Bangalore traffic | ದಟ್ಟಣೆ ಜಂಕ್ಷನ್‌ಗಳ ಪರಿಶೀಲನೆ, ಸುಗಮ ಓಡಾಟ ಕ್ರಮಕ್ಕೆ ಸೂಚನೆ - Vistara News

ಪ್ರಮುಖ ಸುದ್ದಿ

Bangalore traffic | ದಟ್ಟಣೆ ಜಂಕ್ಷನ್‌ಗಳ ಪರಿಶೀಲನೆ, ಸುಗಮ ಓಡಾಟ ಕ್ರಮಕ್ಕೆ ಸೂಚನೆ

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗಳಿಗೆ ಮುಕ್ತಿ ನೀಡಲು ಬಿಬಿಎಂಪಿ ನಡೆಸುತ್ತಿರುವ ವಿವಿಧ ಪ್ರಯತ್ನಗಳ ಅಂಗವಾಗಿ ಮಂಗಳವಾರ ನಾನಾ ಇಲಾಖೆಗಳ ಅಧಿಕಾರಿಗಳು ಜಂಕ್ಷನ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

VISTARANEWS.COM


on

bbmp
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ ಜಂಕ್ಷನ್‌ಗಳಿಗೆ ಮಂಗಳವಾರ ವಿವಿಧ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕ್ರಮಗಳ ಕುರಿತು ಸೂಚನೆ ನೀಡಿದರು.

ಬೆಂಗಳೂರಿಗೆ ಟ್ರಾಫಿಕ್‌ ಸಮಸ್ಯೆಯಿಂದ ಮುಕ್ತಿ ನೀಡಲು ಬಿಬಿಎಂಪಿ ಶತಾಯಗತಾಯ ಪ್ರಯತ್ನಪಡುತ್ತಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ. ಅದರ ಮುಂದುವರಿದ ಭಾಗ ಇದಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಾರಕ್ಕಿ ಜಂಕ್ಷನ್ ಪರಿಶೀಲನೆ

ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆಯ ನಾಮಫಲಕ, ಬೆಸ್ಕಾಂನವರು ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕು. ಬಿಎಂಆರ್‌ಸಿಎಲ್ ಫಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ ಮೂರು ಅಡಿ ಎತ್ತರಿಸಬೇಕು.

ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ ಚಲಿಸುವ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಈ ಪೈಕಿ 14ನೇ ಇ ಅಡ್ಡರಸ್ತೆ ಹಾಗೂ ಕನಕಪುರ ಮುಖ್ಯ ರಸ್ತೆಯ ಮಧ್ಯದಲ್ಲಿ ಪಾದಚಾರಿ ಮಾರ್ಗಕ್ಕೆ ಗ್ರಿಲ್ ಹಾಗೂ ಪಾದಚಾರಿ ಕಂಬಗಳನ್ನು ಅಳವಡಿಸಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು.

ಸಾರಕ್ಕಿ ಸಿಗ್ನಲ್‌ನಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ಜರಗನಹಳ್ಳಿ ಕಡೆಗೆ ಸಾಗುವ ರಸ್ತೆಯ ಎಡಭಾಗದಲ್ಲಿರುವ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಹಾಳಾಗಿದೆ. ಪಾದಚಾರಿ ಮಾರ್ಗವನ್ನು ಸರಿಪಡಿಸಿ ಗ್ರಿಲ್‌ಗಳನ್ನು ಸರಿಯಾಗಿ ಅಳವಡಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಇದನ್ನೂ ಓದಿ: Bangalore Traffic | ಟ್ರಾಫಿಕ್‌ ದಟ್ಟಣೆ ನಿಭಾಯಿಸಲು ಸಿಎಂ ಸಮಾಲೋಚನೆ

ಕೋಣನಕುಂಟೆ ಕಡೆಯಿಂದ ಬಂದ ವಾಹನಗಳಿಗೆ ಸಾರಕ್ಕಿ ಜಂಕ್ಷನ್ ಬಳಿ ರಿಂಗ್ ರಸ್ತೆ ಕಡೆಗೆ ಸಿಗ್ನಲ್ ಮುಕ್ತ ಎಡ ತಿರುವು ಕಲ್ಪಿಸಲು ರಸ್ತೆಗೆ ಅಡ್ಡಲಾಗಿರುವ ಮರಗಳ‌ ಕೊಂಬೆಗಳನ್ನು ಕತ್ತರಿಸಬೇಕು ಹಾಗೂ ಬೆಸ್ಕಾಂ ಅಳವಡಿಸಿರುವ ಸೀಮೆಂಟ್ ಕಂಬವನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಸ್ಥಳಾಂತರಿಸಬೇಕು. ಜೊತೆಗೆ ಸರ್ವೀಸ್ ರಸ್ತೆಯನ್ನು ರಿಂಗ್ ರಸ್ತೆ ಮಟ್ಟಕ್ಕೆ ಎತ್ತರಿಸಿ ಡಾಂಬರೀಕರಣ ಮಾಡಬೇಕು. ಇಲಿಯಾಜ್ ನಗರ ಕಡೆಯಿಂದ ಬಂದ ವಾಹನಗಳು ಸಾರಕ್ಕಿ ಜಂಕ್ಷನ್ ಬಳಿ ಬನಶಂಕರಿ ಕಡೆಗೆ ಚಲಿಸಲು ಫ್ರೀ ಲೆಫ್ಟ್‌ ಟರ್ನ್‌ಗೆ ಅವಕಾಶ ಲ್ಪಿಸಬೇಕು.

ಈ ಮೇಲಿನ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದಂತೆ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ವಿನ್ಯಾಸ ಸಿದ್ಧಪಡಿಸಿ, ಸಮಸ್ಯೆಗಳನ್ನು ಬಗೆಹರಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದರು.

ಜಯದೇವ ಮೇಲುಸೇತುವೆ

ಜಯದೇವ ಮೇಲುಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ಕಡೆಗೆ ರೋಡ್ ಸರ್ಫೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪಗಳನ್ನು ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಸರಿಪಡಿಸಲು ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿತಗಾರರು ಮೆಟ್ರೊ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಟ್ರೋ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದು, ಕೂಡಲೆ ಅದನ್ನು ಮಾಡಬೇಕು. ಸರ್ವೀಸ್ ರಸ್ತೆಯ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್

ಬಿ.ಟಿ.ಎಂ ಲೇಔಟ್ – ಸಿಲ್ಕ್ ಬೋರ್ಡ್ ಕಡೆಗೆ ಎರಡು ಬದಿ ಚರಂಡಿ ಹಾಳಾಗಿರುವುದರಿಂದ ಮಳೆ ಬಂದಾಗ ಚರಂಡಿ ನೀರು ಮತ್ತು ಮಳೆ ನೀರು ಒಟ್ಟಾಗಿ ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿಯುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಾಜಕಾಲುವೆ ವಿಭಾಗದಿಂದ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆಯಾಗುವುದನ್ನು ತಪ್ಪಿಸಲು ಮುಖ್ಯ ಆಯುಕ್ತರು ಸೂಚಿಸಿದರು.

ಹೊಸೂರು ರಸ್ತೆ – ಬಿಟಿಎಂ ರಸ್ತೆ ಕಡೆಗೆ ಹೋಗುವ ಸ್ಥಳದಲ್ಲಿರುವ ಕಾಲುವೆ ಮೇಲೆ ಬಿಎಂಆರ್‌ಸಿಎಲ್‌ನಿಂದ ಸ್ಲ್ಯಾಬ್ ಅಳವಡಿಸಿರುವುದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ರಾಜಕಾಲುವೆ ಮೇಲೆ ಅಳವಡಿಸಿರುವ ಸ್ಲ್ಯಾಬ್ ಮಟ್ಟವನ್ನು ರಸ್ತೆ ಮಟ್ಟಕ್ಕೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ(Free Left) ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಲ್ಕ್ ಬೋರ್ಡ್ ಕಡೆಯಿಂದ ಬಿ.ಟಿ.ಎಂ ಲೇಔಟ್ ಬಸ್ ನಿಲ್ದಾಣದವರೆಗೆ ರೋಡ್ ಸರ್ಫೇಸಿಂಗ್ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ನಿಲ್ದಾಣದಿಂದ ಹೆಚ್.ಎಸ್.ಆರ್ ಲೇಔಟ್ ಸರ್ವಿಸ್ ರಸ್ತೆಯ ಕಡೆಗೆ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್‌ಗಳ ನಿಲ್ದಾಣವು ಸಂಚಾರ ದಟ್ಟಣೆಯಾಗದಂತೆ ವ್ಯವಸ್ಥಿತವಾಗಿ ವಿನ್ಯಾಸ ಮಾಡಿಕೊಂಡು ಕೆಲಸ ಮಾಡಲು ಆಡಳಿತಗಾರರು ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಬ್ಬಲೂರು ಜಂಕ್ಷನ್

ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ವಾಟರ್ ಲಾಗಿಂಗ್ ಆಗದಿರಲು ತೆಗೆದುಕೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಸರ್ಜಾಪುರ ರಸ್ತೆಯಿಂದ ಬಂದು ಹೊರ ವರ್ತುಲ ರಸ್ತೆಗೆ ಹೋಗುವ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ವೃತ್ತದಲ್ಲಿರುವ 2 ಐಲ್ಯಾಂಡ್‌ಗಳನ್ನು ಮರು ವಿನ್ಯಾಸಗೊಳಿಸಬೇಕಾಗಿರುತ್ತದೆ. ಹರಳೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ ವರೆಗೆ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಭಿವದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಲು ಆಡಳಿತಗಾರರು ಸೂಚನೆ ನೀಡಿದರು.

ಈ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪಾಲಿಕೆಯ ವಲಯ/ವಿಶೇಷ ಆಯುಕ್ತರುಗಳು, ಬಿಎಂಆರ್‌ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Traffic | ಬೆಂಗಳೂರು ಟ್ರಾಫಿಕ್‌ ಜಾಮ್‌ ಮುಕ್ತಿಗೆ ನಾನಾ ಇಲಾಖೆಗಳ ಸಮನ್ವಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

ವಿಸ್ತಾರ ಸಂಪಾದಕೀಯ: ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರ ಮತ್ತೊಂದು ಅವಕಾಶವನ್ನು ನೀಡಿದ್ದಾನೆ. 1984ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಮತದಾರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾನೆ.

VISTARANEWS.COM


on

narendra modi amit shah jp nadda election results 2024
Koo

ಭಾರತ ಹಾಗೂ ಇತರ ದೇಶಗಳೂ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ (Lok sabha Election 2024) ಫಲಿತಾಂಶ (Election results 2024) ಪ್ರಕಟವಾಗಿದೆ. 543 ಬಲದ ಲೋಕಸಭೆಯಲ್ಲಿ ಬಹುಮತ ಸಾಧಿಸಿ ಸರಕಾರ ರಚಿಸಬೇಕಿದ್ದರೆ 272 ಸ್ಥಾನಗಳನ್ನು ಗೆಲ್ಲಬೇಕು; ಆದರೆ ಯಾವುದೇ ಒಂದು ಪಕ್ಷ ಅಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಅವಧಿಗೆ ಆಡಳಿತ ನಡೆಸಿರುವ ಬಿಜೆಪಿ- ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಒಟ್ಟಾರೆ 291 ಸ್ಥಾನಗಳಲ್ಲಿ ಮುಂದಿದ್ದು, ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿ ಅತ್ಯಧಿಕ ಸ್ಥಾನಗಳನ್ನು (240) ಗಳಿಸಿರುವ ಪಕ್ಷವಾಗಿದೆ. ʼ400 ಸ್ಥಾನಗಳನ್ನು ಗೆಲ್ಲುವʼ ಕನಸು ಹೊಂದಿದ್ದ ಎನ್‌ಡಿಎಗೆ ಅದನ್ನು ಸಾಧ್ಯವಾಗಿಸಿಕೊಳ್ಳಲು ಆಗಿಲ್ಲ. ಆಡಳಿತ ಪಕ್ಷಕ್ಕೆ ದೃಢವಾದ ಹೋರಾಟ ನೀಡಿರುವ ಕಾಂಗ್ರೆಸ್‌ ಹಾಗೂ ಇಂಡಿಯಾ ಬ್ಲಾಕ್‌ ಒಟ್ಟಾಗಿ 235 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಗಿದ್ದರೂ ಅಧಿಕಾರದ ಸನಿಹ ಸುಳಿಯಲು ಸಾಧ್ಯವಾಗದು. ಒಟ್ಟಾರೆಯಾಗಿ ನೋಡಿದರೆ ಇದು ಮಿಶ್ರಫಲ ನೀಡಿರುವ ಫಲಿತಾಂಶ; ಎಲ್ಲ ಪಕ್ಷಗಳೂ ಕಲಿಯಬೇಕಾದ ಹಲವು ಪಾಠಗಳನ್ನು ಹುದುಗಿಸಿ ಈ ಫಲಿತಾಂಶವನ್ನು ಮತದಾರರು ನೀಡಿದ್ದಾರೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಮತದಾರರು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ದಶಕಗಳ ಬಳಿಕ ಭಾರತದ ಮತದಾರರು ನಿರಂತರ ಮೂರನೇ ಅವಧಿಗೆ ಒಂದು ಸರಕಾರವನ್ನು ಚುನಾಯಿಸಿದ್ದಾರೆ. ಅಂದರೆ ಎನ್‌ಡಿಎ ಮೇಲೆ ಭರವಸೆಯನ್ನು ದೇಶದ ಜನತೆ ಉಳಿಸಿಕೊಂಡಿದೆ. ಎನ್‌ಡಿಎ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಫಲಾನುಭವಿಗಳಿಗೆ ತಲುಪಿದೆ ಹಾಗೂ ಜನ ಅದನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. 2014ರಲ್ಲಿ ಯುಪಿಎ ಸರಕಾರದ ವಿರುದ್ಧ ಕಂಡುಬಂದಿದ್ದ ಜನತೆಯ ಪ್ರಬಲ ಆಕ್ರೋಶ, ಆಡಳಿತ ವಿರೋಧಿ ಅಲೆ ಈಗ ಕಂಡುಬಂದಿಲ್ಲ. ಹೀಗಾಗಿ ಎನ್‌ಡಿಎ ಸರಕಾರದ ಯಶಸ್ಸು ಅದನ್ನು ಮುಂದಕ್ಕೆ ಒಯ್ದಿದೆ. ಆದರೆ ಬಿಜೆಪಿಗೆ ಪೂರ್ಣ ಬಹುಮತವನ್ನೂ ಮತದಾರ ನೀಡಿಲ್ಲ. ಅದಕ್ಕೂ ಹಲವು ಕಾರಣಗಳಿವೆ. ಹತ್ತು ವರ್ಷಗಳ ಕಾಲ ಆಳಿಸಿಕೊಂಡ ನಂತರ ಸಹಜವಾಗಿಯೇ ಮತದಾರನಿಗೆ ಒಂದು ಪಕ್ಷದ ಕೊರತೆಗಳು ಗೊತ್ತಾಗತೊಡಗುತ್ತವೆ.

ಮುಖ್ಯವಾಗಿ, ಎನ್‌ಡಿಎ ಪಕ್ಷಗಳ ಬಗ್ಗೆ ಪ್ರತಿಪಕ್ಷಗಳು ನಡೆಸಿದ ಪ್ರಚಾರದ ತೀವ್ರತೆ ಅತ್ಯುಚ್ಛ ಮಟ್ಟವನ್ನು ಮುಟ್ಟಿದೆ. ಇದರಲ್ಲಿ ಸ್ವಲ್ಪ ಸತ್ಯವೂ ಅಪಾರ ಪ್ರಮಾಣದ ಸುಳ್ಳೂ ಇತ್ತು. ಮೋದಿ ಸರಕಾರ ಅಲ್ಪಸಂಖ್ಯಾತರ ವಿರೋಧಿ ಎಂಬುದು ಅವುಗಳಲ್ಲಿ ಒಂದು. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಮೋದಿ ಸರಕಾರ ಸಾಕಷ್ಟು ನೀಡಿದ್ದರೂ, ವಿಪಕ್ಷಗಳ ಈ ಅಪಪ್ರಚಾರದ ಮುಂದೆ ಅದು ನಿಲ್ಲಲಿಲ್ಲ. ಅಂತಾರಾಷ್ಟ್ರೀಯವಾಗಿ ಮೋದಿ ಸರ್ಕಾರದ, ಆ ಮೂಲಕ ದೇಶದ ಮಾನ ಹರಾಜು ಹಾಕುವ ಕಾರ್ಯಕ್ರಮವನ್ನೂ ಹಲವು ಎಡಪಂಥೀಯ ಚಿಂತಕರು, ಚಳವಳಿಗಾರರು ನಡೆಸಿದರು. ಎನ್‌ಡಿಎ ಸರಕಾರದ ಸಾಧನೆಯ ಅಂಕಿಅಂಶಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಕೊನೆಯ ಕ್ಷಣಗಳಲ್ಲಿ ಬಿಜೆಪಿ ಸ್ವಲ್ಪ ತೀವ್ರವಾದಿ ಹಿಂದುತ್ವದ ಧೋರಣೆಯನ್ನೂ ತೋರಿಸಲು ಮುಂದಾಯಿತು. ಇದು ಮುಸ್ಲಿಂ ಮತಗಳನ್ನು ಮತ್ತಷ್ಟು ಬಿಜೆಪಿಯ ವಿರುದ್ಧ, ಇಂಡಿಯಾ ಒಕ್ಕೂಟದ ಪರ ಕ್ರೋಡೀಕರಿಸಲು ಸಾಧ್ಯವಾಗಿರಬಹುದು.

ಎನ್‌ಡಿಎ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಪಾಠ ಎಂದರೆ, ಪ್ರಾದೇಶಿಕ ಪಕ್ಷಗಳು ಹಾಗೂ ಮಿತ್ರಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಹಾಗೆಯೇ ತನ್ನ ಪಕ್ಷದ ಪ್ರಾದೇಶಿಕ ನಾಯಕರನ್ನೂ ಕಡೆಗಣಿಸಬಾರದು. ಪ್ರಾದೇಶಿಕ ನಾಯಕರಿಗೆ ತಮ್ಮದೇ ಆದ ಅಜೆಂಡಾ ಇದ್ದರೂ, ಸ್ಥಳೀಯ ಸಮೀಕರಣಗಳು ಇವರನ್ನು ಅವಲಂಬಿಸಿರುತ್ತವೆ. ಹಾಗೇ ರಾಮ ಮಂದಿರದಂಥ ಸಂಗತಿಗಳು ಈ ಸಲ ಒಂದು ವರ್ಗದ ಮಂದಿಯನ್ನು ಮಾತ್ರ ಸೆಳೆಯಲು ಶಕ್ತವಾದವು. ಇದು ಈಗಾಗಲೇ ಬಿಜೆಪಿ ಬಗ್ಗೆ ಒಲವುಳ್ಳವರನ್ನು ಇನ್ನಷ್ಟು ತೃಪ್ತಿಪಡಿಸಿತೇ ಹೊರತು, ಹೊಸ ಮತದಾರರನ್ನು ತರಲಿಲ್ಲ. ಇದಕ್ಕೆ ಉತ್ತರಪ್ರದೇಶವೇ ಉದಾಹರಣೆ. ಅಲ್ಲಿ ಇದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಶಕ್ತವಾಗಲಿಲ್ಲ. ಬಿಜೆಪಿ ವಿರೋಧಿ ಮತಗಳು ಇಲ್ಲಿ ಕ್ರೋಡೀಕೃತಗೊಂಡವು. ಈ ಕ್ರೋಡೀಕರಣಕ್ಕೆ ಆಕ್ರಮಣಕಾರಿಯಾದ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣಗಳು, ಧ್ರುವೀಕರಣವಾದಿ ನಡೆ ಕಾರಣವಿರಬಹುದು. ಇದನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಎನ್‌ಡಿಎ ಎಲ್ಲರನ್ನೂ ಒಳಗೊಳ್ಳುವುದು ಸಾಧ್ಯವಿಲ್ಲ.

ಅನೇಕರಿಗೆ ಮತದಾರ ಈ ಬಾರಿ ಪಾಠ ಕಲಿಸಿದ್ದಾನೆ. ಅತ್ಯಾಚಾರ ಆರೋಪಿಯಾಗಿ ಜೈಲಿನಲ್ಲಿರುವ ಸಂಸದನನ್ನು ಭಾರಿ ಮತಗಳ ಅಂತರದಿಂದ ಸೋಲಿಸಿರುವುದು, ಮತದಾರನಿಗೆ ಇಂಥ ನಾಯಕರ ಬಗ್ಗೆ ಎಷ್ಟು ಜಿಗುಪ್ಸೆ ಮೂಡಿದೆ ಎಂಬುದಕ್ಕೆ ಉದಾಹರಣೆ. ಹಾಗೆಯೇ ಸ್ಮೃತಿ ಇರಾನಿ, ಅಣ್ಣಾಮಲೈಯಂಥ ನಾಯಕರನ್ನು ಸೋಲಿಸುವ ಮೂಲಕವೂ ಮತದಾರ ಹಲವು ಪಾಠಗಳನ್ನು ಮುಂದಿರಿಸಿದ್ದಾನೆ. ತಮಿಳುನಾಡು, ಕೇರಳಗಳಲ್ಲಿ ಪ್ರಾದೇಶಿಕ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಲು ಎನ್‌ಡಿಎಗೆ ಸಾಧ್ಯವಾಗಿಲ್ಲ. ಆದರೆ ಹಲವು ಕಡೆ ಹೊಸ ಸ್ಥಾನಗಳನ್ನು ಗೆದ್ದುಕೊಂಡಿದೆ. ಉದಾಹರಣೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ. ಕಾಂಗ್ರೆಸ್‌ ಉಚಿತ ಯೋಜನೆಗಳ ಆಮಿಷಗಳನ್ನು ಮುಂದಿಟ್ಟಿರುವುದು ಹಲವು ಕಡೆ ಕೆಲಸ ಮಾಡಿರುವಂತಿದೆ. ಇದು ಬೊಕ್ಕಸಕ್ಕೆ ಹೊರೆಯೆನಿಸುತ್ತದಾದರೂ, ಭಾರತದಂಥ ದೇಶಗಳ ಪ್ರಜೆಗಳು ಇಂಥ ಉಚಿತಗಳನ್ನು ಬಾಚಿಕೊಳ್ಳುವುದರಲ್ಲಿ ಮುಂದು; ಹೀಗಾಗಿ ಇದನ್ನು ಮುಂದಿನ ದಿನಗಳಲ್ಲಿ ಪರಿಗಣಿಸದೇ ನಿರ್ವಾಹವಿಲ್ಲ.

ಎನ್‌ಡಿಎಗೆ ಅಧಿಕಾರ ನೀಡಿದ ಮತದಾರರು, ವಿಪಕ್ಷವಾದ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟವನ್ನೂ ಗಟ್ಟಿಗೊಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಅನ್ನು 52 ಸ್ಥಾನಕ್ಕೆ ಇಳಿಸಿದ್ದ ಮತದಾರರೇ ಈ ಸಲ ಅದನ್ನು ನೂರರ ಆಸುಪಾಸಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ಮತದಾರರ ಚೈತನ್ಯವನ್ನೂ, ಅವರ ವಿವೇಚನಾ ಶಕ್ತಿಯನ್ನೂ ಅರ್ಥ ಮಾಡಿಕೊಳ್ಳಬಹುದು. ಮತದಾರ ಭ್ರಷ್ಟಾಚಾರಿ ಸರ್ಕಾರಕ್ಕೆ ಪಾಠ ಕಲಿಸಲೂ ಶಕ್ತ; ಹಾಗೇ ಏನೂ ಅಲ್ಲದ ಪಕ್ಷವನ್ನು ಮೇಲೆತ್ತಲೂ ಶಕ್ತ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಇನ್ನಷ್ಟು ಮಾಗಬೇಕು ಅನ್ನಿಸಿದರೂ, ಭಾರತ್‌ ಜೋಡೋ ಮುಂತಾದ ಕಾರ್ಯಕ್ರಮಗಳ ಮೂಲಕ ಮತದಾರರ ಮನದಲ್ಲಿ ತುಸುವಾದರೂ ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳಲು ಶಕ್ತರಾದರು. ಹಾಗಾಗಿ ಎರಡೂ ಕಡೆ ಗೆದ್ದಿದ್ದಾರೆ. ಇವರಿಂದ, ಗೆಲ್ಲುವ ಮತಗಳ ಅಂತರವನ್ನು 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಸಿಕೊಂಡ ನರೇಂದ್ರ ಮೋದಿಯವರೂ ಪಾಠ ಕಲಿಯಬಹುದು. ಇದೇ ವೇಗವನ್ನು ಉಳಿಸಿಕೊಂಡರೆ ಇಂಡಿಯಾ ಬ್ಲಾಕ್‌ ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಸದೃಢವಾಗಬಹುದು. ವಾಸ್ತವವಾಗಿ ದೃಢ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯ. ಅದು ಈಗ ಸಾಧ್ಯವಾಗಿದೆ. ಗಟ್ಟಿ ವಿರೋಧ ಪಕ್ಷವಾಗಿ ಇಂಡಿಯಾ ಕೆಲಸ ಮಾಡಿದರೆ, ಆಡಳಿತ ಪಕ್ಷವೂ ಇನ್ನಷ್ಟು ಎಚ್ಚರದಿಂದ, ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿದೆ.

ಇದನ್ನೂ ಓದಿ: Election Results 2024: ತಮಿಳುನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಗಳಿಕೆ ಪ್ರಮಾಣ ಶೇ. 3.57ರಿಂದ ಶೇ. 11.04ಕ್ಕೆ ಜಿಗಿತ!

Continue Reading

ಭವಿಷ್ಯ

Dina Bhavishya : ನಿಮ್ಮನ್ನು ದ್ವೇಷಿಸುತ್ತಿದ್ದವರಿಗೆ ನಿಮ್ಮ ಮೇಲೆ ದಿಢೀರ್‌ ಪ್ರೀತಿ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ವೃಷಭ ರಾಶಿಯಿಂದ ಬುಧವಾರ ಬೆಳಗ್ಗೆ 04:36ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು,ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರು ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ಯಾ ರಾಶಿಯವರು ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (5-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ.
ತಿಥಿ: ಚತುರ್ದಶಿ 19:54 ವಾರ: ಬುಧವಾರ
ನಕ್ಷತ್ರ: ಕೃತ್ತಿಕಾ 21:15 ಯೋಗ: ಸುಕರ್ಮ 24:34
ಕರಣ: ವಿಷ್ಟಿ (ಭದ್ರ) 08:55 ಅಮೃತ ಕಾಲ: ಸಂಜೆ 07:00 ರಿಂದ 08:31 ರವರಗೆ
ದಿನದ ವಿಶೇಷ: ವಿಶ್ವ ಪರಿಸರ ದಿನ

ಸೂರ್ಯೋದಯ : 05:52   ಸೂರ್ಯಾಸ್ತ : 06:44

ರಾಹುಕಾಲ : ಮಧ್ಯಾಹ್ನ 03:31 ರಿಂದ 05:07
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯದ ಬೇಡಿಕೆ ಬರಬಹುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕವಿದೆ. ಧೈರ್ಯ ಕಾಡಬಹುದು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದನ್ನು ನಿಲ್ಲಿಸಿ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ ಸಿಗಲಿದೆ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ ಇದೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ ಇದೆ. ಹಣಕಾಸು ವಿಷಯದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಕೋಪವು ಅಪಾಯ ತರುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕ ಲಾಭ ಇರಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದುವೆಚ್ಚವನ್ನು ತಪ್ಪಿಸಿ. ಬುದ್ಧಿವಂತಿಕೆಯಿಂದ ಕೆಲಸಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪರಿಸರ

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಗೆ ಜ್ವರ, ನಮಗೆಲ್ಲ ಬರೆ!

ಭೂಮಿ ಬಿಸಿ ಹೆಚ್ಚಾಗಿ ಚೀರುತ್ತಿದೆ. ಇದನ್ನೂ ಕೇಳಿಸಿಕೊಳ್ಳದಷ್ಟು ಕಿವುಡುತನ ಬೇಡ ನಮಗೆ. ಹೀಗೆಯೇ ಮುಂದುವರಿದರೆ ಮುಂದಿನ 25 ವರ್ಷಗಳಲ್ಲಿ ಭೂಮಿಯ ಮುಕ್ಕಾಲು ಭಾಗ ಅನಾವೃಷ್ಟಿಯನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದು ಬಿರುಬೇಸಿಗೆಯನ್ನು ದಾಟುವಷ್ಟರಲ್ಲಿ ಹೈರಾಣಾಗಿರುವ ನಮಗೆ, ಭೂಮಿಯ ತಾಪ ಅರ್ಥವಾಗಬಾರದೇ? ಅಂದಹಾಗೆ, ಇಂದು ವಿಶ್ವ ಪರಿಸರ ದಿನ (World Environment Day).

VISTARANEWS.COM


on

World Environment Day
Koo

ನಮ್ಮ ಮನೆ ಯಾವುದು ಎಂದು ಕೇಳಿದರೆ, ಎಲ್ಲರೂ ತಂತಮ್ಮ ಮನೆಯ ವಿಳಾಸ ಹೇಳಿ, ʻಇದು ನನ್ನ ಮನೆʼ ಎಂದು ಹೇಳಬಹುದು. ಆದರೆ ನಮಗೆಲ್ಲ ಇರುವ ಮನೆಯೊಂದೇ- ಅದು ಭೂಮಿ. ಹುಟ್ಟಿದ ಘಳಿಗೆಯಿಂದ ಇರುವ ಕಡೆಯ ಕ್ಷಣದವರೆಗೆ ʻನಮನ್ನೆಲ್ಲʼ ಸಲಹುವಂಥ ನಿತ್ಯನೂತನ ಮನೆಯೀ ವಸುಂಧರೆ. ʻನಮ್ಮನ್ನುʼ ಎಂದರೆ ಮನುಷ್ಯರನ್ನು ಎಂದಷ್ಟೇ ಅರ್ಥ ಮಾಡಿಕೊಂಡಿದ್ದರಿಂದ ಈ ಪರಿಯಲ್ಲಿ ಸಮಸ್ಯೆ ಎದುರಾಗಿದೆ ಇಂದು. ಸಕಲ ಜೀವಜಂತುಗಳಿಗೆ ಇರುವುದೊಂದೇ ಮನೆ. ಆದರೆ ಮನುಷ್ಯರ ಹೊರತಾಗಿ ಇನ್ನಾವ ಜೀವಿಗಳೂ ತಮ್ಮ ಮನೆಯನ್ನು ಕೊಳೆ ಮಾಡಿದವರಲ್ಲ. ಇದನ್ನು ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು (World Environment Day) ಆಚರಿಸಲಾಗುತ್ತದೆ. ಈ ದಿನದಂದು ಗಿಡವೊಂದನ್ನು ನೆಟ್ಟು, ʻಹೇಗಿದ್ದರೂ ಮಳೆಗಾಲ ಶುರುವಾಗುತ್ತಿದೆ; ನೀರು ಹಾಕುವುದೂ ಬೇಕಿಲ್ಲʼ ಎಂಬ ಉದಾಸೀನತೆಯಲ್ಲಿ ಸುಮ್ಮನಿದ್ದರೆ ಸಾಕು ಎಂದರ್ಥವಲ್ಲ. ವಿಶ್ವದ ಜೈವಿಕ ವೈಧ್ಯತೆಯನ್ನು ಉಳಿಸಬೇಕೆನ್ನುವ, ಕಾಡು ಕಡಿಮೆಯಾಗುತ್ತಿರುವ ಮತ್ತು ಉಳಿದಿರುವ ಕಾಡಿನಲ್ಲೂ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ತುರ್ತು. ಜೊತೆಗೆ, ಭೂಮಿ ಬಿಸಿಯಾಗುತ್ತಿರುವುದರಿಂದ ಹವಾಮಾನದಲ್ಲಿ ಆಗುವ ಘೋರ ವೈಪರಿತ್ಯಗಳನ್ನು ಅರ್ಥ ಮಾಡಿಕೊಂಡು, ಜಾಗತಿಕ ತಾಪಮಾನ ಏರದಂತೆ ತಡೆಯುವ ಕ್ರಮಗಳನ್ನು ಮನಸ್ಪೂರ್ತಿಯಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಈ ಹಿನ್ನೆಲೆಯಲ್ಲಿ ಈ ಅರಿವಿನ ದಿನದ ಬಗ್ಗೆ ಇನ್ನಷ್ಟು ಮಾಹಿತಿಗಳಿವು.

World environment day concept

ಈ ದಿನದ ಹಿನ್ನೆಲೆ

ಜೂನ್‌ 5ರಂದೇ ಪರಿಸರ ದಿನವನ್ನು ಏಕೆ ಆಚರಿಸಬೇಕೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ- ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ 1972ರ ಜೂನ್‌ 5ರಂದು ನಡೆಸಲಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮ್ಮೇಳನದಲ್ಲಿ, ಪರಿಸರದ ಕುರಿತಾಗಿ ವಿಶ್ವದೆಲ್ಲೆಡೆ ಜಾಗೃತಿಯನ್ನು ಹೆಚ್ಚಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಆ ದಿನದ ನೆನಪಿನಲ್ಲಿ, ಅದೇ ದಿನಾಂಕವನ್ನು ವಿಶ್ವ ಪರಿಸರ ದಿನ ಎಂದು ಗುರುತಿಸಲಾಗಿದೆ.

ಈ ವರ್ಷದ ಘೋಷ ವಾಕ್ಯ

ಭೂಮಿಯ ಪುನರುತ್ಥಾನ, ಮರುಭೂಮೀಕರಣ ಮತ್ತು ಬರ ನಿರೋಧಕತೆ. ಅಂದರೆ, ಬಂಜರು ಭೂಮಿ ವಿಸ್ತಾರವಾಗುತ್ತಿರುವುದನ್ನು ತಡೆದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬೇಕು. ಜೊತೆಗೆ, ನೀರಿನ ಕೊರತೆಯನ್ನೂ ನೀಗಿಸಬೇಕೆಂಬ ಉದ್ದೇಶ ಈ ಘೋಷಣೆಯದ್ದು. ಮರುಭೂಮೀಕರಣ ಮಿತಿಮೀರಿದ್ದು, ಭೂಮಿಯ ಶೇ. 40ರಷ್ಟನ್ನು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಇರಿಸಲಾಗಿದೆ. ಇದು ಜಗತ್ತಿನ ಅರ್ಧಕ್ಕಿಂತ ಹೆಚ್ಚಿನ ಜನರ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ. 21ನೇ ಶತಮಾನದ ಆರಂಭದಿಂದ ಗಮನಿಸಿದರೆ, ಬರಗಾಲದ ಅವಧಿ ಮತ್ತು ತೀವ್ರತೆ ಶೇ. 29ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಸಮರೋಪಾಧಿಯಲ್ಲಿ ಕ್ರಮಗಳನ್ನು ಕೈಗೊಳ್ಳದಿದ್ದರೆ, 2050ರ ವೇಳೆಗೆ ಭೂಮಿಯ ಮುಕ್ಕಾಲು ಭಾಗ ಬರಗಾಲಕ್ಕೆ ತುತ್ತಾಗಲಿದೆ ಎಂದು ವಿಶ್ವಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಹವಾಮಾನ ವೈಪರಿತ್ಯ

ಈವರೆಗಿನ ಪರಿಸರ ದಿನಗಳಲ್ಲಿ ನಾನಾ ರೀತಿಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಲಾಗಿತ್ತು. ವಾಯು ಮಾಲಿನ್ಯ, ಹವಾಮಾನ ಬದಲಾವಣೆ, ಪ್ಲಾಸ್ಟಿಕ್‌ ಮಾಲಿನ್ಯ, ಅಕ್ರಮ ಕಾಡ್ಗಿಚ್ಚು, ಸುಸ್ಥಿರ ಬಳಕೆ, ಏರುತ್ತಿರುವ ಸಮುದ್ರಮಟ್ಟ, ಆಹಾರ ಭದ್ರತೆ ಮುಂತಾದ ಹಲವಾರು ವಿಚಾರಗಳು ವಿಶ್ವಮಟ್ಟದಲ್ಲಿ ಚರ್ಚೆಯಾಗಿದ್ದವು. ಸಮುದ್ರಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಹವಾಮಾನ ವೈಪರಿತ್ಯ ತೀವ್ರವಾಗಿ ಬಾಧಿಸಿ, ಜಾಗತಿಕವಾಗಿ ಆಹಾರದ ಸ್ವರೂಪವೇ ಬದಲಾಗಲಿದೆ ಎನ್ನುವುದು ತಜ್ಞರ ಮುನ್ಸೂಚನೆ.

Continue Reading

ಕರ್ನಾಟಕ

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

R Ashok: ಎನ್‌ಡಿಎನಲ್ಲಿ ಯಾವುದೇ ಒಡಕಿಲ್ಲ. ಇಂಡಿಯಾ ಒಕ್ಕೂಟದಿಂದ ಕೆಲವರು ಎನ್‌ಡಿಎಗೆ ಬರುವ ಸಾಧ್ಯತೆಯಿದೆ. ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರೇ ತಮ್ಮ ಸಹೋದರನನ್ನು ಗೆಲ್ಲಿಸಿಕೊಂಡಿಲ್ಲವಾದ್ದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಇನ್ನು ಭಿನ್ನಮತದ ಕಿಡಿ ಹೊತ್ತಿಕೊಳ್ಳಲಿದೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

VISTARANEWS.COM


on

BJP celebration about lok sabha election results
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಹಳ ಭಾವುಕ ವ್ಯಕ್ತಿ. ಆದ್ದರಿಂದ ಅವರು ಈ ಸೋಲಿನಿಂದ ರಾಜೀನಾಮೆ ನೀಡಬಹುದು ಎಂದು ಭಾವಿಸಿದ್ದೇನೆ. ಈ ಚುನಾವಣೆಯಲ್ಲಿ ಎಲ್ಲ ಮಹಿಳೆಯರಿಗೆ ಗ್ಯಾರಂಟಿ ನೀಡಿ, ಅವರ ಗಂಡಂದಿರಿಗೆ ಟ್ಯಾಕ್ಸ್‌ ಹಾಕಿದ್ದಾರೆ. ಕಾಂಗ್ರೆಸ್‌ಗೆ ಮಾನ ಮರ್ಯಾದೆ ಹೋಗಿದೆ. ಮುಸ್ಲಿಂ ತುಷ್ಟೀಕರಣ ಮಾಡಿ ಬಹುಸಂಖ್ಯಾತರನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‌ಗೆ ಹೀಗಾಗಿದೆ ಎಂದು ಆರೋಪಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಮತಗಳ ಅಂತರದ ಗೆಲುವು ಸಾಧಿಸಿದ ತೇಜಸ್ವಿ ಸೂರ್ಯ ಅವರಿಗೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಸಿಹಿ ತಿನ್ನಿಸಿ, ಅಭಿನಂದಿಸಿದರು.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಸೇರಿ ಎನ್‌ಡಿಎಗೆ 51.66% ಮತ ಬಂದಿದೆ. 136 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ 45.43% ಬಂದಿದೆ. ಅಂದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಯೋಗ್ಯತೆ ಏನು ಎಂದು ಗೊತ್ತಾಗಿದೆ. ಎರಡಂಕಿ ದಾಟುತ್ತೇವೆ ಎಂದು ಅವರು ಹೇಳುತ್ತಲೇ ಇದ್ದರು. ಆದರೆ ಅವರು ವಿಫಲರಾಗಿದ್ದಾರೆ ಎಂದರು.

ಇದನ್ನೂ ಓದಿ: NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

ಕಾಂಗ್ರೆಸ್‌ ಈ ಬಾರಿ ದೇಶದಲ್ಲಿ 21.56% ಮತ ಪಡೆದಿದೆ. ಬಿಜೆಪಿಗೆ ಕಳೆದ ಬಾರಿ 35% ಇದ್ದು, ಈ ಬಾರಿ 36.8% ಮತ ಗಳಿಕೆಯಾಗಿದೆ. ಕಾಂಗ್ರೆಸ್‌ ಮೂರಂಕಿಗೆ ಹೋಗಲೇ ಇಲ್ಲ. 18-20 ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದು, ಆ ಹೇಳಿಕೆ ತಲೆ ಕೆಳಗಾಗಿದೆ. ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರಿನಲ್ಲಿ 1.39 ಲಕ್ಷ ಅಂತರ ಬಂದಿದ್ದು, ಮುಖ್ಯಮಂತ್ರಿ ಫೇಲ್‌ ಆಗಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರ ಸಹೋದರ ಹೀನಾಯವಾಗಿ ಸೋತಿದ್ದಾರೆ. ರಾಜಕೀಯಕ್ಕೆ ಮೊದಲ ಬಾರಿಗೆ ಬಂದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್‌ 2.69 ಲಕ್ಷ ಅಂತರ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Novak Djokovic: ಫ್ರೆಂಚ್ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್

2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನಗಳನ್ನು ಗಳಿಸಿತ್ತು. ಅದು ಕೂಡ ಸರಳ ಬಹುಮತ ಅಲ್ಲ. ಅಷ್ಟೇ ಅಲ್ಲ ಈಗ ಬಿಜೆಪಿ ಗಳಿಸಿದ್ದಷ್ಟೂ ಅಲ್ಲ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 44 ಸ್ಥಾನ ಗಳಿಸಿತ್ತು. ಕೇವಲ ಐದು ವರ್ಷದ ದುರಾಡಳಿತದಿಂದಾಗಿ 160 ಸ್ಥಾನಗಳನ್ನು ಕಳೆದುಕೊಂಡಿತ್ತು. 2019 ರಲ್ಲಿ ಬಿಜೆಪಿ 303 ಸ್ಥಾನ ಪಡೆದಿದ್ದು, 2024 ರಲ್ಲಿ 239 ಸ್ಥಾನ ಪಡೆದು, 64 ಸ್ಥಾನ ಮಾತ್ರ ಮೈನಸ್ ಆಗಿದೆ.

2019 ರಲ್ಲಿ ಕಾಂಗ್ರೆಸ್ 52 ಸ್ಥಾನ ಪಡೆದಿದ್ದು, 2024 ರಲ್ಲಿ 99 ಸ್ಥಾನ ಪಡೆದು, 47 ಸ್ಥಾನ ಹೆಚ್ಚಿಸಿಕೊಂಡಿದೆ. ಈಗ ಇಂಡಿಯಾ ಕೂಟದಿಂದಾಗಿ ಕಾಂಗ್ರೆಸ್‌ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಕಾಂಗ್ರೆಸ್‌ಗೆ ಸಿಕ್ಕಿರುವುದು 99 ಸ್ಥಾನ ಮಾತ್ರ. ಇಂಡಿಯಾ ಒಕ್ಕೂಟಕ್ಕೆ ಸಿಕ್ಕಿರುವುದು 232 ಸ್ಥಾನಗಳು. ಬಿಜೆಪಿಗೆ 239 ಸ್ಥಾನಗಳಿವೆ. ಅಂದರೆ ಒಟ್ಟು ಇಂಡಿಯಾ ಕೂಟ ಪಡೆದ ಸ್ಥಾನಗಳು ಬಿಜೆಪಿಗಿಂತಲೂ ಕಡಿಮೆ ಇದೆ ಎಂದರು.

2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 80 ಸೀಟು ಪಡೆದಿತ್ತು. ಬಿಜೆಪಿ 104 ಪಡೆದು ದೊಡ್ಡ ಪಕ್ಷವಾಗಿತ್ತು. ಆದರೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದಾಗ ಸಿದ್ದರಾಮಯ್ಯ ಕೈ ಕಟ್ಟಿಕೊಂಡು ಕೂತಿದ್ದರು. ಆಗ ನೈತಿಕತೆ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Karnataka Weather : ಕಾರವಾರ, ಯಾದಗಿರಿಯಲ್ಲಿ ಅಬ್ಬರಿಸಿದ ವರುಣ; ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ

ಕಾಂಗ್ರೆಸ್‌ ಸಚಿವರ ಮಕ್ಕಳು ಸೋತಿರುವುದು ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಜನರು ತೋರಿರುವ ವಿರೋಧ ಎಂದ ಅವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Continue Reading
Advertisement
Karnataka Weather Forecast
ಮಳೆ45 mins ago

Karnataka Weather : ರಾಜ್ಯದ ಹಲವೆಡೆ ಮಳೆ ಅಲರ್ಟ್‌; ಬೆಂಗಳೂರಲ್ಲಿ ಹೇಗೆ?

Benefits of Poppy Seeds
ಆರೋಗ್ಯ1 hour ago

Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

Microplastics
ಆರೋಗ್ಯ2 hours ago

Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

narendra modi amit shah jp nadda election results 2024
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಮಿಶ್ರಫಲ ನೀಡಿದ ಫಲಿತಾಂಶ; ಆಡಳಿತ ಪಕ್ಷಕ್ಕೆ ಪಾಠ, ವಿಪಕ್ಷ ಬಲಿಷ್ಠ

World Environment Day
ಪರಿಸರ2 hours ago

World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಗೆ ಜ್ವರ, ನಮಗೆಲ್ಲ ಬರೆ!

dina bhavishya
ಭವಿಷ್ಯ2 hours ago

Dina Bhavishya : ನಿಮ್ಮನ್ನು ದ್ವೇಷಿಸುತ್ತಿದ್ದವರಿಗೆ ನಿಮ್ಮ ಮೇಲೆ ದಿಢೀರ್‌ ಪ್ರೀತಿ!

Anna Lezhneva
ರಾಜಕೀಯ8 hours ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ9 hours ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ9 hours ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ9 hours ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌