BJP MLA Son: ಆದಿವಾಸಿ ವ್ಯಕ್ತಿಗೆ ಗುಂಡು ಹಾರಿಸಿದ ಬಿಜೆಪಿ ಶಾಸಕನ ಪುತ್ರ; ತಲೆಮರೆಸಿಕೊಂಡವನಿಗೆ ಬಲೆ - Vistara News

ದೇಶ

BJP MLA Son: ಆದಿವಾಸಿ ವ್ಯಕ್ತಿಗೆ ಗುಂಡು ಹಾರಿಸಿದ ಬಿಜೆಪಿ ಶಾಸಕನ ಪುತ್ರ; ತಲೆಮರೆಸಿಕೊಂಡವನಿಗೆ ಬಲೆ

BJP MLA Son: ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮ್‌ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ ವೈಶ್ಯ ಎಂಬಾತನು ಆದಿವಾಸಿ ವ್ಯಕ್ತಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಲ್ಲದೆ, 10 ಸಾವಿರ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.

VISTARANEWS.COM


on

Surya Kumar Khairwar
ಗುಂಡಿನ ದಾಳಿಗೀಡಾದ ಸೂರ್ಯಕುಮಾರ್‌ ಖೈರ್ವಾರ್.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್‌: ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರ ಆಪ್ತನು ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಸುದ್ದಿಯಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪುತ್ರನು (BJP MLA Son) ಆದಿವಾಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ತಲೆಮರೆಸಿಕೊಂಡಿದ್ದಾನೆ.

ಸಿಂಗ್ರೌಲಿ ಬಿಜೆಪಿ ಶಾಸಕ ರಾಮ್‌ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ ವೈಶ್ಯ (40) ಎಂಬಾತನು ಸೂರ್ಯಕುಮಾರ್‌ ಖೈರ್ವಾರ್‌ ಎಂಬ ಆದಿವಾಸಿ ವ್ಯಕ್ತಿಯ ಕೈಗೆ ಗುಂಡು ಹಾರಿಸಿದ್ದಾನೆ. ಆಗಸ್ಟ್‌ 3ರಂದು ಗುಂಡಿನ ದಾಳಿ ನಡೆಸಿದ್ದು, ಕೂಡಲೇ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ವಿವೇಕಾನಂದ ವೈಶ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೂರ್ಯಕುಮಾರ್‌ ಖೈರ್ವಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ವಿವೇಕಾನಂದ ವೈಶ್ಯನ ಕುರಿತು ಮಾಹಿತಿ ನೀಡಿದವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಗುಂಡಿನ ದಾಳಿ ಏಕೆ?

ಸಿಂಗ್ರೌಲಿ ಜಿಲ್ಲೆಯ ಕಡಿದಾದ ರಸ್ತೆಯೊಂದರಲ್ಲಿ ಗುರುವಾರ ಸಂಜೆ 5.30ರ ಸುಮಾರಿಗೆ ವಿವೇಕಾನಂದ ವೈಶ್ಯ ಅವರು ಕಾರು ಚಲಿಸುವಾಗ ಎದುರಿನಿಂದ ಸೂರ್ಯಕುಮಾರ್‌ ಖೈರ್ವಾರ್‌ ಅವರು ಸಹೋದರರ ಜತೆ ಆಗಮಿಸಿದ್ದಾರೆ. ಇದೇ ವೇಳೆ ದಾರಿ ಬಿಡುವ ವಿಚಾರಕ್ಕೆ ವಿವೇಕಾನಂದ ವೈಶ್ಯ ಹಾಗೂ ಸೂರ್ಯಕುಮಾರ್‌ ಖೈರ್ವಾರ್‌ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಇದೇ ವೇಳೆ, ಕುಪಿತಗೊಂಡ ವಿವೇಕಾನಂದ ವೈಶ್ಯ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: West Bengal Horror: ಮಣಿಪುರ ಬೆನ್ನಲ್ಲೇ ಬಂಗಾಳದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಬೆತ್ತಲೆ ಮೆರವಣಿಗೆ

ವಿವೇಕಾನಂದ ವೈಶ್ಯನ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಜತೆ ಜಗಳವಾಡಿ, ಅವರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾನೆ. ಈಗ ಮತ್ತೆ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇನ್ನು ಪ್ರಕರಣ ಸುದ್ದಿಯಾಗುತ್ತಲೇ ಕಾಂಗ್ರೆಸ್‌ ನಾಯಕ ಕಮಲ್ ನಾಥ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

ಕಮಲ್‌ ನಾಥ್‌ ಆಕ್ರೋಶ

“ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಲು ಬಿಜೆಪಿಯವರ ಮಧ್ಯೆಯೇ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಕೆಲ ದಿನಗಳ ಹಿಂದೆ ಸಿದ್ಧಿ ಸಮುದಾಯದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿತ್ತು. ಈಗ ಬಿಜೆಪಿ ಶಾಸಕ ರಾಮ್‌ ಲಲ್ಲು ವೈಶ್ಯ ಅವರ ಪುತ್ರ ವಿವೇಕಾನಂದ ವೈಶ್ಯನು ಆದಿವಾಸಿ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಆದಿವಾಸಿ ವ್ಯಕ್ತಿ ಗುಣಮುಖನಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಆಗ್ರಹಿಸುತ್ತೇನೆ” ಎಂದು ಕಮಲ್‌ನಾಥ್‌ ಟ್ವೀಟ್‌ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Rahul Gandhi: ಹ್ಯಾಕರ್‌ಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ಅನ್ನು ಬಳಸಿಕೊಂಡು ಚುನಾವಣೆ ಮತಯಂತ್ರಗಳನ್ನು ಹ್ಯಾಕ್‌ ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಇದು ಈಗ ಅಮೆರಿಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಎಲಾನ್‌ ಮಸ್ಕ್‌ ಹೇಳಿಕೆ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿವೆ. ಎಲಾನ್‌ ಮಸ್ಕ್‌ ಅವರ ಆರೋಪಗಳಿಗೆ ರಾಹುಲ್‌ ಗಾಂಧಿ ಅವರೂ ಪ್ರತಿಕ್ರಿಯಿಸಿದ್ದು, ಭಾರತದ ಇವಿಎಂಗಳ ಕುರಿತು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Rahul Gandhi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ 52 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈಗ 99 ಕ್ಷೇತ್ರಗಳಲ್ಲಿ ಗೆದ್ದಿದೆ. ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವೂ (INDIA Bloc) 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿಯೊಂದಕ್ಕೇ ಬಹುಮತ ಬರುವುದನ್ನು ತಪ್ಪಿಸಿವೆ. ಇಷ್ಟೆಲ್ಲ ಆದರೂ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮತ್ತೆ ಚುನಾವಣೆ ಮತಯಂತ್ರಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

“ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು” ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಹೇಳಿರುವ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಇವಿಎಂ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. “ಭಾರತದಲ್ಲಿ ಇವಿಎಂಗಳು ಎಂದರೆ ಬ್ಲ್ಯಾಕ್‌ ಬಾಕ್ಸ್‌ (ಯಾರಿಗೂ ಗೊತ್ತಾಗದ, ಒಬ್ಬರಿಗೆ ಮಾತ್ರ ಆಕ್ಸೆಸ್‌ ಇರುವ ಎಲೆಕ್ಟ್ರಾನಿಕ್‌ ಡಿವೈಸ್)‌ ಇದ್ದಂತೆ. ಅವುಗಳನ್ನು ಯಾರೂ ಪರಿಶೀಲನೆ ಮಾಡಲು, ತಪಾಸಣೆ ಮಾಡಲು ಸಾಧ್ಯವಿಲ್ಲ. ಭಾರತದ ಚುನಾವಣೆ ಪಾರದರ್ಶಕತೆ ಕುರಿತು ಗಂಭೀರವಾದ ಆತಂಕಗಳು ವ್ಯಕ್ತವಾಗುತ್ತಿವೆ. ಸಂಸ್ಥೆಗಳು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಒಂದು ನಾಟಕೀಯ ಸ್ವರೂಪ ಪಡೆಯುತ್ತದೆ” ಎಂಬುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಎಲಾನ್‌ ಮಸ್ಕ್‌ ಹೇಳಿದ್ದಿಷ್ಟು…

ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್‌ ಮಸ್ಕ್‌ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜೀವ್‌ ಚಂದ್ರಶೇಖರ್‌ ತಿರುಗೇಟು

ಎಲಾನ್‌ ಮಸ್ಕ್‌ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ತಿರುಗೇಟು ನೀಡಿದ್ದಾರೆ. “ಸುರಕ್ಷಿತವಾಗಿರುವ ಡಿಜಿಟಲ್‌ ಹಾರ್ಡ್‌ವೇರ್‌ಅನ್ನು ಯಾರೂ ತಯಾರಿಸಲು ಆಗುವುದಿಲ್ಲ ರೀತಿಯಲ್ಲಿ ನೀವು ಇವಿಎಂ ಕುರಿತು ಸಾಮಾನ್ಯವಾದ ಹೇಳಿಕೆ ನೀಡಿದ್ದೀರಿ. ಇವಿಎಂಗೆ ಇಂಟರ್‌ನೆಟ್‌, ಬ್ಲ್ಯೂಟ್‌, ವೈಫೈ ಸಂಪರ್ಕ ಕೂಡ ಇಲ್ಲ. ಕಾರ್ಖಾನೆಯಲ್ಲಿ ತಯಾರಾದ ಇವಿಎಂಗಳನ್ನು, ಯಾವುದೇ ಕನೆಕ್ಟಿವಿಲ್ಲದ ಇವಿಎಂಗಳನ್ನು ಹ್ಯಾಕ್‌ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್‌ ತೆರೆಯೋಣ” ಎಂದು ಟಾಂಟ್‌ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹೊತ್ತಿನಲ್ಲೂ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ದಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಶೇ.100ರಷ್ಟು ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸ್ಲಲಿಸಲಾಗಿತ್ತು. ಆದರೆ, ನ್ಯಾಯಾಲಯವು ಅರ್ಜಿಗಳನ್ನು ತಳ್ಳಿಹಾಕಿತ್ತು. ಇನ್ನು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರ ಮಧ್ಯೆಯೇ, ಎಲಾನ್‌ ಮಸ್ಕ್‌ ಅವರು ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Continue Reading

ಪ್ರಮುಖ ಸುದ್ದಿ

Elon Musk: ಕೃತಕ ಬುದ್ಧಿಮತ್ತೆ ಬಳಸಿ ಇವಿಎಂಗಳ ಹ್ಯಾಕಿಂಗ್‌ ಸಾಧ್ಯ ಎಲಾನ್‌ ಮಸ್ಕ್‌; ಬಿಜೆಪಿ ನಾಯಕ ಟಾಂಗ್!‌

Elon Musk: ಹ್ಯಾಕರ್‌ಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ಅನ್ನು ಬಳಸಿಕೊಂಡು ಚುನಾವಣೆ ಮತಯಂತ್ರಗಳನ್ನು ಹ್ಯಾಕ್‌ ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಇದು ಈಗ ಅಮೆರಿಕದಲ್ಲಿ ಭಾರಿ ಸಂಚಲನ ಮೂಡಿಸಿದೆ. ಎಲಾನ್‌ ಮಸ್ಕ್‌ ಹೇಳಿಕೆ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿವೆ.

VISTARANEWS.COM


on

Elon Musk
Koo

ವಾಷಿಂಗ್ಟನ್‌/ನವದೆಹಲಿ: ಅದು ಲೋಕಸಭೆ ಚುನಾವಣೆ ಇರಲಿ, ಯಾವುದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯೇ ನಡೆಯಲಿ, ಸೋತಾಗಲೆಲ್ಲ ಕಾಂಗ್ರೆಸ್‌ ನಾಯಕರು ಚುನಾವಣೆ ಮತಯಂತ್ರಗಳ (EVM) ದಕ್ಷತೆ ಬಗ್ಗೆ ಆರೋಪ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾರಣ ಯಾರೂ ಇವಿಎಂಗಳ ಬಗ್ಗೆ ತಕರಾರು ಎತ್ತಿಲ್ಲ. ಆದರೆ, ಜಾಗತಿಕ ಎಲೆಕ್ಟ್ರಿಕ್‌ ಕಾರು ಉತ್ಪಾದನಾ ದೈತ್ಯ ಟೆಸ್ಲಾ ಕಂಪನಿಯ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಹಾಗಂತ, ಎಲಾನ್‌ ಮಸ್ಕ್‌ ಅವರು ಭಾರತದ ಇವಿಎಂಗಳ ಬಗ್ಗೆ ಚಕಾರ ಎತ್ತಿಲ್ಲ. ಬದಲಾಗಿ, ಅಮೆರಿಕದ ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. “ಅಮೆರಿಕದಲ್ಲಿ ನಾವು ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷೀನ್‌ಗಳ ಬಳಕೆಯನ್ನು ನಿಲ್ಲಿಸಬೇಕು. ಹ್ಯಾಕರ್‌ಗಳು ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಇವಿಎಂಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆ ಇದೆ. ಇದು ಸಣ್ಣ ಸಂಗತಿಯಾದರೂ, ದೊಡ್ಡ ಸಮಸ್ಯೆಯಾಗಿದೆ” ಎಂದು ಎಲಾನ್‌ ಮಸ್ಕ್‌ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಅಮೆರಿಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ

ಎಲಾನ್‌ ಮಸ್ಕ್‌ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ತಿರುಗೇಟು ನೀಡಿದ್ದಾರೆ. “ಸುರಕ್ಷಿತವಾಗಿರುವ ಡಿಜಿಟಲ್‌ ಹಾರ್ಡ್‌ವೇರ್‌ಅನ್ನು ಯಾರೂ ತಯಾರಿಸಲು ಆಗುವುದಿಲ್ಲ ರೀತಿಯಲ್ಲಿ ನೀವು ಇವಿಎಂ ಕುರಿತು ಸಾಮಾನ್ಯವಾದ ಹೇಳಿಕೆ ನೀಡಿದ್ದೀರಿ. ಇವಿಎಂಗೆ ಇಂಟರ್‌ನೆಟ್‌, ಬ್ಲ್ಯೂಟ್‌, ವೈಫೈ ಸಂಪರ್ಕ ಕೂಡ ಇಲ್ಲ. ಕಾರ್ಖಾನೆಯಲ್ಲಿ ತಯಾರಾದ ಇವಿಎಂಗಳನ್ನು, ಯಾವುದೇ ಕನೆಕ್ಟಿವಿಲ್ಲದ ಇವಿಎಂಗಳನ್ನು ಹ್ಯಾಕ್‌ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್‌ ತೆರೆಯೋಣ” ಎಂದು ಟಾಂಟ್‌ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹೊತ್ತಿನಲ್ಲೂ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ದಕ್ಷತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ಶೇ.100ರಷ್ಟು ತಾಳೆ ಹಾಕಬೇಕು ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸ್ಲಲಿಸಲಾಗಿತ್ತು. ಆದರೆ, ನ್ಯಾಯಾಲಯವು ಅರ್ಜಿಗಳನ್ನು ತಳ್ಳಿಹಾಕಿತ್ತು. ಇನ್ನು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರ ಮಧ್ಯೆಯೇ, ಎಲಾನ್‌ ಮಸ್ಕ್‌ ಅವರು ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Continue Reading

ಉದ್ಯೋಗ

Job Alert: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Job Alert: ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವಿವಿಧ ವಿಷಯಗಳಲ್ಲಿನ ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆ ಇದಾಗಿದೆ. ಒಟ್ಟು 164 ಹುದ್ದೆ ಖಾಲಿ ಇದೆ. ಬಿಇ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2. ದೇಶದ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಿ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (National Fertilizers Limited) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವಿವಿಧ ವಿಷಯಗಳಲ್ಲಿನ ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆ ಇದಾಗಿದೆ. ಒಟ್ಟು 164 ಹುದ್ದೆ ಖಾಲಿ ಇದೆ (NFL Recruitment 2024). ಬಿಇ, ಬಿಎಸ್‌ಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2 (Job Alert).

ಹುದ್ದೆಗಳ ವಿವರ

ಮ್ಯಾನೇಜ್‌ಮೆಂಟ್‌ ಟ್ರೈನಿ (ಕೆಮಿಕಲ್)- 56
ಮ್ಯಾನೇಜ್‌ಮೆಂಟ್‌ ಟ್ರೈನಿ (ಮೆಕ್ಯಾನಿಕಲ್)- 18
ಮ್ಯಾನೇಜ್‌ಮೆಂಟ್‌ ಟ್ರೈನಿ (ಎಲೆಕ್ಟ್ರಿಕಲ್)- 21
ಮ್ಯಾನೇಜ್‌ಮೆಂಟ್‌ ಟ್ರೈನಿ (ಇನ್ಸ್ಟ್ರುಮೆಂಟೇಶನ್)- 17
ಮ್ಯಾನೇಜ್‌ಮೆಂಟ್‌ ಟ್ರೈನಿ (ಕೆಮಿಕಲ್ ಲ್ಯಾಬ್)- 12
ಮ್ಯಾನೇಜ್‌ಮೆಂಟ್‌ ಟ್ರೈನಿ (ಸಿವಿಲ್)- 3
ಮ್ಯಾನೇಜ್‌ಮೆಂಟ್‌ ಟ್ರೈನಿ (ಫೈರ್ & ಸೇಫ್ಟಿ)- 5
ಮ್ಯಾನೇಜ್‌ಮೆಂಟ್‌ ಟ್ರೈನಿ (ಮಾಹಿತಿ ತಂತ್ರಜ್ಞಾನ)- 5
ಮ್ಯಾನೇಜ್‌ಮೆಂಟ್‌ ಟ್ರೈನಿ (ಮೆಟೀರಿಯಲ್ಸ್) -11
ಮ್ಯಾನೇಜ್‌ಮೆಂಟ್‌ ಟ್ರೈನಿ (ಎಚ್ಆರ್)- 16

ವಿದ್ಯಾರ್ಹತೆ ಮತ್ತು ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್ / ಬಿಎಸ್‌ಸಿ / ಎಂಬಿಎ / ಎಂಎಸ್‌ಸಿ / ಪಿಜಿ ಡಿಪ್ಲೋಮಾ / ಪಿಜಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು / ಮಾಜಿ ಯೋಧರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 700 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು. ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಆಯ್ಕೆಯಾದವರಿಗೆ 1 ವರ್ಷ ತರಬೇತಿ ನೀಡಲಾಗುತ್ತದೆ. ಬಳಿಕ 3 ವರ್ಷಗಳ ಒಪ್ಪಂದದ ಮೇರೆಗೆ ನೇಮ ಮಾಡಿಕೊಳ್ಳಲಾಗುತ್ತದೆ. ದೇಶದ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಮಾತ್ರ ಅರ್ಜಿ ಸಲ್ಲಿಸಿ. ಆಯ್ಕೆಯಾದವರಿಗೆ 40,000 ರೂ.-1,40,000 ರೂ. ಮಾಸಿಕ ವೇತನ ಲಭಿಸಲಿದೆ.

NFL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (https://careers.nfl.co.in/).

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://careers.nfl.co.in/).
  • ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
  • ಬಳಿಕ ಲಾಗಿನ್‌ ಆಗಿ ಸೂಕ್ತ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ +91-8660511568 ನಂಬರ್‌ಗೆ ಕರೆ ಮಾಡಿ.

ಇದನ್ನೂ ಓದಿ: Job Alert: ಕಾಟನ್‌ ಕಾರ್ಪೋರೇಷನ್‌ನಲ್ಲಿದೆ 214 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Continue Reading

ವೈರಲ್ ನ್ಯೂಸ್

Viral News: ಮಾನವನ ಬೆರಳಾಯ್ತು, ಇದೀಗ ಐಸ್‌ಕ್ರೀಂನಲ್ಲಿ ಹುಳ ಪತ್ತೆ; ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪ ಎಂದ ನೆಟ್ಟಿಗರು

Viral News: ನೀವು ಐಸ್‌ಕ್ರೀಂ ಪ್ರಿಯರೆ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. ಉತ್ತರ ಪ್ರದೇಶದ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಜರಿಹುಳ ಪತ್ತೆಯಾಗಿದೆ. ಸದ್ಯ ಈ ಫೋಟೊ, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವು ದಿನಗಳ ಹಿಂದೆ ಮುಂಬೈಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿತ್ತು. ಆ ಘಟನೆ ಮರೆಯಾಗುವ ಮುನ್ನವೇ ಈ ಬೆಳವಣಿಗೆ ನಡೆದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

VISTARANEWS.COM


on

Viral News
Koo

ಲಕ್ನೋ: ಇತ್ತೀಚೆಗೆ ಮುಂಬೈಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿತ್ತು. ಈ ಶಾಕ್‌ನಿಂದ ಜನರು ಇನ್ನೂ ಹೊರ ಬಂದಿಲ್ಲ. ಅದಕ್ಕಿಂತ ಮೊದಲೇ ಇನ್ನೊಂದು ಅಂತಹ ಅವಾಂತರ ಎದುರಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ ಪ್ರತಿಷ್ಠಿತ ಬ್ರ್ಯಾಂಡ್‌ನ ಐಸ್‌ಕ್ರೀಂನಲ್ಲಿ ಜರಿಹುಳ (Centipede) ಕಂಡು ಬಂದಿದೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ (Viral News).

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್‌ 12ರಲ್ಲಿ ವಾಸವಾಗಿರುವ ದೀಪಾ ದೇವಿ ಎನ್ನುವ ಮಹಿಳೆ ತನ್ನ 5 ವರ್ಷದ ಮಗನಿಗೆ ಮಾವಿನ ಹಣ್ಣಿನ ಮಿಲ್ಕ್‌ ಶೇಕ್‌ ಮಾಡಿಕೊಡಲು ಆನ್‌ಲೈನ್‌ ಆ್ಯಪ್‌ ಮೂಲಕ ವೆನಿಲ್ಲಾ ಪ್ಲೇವರ್‌ನ ಐಸ್‌ಕ್ರೀಂ ಆರ್ಡರ್‌ ಮಾಡಿದ್ದರು. ಕೆಲಚೇ ಹೊತ್ತಲ್ಲಿ ಪಾರ್ಸಲ್‌ ಏನೋ ಆಕೆಯ ಕೈ ಸೇರಿತು. ಆದರೆ ಬಾಕ್ಸ್‌ ಓಪನ್‌ ಮಾಡಿದಾಗ ಅವರಿಗೆ ಆಘಾತ ಎದುರಾಗಿತ್ತು. ಬಾಕ್ಸ್‌ನ ಮುಚ್ಚಳ ತೆರೆಯುತ್ತಿದ್ದಂತೆ ಐಸ್‌ಕ್ರೀಂನಲ್ಲಿ ಹುದುಗಿದ್ದ ಜರಿಹುಳ ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಐಸ್‌ಕ್ರೀಂ ಬಂದ ಖುಷಿ ಜರ್ರನೆ ಕರಗಿ ಹೋಗಿತ್ತು.

ವಿಡಿಯೊ ವೈರಲ್‌

ಐಸ್‌ಕ್ರೀಂ ಬಾಕ್ಸ್‌ ಮತ್ತು ಅದರಲ್ಲಿನ ಹುಳವನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊದಲ್ಲಿ ದೀಪ ದೇವಿ ಅವರು ಬಾಕ್ಸ್‌ ಮುಚ್ಚಳ ತೆರೆಯುತ್ತಿದ್ದಂತೆ ಅದರಲ್ಲಿ ಹುಳ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಸದ್ಯ ಈ ಘಟನೆ ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹುಳ ಪತ್ತೆಯಾಗಿರುವ ಕುರಿತು ದೀಪಾ ದೇವಿ ಅವರು ಡೆಲಿವರಿ ಮಾಡಿರುವ ಆ್ಯಪ್‌ಗೆ ದೂರು ನೀಡಿದ್ದು, ಕೂಡಲೇ ಅವರು ಹಣವನ್ನು ಹಿಂದಿರುಗಿಸಿದ್ದಾರೆ. ಜತೆಗೆ ಐಸ್‌ಕ್ರೀಂ ಕಂಪನಿಗೆ ಮಾಹಿತಿ ರವಾನಿಸಿದ್ದಾರೆ.

ಈ ವಿಷಯ ಹೊರ ಬೀಳುತ್ತಿದ್ದಂತೆ ಕ್ರಮಕ್ಕೆ ಮುಂದಾದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸೆಕ್ಟರ್ -22 ರಲ್ಲಿರುವ ಆ್ಯಪ್‌ ಸ್ಟೋರ್‌ಗೆ ಭೇಟಿ ನೀಡಿ ಆ ಬ್ಯಾಚ್ ಐಸ್‌ಕ್ರೀಂ ಮಾರಾಟವನ್ನು ನಿಲ್ಲಿಸಿದೆ. ಜತೆಗೆ ಐಸ್‌ಕ್ರೀಂ ತಯಾರಿಕಾ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಭಾನುವಾರ ಪ್ರಕರಣ ದಾಖಲಾಗಿದೆ. ಇನ್ನು ಐಸ್‌ಕ್ರೀಂನಲ್ಲಿ ಏನೇನು ಪತ್ತೆಯಾಗುತ್ತವೋ ಎಂದು ನೆಟ್ಟಿಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

ಮಾನವನ ಬೆರಳು ಪತ್ತೆ

ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಮುಂಬೈಯ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜತೆಗೆ ತನ್ನ ಸಹೋದರನಿಗಾಗಿ ಮೂರು ಬಟರ್ ಸ್ಕಾಚ್ ಕೋನ್ ಐಸ್‌ಕ್ರೀಂ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಮನೆಗೆ ಬಂದ ಐಸ್‌ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿತ್ತು. ಆಗ ಆತ ಸೂಕ್ಷ್ಮವಾಗಿ ನೋಡಿದಾಗ ಮನುಷ್ಯನ ಕೈ ಬೆರಳು ಕಂಡು ಬಂದಿತ್ತು. ಅದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದ. ಈ ಸುದ್ದಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Continue Reading
Advertisement
Goat With Plastic Teeth
ವಿದೇಶ17 mins ago

Goat With Plastic Teeth: ಬಕ್ರೀದ್‌ಗೆ ಬಲಿ ಕೊಡಲು ಪ್ಲಾಸ್ಟಿಕ್‌ ಹಲ್ಲಿರುವ ಮೇಕೆ ಮಾರಾಟ ಮಾಡಿ ಸಿಕ್ಕಿಬಿದ್ದ ಭೂಪ

Double iSmart to release on August 15
ಟಾಲಿವುಡ್19 mins ago

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Rahul Gandhi
ದೇಶ31 mins ago

Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Euro 2024
ಕ್ರೀಡೆ45 mins ago

Euro 2024: ಡೆನ್ಮಾರ್ಕ್ ಸವಾಲನ್ನು ಮೆಟ್ಟಿ ನಿಂತೀತೇ ಸ್ಲೊವೇನಿಯಾ?; ಬಲಾಬಲ ಹೇಗಿದೆ?

Renuka Swamy murder
ಪ್ರಮುಖ ಸುದ್ದಿ47 mins ago

Renuka Swamy Murder:‌ ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!

Elon Musk
ಪ್ರಮುಖ ಸುದ್ದಿ1 hour ago

Elon Musk: ಕೃತಕ ಬುದ್ಧಿಮತ್ತೆ ಬಳಸಿ ಇವಿಎಂಗಳ ಹ್ಯಾಕಿಂಗ್‌ ಸಾಧ್ಯ ಎಲಾನ್‌ ಮಸ್ಕ್‌; ಬಿಜೆಪಿ ನಾಯಕ ಟಾಂಗ್!‌

Shootout Case
ಪ್ರಮುಖ ಸುದ್ದಿ2 hours ago

Shootout Case: ಭೀಮಾ ತೀರದಲ್ಲಿ ಗುಂಡಿನ ದಾಳಿ; ರೌಡಿಶೀಟರ್‌ ಸ್ಥಳದಲ್ಲೇ ಸಾವು

kusina mane
ರಾಮನಗರ2 hours ago

Kusina Mane: ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾದ ಕೂಸಿನ ಮನೆ; ಮಕ್ಕಳ ದಾಖಲಾತಿ ಹೆಚ್ಚಳ

Job Alert
ಉದ್ಯೋಗ2 hours ago

Job Alert: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

murder case in Bengaluru rural
ಬೆಂಗಳೂರು ಗ್ರಾಮಾಂತರ2 hours ago

Murder case : ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದ ಬಾಯ್‌ಫ್ರೆಂಡ್‌ನನ್ನು ಕೊಂದು ಮುಗಿಸಿದ ಮಗ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ3 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌