Shivamogga News: ಸಾಗರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು - Vistara News

ಕರ್ನಾಟಕ

Shivamogga News: ಸಾಗರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

Shivamogga News: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಡನ್ ಬೈಲ್ ಬಳಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದಾರೆ.

VISTARANEWS.COM


on

kumar and Arun
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಈಜಲು ತೆರಳಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ಸಾಗರ ತಾಲೂಕಿನ ವಡನ್ ಬೈಲ್ ಬಳಿಯ ದೇವಿಗುಂಡಿಯಲ್ಲಿ ಭಾನುವಾರ ನಡೆದಿದೆ. ಕೃಷಿ ಅಧಿಕಾರಿ ಕುಮಾರ್, ಐಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಅರುಣ್ ಮೃತರು.

ಮೃತರು ವಡನ್ ಬೈಲ್ ಸಮೀಪದ ದೇವಿಗುಂಡಿಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟ ಮುಗಿಸಿದ ನಂತರ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಇಬ್ಬರ ಶವವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಹೊಳಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕನ ಕಂಟ್ರೋಲ್‌ ತಪ್ಪಿ ನಾಲ್ಕೈದು ಬಾರಿ ಕಾರು ಪಲ್ಟಿ; ಓರ್ವ ಸಾವು, ಮೂವರು ಗಂಭೀರʼ

Car Accident

ಹಾಸನ: ಇಲ್ಲಿನ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅತಿ ವೇಗವಾಗಿ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣಕ್ಕೆ (Road Accident) ಸಿಗದೇ ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ. ಕಾರಿಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಕುಟುಂಬವೊಂದು ಆದಿಚುಂಚನಗಿರಿ ದೇವಾಲಯಕ್ಕೆ ಹೋಗಿ ವಾಪಸ್ಸು ಬರುವಾಗ ಮೇಲ್ಸುತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ವೇಗವಾಗಿ ಇದ್ದ ಕಾರಣಕ್ಕೆ ನಾಲ್ಕೈದು ಭಾರಿ ಪಲ್ಟಿಯಾಗಿ, ತಡೆಗೋಡೆಯಿಂದ ಅರ್ಧ ಭಾಗ ಹಾರಿಹೋಗಿದೆ. ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿದ್ದವು. ಮೇಲ್ಸೇತುವೆಯ ತಡೆಗೋಡೆ ಇದ್ದರಿಂದ ಕಾರು ಮೇಲೆಯೇ ಉಳಿದಿದೆ.

ಅಪಘಾತವಾಗುತ್ತಿದ್ದಂತೆ ಇತರೆ ವಾಹನ ಸವಾರರು ಕಾರಲ್ಲಿ ಸಿಲುಕಿ ನರಳಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆ ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ. ಮೃತರ ಹಾಗೂ ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್‌ ಶಾಕ್‌ಗೆ ಪವರ್‌ ಮ್ಯಾನ್‌ ಸಾವು

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ದುರಸ್ತಿ ಕೆಲಸ ಮಾಡುವಾಗ ಪವರ್ ಮ್ಯಾನ್‌ಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಕಿರಣ್ (26) ವಿದ್ಯುತ್ ತಗುಲಿ ಮೃತಪಟ್ಟ ದುರ್ದೈವಿ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IAS Transfer: ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಯಾರ್ಯಾರು ಎಲ್ಲಿಗೆ?

IAS Transfer: ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

VISTARANEWS.COM


on

IAS Transfer
Koo

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ (Mysore Deputy Commissioner) ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಜಿಲ್ಲಾಧಿಕಾರಿಗಳು, ಐಎಎಸ್‌ (IAS officers) ಅಧಿಕಾರಿಗಳನ್ನು ವರ್ಗಾವಣೆ (IAS Transfer) ಮಾಡಲಾಗಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

ವರ್ಗಾವಣೆ ಹೊಂದಿದ ಅಧಿಕಾರಿಗಳ ವಿವರ:

ಅಧಿಕಾರಿಯ ಹೆಸರುಎಲ್ಲಿಂದ ಎಲ್ಲಿಗೆ
ಡಾ. ರಾಜೇಂದ್ರ ಕೆ.ವಿ ಮೈಸೂರು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಡಾ. ರಾಮ್‌ ಪ್ರಸಾದ್‌ ಮನೋಹರ್‌ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ನಿತೇಶ್‌ ಪಾಟೀಲ್‌
ಬೆಳಗಾವಿ ಜಿಲ್ಲಾಧಿಕಾರಿ ಎಂಎಸ್‌ಎಂಇ ನಿರ್ದೇಶಕ
ಡಾ. ಅರುಂಧತಿ ಚಂದ್ರಶೇಖರ್‌ ಖಜಾನೆ ಕಮಿಷನರ್‌ ಪಂಚಾಯತ್‌ರಾಜ್‌ ಕಮಿಷನರ್‌
ಚಂದ್ರಶೇಖರ ನಾಯಕ ಎಲ್.‌ ರಾಯಚೂರು ಜಿಲ್ಲಾಧಿಕಾರಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ ಎಂಎಸ್‌ಎಂಇ ನಿರ್ದೇಶಕ ಹಾವೇರಿ ಜಿಲ್ಲಾಧಿಕಾರಿ
ಗೋವಿಂದ ರೆಡ್ಡಿ
ಬೀದರ್‌ ಜಿಲ್ಲಾಧಿಕಾರಿ ಗದಗ ಜಿಲ್ಲಾಧಿಕಾರಿ
ರಘುನಂದನ್‌ ಮೂರ್ತಿ
ಹಾವೇರಿ ಜಿಲ್ಲಾಧಿಕಾರಿ ಖಜಾನೆ ಆಯುಕ್ತ ಬೆಂಗಳೂರು
ಡಾ. ಗಂಗಾಧರಸ್ವಾಮಿ
ಕೃಷಿ ಮಾರ್ಕೆಟಿಂಗ್‌ ನಿರ್ದೇಶಕ ದಾವಣಗೆರೆ ಜಿಲ್ಲಾಧಿಕಾರಿ
ಲಕ್ಷ್ಮೀಕಾಂತ ರೆಡ್ಡಿ
ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕ ಮೈಸೂರು ಜಿಲ್ಲಾಧಿಕಾರಿ
ನಿತೀಶ್‌ ಕೆ.
ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ರಾಯಚೂರು ಜಿಲ್ಲಾಧಿಕಾರಿ
ಮೊಹಮ್ಮದ್‌ ರೋಶನ್‌
ಹೆಸ್ಕಾಂ ನಿರ್ವಹಣಾ ನಿರ್ದೇಶಕ ಬೆಳಗಾವಿ ಜಿಲ್ಲಾಧಿಕಾರಿ
ಶಿಲ್ಪಾ ಶರ್ಮಾ
ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ ಬೀದರ್‌ ಜಿಲ್ಲಾಧಿಕಾರಿ
ದಿಲೇಶ್‌ ಸಸಿ
ಎಡಿಸಿಎಸ್‌ ನಿರ್ದೇಶಕ ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು
ಲೋಖಂಡೆ ಸ್ನೇಹಲ್‌ ಸುಧಾಕರ್‌ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ
ಶ್ರೀರೂಪಾ
ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ
ಜಿಟ್ಟೆ ಮಾಧವ ವಿಠಲ ರಾವ್
ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿ ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌
ಹೇಮಂತ್‌ ಎನ್.‌
ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ ಶಿವಮೊಗ್ಗ ಜಿ.ಪಂ ಸಿಇಒ
ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ
ಹಿರಿಯ ಸಹಾಯಕ ಆಯುಕ್ತ ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ
ಜ್ಯೋತಿ ಕೆ.
ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ
ಶ್ರೀಧರ ಸಿ.ಎನ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ

ಇದನ್ನೂ ಓದಿ: IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್‌ ಕೇಸ್‌ ಬಗ್ಗೆ ಮಾತನಾಡದೇ ಇರೋದಕ್ಕೆ ಕಾರಣ ತಿಳಿಸಿದ ಸಮಲತಾ; ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದೇನು?

Actor Darshan: ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ರಿಯಾಕ್ಷನ್‌ ಮಾಡಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ನಿನ್ನೆಯಷ್ಟೇ ಸುಮಲತಾ ಅವರು ದರ್ಶನ್‌ ಕುರಿತಾಗಿ ಪೋಸ್ಟ್‌ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮಾಧ್ಯಮದ ಜತೆ ಇಷ್ಟು ದಿನ ದರ್ಶನ್‌ ಕುರಿತಾಗಿ ಏಕೆ ಮಾತನಾಡಿಲ್ಲ ಎಂಬ ಕಾರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

VISTARANEWS.COM


on

Sumalatha Ambareesh Talks About Darshan Fans And Renukaswamy Case
Koo

ಬೆಂಗಳೂರು:ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್‌​ (Sumalatha Ambareesh) ಅವರ ಕುಟುಂಬದ ಜೊತೆ ದರ್ಶನ್​ ಅವರಿಗೆ ಆಪ್ತತೆ ಇದೆ. ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ರಿಯಾಕ್ಷನ್‌ ಮಾಡಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ನಿನ್ನೆಯಷ್ಟೇ ಸುಮಲತಾ ಅವರು ದರ್ಶನ್‌ ಕುರಿತಾಗಿ ಪೋಸ್ಟ್‌ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮಾಧ್ಯಮದ ಜತೆ ಇಷ್ಟು ದಿನ ದರ್ಶನ್‌ ಕುರಿತಾಗಿ ಏಕೆ ಮಾತನಾಡಿಲ್ಲ ಎಂಬ ಕಾರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಸುಮಲತಾ ಮಾತನಾಡಿ ʻʻಕಾನೂನಿನ ವ್ಯವಸ್ಥೆಯಲ್ಲಿ ಪ್ರಕ್ರಿಯೆ ಹೇಗೆ ಆಗುತ್ತೆ ಅದೇ ರೀತಿ ಹೋಗತ್ತೆ. ಅದರ ಬಗ್ಗೆ ಯಾರನೂ ಕಮೆಂಟ್‌ ಮಾಡುವ ಹಾಗಿಲ್ಲ. ನಾವು ಕಾನೂನಿಗೆ ಗೌರವ ಕೊಡಬೇಕು. ಇಷ್ಟು ದಿನ ಈ ಬಗ್ಗೆ ಮಾತನಾಡದೇ ಇರುವುದಕ್ಕೂ, ಈಗ ನಾನು ಪೋಸ್ಟ್‌ ಮಾಡಿರುವ ಬಗ್ಗೆಯೂ ಕ್ಲಾರಿಟಿ ಕೊಟ್ಟಿದ್ದೇನೆ. ಪೋಸ್ಟ್‌ನಲ್ಲಿ ಏನೇ ಹೇಳಿದ್ದರೂ ಅದು ನನ್ನ ವೈಯಕ್ತಿಕ ವಿಚಾರ. ಈ ಸಂದರ್ಭದಲ್ಲಿ ಯಾರಿಗೂ ನೋವಾಗುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಗಂಭೀರವಾದ ಪ್ರಕರಣ ಆದ್ದರಿಂದ ನಾವು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ವರ್ತಿಸಬೇಕು. ಇನ್ನು ದರ್ಶನ್‌ ಕುಟುಂಬ ಕೂಡ ಈ ಪ್ರಕರಣದ ವಿಚಾರದಲ್ಲಿ ಯಾವ ರೀತಿ ಕುಗ್ಗಿದ್ದಾರೆ ಎನ್ನುವುದು ನನಗೆ ವೈಯಕ್ತಿಕವಾಗಿ ಗೊತ್ತು. ನನ್ನ ಮೌನವನ್ನು ಬೇರೆ ರೀತಿ ಬಿಂಬಿಸುವ ಕೆಲಸ ಆಗುತ್ತಿದೆ. ಪೊಲೀಸರು ಕೋರ್ಟ್‌ನಲ್ಲಿ ಏನು ನಡೆಯುತ್ತಿದೆ, ಅದರ ಬಗ್ಗೆ ಕಮೆಂಟ್‌ ಮಾಡುವುದಿಲ್ಲ. ನಾನು ಹೇಳಿರುವುದು ನಾನು ಕಂಡಂತಹ ದರ್ಶನ್‌. ದರ್ಶನ್‌ ಕೂಡ ಇಷ್ಟು ದಿನ ನನ್ನ ಪರ ನಿಂತಿದ್ದರು ಎನ್ನುವುದು ನಿಮಗೂ ಗೊತ್ತು. ಆ ರೀತಿ ದರ್ಶನ್‌ ನಾನು ನೋಡಿರುವುದು. ನಾನು ಮಗನಾಗಿ ನೋಡಿಕೊಂಡು ಬಂದಿದ್ದೇನೆ. ಕಾನೂನು ಪೊಲೀಸ್‌ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಇದು ತೀರಾ ಪರ್ಸನಲ್‌ ವಿಚಾರ ಆಗಿರುವುದರಿಂದ ಎಲ್ಲವೂ ಒಂದೇ ದಿನ ಬಂದು ಹೇಳುವ ಪರಿಸ್ಥಿಯಲ್ಲಿ ಇರಲಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Sumalatha Ambareesh: ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದ ಸುಮಲತಾ; ದೊಡ್ಡ ಮಗನ ಬಗ್ಗೆ ಹೇಳಿದಿಷ್ಟು!

ಸುಮಲತಾ ಪೋಸ್ಟ್‌ ಏನು?

ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ.

ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು, ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಪೋಸ್ಟ್ ಮಾಡುತ್ತಿದ್ದೇನೆ ಏಕೆಂದರೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು ಪ್ರೋತ್ಸಾಹಿಸಲು ಅಥವಾ ನನ್ನ ನಿಲುವಿನ ಬಗ್ಗೆ ಅಭಿಮಾನಿಗಳಲ್ಲಿ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡಲು ನಾನು ಬಯಸುವುದಿಲ್ಲ.

ನಾನು ಮೊದಲಿಗೆ ತಮ್ಮ ಮಗ ಮತ್ತು ಪತಿಯನ್ನು ಹೃದಯವಿದ್ರಾವಕ ರೀತಿಯಲ್ಲಿ ಕಳೆದುಕೊಂಡಿರುವ ರೇಣುಕಾಸ್ವಾಮಿ ಅವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ ಮತ್ತು ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯಿಂದ ಅವರಿಗೆ ಸಿಗಬೇಕಾದ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

ಉದಾರ ವ್ಯಕ್ತಿ
ಈ ಘಟನೆಯು ನನ್ನ ಹೃದಯವನ್ನು ಛಿದ್ರಗೊಳಿಸಿತು ಮತ್ತು ನಾನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಹಲವಾರು ದಿನಗಳವರೆಗೆ ಆಘಾತ ಮತ್ತು ನೋವಿನ ಸ್ಥಿತಿಯಲ್ಲಿದ್ದೆ. ನನ್ನ “ಮೌನ” ದ ಬಗ್ಗೆ ಕಾಮೆಂಟ್ ಮಾಡುತ್ತಿರುವ ಕೆಲವರು, ನನ್ನ ಮತ್ತು ದರ್ಶನ್, ಅವರ ಕುಟುಂಬ ಮತ್ತು ನಾವು ವರ್ಷಗಳಿಂದ ಹಂಚಿಕೊಂಡಿರುವ ಬಾಂಧವ್ಯದ ನಡುವಿನ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಸ್ಟಾರ್ ಮತ್ತು ಸೂಪರ್‌ಸ್ಟಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ಯಾವುದೇ ಸ್ಟಾರ್‌ಡಂಗಿಂತ ಹೆಚ್ಚಾಗಿ, ಅವರು ನನ್ನ ಕುಟುಂಬದ ಸದಸ್ಯ ಮತ್ತು ಯಾವಾಗಲೂ ನನಗೆ ಮಗನಂತೆ. ಅವರು ಅಂಬರೀಶ್ ಅವರನ್ನು ಯಾವಾಗಲೂ ತಮ್ಮ ಅಪ್ಪಾಜಿ ಎಂದು ಪರಿಗಣಿಸಿದ್ದಾರೆ ಹಾಗೂ ನನಗೆ ಅವರ ತಾಯಿಯ ಗೌರವ ಮತ್ತು ಸ್ಥಾನ ಮತ್ತು ಮಗನ ಪ್ರೀತಿಯನ್ನು ನೀಡಿದ್ದಾರೆ.

ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ. ನಾನು ದರ್ಶನ್ ಅವರನ್ನು ಪ್ರೀತಿಸುವ ಹೃದಯ ಹೊಂದಿರುವ, ಅತ್ಯಂತ ಕಾಳಜಿಯುಳ್ಳ ಮತ್ತು ಉದಾರ ವ್ಯಕ್ತಿ ಎಂದು ತಿಳಿದಿದ್ದೇನೆ. ಪ್ರಾಣಿಗಳ ಬಗ್ಗೆ ಅವನ ಸಹಾನುಭೂತಿ ಮತ್ತು ಸಹಾಯ ಮಾಡುವ ಮನೋಭಾವವು ಯಾವಾಗಲೂ ಅವನ ಸ್ವಭಾವದ ಭಾಗವಾಗಿದೆ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ದರ್ಶನ್ ಜೊತೆಗೆ ಅವನ ಪತ್ನಿ ವಿಜಯಲಕ್ಷ್ಮಿ ಮತ್ತು ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಇತರೆ ಆರೋಪಿಗಳ ಬಡ ಕುಟುಂಬಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಸಾರ್ವಜನಿಕರು ಸಂತ್ರಸ್ತ ಅಥವಾ ಆರೋಪಿಯ ಕುಟುಂಬಗಳು, ಈಗಾಗಲೇ ಈ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿರುವವರ ಮೇಲೆ ತಮ್ಮ ಕಾಮೆಂಟ್‌ಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಬೇಕು.

ದರ್ಶನ್ ನಿಂತಿರುವುದನ್ನು ನೋಡುವುದು ನನಗೆ ತುಂಬಾ ನೋವಿನ ಸಂಗತಿ

ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅಪಾರ ನಂಬಿಕೆಯಿದೆ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ಇದು ಕಾನೂನಿಗೆ ಬಿಟ್ಟದ್ದು ಮತ್ತು ಈ ಕುರಿತು ಈಗಾಗಲೇ ನಿರ್ಣಯಿಸುವುದು ಮತ್ತು ಶಿಕ್ಷೆ ವಿಧಿಸುವುದು ಬೇರೆ ಯಾರೂ ಅಲ್ಲ. ಈ ವಿಚಾರದಲ್ಲಿ ಅವರ ನಿಲುವು, ಸತ್ಯಾಸತ್ಯತೆಗಳನ್ನು ಸ್ಪಷ್ಟಪಡಿಸುವ ಅವಕಾಶವಾದರೂ ಇರಲಿ.

ಈ ಪರಿಸ್ಥಿತಿಯಲ್ಲಿ, ನಾನು ನೆಮ್ಮದಿಯಿಂದ, ಈ ಸಮಸ್ಯೆಯಿಂದ ದೂರವಿರುವುದು ಅಸಾಧ್ಯ.
ಇದು ನನ್ನದೇ ಕೌಟುಂಬಿಕ ಸಮಸ್ಯೆ. ಇದು ಅವರ ಜೀವನ ಮತ್ತು ಕುಟುಂಬದ ನೆಮ್ಮದಿ, ಭದ್ರತೆ, ಭವಿಷ್ಯಕ್ಕೆ ಸಂಬಂಧಪಟ್ಟಂತೆ ಅತ್ಯಂತ ಗಂಭೀರ ವಿಷಯ. ನಮಗೆಲ್ಲ ನೋವಾಗುತ್ತಿದೆ. ಚಿತ್ರರಂಗ ಅಸ್ತವ್ಯಸ್ತವಾಗಿದೆ. ಸಾವಿರ ಜನರ ಜೀವನೋಪಾಯ ಅವರ ಚಲನಚಿತ್ರ ನಿರ್ಮಾಣಗಳ ಮೇಲೆ ಅವಲಂಬಿತವಾಗಿದೆ. ಇದನ್ನು ಎದುರಿಸುವುದು ಯಾರಿಗೂ ಸುಲಭವಾಗಿರಲಿಲ್ಲ.

ಆಘಾತ ಮತ್ತು ಯಾತನೆಯ ಮನಸ್ಸಿನ ಸ್ಥಿತಿಯಿಂದ ಹೊರಬರಲು ಮತ್ತು ಹಲವು ಮೂಲಗಳಿಂದ ಬರುವ ಎಲ್ಲಾ ಗೊಂದಲಮಯ ಸುದ್ದಿಗಳನ್ನು ಅರ್ಥಮಾಡಿಕೊಳ್ಳಲು ನನ್ನನ್ನು ನಾನೇ ಸಮಾಧಾನಗೊಳಿಸಬೇಕಿತ್ತು. ಇದು ನಾನು ಸಾಂದರ್ಭಿಕವಾಗಿ ಪ್ರತಿಕ್ರಿಯಿಸಲು ಯಾವುದೋ ಸಿನಿಮಾ ಅಥವಾ ರಾಜಕೀಯ ಘಟನೆಯಲ್ಲ. ಈ ಬಗ್ಗೆ ಚರ್ಚಿಸಲು ಅಥವಾ ಅಂತಹ ಅಪರಾಧದಲ್ಲಿ ಆರೋಪಿಯಾಗಿ ದರ್ಶನ್ ನಿಂತಿರುವುದನ್ನು ನೋಡುವುದು ನನಗೆ ತುಂಬಾ ನೋವಿನ ಸಂಗತಿ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆರೋಪಿಯಾಗಿರುವುದು ಎಂದರೆ ಅವನು ಅಪರಾಧಿ ಎಂದು ಅರ್ಥವಲ್ಲ ಎಂಬುದನ್ನು ನೆನಪಿನಲ್ಲಿಡೋಣ. ಬೇರೆಯವರಂತೆ ಕಾನೂನಾತ್ಮಕವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಕ್ಕು ಅವರಿಗೂ ಇದೆ.

ದರ್ಶನ್ ಯಾವಾಗಲೂ ನನ್ನನ್ನು ಮದರ್ ಇಂಡಿಯಾ ಎಂದು ಕರೆಯುತ್ತಾರೆ ಮತ್ತು ನಾನು ಬದುಕಿರುವವರೆಗೂ ಅವನು ನನ್ನ ಹಿರಿಯ ಮಗನಾಗಿರುತ್ತಾನೆ. ನಮ್ಮ ಬಂಧ ಒಂದೇ ಮತ್ತು ಯಾವುದೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರ ತಾಯಿಯಾಗಿ ನಾನು ಸತ್ಯ ಹೊರಬರಲಿ ಮತ್ತು ಎಲ್ಲರಿಗೂ ನ್ಯಾಯ ಸಿಗಲಿ ಎಂದು ದೇವರಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದೇನೆ. ಅವರು ತಮ್ಮನ್ನು ತಾವು ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ ಮತ್ತು ಚಿತ್ರೀಕರಣ, ಸಾಮಾನ್ಯ ಜೀವನವನ್ನು ಪುನರಾರಂಭಿಸುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ.

ಕಾನೂನಿಗಿಂತ ಮೇಲಲ್ಲ

ದರ್ಶನ್ ಅಭಿಮಾನಿಗಳಿಗೆ ಒಂದು ಹೃತ್ಪೂರ್ವಕ ವಿನಂತಿ, ದಯವಿಟ್ಟು ಶಾಂತವಾಗಿರಿ ಮತ್ತು ಈ ಕ್ಷಣದಲ್ಲಿ ಹೇಳಿಕೆಗಳನ್ನು ನೀಡಬೇಡಿ ಅಥವಾ ಯಾವುದೇ ನಕಾರಾತ್ಮಕತೆಗೆ ಪ್ರತಿಕ್ರಿಯಿಸಬೇಡಿ. ಅದು ಅವರ ಕುಟುಂಬ ಅಥವಾ ಹತ್ತಿರದವರ ಮೇಲೆ ಪರಿಣಾಮ ಬೀರಬಹುದು. ಇದು ಕೇವಲ ಕೆಟ್ಟ ಹಂತ, ಆದರೆ ಅವರಿಗೆ ನಮ್ಮೆಲ್ಲರ ನೈತಿಕ ಬೆಂಬಲದ ಅಗತ್ಯವಿದೆ. ಆದ್ದರಿಂದ ಎದೆಗುಂದಬೇಡಿ.

ನಮ್ಮಲ್ಲಿ ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ನಾವು ಅದನ್ನು ಗೌರವಿಸಬೇಕು, ಮತ್ತು ತಾಳ್ಮೆಯಿಂದ ಕಾಯಬೇಕು. ಒಳ್ಳೆಯ ಸಮಯ ಮರಳಲು ಪ್ರಾರ್ಥಿಸಬೇಕು.

ನಮ್ಮ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ.
ದೇವರಲ್ಲಿ ನಂಬಿಕೆಯಿರಲಿ.
ಎಲ್ಲವೂ ಸರಿಯಾಗುತ್ತವೆ.
ಸತ್ಯಮೇವ ಜಯತೇ ಎಂದು ಬರೆದುಕೊಂಡಿದ್ದರು.

Continue Reading

ಕ್ರೈಂ

Assault Case: ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

Assault Case: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್‌ ʼಏಯ್ ಹೋಗ್ರೋʼ ಎಂದಿದ್ದಾರೆ.

VISTARANEWS.COM


on

assault case anekal
Koo

ಆನೇಕಲ್: ಪುಡಿ ರೌಡಿಗಳು (Rowdy Sheeters) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಅಟ್ಯಾಕ್‌ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ʼಏಯ್ ಹೋಗೋʼ ಎಂದಿದ್ದಕ್ಕೆ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿ ಕೊಚ್ಚಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ನಡೆದಿರುವುದು ಬೆಂಗಳೂರು ಹೊರವಲಯ (Bangalore Rural) ಆನೇಕಲ್ (Anekal) ತಾಲ್ಲೂಕಿನ ‌ಜಿಗಣಿಯಲ್ಲಿ.

ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರದಲ್ಲಿ ಘಟನೆ ನಡೆದಿದ್ದು, ವಾಬಸಂದ್ರ ವಾಸಿ ನಾಗರಾಜ್(26) ಹಲ್ಲೆಗೊಳಗಾದ ಯುವಕ. ಮುಂಜಾನೆ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಲೆಮನ್ ಡ್ರಾಪ್ಸ್ ಟೀ ಅಂಗಡಿ ಬಳಿ ಟೀ ಕುಡಿದು ವಾಪಸ್ ಆಗುತ್ತಿದ್ದ ವೇಳೆ ಆಟೋದಲ್ಲಿ ಬಂದ ಅಪರಿಚಿತರು ನಾಗರಾಜ್ ಮತ್ತು ಸ್ನೇಹಿತರಿಗೆ ಆವಾಜ್ ಹಾಕಿದ್ದಾರೆ. ಆಗ ನಾಗರಾಜ್‌ ʼಏಯ್ ಹೋಗ್ರೋʼ ಎಂದಿದ್ದಾರೆ.

ಅಷ್ಟಕ್ಕೆ ಮನೆವರೆಗೂ ನಾಗರಾಜ್‌ನನನ್ನು ಹಿಂಬಾಲಿಸಿದ್ದ ಆರೋಪಿಗಳು, ಮನೆ ಬಳಿ ಮಾರಕಾಸ್ತ್ರಗಳಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಮುಖ, ಕೈ, ಕುತ್ತಿಗೆಗೆ ಲಾಂಗ್‌, ಮಚ್ಚುಗಳಿಂದ ಯದ್ವಾತದ್ವಾ ಕೊಚ್ಚಿ ಹಾಕಿ, ಹಲ್ಲೆ ಬಳಿಕ ಆಟೋ ಸಮೇತ ಪರಾರಿಯಾಗಿದ್ದಾರೆ. ಗಾಯಾಳು ನಾಗರಾಜ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರೌಡಿ ಶೀಟರ್‌ಗಳಾದ ಮೇಲುಕೋಟೆ ಮೂಲದ ಸೂರ್ಯ, ಯಾರಂಡಹಳ್ಳಿ ವಾಸಿ ಪ್ರವೀಣ್ ಮತ್ತು ಇತರರಿಂದ ಕೃತ್ಯ ನಡೆದಿರುವ ಶಂಕೆ ಇದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಇತ್ತೀಚೆಗೆ ಕ್ರೈಮ್‌ ನಿಯಂತ್ರಣಕ್ಕೆ ಸಿಗದಂತೆ ಹೆಚ್ಚುತ್ತಿದೆ. ಕಳೆದ ತಿಂಗಳು 26ನೇ ತಾರೀಕು ಗುರಾಯಿಸಿದ ಎಂದು ಬಾರ್‌ನಲ್ಲಿ ತಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಮರ್ಡರ್ ಮಾಡಲಾಗಿತ್ತು. ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಲ್ಕೆರೆ ಬಾರ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಹರ್ಷವರ್ಧನ್ ಕೊಲೆಯಾಗಿತ್ತು. ಇದೀಗ ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಮಾರಕ ದಾಳಿ ನಡೆದಿದೆ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ನಡೆಯುತ್ತಿದೆ. ಗೂಂಡಾಗಿರಿ ನಡೆಸತ್ತಿರುವ ಪಾತಕಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಶ್ರೀಸಾಮಾನ್ಯರು ಅಳಲು ತೋಡಿಕೊಳ್ಳುತ್ತಾರೆ.

ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.

ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಈ ವೇಳೆ ದಯಾನಂದ್‌ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: Parappana Agrahara: ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲು ಸಾಗಿಸುತ್ತಿದ್ದ ಕೈದಿ; 2 ಫೋನ್‌ ಎಲ್ಲಿಟ್ಟುಕೊಂಡಿದ್ದ ಗೊತ್ತಾ?

Continue Reading

ಕೋಲಾರ

Chemicals in Food: ಕ್ಯಾನ್ಸರ್​ ಕಾರಕ ಅಂಶವಿರುವ ರಾಸಾಯನಿಕ ಕಲರ್ ಬಳಸಿದ ಸ್ವೀಟ್​ ವಶಕ್ಕೆ

Chemicals in Food: ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು.

VISTARANEWS.COM


on

chemicals in food
Koo

ಕೋಲಾರ: ಕ್ಯಾನ್ಸರ್‌ ಕಾರಕ (Carcinogenic) ಅಂಶಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳನ್ನು (Chemical color) ಬಳಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಜಿಎಫ್​ (KGF) ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್​​ ಅಂಗಡಿಗಳ (Sweet stalls) ಮೇಲೆ ನಗರಸಭೆ ಪೌರಾಯುಕ್ತ ಪವನ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ರಾಸಾಯನಿಕ ಹೊಂದಿದ (Chemicals in Food) ಕೃತಕ ಬಣ್ಣ ಬಳಸಿ ತಯಾರು ಮಾಡಿದ್ದ ಸ್ವೀಟ್​ ಹಾಗೂ ತಿಂಡಿಗಳನ್ನು (Seize) ವಶಕ್ಕೆ ಪಡೆಯಲಾಯಿತು.

ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್​ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್​ ನೀಡಿ ದಂಡ ವಿಧಿಸಲಾಗಿದೆ. ಕಲರ್ ಬಳಸಿ ತಯಾರು ಮಾಡಿದ ಸ್ವೀಟ್​ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದರು.

ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್‌ ಸೆಂಟರ್​ಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್‌ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್​ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವೀಟ್​​ ಅಂಗಡಿಗಳ ಮೇಲೆ ದಾಳಿ ನಡೆದಿದೆ.

ಪಾನಿಪುರಿಯಲ್ಲೂ ಹಾನಿಕಾರಕ ರಾಸಾಯನಿಕ, ಬ್ಯಾನ್‌ಗೆ ಚಿಂತನೆ

ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Continue Reading
Advertisement
Job Alert
ಉದ್ಯೋಗ2 mins ago

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

UK Election
ವಿದೇಶ8 mins ago

UK Election: ಬ್ರಿಟನ್‌ನಲ್ಲಿ ಲೇಬರ್‌ ಪಾರ್ಟಿಗೆ ಗದ್ದುಗೆ ಖಚಿತ- ಪ್ರಧಾನಿ ಪಟ್ಟಕೇರಲಿರುವ ಕೀರ್‌ ಸ್ಟಾರ್ಮರ್‌ ಹಿನ್ನೆಲೆ ಏನು?

IAS Transfer
ಪ್ರಮುಖ ಸುದ್ದಿ8 mins ago

IAS Transfer: ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಯಾರ್ಯಾರು ಎಲ್ಲಿಗೆ?

viral video
ಕ್ರೀಡೆ23 mins ago

Viral Video: ಜನಸಂದಣಿ ಮಧ್ಯೆಯೂ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ಟೀಮ್‌ ಇಂಡಿಯಾ ಅಭಿಮಾನಿಗಳು

Bajaj Freedom 125
ಆಟೋಮೊಬೈಲ್25 mins ago

Bajaj Freedom 125: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಫ್ರೀಡಂ 125 ಇಂದು ಬಿಡುಗಡೆ

Sumalatha Ambareesh Talks About Darshan Fans And Renukaswamy Case
ಸ್ಯಾಂಡಲ್ ವುಡ್41 mins ago

Actor Darshan: ದರ್ಶನ್‌ ಕೇಸ್‌ ಬಗ್ಗೆ ಮಾತನಾಡದೇ ಇರೋದಕ್ಕೆ ಕಾರಣ ತಿಳಿಸಿದ ಸಮಲತಾ; ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದೇನು?

Team India
ಕ್ರೀಡೆ54 mins ago

Team India: ವಾಂಖೆಡೆ ಸ್ಟೇಡಿಯಂನಲ್ಲಿ ವಂದೇ ಮಾತರಂ ಹಾಡಿದ ಟೀಮ್​ ಇಂಡಿಯಾ; ವಿಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್

Vastu Tips
ಧಾರ್ಮಿಕ1 hour ago

Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!

assault case anekal
ಕ್ರೈಂ1 hour ago

Assault Case: ʼಏಯ್‌ ಹೋಗೋʼ ಅಂದಿದ್ದಕ್ಕೆ ವಿಕಲ ಚೇತನನನ್ನು ಕೊಚ್ಚಿ ಹಾಕಿದರು!

Anant-Radhika Wedding Justin Bieber arrives in Mumbai
ಬಾಲಿವುಡ್1 hour ago

Anant-Radhika Wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಕೆನಡಾದ ಖ್ಯಾತ ಗಾಯಕ ಆಗಮನ; ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ3 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ17 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ18 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ20 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ22 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ23 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌