Navaratri: ನವರಾತ್ರಿ ನವವರ್ಣ; 9 ಬಣ್ಣಗಳ ಮಹತ್ವ ಏನು? - Vistara News

ಧಾರ್ಮಿಕ

Navaratri: ನವರಾತ್ರಿ ನವವರ್ಣ; 9 ಬಣ್ಣಗಳ ಮಹತ್ವ ಏನು?

Navaratri: ನವರಾತ್ರಿಯಂದು ಬಣ್ಣಕ್ಕೂ ಎಲ್ಲಿಲ್ಲದ ಮಹತ್ವವಿದೆ. ಈ ಹಿನ್ನಲೆಯಲ್ಲಿ ವಿವಿಧ ಬಣ್ಣಗಳ ಪ್ರಾಧಾನ್ಯತೆಯನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

devi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ನಾಳೆ(ಅಕ್ಟೋಬರ್‌ 15)ಯಿಂದ ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹಾಗಾದರೆ ಈ ಬಣ್ಣದ ಮಹತ್ವವೇನು? ಯಾವ ದಿನ ಯಾವ ಬಟ್ಟೆ? ದೇವಿಯ ಯಾವ ಅವತಾರಕ್ಕೆ ಯಾವ ಬಟ್ಟೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕಿತ್ತಳೆ

ಕಿತ್ತಳೆ ಬಣ್ಣ ಶಕ್ತಿ ಮತ್ತು ಉತ್ಸಾಹದ ಸಂಕೇತ. ಇದು ದೇವಿಯ ಕೂಷ್ಮಾಂಡಾ ಅವತಾರವನ್ನು ಪ್ರತಿನಿಧಿಸುತ್ತದೆ. ಕೂಷ್ಮಾಂಡಾ ದೇವಿ ಬೆಳಕಿನ ಸಂಕೇತ. ಹೀಗಾಗಿ ಭಕ್ತರು ಕಿತ್ತಳೆ ಬಣ್ಣದ ಬಟ್ಟೆ ಧರಿಸುತ್ತಾರೆ ಮತ್ತು ಕೇಸರಿ ಬಣ್ಣದ ಹೂವಿನ ಮೂಲಕ ದೇವಿಯನ್ನು ಆರಾಧಿಸಲಾಗುತ್ತದೆ.

ಬಿಳಿ

ಶ್ವೇತ ವರ್ಣ ಮಾತಾ ಬ್ರಹ್ಮಚಾರಿಣಿಯನ್ನು ಸಂಕೇತಿಸುತ್ತದೆ. ಶಾಂತಿ ಮತ್ತು ಸಕಾರಾತ್ಮಕತೆಯ ಸಂಕೇತ ಬಿಳಿ. ಸುಖ, ಸಮೃದ್ಧಿ, ವಿದ್ಯೆ ಕರುಣಿಸಲು ಭಕ್ತರು ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ದುಂಡು ಮಲ್ಲಿಗೆ ಬ್ರಹ್ಮಚಾರಿಣಿಗೆ ಬಹು ಪ್ರಿಯವಾದ ಹೂ ಎಂದು ಪರಿಗಣಿಸಲಾಗಿದೆ.

ಕೆಂಪು

ನವರಾತ್ರಿಯ ಮೂರನೇ ದಿನ ಮಾತಾ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿ ಕೆಂಪು ಬಣ್ಣದ ಉಡುಗೆ ಧರಿಸಿರುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಕೆಂಪು ಧೈರ್ಯ ಮತ್ತು ಶಕ್ತಿಯ ಸಂಕೇತ.

ನೀಲಿ

ಕಡು ನೀಲಿ ಬಣ್ಣವು ಕಾಳರಾತ್ರಿ ದೇವಿಗೆ ಸಂಬಂಧಿಸಿದ ಬಣ್ಣ. ತಾಯಿ ಕಾಳರಾತ್ರಿಗೆ ಕಡು ನೀಲಿ ಬಣ್ಣವನ್ನು ಮತ್ತು ಹೂವುಗಳನ್ನು ಅರ್ಪಿಸುವವರನ್ನು ಶತ್ರುಗಳು ಮತ್ತು ದುಷ್ಟ ಶಕ್ತಿಗಳಿಂದ ತಾಯಿಯು ರಕ್ಷಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಹಳದಿ

ಕಾರ್ತಿಕೇಯನನ್ನು ತನ್ನ ಮಡಿಲಿನಲ್ಲಿ ಕೂರಿಸಿಕೊಂಡಿರುವ ಸ್ಕಂದಮಾತೆಯ ನೆಚ್ಚಿನ ಬಣ್ಣ ಹಳದಿ. ಸ್ಕಂದ ಮಾತೆ ಯಾವತ್ತೂ ಹಳದಿ ಬಟ್ಟೆಯನ್ನು ಧರಿಸಲು ಇಷ್ಟ ಪಡುತ್ತಾಳೆ. ತಾಯಿಯ ಪಾಲನಾತ್ಮಕ ಗುಣವನ್ನು ಹಳದಿ ಪ್ರತಿನಿಧಿಸುತ್ತದೆ. ಆದ್ದರಿಂದ ಭಕ್ತರು ಸ್ಕಂದಮಾತೆಗೆ ಹಳದಿ ಪುಷ್ಪಗಳನ್ನು ಅರ್ಪಿಸಬೇಕು ಎಂದು ಸಲಹೆ ನೀಡಲಾಗುತ್ತದೆ.

ಹಸಿರು

ಹೃದಯ ಮತ್ತು ಆತ್ಮವನ್ನು ಶುದ್ಧೀಕರಿಸುವ ಗೌರಿ ದೇವಿಯನ್ನು ಪ್ರತಿನಿಧಿಸುವುದು ಹಸಿರು ಬಣ್ಣ. ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ಗೌರಿಯನ್ನು ಆರಾಧಿಸಿದರೆ ವೈವಾಹಿಕ ಜೀವನ ಸುಗಮವಾಗುತ್ತದೆ ಎನ್ನುವ ನಂಬಿಕೆ ಇದೆ.

ಬೂದು

ಮಾತಾ ಕಾತ್ಯಾಯಿನಿಗೆ ಬೂದು ಬಣ್ಣವನ್ನು ಸಮರ್ಪಿಸಲಾಗಿದೆ. ಅವಳನ್ನು ಯುದ್ಧದ ದೇವತೆ ಎಂದು ಪರಿಗಣಿಸಲಾಗುತ್ತದೆ. ಮಾತಾ ಕಾತ್ಯಾಯನಿಯನ್ನು ಪೂಜಿಸುವಾಗ ಬೂದು ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣ ದುಶ್ಚಟಗಳನ್ನು ತೊಡೆದುಹಾಕುತ್ತದೆ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ನೇರಳೆ

ದುರ್ಗಾ ದೇವಿಗೆ ಮೀಸಲಾಗಿರುವ ದಿನದಂದು ಆಯುಧ ಪೂಜೆ ಸಹ ಮಾಡಲಾಗುತ್ತದೆ. ಆ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿದರೆ ಉತ್ತಮ.

ಗುಲಾಬಿ

ಗುಲಾಬಿ ಬಣ್ಣವು ಸಂತೋಷ, ಸಂತೃಪ್ತಿ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಶೈಲಪುತ್ರಿ ದೇವಿಯು ಹಿಮಾಲಯ ರಾಜನ ಮಗಳು. ಅವಳು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಪುರಾಣ ಹೇಳುತ್ತದೆ. ಭಕ್ತರು ಶೈಲಪುತ್ರಿ ದೇವಿಗೆ ಗುಲಾಬಿ ಬಣ್ಣದ ಹೂವುಗಳನ್ನು ಅರ್ಪಿಸುವುದು ವಾಡಿಕೆ.

ಇದನ್ನೂ ಓದಿ: Navaratri 2023: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್‌ ಪ್ಯಾಕೇಜ್‌ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Puri Jagannath Yatra: ಜುಲೈ 7ರಂದು ಪುರಿ ಜಗನ್ನಾಥ ರಥಯಾತ್ರೆ; ಇದಕ್ಕಿದೆ ಪೌರಾಣಿಕ ಹಿನ್ನೆಲೆ

Puri Jagannath Yatra: ಒಡಿಶಾದ ಪುರಿಯ ಜಗನ್ನಾಥ ರಥಯಾತ್ರೆಯು (Puri Rath Yatra) ಜುಲೈ 7ರಂದು ಬೆಳಗ್ಗೆ ಪ್ರಾರಂಭವಾಗಲಿದ್ದು, ಜುಲೈ 16ರಂದು ಬಹುದಾ ಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ರಥಯಾತ್ರೆಯು ಜಗನ್ನಾಥ ದೇವಾಲಯದಿಂದ ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗೌರವಿಸಲಾಗುತ್ತದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ರಥಯಾತ್ರೆಯ ಹಿನ್ನೆಲೆ, ಮಹತ್ವ ಏನು? ಈ ಕುರಿತ ವರದಿ ಇದು.

VISTARANEWS.COM


on

By

Puri Jagannath Yatra
Koo

ಒಡಿಶಾದ (odisha) ಪುರಿಯ ಜಗನ್ನಾಥ ರಥಯಾತ್ರೆಯು (Puri Jagannath Yatra) ಭಾರೀ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಬಾರಿ ಜುಲೈ 7ರಂದು ಜಗನ್ನಾಥ ಯಾತ್ರೆ ನಡೆಯಲಿದೆ.

ಈ ರಥಯಾತ್ರೆಯು ಜಗನ್ನಾಥ ದೇವಾಲಯದಿಂದ ದೇವರ ಜನ್ಮಸ್ಥಳವೆಂದು ನಂಬಲಾದ ಗುಂಡಿಚಾ ದೇವಾಲಯಕ್ಕೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗೌರವಿಸಲಾಗುತ್ತದೆ. ಮೂರು ದೇವತೆಗಳನ್ನು ಪ್ರತಿ ವರ್ಷ ಹೊಸದಾಗಿ ನಿರ್ಮಿಸಲಾದ ಮೂರು ಬೃಹತ್ ಮತ್ತು ಅಲಂಕಾರಿಕ ರಥಗಳಲ್ಲಿ ಕೊಂಡೊಯ್ಯಲಾಗುತ್ತದೆ ಜಗನ್ನಾಥನ ರಥವನ್ನು ನಂದಿಘೋಷ, ಬಲಭದ್ರನ ರಥವನ್ನು ತಾಳಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ಎಂದು ಕರೆಯುತ್ತಾರೆ.


ಜಗನ್ನಾಥ ರಥ ಯಾತ್ರೆ ಯಾವಾಗ?

ಜೂನ್ ಅಥವಾ ಜುಲೈನಲ್ಲಿ ಬರುವ ಆಷಾಢ ಮಾಸದಲ್ಲಿ ಶುಕ್ಲ ಪಕ್ಷದ ಎರಡನೇ ದಿನದಂದು ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಈ ವರ್ಷ ಜುಲೈ 7ರಂದು ಭಗವಾನ್ ಜಗನ್ನಾಥನ ರಥಯಾತ್ರೆಯನ್ನು ಆಚರಿಸಲಾಗುತ್ತದೆ. ದ್ವಿತೀಯ ತಿಥಿಯು ಜುಲೈ 7 ರಂದು ಬೆಳಗ್ಗೆ 4.26ಕ್ಕೆ ಪ್ರಾರಂಭವಾಗಿ ಜುಲೈ 8ರಂದು ಬೆಳಗ್ಗೆ 4.59ಕ್ಕೆ ಕೊನೆಗೊಳ್ಳುತ್ತದೆ. ಜುಲೈ 16ರಂದು ನಡೆಯುವ ಬಹುದಾ ಯಾತ್ರೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳುತ್ತದೆ.

ಜಗನ್ನಾಥ ರಥ ಯಾತ್ರೆಯ ಇತಿಹಾಸ

ಜಗನ್ನಾಥ ರಥ ಯಾತ್ರೆಯ ಕುರಿತು ಹಲವಾರು ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆ ವರ್ಷಕ್ಕೊಮ್ಮೆ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾಜ ಇಂದ್ರದ್ಯುಮ್ನ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದರು.

ಪುರಾಣಗಳ ಪ್ರಕಾರ ಭಗವಾನ್ ವಿಶ್ವಕರ್ಮನು ಗುಂಡಿಚಾ ದೇವಸ್ಥಾನದಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯ ಪ್ರಸ್ತುತ ಪ್ರತಿಮೆಗಳನ್ನು ಮರದ ದಿಮ್ಮಿಯಿಂದ ರಚಿಸಿದನು. ಅವನು ವಿಗ್ರಹಗಳನ್ನು ರಚಿಸುವಾಗ ರಾಣಿ ಗುಂಡಿಚಾ ದೇವಾಲಯದ ಬಾಗಿಲನ್ನು ತೆರೆದಳು ಮತ್ತು ಅನಂತರ ಭಗವಾನ್ ವಿಶ್ವಕರ್ಮನು ಕಣ್ಮರೆಯಾಯಿತು. ದೇವತೆಗಳ ಮೂರ್ತಿ ಅಪೂರ್ಣವಾಯಿತು ಎಂದು ಹೇಳಲಾಗುತ್ತದೆ.

ಅಂದಿನಿಂದ ರಾಣಿ ಗುಂಡಿಚಾಗೆ ನೀಡಿದ ಭರವಸೆಯನ್ನು ಪೂರೈಸಲು ದೇವರುಗಳು ವರ್ಷಕ್ಕೊಮ್ಮೆ ಮಾತ್ರ ತಮ್ಮ ದೇವಾಲಯದಿಂದ ಹೊರಬರುತ್ತಾರೆ ಎನ್ನಲಾಗುತ್ತದೆ. ರಾಣಿಯ ಹೆಸರಿನ ಗುಂಡಿಚಾ ದೇವಾಲಯವು ಮುಖ್ಯ ದೇವಾಲಯದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಒಂಬತ್ತನೇ ದಿನದಂದು ಬಹುದಾ ಯಾತ್ರೆ ಎಂದು ಕರೆಯಲ್ಪಡುವ ಮುಖ್ಯ ದೇವಾಲಯಕ್ಕೆ ಹಿಂದಿರುಗುವ ಮೊದಲು ದೇವತೆಗಳು ಎಂಟು ದಿನಗಳವರೆಗೆ ಅಲ್ಲಿ ನೆಲೆಸುತ್ತಾರೆ. ದೇವತೆಗಳು ದೇವಾಲಯವನ್ನು ಪ್ರವೇಶಿಸುವ ದಿನವನ್ನು ನೀಲಾದ್ರಿ ಬಿಜೆ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು


ಜಗನ್ನಾಥ ರಥಯಾತ್ರೆಯ ಮಹತ್ವ

ಈ ಹಬ್ಬವು ಭಗವಾನ್ ಜಗನ್ನಾಥ ಅವನ ಸಹೋದರ ಬಲಭದ್ರ ಮತ್ತು ಅವರ ಸಹೋದರಿ ಸುಭದ್ರೆಯ ಗುಂಡಿಚಾ ದೇವಸ್ಥಾನಕ್ಕೆ ಹೋಗುವುದನ್ನು ಸೂಚಿಸುತ್ತದೆ. ಭವ್ಯವಾದ ರಥವನ್ನು ಎಳೆಯಲು ಸಾವಿರಾರು ಭಕ್ತರು ಸೇರುತ್ತಾರೆ. ಉತ್ಸವದಲ್ಲಿ ಭಾಗವಹಿಸಿ ರಥಗಳನ್ನು ಎಳೆಯುವುದರಿಂದ ಪುಣ್ಯ ಲಭಿಸುತ್ತದೆ ಮತ್ತು ಆತ್ಮ ಶುದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಈ ಯಾತ್ರೆಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಇದು ಕೇವಲ ಹಬ್ಬವಾಗದೆ ಸಂಸ್ಕೃತಿ, ಏಕತೆ, ಸಮಾನತೆ ಮತ್ತು ಆಧ್ಯಾತ್ಮಿಕತೆಯ ಆಚರಣೆಯಾಗಿದೆ.

Continue Reading

ದೇಶ

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಸಮವಸ್ತ್ರ; ನಿಯಮದಲ್ಲಿ ಬದಲಾವಣೆ: ಕಾರಣವೇನು?

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜತೆಗೆ ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Ayodhya Ram Mandir
Koo

ಲಕ್ನೋ: ಅಯೋಧ್ಯೆ ರಾಮ ಮಂದಿರ (Ayodhya Ram Mandir)ದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜತೆಗೆ ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಗರ್ಭಗುಡಿಯ ಪುರೋಹಿತರು ಕೇಸರಿ ಬಟ್ಟೆಗಳನ್ನು ಅಂದರೆ ಕೇಸರಿ ಪೇಟ, ಕೇಸರಿ ಕುರ್ತಾ ಮತ್ತು ಧೋತಿ ಧರಿಸುತ್ತಿದ್ದರು. ಇದೀಗ ಪುರೋಹಿತರು ಹಳದಿ (ಪಿತಾಂಬರಿ) ಬಣ್ಣದ ಧೋತಿ, ಅದೇ ಬಣ್ಣದ ಕುರ್ತಾ ಮತ್ತು ಪೇಟ ಧರಿಸುತ್ತಿದ್ದಾರೆ.

ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪುರೋಹಿತರಿಗೆ ಹಳದಿ ಪೇಟ ಕಟ್ಟಲು ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಹೇಗಿದೆ ಹೊಸ ಸಮವಸ್ತ್ರ?

‘ಚೌಬಂದಿ’ ಎಂದು ಕರೆಯಲ್ಪಡುವ ಹೊಸ ಕುರ್ತಾದಲ್ಲಿ ಯಾವುದೇ ಬಟನ್‌ ಇರುವುದಿಲ್ಲ ಮತ್ತು ಅದನ್ನು ಕಟ್ಟಲು ದಾರವನ್ನು ಬಳಸಲಾಗುತ್ತದೆ. ಹಳದಿ ಬಣ್ಣದ ‘ಧೋತಿ’ಯನ್ನು ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಇದು ಪಾದವನ್ನೂ ಮುಚ್ಚಲಿದೆ. ದೇವಾಲಯದಲ್ಲಿ ಮುಖ್ಯ ಅರ್ಚಕರು ಮತ್ತು ನಾಲ್ವರು ಸಹಾಯಕ ಅರ್ಚಕರು ಇದ್ದಾರೆ. ಈಗ ಪ್ರತಿ ಸಹಾಯಕ ಪುರೋಹಿತರೊಂದಿಗೆ ಐವರು ಪುರೋಹಿತರು ತರಬೇತಿ ಪಡೆಯುತ್ತಿದ್ದಾರೆ.

ಪುರೋಹಿತರ ಪ್ರತಿ ತಂಡವು ಮುಂಜಾನೆ 3.30ರಿಂದ ರಾತ್ರಿ 11ರವರೆಗೆ ಪಾಳಿಯಲ್ಲಿ ಐದು ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದೆ. ʼʼರಾಮ ಮಂದಿರದಲ್ಲಿ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ. ಈಗ ಮುಖ್ಯ ಅರ್ಚಕರು, ನಾಲ್ವರು ಸಹಾಯಕ ಪುರೋಹಿತರು ಮತ್ತು 20 ತರಬೇತಿ ಪುರೋಹಿತರು ಸೇರಿದಂತೆ ಎಲ್ಲ ಪುರೋಹಿತರು ಹಳದಿ ಬಣ್ಣದ ತಲೆಯ ಸಫಾ, ಚೌಬಂದಿ ಮತ್ತು ಧೋತಿ ಧರಿಸಲಿದ್ದಾರೆ” ಎಂದು ರಾಮ ಮಂದಿರದ ಸಹಾಯಕ ಅರ್ಚಕ ಸಂತೋಷ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಕಾರಣವೇನು?

ಏಕರೂಪತೆಯನ್ನು ಕಾಪಾಡಿಕೊಳ್ಳಲು ಮತ್ತು ಭದ್ರತೆಯನ್ನು ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರ್ಚಕರು ತಮ್ಮ ಫೋನ್‌ಗಳನ್ನು ದೇವಾಲಯಗಳಿಗೆ ಕೊಂಡೊಯ್ಯುವುದನ್ನು ನಿಷೇಧಿಸಿದ್ದು ಕೂಡ ಭದ್ರತಾ ಕ್ರಮದ ಒಂದು ಭಾಗ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ದೇವಾಲಯದ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ನಿಯಮ ಜಾರಿಗೊಳಿಸಿದ್ದಾರೆ.

ಕಡಿಮೆಯಾದ ಭಕ್ತರ ದಟ್ಟಣೆ

ಅಯೋಧ್ಯೆ ರಾಮಮಂದಿರ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಹಾಗಾಗಿ ರಾಮಮಂದಿರ ಉದ್ಘಾಟನೆಯಾದ ಬೆನ್ನಿಗೇ ಲಕ್ಷಾಂತರ ಸಂಖ್ಯೆಯ ಭಕ್ತರು ರಾಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಂದಿರ ಉದ್ಘಾಟನೆಯಾಗಿ ಈಗಾಗಲೇ ಆರು ತಿಂಗಳು ಕಳೆದಿರುವುದರಿಂದ ಭಕ್ತರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತಿದೆ.

ಕಳೆದ ಆರು ವಾರಗಳಲ್ಲಿ ಅಯೋಧ್ಯೆ ನಗರಕ್ಕೆ ಬರುವ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆ ಗಮನಾರ್ಹವಾಗಿ ಕಡಿಮೆಯಾಗುತ್ತ ಬಂದಿದೆ. ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇತರ ರಾಜ್ಯಗಳಿಂದ ಅಯೋಧ್ಯೆಗೆ ಬರುವ ವಿಶೇಷ ಬಸ್ಸುಗಳ ಸಂಖ್ಯೆಯಲ್ಲೂ ಕಡಿತವಾಗಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ನಂತರ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಜನವರಿಯಿಂದ ಮಾರ್ಚ್ 2024ರವರೆಗೆ ಪ್ರತಿದಿನ ಸುಮಾರು 1.5 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಏಪ್ರಿಲ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ಬಂತು. 

ಇದನ್ನೂ ಓದಿ: Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Continue Reading

ಧಾರ್ಮಿಕ

Vastu Tips: ಮನೆಯೊಳಗೆ ಎಲ್ಲೆಂದರಲ್ಲಿ ಕನ್ನಡಿ ಇಟ್ಟು ಕುಟುಂಬದ ನೆಮ್ಮದಿ ಹಾಳು ಮಾಡಬೇಡಿ!

ಕನ್ನಡಿಗಳು ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯನ್ನು ಸರಿಯಾಗಿ ಇರಿಸಿದರೆ (Vastu Tips) ಮಾತ್ರ ಧನಾತ್ಮಕ ಶಕ್ತಿಯ ಉತ್ತೇಜನವಾಗುತ್ತದೆ. ಮನೆಯಲ್ಲಿರುವ ಕನ್ನಡಿಗಳ ಸ್ಥಾನವು ನಿವಾಸಿಗಳ ಜೀವನವನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಎಲ್ಲರ ಮನೆಯಲ್ಲೂ ಕನ್ನಡಿ ಇದ್ದೇ ಇರುತ್ತದೆ. ಆದರೆ ಈ ಕನ್ನಡಿಗಳನ್ನು ಎಲ್ಲಿ, ಹೇಗೆ ಇರಿಸಬೇಕು ಎಂಬುದನ್ನು ತಿಳಿದಿರಬೇಕು. ಇಲ್ಲವಾದರೆ ಮನೆ ಮಂದಿಗೆ ಆಪತ್ತು ಕಟ್ಟಿಟ್ಟ ಬುತ್ತಿಯಾಗುವುದು. ಕನ್ನಡಿಗಳನ್ನು (mirror) ವಾಸ್ತು ಪ್ರಕಾರ (Vastu Tips) ಇರಿಸಿದರೆ ಮನೆಯೊಳಗೇ ಧನಾತ್ಮಕ ಶಕ್ತಿ (positive energy) ವೃದ್ಧಿಯಾಗುತ್ತದೆ. ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಕನ್ನಡಿಗಳು ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯನ್ನು ಸರಿಯಾಗಿ ಇರಿಸಿದರೆ ಮಾತ್ರ ಧನಾತ್ಮಕ ಶಕ್ತಿಯ ಉತ್ತೇಜನವಾಗುತ್ತದೆ. ಮನೆಯಲ್ಲಿರುವ ಕನ್ನಡಿಗಳ ಸ್ಥಾನವು ನಿವಾಸಿಗಳ ಜೀವನವನ್ನು ಹೇಗೆ ಪ್ರಭಾವಿಸುತ್ತದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

ಮಲಗುವ ಕೋಣೆ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಅಥವಾ ಮಲಗುವ ಯಾವುದೇ ಜಾಗದಲ್ಲಿ ಕನ್ನಡಿಯನ್ನು ಇಡಬಾರದು. ದಂಪತಿ ತಮ್ಮ ಮಲಗುವ ಕೋಣೆಯಲ್ಲಿ ನೈಋತ್ಯ ದಿಕ್ಕಿನ ಕನ್ನಡಿಯನ್ನು ಇರಿಸಿದಾಗ ಮನೆ ಮಂದಿ ಹೆಚ್ಚಿನ ಒತ್ತಡವನ್ನು ಹೊಂದಿರುತ್ತಾರೆ.

ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರು ಇನ್ನೂ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ನಿಮ್ಮ ಹಾಸಿಗೆಯ ಮುಂದೆ ಕನ್ನಡಿಯನ್ನು ಇಡುವುದನ್ನು ತಡೆಯುವುದು ಉತ್ತಮ.


ಡ್ರೆಸ್ಸಿಂಗ್ ಕೋಣೆ

ಮನೆಯಲ್ಲಿ ಸ್ಥಳಾವಕಾಶ ಇದ್ದರೆ ಪ್ರತ್ಯೇಕ ಡ್ರೆಸ್ಸಿಂಗ್ ಪ್ರದೇಶವನ್ನು ಮಾಡಿ. ಮಾಸ್ಟರ್ ಬೆಡ್‌ರೂಮ್‌ಗೆ ಜೋಡಿಸಲಾದ ಡ್ರೆಸ್ಸಿಂಗ್ ಕೋಣೆ ಪರಿಪೂರ್ಣವಾಗಿರುತ್ತದೆ. ಈ ಡ್ರೆಸ್ಸಿಂಗ್ ಕೋಣೆಯಲ್ಲಿ ಕನ್ನಡಿಯನ್ನು ಪೂರ್ವ ಅಥವಾ ಉತ್ತರ ಗೋಡೆಯ ವಿರುದ್ಧ ಇಡಬೇಕು.

ಮಕ್ಕಳ ಕೋಣೆ

ಮಕ್ಕಳ ಮಲಗುವ ಕೋಣೆಗಳಲ್ಲಿ ಕನ್ನಡಿಗಳನ್ನು ನೇತುಹಾಕುವಾಗ ಎಚ್ಚರಿಕೆ ಇರಲಿ. ವಾಸ್ತು ಪ್ರಕಾರ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡದೇ ಇದ್ದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ.

ಇದನ್ನೂ ಓದಿ: Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಹಾಸಿಗೆಯ ಮೇಲ್ಭಾಗದಲ್ಲಿ ಕನ್ನಡಿಗಳ ಉಪಸ್ಥಿತಿಯು ಮಲಗುವವರಲ್ಲಿ ಚಡಪಡಿಕೆಯನ್ನು ಉಂಟು ಮಾಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಕಷ್ಟವಾಗಬಹುದು.

ಒಳಾಂಗಣ ವಿನ್ಯಾಸದಲ್ಲಿ ಇತ್ತೀಚೆಗೆ ಛಾವಣಿಗೆ ಕನ್ನಡಿಯನ್ನು ಹಾಕಲಾಗುತ್ತದೆ. ನೆಲ ಮತ್ತು ಹಾಸಿಗೆ ಅಡ್ಡಲಾಗಿ ಸೀಲಿಂಗ್ ಗೆ ಹೊಂದಿಸಲಾಗುವ ಕನ್ನಡಿಗಳಿಂದ ಉಂಟಾಗುವ ನೆರಳುಗಳು ಮನೆಯ ನಿವಾಸಿಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು ಮತ್ತು ಅತೃಪ್ತಿಕರ ವಾತಾವರಣಕ್ಕೆ ಕಾರಣವಾಗಬಹುದು.

Continue Reading

ಧಾರ್ಮಿಕ

Vastu Tips: ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕೆ? ಹೀಗೆ ಮಾಡಿ

ಮಾಡುವ ಕೆಲಸದಲ್ಲಿ ತೊಂದರೆ, ಸರಿಯಾದ ಉದ್ಯೋಗ ಸಿಗುತ್ತಿಲ್ಲ ಎಂದು ದುಃಖ ಪಡುವವರು ಅನೇಕರಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ವಾಸ್ತು ದೋಷ ಕೂಡ ಕಾರಣವಾಗಿರುತ್ತದೆ. ಕೆಲವು ಪರಿಹಾರಗಳನ್ನು (Vastu Tips) ಮಾಡುವುದರಿಂದ ಶೀಘ್ರದಲ್ಲೇ ಉದ್ಯೋಗ ಪಡೆಯಬಹುದು ಮತ್ತು ಮಾಡುವ ಕೆಲಸದಲ್ಲಿ ಪ್ರಗತಿ ಸಾಧಿಸಬಹುದು. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಮಾಡುವ ಕೆಲಸಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕೆಲವೊಮ್ಮೆ ದೊಡ್ಡ ಅನಾಹುತಕ್ಕೂ ಕಾರಣವಾಗಬಹುದು. ಕೆಲಸದಲ್ಲಿ (job) ಯಶಸ್ಸು ಸದಾ ದೊರೆಯಬೇಕು ಎನ್ನುವುದು ಎಲ್ಲರ ಆಸೆ. ಎಲ್ಲರ ಜೀವನದಲ್ಲೂ ವೃತ್ತಿ ಪ್ರಗತಿಗೆ (career progress) ಹಲವು ರೀತಿಯ ಸವಾಲುಗಳು ಎದುರಾಗುತ್ತವೆ. ಕೆಲವು ವಾಸ್ತು ಪರಿಹಾರಗಳನ್ನು (Vastu Tips) ಮಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಬಹುದು.

ವಾಸ್ತು ಶಾಸ್ತ್ರದಲ್ಲಿ ಶಕ್ತಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದೃಷ್ಟವನ್ನು ಪಡೆಯಲು ವಾಸ್ತುವಿನಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರವು ಮನೆಗಳಿಗೆ ಮಾತ್ರವಲ್ಲದೆ ವೃತ್ತಿಜೀವನಕ್ಕೂ ಮುಖ್ಯವಾಗಿದೆ. ವೃತ್ತಿಯಲ್ಲಿ ಯಶಸ್ಸನ್ನು ತಂದುಕೊಳ್ಳಲು ಹಲವು ವಾಸ್ತು ಪರಿಹಾರಗಳನ್ನು ಸೂಚಿಸಲಾಗಿದೆ.

ದಿಕ್ಕು ಮುಖ್ಯ

ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಕೆಲಸ ಮಾಡಲು ತೊಂದರೆ ಎದುರಾಗುತ್ತಿದ್ದರೆ ಮನೆಯ ಉತ್ತರ ಗೋಡೆಯ ಮೇಲೆ ಮುಖ್ಯ ಕನ್ನಡಿಯನ್ನು ಇರಿಸಿ. ಈ ಕನ್ನಡಿ ಎಷ್ಟು ದೊಡ್ಡದಾಗಿರಬೇಕು ಎಂದರೆ ನಿಮ್ಮ ಇಡೀ ದೇಹವು ಅದರಲ್ಲಿ ಗೋಚರಿಸಬೇಕು. ಈ ವಾಸ್ತು ಪರಿಹಾರವನ್ನು ಮಾಡುವುದರಿಂದ ನಿಮಗೆ ಶೀಘ್ರದಲ್ಲೇ ಕೆಲಸ ಸಿಗುತ್ತದೆ.

ಮನೆಯ ಮಧ್ಯಭಾಗ

ಮನೆಯ ಮಧ್ಯಭಾಗವು ಬ್ರಹ್ಮಸ್ಥಾನವಾಗಿದೆ. ಇದನ್ನು ಗುರು ಗ್ರಹದ ಸ್ಥಳವೆಂದೂ ಪರಿಗಣಿಸಲಾಗಿದೆ. ಗುರುವು ಬಲವಾಗಿದ್ದರೆ, ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತೀರಿ. ಇದಕ್ಕಾಗಿ, ಮನೆಯ ಮಧ್ಯದಲ್ಲಿ ಕೆಲವು ಭಾರವಾದ ವಸ್ತುಗಳನ್ನು ಇರಿಸಿ. ಇದು ವೃತ್ತಿಜೀವನದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.


ರುದ್ರಾಕ್ಷಿ

ಉದ್ಯೋಗ ಪಡೆಯಲು ರುದ್ರಾಕ್ಷಿಯನ್ನು ಧರಿಸುವುದು ಉತ್ತಮ ಆಯ್ಕೆಯಾಗಿದೆ. ಉದ್ಯೋಗ ಪಡೆಯಲು ಏಕಮುಖ, ಹತ್ತು ಮುಖ ಅಥವಾ ಹನ್ನೊಂದು ಮುಖದ ರುದ್ರಾಕ್ಷವನ್ನು ಧರಿಸಿ. ಮಾಂಸ ಮತ್ತು ಮದ್ಯ ಸೇವಿಸುವವರು ರುದ್ರಾಕ್ಷವನ್ನು ಧರಿಸಬಾರದು ಎಂಬುದು ನೆನಪಿರಲಿ.

ಮಲಗುವ ಕೋಣೆ

ಮಲಗುವ ಕೋಣೆಯಲ್ಲಿ ಸಾಧ್ಯವಾದಷ್ಟು ಹಳದಿ ಬಣ್ಣವನ್ನು ಬಳಸಿ. ಹಳದಿ ಬಣ್ಣವು ಗುರು ಮತ್ತು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಈ ಎರಡೂ ದೇವತೆಗಳ ಆಶೀರ್ವಾದವನ್ನು ಪಡೆಯುವುದು ಉದ್ಯೋಗದ ಹಾದಿಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

ಕೆಂಪು ಬಣ್ಣ

ವಾಸ್ತು ಪ್ರಕಾರ ಕೆಂಪು ಬಣ್ಣವು ಯಾವಾಗಲೂ ಶುಭ ಫಲಿತಾಂಶಗಳನ್ನು ನೀಡುತ್ತದೆ. ಸಂದರ್ಶನಕ್ಕೆ ಹೋದಾಗ ಅಥವಾ ಉದ್ಯೋಗಕ್ಕಾಗಿ ಪರೀಕ್ಷೆಗೆ ಹೋದಾಗ ನಿಮ್ಮೊಂದಿಗೆ ಕೆಂಪು ಕರವಸ್ತ್ರವನ್ನು ಇಟ್ಟುಕೊಳ್ಳಿ. ಆ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಇದು ಆ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.


ಗಣೇಶನನ್ನು ಪೂಜಿಸಿ

ಉದ್ಯೋಗಕ್ಕಾಗಿ ಪರೀಕ್ಷೆ ಅಥವಾ ಸಂದರ್ಶನಕ್ಕಾಗಿ ಹೊರಗೆ ಹೋದಾಗ ಮನೆಯಿಂದ ಹೊರಡುವ ಮೊದಲು ಯಾವಾಗಲೂ ಗಣೇಶನನ್ನು ಪೂಜಿಸಿ. ಅಂದು ಗಣಪತಿಗೆ ವೀಳ್ಯದೆಲೆಯನ್ನು ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

Continue Reading
Advertisement
Narendra Modi
ಪ್ರಮುಖ ಸುದ್ದಿ2 mins ago

Narendra Modi: ಬ್ರಿಟನ್‌ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್‌ಗೆ ಮೋದಿ ಕರೆ; ಭಾರತಕ್ಕೆ ಆಗಮಿಸುವಂತೆ ಮನವಿ!

Nafees Iqbal
ಪ್ರಮುಖ ಸುದ್ದಿ12 mins ago

Nafees Iqbal : ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗನಿಗೆ ಮೆದುಳಿನ ರಕ್ತಸ್ರಾವ; ಪರಿಸ್ಥಿತಿ ಗಂಭೀರ

World Chocolate Day
ಲೈಫ್‌ಸ್ಟೈಲ್25 mins ago

World Chocolate Day: ಬಾಯಿ ಸಿಹಿ ಮಾಡಿಕೊಳ್ಳುವುದಕ್ಕೆ ಮತ್ತೊಂದು ದಿನ! ಇಂದು ಚಾಕಲೇಟ್ ಮರೆಯದೇ ತಿನ್ನಿ!

Password Leak
ದೇಶ31 mins ago

Password Leak: 995 ಕೋಟಿ ಪಾಸ್‌ವರ್ಡ್‌ಗಳು ಲೀಕ್;‌ ನಿಮ್ಮ ಪಾಸ್‌ವರ್ಡ್‌ ಕೂಡ ಕಳ್ಳತನ ಆಗಿದೆಯೇ?

CM Siddaramaiah
ಕರ್ನಾಟಕ35 mins ago

CM Siddaramaiah: ಪ್ರತಿ ಠಾಣೆಗೂ ತೆರಳಿ ಪರಿಶೀಲಿಸಬೇಕು: ಪೊಲೀಸ್‌ ಮೇಲಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

Dolly dhananjay Halagali on set
ಸ್ಯಾಂಡಲ್ ವುಡ್42 mins ago

Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!

Car price Discounts
ಪ್ರಮುಖ ಸುದ್ದಿ50 mins ago

Car price Discounts: ರಿನೊ ಕೈಗರ್, ಕ್ವಿಡ್, ಟ್ರೈಬರ್ ಕಾರುಗಳಿಗೆ 40,000 ರೂ. ತನಕ ರಿಯಾಯಿತಿ

Jasprit Bumrah
ಕ್ರೀಡೆ1 hour ago

Jasprit Bumrah: ಟಿ20 ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಜಸ್​ಪ್ರೀತ್​ ಬುಮ್ರಾ

Bescom Order
ಬೆಂಗಳೂರು1 hour ago

BESCOM Order : ವಿದ್ಯುತ್‌ ಕಂಬಗಳ ಮೇಲೆ ಅನಧಿಕೃತ ಕೇಬಲ್‌ ತೆರವಿಗೆ ಗಡುವು; ಬಿಸಿ ಮುಟ್ಟಿಸಲು ಸಜ್ಜಾದ ಬೆಸ್ಕಾಂ

Kiccha Sudeep workout For next Movie
ಸ್ಯಾಂಡಲ್ ವುಡ್1 hour ago

Kiccha Sudeep: ಮುಂದಿನ ಸಿನಿಮಾಗಾಗಿ ಭಾರಿ ವರ್ಕೌಟ್‌ ಮಾಡ್ತಾ ಇದ್ದಾರೆ ಕಿಚ್ಚ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Murder case
ಯಾದಗಿರಿ2 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ3 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು5 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ7 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ11 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ24 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ1 day ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ1 day ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ1 day ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

ಟ್ರೆಂಡಿಂಗ್‌