Friendship Day 2023: ಗೆಳೆತನವೂ ರಾಶಿಗುಣವೂ! ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು? - Vistara News

ಭವಿಷ್ಯ/ಧಾರ್ಮಿಕ

Friendship Day 2023: ಗೆಳೆತನವೂ ರಾಶಿಗುಣವೂ! ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು?

ಬನ್ನಿ, ಗೆಳೆತನದಲ್ಲಿ (Friendship Day 2023) ಕನ್ಯಾ ರಾಶಿಯಿಂದ ಮೀನ ರಾಶಿಯವರೆಗಿನ ಮಂದಿಯ ಪೈಕಿ ಯಾರದ್ದು ಗೆಳೆತನದಲ್ಲಿ ಎತ್ತಿದ ಕೈ (Zodiac and Friends) ನೋಡೋಣ.

VISTARANEWS.COM


on

friendship
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜ್ಯೋತಿಷ್ಯಶಾಸ್ತ್ರದ (astrology) ಪ್ರಕಾರ, ನಮ್ಮ ಜನ್ಮರಾಶಿಗೂ (Zodiacs) ನಮ್ಮ ಗುಣಕ್ಕೂ (character) ಅವಿನಾಭಾವ ಸಂಬಂಧವಿದೆ. ಹಾಗಿದ್ದಾಗ, ನಮ್ಮಲ್ಲಿನ ಗೆಳೆತನದ (friendship) ಗುಣಗಳಿಗೂ ನಮ್ಮ ರಾಶಿಗೂ ಸಂಬಂಧ (Zodiac and Friends) ಇಲ್ಲದೆ ಇದ್ದೀತೇ? ಬನ್ನಿ, ಸ್ನೇಹಿತರ ದಿನದ ಹಿನ್ನೆಲೆಯಲ್ಲಿ (Friendship Day 2023) ರಾಶಿ ಕನ್ಯಾದಿಂದ ಮೀನ ರಾಶಿಯವರೆಗಿನ ಮಂದಿಯ ಪೈಕಿ ಯಾರದ್ದು ಗೆಳೆತನದಲ್ಲಿ ಎತ್ತಿದ ಕೈ ನೋಡೋಣ.

ಕನ್ಯಾ: ಕನ್ಯಾ ರಾಶಿಯ ಮಂದಿ ಅದ್ಭುತ ಗೆಳೆಯರು. ಇವರು ಏನೇ ಆಗಲಿ ಗೆಳೆಯರ ಬೆನ್ನಿಗೆ ಸದಾ ಕಾಲ ನಾನಿದ್ದೇನೆ ಎಂದು ನಿಲ್ಲುವ ಪಂಗಡದವರು. ಇವರು ನಿಮ್ಮ ಜೊತೆಗಿದ್ದರೆ, ಯಾವುದಕ್ಕೂ ಭಯಪಡಬೇಕಿಲ್ಲ. ಎಲ್ಲವನ್ನು ತಾಳ್ಮೆಯಿಂದಲೇ ಪರಿಹರಿಸುವ ಚಾಕಚಕ್ಯತೆಯನ್ನೂ ಹೊಂದಿದವರು. ನಿಮ್ಮಯಾವುದೇ ವಿಷಯವಿರಬಹುದು, ನಿಮ್ಮ ಪ್ರೇಮಿಗೆ ಉಡುಗೊರೆ ಆಯ್ಕೆ ಮಾಡಲು ಕ್ರಿಯಾತ್ಮಕ ಐಡಿಯಾ ಕೊಡುವುದರಿಂದ ಹಿಡಿದು, ನಿಮ್ಮ ಉದ್ಯೋಗದ ಇಂಟರ್‌ವ್ಯೂಗೆ ನಿಮಗೆ ಸಲಹೆ ನೀಡುವವವರೆಗೂ ಏನೂ ಬೇಕಾದರೂ ಸಹಾಯ ಮಾಡುವಂತವರಿವರು. ಬದುಕಿನ ಸಣ್ಣಪುಟ್ಟ ವಿಚಾರಗಳಲ್ಲಿ ಹೆಚ್ಚು ಆಸ್ಥೆಯಿಂದ ಗಮನಕೊಟ್ಟು ನಿಮ್ಮ ಬದುಕನ್ನು ಸುಂದರವಾಗಿಸುವವರಿವರು.

ತುಲಾ: ಬಹಳ ಶಾಂತ ಸ್ವಭಾವದ ದಯಾಳು ಮನಸ್ಸಿನ ಮಂದಿ ಇವರು. ಸ್ನೇಹಿತರ ವಿಚಾರದಲ್ಲೂ ಅಷ್ಟೇ, ಇವರು ಅತ್ಯುತ್ತಮ ಗೆಳೆತನ ನಿಭಾಯಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಗೆಳೆಯ/ಗೆಳತಿಗೆ ಆಧಾರವಾಗಿ ನಿಲ್ಲಬಲ್ಲ ಪ್ರೀತಿ, ಕಾಳಜಿ ಇವರು ತೋರಿಸುತ್ತಾರೆ.ಇವರು, ಗೆಳೆಯರ ಜೊತೆ ಜಗಳ, ವಾದವಿವಾದ ಇಷ್ಟಪಡುವುದಿಲ್ಲ.

ವೃಶ್ಚಿಕ: ಗೆಳೆಯರ ಅತ್ಯಂತ ರಹಸ್ಯ ವಿಚಾರಗಳನ್ನು ಯಾರಿಗೂ ಹೇಳದೆ, ತನ್ನಲ್ಲೇ ಇರಿಸಿಕೊಳ್ಳಬಲ್ಲ, ನಂಬಿಕಸ್ಥ ಗೆಳೆಯರಿವರು. ಮನಸ್ಸಿನ ಯಾವುದೇ ಬಗೆಯ ತಳಮಳಗಳನ್ನೂ ಈ ರಾಶಿಯ ಗೆಳೆಯರಲ್ಲಿ ಯಾವುದೇ ಭಯವಿಲ್ಲದೆ ಹೇಳಿಕೊಳ್ಳಬಹುದು. ನಿಮ್ಮ ಗುಟ್ಟುಗಳನ್ನು, ಎಂಥದ್ದೇ ಸಂದರ್ಭದಲ್ಲಾಗಲೀ ಇವರು ಬೇರೆಯವರ ಬಳಿ ಬಿಚ್ಚಡಲಾರರು. ಇವರು ತಮ್ಮ ಗೆಳೆಯರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಾಣುವರು.

ಧನು:‌ ಈ ರಾಶಿಯ ಗೆಳೆಯರು ನಿಮ್ಮ ಜೊತೆಗಿದ್ದರೆ, ಮೂಡು ಕೆಟ್ಟಿದೆ, ಬೇಜಾರು ಎಂಬ ತಳಮಳ ನಿಮ್ಮನ್ನು ಯಾವತ್ತಿಗೂ ಕಾಡದು. ಸದಾ ಧನಾತ್ಮಕ ಚಿಂತನೆಗಳಿಂದ ಸ್ಪೂರ್ತಿಯಾಗಿರುವ ಇವರು, ಗೆಳೆಯರಲ್ಲೂ ಯಾವಾಗಲೂ ಖುಷಿ, ಹರುಷ ಪಸರಿಸುವವರು. ಸದಾ ಚಟುವಟಿಕೆಯಲ್ಲಿರಲು ಪ್ರೇರಣೆ ನೀಡುವವರು.

friendship day

ಮಕರ:‌ ತುಂಬ ಪರಿಶ್ರಮಿಗಳಾಗಿರುವ ಈ ಮಂದಿ ತಮ್ಮ ಗೆಳೆಯರನ್ನೂ ಕಷ್ಟಪಟ್ಟು ಮೇಲೆ ಬರಲು ಪ್ರೇರಣೆ ನೀಡುತ್ತಾರೆ. ಇವರ ಜೊತೆಗಿದ್ದರೆ, ಯಾರೂ ಉದಾಸೀನತೆಯಿಂದ ಇರಲು ಸಾಧ್ಯವೇ ಇಲ್ಲ. ಗುರಿಗಳನ್ನು ಹಾಗೂ ಕನಸುಗಳನ್ನು ಇಟ್ಟುಕೊಂಡು ಸದಾ ಅದರೆಡೆಗೆ ಮುನ್ನಡೆಯುವ ಮಂದಿ ಇವರು. ಅಷ್ಟೇ ಅಲ್ಲ, ಗೆಳೆಯರನ್ನೂ ತಮ್ಮ ಕನಸುಗಳೆಡೆಗೆ ನಡೆಯಲು ದಾರಿದೀಪವಾಗುವ ಮಂದಿ ಈ ರಾಶಿಯವರು.

ಇದನ್ನೂ ಓದಿ: Dina Bhavishya : ಈ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ

ಕುಂಭ: ಈ ರಾಶಿಯ ಗೆಳೆಯರೊಂದಿಗೆ ನೀವು ಗುಟ್ಟು ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ಚಿಪ್ಪಿನೊಳಗೆ ಬಂಧಿಯಾಗಿರುವ ಮನಸ್ಥಿತಿಯುಳ್ಳ ಗೆಳೆಯರನ್ನು ಸುಲಭವಾಗಿ ಅದರಿಂದ ಹೊರತಂದು ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುವ ಗುಣ ಇವರಲ್ಲಿದೆ. ಇವರು ಹುಟ್ಟಾ ಬಂಡಾಯ ಮನೋಭಾವದವರು, ಹಾಗೆಯೇ‌ ಸಾಹಸಿಗಳು ಕೂಡಾ. ಹಾಗಾಗಿ ಈ ರಾಶಿಯ ಗೆಳೆಯರಿದ್ದರೆ, ಬದುಕಿನಲ್ಲಿ ಬಹಳ ಮಜವಾದ, ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವ ಕೆಲವು ಅದ್ಭುತ ದಿನಗಳನ್ನು ಕಳೆಯುತ್ತೀರಿ.

ಮೀನ: ಮೀನ ರಾಶಿಯ ಗೆಳೆಯರು ನಿಮ್ಮ ಗುರುವಿನ ಹಾಗೆ. ಗೆಳೆಯನೂ ಗುರುವೂ ಏಕಕಾಲಕ್ಕೆ ಆಗಬಲ್ಲ ಗುಣ ಇವರಲ್ಲಿದೆ. ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ದಾರಿ ತೋರಿಸುವ ಜೊತೆಗೆ ಕೈಹಿಡಿದು ಮುನ್ನಡೆಸಬಲ್ಲ ಯಾರಾದರೊಬ್ಬ ಇರಬೇಕು ಅಂತಾರಲ್ಲ, ಅಂಥ ಗುಣವನ್ನು ಹೊಂದಿದವರು ಮೀನರಾಶಿಯವರು. ನಿಮ್ಮ ಎಂತಹುದೇ ಇತಿಹಾಸವಿರಲಿ, ನೀವು ತಪ್ಪೇ ಮಾಡಿರಲಿ, ಅಥವಾ ಎಂಥದ್ದೇ ಕ್ಲಿಷ್ಟಕರ ಸ್ಥಿತಿಯಿಂದ ನೀವು ಬಂದಿರಲಿ, ನೀವು ಹೀಗೆ ಎಂಬ ಹಣೆಪಟ್ಟಿ ನಿಮಗೆ ಹಚ್ಚದೆ, ಯಾವಾಗಲೂ ಒಂದೇ ರೀತಿಯಲ್ಲಿ ಗೆಳೆಯರಾಗಿ ಇರಬಲ್ಲ ಸಾಮರ್ಥ್ಯ ಇರುವ ಮಂದಿ ಮೀನರಾಶಿಯವರು.

ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು?

ಇದನ್ನೂ ಓದಿ: Love Marriage: ಲವ್ ಮ್ಯಾರೇಜ್ ಆಗ್ತಿರಾ? ಹಾಗಿದ್ದರೆ ನಿಮ್ಮ ತಂದೆ-ತಾಯಿ ಒಪ್ಪಿಗೆ ಕಡ್ಡಾಯ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

Tumkur News: ಕೊರಟಗೆರೆ ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರೆವೇರಿತು. ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

VISTARANEWS.COM


on

Shree Bevinalamma Devi Jaladhi Mahotsav celebration in koratagere taluk
Koo

ಕೊರಟಗೆರೆ: ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ (Tumkur News) ನೆರೆವೇರಿತು.

ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಇದನ್ನೂ ಓದಿ:Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

ಸಾಹಿತಿ ಡಾ. ನರಸಿಂಹಮೂರ್ತಿ ಮಾತನಾಡಿ, ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಳಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ-ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ. ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು, ಜಲಧಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜ ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ ಗ್ರಾಮ ಶಕ್ತಿ ಬೇವಿನಳಮ್ಮ ತಾಯಿಯು ಗ್ರಾಮಕ್ಕೆ ಯಾವುದೇ ತೊಂದರೆ ತೊಡಕುಗಳು ಆಗದಂತೆ ಕಾಪಾಡಿಕೊಂಡು ಬರುತ್ತಿದ್ದಾಳೆ. ಬರಗಾಲವಿರುವುದರಿಂದ ಅದ್ದೂರಿಯಾಗಿ ಜಾತ್ರೆ ಮಾಡಲು ಆಗದ ಕಾರಣ ಜಲಧಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಈ ಸಂದರ್ಭದಲ್ಲಿ ಪೂಜಾರು ಲಕ್ಷ್ಮೀಶ್, ಗ್ರಾಮಸ್ಥರಾದ ತಿಮ್ಮರಾಜು, ಮಧುಸೂಧನ್, ಟೈಗರ್ ನಾಗರಾಜು, ಬಸವರಾಜು, ಕೇಬಲ್ ಸಿದ್ದಗಂಗಯ್ಯ, ಮಂಜುನಾಥ್, ಹನುಮಂತರಾಜು, ಚಂದ್ರಕುಮಾರ್, ಸಿದ್ದರಾಜು, ದೇವರಾಜು, ನಾಗರಾಜು, ಕೆಂಪರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನದಿಂದ ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

VISTARANEWS.COM


on

udupi Shree Bhandarakeri math annual award programme in bengaluru
Koo

ಬೆಂಗಳೂರು: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Bengaluru News) ತಿಳಿಸಿದರು.

ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ರಾಜ ಪ್ರಭುತ್ವ ಇದ್ದಾಗ ಮಹಾರಾಜರೇ ಪ್ರಜೆಗಳಿಗೆ ಸಂತೋಷವಾಗುವ ರೀತಿ ರಾಜ್ಯಭಾರ ಮಾಡುತ್ತ ಇದ್ದರು. ರಾಮ ಇದಕ್ಕೆ ಆದರ್ಶ ಪುರುಷ. ಆದರೆ ಇಂದು ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಸಮಾಜಕ್ಕೆ ಹಿತವಾಗುವಂತೆ ಬಾಳಬೇಕು. ಇತರರಿಗೆ ನೆಮ್ಮದಿ, ಸಂಭ್ರಮ ನೀಡುವ ಉದಾತ್ತ ಮನೋಭಾವ ರೂಢಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು.

ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

ಶ್ರೀ ಭಂಡಾರ ಕೇರಿ ಗುರುಗಳು ವೇದವ್ಯಾಸರ ಜಯಂತಿಯನ್ನು ರಾಷ್ಟ್ರಗುರು ವೇದವ್ಯಾಸ ಜಯಂತಿಯನ್ನಾಗಿ ಆಚರಿಸಬೇಕೆಂದು ಸಂಕಲ್ಪ ಮಾಡಿ, ಆ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ಪಂಡಿತರಿಗೆ, ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ನೀಡಿ ಗೌರವಾದರಗಳನ್ನು ದಯ ಪಾಲಿಸಿದ್ದಾರೆ. ಶ್ರೀ ಭಂಡಾರಕೇರಿ ಗುರುಗಳ ಆಶಯ ಈಡೇರಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವಾನ್ ವೇದವ್ಯಾಸರ ಜಯಂತಿಯನ್ನು ಎಲ್ಲರೂ ಸಂಭ್ರಮಿಸುವಂತಾಗಲಿ ಎಂದು ಪೇಜಾವರ ಶ್ರೀಗಳು ಆಶಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವದಲ್ಲಿ ಶ್ರೀ ಪೇಜಾವರ ಶ್ರೀಗಳು ವಿಶೇಷ ಸಾನಿಧ್ಯ ವಹಿಸಿ ಎಲ್ಲಾ ಕಾರ್ಯವನ್ನು ಸಾಂಗವಾಗಿ ನೆರವೇರಿಸಿ ಕೊಟ್ಟಿದ್ದು ವಿಶ್ವದ ಹೆಮ್ಮೆ ಎಂದು ತಿಳಿಸಿದರು.

70 ಜನರಿಗೆ ಸನ್ಮಾನ ಸಂಕಲ್ಪ

ಶ್ರೀ ವೇದವ್ಯಾಸ ಜಯಂತಿ ಸಂದರ್ಭದಲ್ಲಿ ಮೂವರು ಪಂಡಿತರಿಗೆ ಶ್ರೀಮಠ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇದರೊಂದಿಗೆ ನಮ್ಮ ಎಪ್ಪತ್ತನೇ ವರ್ಧಂತಿ ಸಮಾರಂಭವೂ ನಡೆಯುತ್ತಿದ್ದು, ಈ ವರ್ಷ ಪೂರ್ಣ 70 ಜನ ಪಂಡಿತರಿಗೆ ಸನ್ಮಾನ ಮತ್ತು ಗೌರವವನ್ನು ಮಾಡಿ ಅವರನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಂಡಾರ ಕೇರಿ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.

ಪ್ರಶಸ್ತಿ ಪ್ರದಾನ

ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ಅವರಿಗೆ (1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ ಅವರಿಗೆ (ರಾಜಹಂಸ ಪ್ರಶಸ್ತಿ), ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ ಅವರಿಗೆ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನ ಪತ್ರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಶ್ರೀ ಭಂಡಾರಕೇರಿ ಶ್ರೀಗಳು ‘ಶ್ರೀ ರಾಮ ಲಲನ ಲಾಲನ ಲಲಾಮ ತೀರ್ಥ’ ಎಂದು ಬಿರುದು ನೀಡಿ, ಸನ್ಮಾನಿಸಿದರು. ನೂರಾರು ಜನ ವಿದ್ವಾಂಸರು, ಪಂಡಿತರು ಇದಕ್ಕೆ ಸಾಕ್ಷಿಯಾದರು.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ. ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ.

VISTARANEWS.COM


on

5 foreign coins found in anjanadri temple hundi counting
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ (Anjaneya Temple) ಕಾಣಿಕೆ ಹುಂಡಿಯಲ್ಲಿ (Koppala News) ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಐದು ದೇಶಗಳ ನಾಣ್ಯಗಳು ಪತ್ತೆಯಾಗಿವೆ.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೆರೆಗೆ, ತಹಸೀಲ್ದಾರ್ ಯು. ನಾಗರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇಗುಲ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

ಪಾಕಿಸ್ತಾನದ ಐದು ರೂಪಾಯಿ ಮುಖ ಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕಾದ ಒಂದು ಸೆಂಟ್‌, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ.

30.21 ಲಕ್ಷ ರೂ. ಸಂಗ್ರಹ

ಐದು ವಿದೇಶಿ ನಾಣ್ಯ ಸೇರಿದಂತೆ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್‌ 27 ರಿಂದ ಇಲ್ಲಿವರೆಗೂ ಅಂದರೆ ಮೇ 21ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಹುಂಡಿ ಎಣಿಕೆಯ ವೇಳೆ ಶಿರಸ್ತೇದಾರ್‌ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್, ಮಹೇಶ್ ದಲಾಲ, ಹಾಲೇಶ ಗುಂಡಿ, ದೇಗುಲದ ವ್ಯವಸ್ಥಾಪಕ ವೆಂಕಟೇಶ ಹಾಗೂ ಸಿಬ್ಬಂದಿ ಇದ್ದರು.

Continue Reading

ಭವಿಷ್ಯ

Dina Bhavishya : ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ; ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ತ್ರಯೋದಶಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ವೃಶ್ಚಿಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಕನ್ಯಾ ರಾಶಿಯವರು ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಮೀನ ರಾಶಿಯವರು ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (21-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ತ್ರಯೋದಶಿ 17:39 ವಾರ:ಮಂಗಳವಾರ
ನಕ್ಷತ್ರ: ಚಿತ್ತಾ 05:45 ಯೋಗ: ವ್ಯತಿಪಾತ 12:34
ಕರಣ: ತೈತುಲ 17:39 ಅಮೃತ ಕಾಲ: ರಾತ್ರಿ 10:14 ರಿಂದ 11:58 ರವರಗೆ
ದಿನದ ವಿಶೇಷ: ವೇದವ್ಯಾಸ ಜಯಂತಿ, ಮುಳಬಾಗಿಲು ಆಂಜನೇಯ ರಥ

ಸೂರ್ಯೋದಯ : 05:53   ಸೂರ್ಯಾಸ್ತ : 06:40

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ಧಾರ್ಮಿಕ ಸ್ಥಳಗಳ ಭೇಟಿ ಮಾಡಿ, ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ವೃಷಭ:ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಅತಿಥಿಗಳ ಆಗಮನ ಹರ್ಷ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು, ಮುಂದಿನ ಆಗುವ ಕೆಲಸಗಳ ಬಗೆಗೆ ಕಾರ್ಯ ಪ್ರವೃತ್ತರಾಗಿ. ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ ಇದೆ. ಕೋಪದಿಂದ ಏನನ್ನು ಸಾಧಿಸಲಾಗದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿಲ್ಲದ ಕಾರ್ಯ ಯೋಜನೆ, ಅಪಾರ ಯಶಸ್ಸನ್ನು ಹಾಗೂ ಕೀರ್ತಿಯನ್ನು ತಂದು ಕೊಡುವುದು. ಪ್ರಯಾಣದ ಕುರಿತಾಗಿ ಯೋಜಿಸುವಿರಿ. ಹೂಡಿಕೆ ವ್ಯವಹಾರವು ಇಂದು ಹೆಚ್ಚು ಲಾಭ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ .ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರ ಸೂಕ್ತ ಸಲಹೆ ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ, ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ .ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತ ಸಂಬಂಧಿಕರಿಂದ ಸಹಾಯ ಬೇಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಹಣಕಾಸು ಪ್ರಗತಿ ಇರಲಿದೆ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗವು ಸಾಧಾರಣವಾಗಿರಲಿದೆ. ಕುಟುಂಬದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಿ. ಆಪ್ತರ ಸಲಹೆಗಳನ್ನು ತಿರಸ್ಕಾರ ಭಾವದಿಂದ ನೋಡಬೇಡಿ, ವ್ಯತಿರಿಕ್ತವಾದ ಪರಿಣಾಮದಿಂದಾಗಿ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಅನಗತ್ಯ ಖರ್ಚು ಇರಲಿದೆ. ಆರೋಗ್ಯ ಸಾಧಾರಣ.ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ಧನಸ್ಸು:ಅನಿರೀಕ್ಷಿತ ಪ್ರಯಾಣ ಇರಲಿದೆ. ಆತುರದ ಭರದಲ್ಲಿ ಅತಿರೇಕದ ಮಾತುಗಳು ಜಗಳ ತರಬಹುದು, ಸಮಾಧಾನದಿಂದ ವರ್ತಿಸಿ. ಅಮೂಲ್ಯ ವಸ್ತುಗಳು ಕೈತಪ್ಪುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮಕರ:ಆರೋಗ್ಯ ಉತ್ತಮವಾಗಿರಲಿದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಭರವಸೆ ಇದೆ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುಲು ಪ್ರಯತ್ನಿಸುವಿರಿ. ಸಮಾರಂಭದ ಆಮಂತ್ರಣ ಬರುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕುಂಭ: ಆಹಾರದ ಕ್ರಮದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಅಮೂಲ್ಯ ವಸ್ತುಗಳ ಬಗೆಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮೀನ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಭರವಸೆ ಮೂಡಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Mobile
ದೇಶ4 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ4 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ4 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ4 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು4 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ5 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ5 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ5 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ6 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ6 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು15 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು16 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌