Dina Bhavishya : ಈ ರಾಶಿಯವರಿಗೆ ಇಂದು ಅತ್ತೆ ಮನೆಯವರಿಂದ ಹಣದ ಪ್ರಯೋಜನ! - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರಿಗೆ ಇಂದು ಅತ್ತೆ ಮನೆಯವರಿಂದ ಹಣದ ಪ್ರಯೋಜನ!

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya 2023 August 17
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಬುಧವಾರ ಪ್ರವೇಶಿಸಿದ್ದಾನೆ. ಶನಿವಾರದವರೆಗೂ ಕನ್ಯಾರಾಶಿಯಲ್ಲಿಯೇ ಇರಲಿದ್ದು, ಇದರಿಂದಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ವೃಶ್ಚಿಕ ರಾಶಿಯವರ ಹಠಮಾರಿ ಧೋರಣೆಯಿಂದಾಗಿ ಮನೆಯಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಬೇಕಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡವು ಅಸಮಾಧಾನ ತರಬಹುದಾಗಿದೆ. ಧನಸ್ಸು ರಾಶಿಯವರಿಗೆ ಅನೇಕ ಒತ್ತಡಗಳಿಂದ ವಿಶ್ರಾಂತಿ ಸಿಗಲಿದೆ. ಆಭರಣ, ಹೂಡಿಕೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಮೇಷ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಉಳಿದ ರಾಶಿಗಳ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-08-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 17:34 ವಾರ: ಗುರುವಾರ
ನಕ್ಷತ್ರ: ಮಘಾ 19:57 ಯೋಗ: ಪರಿಘ 19:28
ಕರಣ: ಭವ 17:34 ಅಮೃತ ಕಾಲ: ಮಧ್ಯಾಹ್ನ 05:16 ರಿಂದ 07:04 ರವರೆಗೆ

ಸೂರ್ಯೋದಯ : 06:08  ಸೂರ್ಯಾಸ್ತ : 06:40

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನೀವು ವಾಸ್ತವವಾಗಿ ಏನನ್ನು ನೋಡಬಯಸುತ್ತೀರೋ ಆ ನಿಟ್ಟಿನಲ್ಲಿ ನಿಮ್ಮ ಚಿಂತನೆ ಮತ್ತು ಶಕ್ತಿಯನ್ನು ವಿನಿಯೋಗಿಸಿ. ಭೂಮಿ ಖರೀದಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ. ಹಣಕಾಸು ವ್ಯವಹಾರಗಳಲ್ಲಿ ಲಾಭ ಆಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಸ್ನೇಹಿತರೊಂದಿಗೆ ಮನೋರಂಜನೆ, ಕಾಲಕಳಿಯುವ ಸಾಧ್ಯತೆ ಇದೆ. ಯಾರ ಹತ್ತಿರವಾದರು ಸಾಲ ಪಡೆದಿದ್ದರೆ ಇಂದು ಸಾಲವನ್ನು ಮರುಪಾವತಿಸಬೇಕಾದ ಪರಿಸ್ಥಿತಿ ಬಂದೊದಗಬಹುದು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗುತ್ತದೆ. ಪ್ರೇಮಿಗಳಿಗೆ ಇಂದು ಹೇಳಿಕೊಳ್ಳುವ ದಿನ ಅಲ್ಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದ್ದು, ಮನಸ್ಸು ಉತ್ಸಾಹದಿಂದ ಕೂಡಿರಲಿದೆ. ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಲಾಭವಾಗುವ ಸಾಧ್ಯತೆ ಇದೆ. ಹೊಸ ಸಂಬಂಧಗಳು ಕೂಡಿ ಬರಲಿದೆ. ಜೊತೆಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಆರ್ಥಿಕವಾಗಿ ಸುದೃಢರಾಗುವಿರಿ. ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಮನೆಯಲ್ಲಿನ ಒತ್ತಡ ನಿಮಗೆ ಸಿಟ್ಟು ತರಿಸಬಹುದು. ಅವುಗಳನ್ನು ದಮನಗೊಳಿಸಲು ಹೋದರೆ ದೈಹಿಕ ಸಮಸ್ಯೆ ಹೆಚ್ಚುತ್ತದೆ. ಕಿರಿಕಿರಿ ಉಂಟುಮಾಡುವ ಪರಿಸ್ಥಿತಿಯಿಂದ ಹೊರಬರುವುದು ಉತ್ತಮ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತಕ್ಕ ಮಟ್ಟಿಗೆ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲವಿದ್ದರೆ ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ ಹಣವನ್ನು ಕಳೆದುಕೊಳ್ಳಬಹುದು. ಸಮಯಕ್ಕೆ ನೀವು ಜಾಗರೂಕರಾಗಿದ್ದರೆ ಅದು ನಿಮಗೆ ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಂಡು ನೀವು ಒಳೆಯದನ್ನು ಅನುಭವಿಸಬಹುದು .ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಹಾಗೂ ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಈ ರಾಶಿಚಕ್ರದ ವಿವಾಹಿತ ಜನರಿಗೆ ಇಂದು ಅತ್ತೆಮನೆಯ ಕಡೆಯಿಂದ ಹಣದ ಪ್ರಯೋಜನವಾಗುವ ಸಾಧ್ಯತೆ ಇದೆ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಭಾವನಾತ್ಮಕ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ಶ್ರೇಷ್ಠ ಜನರೊಡನೆ ಸಂಬಂಧ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮತ್ತು ಯೋಜನೆಗಳನ್ನು ತರುತ್ತದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷವು ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ದೀರ್ಘ ಕಾಲ ಉಳಿದಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ಕೆಲಸದ ಒತ್ತಡ ಇನ್ನೂ ನಿಮ್ಮ ಮನಸ್ಸನ್ನು ಆವರಿಸುತ್ತದೆ. ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ನಿಮ್ಮ ಹಠಮಾರಿ ಧೋರಣೆಯಿಂದಾಗಿ ಮನೆಯಲ್ಲಿ ಕಿರಿಕಿರಿ ಸಾಧ್ಯತೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಕೆಲಸದ ಒತ್ತಡವು ಅಸಮಾಧಾನ ತರಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಅನೇಕ ಒತ್ತಡಗಳಿಂದ ವಿಶ್ರಾಂತಿ ಸಿಗಲಿದೆ. ಆಭರಣ, ಹೂಡಿಕೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಸಿಗಲಿದೆ. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿಯಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಯೋಗಿಯಿಂದ ಏನೆಲ್ಲ ಬದಲಾಯಿತು..? 

Horoscope Today

ಮಕರ: ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಜೀವನದಲ್ಲಿ ಹೊಸ ಪಾಠವನ್ನು ಕಲಿಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ:

ಆತ್ಮವಿಶ್ವಾಸದಿಂದ ಮಾಡುವ ಕಾರ್ಯದಲ್ಲಿ ಯಶಸ್ಸು ,ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಇದನ್ನೂ ಓದಿ : Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

Horoscope Today

ಮೀನ: ಸೂಕ್ತ ವ್ಯಕ್ತಿಗಳಿಂದ ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕೊಡಗು

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

By

Kodagu News
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
Koo

ಮಡಿಕೇರಿ: ನಮ್ಮ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕನ್ನು ನೀಡಿದೆ. ನಮ್ಮ ಇಂದಿನ ಆಚರಣೆಗಳಿಂದ ನಾಳಿನ ಬದುಕಿಗೆ ತೊಂದರೆಯಾಗಬಾರದು. ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದು ಕೂಡ ಇದೇ ಉದ್ದೇಶದಿಂದಲೇ ಹೊರತು, ನಮ್ಮ ಸಂಸ್ಕೃತಿ , ಸಂಪ್ರದಾಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟ ಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕೊಡಗು (Kodagu News) ಪ್ರೆಸ್ ಕ್ಲಬ್ ವತಿಯಿಂದ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಸರಾದಲ್ಲಿ ನಿಗಧಿಗಿಂತ ಹೆಚ್ಚಿನ ಡೆಸಿಬಲ್ ಡಿಜೆ ಬಳಸದಂತೆ ನಿಯಮವೇ ಇದೆ. ಈ ಕಾನೂನನ್ನು ನಾವೂ ಗೌರವಿಸಬೇಕು. ಡಿಜೆಯಿಂದ ಯುವಕರಿಗೆ ಹೆಚ್ಚಿನ ತೊಂದರೆ ಇಲ್ಲ. ಆದರೆ ವಯೋವೃದ್ಧರು, ಮಂಟಪದ ರಕ್ಷಣೆಗೆ ಇರುವ ಪೊಲೀಸರು, ಸಣ್ಣ ಮಕ್ಕಳು, ಪ್ರಾಣಿ ಪಕ್ಷಿಗಳಿಗೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ದೇಶದ ಕಾನೂನಿನಂತೆ ಇಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ಸ್ವಾತಂತ್ರ್ಯಕ್ಕೆ ಯಾರೂ ತೊಂದರೆ ಮಾಡಬಾರದು ಎಂಬ ಉದ್ದೇಶಕ್ಕೆ ಕಾನೂನು ಜಾರಿ ಮಾಡಲಾಗಿದೆ.

ನಮ್ಮ ಹಿರಿಯ ತಲೆಮಾರಿನವರು ಹಿಂದೆ ಹದಿನಾಲ್ಕು, ಹದಿನಾರು ವಯಸ್ಸಿಗೆ ಮದುವೆಯಾಗುತ್ತಿದ್ದರು. ನಾವೂ ಸಂಪ್ರದಾಯದ ಹೆಸರಿನಲ್ಲಿ ಅದನ್ನು ಮುಂದುವರೆಸಿದ್ದೇವು. ಕ್ರಮೇಣ ಕಾನೂನು ಬದಲಾವಣೆಯಿಂದ ಈ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಇಂದು ಈ ಪದ್ಧತಿಯನ್ನು ಕೈ ಬಿಡಲಾಗಿದೆ. ಡಿಜೆ ನಿರ್ಬಂಧ ಹಿಂದಿನ ಉದ್ದೇಶವೂ ಇದೆ. ನಾವು ನಮ್ಮ ಹಿಂದಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳಬೇಕು. ಹಿರಿಯರು ಸಂಪ್ರದಾಯವನ್ನು ಬಿಡದೇ ಆಚರಿಸಿದ್ದಾರೆ. ಅವರು ಉಳಿಸಿ ಬೆಳೆಸಿರುವ ಸಂಪ್ರದಾಯವನ್ನು ಅದೇ ರೀತಿಯನ್ನೇ ಮುನ್ನಡೆಸಿಕೊಂಡು ಮುನ್ನಡೆಯಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ದಸರಾದಲ್ಲೂ ನಮ್ಮ ಸಂಪ್ರದಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಳೆದ ಬಾರಿ ಡೆಸಿಬಲ್‌ ಡಿಜೆ ಬಳಕೆ

ಇಂದು ಎಲ್ಲ ಕಡೆ ಪಬ್‌ಗಳಲ್ಲಿ ಡಿಜೆ, ಲೇಸರ್ ಲೈಟ್ ಕಾಣಸಿಗುತ್ತದೆ. ಆದರೆ ಕೊಡಗಿನ ಒಲಗ ಮೈಸೂರು ದಾಟಿದರೆ ಎಲ್ಲಿ ಇದೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಮ್ಮದಾಗಿರುವಾಗ ಬೇರೆ ಅನುಕರಣೆ ಯಾಕೆ ಬೇಕೆಂದು ಪ್ರಶ್ನಿಸಿದರು.
ಡಿಜೆ ಬಳಸುವಾಗ 55 – 75 ಡೆಸಿಬಲ್ ಒಳಗೆ ಮಾತ್ರ ಇರಬೇಕು. ಇದಕ್ಕಿಂತ ಜಾಸ್ತಿ ಮಾಡಬಾರದು. ಇದಕ್ಕಿಂತ ಹೆಚ್ಚಿನ ಡೆಸಿಬಲ್‌ ಬಳಸಿದ್ದಲ್ಲಿ ಶಬ್ದ ಮಾಲಿನ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ ಅದು ಹಾನಿಕಾರಕವಾಗಲಿದೆ. ಕಳೆದ ಬಾರಿ ದಸರಾದಲ್ಲಿ ನಿಗಧಿತ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್‌ನಲ್ಲಿ ಡಿಜೆ ಬಳಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಶಬ್ದಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದು, ಅವರು ಈ ಬಗ್ಗೆ ಕ್ರಮ ವಹಿಸುತ್ತಾರೆಂದು ಹೇಳಿದರು.

ದಸರಾ ಭದ್ರತೆಗೆ ಹೆಚ್ಚಿನ ಕ್ರಮ

ಈ ಬಾರಿ ದಶಮಂಟಪ ಸಮಿತಿಗಳು ಡಿಜೆ ಸಂಬಂಧದ ನಿಯಮ ಪಾಲಿಸುವ ಭರವಸೆ ಇದೆ. ಲೇಸರ್ ಬಳಕೆಯಿಂದ ತೊಂದರೆ ಆಗುತ್ತದೆ ಎಂಬ ಬಗ್ಗೆಯೂ ಸಮಿತಿಯವರೇ ಗಮನ ಹರಿಸಬೇಕು ಎಂದರು. ದಸರಾ ಭದ್ರತೆಗೆ ಈ ಬಾರಿ ಹೆಚ್ಚಿನ ಕ್ರಮ ವಹಿಸಲಾಗಿದೆ. ಸಾವಿರಕ್ಕೂ ಅಧಿಕ ಪೊಲೀಸರು, ಜಂಬೋ ಟೀಮ್ ದಸರಾ ಸಂದರ್ಭ ಹೆಚ್ಚಿನ ನಿಗಾ ವಹಿಸಲಿದೆ. ವಿಶೇಷವಾಗಿ ಹದಿನೈದು ಮಂದಿಯ, ಆರೇಳು ಜಂಬೋ ತಂಡವನ್ನು ತಯಾರಿ ಮಾಡಲಾಗಿದೆ.

ಗುಂಪಿನಲ್ಲಿ ಗಲಾಟೆ, ಮಹಿಳೆಯರಿಗೆ ಕಿರಿಕಿರಿ ಮಾಡುವುದನ್ನು ತಪ್ಪಿಸುವ ಕಾರ್ಯವನ್ನು ಈ ತಂಡ ಮಾಡಲಿದೆ. ಹಲವು ಪೊಲೀಸರು ದ್ವಿಚಕ್ರ ವಾಹನದಲ್ಲಿಯೂ ನಗರದಲ್ಲಿ ವೀಕ್ಷಣೆಯಲ್ಲಿರುತ್ತಾರೆ. ಟ್ರಾಫಿಕ್ ನಿಯಂತ್ರಣ, ಹೆಲ್ಪ್‌ಲೈನ್‌ ಬಗ್ಗೆಯೂ ಗಮನ ಹರಿಸಲಾಗಿದೆ. ಕಳೆದ ಬಾರಿಯ ಅನುಭವದೊಂದಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ದಸರಾಗೆ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕಳ್ಳರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಇದಕ್ಕಾಗಿಯೇ ಹೆಚ್ಚು ಲೈಟ್ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ ಮೇಲೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ಮಂಟಪಕ್ಕೂ 1 ಪೊಲೀಸ್‌ ಆಫೀಸರ್‌ ಸೇರಿದಂತೆ 8 ಮಂದಿ ಸಿಬ್ಬಂದಿ ಕಾವಲಿರುತ್ತಾರೆ ಎಂದು ಕೆ.ರಾಮರಾಜನ್ ಹೇಳಿದರು. ದಸರಾ ಸಂದರ್ಭ ಯಾವುದೇ ಅಂಗಡಿಯಲ್ಲಿಯೂ ಮುಖವಾಡ ಮಾರಾಟಕ್ಕೆ ಅವಕಾಶ ಇಲ್ಲ. ಮುಖವಾಡ ಮಾರಾಟ ಕಂಡು ಬಂದಲ್ಲಿ ನಗರಸಭೆ ವಶಕ್ಕೆ ಪಡೆಯುತ್ತದೆ ಹಾಗೂ ದಸರಾ ನಂತರ ಹಿಂತಿರುಗಿಸುವ ಕೆಲಸವಾಗುತ್ತದೆ ಎಂದು ಹೇಳಿದರು.

ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ಮಾಹಿತಿ ಕೊಡಿ

ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ತೋಟಗಳ ನಿರ್ವಹಣೆಗೆ ಹೊರ ರಾಜ್ಯದ ಕಾರ್ಮಿಕರ ಅಗತ್ಯವೂ ಇದೆ. ದೇಶದಲ್ಲಿ ಯಾರೂ ಎಲ್ಲಿಗೆ‌ಬೇಕಾದರೂ ತೆರಳಿ ಉದ್ಯೋಗ ಮಾಡುವ ಅವಕಾಶವಿದೆ. ಆದರಿಂದ ಅವರನ್ನು ಬರಬಾರದು ಎನ್ನಲು ಸಾಧ್ಯವಿಲ್ಲ ಅಥವಾ ಅವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದರಿಂದ ನೈಜ ಕಾರ್ಮಿಕರಿಗೆ ಇರುಸು ಮುರುಸು ಉಂಟಾಗುತ್ತದೆ. ಹಾಗಾಗೀ ಕಾರ್ಮಿಕರನ್ನು ನೇಮಿಸುವ ಮುನ್ನ ತೋಟದ ಮಾಲೀಕರೇ ಎಚ್ಚರ ವಹಿಸಬೇಕು. ಅವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೇಂದು ಬಂಗ್ಲಾದೇಶದಿಂದ ಬಂದರೆ ಅವರಿಗೆ ಇಲ್ಲಿರಲು ಅವಕಾಶ ಇಲ್ಲ. ಬಾಂಗ್ಲಾ ದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ನಮಗೆ ಮಾಹಿತಿ ಕೊಡಿ. ನಾವೂ ಪರಿಶೀಲನೆ ನಡೆಸುತ್ತೇವೆ ಎಂದು ಕೆ.ರಾಮರಾಜನ್ ಹೇಳಿದರು.

Continue Reading

ಬೆಂಗಳೂರು

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Actor Darshan : ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್‌ ಪರ ವಾದ ಮಂಡಿಸಿದ ಸಿ.ವಿ ನಾಗೇಶ್‌, ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪ ಇದೆ. ದರ್ಶನ್‌ರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ವಾದಿಸಿದ್ದಾರೆ. ಸುದೀರ್ಘ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

VISTARANEWS.COM


on

By

Actor Darshan Renukaswamy murder case
Koo

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Murder case) ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ನಟ ದರ್ಶನ್ (Actor Darshan), ಪವಿತ್ರಗೌಡ, ರವಿಶಂಕರ್, ಲಕ್ಷ್ಮಣ್‌ರ ಜಾಮೀನು ಅರ್ಜಿ‌ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಶುಕ್ರವಾರ (ಅ.4) ನಡೆಯಿತು. ನಟ ದರ್ಶನ್ ಪರ ಸಿ.ವಿ ನಾಗೇಶ್, ಪವಿತ್ರಗೌಡ ಗೌಡ ಪರ ಟಾಮಿ ಸೆಬಾಸ್ಟಿಯನ್, ರವಿಶಂಕರ್ ಪರ ರಂಗನಾಥ್ ರೆಡ್ಡಿ, ಲಕ್ಷ್ಮಣ್ ಪರ ಸೂರ್ಯ ಮುಕುಂದ್ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ ನಾಗೇಶ್‌, ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪವನ್ನು ಉಲ್ಲೇಖಿಸಿದರು. ವಾದ ಆಲಿಸಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

ಮೊದಲಿಗೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ವಾದ ಶುರು ಮಾಡಿದರು. ದರ್ಶನ್ ವಿರುದ್ಧದ ಆರೋಪದ ಚಾರ್ಜ್ ಶೀಟ್ ಕ್ರೋಢೀಕೃತ ವರದಿ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ ಶೀಟ್‌ನ ಎಲ್ಲಾ ಹೇಳಿಕೆಗಳು, ಸಾಕ್ಷಿಗಳು ಹಾಗೂ ಎಫ್ಎಸ್ಎಲ್ ರಿಪೋರ್ಟ್ ವರದಿಯಾಗಿದೆ. ಪ್ರಕರಣದ ಮೊದಲ ವಿಚಾರಣೆ ( ಟ್ರಯಲ್) ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ಆಗಿದೆ. ಈ ವರದಿಯಿಂದ ನನ್ನ ಕಕ್ಷಿದಾರನಿಗೆ ದೊಡ್ಡ ನಷ್ಟವಾಗಿದೆ. ಸುಪ್ರೀಂ ಕೋರ್ಟ್ 2016ರ ಆದೇಶ ಉಲ್ಲೇಖಿಸಿದ ನಾಗೇಶ್‌, ಪ್ರಕರಣದ ಎವಿಡೆನ್ಸ್ ಮತ್ತು ಮೆರಿಟ್ಸ್ ತುಂಬಾ ದೊಡ್ಡ ಪಬ್ಲಿಸಿಟಿ ಆಗಬಾರದು. ಇಲ್ಲಿ ದರ್ಶನ್ ವಿರುದ್ಧ ದೊಡ್ಡ ಮಟ್ಟದ ಪ್ರಚಾರವಾಗಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಆದೇಶದ ಬಗ್ಗೆ ಸಿ.ವಿ. ನಾಗೇಶ್ ಉಲ್ಲೇಖಿಸಿದರು. ಈ ವೇಳೆ ನನಗೆ ಪ್ರತಿ ನೀಡಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದರು.

ಈ ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಪಬ್ಲಿಸಿಟಿಯೂ ಪರಿಣಾಮ ಬೀರಿದೆ. ಎಫ್ಐಆರ್‌ನಿಂದ ಸಾಕ್ಷಿಗಳ ತನಕ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಂಪೂರ್ಣ ಚಾರ್ಜ್ ಶೀಟ್ ಪ್ರತಿ ಸಿಕ್ಕಿದೆ. ಅವರು ನೇರವಾಗಿ ನ್ಯಾಯಾವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಪ್ರಕರಣದ ಟ್ರಾಯಲ್ ನ್ಯಾಯಾಲಯದಲ್ಲಿ ಆಗಬೇಕು ಹೊರತು ಯಾವುದೇ ಪ್ಯಾನಲ್ ಡಿಸ್ಕ್‌ಷನ್‌ನಲ್ಲಿ ಅಲ್ಲ. ಈ ಅಂಶಗಳ ಪರಿಗಣಿಸಿ ತನಿಖಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಮೊದಲು ಪ್ರಕರಣದ ಸೀಜಿಂಗ್ ವೇಳೆ ಸಿಕ್ಕಿರುವುದು ಏನು? ಮರದ ಕೊಂಬೆಗಳು, ನೈಲಾನ್ ಹಗ್ಗ, ವಾಟರ್ ಬಾಟೆಲ್ ಮತ್ತು ಬಟ್ಟೆ ಮಾತ್ರ. ಆದರೆ ಪೊಲೀಸರು ಅದನ್ನೇ ಇಲ್ಲಿ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಸುಮಾರು ಅರ್ಧ ಅಡಿ ಉದ್ದದ ಕೋಲು, ವಾಟರ್ ಬಾಟೆಲ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಸ್ಟೋನಿ ಬ್ರೂಕ್ ಚಿನ್ಹೆ ಇದೆ. ಕೋಲಿನ ಮೇಲೆ ಪಿಂಕ್ ಮತ್ತು ಕೆಂಪು ಬಣ್ಣದ ನೈಲಾನ್ ಹಗ್ಗ ಸಿಕ್ಕಿರುತ್ತದೆ. ಅದರಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಪ್ರಕರಣದ ಪಂಚನಾಮೆ ಓದಿ ವಾದ ಮುಂದುವರಿಸಿದ ಸಿ.ವಿ ನಾಗೇಶ್ ಇತರ ಆರೋಪಿಗಳ ಸ್ವ ಇಚ್ಛೆ ಹೇಳಿಕೆಯ ಬಗ್ಗೆ ಉಲ್ಲೇಖಿಸಿದರು. ಆರೋಪಿಗಳ ಬಂಧನ ಮೇ 11ರಂದು ಆಗಿದೆ, 12ರಂದು ಸ್ವ ಇಚ್ಚಾ ಹೇಳಿಕೆ ಪಡೆಯಲಾಗಿದೆ. ಹಾಗಾದರೆ ಅವರಿಗೆ ಮೊದಲೆ ಕೇಸ್ ಅಪರಾಧದ ಅರಿವು ಇರುತ್ತಾ ಎಂದು ಸಿ.ವಿ ನಾಗೇಶ್ ಪ್ರಶ್ನಿಸಿದರು.

ಓರ್ವ ವ್ಯಕ್ತಿ ಗುಪ್ತಾಂಗಕ್ಕೆ ಗುದ್ದಿ ಸಾಯಿಸಿದ್ದಾಗಿ ವಿನಯ್ ಹೇಳಿದ್ದ, ಆದಾದ ಬಳಿಕ ಗಿರೀಶ್ ನಾಯ್ಕ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. ಆಗ ಇನ್ಸ್‌ಪೆಕ್ಟರ್‌ ಹೇಳಿದ್ದು, ಅವರ ಕಾನ್ಫಿಡೆನ್ಸ್ ತೆಗೆದುಕೊಂಡು ಕೊಲೆ ಮಾಡಿದವರು ಯಾರು ಅಂತಾ ತಿಳಿದುಕೋ ಅಂದಿದ್ದರಂತೆ. ಕೊಲೆ ಮಾಡಿದ್ದು ದರ್ಶನ್ ಅಭಿಮಾನಿಗಳು ಅಂದಾಗ, ಮೀಡಿಯಾದವರು ಅವರೇ ಕೊಲೆ ಮಾಡಿದ್ದಾರೆ ಅಂತ ಹಾಕುತ್ತಾರೆ ಅಂತಾ ಹೇಳಿದ್ದರಂತೆ. ಇದು ಸಂಪೂರ್ಣವಾಗಿ ತಿರುಚಿದ ಹೇಳಿಕೆಯಾಗಿದೆ. ‌ಪ್ಲ್ಯಾನ್‌ ಮಾಡಿ ಈ ರೀತಿ ಹೇಳಿಕೆ ದಾಖಲಿಸಲಾಗಿದೆ ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಸ್ಥಳ ಮಹಜರ್ ಮಾಡಿದ ಪಿಡಬ್ಲ್ಯೂಡಿ ಎಂಜಿನಿಯರ್ ಹೇಳಿಕೆಯನ್ನು ಓದಿದ ನಾಗೇಶ್‌, ಪ್ರಕರಣದಲ್ಲಿ ಐ ವಿಟ್ನೇಸ್ ಸೆಕ್ಯೂರಿಟಿ ಗಾರ್ಡ್, ಆತನ 164 ಹೇಳಿಕೆ ದಾಖಲಾಗಿದೆ. ಆತನಿಗೆ ಕನ್ನಡವೇ ಬರಲ್ಲ ಆದರೆ ಕನ್ನಡದಲ್ಲಿ ಹೇಳಿಕೆ ದಾಖಲಾಗಿದೆ. ಇದೊಂದು ಕ್ಲಾಸಿಕ್ ಕೇಸ್ ಆಫ್ ಫ್ಯಾಬ್ರಿಕ್ ಎವಿಡೆನ್ಸ್.. ಮರುದಿನ ಬೆಳಗ್ಗೆ ಅಂದರೆ ಮಂಗಳವಾರ 10:30ಕ್ಕೆ ಪೊಲೀಸರು ಬಂದು, ಆಚೆ ಕಳಿಸಿದರು. ಈ ಪ್ರಕಾರ ಪೊಲೀಸರು ಗೋಡಾನ್ ವಶಕ್ಕೆ ಪಡೆದಿದ್ದಾರೆ. ಪ್ಲೇಸ್ ಆಫ್ ಕ್ರೈಂ ಸೀಜ್ ಮಾಡಿದ್ದಾರೆ. ಆದಾದ ಬಳಿಕ ಏಕೆ 12ನೇ ತಾರೀಕಿನ ತನಕ ಸಾಕ್ಷಿಗಳ ಕಲೆ ಹಾಕಲು, ಕೋಲು, ಹಗ್ಗ ಎಲ್ಲಾ ಕಲೆಕ್ಟ್ ಮಾಡಲು ಕಾಯ್ದರು. ಇದೆಲ್ಲವೂ ದರ್ಶನ್ ವಿರುದ್ಧ ಸಾಕ್ಷಿಗಳ ಪ್ಲಾಂಟ್ ಮಾಡಲು ಮಾಡಿದ್ದಾರೆ.

9,10 ಹಾಗೂ 11ನೇ ತಾರೀಖು ಬಿಟ್ಟು ಆಮೇಲೆ ಮಾಡಿದ್ದಾರೆ. ಲಾಕ್ ಮಾಡಿ ಸೀಲ್ ಮಾಡಿದ ಮೇಲೆ ಏಕೆ ತಡವಾಗಿ ರಿಕವರಿ ಮಾಡಿದ್ದಾರೆ. ಅಲ್ಲಿ ಮರದ ಕೊಂಬೆಗಳು, ನೈಲಾನ್ ಹಗ್ಗ, ಎಲ್ಲವನ್ನು ಆಮೇಲೆ ಇಟ್ಟು, ಪ್ಲಾಂಟ್ ಮಾಡಿದ್ದಾರೆ. ನನ್ನ ಕಕ್ಷಿದಾರನ ವಿರುದ್ಧ ಇಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇಷ್ಟು ತಡವಾಗಿ ಮಾಡಿರುವುದು ಅನುಮಾನ ಮೂಡಿಸಿದೆ. ಕೃತ್ಯದಲ್ಲಿ ವೆಫನ್ ಫ್ಯಾಬ್ರಿಕೇಟ್ ಮಾಡಲಾಗಿದೆ ಎಂದು ನಾಗೇಶ್‌ ವಾದಿಸಿದಾಗ, ಮಧ್ಯಪ್ರವೇಶಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ನಾನು ಉತ್ತರ ಆಮೇಲೆ ಹೇಳುತ್ತೇನೆ ಎಂದರು.

ತನಿಖಾಧಿಕಾರಿಗಳ ಲೋಪ?

ಪ್ರಕರಣದಲ್ಲಿ ಪೊಲೀಸರ ಹಾಗೂ ತನಿಖಾಧಿಕಾರಿಯ ಲೋಪದ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಪೊಲೀಸರಿಗೆ ಪ್ರಕರಣ ಕೃತ್ಯದ ಜಾಗ, ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಇತ್ತು. ಆದರೂ ಏಕೆ ತಡವಾಗಿ ಪಂಚನಾಮೆ ಮಾಡಿದರು. 11ನೇ ತಾರೀಖು ಆದರೂ ಮಾಡಬೇಕಿತ್ತು, ಸದ್ಯ ಇರುವ ಮಿಸ್ಟರಿ ಎಂದು ಸಿವಿ‌ ನಾಗೇಶ್ ಪ್ರಕರಣದ ಐಒ ನೀಡಿರುವ ಸಾಕ್ಷಿ ಹೇಳಿಕೆಯ ಅಂಶಗಳ ಓದಿದ್ರು.

ಜೂನ್‌11 ರಂದು ದರ್ಶನ್‌ನಿಂದ ಸ್ವ ಇಚ್ಛೆ ಹೇಳಿಕೆ ಪಡೆದಿದ್ದರೆ, ಆದರೆ ರಿಕವರಿ ಮಾಡಿದ್ದು ಮಾತ್ರ 14 ಮತ್ತು‌15 ರಂದು? ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು. ದರ್ಶನ್ ಹೇಳಿದ‌ ರೀತಿ ಅಂದು ಧರಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಪ್ಪಲಿಯೋ? ಶೂ ವೋ? ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಬಿನ್‌ನಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿನ್‌ನಲ್ಲಿ‌ ಬಟ್ಟೆಗಳು ದೊರಕಿಲ್ಲ. ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ‌ಎಂದು ಟೆರೆಸ್‌ ಹೋಗಿ ನೋಡಲಾಗಿದೆ. ಬಟ್ಟೆ ಒಣಹಾಕಿದ್ದು ಪತ್ತೆಯಾಗಿದೆ. ಸರ್ಫ್ ಸೋಪ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು, ಸರ್ಫ್ ಪೌಡರ್‌ನಲ್ಲಿ ನೆನೆ ಹಾಕಿ ಕೈಯಿಂದ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಒಂದು ರೀತಿ ಅರೇಬಿಯನ್‌ ನೈಟ್ ಕಥೆ ಇದ್ದ ಹಾಗೆ ಇದೆ ಎಂದು ತನಿಖಾ ರೀತಿಯನ್ನು ಸಿ.ವಿ ನಾಗೇಶ್‌ ಪ್ರಶ್ನಿಸಿದರು.

ಹೀಗಿದ್ದಾಗ ಬಟ್ಟೆಯಲ್ಲಿ ಕಲೆ ಇದೆ ಅಂತಾ ರಿಕವರಿ ಅಂತಾರೆ ಹೇಗೆ? ರಿಕವರಿ ಮತ್ತು ಸ್ವ ಇಚ್ಚಾ ಹೇಳಿಕೆಯ ಸಂದೇಹ ಮತ್ತು ವ್ಯತ್ಯಾಸಗಳ ಬಗ್ಗೆ ಸಿ ವಿ‌ ನಾಗೇಶ್ ವಾದಿಸಿದರು. ಸ್ವ ಇಚ್ಚಾ ಹೇಳಿಕೆಗಳ ಸಾಕ್ಷಿಗಳಾಗಿ ಪರಿಗಣಿಸುವ ಬಗ್ಗೆ ಹಿಂದಿನ ಆದೇಶಗಳ ಉಲ್ಲೇಖಿಸಿದರು. ದರ್ಶನ್ ಎಲ್ಲೂ ಸಹ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ನಾನು ಯಾವ ಡ್ರೆಸ್ ಹಾಕಿದ್ದೆ, ಯಾವ ಬಣ್ಣದ ಶರ್ಟ್ ಪ್ಯಾಂಟ್ ಅಂತ ಹೇಳಿಲ್ಲ. ಆದರೂ ಬಹಳ‌ ನಾಜೂಕಾಗಿ ಬ್ಲ್ಯಾಕ್ ಕಲರ್ ಶರ್ಟ್, ಬ್ಲೂ ಜೀನ್ಸ್ ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಕೇಸ್ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಈ ಕೇಸ್‌ನಲ್ಲಿ ಸ್ವ ಇಚ್ಛೆ ಹೇಳಿಕೆ, ಐ ವಿಟ್ನೇಸ್ ಹೇಳಿಕೆ ಮತ್ತು ರಿಕವರಿ ತಾಳೆಯಾಗಬೇಕು. ಆದರೆ ಇಲ್ಲಿ‌ ಒಂದಕ್ಕೊಂದು ತೀರಾ ವ್ಯತ್ಯಾಸ ಇದೆ. ದರ್ಶನ್ ಚಪ್ಪಲಿ ಹಾಕಿದ್ದಾಗಿ‌ ಸ್ವ ಇಚ್ಛೆ ಹೇಳಿಕೆಯಿದೆ. ಆದರೆ ರಿಕವರಿ ಪಂಚನಾಮೆಯಲ್ಲಿ ಶೂ ಅಂತಾ ಹೇಳಲಾಗಿದೆ. ಇಲ್ಲಿ ಸ್ವ ಇಚ್ಛೆ ಹೇಳಿಕೆ ನೈಜವಾಗಿದೆ, ಪಂಚನಾಮೆ ಹೇಳಿಕೆಯೂ ಪ್ಯಾಬ್ರಿಕೇಟ್ ಆಗಿದೆ ಎಂದು ಸಿ.ವಿ ‌ನಾಗೇಶ್ ವಾದಿಸಿದರು. ಬಳಿಕ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಉಳಿದ ಆರೋಪಿಗಳ ಜಾಮೀನು ಅರ್ಜಿಗಳು ಮುಂದೂಡಿಕೆ ಆಗಿವೆ.

Continue Reading

ಬೆಂಗಳೂರು

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.

VISTARANEWS.COM


on

By

Bomb threat to BMS, MS Ramayya and four other colleges in Basavanagudi Bengaluru
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್‌ (Bomb Threat) ಬಂದಿದೆ. ಕಾಲೇಜಿಗೆ Sattanathapuram Be Shekhar ಎಂಬ ಇ-ಮೇಲ್‌ ಐಡಿಯಿಂದ ದುಷ್ಕರ್ಮಿಗಳು ಸಂದೇಶ ಕಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಕಾಲೇಜಿಗೆ ಬಾಂಬ್ ಬೆದರಿಕೆ ಮಸೇಜ್‌ ಕಳಿಸಿದ್ದಾರೆ. ಇ- ಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿಎಂಎಸ್‌ ಕಾಲೇಜಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಹಾಗೂ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sattanathapuram Be Shekhar ಎಂಬ ಇ- ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಬಂದಿದ್ದು, ಸುಧಾರಿತ ಹೈಡ್ರೋಜನ್ IEDs ಇಟ್ಟಿದ್ದು, 5 ಗಂಟೆ ಒಳಗೆ ಕಾಲೇಜು ಬಿಟ್ಟು ಹೊರಹೋಗುವಂತೆ ಸಂದೇಶ ಕಳಿಸಿದ್ದಾರೆ. ಬಿಎಂಎಸ್ ಕಾಲೇಜ್ ಅಲ್ಲದೆ ಬಿಐಟಿ, ಎಂಎಸ್ ಆರ್ ಐಟಿ ಕಾಲೇಜುಗಳಿಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. ದಕ್ಷಿಣ ವಿಭಾಗದ ಮೂರು ಕಾಲೇಜುಗಳಿಗೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಇ‌ಮೇಲ್ ಬಂದಿದೆ. ಜತೆಗೆ ಕೇಂದ್ರ ವಿಭಾಗದ ಮತ್ತೊಂದು ಕಾಲೇಜಿಗೂ ಬಾಂಬ್ ಬೆದರಿಕೆ ಬಂದಿದೆ. ಪ್ರತಿಷ್ಠಿತ ಎಂಎಸ್ ರಾಮಯ್ಯ ಕಾಲೇಜಿಗೂ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ ಮೇಲ್ ಮಾಡಿದ್ದಾರೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

ಚಿತ್ರದುರ್ಗ

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Murder Case : ಪ್ರಿಯಕರನಿಗಾಗಿ ಪಾಪಿ ಪತ್ನಿ ಪತಿಗೆ ಚಟ್ಟ ಕಟ್ಟಿದ್ದಾಳೆ. ನಿದ್ರೆ ಮಾತ್ರೆ ಕೊಟ್ಟು ಬಳಿಕ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಳು. ಬಳಿಕ ಹೊಟ್ಟೆ ಉರಿಯಿಂದ ಪತಿ ಸತ್ತಿದ್ದಾನೆ ಎಂದು ಕಥೆ ಕಟ್ಟಿ ಈಗ ಜೈಲುಪಾಲಾಗಿದ್ದಾಳೆ.

VISTARANEWS.COM


on

By

Murder case
Koo

ಚಿತ್ರದುರ್ಗ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜತೆ ಸೇರಿ ಪಾಪಿ ಪತ್ನಿ ಗಂಡನ (Murder Case) ಹತ್ಯೆಗೈದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ರಾಘವೇಂದ್ರ (35) ಕೊಲೆಯಾದವನು.

ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರಿಯಕರ ರಾಜಣ್ಣ ಜತೆ ಸೇರಿ ಪತಿ ರಾಘವೇಂದ್ರನನ್ನು ಕೊಂದಿದ್ದಾರೆ. ರಾಘವೇಂದ್ರನಿಗೆ ಮೊದಲಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದಾರೆ. ಬಳಿಕ ನಿದ್ರೆಗೆ ಜಾರುತ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಪತಿಯನ್ನು ಕೊಂದು ಹೊಟ್ಟೆ ಉರಿಯಿಂದ ಸತ್ತಿದ್ದಾನೆ ಎಂದು ದಿವ್ಯ ನಾಟಕವಾಡಿದ್ದಳು.

ಮೊದಲು ಯುಡಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆಯಲ್ಲಿ ಕೊಲೆ ಸತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಇದು ಕೊಲೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೂಡಲೇ ದಿವ್ಯ, ಮಾರಣ್ಣ, ರಾಜಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಹನುಮಂತಪ್ಪ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ:Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

ಯಾದಗಿರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಹಳ್ಳದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ರವಿ ಹಿರೇಮಠ (28) ಮೃತ ದುರ್ದೈವಿ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದ ರವಿ ಬ್ಯಾಂಕ್ ಲೋನ್ ಮಾಡಿಸುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದ. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ.

ರವಿ ಕಾಣದೆ ಇದ್ದಾಗ ಕಂಗಲಾದ ಪೋಷಕರು ನಾಪತ್ತೆ ಕೇಸ್‌ ದಾಖಲಿಸಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆತನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಸುನಿಲ್‌ ಎಂಬಾತ ಈ ವೇಳೆ ರವಿ ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂದು ಸುಳ್ಳು ಹೇಳಿ ಸತಾಯಿಸಿದ್ದ. ಈ ನಡುವೆ ರವಿ ಪೋಷಕರಿಗೆ ಹಣ ಫೋನ್ ಪೇ ಮಾಡಿ ನಿಮ್ಮ ಮಗನ ತೋರಿಸುತ್ತೇನೆ ಎಂದಿದ್ದ. ಹಣ ಹಾಕಿದ ಬಳಿಕ ನಾನು‌ ನಿಮ್ಮ ಮಗನನ್ನೇ ನೋಡಿಲ್ಲ ಎಂದಿದ್ದ. ಈಗ ಹಣಕಾಸಿನ ವಿಚಾರಕ್ಕಾಗಿ ಸುನಿಲ್ ಎಂಬಾತನೆ ಕೊಲೆ ಮಾಡಿರುವ ಶಂಕೆ ಇದೆ. ತಮ್ಮ ಮಗನನ್ನು ಸುನಿಲ್ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪತ್ತೆಗೆ ಕೆಂಭಾವಿ ಪೊಲೀಸರು ಜಾಲ ಬೀಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
navaratri
ಬೆಂಗಳೂರು3 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು4 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು4 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು4 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು5 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು6 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ7 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು8 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು8 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು9 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ದಿನ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌