ಮಹಾ ಪಾಲಿಟಿಕ್ಸ್‌ | ಬಿಲ್ಲು ಬಾಣ ನಮ್ಮದೇ: ಉದ್ಧವ್‌ ಠಾಕ್ರೆ - Vistara News

ದೇಶ

ಮಹಾ ಪಾಲಿಟಿಕ್ಸ್‌ | ಬಿಲ್ಲು ಬಾಣ ನಮ್ಮದೇ: ಉದ್ಧವ್‌ ಠಾಕ್ರೆ

ಶಿವ ಸೇನೆಯ ಚುನಾವಣಾ ಚಿಹ್ನೆ ಬಿಲ್ಲು ಬಾಣ ಬೇರೆ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

VISTARANEWS.COM


on

uddhav thackeray 1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಶಿವ ಸೇನೆಯ ಚುನಾವಣಾ ಚಿಹ್ನೆಯಾದ ʼಬಿಲ್ಲು ಬಾಣʼವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಏಕನಾಥ ಶಿಂಧೆ ಅವರ ಬಣಕ್ಕೆ ನೇರ ಸವಾಲು ಎಸೆದಿದ್ದಾರೆ.

ಜೊತೆಗೆ, ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯಲಿ ಎಂದೂ ಅವರು ಸವಾಲು ಹಾಕಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಲ್ಲು ಬಾಣ ಚಿಹ್ನೆಯು ತಮ್ಮ ಬಣದಲ್ಲೇ ಉಳಿಯಲಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

“ಬಂಡಾಯದ ಬಗ್ಗೆ ನನಗೆ ತಿಳಿದಿರಲಿಲ್ಲವೇ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ನನಗೆ ಅದರ ಬಗ್ಗೆ ಒಂದು ಕಲ್ಪನೆ ಇತ್ತು. ಆದರೆ ನಾನು ಅಸ್ವಸ್ಥನಾಗಿದ್ದೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ವ್ಯಕ್ತಿಗೂ ಅತ್ಯುನ್ನತ ನಂಬಿಕೆ, ಗೌರವ ನೀಡಲಾಗಿದೆʼʼ ಎಂದ ಅವರು “ಶಿವಸೇನೆ ಇದ್ದ ಜಾಗದಲ್ಲಿಯೇ ಇದೆ. ಶಿವ ಸೇನೆಯಿಂದ ಒಬ್ಬನೇ ಒಬ್ಬ ಶಾಸಕ ಇದ್ದ ಸಮಯವೂ ಇತ್ತು. ಆದರೆ ಪಕ್ಷ ಕೊನೆಗೊಂಡಿತೇ? ಪಕ್ಷ ಯಾವಾಗಲೂ ಇರುತ್ತದೆ. 15-16 ಶಾಸಕರು ಈಗಲೂ ನನ್ನೊಂದಿಗಿದ್ದಾರೆ. ನಾವು ‘ಸತ್ಯಮೇವ ಜಯತೇ’ ಎನ್ನುತ್ತೇವೆ. ನಾನು ಕಾನೂನು ಆಳ್ವಿಕೆಯಲ್ಲಿ ನಂಬಿಕೆ ಇಡುತ್ತೇನೆʼʼ ಎಂದಿದ್ದಾರೆ.

ಪ್ರಸ್ತುತ ಏಕನಾಥ ಶಿಂಧೆ ಅವರ ಬಣವನ್ನು ಸರಕಾರ ರಚನೆಗೆ ಆಹ್ವಾನಿಸಿದ್ದನ್ನು ವಿರೋಧಿಸಿ ಉದ್ಧವ್‌ ಠಾಕ್ರೆ ಬಣ ಸುಪ್ರೀಂ ಕೋರ್ಟಿಗೆ ಹೋಗಿದೆ. ʼʼಇಡೀ ದೇಶ ಈ ತೀರ್ಪಿಗಾಗಿ ಕಾದಿದೆʼʼ ಎಂದಿದ್ದಾರೆ ಠಾಕ್ರೆ.

ಹೆಚ್ಚು ಶಾಸಕರನ್ನು ಹೊಂದಿರುವುದರಿಂದ, ಶಿವ ಸೇನೆಯ ಬಿಲ್ಲು ಬಾಣ ಚಿಹ್ನೆಯ ಮೇಲೆ ಶಿಂಧೆ ಬಣ ಅಧಿಪತ್ಯ ಸಾಧಿಸುವ ಸಾದ್ಯತೆಗಳು ದಟ್ಟವಾಗಿವೆ. ಅದು ಯಾರಿಗೆ ದೊರೆಯಲಿದೆ ಎಂದು ಚುನಾವಣಾ ಆಯೋಗ ನಿರ್ಧರಿಸುತ್ತದೆ.

ಇದನ್ನೂ ಓದಿ: ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಗುಜರಾತ್ ನ ನಾಡಿಯಾಡ್ ಮತಗಟ್ಟೆಯಲ್ಲಿ 20 ವರ್ಷಗಳ ಹಿಂದೆ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ (Lok Sabha Election 2024) ಮಾಡಿ ಮಾದರಿಯಾದರು.

VISTARANEWS.COM


on

By

Lok Sabha Election 2024
Koo

ಲೋಕಸಭಾ ಚುನಾವಣೆಯ (Lok Sabha Election 2024) ಮೂರನೇ ಹಂತದ (phase 3) ಮತದಾನದ (voting) ವೇಳೆ ಗುಜರಾತ್ ನ (gujarat) ನಾಡಿಯಾಡ್ (Nadiad) ಮತಗಟ್ಟೆ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. 20 ವರ್ಷಗಳ ಹಿಂದೆ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡ ಅಂಕಿತ್ ಸೋನಿ ( Ankit Soni) ಎಂಬವರು ಮತಗಟ್ಟೆಗೆ ಬಂದು ಕಾಲಿನ ಬೆರಳುಗಳ ಸಹಾಯದಿಂದ ಮತದಾನ ಮಾಡಿ ಮಾದರಿಯಾದರು.

ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನವು ಮಂಗಳವಾರ ಬೆಳಗ್ಗೆ 7 ಗಂಟೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 93 ಕ್ಷೇತ್ರಗಳಲ್ಲಿ ಪ್ರಾರಂಭವಾಯಿತು. ಈ ವೇಳೆ ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಮತದಾನ ಮಾಡಿ ಇತರರು ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ವಿದ್ಯುತ್ ಶಾಕ್ ಅಪಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ, ನಾನು ಎಂದಿಗೂ ಎದೆಗುಂದಲಿಲ್ಲ. ಶಿಕ್ಷಕರು ಮತ್ತು ಗುರುಗಳಿಂದ ಪ್ರೇರಿತರಾಗಿ ಕಲಿಕೆಯ ಪ್ರಯಾಣವನ್ನು ಪ್ರಾರಂಭಿಸಿದೆ. ಮೊದಲು ಚಿತ್ರಕಲೆ ಮತ್ತು ಬರವಣಿಗೆಯೊಂದಿಗೆ, ಅನಂತರ ಶಿಕ್ಷಣವನ್ನು ಮುಂದುವರಿಸಿದೆ. ಕಠಿಣ ಪರಿಶ್ರಮದಿಂದ ನಾನು ಪದವಿ ಮತ್ತು ಸಿಎಸ್ ಪದವಿ ಪಡೆದು ಎಂಬಿಎ ಗಳಿಸಿದೆ. ಮತದಾನ ನಮ್ಮ ಹಕ್ಕು. ಹಲವಾರು ವರ್ಷಗಳಿಂದ ನನ್ನ ಮತವನ್ನು ಚಲಾಯಿಸಲು ನಾನು ಒಂದು ಮಾರ್ಗವನ್ನು ಕಂಡುಕೊಂಡಿದ್ದೇನೆ. ನಾವೆಲ್ಲರೂ ಇದನ್ನು ಅನುಸರಿಸೋಣ ಮತ್ತು ಈ ಅಮೂಲ್ಯ ಹಕ್ಕನ್ನು ಚಲಾಯಿಸೋಣ ಎಂದು ಹೇಳಿದರು.


ವಿಶೇಷ ಮತಗಟ್ಟೆ

ಸ್ವಾತಂತ್ರ್ಯದ 75 ವರ್ಷಗಳ ಅನಂತರ ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಬುರುದ್ಮಲ್ ಗ್ರಾಮದಲ್ಲಿ ವಿಶೇಷ ಮತಗಟ್ಟೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬುರುದ್ಮಾಲ್ ಕೇವಲ 41 ಮತದಾರರನ್ನು ಹೊಂದಿರುವ ಅತ್ಯಂತ ಚಿಕ್ಕ ಕ್ಷೇತ್ರವಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ನಾಯಕರು ಮತ ಚಲಾಯಿಸಿದರು.

ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.

ಮೂರನೇ ಹಂತದಲ್ಲಿ ಅಸ್ಸಾಂನ 4, ಬಿಹಾರದ 5, ಛತ್ತೀಸ್‌ಗಢದ 7, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 2, ಗೋವಾ 2, ಗುಜರಾತ್ ನ 25, ಕರ್ನಾಟಕದ 14 , ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಉತ್ತರ ಪ್ರದೇಶದ 10 ಮತ್ತು ಪಶ್ಚಿಮ ಬಂಗಾಳದ 4 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಿತು. ಸೂರತ್‌ ಕ್ಷೇತ್ರವನ್ನು ಈಗಾಗಲೇ ಬಿಜೆಪಿ ಅವಿರೋಧವಾಗಿ ಗೆದ್ದುಕೊಂಡಿದೆ.

ಇದನ್ನೂ ಓದಿ: Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

120 ಮಹಿಳಾ ಅಭ್ಯರ್ಥಿಗಳು

ಮೂರನೇ ಹಂತದ ಚುನಾವಣಾ ಕಣದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 1.85 ಲಕ್ಷ ಮತಗಟ್ಟೆಗಳಲ್ಲಿ ಒಟ್ಟು 17.24 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದು ನಡೆದ 93 ಸ್ಥಾನಗಳಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದು ಕೊಂಡಿತ್ತು.

Continue Reading

ಫ್ಯಾಷನ್

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024 ರಲ್ಲಿ (Met Gala 2024) ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್ ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.

VISTARANEWS.COM


on

By

Met Gala 2024
Koo

ಮೆಟ್ ಗಾಲಾ 2024ರಲ್ಲಿ (Met Gala 2024) 180 ಕ್ಯಾರಟ್ ಡೈಮಂಡ್ ನೆಕ್ಲೇಸ್‌ನೊಂದಿಗೆ (diamond necklace) 200 ಕ್ಯಾರಟ್ ವಜ್ರಗಳನ್ನು ಧರಿಸಿದ ಭಾರತೀಯ ಉದ್ಯಮಿ ಮತ್ತು ಬಿಲಿಯನೇರ್ (billionaire) ಸುಧಾ ರೆಡ್ಡಿ ( Sudha Reddy) ಎಲ್ಲರ ಗಮನ ಸೆಳೆದಿದ್ದಾರೆ. ಅವರ ಅತ್ಯಾಕರ್ಷಕ ಉಡುಗೆಗಳು ಮೆಟ್ ಗಾಲಾದಲ್ಲಿ ನೆರೆದಿದ್ದ ಎಲ್ಲರ ದೃಷ್ಟಿ ಅವರತ್ತ ನೋಡುವಂತೆ ಮಾಡಿತ್ತು.

ಎಂಇಐಎಲ್ ಗ್ರೂಪ್‌ನ ನಿರ್ದೇಶಕಿ ಸುಧಾ ರೆಡ್ಡಿ ಅವರು ಮೆಟ್ ಗಾಲಾ 2024ರಲ್ಲಿ ರೆಡ್ ಕಾರ್ಪೆಟ್ ನಲ್ಲಿ ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಮೋರ್ ಎಟರ್ನೊ ಎಂಬ 180 ಕ್ಯಾರೆಟ್‌ನ ವಜ್ರದ ನೆಕ್ಲೇಸ್ ಧರಿಸಿದ್ದ ಅವರು ತಮ್ಮ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು.


ಅವರು ಧರಿಸಿದ್ದ ನೆಕ್‌ಪೀಸ್ ನಲ್ಲಿ 25 ಕ್ಯಾರಟ್ ಹೃದಯದ ಆಕಾರದ ವಜ್ರ ಮತ್ತು ಮೂರು 20 ಕ್ಯಾರಟ್‌ನ ಹೃದಯ ಆಕಾರದ ವಜ್ರಗಳಿದ್ದವು. ಇದು ಅವರ ಪತಿ ಮತ್ತು ಇಬ್ಬರು ಮಕ್ಕಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.
ಈ ನೆಕ್ಲೇಸ್ ಅನ್ನು 23 ಕ್ಯಾರಟ್ ಡೈಮಂಡ್ ಸಾಲಿಟೇರ್ ರಿಂಗ್ ಮತ್ತು ಮತ್ತೊಂದು 20 ಕ್ಯಾರಟ್ ಡೈಮಂಡ್ ಸಾಲಿಟೇರ್ ಉಂಗುರದೊಂದಿಗೆ ಜೋಡಿಸಿದ್ದು, ಇದು 20 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ.

ಸುಧಾ ರೆಡ್ಡಿ ಯಾರು?

ಕೃಷ್ಣಾ ರೆಡ್ಡಿಯವರ ಪತ್ನಿ ಸುಧಾ ರೆಡ್ಡಿ MEIL ನಲ್ಲಿ ನಿರ್ದೇಶಕರಾಗಿದ್ದಾರೆ. ಇವರಿಗೆ ಮಾನಸ್ ಮತ್ತು ಪ್ರಣವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಧಾ ರೆಡ್ಡಿ ಫೌಂಡೇಶನ್‌ನ ಮುಖ್ಯಸ್ಥರಾಗಿರುವ ಅವರು ಕಂಪೆನಿಯ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯವಾಡದವರಾದ ಅವರು 19 ವರ್ಷದವರಾಗಿದ್ದಾಗ ಕೃಷ್ಣಾ ರೆಡ್ಡಿ ಅವರನ್ನು ವಿವಾಹವಾದರು. ಅವರಿಬ್ಬರೂ ಒಟ್ಟಿಗೆ ಬೆಳೆದಿರುವ ಕಾರಣ ಸಾಧನೆ ಮಾಡುವುದು ಸಾಧ್ಯವಾಯಿತು ಎಂಬುದು ಅವರ ನಂಬಿಕೆ.
ಹೈದರಾಬಾದ್ ರಾಣಿ ಜೇನುನೊಣ ಎಂದೇ ಪ್ರಶಂಸಿಸಲ್ಪಡುವ ಸುಧಾ ರೆಡ್ಡಿ 2021ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು.


ತರುಣ್ ತಹಿಲಿಯಾನಿ ಸಿದ್ಧಪಡಿಸಿದ ಉಡುಗೆ

ಎರಡನೇ ಬಾರಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸುಧಾ ರೆಡ್ಡಿ ಅವರು ತರುಣ್ ತಹಿಲಿಯಾನಿ ಅವರ ಆಫ್-ಶೋಲ್ಡರ್ ಗೌನ್ ಮತ್ತು ತಮ್ಮ ಸಂಗ್ರಹದ ಕೋಟಿಗಟ್ಟಲೆ ಮೌಲ್ಯದ ನೆಕ್ಲೇಸ್‌ ಧರಿಸಿ ಭಾಗವಹಿಸಿದ್ದರು.

ರೀವೇಕನಿಂಗ್ ಫ್ಯಾಶನ್ ಎಂಬ ಶೀರ್ಷಿಕೆಯ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಐವರಿ ಸಿಲ್ಕ್ ಗೌನ್ ಅನ್ನು 4,500 ಗಂಟೆಗಳ ಅವಧಿಯಲ್ಲಿ 80 ಕುಶಲಕರ್ಮಿಗಳ ತಂಡ ಸಿದ್ಧಪಡಿಸಿದೆ. ವಿನ್ಯಾಸಕಾರರ ಪ್ರಕಾರ ಈ ಧಿರಿಸು ಹಳೆಯ ಮೊಘಲ್ ಉದ್ಯಾನಗಳಿಂದ ಪ್ರೇರಿತವಾಗಿದೆ. ಕಾರ್ಸೆಟ್ ಅನ್ನು ತಹಿಲಿಯಾನಿಯ ಸಿಗ್ನೇಚರ್ ಮ್ಯೂಟ್, ಬೀಜ್-ಗೋಲ್ಡ್ ಬಣ್ಣದ ಪ್ಯಾಲೆಟ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಮೆಟ್ ಗಾಲಾ ಥೀಮ್‌ಗೆ ಅನುಗುಣವಾಗಿ ರಚಿಸಲಾಗಿದೆ. ಗೌತಮ್ ಕಲ್ರಾ ಅವರ ಶೈಲಿಯಲ್ಲಿ ರೆಡ್ಡಿ ಅವರು ಮಿಯೋಡ್ರಾಗ್ ಗುಬೆರಿನಿಕ್ ವಿನ್ಯಾಸಗೊಳಿಸಿದ ಸ್ಫಟಿಕ ಪರಿಕರವನ್ನು ಇದರೊಂದಿಗೆ ಸೇರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

180 ಕ್ಯಾರಟ್‌ ನ ನೆಕ್ಲೆಸ್

ಸುಧಾ ರೆಡ್ಡಿ ಅವರು ಕೇವಲ ಧಿರಸಿನಿಂದ ಮಾತ್ರವಲ್ಲ ಪ್ರತಿಷ್ಠಿತ ಆಭರಣದಿಂದ ಗಮನ ಸೆಳೆದರು. ‘ಅಮೋರ್ ಎಟರ್ನೊ’ ನೆಕ್ಲೇಸ್ 25 ಸಾಲಿಟೇರ್‌ಗಳನ್ನು ಒಳಗೊಂಡಿದ್ದು ಇದು ಒಟ್ಟು 180 ಕ್ಯಾರೆಟ್‌ಗಳು. ಇದನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸಲು ರೆಡ್ಡಿ ಕುಟುಂಬದ ಪರಂಪರೆಯ ಗುರುತಾಗಿ ರಚಿಸಲಾಗಿದೆ.

ಇದನ್ನೂ ಓದಿ: Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

ಹಾರದ ಮಧ್ಯಭಾಗದಲ್ಲಿ ನಾಲ್ಕು ದೊಡ್ಡ ಹೃದಯದ ಆಕಾರದ ವಜ್ರಗಳಿಂದ ರಚಿಸಲಾದ ಸಾಂಕೇತಿಕವಾಗಿ ಕುಟುಂಬದ ಮರವನ್ನು ಇಡಲಾಗಿದೆ. ಅತಿದೊಡ್ಡ ವಜ್ರ, 25 ಕ್ಯಾರೆಟ್ ಕಿಂಗ್ ಆಫ್ ಹಾರ್ಟ್ಸ್, ರೆಡ್ಡಿಯ ಪತಿ ಕೃಷ್ಣನನ್ನು ಗೌರವಿಸುತ್ತದೆ. ಆದರೆ ಹೃದಯದ ರಾಣಿ 20 ಕ್ಯಾರೆಟ್ ಹೃದಯದ ವಜ್ರವು ಸುಧಾ ರೆಡ್ಡಿಯನ್ನು ಸಂಕೇತಿಸುತ್ತದೆ. ಜ್ಞಾನದ ರಾಜಕುಮಾರ ಮತ್ತು ಸಂಪತ್ತಿನ ರಾಜಕುಮಾರ ಎಂದು ಕರೆಯಲ್ಪಡುವ ಎರಡು ಹೆಚ್ಚುವರಿ 20 ಕ್ಯಾರಟ್ ಹೃದಯಗಳು ಅವರ ಪುತ್ರರಾದ ಪ್ರಣವ್ ಮತ್ತು ಮಾನಸ್ ಅವರನ್ನು ಪ್ರತಿನಿಧಿಸುತ್ತವೆ.

ಈ ನೆಕ್ಲೇಸ್ ಅನ್ನು ಪೂರ್ಣಗೊಳಿಸುವುದು 21 ಹೊಳೆಯುವ ಸುತ್ತಿನ ವಜ್ರಗಳು. ಇದು ಸುಧಾ ಮತ್ತು ಕೃಷ್ಣರ ಪ್ರೇಮಕಥೆಯ ಹಂಚಿಕೊಂಡ ಅನುಭವಗಳು ಮತ್ತು ಪಾಲಿಸಬೇಕಾದ ಕ್ಷಣಗಳನ್ನು ಸಂಕೇತಿಸುತ್ತದೆ. 20 ಕ್ಯಾರೆಟ್ ಹೃದಯದ ಆಕಾರದ ವಜ್ರದ ಉಂಗುರ ಮತ್ತು 23 ಕ್ಯಾರೆಟ್ ಹಳದಿ ಡೈಮಂಡ್ ರಿಂಗ್ ಇದನ್ನು ಪೂರ್ಣಗೊಳಿಸುತ್ತದೆ. ಇದನ್ನು ರಚಿಸಲು 100 ಗಂಟೆಗಳು ಬೇಕಾಗಿತ್ತು.

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಯಾವುದೇ ಸಂದರ್ಭ ಇರಲಿ ದಿನದಲ್ಲಿ ಶುಭ ಸಮಯ ನೋಡಿ ಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು (Akshaya Tritiya 2024) ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Akshaya Tritiya 2024
Koo

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Continue Reading

ದೇಶ

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Kulgam: ಹತ ಮೂವರು ಉಗ್ರರಲ್ಲಿ ಬಸಿತ್‌ ದರ್‌ ಎಂಬಾತನ ಹತ್ಯೆಯು ಪ್ರಾಮುಖ್ಯತೆ ಪಡೆದಿದೆ. ಈತನು ಲಷ್ಕರೆ ತಯ್ಬಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (TRF) ಕಮಾಂಡರ್‌ ಆಗಿದ್ದು, ಸೈನಿಕರ ಪಟ್ಟಿಯಲ್ಲಿ ಎ ಗ್ರೇಡ್‌ ಉಗ್ರನಾಗಿದ್ದಾನೆ. ಈತನ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು.

VISTARANEWS.COM


on

Kulgam
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೆಲ ದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಬೆಂಗಾವಲು ವಾಹನಗಳ ಮೇಲೆ ನಡೆಸಿದ ದಾಳಿಗೆ ಭಾರತೀಯ ಸೇನೆಯು (Indian Army) ಸೇಡು ತೀರಿಸಿಕೊಂಡಿದೆ. ಕುಲ್ಗಾಮ್‌ನಲ್ಲಿ (Kulgam) ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಒಟ್ಟು ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿಯು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಉಗ್ರರ ವಿರುದ್ಧ ಸೇನೆ ಕೈಗೊಂಡ ಕಾರ್ಯಾಚರಣೆಯಲ್ಲಿ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.

ಸೋಮವಾರ (ಮೇ 6) ತಡರಾತ್ರಿಯೇ ಕುಲ್ಗಾಮ್‌ನ ರೆಡ್ವಾಣಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಸಿಬ್ಬಂದಿಗೆ ಗುಪ್ತಚರ ಮಾಹಿತಿ ದೊರೆತಿತ್ತು. ಇದರ ಅನ್ವಯ ರಾತ್ರೋರಾತ್ರಿ ಸೈನಿಕರು ಕಾರ್ಯಾಚರಣೆ ಕೈಗೊಂಡು ಮೂವರನ್ನು ಹತ್ಯೆಗೈದಿದ್ದಾರೆ. ಭಾರತದ ಸೈನಿಕರು ಕಾರ್ಯಾಚರಣೆ ಕೈಗೊಳ್ಳುತ್ತಲೇ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಆದರೆ, ಕಾರ್ಯಾಚರಣೆ ವೇಳೆ ಭಾರಿ ಮುನ್ನಡೆ ಸಾಧಿಸಿದ ಯೋಧರು ಒಬ್ಬ ಕಮಾಂಡರ್‌ ಸೇರಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

ಹತ ಬಸಿತ್‌ ದರ್.

ಬಸಿತ್‌ ದರ್‌ ಮೋಸ್ಟ್‌ ವಾಂಟೆಡ್‌

ಹತ ಮೂವರು ಉಗ್ರರಲ್ಲಿ ಬಸಿತ್‌ ದರ್‌ ಎಂಬಾತನ ಹತ್ಯೆಯು ಪ್ರಾಮುಖ್ಯತೆ ಪಡೆದಿದೆ. ಈತನು ಲಷ್ಕರೆ ತಯ್ಬಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (TRF) ಕಮಾಂಡರ್‌ ಆಗಿದ್ದು, ಸೈನಿಕರ ಪಟ್ಟಿಯಲ್ಲಿ ಎ ಗ್ರೇಡ್‌ ಉಗ್ರನಾಗಿದ್ದಾನೆ. ಈತನ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ, ಪೊಲೀಸರು ಹಾಗೂ ನಾಗರಿಕರ ಹತ್ಯೆ ಸೇರಿ ಈತನ ವಿರುದ್ಧ 18 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಪೂಂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಮೊದಲೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಇನ್ನು ಈ ಆಪರೇಷನ್‌ನಲ್ಲಿ ಇದುವರೆಗೆ ಯಾರೂ ಅರೆಸ್ಟ್‌ ಆಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

Continue Reading
Advertisement
Prajwal Revanna Case HD Revanna suffers heartburn and gastric problems Shift to hospital
ರಾಜಕೀಯ6 mins ago

Prajwal Revanna Case: ಎಚ್.ಡಿ. ರೇವಣ್ಣಗೆ ಎದೆ ಉರಿ, ಗ್ಯಾಸ್ಟ್ರಿಕ್‌ ತೊಂದರೆ; ಆಸ್ಪತ್ರೆಗೆ ಶಿಫ್ಟ್

Lok Sabha Election 2024
Lok Sabha Election 20248 mins ago

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

Met Gala 2024
ಫ್ಯಾಷನ್13 mins ago

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

IPL 2024: KKR's Flight to Kolkata Unexpectedly Diverted Mid-Air
ಪ್ರಮುಖ ಸುದ್ದಿ19 mins ago

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

Akshaya Tritiya 2024
ಧಾರ್ಮಿಕ19 mins ago

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

Kulgam
ದೇಶ30 mins ago

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Lok Sabha Election
Latest46 mins ago

Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

guava leaves benefits
ಆರೋಗ್ಯ57 mins ago

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

t20 world cup
ಕ್ರೀಡೆ1 hour ago

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

Lok Sabha Election 2024
ಪ್ರಮುಖ ಸುದ್ದಿ1 hour ago

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ3 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌