Viral News: ಗೇಟ್‌ಗೆ ತೂಗು ಹಾಕಿ ನಾಯಿಯನ್ನು ಕೊಂದ ಕಟುಕರು; ಸಿಸಿ ಟಿವಿ ಕ್ಯಾಮೆರಾದಲ್ಲಿ ನೀಚ ಕೃತ್ಯ ಸೆರೆ - Vistara News

ದೇಶ

Viral News: ಗೇಟ್‌ಗೆ ತೂಗು ಹಾಕಿ ನಾಯಿಯನ್ನು ಕೊಂದ ಕಟುಕರು; ಸಿಸಿ ಟಿವಿ ಕ್ಯಾಮೆರಾದಲ್ಲಿ ನೀಚ ಕೃತ್ಯ ಸೆರೆ

Viral News: ಶ್ವಾನ ತರಬೇತಿ ಕೇಂದ್ರದ ಸಿಬ್ಬಂದಿ ನಾಯಿಯೊಂದನ್ನು ಗೇಟ್‌ಗೆ ತೂಗು ಹಾಕಿ ಕೊಂದಿರುವ ಪೈಶಾಚಿಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

dog mp
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶ್ವಾನ ತರಬೇತುದಾರ ತನ್ನ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿ ನಾಯಿಯೊಂದನ್ನು ತರಬೇತಿ ಕೇಂದ್ರದ (Training center) ಗೇಟ್‌ಗೆ ತೂಗು ಹಾಕಿ ಕೊಂದಿರುವ ಭೀಕರ ಘಟನೆ (kill dog by hanging it) ನಡೆದಿದ್ದು, ಮೂವರನ್ನು ಬಂಧಿಸಲಾಗಿದೆ. ಸದ್ಯ ಈ ಕುರಿತಾದ ವಿಡಿಯೊ ವೈರಲ್‌ ಆಗಿದೆ (Viral News).

ರವಿ ಕುಶ್ವಾಹ, ನೇಹಾ ತಿವಾರಿ ಮತ್ತು ತರುಣ್ ದಾಸ್ ಮತ್ತಿತರರು ನಾಯಿಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಶ್ವಾನದ ಮಾಲಕ, ಉದ್ಯಮಿ ನಿಲೇಶ್ ಜೈಸ್ವಾಲ್ ನಾಯಿಯನ್ನು ನಾಲ್ಕು ತಿಂಗಳ ಕಾಲದ ತರಬೇತಿಗಾಗಿ ಆಲ್ಫಾ ಡಾಗ್ ಟ್ರೈನಿಂಗ್ ಮತ್ತು ಬೋರ್ಡಿಂಗ್ ಸೆಂಟರ್ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು.

ಜೈಸ್ವಾಲ್‌ ತಮ್ಮ ಶ್ವಾನವನ್ನು ಮೇ ತಿಂಗಳಲ್ಲಿ ಈ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು. ತಿಂಗಳಿಗೆ 13,000 ರೂ. ಫೀಸ್‌ ಚಾರ್ಜ್‌ ಮಾಡಲಾಗಿತ್ತು. ಸೆಪ್ಟಂಬರ್‌ನಲ್ಲೇ ತರಬೇತಿ ಅವಧಿ ಕೊನೆಗೊಂಡಿತ್ತು. ಜೈಸ್ವಾಲ್ ತನ್ನ ನಾಯಿಯನ್ನು ಮನೆಗೆ ಕರೆದೊಯ್ಯಲು ಕೇಂದ್ರವನ್ನು ಸಂಪರ್ಕಿಸಿದಾಗ ನಾಯಿ ಸತ್ತಿದೆ ಎಂದು ತಿಳಿಸಿದ್ದರು. ಅನುಮಾನಗೊಂಡ ಜೈಸ್ವಾಲ್ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ದೂರು ನೀಡಿದ್ದರು. ಅದರ ಮೇರೆಗೆ ಮಿಸ್ರೋಡ್ ಪೊಲೀಸರು ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆಯ ದಿನದ ಸಿಸಿಟಿವಿ ವಿಡಿಯೊವನ್ನು ಅಳಿಸಲಾಗಿದೆ ಎಂದು ತಿಳಿದುಬಂತು ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಪೊಲೀಸರು ಹಾರ್ಡ್ ಡ್ರೈವ್ ಅನ್ನು ವಶಪಡಿಸಿಕೊಂಡು ಅಕ್ಟೋಬರ್ 9ರ ಘಟನೆಯ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದರು. ಇದರಲ್ಲಿ ಕುಶ್ವಾಹ, ತಿವಾರಿ ಮತ್ತು ದಾಸ್ ನಾಯಿಯನ್ನು ಕಟ್ಟಿ ಗೇಟ್‌ಗೆ ತೂಗು ಹಾಕುತ್ತಿರುವುದು ಕಂಡು ಬಂದಿದೆ. ನಾಯಿ ಸುಮಾರು 10 ನಿಮಿಷಗಳ ಕಾಲ ಪರದಾಡಿ ಉಸಿರುಗಟ್ಟಿ ಮೃತಪಟ್ಟಿತು.

ಪ್ರಾಣಿ ಕ್ರೌರ್ಯ ಸೇರಿದಂತೆ ವಿವಿಧ ಆರೋಪಗಳ ಮೇಲೆ ಮೂವರನ್ನು ಬಂಧಿಸಲಾಗಿದೆ. ನಾಯಿ ಆಕ್ರಮಣಕಾರಿ ಮನೋಭಾವ ಹೊಂದಿತ್ತು ಮತ್ತು ತರಬೇತಿಯ ಭಾಗವಾಗಿ ಅದನ್ನು ಗೇಟಿಗೆ ಕಟ್ಟಲು ಪ್ರಯತ್ನಿಸಿದೆವು. ಆದರೆ ನಾಯಿಯ ಕುತ್ತಿಗೆಯ ಹಗ್ಗವು ಬಿಗಿಯಾಗಿದ್ದರಿಂದ ಅದು ಪ್ರಜ್ಞಾಹೀನವಾಯಿತು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಕಾಳಿಂಗ ಸರ್ಪಕ್ಕೇ ಸ್ನಾನ ಮಾಡಿಸಿದ ರಣಧೀರ!

ಕೂಡಲೇ ನಾಯಿಯ ಆರೈಕೆ ಮಾಡಲಾಯಿತು. ಆದರೆ ಎಷ್ಟು ಪ್ರಯತ್ನಿಸಿದೂ ಅದು ಪ್ರತಿಕ್ರಿಯಿಸಲಿಲ್ಲ. ನಂತರ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ದೆವು. ಅಲ್ಲಿ ವೈದ್ಯರು ಆ ಶ್ವಾನ ಸತ್ತಿದೆ ಎಂದು ಘೋಷಿಸಿದರು ಎಂದು ಆರೋಪಿಗಳು ತಿಳಿಸಿದ್ದಾರೆ. ಬಳಿಕ ಷರತ್ತು ಮೇರೆಗೆ ಆರೋಪಿಗಳನ್ನು ಬೇಲ್‌ ಮೂಲಕ ಬಿಡುಗಡೆ ಮಾಡಲಾಯಿತು.

“ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದರು. ಕೇಂದ್ರದಲ್ಲಿ ಇನ್ನೂ 10ರಿಂದ 15 ನಾಯಿಗಳಿವೆ ಮತ್ತು ಪೊಲೀಸರು ಅವುಗಳ ಮಾಲಕರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಎನ್‌ಜಿಒಗೂ ಮಾಹಿತಿ ನೀಡಲಾಯಿತು. ಮಾಲಕರು ನಾಯಿಯನ್ನು ಮರಳಿ ಕರೆದುಕೊಂಡು ಹೋಗಲು ತಡವಾಗಿದ್ದರೆ, ಎನ್‌ಜಿಒ ರಕ್ಷಿಸಲಿದೆ. ಹೆಚ್ಚಿನ ದೂರು ಬಂದರೆ, ವಿವರವಾದ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಕಾಶ್ಮೀರಲ್ಲಿ ಉಗ್ರರ ದಾಳಿ ಬೆನ್ನಲ್ಲೇ ದೋವಲ್‌ ಜತೆ ಮೋದಿ ಸಭೆ; ಉಗ್ರರ ನಿರ್ನಾಮಕ್ಕೆ ಸೂಚನೆ!

Narendra Modi: ರಿಯಾಸಿಯಲ್ಲಿ ಉಗ್ರರ ದಾಳಿ ಸೇರಿ ಕಳೆದ ನಾಲ್ಕು ದಿನಗಳಲ್ಲಿ ಮೂರು ಕಡೆ ಉಗ್ರರು ದಾಳಿಗಳನ್ನು ನಡೆಸಿದ್ದಾರೆ. ಇದಾದ ನಂತರ ದೋಡಾದಲ್ಲಿ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದೇ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಕಥುವಾದಲ್ಲಿಯೂ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದರು. ಹಾಗಾಗಿ, ಮೋದಿ ಅವರು ಭದ್ರತಾ ಪರಿಶೀಲನೆ ಸಭೆ ನಡೆಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ಯಾತ್ರೆಗೆ ತೆರಳುವ ಹಿಂದುಗಳು, ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಕಣಿವೆಯಲ್ಲಿ ಭದ್ರತೆ ಕುರಿತು ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಎನ್‌ಎಸ್‌ಎ ಅಜಿತ್‌ ದೋವಲ್‌ ಸೇರಿ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಅವರು ಕಣಿವೆಯ ಭದ್ರತೆಯನ್ನು ಪರಿಶೀಲಿಸಿದರು. ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಉಗ್ರರ ದಾಳಿಗಳನ್ನು ನಿಗ್ರಹಿಸಬೇಕು. ಗಡಿಯುದ್ದಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸೂಕ್ಷ್ಮ ನೆಲೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸುವ ಜತೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಉಗ್ರರ ನಿಗ್ರಹಕ್ಕೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಕೂಡ ಮೋದಿ ಅವರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ರಿಯಾಸಿಯಲ್ಲಿ ಉಗ್ರರ ದಾಳಿ ಸೇರಿ ಕಳೆದ ನಾಲ್ಕು ದಿನಗಳಲ್ಲಿ ಮೂರು ಕಡೆ ಉಗ್ರರು ದಾಳಿಗಳನ್ನು ನಡೆಸಿದ್ದಾರೆ. ಇದಾದ ನಂತರ ದೋಡಾದಲ್ಲಿ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದೇ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಕಥುವಾದಲ್ಲಿಯೂ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದರು. ಇದರಿಂದಾಗಿ ಕಣಿವೆಯಲ್ಲಿ ಭದ್ರತೆ ಕುರಿತು ಜನರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ

Continue Reading

ದೇಶ

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Agniveer Scheme: ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಅದೇನು ಏನೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Agniveer Scheme
Koo

ನವದೆಹಲಿ: ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ (Agniveer Scheme) ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, ‘ಅಗ್ನಿವೀರ್’ ಗಳಿಗೆಗೆ ಒಂದು ದೊಡ್ಡ ಮೊತ್ತದ ‘ನಿವೃತ್ತಿ’ ಪ್ಯಾಕೇಜ್ ಸಹ ಪಾವತಿಸಲಾಗುತ್ತದೆ. ಇದೀಗ ಭಾರತೀಯ ಸೇನೆ ಈ ಅಗ್ನಿವೀರ್‌ ಯೋಜನೆಯಲ್ಲಿ ಕೆಲವು ಬದಲಾವಣೆಯನ್ನು ಸೂಚಿಸಿದೆ. ಅದೇನು ಏನೇನು ಎನ್ನುವ ವಿವರ ಇಲ್ಲಿದೆ.

ಸಂಖ್ಯೆಯ ಹೆಚ್ಚಳ

ಪ್ರಸ್ತುತ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವಿದೆ. ಉಳಿದ ಶೇ. 75ರಷ್ಟು ಮಂದಿ ನಿವೃತ್ತಿ ಪಡೆಯುತ್ತಾರೆ. ಇದು ಬದಲಾಗಬೇಕಿದೆ. ಉಳಿಸಿಕೊಳ್ಳುವವರ ಸಂಖ್ಯೆಯನ್ನು ಶೇ. 25ರಿಂದ ಶೇ. 60-70ಕ್ಕೆ ಏರಿಸಬೇಕು. ಇದರಿಂದ ಭಾರತೀಯ ಸೇನೆಗೆ ಅನುಭವಿ ಯೋಧರು ಲಭ್ಯರಾಗುತ್ತಾರೆ.

ಸೇವಾ ಅವಧಿಯ ಹೆಚ್ಚಳ

ಸದ್ಯ ಅಗ್ನಿವೀರರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 9 ತಿಂಗಳು ತರಬೇತಿಗೆ ಮೀಸಲಿಡಲಾಗಿದೆ. ತರಬೇತಿ ಕಳೆದು ಉಳಿದ ಅಭ್ಯರ್ಥಿಗಳು 3 ವರ್ಷ, 3 ತಿಂಗಳು ಸೇವೆ ಸಲ್ಲಿಸುತ್ತಾರೆ. ಇದು ಬದಲಾಗಬೇಕು. ಸೇವಾ ಅವಧಿಯನ್ನು 7-8 ವರ್ಷಗಳಾಗಿ ಹೆಚ್ಚಿಸಲು ಸೇನೆ ಶಿಫಾರಸ್ಸು ಮಾಡಿದೆ. ಈ ಅವಧಿಯಲ್ಲಿ ಅಗ್ನಿವೀರರು ಸಮಗ್ರ ತರಬೇತಿ ಮತ್ತು ಅನುಭವ ಪಡೆಯಲು ಸಾಧ್ಯವಾಗುತ್ತದೆ.

ತಾಂತ್ರಿಕ ವಿಭಾಗಗಳ ವಯೋಮಿತಿಯಲ್ಲಿ ಹೆಚ್ಚಳ

ಪ್ರಸ್ತುತ 17 ಮತ್ತು 21.5 ವಯೋಮಾನದವರನ್ನು ಅಗ್ನಿವೀರರನ್ನಾಗಿ ನೇಮಿಸಲಾಗುತ್ತದೆ. ಈ ಮಿತಿಯನ್ನು ಹೆಚ್ಚಿಸಲು ಸೇನೆ ಸಲಹೆ ನೀಡಿದೆ. ಸಿಗ್ನಲ್ಸ್‌, ಏರ್‌ ಡಿಫೆನ್ಸ್‌ ಮತ್ತು ಎಂಜಿನಿಯರ್‌ನಂತಹ ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡುವಾಗ ವಯೋಮಿತಿಯನ್ನು 23 ವರ್ಷಕ್ಕೆ ಏರಿಸಬೇಕು ಎಂದು ಸಲಹೆ ನೀಡಲಾಗಿದೆ.

ಅಂಗವಿಕಲರಿಗೆ ಹೆಚ್ಚಿನ ನೆರವು

ಪ್ರಸ್ತುತ ತರಬೇತಿ ಅವಧಿಯಲ್ಲಿ ಅಂಗವಿಕಲರಾಗುವ ಅಗ್ನಿವೀರರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಯಮಗಳಿಲ್ಲ. ಹೀಗಾಗಿ ತರಬೇತಿ ಅವಧಿಯಲ್ಲಿ ಅಂಗವೈಕಲ್ಯ ಅನುಭವಿಸುವವರಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕು. ಅಲ್ಲದೆ ಅಗ್ನಿವೀರರು ತಮ್ಮ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ಉತ್ತಮ ಉದ್ಯೋಗ ಹುಡುಕಿಕೊಳ್ಳಲು ನೆರವು ನೀಡಬೇಕು. ಇದಕ್ಕಾಗಿ ವೃತ್ತಿಪರ ಏಜೆನ್ಸಿ ಆರಂಭಿಸಬಹುದು.

ಕುಟುಂಬಗಳಿಗೆ ಸಹಾಯಹಸ್ತ

ಪ್ರಸ್ತುತ ಯುದ್ಧದಲ್ಲಿ ಮಡಿವ ಅಗ್ನಿವೀರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಯಾವುದೇ ಅವಕಾಶ, ನಿಯಮಗಳಿಲ್ಲ. ಹೀಗಾಗಿ ಹುತಾತ್ಮರಾಗುವ ಅಗ್ನಿವೀರರ ಕುಟುಂಬಕ್ಕೆ ನೆರವಾಗುವ ಭತ್ಯೆಯನ್ನು ಪರಿಚಯಿಸಲು ಸೇನೆ ಸಲಹೆ ನೀಡಿದೆ.

ಇದನ್ನೂ ಓದಿ: Agniveer: ಮೃತ ಅಗ್ನಿವೀರನ ಕುಟುಂಬಕ್ಕೆ ಸಲ್ಲುತ್ತಿದೆ ₹1.13 ಕೋಟಿ ಪರಿಹಾರ; ರಾಹುಲ್‌ ಆರೋಪ ಸುಳ್ಳು ಎಂದ ಸೇನೆ

ಹಲವರಿಂದ ವಿರೋಧ

ಅಲ್ಪಾವಧಿಗೆ ನೇಮಕಾತಿ ನಡೆಸಲಾಗುವ ಅಗ್ನಿಪಥ್ ಯೋಜನೆಯ ಬಗ್ಗೆ ಕೆಲವರು ಈ ಹಿಂದೆಯೇ ಅಪಸ್ವರ ಎತ್ತಿದ್ದಾರೆ. ಇದು ಉದ್ಯೋಗ ಅಭದ್ರತೆ ಮತ್ತು ಮಿಲಿಟರಿ ಸಿಬ್ಬಂದಿಯ ಅಪೂರ್ಣ ತರಬೇತಿಗೆ ಕಾರಣವಾಗಬಹುದು ಎಂದು ಕೆಲವರು ವಾದಿಸುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿರುವ ಜೆಡಿಯು ಮತ್ತು ಎಲ್‌ಜೆಪಿ (ಆರ್‌ವಿ) ಕೂಡ ಯೋಜನೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

Continue Reading

EXPLAINER

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Jagannath Temple: ಕಳೆದ ನಾಲ್ಕು ವರ್ಷಗಳಿಂದ ಮುಚ್ಚಲಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ ತೆರೆಯಲಾಗಿದೆ. ಅದರಂತೆ, ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿಜೆಪಿಯು ಅಧಿಕಾರಕ್ಕೆ ಬರುತ್ತಲೇ ಈಡೇರಿಸಿದಂತಾಗಿದೆ. ದೇವಾಲಯದ ಬಾಗಿಲುಗಳನ್ನು ಮುಚ್ಚಿದ್ದೇಕೆ? ಇದು ಏಕೆ ಪ್ರಮುಖ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

Jagannath Temple
Koo

ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದ (Jagannath Temple) ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ (ಜೂನ್‌ 13) ತೆರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಬಾಗಿಲಿನ ಮೂಲಕ ತೆರಳಿ, ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಗುರುವಾರದಿಂದ ನಾಲ್ಕೂ ಬಾಗಿಲುಗಳ ಮೂಲಕ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ (Mohan Charan Majhi) ಅವರ ಸಮ್ಮುಖದಲ್ಲಿ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ.

ಬಾಗಿಲುಗಳಿಗೆ ಬೀಗ ಹಾಕಿದ್ದೇಕೆ?

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಪುರಿ ಜಗನ್ನಾಥ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಕೊರೊನಾ ಲಾಕ್‌ಡೌನ್‌, ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೇ ಸಂದರ್ಭದಲ್ಲಿ ದೇವಾಲಯದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿತ್ತು. ಆದರೆ, ಕೋವಿಡ್‌ 19 ಬಿಕ್ಕಟ್ಟಿನ ಬಳಿಕವೂ, ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ನಾಲ್ಕೂ ಬಾಗಿಲುಗಳನ್ನು ತೆರೆದಿರಲಿಲ್ಲ. ಸಿಂಹದ್ವಾರದ ಮೂಲಕ ಮಾತ್ರ ಭಕ್ತರು ದೇವರು ದರ್ಶನ ಪಡೆಯುವಂತಾಗಿತ್ತು.

ಬಿಜೆಪಿ ಪ್ರಣಾಳಿಕೆಗೂ, ಇದಕ್ಕೂ ಏನು ಸಂಬಂಧ?

ಪುರಿ ಜಗನ್ನಾಥ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತ ಸೇರಿ ದೇಶ-ವಿದೇಶಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ವಿಶ್ವದಲ್ಲೇ ಬೃಹತ್‌ ಹಿಂದು ಹಬ್ಬ ಅಥವಾ ಜಾತ್ರೆ ಎಂದೇ ಖ್ಯಾತಿಯಾಗಿದೆ. ಆದರೆ, ಈ ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯದೆ ಇರುವುದು ರಾಜಕೀಯ ವಿಷಯವಾಗಿ ಬದಲಾಗಿತ್ತು.

ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವರ ಆಡಳಿತದಲ್ಲಿ ನಾಲ್ಕೂ ದ್ವಾರಗಳನ್ನು ತೆಗೆಯದಿರುವ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ನಾಲ್ಕೂ ಬಾಗಿಲುಗಳನ್ನು ತೆರೆಯಲಾಗುವುದು, ಕಳೆದು ಹೋಗಿರುವ ಭಂಡಾರದ ಬೀಗದ ಕೈ ಕುರಿತು ತನಿಖೆ ನಡೆಸಲಾಗುವುದು ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ, ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಅವರು ದೇವಾಲಯದ ಬಾಗಿಲುಗಳನ್ನು ತೆರೆಸುವ ಮೂಲಕ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ದೇಗುಲದ ಬಾಗಿಲುಗಳು ಏಕೆ ಪ್ರಮುಖ?

ದೇವಾಲಯದ ನಾಲ್ಕು ದ್ವಾರಗಳು ಭಕ್ತರಿಗೆ ಪ್ರಮುಖವಾಗಿವೆ. ನಾಲ್ಕೂ ದ್ವಾರಗಳು ಒಂದೊಂದು ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಪೂರ್ವದಲ್ಲಿರುವ ದ್ವಾರವು ಸಿಂಹವನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ಸಿಂಹದ್ವಾರ ಎನ್ನುತ್ತಾರೆ. ಇನ್ನು ಪಶ್ಚಿಮದಲ್ಲಿರುವ ದ್ವಾರವು ಹುಲಿಯನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ವ್ಯಾಘ್ರದ್ವಾರ ಎಂದು ಕರೆಯುತ್ತಾರೆ. ಅದರಂತೆ, ಉತ್ತರಕ್ಕೆ ಇರುವ ದ್ವಾರವು ಆನೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಹಸ್ತಿದ್ವಾರ ಎಂದೂ, ದಕ್ಷಿಣಕ್ಕೆ ಇರುವ ದ್ವಾರವು ಕುದುರೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಅಶ್ವದ್ವಾರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Continue Reading

Latest

JP Nadda: ವೇದಿಕೆ ಮೇಲೆ ಗುಟ್ಕಾ ತಿಂದ ಕೇಂದ್ರ ಆರೋಗ್ಯ ಸಚಿವ ನಡ್ಡಾ? ವಿಡಿಯೊ ನೋಡಿ

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ (JP Nadda) ಅವರು ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ಸೇವಿಸಿದ್ದಾರೆ ಎಂಬ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೆ ಪಿ ನಡ್ಡಾ ಅವರು ನಿಜಕ್ಕೂ ಗುಟ್ಕಾ ತಿಂದರಾ? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

JP Nadda
Koo

ದೆಹಲಿ: ಗುಟ್ಕಾ ಇದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಸೇವಿಸುವುದರಿಂದ ಕ್ಯಾನ್ಸರ್, ಉಸಿರಾಟದಂತಹ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದೆಲ್ಲ ಗೊತ್ತಿದ್ದರೂ ಗುಟ್ಕಾ ತಿನ್ನುವವರು ಕಡಿಮೆಯಾಗಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ (JP Nadda) ಅವರು ಗುಟ್ಕಾ ತಿನ್ನುತ್ತಿದ್ದಾರೆ ಎನ್ನಲಾದ ವಿಡಿಯೊ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ (Viral Video) ಆಗಿದೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಕೇಂದ್ರ ಆರೋಗ್ಯ ಸಚಿವರಾದ ಜೆ ಪಿ ನಡ್ಡಾ ಅವರು ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ಸೇವಿಸಿದ್ದಾರೆ ಎಂಬ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು. ಅದಕ್ಕೆ ನೆಟಿಜನ್ ಸಚಿವರ ಮೇಲೆ ಕಿಡಿಕಾರಿದ್ದಾರೆ.

ನಿಜಕ್ಕೂ ತಿಂದಿದ್ದೇನು?:

ವೈರಲ್ ಆದ ವಿಡಿಯೊದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಸಣ್ಣ ಪೆಟ್ಟಿಗೆಯಂತಹ ಪ್ಯಾಕೆಟ್‌ನಿಂದ ಏನೋ ತಿನ್ನುತ್ತಾರೆ. ಆಗ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅವರ ಕೈಯಿಂದ ತಾವೂ ಸ್ವಲ್ಪ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್ ನೋಡಿದ ನೆಟಿಜನ್ ಕೇಂದ್ರ ಸಚಿವರು ಗುಟ್ಕಾ ಸೇವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಕೆಲವು ಮಂದಿ ಇದು ಸುಳ್ಳು, ಅವರು ಸೇವಿಸುತ್ತಿರುವುದು ಗುಟ್ಕಾ ಅಲ್ಲ ‘ಯೋಗಿ ಕಂಠಿಕಾ ಮಾತ್ರೆ’ ಎಂದು ಸಮರ್ಥನೆ ನೀಡಿದ್ದಾರೆ. ಹಾಗೆಯೇ ಯೋಗಿ ಕಂಠಿಕಾದ ಪೋಟೊವನ್ನು ಶೇರ್ ಮಾಡಿದ ಬಳಕೆದಾರರು ಅದು ಗಂಟಲಿನಲ್ಲಿ ಕಿರಿಕಿರಿಯಾದಾಗ ಸೇವಿಸುವ ಆಯುರ್ವೇದದ ಮಾತ್ರೆ. ನಡ್ಡಾ ಮತ್ತು ಗಡ್ಕರಿ ಅದನ್ನು ಗಂಟಲು ಸರಿಮಾಡಿಕೊಳ್ಳುವುದಕ್ಕಾಗಿ ಸೇವಿಸಿದ್ದಾರೆ ಎಂದು ಸಚಿವರ ಪರ ಬ್ಯಾಟ್‌ ಬೀಸಿದ್ದಾರೆ.

ಇದನ್ನೂ ಓದಿ: Viral Video: ಪುಷ್ಪ 2 ಚಿತ್ರದ ‘ಅಂಗಾರನ್’ ಹಾಡಿಗೆ ಪತ್ನಿ ಜೊತೆ ಸ್ಟೆಪ್‌ ಹಾಕಿದ ವಿಶೇಷ ಚೇತನ

ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕ್ಯಾಬಿನೆಟ್‌ನಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ. ನವೆಂಬರ್ 9, 2014ರಿಂದ ಮೇ 30, 2019ರವರೆಗೆ ಪ್ರಧಾನಿ ಮೋದಿಯವರ ಮೊದಲ ಕ್ಯಾಬಿನೆಟ್‌ನಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ನಡ್ಡಾ ಅವರು ಇದೀಗ ಮತ್ತೆ ಸಚಿವಾಲಯದ ಮುಖ್ಯಸ್ಥರಾಗಿದ್ದಾರೆ. 63 ವರ್ಷದ ಜೆಪಿ ನಡ್ಡಾ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿಮಂಡಲಕ್ಕೆ ಮರಳಿದ್ದು, ಕ್ಯಾಬಿನೆಟ್‌ನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Continue Reading
Advertisement
Actor Darshan devil 22 crore taken by producer
ಸಿನಿಮಾ5 mins ago

Actor Darshan: ʻಡೆವಿಲ್ʼ ಸಿನಿಮಾಗೆ ದರ್ಶನ್‌ ಪಡೆದಿದ್ದು ಬರೋಬ್ಬರಿ 22 ಕೋಟಿ ರೂ.; ಶಾಕ್‌ನಲ್ಲಿ ನಿರ್ಮಾಪಕ!

Shirt Fashion
ಫ್ಯಾಷನ್6 mins ago

Shirt Fashion: ಮೆನ್ಸ್ ಹೈ ಫ್ಯಾಷನ್‌ಗೆ ಲಗ್ಗೆ ಇಟ್ಟ ಪ್ರಯೋಗಾತ್ಮಕ ರ‍್ಯಾಂಪ್‌ ಶರ್ಟ್

BS Yediyurappa
ಕರ್ನಾಟಕ7 mins ago

BS Yediyurappa: ಪೋಕ್ಸೊ ಕೇಸ್; ಯಡಿಯೂರಪ್ಪ ವಿರುದ್ಧ ಅರೆಸ್ಟ್‌ ವಾರಂಟ್, ಶೀಘ್ರವೇ ಬಂಧನ?

Rohit Sharma
ಕ್ರೀಡೆ16 mins ago

Rohit Sharma: ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ ಎಂದ ರೋಹಿತ್​

Bengalurus first double-decker flyover ready
ಬೆಂಗಳೂರು25 mins ago

Double Decker Flyover : ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಕೊನೆಗೂ ಸಿದ್ಧ; ಯಾವಾಗಿಂದ ಸಂಚಾರಕ್ಕೆ ಅವಕಾಶ

Job Alert
ಉದ್ಯೋಗ26 mins ago

Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಪಶುವೈದ್ಯ ಸೇವಾ ಇಲಾಖೆಯಲ್ಲಿದೆ 400 ವೈದ್ಯಾಧಿಕಾರಿ ಹುದ್ದೆ

Narendra Modi
ದೇಶ47 mins ago

Narendra Modi: ಕಾಶ್ಮೀರಲ್ಲಿ ಉಗ್ರರ ದಾಳಿ ಬೆನ್ನಲ್ಲೇ ದೋವಲ್‌ ಜತೆ ಮೋದಿ ಸಭೆ; ಉಗ್ರರ ನಿರ್ನಾಮಕ್ಕೆ ಸೂಚನೆ!

Duniya Vijay divorce filed was dismissed
ಸ್ಯಾಂಡಲ್ ವುಡ್54 mins ago

Duniya Vijay: ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

Drowned in water
ಮಂಡ್ಯ1 hour ago

Drowned in water : ಈಜಲು ಕಾವೇರಿ ನದಿಗಿಳಿದ ಬಾಲಕರಿಬ್ಬರು ಜಲ ಸಮಾಧಿ

Agniveer Scheme
ದೇಶ1 hour ago

Agniveer Scheme: ʼಅಗ್ನಿವೀರ್‌ʼ ಯೋಜನೆಯಲ್ಲಿನ ಈ ಎಲ್ಲ ಬದಲಾವಣೆಗೆ ಭಾರತೀಯ ಸೇನೆ ಸಲಹೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌