Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು - Vistara News

ಮಹಿಳೆ

Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು

ಒಬ್ಬಂಟಿಯಾಗಿ ಪುಟ್ಟ ಮಗುವನ್ನು ಸಾಕಿ ಬೆಳೆಸುವುದು ಕಷ್ಟವೆಂದರೆ ಕಷ್ಟ. ಈ ಹಾದಿಯಲ್ಲಿ ಎದುರಾಗುವ ಸವಾಲುಗಳು ದುಪ್ಪಟ್ಟು. ಸಿಂಗಲ್‌ ಮದರ್‌ ಆಗುವ ಮುನ್ನ ಇವುಗಳನ್ನು ಗಮನಿಸಿಕೊಳ್ಳಬೇಕು.

VISTARANEWS.COM


on

single mother
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಅಮ್ಮನೆಂಬ ಕೆಲಸ ಎಷ್ಟು ಸಂತೋಷ ಹಾಗೂ ತೃಪ್ತಿದಾಯಕವೋ ಅಷ್ಟೇ ಕಷ್ಟವೂ ಜವಾಬ್ದಾರಿಯುತ ಕೆಲಸವೂ ಹೌದು. ಮಗುವಿಗೆ ಅಮ್ಮನಿಂದಲೂ ಅಪ್ಪನಿಂದಲೂ ದಕ್ಕುವ ಬಹಳಷ್ಟು ಅಂಶಗಳು ಕೇವಲ ಅಮ್ಮನೇ ಕೊಡಬೇಕಾಗಿ ಬರುವುದು ಇನ್ನೂ ಕಷ್ಟದ್ದು. ಸಿಂಗಲ್‌ ಪೇರೆಂಟಿಂಗ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ, ಮತ್ತು ಅತಿ ಸಾಮಾನ್ಯವಾಗಿರುವ ವಿಚಾರವೇ ಆಗಿದ್ದರೂ, ಮಗುವೊಂದನ್ನು ಒಬ್ಬಳೇ ಬೆಳೆಸುವುದು ನಿಜವಾಗಿಯೂ ಚಾಲೆಂಜಿಂಗ್‌ ಕೆಲಸವೇ ಸರಿ!

ಹೆಚ್ಚುತ್ತಿರುವ ಡಿವೋರ್ಸ್‌ ಪ್ರಕರಣಗಳು, ಇದ್ದಕ್ಕಿದ್ದಂತೆ ಸಂಭವಿಸುವ ದುರ್ಘಟನೆಗಳು ಸೇರಿದಂತೆ ಹಲವಾರು ಸಂದರ್ಭಗಳು ಇಬ್ಬರ ಮೇಲಿದ್ದ ಜವಾಬ್ದಾರಿಯನ್ನು ಒಬ್ಬರಿಗೆ ಹಸ್ತಾಂತರಿಸಿಬಿಡುತ್ತದೆ. ಹೀಗಿದ್ದಾಗ, ಇದ್ದಕ್ಕಿದ್ದಂತೆ ಅಮ್ಮನಾಗಿ, ಅಪ್ಪನಾಗಿ ನಿರ್ವಹಿಸಬೇಕಾದ ಎಲ್ಲ ಕೆಲಸಗಳೂ ಒಬ್ಬರ ಹೆಗಲಿಗೆ ಬಿದ್ದು ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ತಾವಾಗಿ ತಂದುಕೊಳ್ಳುವುದಲ್ಲವಾದರೂ, ಇಂದಿನ ಸಮಾಜದಲ್ಲಿ ಮಹಿಳೆಯರು ದಿಟ್ಟವಾಗಿ ಸಿಂಗಲ್‌ ಪೇರೆಂಟಿಂಗ್‌ ಕಡೆ ಮುಖ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದು ಸಂಬಂಧಗಳಲ್ಲಿ ಇಂದಿನ ಬದಲಾದ ಆದ್ಯತೆಗಳನ್ನು ಬಿಡಿಸಿ ಹೇಳುತ್ತಿದೆ.

೧. ಹಣಕಾಸು ಮತ್ತು ವೃತ್ತಿ: ತಮ್ಮ ಮಕ್ಕಳನ್ನು ಪ್ರೀತಿಸುವ ಯಾವ ಹೆತ್ತವರೇ ಆಗಲಿ ಕಷ್ಟ ಪಟ್ಟಾದರೂ ತನಗಿಂದ ಚಂದದ ಜೀವನ ಅವರದಾಗಲಿ ಎಂಬ ನಿಸ್ವಾರ್ಥದಿಂದ ಬೆಳೆಸಲು ಬಯಸುವುದು ಮಾನವ ಸಹಜ ಗುಣ. ಹಾಗೆಯೇ ತಮ್ಮ ಮಕ್ಕಳು ಆಸೆಪಟ್ಟ ವಸ್ತುಗಳಿಂದ ಹಿಡಿದು ಅವರು ಕಲಿಯಲಿಚ್ಛಿಸಿದ ಕೋರ್ಸುಗಳವರೆಗೆ ಮಕ್ಕಳಿಗೆ ಬೇಕಾದ್ದನ್ನೆಲ್ಲ ಅವರಿಗೆ ಸಿಗುವಂತೆ ಮಾಡಲು ತಾನು ಕಷ್ಟಪಟ್ಟು ದುಡಿಯಲು ಬಯಸುತ್ತಾರೆ. ಸಿಂಗಲ್‌ ಪೇರೆಂಟಿಂಗ್‌ ಸಂದರ್ಭ, ಈ ಒತ್ತಡ ಇನ್ನೂ ಹೆಚ್ಚುತ್ತದೆ. ಇಬ್ಬರ ಹೆಗಲು ಒಂದೇ ಆಗಿರುವ ಸಂದರ್ಭ ಮಕ್ಕಳ ಪ್ರತಿ ಬೇಕು ಬೇಡಗಳನ್ನು ಗಮನಿಸುತ್ತಾ ಅವರ ಜೀವನದ ಮಹತ್ವದ ಮೈಲುಗಲ್ಲುಗಳನ್ನು ಅನುಭವಿಸುತ್ತಾ ಮನೆಯ ಆರ್ಥಿಕ ಅಗತ್ಯಗಳನ್ನು ಪೂರೈಸಲು ರಾತ್ರಿ ಹಗಲು ಕೆಲಸ ಮಾಡುವುದು ಒಬ್ಬರೇ ಇದ್ದಾಗ ಬಲು ಚಾಲೆಂಜಿಂಗ್!‌

೨.ಜವಾಬ್ದಾರಿ: ಪ್ರತಿಯೊಬ್ಬ ಸಿಂಗಲ್‌ ತಾಯಿಯೂ ಅನುಭವಿಸುವ ದೊಡ್ಡ ಚಾಲೆಂಜ್‌ ಎಂದರೆ ಮಗುವಿನ ಎಲ್ಲ ಜವಾಬ್ದಾರಿಯನ್ನು ತಾನೊಬ್ಬಳೇ ಹೊರಬೇಕಾಗಿ ಬರುವುದು. ಮಗುವೊಂದನ್ನು ಜವಾಬ್ದಾರಿಯುತ ಉತ್ತಮ ಪ್ರಜೆಯನ್ನಾಗಿ ಬೆಳೆಸುವುದು, ತಪ್ಪಿದಲ್ಲಿ ತಿದ್ದಿ ನಡೆಸುವುದು, ಮಗುವಿನ ಪ್ರತಿ ಹಂತದಲ್ಲೂ ತಾನಿದ್ದೇನೆ ಎಂಬಂತೆ ಗಟ್ಟಿಯಾಗಿ ನಿಲ್ಲುವುದು ಪ್ರತಿ ಅಮ್ಮನಿಗೂ ಚಾಲೆಂಜಿಂಗ್.‌ ಇಲ್ಲಿ ಸುತ್ತಮುಲಿನವರು, ಗೆಳೆಯರು, ಸಂಬಂಧಿಗಳು ಸಲಹೆಗೆ, ಸಹಾಯಕ್ಕೆ ಇದ್ದರೂ ಅಂತಿಮವಾಗಿ ಮಗುವಿನ ಸಂಬಂಧೀ ನಿರ್ಧಾರಗಳಿಗೆ ತಾಯಿಯೇ ಅಂತಿಮ.

೩.ಅಪರಾಧಿ ಪ್ರಜ್ಞೆ: ಮಗುವಿನ ಅಪ್ಪನೊಂದಿಗಿನ ಸಂಬಂಧದಿಂದ ಹೊರಬಂದಿರುವ ನೋವಿನಿಂದ ಅಥವಾ ದುರ್ಘಟನೆಯಿಂದ ಕಳೆದುಕೊಂಡಿದ್ದಾದರೆ ಆ ದುಃಖದಿಂದ ಹೊರಬಂದು ಮಗುವನ್ನು ಬೆಳೆಸುವುದು ಅತ್ಯಂತ ಕಠಿಣ ಜವಾಬ್ದಾರಿ. ತನಗಾದ ನೋವನ್ನು ಕಾಣಿಸದಂತೆ, ಮಗುವಿನ ಭವಿಷ್ಯದ ಬಗ್ಗೆ ಯೋಚಿಸುವುದು, ತನ್ನ ನಿರ್ಧಾರಗಳ ಫಲದಿಂದ ಈ ಪರಿಸ್ಥಿತಿ ಎದುರಿಸಬೇಕಾಯಿತೇ/ ಮಗುವಿಗೆ ದಕ್ಕಬೇಕಾದ ಪ್ರೀತಿಯಿಂದ ವಂಚಿಸಿದೆನೇ ಎಂಬಿತ್ಯಾದಿ ಅಪರಾಧೀ ಪ್ರಜ್ಞೆಯಿಂದ ನರಳುವುದು, ಹಾಗೂ ಈ ಸಂಬಂಧ ಮಗುವಿನ ಬೇಸರಗಳಿದ್ದರೆ ಅದರ ನೋವಿನಲ್ಲಿ ತಾನಿದ್ದೇನೆ ಎಂದು ತೋರಿಸಬೇಕಾದ ಕಾಳಜಿ ಎಲ್ಲವೂ ಮಾನಸಿಕವಾಗಿ ಒಬ್ಬ ಸಿಂಗಲ್‌ ಪೇರೆಂಟ್‌ ತಾಯಿಯನ್ನು ಹೈರಾಣಾಗಿಸಿಬಿಡುವ ಸಂಭವವಿದೆ.

ಇದನ್ನೂ ಓದಿ: ಅಂದು ಜಸ್ಟ್‌ ಪಾಸ್‌, ಇಂದು ಐಎಎಸ್:‌ ಭರೂಚ್‌ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ

೪. ಸಾಮಾಜಿಕ ಜೀವನ: ಇಬ್ಬರ ಜವಾಬ್ದಾರಿ ಒಬ್ಬರ ಹೆಗಲ ಮೇಲೆ ಬಿದ್ದ ಮೇಲೆ ಖಂಡಿತವಾಗಿಯೂ ಸಾಮಾಜಿಕ ಜೀವನದಲ್ಲಿ ಏರುಪೇರಾಗುತ್ತದೆ. ತನ್ನ ಗೆಳೆಯರು, ಗೆಳತಿಯರು, ಪ್ರವಾಸ, ಪಾರ್ಟಿ ಇತ್ಯಾದಿಗಳಿಗೆ ತನ್ನ ಖುಷಿಗಳಿಗೆ ಸಮಯ ಹೊಂದಿಸುವುದು ಖಂಡಿತ ಕಷ್ಟವಾಗಬಹುದು.

೫. ಹೊಸ ಪ್ರೀತಿ: ಬಹಳಷ್ಟು ಸಲ ಏಕಾಕಿತನ ಕಾಡಬಹುದು. ತನಗಾಗಿ ಮಿಡಿಯುವ ತನ್ನ ಕೆಲಸಗಳಿಗೆ ಹೆಗಲು ನೀಡುವ ಅಥವಾ ತನ್ನ ತುಮುಲಗಳಿಗೆ ಕಿವಿಯಾಗುವ, ಪ್ರೀತಿಸುವ ಇನ್ನೊಂದು ಜೀವ ತನಗಾಗಿ ಇರಬೇಕು ಎಂದು ಬಯಸುವುದು ಮಾನವ ಸಹಜ ಗುಣ. ಆಕೆ ಮತ್ತೆ ಪ್ರೀತಿಯಲ್ಲಿ ಬೀಳುವುದು ಮನುಷ್ಯಳಾಗಿ ಮಾಡುವುದು ತಪ್ಪಲ್ಲದೇ ಇರಬಹುದು. ಆದರೆ, ಅಮ್ಮನಾಗಿ ಆಕೆಯ ಇಂತಹ ಆಸಕ್ತಿಗಳು ಮಗುವಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು. ಇಂತಹ ಅಸಹಾಯಕತೆ ಆಕೆಯನ್ನೂ ಮಾನಸಿಕವಾಗಿ ಜರ್ಜರಿತಳನ್ನಾಗಿ ಮಾಡಬಹುದು.

೬. ಅಭದ್ರತೆ: ಸಿಂಗಲ್‌ ಆಗಿ ಮಗುವನ್ನು ಬೆಳೆಸುವುದು ಜೀವನದುದ್ದಕ್ಕೂ ಹಲವು ಅಭದ್ರತೆಗಳನ್ನು ಕಾಡುವಂತೆ ಮಾಡಬಹುದು. ಮಗುವಿಗೆ ಅಪ್ಪನ ಪ್ರೀತಿ ದಕ್ಕದಂತಾಗುವಲ್ಲಿ ತಾನೂ ಕಾರಣವೇ?, ಸರಿಯಾಗಿ ಬೆಳೆಸುತ್ತಿದ್ದೇನೆಯೇ? ಅಪ್ಪನಿಲ್ಲ ಎಂಬ ಕಾರಣಕ್ಕೆ ಮಗು ಹೊರಗಿನವರಿಂದ ಮೂದಲಿಕೆಗಳನ್ನು ಕೇಳಬೇಕಾಗುತ್ತಿದೆಯೇ? ಇತ್ಯಾದಿ ಇತ್ಯಾದಿ ಭಾವಗಳು ಯಾವಾಗಲೂ ಕಾಡುತ್ತಲೇ ಇರಬಹುದು. ಒಂದು ದಿನ ತಾನು ಅದ್ಭುತವಾಗಿ ಮಗುವನ್ನು ಒಬ್ಬಳೇ ಬೆಳೆಸಿಬಿಟ್ಟೆ ಎಂದು ಹೆಮ್ಮೆ ಪಡುವ ದಿನ ಬರಬಹುದಾದರೂ, ಜೀವನದುದ್ದಕ್ಕೂ ಇಂತಹ ಅಭದ್ರತೆಗಳು ಕಾಡದೆ ಇರದು.

ಇದನ್ನೂ ಓದಿ: ಹಿಮಚ್ಛಾದಿತ ಪರ್ವತಗಳ ನಡುವೆ 56 ಗಂಟೆಗಳಲ್ಲಿ 430 ಕಿ.ಮೀ cycling, ಮಹಿಳೆಯಿಂದ ಗಿನ್ನಿಸ್‌ ದಾಖಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

VISTARANEWS.COM


on

ಬೆಂಗಳೂರು, ಏ.19: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇಂಡಿಯಾ ಒಕ್ಕೂಟಕ್ಕೆ ಜಯವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ” ಎಂದರು.
ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲ” ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದೂ ಶಿವಕುಮಾರ್‌ ಹೇಳಿದ್ದಾರೆ.
ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ
ವಿಪಕ್ಷಗಳ ವಿರುದ್ದ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ” ಎಂದರು.
“ಈ ಹಿಂದೆ ರಾಜೀವ್ ಗಾಂಧಿಯವರು ಶೇ 50 ರಷ್ಟು ಮೀಸಲಾತಿ ತಂದಿದ್ದರು. ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ಈ ಬಿಲ್ ಅಡಿಯಲ್ಲಿ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮನ್ನೆಲ್ಲಾ ಕರೆದು ಚರ್ಚೆ ಮಾಡಬೇಕಿತ್ತು” ಎಂದು ಹೇಳಿದರು.

Continue Reading

Latest

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

VISTARANEWS.COM


on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದಾಗ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದು ಸರಿಯಷ್ಟೇ. ಈ ಸಂದರ್ಭದಲ್ಲಿ ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಪಿಸುಗುಟ್ಟಿದ ಫೋಟೋ ಭಾರಿ ವೈರಲ್‌ ಆಗಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಮೋದಿ ಅವರು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನು ಹೇಳಿರಬಹುದು ಎಂದು ಕುತೂಹಲ ಮೂಡಿದ್ದು ಮಾತ್ರವಲ್ಲದೆ, ಊಹಾಪೋಹಗಳಿಗೂ ಕಾರಣವಾಗಿತ್ತು.
ಇದೀಗ ಮೋದಿ-ಸಿದ್ದರಾಮಯ್ಯ ಅವರ ಮಾತಿನ ರಹಸ್ಯ ಬಹಿರಂಗವಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ.
ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಮೋದಿ ಇಬ್ಬರು ಗುಟ್ಟಾಗಿ ಏನನ್ನೂ ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳೀದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಉತ್ತರಿಸಿದೆ. ಇಷ್ಟು ವಿಚಾರ ಬಿಟ್ಟು ಬೇರೆ ಏನೂ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

Continue Reading

ಬೆಂಗಳೂರು

Bengaluru News: ಮಹಿಳೆಗೆ ಮಾತ್ರ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿಯಿದೆ; ದಿವ್ಯಾ ರಂಗೇನಹಳ್ಳಿ

Bengaluru News: ಮಹಿಳೆಗೆ ಮಾತ್ರ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಲೆ ಎತ್ತಿ ನಿಂತಿದ್ದಾಳೆ. ಮಹಿಳೆಯರ ಸ್ಥೈರ್ಯ, ಸ್ಫೂರ್ತಿಯೇ ಇಂದು ಆಕೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದೆ. ಇದೊಂದು ಉತ್ತಮ ಅವಕಾಶಗಳನ್ನು ಒದಗಿಸುವ ಉಪಯುಕ್ತ ವೇದಿಕೆಯಾಗಲಿ ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಹೇಳಿದರು.

VISTARANEWS.COM


on

Glittering Entrepreneurs vedike inauguration in bengaluru

ಬೆಂಗಳೂರು: ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿದ್ದಾಳೆ. ಆಕೆಗೆ ಮಾತ್ರ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ (Bengaluru News) ಹೇಳಿದರು.

ನಗರದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಸಭಾ ವತಿಯಿಂದ ಆಯೋಜಿಸಲಾದ ಗ್ಲಿಟರಿಂಗ್‌ ಎಂಟರ್‌ಪ್ರಿನರ್ಸ್‌ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಗೆ ಮಾತ್ರ ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಲೆ ಎತ್ತಿ ನಿಂತಿದ್ದಾಳೆ. ಮಹಿಳೆಯರ ಸ್ಥೈರ್ಯ, ಸ್ಫೂರ್ತಿಯೇ ಇಂದು ಆಕೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿರುವುದು. ಇದೊಂದು ಉತ್ತಮ ಅವಕಾಶಗಳನ್ನು ಒದಗಿಸುವ ಉಪಯುಕ್ತ ವೇದಿಕೆಯಾಗಲಿ ಎಂದು ಆಶಿಸಿದರು.

ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಶಂಕರ್‌ ಮಾತನಾಡಿ, ಮಹಿಳೆಯರು ಬೆಳೆಯುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ನೀವು ಯಾವುದೇ ರೀತಿಯ ಸಹಾಯಗಳನ್ನು ಕೋರಿದ್ದಲ್ಲಿ ಖಂಡಿತಾ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಕಾರ್ಯಕ್ರಮದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಾಸಭಾ ಸಮಾಜದ ಜಾಗತಿಕ ಅಧ್ಯಕ್ಷ ರಾಮಕೃಷ್ಣ ಟಂಗುಟೂರಿ ಮಾತನಾಡಿ, ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾಳೆ. ಪುರುಷರಿಗಿಂತ ಮಹಿಳಾ ಉದ್ಯಮಿಗಳೇ ಹೆಚ್ಚಾಗಿದ್ದಾರೆ. ಅವರ ಆತ್ಮಸ್ಥೈರ್ಯದಿಂದ ಇಂದು ಜಗತ್ತಿನೆಲ್ಲೆಡೆ ದಾಪುಗಲನ್ನು ಇಟ್ಟಿದ್ದಾರೆ. ಇದಕ್ಕೆ ವರ್ಲ್ಡ್‌ ಆರ್ಯವೈಶ್ಯ ಮಹಾಸಭಾ ಕೂಡ ಪ್ರೋತ್ಸಾಹಿಸುತ್ತಾ ಬಂದಿದೆ. ಈ ವೇದಿಕೆ ಮಹಿಳಾ ಉದ್ಯಮಿಗಳಿಗೆ ಇನ್ನಷ್ಟು ಭರವಸೆಗಳನ್ನು ನೀಡಲು ಎಂದು ಹೇಳಿದರು.

ಇದನ್ನೂ ಓದಿ: Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

ಈ ಸಂದರ್ಭದಲ್ಲಿ ವರ್ಲ್ಡ್‌ ಆರ್ಯವೈಶ್ಯ ಮಹಸಭಾ ಅಧ್ಯಕ್ಷೆ ಲಕ್ಷ್ಮಿ ಸಿ.ಪಿ, ಕಾರ್ಯದರ್ಶಿ ಪ್ರತಿಭಾ ಪ್ರಸಾದ್, ಪ್ರವೀಣ, ಅಶ್ವಿನಿ, ದೀಪಶ್ರೀ, ಶಿಲ್ಪಾ ಉಮೇಶ್, ಕವಿತಾ ಪಣಿರಾಜ್, ಸ್ನೇಹಾ ಕಾರ್ತಿಕ್, ಗೌರಿ ದತ್ತ, ಸುಬ್ಬಲಕ್ಷ್ಮಿ, ಸುನಿತಾ ಪ್ರಸಾದ್, ಸಿಂಧು ಸಫರಂ ಮತ್ತು ವರ್ಲ್ಡ್‌ ಆರ್ಯವೈಶ್ಯ ಮಹಸಭಾ ಸದಸ್ಯರು ಉಪಸ್ಥಿತರಿದ್ದರು.

Continue Reading

ಲೈಫ್‌ಸ್ಟೈಲ್

Tips For Happy Mother: ತಾಯ್ತನವನ್ನು ಸಂಭ್ರಮಿಸಿ; ನಿರಂತರ ಸಂತೋಷವಾಗಿರಲು ಈ 10 ಅಭ್ಯಾಸಗಳನ್ನು ಪಾಲಿಸಿ

ತಾಯಂದಿರು ದೈನಂದಿನ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಸ್ವಂತ ಸಂತೋಷವನ್ನು ಕಳೆದುಕೊಳ್ಳುವುದು ಸುಲಭ. ಈ ಸರಳ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಂದಿರು ಸಂತೋಷವನ್ನು (Tips For Happy Mother) ಬೆಳೆಸಿಕೊಳ್ಳಬಹುದು ಮತ್ತು ತಮಗಾಗಿ, ತಮ್ಮ ಮನೆಯವರಿಗಾಗಿ ತಾಯ್ತನದ ಸಂಪೂರ್ಣ ಅನುಭವವನ್ನು ಕೊಡಬಹುದು.

VISTARANEWS.COM


on

By

Tips For Happy Mother

ತಾಯಿತನ (Tips For Happy Mother) ಎನ್ನುವುದು ಅತ್ಯಂತ ಸುಂದರ ಅನುಭವ. ಆದರೆ ಇದರ ಜೊತೆಜೊತೆಗೆ ಬರುವ ಜವಾಬ್ದಾರಿಗಳು ಎಷ್ಟೋ ಬಾರಿ ಮಹಿಳೆಯರನ್ನು (mother) ಹೈರಾಣಾಗಿಸುತ್ತದೆ. ಒಂದು ಕಡೆ ಮಗುವಿನ (baby) ಸಂಪೂರ್ಣ ಜವಾಬ್ದಾರಿ ಹೊತ್ತು ಮನೆ ಕೆಲಸ, ಮನೆ ಮಂದಿಯ ಬೇಕು, ಬೇಡಗಳನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಇದರ ನಡುವೆ ಮಹಿಳೆ ತನ್ನ ಸಂತೋಷವನ್ನು ಕಳೆದುಕೊಂಡು ಬಿಡುತ್ತಾಳೆ. ಅವಳ ಜೀವನ ನೀರಸವಾಗುವುದು. ಅದು ಮುಂದೆ ಮೊತ್ತೊಂದು ಸಮಸ್ಯೆಗಳನ್ನು ತಂದೊಡ್ಡಬಹುದು.

ತಾಯಂದಿರು ದೈನಂದಿನ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಸ್ವಂತ ಸಂತೋಷವನ್ನು ಕಳೆದುಕೊಳ್ಳುವುದು ಸುಲಭ. ಈ ಸರಳ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಂದಿರು ಸಂತೋಷವನ್ನು ಬೆಳೆಸಿಕೊಳ್ಳಬಹುದು ಮತ್ತು ತಮಗಾಗಿ, ತಮ್ಮ ಮನೆಯವರಿಗಾಗಿ ತಾಯ್ತನದ ಸಂಪೂರ್ಣ ಅನುಭವವನ್ನು ಕೊಡಬಹುದು.

ಸಂತೋಷವಾಗಿರುವ ತಾಯಿ ಮನೆಯನ್ನು ಸಂತೋಷವಾಗಿ ಇಡುತ್ತಾಳೆ ಎಂಬುದು ನೆನಪಿರಲಿ. ತಾಯ್ತನದ ಪ್ರಯಾಣಕ್ಕೆ ಸಂತೋಷ ಮತ್ತು ಯೋಗಕ್ಷೇಮವನ್ನು ತುಂಬಲು ಈ ಹತ್ತು ಸರಳ ಅಭ್ಯಾಸಗಳನ್ನು ಪಾಲಿಸಿ.


ನಿಮಗಾಗಿ ಸಮಯ

ನಿಮಗಾಗಿ ಸ್ವಲ್ಪ ಸಮಯವೂ ಸಹ ಪ್ರತಿದಿನ ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಪುಸ್ತಕವನ್ನು ಓದಿ, ವಿಶ್ರಾಂತಿ, ಸ್ನಾನ ಮಾಡಿ ಅಥವಾ ಸ್ನೇಹಿತರೊಂದಿಗೆ ಕಾಫಿಯನ್ನು ಆನಂದಿಸಿ. ಇದು ನಿಮ್ಮ ಕುಟುಂಬಕ್ಕೆ ನಿಮ್ಮ ತಾಳ್ಮೆ ಮತ್ತು ಶಕ್ತಿಯ ಇಂಧನವಾಗಿರುತ್ತದೆ. ಒತ್ತಡದ ಕರ್ತವ್ಯಗಳಿಂದ ಸ್ವಲ್ಪ ಸಮಯ ದೂರವಿರುವುದು ಮನಸ್ಸಿಗೆ ಒಳ್ಳೆಯದು.

ಉತ್ಸಾಹ ಕಂಡುಕೊಳ್ಳಿ

ಮಾತೃತ್ವವು ನಿಮ್ಮ ಉತ್ಸಾಹವನ್ನು ನಂದಿಸಲು ಬಿಡಬೇಡಿ. ಹವ್ಯಾಸವನ್ನು ಅನುಸರಿಸಿ, ಹೊಸ ಕೌಶಲವನ್ನು ಕಲಿಯಿರಿ ಅಥವಾ ನೀವು ಕಾಳಜಿ ವಹಿಸುವ ಕಾರಣಕ್ಕಾಗಿ ಸ್ವಯಂ ಸೇವಕರಾಗಿರಿ. ಮಾತೃತ್ವದ ಹೊರಗೆ ಹೊಂದಿರುವ ಅನನ್ಯ ಆಸಕ್ತಿಗಳನ್ನು, ಅವಕಾಶಗಳನ್ನು ಹುಡುಕಿ. ಇದು ನಿಮ್ಮನ್ನು ನಿರಂತರ ಸಂತೋಷವಾಗಿರುವಂತೆ ಮಾಡುತ್ತದೆ.

ಸರಳ ವಿಷಯಗಳಿಗೆ ಕೃತಜ್ಞತೆ ಸಲ್ಲಿಸಿ

ಮಗುವಿನ ನಗು, ಬೆಚ್ಚಗಿನ ಅಪ್ಪುಗೆ ಮತ್ತು ರುಚಿಕರವಾದ ಊಟದಂತಹ ಚಿಕ್ಕ ವಿಷಯಗಳನ್ನು ಪ್ರಶಂಸಿಸಲು ಪ್ರತಿದಿನ ಸ್ವಲ್ಪ ಸಮಯ ತೆಗೆದುಕೊಳ್ಳಿ. ಕೃತಜ್ಞತೆಯು ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುತ್ತದೆ ಮತ್ತು ಮಾತೃತ್ವದ ಸಂತೋಷವನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ. ಜೀವನವು ತರುವ ಪ್ರೀತಿಯನ್ನು ಪ್ರಶಂಸಿಸಲು ಈ ವಿಷಯಗಳು ನಿಮಗೆ ಸಹಾಯ ಮಾಡುತ್ತವೆ!

ನಿದ್ರೆಗೆ ಆದ್ಯತೆ ನೀಡಿ

ನಿದ್ರಾಹೀನತೆಯು ಸಂತೋಷದ ಕೊಲೆಗಾರ. ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಗುರಿಯಾಗಿರಿಸಿಕೊಳ್ಳಿ, ಕೆಲವೊಮ್ಮೆ ಮಕ್ಕಳಿಗಿಂತ ಮುಂಚೆಯೇ ಮಲಗುವುದು ಎಂದರ್ಥ. ಉತ್ತಮ ನಿದ್ದೆ ಮಾಡುವುದರಿಂದ ತಾಯಂದಿರಿಗೆ ಬಹು ಮುಖ್ಯವಾಗಿರುತ್ತದೆ. ಇದರಿಂದ ಎಲ್ಲರನ್ನು ಉತ್ತಮವಾಗಿ ನೋಡಿಕೊಳ್ಳಲು ಹೆಚ್ಚು ತಾಳ್ಮೆಯನ್ನು ನಿಮ್ಮಲ್ಲಿ ಬೆಳೆಸುತ್ತದೆ.

ಸಂಬಂಧಗಳನ್ನು ಪೋಷಿಸಿ

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಲವಾದ ಸಂಪರ್ಕಗಳು ಭಾವನಾತ್ಮಕ ಬೆಂಬಲ ಮತ್ತು ಸೇರಿದ ಭಾವನೆಯನ್ನು ನೀಡುತ್ತದೆ. ಮಗುವನ್ನು ನೋಡಿಕೊಳ್ಳಲು ಅಮ್ಮಂದಿರು ತಮ್ಮ ಸ್ನೇಹವನ್ನು ಕಳೆದುಕೊಳ್ಳುವುದು ತುಂಬಾ ಸುಲಭ. ಪ್ರೀತಿಪಾತ್ರರ ಜೊತೆಗೆ ಸಂಪರ್ಕದಲ್ಲಿರಲು ನಿಯಮಿತ ಪ್ರವಾಸಗಳು, ಫೋನ್ ಕರೆಗಳು ಅಥವಾ ವಿಡಿಯೋ ಚಾಟ್‌ಗಳನ್ನು ಮಾಡಿ.

ಅಪೂರ್ಣತೆಗಳನ್ನು ಸ್ವೀಕರಿಸಿ

ಚಿತ್ರ ಪರಿಪೂರ್ಣ ಜೀವನಕ್ಕಾಗಿ ಶ್ರಮಿಸಬೇಡಿ. ಗೊಂದಲಮಯ ಕ್ಷಣಗಳು, ಕೋಪೋದ್ರೇಕಗಳು ಜೀವನದಲ್ಲಿ ಇದ್ದೇ ಇರುತ್ತದೆ. ಒಳ್ಳೆಯ ತಾಯಿಯಾಗಿರುವುದು ಪರಿಪೂರ್ಣವಾಗಿರುವುದು ಎಂದರ್ಥವಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಗೊಂದಲದಲ್ಲಿ ನಗುವುದನ್ನು ಕಲಿಯಿರಿ ಮತ್ತು ಪ್ರಯಾಣವನ್ನು ಆನಂದಿಸಿ.

ವ್ಯಾಯಾಮ

ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನೈಸರ್ಗಿಕ ಮೂಡ್ ಬೂಸ್ಟರ್‌ಗಳನ್ನು ನೀಡುತ್ತದೆ. ಚುರುಕಾದ ನಡಿಗೆ, ನೃತ್ಯ ತರಗತಿ ಅಥವಾ ಯೋಗ ಸೆಶನ್ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಮಾನಸಿಕ ಯೋಗಕ್ಷೇಮವೂ ಸುಧಾರಿಸುತ್ತದೆ.

ಸಹಾನುಭೂತಿ

ನಿಮ್ಮ ಮೇಲೆ ನಿನಗೆ ಅನುಕಂಪವಿರಲಿ. ನಿಮ್ಮ ತಪ್ಪುಗಳಿಗಾಗಿ ನಿಮ್ಮನ್ನು ಕ್ಷಮಿಸಿ. ನಿಮ್ಮ ಸಾಧನೆಗಳನ್ನು ಸಂಭ್ರಮಿಸಿ. ನಿಮ್ಮ ಸವಾಲುಗಳನ್ನು ಒಪ್ಪಿಕೊಳ್ಳಿ. ಅತಿಯಾಗಿ ಸ್ವಯಂ-ವಿಮರ್ಶಾತ್ಮಕವಾಗಿರುವುದು ನಿಮ್ಮನ್ನು ಪ್ರೇರೇಪಿಸದಂತೆ ಮತ್ತು ಕೆಟ್ಟದಾಗಿ, ಅಸಂತೋಷಿತರನ್ನಾಗಿ ಮಾಡಬಹುದು. ಯಾವುದೇ ಕೆಲಸವಿರಲಿ ನಿಮ್ಮ ಕೈಲಾದಷ್ಟು ಮಾಡಿದರೆ ಸಾಕು. ಅಗತ್ಯವಿದ್ದಾಗ ಬೇರೆಯವರ ಸಹಾಯ ಪಡೆಯಲು ಹಿಂಜರಿಯಬೇಡಿ.


ಇದನ್ನೂ ಓದಿ: 12 Tips for Better Life: ನಿಮ್ಮ ಬದುಕು ಬದಲಾಗಬೇಕೇ?; ಈ 12 ಸೂತ್ರಗಳನ್ನು ಶಿಸ್ತಾಗಿ ಪಾಲಿಸಿ!

ಗಡಿ ಗುರುತಿಸಿ

ಬೇಡ ಎಂದರೂ ಪರವಾಗಿಲ್ಲ ಎಲ್ಲವನ್ನೂ ತೆಗೆದುಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಬೇಡಿ. ಗಡಿಗಳನ್ನು ಹೊಂದಿಸುವುದು ನಿಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸುತ್ತದೆ. ನೀವು ನಿಮ್ಮ ಮಕ್ಕಳೊಂದಿಗೆ ಇರುವಾಗ ನೀವು ಸಂಪೂರ್ಣವಾಗಿ ಇರಲು ಅನುವು ಮಾಡಿಕೊಡುತ್ತದೆ.

ಅಗತ್ಯವಿದ್ದರೆ ಬೆಂಬಲವನ್ನು ಪಡೆಯಿರಿ

ಅಗತ್ಯವಿರುವಾಗ ಸಹಾಯವನ್ನು ಕೇಳಲು ಹಿಂಜರಿಯದಿರಿ. ನಿಮ್ಮ ಸಂಗಾತಿ, ಕುಟುಂಬ, ಸ್ನೇಹಿತರು ಅಥವಾ ಚಿಕಿತ್ಸಕರೊಂದಿಗೆ ಮಾತನಾಡಿ. ಬೆಂಬಲ ವ್ಯವಸ್ಥೆಯನ್ನು ಹೊಂದಿರುವುದು ಮಾತೃತ್ವದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ.

Continue Reading
Advertisement
Latest3 hours ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest3 hours ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest4 hours ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ5 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest5 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest6 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest7 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest9 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ10 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest10 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌