Reliance Brands : ರಿಲಯನ್ಸ್‌ ತೆಕ್ಕೆಗೆ ಆಲಿಯಾ ಭಟ್‌ ಕಿಡ್ಸ್‌ವೇರ್‌ ಬ್ರಾಂಡ್‌ - Vistara News

ವಾಣಿಜ್ಯ

Reliance Brands : ರಿಲಯನ್ಸ್‌ ತೆಕ್ಕೆಗೆ ಆಲಿಯಾ ಭಟ್‌ ಕಿಡ್ಸ್‌ವೇರ್‌ ಬ್ರಾಂಡ್‌

Reliance Brands ರಿಲಯನ್ಸ್‌ ಬ್ರಾಂಡ್ಸ್‌ ಲಿಮಿಟೆಡ್‌, ಬಾಲಿವುಡ್‌ ನಟಿ ಆಲಿಯಾ ಭಟ್‌ ಮಾಲಿಕತ್ವದ ಕಿಡ್ಸ್‌ವೇರ್‌ ಬ್ರಾಂಡ್‌ ಅನ್ನು ಖರೀದಿಸಲು ನಿರ್ಧರಿಸಿದೆ. ವಿವರ ಇಲ್ಲಿದೆ.

VISTARANEWS.COM


on

Alia Bhat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬಾಲಿವುಡ್‌ ನಟಿ ಅಲಿಯಾ ಭಟ್‌ ಮಾಲಿಕತ್ವದ ಕಿಡ್ಸ್‌ವೇರ್‌ ಬ್ರಾಂಡ್‌ ಏಡ್‌-ಎ-ಮಾಮಾ ಅನ್ನು ರಿಲಯನ್ಸ್‌ ಬ್ರಾಂಡ್ಸ್‌ ಲಿಮಿಟೆಡ್‌ (Ed-a-Mamma) 300-350 ರೂ.ಗೆ ಖರೀದಿಸಿದಲು ಉದ್ದೇಶಿಸಿದೆ. ರಿಲಯನ್ಸ್‌ ಬ್ರಾಂಡ್ಸ್‌ ಲಿಮಿಟೆಡ್‌ (Reliance Brands Ltd) ರಿಲಯನ್ಸ್‌ ಇಂಡಸ್ಟ್ರೀಸ್‌ನ ರಿಟೇಲ್‌ ಭಾಗವಾಗಿರುವ ರಿಟೇಲ್‌ ವೆಂಚರ್ಸ್‌ನ ಭಾಗವಾಗಿದೆ. ರಿಲಯನ್ಸ್‌ ಬ್ರಾಂಡ್ಸ್‌ ಮತ್ತು ಏಡ್ -ಎ-ಮಾಮಾ ಜತೆಗೆ ಮಾತುಕತೆ ಅಂತಿಮ ಘಟ್ಟದಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ಒಪ್ಪಂದ ಅಂತಿಮವಾಗಲಿದೆ.

ಏಡ್ -ಎ- ಮಾಮಾ: ಏಡ್‌ -ಎ-ಮಾಮಾ ಬ್ರಾಂಡ್‌ ಅನ್ನು ಎಟರ್ನಲಿಯಾ ಕ್ರಿಯೇಟಿವ್‌ & ಮರ್ಚಂಡೈಸಿಂಗ್‌ ಹೊಂದಿದೆ. 2020ರಲ್ಲಿ ಏಡ್‌ -ಎ-ಮಾಮಾ ಆರಂಭವಾಯಿತು. ಅಫರ್ಡಬಲ್‌ ದರದಲ್ಲಿ ಮಕ್ಕಳ ಅವಶ್ಯಕತೆಯ ನಾನಾ ಉಡುಪುಗಳನ್ನು ಮಾರಾಟ ಮಾಡುತ್ತದೆ. ಮುಖ್ಯವಾಗಿ ಆನ್‌ಲೈನ್‌ ಬ್ರಾಂಡ್‌ ಆಗಿದ್ದರೂ, ದೊಡ್ಡ ರಿಟೇಲ್‌ ಸರಣಿಗಳ ಮೂಲಕ ಮಾರಾಟವಾಗುತ್ತದೆ.

ರಿಲಯನ್ಸ್‌ನಿಂದ ಖರೀದಿ ಸಂಭವ: ಎಕನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ರಿಲಯನ್ಸ್‌ ಬ್ರಾಂಡ್ಸ್‌ ಲಿಮಿಟೆಡ್‌ ಮತ್ತು ಏಡ್ -ಎ- ಮಾಮಾ ನಡುವೆ ಮುಂದಿನ 7-10 ದಿನಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಇದರಿಂದ ರಿಲಯನ್ಸ್‌ಗೆ ಕಿಡ್ಸ್‌ವೇರ್‌ ವಲಯದಲ್ಲಿ ಮಾರುಕಟ್ಟೆ ವಿಸ್ತರಿಸಲು ಹಾದಿ ಸುಗಮವಾಗಿದೆ. ವರದಿಗಳ ಪ್ರಕಾರ ಡೀಲ್‌ 300-350 ಕೋಟಿ ರೂ.ಗೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ದಿಗ್ಗಜರ ನೇತೃತ್ವದಲ್ಲಿ ಗುರು ಪೂರ್ಣಿಮೆ

ರಿಲಯನ್ಸ್‌ ಬ್ರಾಂಡ್ಸ್‌ 2007ರಲ್ಲಿ ಸ್ಥಾಪನೆಯಾಗಿದೆ. ರಿಲಯನ್ಸ್‌ ಬ್ರಾಂಡ್ಸ್‌ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜತೆಗೆ ಸಹಭಾಗಿತ್ವವನ್ನು ಹೊಂದಿದೆ. ಭಾರತದಲ್ಲಿ 2,000 ಸ್ಟೋರ್‌ಗಳನ್ನು ಒಳಗೊಂಡಿದೆ. ಅರ್ಮಾನಿ ಎಕ್ಸ್‌ಚೇಂಜ್‌, ಬಾಲಿ, ಜಿಎಎಸ್‌, ಜಿಮ್ಮಿ ಚೂ, ಕಾಟೆ ಸ್ಪೇಡ್‌, ಮಾರ್ಕ್ಸ್‌ &ಸ್ಪೆನ್ಸರ್‌ ಮುಂತಾದ ಬ್ರಾಂಡ್‌ಗಳ ಜತೆಗೆ ಸಹಭಾಗಿತ್ವವನ್ನು ಹೊಂದಿದೆ. ನಟಿ ಆಲಿಯಾ ಭಟ್‌ ಅವರು ತಮ್ಮ ಮುಂಬರುವ ಸಿನಿಮಾ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿಯ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಬಾಲಿವುಡ್‌ಗೆ ಕೂಡ ಪದಾರ್ಪಣೆ ಮಾಡಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Gold Rate Today:ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,610 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,211 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,880 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,100 ಮತ್ತು ₹6,61,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,211 ಆಗಿದ್ದು, ಎಂಟು ಗ್ರಾಂ ಬೆಲೆ ₹57,688ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,110 ಮತ್ತು ₹7,21,100 ವೆಚ್ಚವಾಗಲಿದೆ.

VISTARANEWS.COM


on

gold rate today
Koo

ಬೆಂಗಳೂರು: ಚಿನ್ನ ಕೊಳ್ಳುವವರಿಗೆ ಇಂದು ತುಸು ಸಮಾಧಾನದ ಸುದ್ದಿ ಹೊರ ಬಿದ್ದಿದೆ. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today)ಯಲ್ಲಿ ತುಸು ಇಳಿಕೆ ಕಂಡಿದೆ. ಇಂದು (ಸೋಮವಾರ) 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹ 40 ಮತ್ತು ₹ 44 ಇಳಿಕೆಯಾಗಿದೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,610 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,211 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,880 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,100 ಮತ್ತು ₹6,61,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,211 ಆಗಿದ್ದು, ಎಂಟು ಗ್ರಾಂ ಬೆಲೆ ₹57,688ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,110 ಮತ್ತು ₹7,21,100 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (10 ಗ್ರಾಂ)24 ಕ್ಯಾರಟ್ (10 ಗ್ರಾಂ)
ದಿಲ್ಲಿ₹ 66,250₹ 72,600
ಮುಂಬೈ₹ 66,100₹ 72,110
ಬೆಂಗಳೂರು₹ 66,100₹ 72,110
ಚೆನ್ನೈ₹ 66,660₹ 72,270

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ: ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Continue Reading

ಪ್ರಮುಖ ಸುದ್ದಿ

Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್‌- ನಿಫ್ಟಿ ದಾಖಲೆ ಏರಿಕೆ

Stock Market News: ಎಕ್ಸಿಟ್‌ ಪೋಲ್‌ಗಳು ಷೇರು ಮಾರುಕಟ್ಟೆಯಲ್ಲಿಸಂಚಲನ ಉಂಟುಮಾಡಿವೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) 2,622 ಪಾಯಿಂಟ್‌ಗಳಷ್ಟು ಏರಿದೆ. ಶೇಕಡಾ 3.5ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ 76,583 ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು 23,337 ಮಟ್ಟಕ್ಕೆ ತಲುಪಿದೆ.

VISTARANEWS.COM


on

stock market news narendra modi
Koo

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market news) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು.

ಬಿಎಸ್‌ಇ ಸೆನ್ಸೆಕ್ಸ್ (BSE Sensex) 2,622 ಪಾಯಿಂಟ್‌ಗಳಷ್ಟು ಏರಿದೆ. ಶೇಕಡಾ 3.5ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ 76,583 ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು 23,337 ಮಟ್ಟಕ್ಕೆ ತಲುಪಿದೆ.

ಪವರ್ ಗ್ರಿಡ್, ಎಲ್&ಟಿ, ಎನ್‌ಟಿಪಿಸಿ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಂ&ಎಂ, ಐಸಿಐಸಿಐ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೆನ್ಸೆಕ್ಸ್‌ನಲ್ಲಿ ಮುನ್ನುಗ್ಗಿದವು. ಈ ಷೇರುಗಳು ಶೇ.3ರಿಂದ ಶೇ.7ರ ಏರಿಕೆ ಕಂಡವು. ವಿದೇಶಿ ಮಾರುಕಟ್ಟೆಗಳಲ್ಲಿ ನಿಫ್ಟಿ ಸ್ಮಾಲ್‌ಕ್ಯಾಪ್ ಶೇಕಡಾ 2.73ರಷ್ಟು ಏರಿದರೆ ಮಿಡ್‌ಕ್ಯಾಪ್ ಶೇಕಡಾ 2.5 ರಷ್ಟು ಜಿಗಿದಿದೆ. ವಲಯವಾರು ನಿಫ್ಟಿಯಲ್ಲಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ (ಶೇ. 5), ನಿಫ್ಟಿ ರಿಯಾಲ್ಟಿ (ಶೇ. 4), ಮತ್ತು ನಿಫ್ಟಿ ಬ್ಯಾಂಕ್ (ಶೇ. 3) ಗಳು ಏರಿಕೆ ರ್ಯಾಲಿಯನ್ನು ಮುನ್ನಡೆಸಿದವು.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು 9 ಪ್ರತಿಶತ ಲಾಭ ಗಳಿಸಿದವು.

ತಜ್ಞರ ಪ್ರಕಾರ, ಮೇ ತಿಂಗಳಲ್ಲಿ ಕಂಡುಬಂದಿರುವ ಮಾರುಕಟ್ಟೆಯ ಚಂಚಲತೆಯು, ಜೂನ್ 4ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಕಡಿಮೆಯಾಗಬಹುದು. “ಚುನಾವಣಾ ಫಲಿತಾಂಶದವರೆಗೆ ನಮ್ಮ ಮಾರುಕಟ್ಟೆಗಳು ದುರ್ಬಲವಾಗಿರುತ್ತವೆ ಮತ್ತು ಈ ಸಮಯದಲ್ಲಿ ಚಂಚಲವಾಗಿರುವ ಸಾಧ್ಯತೆಯಿದೆ” ಎಂದು ಏಂಜೆಲ್ ಒನ್‌ನ ಹೆಡ್ ರಿಸರ್ಚ್ ಸಮೀತ್ ಹೇಳಿದ್ದಾರೆ. ಚುನಾವಣೆಯ ನಂತರ ಮಾರುಕಟ್ಟೆಯ ಗಮನವು ಹೊಸ ಸರ್ಕಾರ ಮತ್ತು ಯೂನಿಯನ್ ಬಜೆಟ್‌ನ ಮೊದಲ 100 ದಿನಗಳತ್ತ ಬದಲಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ನಿಫ್ಟಿ ಕೂಡ 23,800 ತಲುಪಬಹುದು ಎಂದು ಅಂದಾಜಿಸಲಾಗಿದೆ.

ಮಾರುಕಟ್ಟೆಯ ಇನ್ನಷ್ಟು ರ್ಯಾಲಿಯನ್ನು ಲಾರ್ಜ್‌ಕ್ಯಾಪ್‌ಗಳು ಮುನ್ನಡೆಸುವ ಸಾಧ್ಯತೆಯಿದೆ. RIL, ICICI ಬ್ಯಾಂಕ್, HDFC ಬ್ಯಾಂಕ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, L&T, M&M, Tata Motors, Bajaj Auto, Eicher Motors ನಂತಹ ಸ್ಟಾಕ್‌ಗಳು ಮೂಲಭೂತವಾಗಿ ಪ್ರಬಲ ಲಾರ್ಜ್‌ಕ್ಯಾಪ್‌ಗಳು. TCS, Infy, HCL Tech, Coforge, Persistent ಮತ್ತು L&T ಟೆಕ್‌ನಂತಹ IT ಸ್ಟಾಕ್‌ಗಳು ವ್ಯತಿರಿಕ್ತ ಖರೀದಿ ಅವಕಾಶಗಳನ್ನು ನೀಡುತ್ತವೆ. ಶುಕ್ರವಾರ ಬಂದ ಜಿಡಿಪಿ ಸಂಖ್ಯೆ 8.2% ಬೆಳವಣಿಗೆಯೊಂದಿಗೆ ನಿರೀಕ್ಷೆಗಿಂತ ಉತ್ತಮವಾಗಿವೆ. ಇದು ಮಾರುಕಟ್ಟೆಗೆ ಮೂಲಭೂತ ಬೆಂಬಲವನ್ನು ನೀಡಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

Continue Reading

ಮನಿ-ಗೈಡ್

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

Money Guide: ಹೋಮ್‌ ಲೋನ್‌ ಸಂಪೂರ್ಣ ಪಾವತಿಸಿದ ಮೇಲೂ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸಾಲ ಪಾವತಿಯಾದ ಬಳಿಕವೂ ನೀವು ಒಂದಷ್ಟು ಮುಖ್ಯ ಕೆಲಸ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದಿರಲು ಕೆಲವು ಅಂಶಗಳತ್ತ ನೀವು ಗಮನ ಹರಿಸಲೇ ಬೇಕು. ಅವು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ ಬಹು ಪ್ರಯಾಸದ ಸಂಗತಿ. ಅದರಲ್ಲಿಯೂ ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟಬೇಕು ಎಂದರೆ ಸಾಮಾನ್ಯ ವರ್ಗದ ಜನರು ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಸರಿ ಅಂತೂ ಗೃಹಸಾಲ ಮಂಜೂರಾಗಿ, ಗೃಹ ಪ್ರವೇಶ ನಡೆದು, ಸಾಲವನ್ನೂ ಕಟ್ಟಿಯಾಯ್ತು ಎಂದುಕೊಳ್ಳೋಣ. ʼಅಬ್ಬ ದೊಡ್ಡ ಹೊರೆಯೊಂದು ತಲೆಯ ಮೇಲಿಂದ ಇಳಿಯಿತುʼ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಇಲ್ಲಿ ಗಮನಿಸಿ. ಸಾಲ ಕಟ್ಟಿದ ಮಾತ್ರಕ್ಕೆ ನಿಮ್ಮ ಎಲ್ಲ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಸಾಲ ತೀರಿಸಿದ ಮೇಲೂ ನೀವು ಮಾಡಿ ಮುಗಿಸಬಹುದಾದು ಬಹು ಮುಖ್ಯ ಕೆಲಸಗಳಿವೆ. ಅವು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಇಂದಿನ ಮನಿಗೈಡ್‌ (Money Guide) ಓದಿ.

ಎನ್‌ಒಸಿ ಪಡೆದುಕೊಳ್ಳಿ

ಗೃಹಸಾಲವನ್ನು ಸಂಪೂರ್ಣವಾಗಿ ಪಾವತಿಸದ ಬಳಿಕ ನೀವು ಮಾಡಬೇಕಾದ ಬಹು ಮುಖ್ಯ ಕೆಲಸ ಎಂದರೆ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಅಥವಾ ನೋ ಡ್ಯೂ ಸರ್ಟಿಫಿಕೆಟ್‌ (ಎನ್‌ಡಿಸಿ) ಪಡೆದುಕೊಳ್ಳುವುದು. ನೀವು ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಪ್ರಮಾಣಿಕರಿಸುವ ಸರ್ಟಿಫಿಕೆಟ್‌ ಇದು. ಗಮನಿಸಿ, ಈ ಪತ್ರವನ್ನು ಪಡೆದುಕೊಳ್ಳುವ ಮುನ್ನ ಇದರಲ್ಲಿ ನಮೂದಿಸಿರುವ ಎಲ್ಲ ಅಂಶಗಳು ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಅಕ್ಷರ ದೋಷ ಅಥವಾ ಯಾವುದಾದರೂ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಜತೆಗೆ ಈ ಪ್ರಮಾಣ ಪತ್ರದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿಯ ವಿವರ, ನಿಮ್ಮ ವಿಳಾಸ, ಸಾಲದ ಕಂತು ಆರಂಭಗೊಂಡ ಮತ್ತು ಕೊನೆಗೊಂಡ ದಿನಾಂಕ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಇನ್ನು ಸಂಪೂರ್ಣವಾಗಿ ನಿಮ್ಮ ಸೊತ್ತು ಎನ್ನುವುದು ಕೂಡ ಇದರಲ್ಲಿ ನಮೂದಾಗಿದೆ ಎನ್ನುವುದನ್ನು ಚೆಕ್‌ ಮಾಡಿ.

ಮೂಲ ದಾಖಲೆ ಪಡೆದುಕೊಳ್ಳಿ

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ಗಳು ನಿಮ್ಮ ಮನೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತವೆ. ಸಾಲ ಪಾವತಿಯಾದ ಬಳಿಕ ಬ್ಯಾಂಕ್‌ಗಳು ಈ ಮೂಲ ದಾಖಲೆಗಳನ್ನು ನಿಮಗೆ ಹಿಂದಿರುಗಿಸಬೇಕು ಎನ್ನುವ ನಿಯಮ ಇದೆ. ಒಂದು ಬೇಳೆ ಬ್ಯಾಂಕ್‌ ಇದನ್ನು ನೀಡಲು ಮರೆತರೆ ನೀವು ನೆನಪಿಸಿ ತಪ್ಪದೆ ಪಡೆದುಕೊಳ್ಳಿ. ದಾಖಲೆಗಳೆಲ್ಲ ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ದಾಖಲೆಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ

ಗೃಹಸಾಲ ನೀಡುವಾಗ ನಿಮ್ಮ ಆಸ್ತಿಯ ಹಕ್ಕನ್ನು ಬ್ಯಾಂಕ್‌ ಹೊಂದಿರುತ್ತದೆ. ಒಂದುವೇಳೆ ಸಾಲ ಪಡೆದವರು ಮರು ಪಾವತಿಸದಿದ್ದರೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಬ್ಯಾಂಕ್‌ಗೆ ಇರುತ್ತದೆ. ಹೀಗಾಗಿ ಸಾಲ ಮರುಪಾವತಿ ಮಾಡಿದ ಬಳಿಕ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬೇಡಿ. ಜತೆಗೆ ಋಣಭಾರ ಪ್ರಮಾಣಪತ್ರ ಪಡೆದುಕೊಳ್ಳಿ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಬಳಿ ಕೇಳಿ ತಿಳಿದುಕೊಳ್ಳಿ.

ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿ

ಸಾಲ ಮಂಜೂರಾದ ಬಳಿಕ ನಿಮ್ಮ ಮರುಪಾವತಿಯನ್ನು ಗಮನಿಸಿ ಕ್ರೆಡಿಟ್‌ ಬ್ಯೂರೋ ಕ್ರೆಡಿಟ್‌ ಸ್ಕೋರ್‌ ನೀಡುತ್ತದೆ. ಹೀಗಾಗಿ ಸಾಲದ ಎಲ್ಲ ಕಂತನ್ನು ಪಾವತಿಸಿದ ಬಳಿಕ ಸಾಲಮುಕ್ತರಾಗಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಅಪ್‌ಡೇಟ್‌ ಮಾಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಬ್ಯಾಂಕ್‌ಗಳು ಬ್ಯುರೋಕ್ಕೆ ಮಾಹಿತಿ ನೀಡಲು ಮರೆಯುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತನ್ನಿ.

ಒಟ್ಟಿನಲ್ಲಿ ಗೃಹಸಾಲದ ಎಲ್ಲ ಕಂತುಗಳನನು ಪಾವತಿಸಿದ ಬಳಿಕ ಭವಿಷ್ಯದಲ್ಲಿ ಯಾವುದೇ ತೊಂದರೆ, ಕಾನೂನು ಸಮಸ್ಯೆ ಎದುರಾಗದಿರಲು ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

Continue Reading

ವಾಣಿಜ್ಯ

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ವಿಶ್ವ
ಇತರ ಪ್ರಸಿದ್ಧ ಕಂಪನಿಗಳು ಭಾರತದಲ್ಲಿ ಎಂಜಿನಿಯರ್ ಗಳಿಗೆ ಎಷ್ಟು ಸಂಬಳ ಪಾವತಿ (Highest Salary Paying Companies) ಮಾಡುತ್ತಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Highest Paying Companies
Koo

ಗೂಗಲ್ (Google), ಅಮೆಜಾನ್ (amazon), ಮೈಕ್ರೋ ಸಾಫ್ಟ್ (microsoft) ಸೇರಿದಂತೆ ವಿಶ್ವ ಪ್ರಸಿದ್ಧ ಕಂಪನಿಗಳ ಸ್ಯಾಲರಿ ಪ್ಯಾಕೇಜ್ (Highest Salary Paying Companies) ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಕುರಿತು ಇದೀಗ ಎಕ್ಸ್ ನಲ್ಲಿ (x) ಮಾಹಿತಿ ವೈರಲ್ (viral) ಆಗಿದ್ದು, ವಿಶ್ವ ಪ್ರಸಿದ್ಧ ಕಂಪನಿಗಳ ಎಂಜಿನಿಯರ್ ಗಳು ವಾರ್ಷಿಕ ಸರಾಸರಿ 26 ಸಾವಿರ ರೂ.ನಿಂದ 66 ಲಕ್ಷ ರೂ. ವರೆಗೆ ಸಂಬಳ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ಬಳಿಕ ಗೊಜೆಕ್, ಮೈಕ್ರೋಸಾಫ್ಟ್, ಝೀಟಾ, ಅಡೋಬ್ ಮತ್ತು ಸೇಲ್ಸ್‌ಫೋರ್ಸ್‌ನಲ್ಲಿ ಎಂಜಿನಿಯರ್‌ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಇದರಲ್ಲಿ ಕ್ರಮವಾಗಿ 59.7 ಲಕ್ಷ, 58.5 ಲಕ್ಷ, 58 ಲಕ್ಷ, 56.3 ಲಕ್ಷ, ಮತ್ತು 56.1 ಲಕ್ಷ ಸಂಬಳ ಪಡೆಯುವ ಎಂಜಿನಿಯರ್ ಗಳು ಇದ್ದಾರೆ.

ಬಳಿಕದ ಸ್ಥಾನದಲ್ಲಿ ವಿಎಂ ವೇರ್, ಶೇರ್ ಚಾಟ್, ಗೋಲ್ಡ್ ಮನ್, ಪೇ ಪಾಲ್, ಮಿಂತ್ರಾ, ವಾಲ್ ಮಾರ್ಟ್, ಸರ್ವಿಸ್ ನೌ, ಫ್ಲಿಪ್ ಕಾರ್ಟ್, ರಝೋರ್ ಪೇ, ಒರಾಕಲ್, ಅಮೆಜಾನ್ ಕೂಡ ಸೇರಿದೆ. ಇದರಲ್ಲಿ ಬಹುತೇಕ ಎಂಜಿನಿಯರ್‌ಗಳ ಸಂಬಳ 51.4 ಲಕ್ಷ ರೂ. ವರೆಗೆ ಇದೆ. ಟೆಕೀವ್ನ್, ಸಿಸ್ಕೊ, ಪೇ ಟಿಎಂ, ಕ್ವ್ಯಾಲ್ ಕಾಮ್, ಸ್ಯಾಪ್, ಓಯೋ ಕಂಪೆನಿಗಳ ಎಂಜಿನಯರ್ ಗಳಿಗೆ 5೦ ಲಕ್ಷ ರೂ.ವರೆಗೆ ವಾರ್ಷಿಕ ಪಾವತಿ ಮಾಡಲಾಗುತ್ತದೆ.


ಉಳಿದಂತೆ ಐಬಿಎಂ, ಸ್ಯಾಮ್ ಸಂಗ್, ಅಕ್ವೆವೆಂಚರ್, ಕಾಗ್ನಿಜೆಂಟ್, ಇನ್ಫೋಸಿಸ್, ಕ್ಯಾಂಪ್ಗೆಮಿನಿ, ಟಿಸಿಎಸ್ ಕಂಪೆನಿಗಳಲ್ಲಿ ಎಂಜಿನಿಯರ್ ಗಳಿಗೆ ಗರಿಷ್ಠ ವಾರ್ಷಿಕ ಪಾವತಿ 30 ಲಕ್ಷ ರೂ.ವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಹೆಚ್ಚು ಮತ್ತು ಕಡಿಮೆ ಪಾವತಿಸುವ ಕಂಪನಿಗಳ ಮಾಹಿತಿ ಸಂಗ್ರಹಕ್ಕಾಗಿ ಒಟ್ಟು 25,000 ಮಂದಿಯ ಸಂಬಳವನ್ನು ವಿಶ್ಲೇಷಿಸಲಾಗಿದೆ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸಂಬಳ ಪಾವತಿಯ ಬಗ್ಗೆ ಪಾರದರ್ಶಕತೆ ಬಹಳ ಮುಖ್ಯ ಎಂದಿರುವ ಅವರು ಇದರಲ್ಲಿ ಮೂಲ ವೇತನದಲ್ಲಿ ಕೊಂಚ ವ್ಯತ್ಯಾಸವಿರಬಹುದು ಎಂದು ತಿಳಿಸಿದ್ದಾರೆ.

Continue Reading
Advertisement
Udupi-Chikmagalur Lok Sabha constituency
ದೇಶ7 mins ago

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Vasishta Simha Lovely Kannada Film Trailer Event
ಸ್ಯಾಂಡಲ್ ವುಡ್13 mins ago

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Heat wave
ದೇಶ13 mins ago

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Food Poisoning
ಮೈಸೂರು14 mins ago

Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Gold Rate Today
ಚಿನ್ನದ ದರ24 mins ago

Gold Rate Today: ಚಿನ್ನದ ಬೆಲೆ ಮತ್ತೂ ಇಳಿಕೆ; ಇಂದಿನ ಧಾರಣೆಯನ್ನು ಇಲ್ಲಿ ಗಮನಿಸಿ

karnataka Rain
ಮಳೆ34 mins ago

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Team India
ಪ್ರಮುಖ ಸುದ್ದಿ44 mins ago

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Priyanka Chopra The Bluff team Malti enjoys
ಬಾಲಿವುಡ್51 mins ago

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

George Fernandes ರಾಜಮಾರ್ಗ ಅಂಕಣ
ಅಂಕಣ52 mins ago

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

gold rate today
ಕರ್ನಾಟಕ60 mins ago

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌