinet: ಮೂಲಗಳ ಪ್ರಕಾರ ರಾಜ್ಯದ ಐವರು ಸಂಪುಟ ಸಭೆ ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಅಚ್ಚರಿ ಎನ್ನುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ.ಸೋಮಣ್ಣ ಅವರು ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಕ್ಯಾಬಿನೆಟ್‌ ಖಾತೆ ಸಚಿವರಾಗಿ ಪ್ರಹ್ಲಾದ್‌ ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಿಗಲಿದೆ.

VISTARANEWS.COM


on

Modi 3.0 Cabinet
Koo

ಬೆಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಇಂದು (ಜೂನ್‌ 9) ಸಂಜೆ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ (Modi 3.0 Cabinet). ಈ ಮಧ್ಯೆ ಮೋದಿ ಅವರೊಂದಿಗೆ ಸಚಿವರಾಗಿ ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ರಾಜ್ಯದ ಐವರು ಸಂಪುಟ ಸಭೆ ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಅಚ್ಚರಿ ಎನ್ನುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ.ಸೋಮಣ್ಣ (V. Somanna) ಅವರಿಗೆ ಮಣೆ ಹಾಕಲಾಗಿದೆ.

ರಾಜ್ಯದಿಂದ ಯಾರೆಲ್ಲ?

ರಾಜ್ಯದಿಂದ ಕ್ಯಾಬಿನೆಟ್‌ ಖಾತೆ ಸಚಿವರಾಗಿ ಪ್ರಹ್ಲಾದ್‌ ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಿಗಲಿದೆ ಎನ್ನಲಾಗುತ್ತಿದೆ.

ಸೋಮಣ್ಣ ಅಚ್ಚರಿಯ ಆಯ್ಕೆ

ವಿಶೇಷ ಎಂದರೆ ಸೋಮಣ್ಣ ಅವರದ್ದು ಅಚ್ಚರಿಯ ಆಯ್ಕೆ. ಉಳಿದ ನಾಲ್ವರ ನಾಲ್ವರ ಹೆಸರು ಮೊದಲೇ ಚಾಲ್ತಿಯಲ್ಲಿದ್ದರೂ ಸೋಮಣ್ಣ ಅವರ ಬಗ್ಗೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ಇದೀಗ ಅವರು ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ. ವಿ. ಸೋಮಣ್ಣ ಅವರು ಈ ಹಿಂದೆ ಗೋವಿಂದ ರಾಜ ನಗರ ಕ್ಷೇತ್ರದ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ತಮ್ಮನ್ನು ಅತಂತ್ರಗೊಳಿಸಿದ ವಿಚಾರದಲ್ಲಿ ಅವರು ಸಿಟ್ಟಾಗಿದ್ದು, ಬಿಜೆಪಿ ಬಿಡುವ ಬಗ್ಗೆ ಮಾತನಾಡಿದ್ದರು. ಬಳಿಕ ಹೈಕಮಾಂಡ್‌ ಅವರನ್ನು ಸಮಾಧಾನ ಮಾಡಿತ್ತು.

ಒಂದು ಹಂತದಲ್ಲಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಸುದ್ದಿ ಹರಡಿತ್ತಾದರೂ ಅದು ನಾರಾಯಣ ಭಾಂಡಗೆ ಅವರಿಗೆ ಒಲಿದ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಮತ್ತೆ ನಿರಾಸೆ ಅನುಭವಿಸಿದ್ದರು. ಇದೀಗ ಅವರು ಬಯಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಸ್ಪರ್ಧಿಸಿ ಜಯ ಗಳಿಸಿದ್ದು, ಸಚಿವ ಸ್ಥಾನ ಒಲಿಯುತ್ತಿದೆ.

ದಲಿತ, ಒಬಿಸಿ ಕೋಟಾದ ಸಂಸದರಿಗೆ ನಿರಾಸೆ

ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನಿಸಿದ್ದ ಗೋವಿಂದ ಕಾರಜೋಳ ಮತ್ತು ರಮೇಶ್ ಜಿಗಜಿಣಿಗೆ ಅವರಿಗೆ ನಿರಾಸೆಯಾಗಿದೆ. ಒಬಿಸಿ ಕೋಟಾದಲ್ಲಿ ಸಚಿವ ಸ್ಥಾನದ ಆಸೆಯಲ್ಲಿ ಇದ್ದ ಕೋಟಾ ಶ್ರೀನಿವಾಸ ಪ್ರಸಾದ್ ಮತ್ತು ಪಿ.ಸಿ. ಮೋಹನ್ ಅವರಿಗೂ ಅದೃಷ್ಟ ಒಲಿದಿಲ್ಲ. ಇನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಕೂಡ ನಿರಾಸೆಗೆ ಒಳಗಾಗಿದ್ದಾರೆ. ಲಿಂಗಾಯತ ಕೋಟಾದಲ್ಲಿ ತಮ್ಮ ಪುತ್ರ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಿಸಿದ್ದರು. ಇದು ಕೂಡ ಕೈಗೂಡಿಲ್ಲ. ಇತ್ತ ಲಿಂಗಾಯತ ಕೋಟಾದಲ್ಲಿ ಸೋಮಣ್ಣ ಅವರಿಗೆ ಜಾಕ್‌ಪಾಟ್‌ ಹೊಡೆದಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

Continue Reading

ದೇಶ

Modi 3.0 Cabinet: ಬಿಜೆಪಿಯ 5, NDAಯ 10 ಸಂಸದರು INDIA ಜೊತೆ ಸಂಪರ್ಕ? ಹೊಸ ಬಾಂಬ್‌ ಸ್ಫೋಟಿಸಿದ TMC

Modi 3.0 Cabinet: ಐವರು ಬಿಜೆಪಿ ಸಂಸದರು ತಕ್ಷಣವೇ ಟಿಎಂಸಿಗೆ ಹಾರಲು ರೆಡಿಯಾಗಿದ್ದರೆ, ಇನ್ನು ಕೆಲವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಬಳಿಕ ನಿರ್ಧರಿಸಲಿದ್ದಾರೆ ಇನ್ನು ಎನ್‌ಡಿಎಯ ಒಟ್ಟು 10 ಸಂಸದರು ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದಾರೆ. ಎಂದು ಟಿಎಂಸಿ ಮೂಲಗಳು ಹೇಳಿವೆ. ಹೀಗಾಗಿ ಮಮತಾ ಬ್ಯಾನರ್ಜಿ ಹೇಳಿದಂತೆಯೇ ಕೇಂದ್ರ ಸರ್ಕಾರ ಶೀಘ್ರದಲ್ಲೇ ಪತನ ಆಗುತ್ತಾ ಅನ್ನೋ ಅನುಮಾನ ಹುಟ್ಟಿಸಿದೆ.

VISTARANEWS.COM


on

Modi 3.0 Cabinet
Koo

ಕೋಲ್ಕತ್ತಾ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ(Modi 3.0 Cabinet) ಅಧಿಕಾರಕ್ಕೆ ಬರುತ್ತಿದ್ದಂತೆ ಕೇವಲ 15 ದಿನಗಳಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಕನಿಷ್ಟ ಐವರು ಸಂಸದರು ತೃಣಮೂಲ ಕಾಂಗ್ರೆಸ್‌(TMC) ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಪಶ್ಚಿಮ ಬಂಗಾಳ(West Bengal)ದದಲ್ಲಿ ಈ ಬಾರಿ ಚುನಾಯಿತರಾಗಿರುವ 12 ಬಿಜೆಪಿ ಸಂಸದರ ಪೈಕಿ ಐವರು ಸಂಸದರು ಶೀಘ್ರದಲ್ಲೇ ಪಕ್ಷ ತೊರೆದು ಟಿಎಂಸಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಹೊಸ ಬಾಂಬ್‌ವೊಂದನ್ನು ಟಿಎಂಸಿ ಸ್ಫೋಟಿಸಿದೆ.

ಇನ್ನು ಈ ಬಾರಿ ಸೋಲುಂಡಿರುವ ಬಿಜೆಪಿ ಅಭ್ಯರ್ಥಿಗಳು ಕೂಡ ಟಿಎಂಸಿಗೆ ಸೇರ್ಪಡೆಗೊಳ್ಳಲು ಬಯಸುತ್ತಿದ್ದಾರೆ. ಸಂಸದರ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಈ ಮಹತ್ವದ ಬದಲಾವಣೆ ಆಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಸಂಸದರ ಜೂನ್‌ ಮಧ್ಯದಲ್ಲಿ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಇನ್ನು ಐವರು ಬಿಜೆಪಿ ಸಂಸದರು ತಕ್ಷಣವೇ ಟಿಎಂಸಿಗೆ ಹಾರಲು ರೆಡಿಯಾಗಿದ್ದರೆ, ಇನ್ನು ಕೆಲವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಹಂಚಿಕೆ ಬಳಿಕ ನಿರ್ಧರಿಸಲಿದ್ದಾರೆ ಇನ್ನು ಎನ್‌ಡಿಎಯ ಒಟ್ಟು 10 ಸಂಸದರು ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದಾರೆ. ಎಂದು ಟಿಎಂಸಿ ಮೂಲಗಳು ಹೇಳಿವೆ. ಹೀಗಾಗಿ ಮಮತಾ ಬ್ಯಾನರ್ಜಿ ಹೇಳಿದಂತೆಯೇ ಕೇಂದ್ರ ಸರ್ಕಾರ ಶೀಘ್ರದಲ್ಲೇ ಪತನ ಆಗುತ್ತಾ ಅನ್ನೋ ಅನುಮಾನ ಹುಟ್ಟಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಅವರು ನಿನ್ನೆ ಸ್ಫೋಟಕ ಭವಿಷ್ಯ ನುಡಿದಿದ್ದು, ಯಾವುದೇ ಸರ್ಕಾರವು 15 ದಿನಗಳಲ್ಲಿ ಬೇಕಾದರೂ ಪತನವಾಗಬಹುದು ಎಂಬುದಾಗಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಮತಾ ಬ್ಯಾನರ್ಜಿ ಮಾತನಾಡಿದರು. “ಯಾರು (ಬಿಜೆಪಿ) 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂಬುದಾಗಿ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ” ಎಂದು ಹೇಳಿದರು.
ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚಿಸಲಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕೊನೆಗೆ ಒಂದು ದಿನ ಇಂಡಿಯಾ ಒಕ್ಕೂಟವು ಸರ್ಕಾರ ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು ಅಧಿಕಾರದಲ್ಲಿ ಇರಲಿ. ಆದರೆ, ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು” ಎಂಬುದಾಗಿ ಎನ್‌ಡಿಎ ಸರ್ಕಾರದ ಪತನದ ಕುರಿತು ಮಮತಾ ಬ್ಯಾನರ್ಜಿ ಮಹತ್ವದ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದರು. “ಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸಲ್ಲ” ಎಂದಿದ್ದಾರೆ.

ಇದನ್ನೂ ಓದಿ:Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Continue Reading
Advertisement
Ramoji Rao Funeral
ಸಿನಿಮಾ4 mins ago

Ramoji Rao Funeral: ರಾಮೋಜಿ ರಾವ್ ಪಾರ್ಥಿವ ಶರೀರ ಹೊತ್ತ ಚಂದ್ರಬಾಬು ನಾಯ್ಡು; ವಿಡಿಯೊ ನೋಡಿ

Karnataka Rain
ಮಳೆ7 mins ago

Karnataka Rain : ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹೊರ ಬಂತು ಸವಾರನ ಕರುಳು! ಮತ್ತಿಬ್ಬರು ಗಂಭೀರ

Modi 3.0 Cabinet
ದೇಶ16 mins ago

Modi 3.0 Cabinet: ಈ ನಾಲ್ಕು ಮಹತ್ವದ ಖಾತೆಗಳು ಬಿಜೆಪಿ ಕೈಯಲ್ಲೇ ಉಳಿಯಲಿವೆ!

Kangana Ranaut Slapped incident Hrithik Roshan Backs Post
ಬಾಲಿವುಡ್34 mins ago

Kangana Ranaut: ಕಂಗನಾ ರಣಾವತ್‌ಗೆ ಕಪಾಳಮೋಕ್ಷ; ಹೃತಿಕ್ ರೋಷನ್ ರಿಯಾಕ್ಷನ್‌ ಏನು?

Modi 3.0 Cabinet
Lok Sabha Election 20241 hour ago

Modi 3.0 Cabinet: ಎನ್‌ಡಿಎ ಸರ್ಕಾರದಲ್ಲಿ ರಾಜ್ಯದಿಂದ ಐವರಿಗೆ ಸ್ಥಾನ; ವಿ.ಸೋಮಣ್ಣ ಅಚ್ಚರಿಯ ಆಯ್ಕೆ?

Murder Case
ಬೆಂಗಳೂರು ಗ್ರಾಮಾಂತರ1 hour ago

Murder Case : ಬಾಡಿಗೆ ಹಣ ಪಡೆಯಲು ಕಿರಿಕ್‌; ಬೆಡ್‌ ರೂಮ್‌ನಲ್ಲೇ ಪತ್ನಿ ಕೊಂದಿದ್ದ ಹಂತಕ ಅರೆಸ್ಟ್‌

IND vs PAK
ಕ್ರೀಡೆ1 hour ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಸಚಿನ್ ಹಾಜರ್; ಮಾಜಿ ಅಧ್ಯಕ್ಷ ಒಬಾಮಗೂ ಇರದ ಭದ್ರತೆಯಲ್ಲಿ ನಡೆಯಲಿದೆ ಪಂದ್ಯ

Modi 3.0 Cabinet
ದೇಶ1 hour ago

Modi 3.0 Cabinet: ಬಿಜೆಪಿಯ 5, NDAಯ 10 ಸಂಸದರು INDIA ಜೊತೆ ಸಂಪರ್ಕ? ಹೊಸ ಬಾಂಬ್‌ ಸ್ಫೋಟಿಸಿದ TMC

Road Accident
ಬೆಂಗಳೂರು2 hours ago

Road Accident : ವಾಕಿಂಗ್‌ ಹೊರಟಿದ್ದ ವೃದ್ಧೆಗೆ ಬೈಕ್‌ ಡಿಕ್ಕಿ; ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌