Dina Bhavishya : ಆಪ್ತರೊಂದಿಗೆ ಈ ರಾಶಿಯವರು ಬ್ಯುಸಿನೆಸ್‌ ಮಾಡಲೇಬೇಡಿ! - Vistara News

ಪ್ರಮುಖ ಸುದ್ದಿ

Dina Bhavishya : ಆಪ್ತರೊಂದಿಗೆ ಈ ರಾಶಿಯವರು ಬ್ಯುಸಿನೆಸ್‌ ಮಾಡಲೇಬೇಡಿ!

Dina Bhavishya : ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ತದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಶುಕ್ರವಾರ ಬೆಳಗ್ಗೆ 09:24ಕ್ಕೆ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯದ ಕೋರಬಹುದು. ವೃಷಭ ರಾಶಿಯವರಿಗೆ ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಅನಿವಾರ್ಯ ಪ್ರಸಂಗಗಳು ಕಟಕ ರಾಶಿಯವರಿಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ. ಧನಸ್ಸು ರಾಶಿಯವರು ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (2-09-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ತದಿಗೆ 20:48 ವಾರ: ಶನಿವಾರ
ನಕ್ಷತ್ರ: ಉತ್ತರ ಭಾದ್ರಪದ 12:29 ಯೋಗ: ಶೂಲ 09:20
ಕರಣ: ವಣಿಜ 10:15 ಅಮೃತ ಕಾಲ: ಬೆಳಗ್ಗೆ 08:12 ರಿಂದ 09:38 ರವರೆಗೆ
ದಿನದ ವಿಶೇಷ: ರಾಘವೇಂದ್ರಸ್ವಾಮಿ ಉತ್ತರಾರಾಧನೆ, ಶ್ರಾವಣ ಶನಿವಾರ

ಸೂರ್ಯೋದಯ : 06:15  ಸೂರ್ಯಾಸ್ತ : 06:46

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಕೆಲವು ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆಪ್ತರಿಂದ ಸಹಾಯದ ಕೋರಬಹುದು. ಒತ್ತಡದ ಕೆಲಸದಿಂದಾಗಿ ದೈಹಿಕವಾಗಿ ಬಳಲುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢವಾಗಿದೆ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳು ಮಾಡಬಹುದು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ನಿಮ್ಮ ಹಾಸ್ಯದ ನಡೆ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರಾಗಲಿದೆ. ಆರ್ಥಿಕವಾಗಿ ಪ್ರಗತಿ.
ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವ ಸಾಧ್ಯತೆ ಇದೆ. ದಿಢೀರ್‌ ಪ್ರಯಾಣ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣ. ಅನಾವಶ್ಯಕ ಖರ್ಚು. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸುವ ಸಾಧ್ಯತೆ ಇದೆ. ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಆರ್ಥಿಕವಾಗಿ ಲಾಭ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ, ಸಂತೋಷವನ್ನು ಅನುಭವಿಸಲಿದ್ದೀರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ತರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ.
ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದಿಢೀರ್‌ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ.
ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ಇಂದು ಪ್ರಮುಖ ನಿರ್ಧಾರಗಳಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2

Horoscope Today

ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8

ಮನೆಯಲ್ಲಿ ಒಡೆದುಹೋದ ಕನ್ನಡಿಯಿದ್ದರೆ ಒಳಿತಲ್ಲವೇ?

Horoscope Today

ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ, ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ.
ದಿಢೀರ್ ಪ್ರಯಾಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣ, ಉದ್ಯೋಗಿಗಳಿಗೆ ಮಿಶ್ರ ಫಲ, ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

Horoscope Today

ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Actor Darshan : ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್‌ ಪರ ವಾದ ಮಂಡಿಸಿದ ಸಿ.ವಿ ನಾಗೇಶ್‌, ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪ ಇದೆ. ದರ್ಶನ್‌ರನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ವಾದಿಸಿದ್ದಾರೆ. ಸುದೀರ್ಘ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

VISTARANEWS.COM


on

By

Actor Darshan Renukaswamy murder case
Koo

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Murder case) ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ನಟ ದರ್ಶನ್ (Actor Darshan), ಪವಿತ್ರಗೌಡ, ರವಿಶಂಕರ್, ಲಕ್ಷ್ಮಣ್‌ರ ಜಾಮೀನು ಅರ್ಜಿ‌ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಶುಕ್ರವಾರ (ಅ.4) ನಡೆಯಿತು. ನಟ ದರ್ಶನ್ ಪರ ಸಿ.ವಿ ನಾಗೇಶ್, ಪವಿತ್ರಗೌಡ ಗೌಡ ಪರ ಟಾಮಿ ಸೆಬಾಸ್ಟಿಯನ್, ರವಿಶಂಕರ್ ಪರ ರಂಗನಾಥ್ ರೆಡ್ಡಿ, ಲಕ್ಷ್ಮಣ್ ಪರ ಸೂರ್ಯ ಮುಕುಂದ್ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ ನಾಗೇಶ್‌, ದೋಷಾರೋಪ ಪಟ್ಟಿಯಲ್ಲಿ ತನಿಖಾಧಿಕಾರಿಗಳ ಲೋಪವನ್ನು ಉಲ್ಲೇಖಿಸಿದರು. ವಾದ ಆಲಿಸಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

ಮೊದಲಿಗೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ವಾದ ಶುರು ಮಾಡಿದರು. ದರ್ಶನ್ ವಿರುದ್ಧದ ಆರೋಪದ ಚಾರ್ಜ್ ಶೀಟ್ ಕ್ರೋಢೀಕೃತ ವರದಿ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ ಶೀಟ್‌ನ ಎಲ್ಲಾ ಹೇಳಿಕೆಗಳು, ಸಾಕ್ಷಿಗಳು ಹಾಗೂ ಎಫ್ಎಸ್ಎಲ್ ರಿಪೋರ್ಟ್ ವರದಿಯಾಗಿದೆ. ಪ್ರಕರಣದ ಮೊದಲ ವಿಚಾರಣೆ ( ಟ್ರಯಲ್) ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ಆಗಿದೆ. ಈ ವರದಿಯಿಂದ ನನ್ನ ಕಕ್ಷಿದಾರನಿಗೆ ದೊಡ್ಡ ನಷ್ಟವಾಗಿದೆ. ಸುಪ್ರೀಂ ಕೋರ್ಟ್ 2016ರ ಆದೇಶ ಉಲ್ಲೇಖಿಸಿದ ನಾಗೇಶ್‌, ಪ್ರಕರಣದ ಎವಿಡೆನ್ಸ್ ಮತ್ತು ಮೆರಿಟ್ಸ್ ತುಂಬಾ ದೊಡ್ಡ ಪಬ್ಲಿಸಿಟಿ ಆಗಬಾರದು. ಇಲ್ಲಿ ದರ್ಶನ್ ವಿರುದ್ಧ ದೊಡ್ಡ ಮಟ್ಟದ ಪ್ರಚಾರವಾಗಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಆದೇಶದ ಬಗ್ಗೆ ಸಿ.ವಿ. ನಾಗೇಶ್ ಉಲ್ಲೇಖಿಸಿದರು. ಈ ವೇಳೆ ನನಗೆ ಪ್ರತಿ ನೀಡಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದರು.

ಈ ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಪಬ್ಲಿಸಿಟಿಯೂ ಪರಿಣಾಮ ಬೀರಿದೆ. ಎಫ್ಐಆರ್‌ನಿಂದ ಸಾಕ್ಷಿಗಳ ತನಕ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಂಪೂರ್ಣ ಚಾರ್ಜ್ ಶೀಟ್ ಪ್ರತಿ ಸಿಕ್ಕಿದೆ. ಅವರು ನೇರವಾಗಿ ನ್ಯಾಯಾವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಪ್ರಕರಣದ ಟ್ರಾಯಲ್ ನ್ಯಾಯಾಲಯದಲ್ಲಿ ಆಗಬೇಕು ಹೊರತು ಯಾವುದೇ ಪ್ಯಾನಲ್ ಡಿಸ್ಕ್‌ಷನ್‌ನಲ್ಲಿ ಅಲ್ಲ. ಈ ಅಂಶಗಳ ಪರಿಗಣಿಸಿ ತನಿಖಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಮೊದಲು ಪ್ರಕರಣದ ಸೀಜಿಂಗ್ ವೇಳೆ ಸಿಕ್ಕಿರುವುದು ಏನು? ಮರದ ಕೊಂಬೆಗಳು, ನೈಲಾನ್ ಹಗ್ಗ, ವಾಟರ್ ಬಾಟೆಲ್ ಮತ್ತು ಬಟ್ಟೆ ಮಾತ್ರ. ಆದರೆ ಪೊಲೀಸರು ಅದನ್ನೇ ಇಲ್ಲಿ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಸುಮಾರು ಅರ್ಧ ಅಡಿ ಉದ್ದದ ಕೋಲು, ವಾಟರ್ ಬಾಟೆಲ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಸ್ಟೋನಿ ಬ್ರೂಕ್ ಚಿನ್ಹೆ ಇದೆ. ಕೋಲಿನ ಮೇಲೆ ಪಿಂಕ್ ಮತ್ತು ಕೆಂಪು ಬಣ್ಣದ ನೈಲಾನ್ ಹಗ್ಗ ಸಿಕ್ಕಿರುತ್ತದೆ. ಅದರಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಪ್ರಕರಣದ ಪಂಚನಾಮೆ ಓದಿ ವಾದ ಮುಂದುವರಿಸಿದ ಸಿ.ವಿ ನಾಗೇಶ್ ಇತರ ಆರೋಪಿಗಳ ಸ್ವ ಇಚ್ಛೆ ಹೇಳಿಕೆಯ ಬಗ್ಗೆ ಉಲ್ಲೇಖಿಸಿದರು. ಆರೋಪಿಗಳ ಬಂಧನ ಮೇ 11ರಂದು ಆಗಿದೆ, 12ರಂದು ಸ್ವ ಇಚ್ಚಾ ಹೇಳಿಕೆ ಪಡೆಯಲಾಗಿದೆ. ಹಾಗಾದರೆ ಅವರಿಗೆ ಮೊದಲೆ ಕೇಸ್ ಅಪರಾಧದ ಅರಿವು ಇರುತ್ತಾ ಎಂದು ಸಿ.ವಿ ನಾಗೇಶ್ ಪ್ರಶ್ನಿಸಿದರು.

ಓರ್ವ ವ್ಯಕ್ತಿ ಗುಪ್ತಾಂಗಕ್ಕೆ ಗುದ್ದಿ ಸಾಯಿಸಿದ್ದಾಗಿ ವಿನಯ್ ಹೇಳಿದ್ದ, ಆದಾದ ಬಳಿಕ ಗಿರೀಶ್ ನಾಯ್ಕ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. ಆಗ ಇನ್ಸ್‌ಪೆಕ್ಟರ್‌ ಹೇಳಿದ್ದು, ಅವರ ಕಾನ್ಫಿಡೆನ್ಸ್ ತೆಗೆದುಕೊಂಡು ಕೊಲೆ ಮಾಡಿದವರು ಯಾರು ಅಂತಾ ತಿಳಿದುಕೋ ಅಂದಿದ್ದರಂತೆ. ಕೊಲೆ ಮಾಡಿದ್ದು ದರ್ಶನ್ ಅಭಿಮಾನಿಗಳು ಅಂದಾಗ, ಮೀಡಿಯಾದವರು ಅವರೇ ಕೊಲೆ ಮಾಡಿದ್ದಾರೆ ಅಂತ ಹಾಕುತ್ತಾರೆ ಅಂತಾ ಹೇಳಿದ್ದರಂತೆ. ಇದು ಸಂಪೂರ್ಣವಾಗಿ ತಿರುಚಿದ ಹೇಳಿಕೆಯಾಗಿದೆ. ‌ಪ್ಲ್ಯಾನ್‌ ಮಾಡಿ ಈ ರೀತಿ ಹೇಳಿಕೆ ದಾಖಲಿಸಲಾಗಿದೆ ಎಂದು ದರ್ಶನ್ ಪರ ಸಿ ವಿ ನಾಗೇಶ್ ವಾದಿಸಿದರು.

ಸ್ಥಳ ಮಹಜರ್ ಮಾಡಿದ ಪಿಡಬ್ಲ್ಯೂಡಿ ಎಂಜಿನಿಯರ್ ಹೇಳಿಕೆಯನ್ನು ಓದಿದ ನಾಗೇಶ್‌, ಪ್ರಕರಣದಲ್ಲಿ ಐ ವಿಟ್ನೇಸ್ ಸೆಕ್ಯೂರಿಟಿ ಗಾರ್ಡ್, ಆತನ 164 ಹೇಳಿಕೆ ದಾಖಲಾಗಿದೆ. ಆತನಿಗೆ ಕನ್ನಡವೇ ಬರಲ್ಲ ಆದರೆ ಕನ್ನಡದಲ್ಲಿ ಹೇಳಿಕೆ ದಾಖಲಾಗಿದೆ. ಇದೊಂದು ಕ್ಲಾಸಿಕ್ ಕೇಸ್ ಆಫ್ ಫ್ಯಾಬ್ರಿಕ್ ಎವಿಡೆನ್ಸ್.. ಮರುದಿನ ಬೆಳಗ್ಗೆ ಅಂದರೆ ಮಂಗಳವಾರ 10:30ಕ್ಕೆ ಪೊಲೀಸರು ಬಂದು, ಆಚೆ ಕಳಿಸಿದರು. ಈ ಪ್ರಕಾರ ಪೊಲೀಸರು ಗೋಡಾನ್ ವಶಕ್ಕೆ ಪಡೆದಿದ್ದಾರೆ. ಪ್ಲೇಸ್ ಆಫ್ ಕ್ರೈಂ ಸೀಜ್ ಮಾಡಿದ್ದಾರೆ. ಆದಾದ ಬಳಿಕ ಏಕೆ 12ನೇ ತಾರೀಕಿನ ತನಕ ಸಾಕ್ಷಿಗಳ ಕಲೆ ಹಾಕಲು, ಕೋಲು, ಹಗ್ಗ ಎಲ್ಲಾ ಕಲೆಕ್ಟ್ ಮಾಡಲು ಕಾಯ್ದರು. ಇದೆಲ್ಲವೂ ದರ್ಶನ್ ವಿರುದ್ಧ ಸಾಕ್ಷಿಗಳ ಪ್ಲಾಂಟ್ ಮಾಡಲು ಮಾಡಿದ್ದಾರೆ.

9,10 ಹಾಗೂ 11ನೇ ತಾರೀಖು ಬಿಟ್ಟು ಆಮೇಲೆ ಮಾಡಿದ್ದಾರೆ. ಲಾಕ್ ಮಾಡಿ ಸೀಲ್ ಮಾಡಿದ ಮೇಲೆ ಏಕೆ ತಡವಾಗಿ ರಿಕವರಿ ಮಾಡಿದ್ದಾರೆ. ಅಲ್ಲಿ ಮರದ ಕೊಂಬೆಗಳು, ನೈಲಾನ್ ಹಗ್ಗ, ಎಲ್ಲವನ್ನು ಆಮೇಲೆ ಇಟ್ಟು, ಪ್ಲಾಂಟ್ ಮಾಡಿದ್ದಾರೆ. ನನ್ನ ಕಕ್ಷಿದಾರನ ವಿರುದ್ಧ ಇಟ್ಟು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇಷ್ಟು ತಡವಾಗಿ ಮಾಡಿರುವುದು ಅನುಮಾನ ಮೂಡಿಸಿದೆ. ಕೃತ್ಯದಲ್ಲಿ ವೆಫನ್ ಫ್ಯಾಬ್ರಿಕೇಟ್ ಮಾಡಲಾಗಿದೆ ಎಂದು ನಾಗೇಶ್‌ ವಾದಿಸಿದಾಗ, ಮಧ್ಯಪ್ರವೇಶಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಇದಕ್ಕೆ ನಾನು ಉತ್ತರ ಆಮೇಲೆ ಹೇಳುತ್ತೇನೆ ಎಂದರು.

ತನಿಖಾಧಿಕಾರಿಗಳ ಲೋಪ?

ಪ್ರಕರಣದಲ್ಲಿ ಪೊಲೀಸರ ಹಾಗೂ ತನಿಖಾಧಿಕಾರಿಯ ಲೋಪದ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಪೊಲೀಸರಿಗೆ ಪ್ರಕರಣ ಕೃತ್ಯದ ಜಾಗ, ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಇತ್ತು. ಆದರೂ ಏಕೆ ತಡವಾಗಿ ಪಂಚನಾಮೆ ಮಾಡಿದರು. 11ನೇ ತಾರೀಖು ಆದರೂ ಮಾಡಬೇಕಿತ್ತು, ಸದ್ಯ ಇರುವ ಮಿಸ್ಟರಿ ಎಂದು ಸಿವಿ‌ ನಾಗೇಶ್ ಪ್ರಕರಣದ ಐಒ ನೀಡಿರುವ ಸಾಕ್ಷಿ ಹೇಳಿಕೆಯ ಅಂಶಗಳ ಓದಿದ್ರು.

ಜೂನ್‌11 ರಂದು ದರ್ಶನ್‌ನಿಂದ ಸ್ವ ಇಚ್ಛೆ ಹೇಳಿಕೆ ಪಡೆದಿದ್ದರೆ, ಆದರೆ ರಿಕವರಿ ಮಾಡಿದ್ದು ಮಾತ್ರ 14 ಮತ್ತು‌15 ರಂದು? ಅಲ್ಲಿಯವರೆಗೆ ಪೊಲೀಸರು ಏನು ಮಾಡುತ್ತಾ ಇದ್ದರು. ದರ್ಶನ್ ಹೇಳಿದ‌ ರೀತಿ ಅಂದು ಧರಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ದರ್ಶನ್ ಅಂದು ಧರಿಸಿದ್ದು ಚಪ್ಪಲಿಯೋ? ಶೂ ವೋ? ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಬಿನ್‌ನಲ್ಲಿ ಹಾಕಿದ್ದಾಗಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಪಂಚನಾಮೆ ವೇಳೆ ಬಿನ್‌ನಲ್ಲಿ‌ ಬಟ್ಟೆಗಳು ದೊರಕಿಲ್ಲ. ಮನೆ ಕೆಲಸದಾಕೆ ಬಟ್ಟೆ ಒಗೆದಿರಬಹುದು ‌ಎಂದು ಟೆರೆಸ್‌ ಹೋಗಿ ನೋಡಲಾಗಿದೆ. ಬಟ್ಟೆ ಒಣಹಾಕಿದ್ದು ಪತ್ತೆಯಾಗಿದೆ. ಸರ್ಫ್ ಸೋಪ್‌ನಲ್ಲಿ ತೊಳೆದಿದ್ದಾರೆ ಅಂತಲೂ ಉಲ್ಲೇಖ ಮಾಡಲಾಗಿದೆ. ಮನೆ ಕೆಲಸದಾಕೆ ಹೇಳಿಕೆ ಪಡೆದಿದ್ದು, ಸರ್ಫ್ ಪೌಡರ್‌ನಲ್ಲಿ ನೆನೆ ಹಾಕಿ ಕೈಯಿಂದ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಒಂದು ರೀತಿ ಅರೇಬಿಯನ್‌ ನೈಟ್ ಕಥೆ ಇದ್ದ ಹಾಗೆ ಇದೆ ಎಂದು ತನಿಖಾ ರೀತಿಯನ್ನು ಸಿ.ವಿ ನಾಗೇಶ್‌ ಪ್ರಶ್ನಿಸಿದರು.

ಹೀಗಿದ್ದಾಗ ಬಟ್ಟೆಯಲ್ಲಿ ಕಲೆ ಇದೆ ಅಂತಾ ರಿಕವರಿ ಅಂತಾರೆ ಹೇಗೆ? ರಿಕವರಿ ಮತ್ತು ಸ್ವ ಇಚ್ಚಾ ಹೇಳಿಕೆಯ ಸಂದೇಹ ಮತ್ತು ವ್ಯತ್ಯಾಸಗಳ ಬಗ್ಗೆ ಸಿ ವಿ‌ ನಾಗೇಶ್ ವಾದಿಸಿದರು. ಸ್ವ ಇಚ್ಚಾ ಹೇಳಿಕೆಗಳ ಸಾಕ್ಷಿಗಳಾಗಿ ಪರಿಗಣಿಸುವ ಬಗ್ಗೆ ಹಿಂದಿನ ಆದೇಶಗಳ ಉಲ್ಲೇಖಿಸಿದರು. ದರ್ಶನ್ ಎಲ್ಲೂ ಸಹ ತನ್ನ ಸ್ವ ಇಚ್ಚಾ ಹೇಳಿಕೆಯಲ್ಲಿ ನಾನು ಯಾವ ಡ್ರೆಸ್ ಹಾಕಿದ್ದೆ, ಯಾವ ಬಣ್ಣದ ಶರ್ಟ್ ಪ್ಯಾಂಟ್ ಅಂತ ಹೇಳಿಲ್ಲ. ಆದರೂ ಬಹಳ‌ ನಾಜೂಕಾಗಿ ಬ್ಲ್ಯಾಕ್ ಕಲರ್ ಶರ್ಟ್, ಬ್ಲೂ ಜೀನ್ಸ್ ವಶಪಡಿಸಿಕೊಂಡಿದ್ದಾರೆ.

ಸುಬ್ರಮಣ್ಯ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಕೇಸ್ ಬಗ್ಗೆ ಉಲ್ಲೇಖಿಸಿದ ನಾಗೇಶ್‌, ಈ ಕೇಸ್‌ನಲ್ಲಿ ಸ್ವ ಇಚ್ಛೆ ಹೇಳಿಕೆ, ಐ ವಿಟ್ನೇಸ್ ಹೇಳಿಕೆ ಮತ್ತು ರಿಕವರಿ ತಾಳೆಯಾಗಬೇಕು. ಆದರೆ ಇಲ್ಲಿ‌ ಒಂದಕ್ಕೊಂದು ತೀರಾ ವ್ಯತ್ಯಾಸ ಇದೆ. ದರ್ಶನ್ ಚಪ್ಪಲಿ ಹಾಕಿದ್ದಾಗಿ‌ ಸ್ವ ಇಚ್ಛೆ ಹೇಳಿಕೆಯಿದೆ. ಆದರೆ ರಿಕವರಿ ಪಂಚನಾಮೆಯಲ್ಲಿ ಶೂ ಅಂತಾ ಹೇಳಲಾಗಿದೆ. ಇಲ್ಲಿ ಸ್ವ ಇಚ್ಛೆ ಹೇಳಿಕೆ ನೈಜವಾಗಿದೆ, ಪಂಚನಾಮೆ ಹೇಳಿಕೆಯೂ ಪ್ಯಾಬ್ರಿಕೇಟ್ ಆಗಿದೆ ಎಂದು ಸಿ.ವಿ ‌ನಾಗೇಶ್ ವಾದಿಸಿದರು. ಬಳಿಕ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಉಳಿದ ಆರೋಪಿಗಳ ಜಾಮೀನು ಅರ್ಜಿಗಳು ಮುಂದೂಡಿಕೆ ಆಗಿವೆ.

Continue Reading

ಬೆಂಗಳೂರು

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.

VISTARANEWS.COM


on

By

Bomb threat to BMS, MS Ramayya and four other colleges in Basavanagudi Bengaluru
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್‌ (Bomb Threat) ಬಂದಿದೆ. ಕಾಲೇಜಿಗೆ Sattanathapuram Be Shekhar ಎಂಬ ಇ-ಮೇಲ್‌ ಐಡಿಯಿಂದ ದುಷ್ಕರ್ಮಿಗಳು ಸಂದೇಶ ಕಳಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಕಾಲೇಜಿಗೆ ಬಾಂಬ್ ಬೆದರಿಕೆ ಮಸೇಜ್‌ ಕಳಿಸಿದ್ದಾರೆ. ಇ- ಮೇಲ್ ನೋಡಿದ ಕೂಡಲೇ ಕಾಲೇಜು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿಎಂಎಸ್‌ ಕಾಲೇಜಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಹಾಗೂ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sattanathapuram Be Shekhar ಎಂಬ ಇ- ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಬಂದಿದ್ದು, ಸುಧಾರಿತ ಹೈಡ್ರೋಜನ್ IEDs ಇಟ್ಟಿದ್ದು, 5 ಗಂಟೆ ಒಳಗೆ ಕಾಲೇಜು ಬಿಟ್ಟು ಹೊರಹೋಗುವಂತೆ ಸಂದೇಶ ಕಳಿಸಿದ್ದಾರೆ. ಬಿಎಂಎಸ್ ಕಾಲೇಜ್ ಅಲ್ಲದೆ ಬಿಐಟಿ, ಎಂಎಸ್ ಆರ್ ಐಟಿ ಕಾಲೇಜುಗಳಿಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. ದಕ್ಷಿಣ ವಿಭಾಗದ ಮೂರು ಕಾಲೇಜುಗಳಿಗೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಇ‌ಮೇಲ್ ಬಂದಿದೆ. ಜತೆಗೆ ಕೇಂದ್ರ ವಿಭಾಗದ ಮತ್ತೊಂದು ಕಾಲೇಜಿಗೂ ಬಾಂಬ್ ಬೆದರಿಕೆ ಬಂದಿದೆ. ಪ್ರತಿಷ್ಠಿತ ಎಂಎಸ್ ರಾಮಯ್ಯ ಕಾಲೇಜಿಗೂ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ ಮೇಲ್ ಮಾಡಿದ್ದಾರೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

ಚಿತ್ರದುರ್ಗ

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Murder Case : ಪ್ರಿಯಕರನಿಗಾಗಿ ಪಾಪಿ ಪತ್ನಿ ಪತಿಗೆ ಚಟ್ಟ ಕಟ್ಟಿದ್ದಾಳೆ. ನಿದ್ರೆ ಮಾತ್ರೆ ಕೊಟ್ಟು ಬಳಿಕ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಳು. ಬಳಿಕ ಹೊಟ್ಟೆ ಉರಿಯಿಂದ ಪತಿ ಸತ್ತಿದ್ದಾನೆ ಎಂದು ಕಥೆ ಕಟ್ಟಿ ಈಗ ಜೈಲುಪಾಲಾಗಿದ್ದಾಳೆ.

VISTARANEWS.COM


on

By

Murder case
Koo

ಚಿತ್ರದುರ್ಗ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜತೆ ಸೇರಿ ಪಾಪಿ ಪತ್ನಿ ಗಂಡನ (Murder Case) ಹತ್ಯೆಗೈದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ರಾಘವೇಂದ್ರ (35) ಕೊಲೆಯಾದವನು.

ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರಿಯಕರ ರಾಜಣ್ಣ ಜತೆ ಸೇರಿ ಪತಿ ರಾಘವೇಂದ್ರನನ್ನು ಕೊಂದಿದ್ದಾರೆ. ರಾಘವೇಂದ್ರನಿಗೆ ಮೊದಲಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದಾರೆ. ಬಳಿಕ ನಿದ್ರೆಗೆ ಜಾರುತ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಪತಿಯನ್ನು ಕೊಂದು ಹೊಟ್ಟೆ ಉರಿಯಿಂದ ಸತ್ತಿದ್ದಾನೆ ಎಂದು ದಿವ್ಯ ನಾಟಕವಾಡಿದ್ದಳು.

ಮೊದಲು ಯುಡಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆಯಲ್ಲಿ ಕೊಲೆ ಸತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಇದು ಕೊಲೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೂಡಲೇ ದಿವ್ಯ, ಮಾರಣ್ಣ, ರಾಜಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಹನುಮಂತಪ್ಪ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ:Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

ಯಾದಗಿರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಹಳ್ಳದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ರವಿ ಹಿರೇಮಠ (28) ಮೃತ ದುರ್ದೈವಿ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದ ರವಿ ಬ್ಯಾಂಕ್ ಲೋನ್ ಮಾಡಿಸುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದ. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ.

ರವಿ ಕಾಣದೆ ಇದ್ದಾಗ ಕಂಗಲಾದ ಪೋಷಕರು ನಾಪತ್ತೆ ಕೇಸ್‌ ದಾಖಲಿಸಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆತನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಸುನಿಲ್‌ ಎಂಬಾತ ಈ ವೇಳೆ ರವಿ ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂದು ಸುಳ್ಳು ಹೇಳಿ ಸತಾಯಿಸಿದ್ದ. ಈ ನಡುವೆ ರವಿ ಪೋಷಕರಿಗೆ ಹಣ ಫೋನ್ ಪೇ ಮಾಡಿ ನಿಮ್ಮ ಮಗನ ತೋರಿಸುತ್ತೇನೆ ಎಂದಿದ್ದ. ಹಣ ಹಾಕಿದ ಬಳಿಕ ನಾನು‌ ನಿಮ್ಮ ಮಗನನ್ನೇ ನೋಡಿಲ್ಲ ಎಂದಿದ್ದ. ಈಗ ಹಣಕಾಸಿನ ವಿಚಾರಕ್ಕಾಗಿ ಸುನಿಲ್ ಎಂಬಾತನೆ ಕೊಲೆ ಮಾಡಿರುವ ಶಂಕೆ ಇದೆ. ತಮ್ಮ ಮಗನನ್ನು ಸುನಿಲ್ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪತ್ತೆಗೆ ಕೆಂಭಾವಿ ಪೊಲೀಸರು ಜಾಲ ಬೀಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Namma Metro : ಸಿಲಿಕಾನ್‌ ಸಿಟಿ ಬೆಂಗಳೂರು ಮಂದಿಗೆ ಮತ್ತೊಂದು ಶಾಕ್‌ ಕಾದಿದೆ. ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆ ಇದೆ.

VISTARANEWS.COM


on

By

Namma metro ticket prices will be hiked soon
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಸಿಟಿ ಮಂದಿಗೆ ಮತ್ತೊಂದು ಬರೆ ಬೀಳಲಿದೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ‌ (Namma Metro) ಟಿಕೆಟ್ ದರ ಶೇ.15-20ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. 2017ರ ನಂತರ ಇದೀಗ ಮೆಟ್ರೋ ದರ ಏರಿಕೆಗೆ ತೀರ್ಮಾನ ಮಾಡಲಾಗಿದೆ.

ಎಷ್ಟು ದರ ಏರಿಕೆ ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರನೊಳಗೊಂಡ ಕಮಿಟಿ ರಚನೆ ಮಾಡಲಾಗಿದೆ. ಅಧಿಕೃತವಾಗಿ ಬಿಎಂಆರ್‌ಸಿಎಲ್ ಜಾಹೀರಾತು ನೀಡಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಹಾಲಿ ನಮ್ಮ ಮೆಟ್ರೋದ ಟಿಕೆಟ್ ದರ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ 60 ರೂ. ಆಗಿದೆ. ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಆಗಿದೆ. ಮುಂದಿನ ತಿಂಗಳಿಂದ ಹೊಸ ದರ ಜಾರಿ ಆಗಲಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಪ್ರತಿಕ್ರಿಯಿಸಿದ್ದಾರೆ.

ದರ ಏರಿಕೆ ಬಗ್ಗೆ ಕಮಿಟಿ ಆಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ. ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದೆ. ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದೆ. ನಮ್ಮ ಖರ್ಚು- ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan Renukaswamy murder case
ಬೆಂಗಳೂರು11 ನಿಮಿಷಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು37 ನಿಮಿಷಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು2 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ3 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು4 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು4 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು5 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Wall Collapse
ಬೆಂಗಳೂರು6 ಗಂಟೆಗಳು ago

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

karnataka Weather Forecast
ಮಳೆ12 ಗಂಟೆಗಳು ago

Karnataka Weather : ಇಂದು ಅಬ್ಬರಿಸಲಿದೆ ಗುಡುಗು ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ22 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌