Pre-workout Drinks: ಪ್ರೊಟೀನ್‌ ಶೇಕ್‌ ಬದಲು, ವರ್ಕೌಟ್‌ ಮಾಡೋ ಮುನ್ನ ಕುಡಿಯಬಹುದಾದ ನೈಸರ್ಗಿಕ ಪೇಯಗಳಿವು! - Vistara News

ಆರೋಗ್ಯ

Pre-workout Drinks: ಪ್ರೊಟೀನ್‌ ಶೇಕ್‌ ಬದಲು, ವರ್ಕೌಟ್‌ ಮಾಡೋ ಮುನ್ನ ಕುಡಿಯಬಹುದಾದ ನೈಸರ್ಗಿಕ ಪೇಯಗಳಿವು!

ವರ್ಕೌಟ್‌ ಮಾಡಲು ಹೋಗುವ ಮುನ್ನ ಕುಡಿಯಬಹುದಾದ (Pre-workout Drinks) ಪ್ರೊಟೀನ್‌ ಶೇಕ್‌ ಹೊರತುಪಡಿಸಿದ ಸರಳ ನೈಸರ್ಗಿಕ ಪೇಯಗಳು (natural drinks) ಯಾವುವು ಎಂಬುದನ್ನು ನೋಡೋಣ.

VISTARANEWS.COM


on

natural drink
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ಪ್ರತಿಯೊಬ್ಬರೂ ಕೂಡಾ ಫಿಟ್‌ ಆಗಿರಬೇಕೆಂದು ಈಗ ಬಯಸುತ್ತಾರೆ. ಅದು ಸಹಜ ಕೂಡಾ. ಇಂದು ಫಿಟ್ನೆಸ್‌ ಮಾರುಕಟ್ಟೆಯೂ (Fitness market) ಅತ್ಯಂತ ವೇಗವಾಗಿ ಬೆಳೆಯುವ ಉದ್ಯಮ. ಹೀಗಾಗಿ, ಈ ಹಾದಿಯಲ್ಲಿ ಸರಿತಪ್ಪುಗಳ ಬಗ್ಗೆ ಯಾರಿಗೂ ಸರಿಯಾಗಿ ಅರಿವಾಗದು. ಮಾಹಿತಿಯುಗದಲ್ಲಿ, ಬೆರಳಿಟ್ಟರೆ ಸಾಕು, ಎಲ್ಲ ಮಾಹಿತಿಗಳೂ ನಮ್ಮ ಫೋನ್‌ ಪರದೆಯ ಮೇಲೆ ಬಂದು ಬೀಳುವ ಕಾರಣ, ಸರಿಯಾದ ಹಾದಿಯನ್ನು ಕಂಡು ಹಿಡಿಯುವುದೂ ಕೂಡಾ ಕಷ್ಟವೇ. ನಾನಾ ಬ್ರ್ಯಾಂಡುಗಳು, ಪ್ರೊಟೀನ್‌ ಶೇಕುಗಳು (protein shake), ಪ್ರಿವರ್ಕೌಟ್‌ ಡ್ರಿಂಕುಗಳು (DIY pre-workout drinks), ಪೋಸ್ಟ್‌ ವರ್ಕೌಟ್‌ ಡ್ರಿಂಕ್‌ಗಳು (Post-workout drinks), ತೂಕ ಇಳಿಸುವ ಪುಡಿಗಳು (weight loss food) ಹೀಗೆ ಎಲ್ಲವೂ ಸಂಸ್ಕರಿಸಲ್ಪಟ್ಟ ಆಹಾರಗಳೇ. ಆದರೆ, ಇವೆಲ್ಲವುಗಳನ್ನು ಕುಡಿಯುವುದರಿಂದ, ತಿನ್ನುವುದರಿಂದ ನಾವು ನಿಜವಾಗಿಯೂ ಆರೋಗ್ಯದತ್ತ ಮುಖ (healthy practice) ಮಾಡುತ್ತಿದ್ದೇವಾ ಅಥವಾ ಆರೋಗ್ಯದಲ್ಲಿದ್ದೇವೆ ಎಂಬ ಭ್ರಮೆಯಲ್ಲಿದ್ದೇವಾ ತಿಳಿಯುವುದಿಲ್ಲ. ಆದರೆ, ಇಷ್ಟೆಲ್ಲ ಜಾಹಿರಾತುಗಳಿರುವ ಪ್ರಪಂಚದಲ್ಲೂ, ಆದಷ್ಟೂ ನೈಸರ್ಗಿಕ ಆಹಾರಗಳನ್ನು (natural foods) ನೈಸರ್ಗಿಕ ಮಾದರಿಯಲ್ಲೇ ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲೇ (health tips) ಇರಿಸಿಕೊಳ್ಳಬಹುದು. ಹಾಗಾದರೆ ಬನ್ನಿ, ವರ್ಕೌಟ್‌ ಮಾಡಲು ಹೋಗುವ ಮುನ್ನ ಕುಡಿಯಬಹುದಾದ ಪ್ರೊಟೀನ್‌ ಶೇಕ್‌ ಹೊರತುಪಡಿಸಿದ ಸರಳ ನೈಸರ್ಗಿಕ ಪೇಯಗಳು (natural drinks) ಯಾವುವು ಎಂಬುದನ್ನು ನೋಡೋಣ.

1. ಬ್ಲ್ಯಾಕ್‌ ಕಾಫಿ: ಕಾಫಿ, ಚಹಾ ಒಳ್ಳೆಯದಲ್ಲ ನಿಜ. ಆದರೆ, ಹಿತಮಿತವಾಗಿದ್ದರೆ, ಇದರಲ್ಲೂ ಪೋಷಕ ತತ್ವಗಳಿವೆ. ಜೊತೆಗೆ ಕಾಫಿಗೆ, ಚಹಾಕ್ಕೆ ಹಾಲು ಸಕ್ಕರೆ ಹಾಕಿ ಕುಡಿಯುವ ಮಾದರಿಯಲ್ಲ ಇದು. ಬದಲಾಗಿ ಬ್ಲ್ಯಾಕ್‌ ಕಾಫಿಯ ಮಾದರಿಯಲ್ಲಿ ಪ್ರಿವರ್ಕೌಟ್‌ ಡ್ರಿಂಕ್‌ ಆಗಿ ಕುಡಿಯುವುದರಿಂದ ದೇಹಕ್ಕೆ ಕೆಲವು ಲಾಭಗಳಿವೆ. ಕಾಫಿಯಲ್ಲಿ ಕೆಫಿನ್‌ ಇದ್ದು, ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವು ಲಾಭಗಳಿವೆ. ಸಂಶೋಧನೆಗಳ ಪ್ರಕಾರ ಕಾಫಿಗೆ ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ಗುಣವಿದ್ದು, ತಲೆ ಸುತ್ತದಂತೆಯೂ ಇದು ತಡೆಯುತ್ತದೆ.

2. ಬೀಟ್‌ರೂಟ್‌ ಜ್ಯೂಸ್‌: ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಶೇಕ್‌ ಪುಡಿಗಳಿಗಿಂತ, ನೈಸರ್ಗಿಕವಾಗಿ ಲಭ್ಯವಿರುವ ಅತ್ಯಂತ ಲಾಭದಾಯಕವಾಗಿರುವ ಡ್ರಿಂಕ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌. ವರ್ಕೌಟ್‌ಗೂ ಮೊದಲು ಈ ಜ್ಯೂಸ್‌ ಕುಡಿಯುವುದರಿಂದ ಇದರಲ್ಲಿ ಹೇರಳವಾಗಿರುವ ನೈಟ್ರೇಟ್‌ ಅಂಶವು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ, ರಕ್ತ ಪರಿಚಲನೆಯು ಚುರುಕಾಗಿ ಮಾಂಸಖಂಡಗಳು ವೃದ್ಧಿಗೊಳ್ಳುತ್ತದೆ.

Body Fitness

3. ಗ್ರೀನ್‌ ಟೀ: ಮತ್ತೊಂದು ಅತ್ಯುತ್ತಮ ಪ್ರಿವರ್ಕೌಟ್‌ ಡ್ರಿಂಕ್‌ ಎಂದರೆ ಅದು ಗ್ರೀನ್‌ ಟೀ. ಈ ಗ್ರೀನ್‌ ಟೀಯಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿದ್ದು ಕಡಿಮೆ ಕೆಫಿನ್‌ ಇದೆ. ವರ್ಕೌಟ್‌ಗೂ ಸುಮಾರು ಒಂದು ಗಂಟೆಯಷ್ಟು ಮುನ್ನ ಗ್ರೀನ್‌ ಟೀಯನ್ನು ಸೇವಿಸಿದರೆ ಇದರಿಂದ ಶಕ್ತಿ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲ, ವ್ಯಾಯಾಮದ ಸಂದರ್ಭ ಬಹುಬೇಗನೆ ಸುಸ್ತಾಗುವುದಿಲ್ಲ.

4. ಎಳನೀರು: ಎಳನೀರು ಕೂಡಾ ವಕೌಟ್‌ಗೂ ಮೊದಲು ಹಾಗೂ ನಂತರ ಅತ್ಯುತ್ತಮ ಡ್ರಿಂಕ್‌. ಇದು ನೈಸರ್ಗಿಕವಾದ ಎಲೆಕ್ಟ್ರೋಲೈಟ್‌ ಕೂಡಾ. ದೇಹಕ್ಕೆ ಬೇಕಾದ ನೀರಿನಂಶವನ್ನು ಇದು ನೀಡಿ, ಸದಾ ಹೈಡ್ರೇಟೆಡ್‌ ಆಗಿರುವಂತೆ ನೋಡಿಕೊಳ್ಳುತ್ತದೆ.

5. ಬಾಳೆಹಣ್ಣು ಹಾಗೂ ಸೇಬಿನ ಜ್ಯೂಸ್‌: ಸೇಬು ಹಾಗೂ ಬಾಳೆಹಣ್ಣಿನ ಜ್ಯೂಸ್‌ ವರ್ಕೌಟ್‌ಗೂ ಒಂದು ಗಂಟೆ ಮೊದಲು ಕುಡಿಯುವುದರಿಂದ ಸಾಕಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ಹೆಚ್ಚು ಹೊತ್ತಿನ ಕಾಲ ವರ್ಕೌಟ್‌ ಮಾಡುತ್ತಲೇ ಇರಬೇಕಾದ ಪರಿಸ್ಥಿತಿ ಬಂದರೆ ಇದು ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಹೆಚ್ಚು ಹೊತ್ತಿನ ಕ್ಷಮತೆಯನ್ನು ನೀಡುತ್ತದೆ.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ (Cooking in an iron pot) ವಿಜ್ಞಾನವೂ ಇದೆ.

VISTARANEWS.COM


on

Cooking In An Iron Pot
Koo

ಭಾರತೀಯ ಅಡುಗೆ ಮನೆಗಳ ಪಾತ್ರೆಗಳಲ್ಲೇ ಒಂದು ಸೊಗಸಿದೆ. ನಾವು ನಿತ್ಯವೂ ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಪ್ರತಿಯೊಬ್ಬರ ಆಸಕ್ತಿ, ಅಭಿರುಚಿಗಳನ್ನೂ ಗುರುತಿಸಬಹುದು. ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ ವಿಜ್ಞಾನವೂ ಇದೆ. ವೈದ್ಯರೂ, ಸಂಶೋಧನೆಗಳೂ ಕೂಡಾ ಇವನ್ನು ಪುಷ್ಟೀಕರಿಸಿವೆ. ಮಣ್ಣಿನ ಪಾತ್ರೆಗಳು, ಕಬ್ಬಿಣದ ಪಾತ್ರೆಗಳ ಬಳಕೆ, ಎಲ್ಲೆಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬಹುದು ಇತ್ಯಾದಿ ಮಾಹಿತಿಗಳನ್ನು ನಾವು ಗ್ರಹಿಸಿಕೊಂಡು ಅಳವಡಿಸುವುದರಿಂದ ಸಾಕಷ್ಟು ಆರೋಗ್ಯದ (Cooking in an iron pot) ಲಾಭಗಳನ್ನೂ ಪಡೆಯಬಹುದು. ಹೊಸ ನಮೂನೆಯ ಆಧುನಿಕ ಪಾತ್ರೆಗಳ ಹಾವಳಿಯಿಂದ ತಲೆತಲಾಂತರಗಳಿಂದ ಬಂದ ಕಬ್ಬಿಣದ ಪಾತ್ರೆಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಕಬ್ಬಿಣದ ಪಾತ್ರೆಯ ಪ್ರಯೋಜನಗಳ ಬಗ್ಗೆ ಜನರಲ್ಲಿ ನಿಧಾನವಾಗಿ ಅರಿವು ಮೂಡುತ್ತಿರುವುದರಿಂದ ಕಬ್ಬಿಣ ಮತ್ತೆ ಚಾಲ್ತಿಯಲ್ಲಿ ಬರುತ್ತಿದೆ. ಬನ್ನಿ, ಕಬ್ಬಿಣದ ಪಾತ್ರೆಯನ್ನು ಬಳಸುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

Closed Caldron Pot

ಹೆಚ್ಚು ಬೇಯಿಸಲು ಉತ್ತಮ

ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಉಷ್ಣತೆಯ ಹೀಟಿಂಗ್‌ ಪಾಯಿಂಟ್‌ ತಲುಪಬಹುದು. ಆಹಾರವನ್ನು ರೋಸ್ಟ್‌ ಮಾಡಲು, ಗ್ರಿಲ್‌ ಮಾಡಲು ಹಾಗೂ ಬೇಯಿಸಲು ಕಬ್ಬಿಣದ ಪಾತ್ರೆ ಅತ್ಯುತ್ತಮ. ಆದರೆ, ಕಬ್ಬಿಣದ ಪಾತ್ರೆಯಲ್ಲಿ ಎಲ್ಲ ಭಾಗದಲ್ಲೂ ಒಂದೇ ಸಮನಾದ ಉಷ್ಣತೆ ಹಂಚಿ ಹೋಗುವುದಿಲ್ಲ. ಹಾಗಾಗಿ ಈ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವ ಮೊದಲೇ ಕೊಂಚ ಹೊತ್ತು ಬಿಸಿಗೆ ಇಡಬೇಕಾಗುತ್ತದೆ. ಆದರೆ ಎಷ್ಟು ಬಿಸಿಯಾದರೂ ನಾನ್‌ಸ್ಟಿಕ್‌ನಂತೆ ಇದರಲ್ಲಿ ರಾಸಾಯನಿಕ ಬಿಡುಗಡೆಯಾಗುವ ಭಯವಿಲ್ಲ.

ತುಕ್ಕು ಹಿಡಿಯಲು ಬಿಡಬಾರದು

ಕಬ್ಬಿಣದ ಪಾತ್ರೆಯ ಬಳಕೆ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಅದು ಅಷ್ಟು ಕಷ್ಟದ ವಿಚಾರವೇನಲ್ಲ. ಕಬ್ಬಿಣದ ಪಾತ್ರೆ ಕೊಂಚ ಒರಟು ಮೇಲ್ಮೈಯನ್ನು ಹೊಂದಿರುವುದರಿಂದ ಅದನ್ನು ಸದಾ ತೊಳೆದು ಆರಲು ಬಿಟ್ಟು ಎಣ್ಣೆ ಹಚ್ಚಿಟ್ಟರೆ ಸಾಕಾಗುತ್ತದೆ. ತುಕ್ಕು ಹಿಡಿಯಲು ಬಿಡಬಾರದು. ಹಿಡಿದರೆ ಅದನ್ನು ತೊಳೆದು ಮತ್ತೆ ಉಪಯೋಗಿಸಲು ನೆನಪಿಡಿ. ತುಕ್ಕಿನ ಮೇಲೆಯೇ ಹಾಗೆಯೇ ಅಡುಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Cast Iron Pot Of Chili

ಸ್ವಚ್ಛಗೊಳಿಸುವುದು ಸುಲಭ

ಹಾಗೆ ನೋಡಿದರೆ ಕಬ್ಬಿಣದ ತವಾ ಅಥವಾ ಪಾತ್ರೆಯನ್ನು ಸ್ವಚ್ಛಗೊಳಿಸುವುದು ಸುಲಭ. ಇದಕ್ಕೆ ಅತ್ಯಂತ ಜಾಗರೂಕತೆಯ ಕಾಳಜಿ ಅಗತ್ಯವಿಲ್ಲ. ನಾನ್‌ಸ್ಟಿಕ್‌ ಪಾತ್ರೆಯಂತೆ ಜಾಗರೂಕತೆಯ ಅಗತ್ಯವಿಲ್ಲ. ಯಾವುದೇ ಡಿಶ್‌ವಾಶ್‌ ಜೆಲ್ ಮೂಲಕ ಸ್ವಚ್ಛಗೊಳಿಸಬಹುದು. ತಿಕ್ಕಿ ತೊಳೆಯಬಹುದು. ಆದರೆ ತಿಕ್ಕಿ ತೊಳೆದ ಮೇಲೆ ಒಣಗಿಸುವಾಗ ಸ್ವಲ್ಪ ಕಾಳಜಿ ಬೇಕು. ಎಣ್ಣೆಯನ್ನು ಹಚ್ಚಿ ಇಡುವ ಕೆಲಸ ಮಾತ್ರ ಈ ಪಾತ್ರೆಯ ಕಾವಲಿಯಲ್ಲಿ ಮಾಡಬೇಕಾದ ಹೆಚ್ಚುವರಿ ಕೆಲಸವಾಗಿದೆ.

ಲೋಹದ ಯಾವುದೇ ಸೌಟು ಬಳಸಬಹುದು

ನಾನ್‌ಸ್ಟಿಕ್‌ ಪಾತ್ರೆಯಂತೆ ಕಬ್ಬಿಣದ ಪಾತ್ರೆಗೆ ಮರದ ಸೌಟನ್ನು ಬಳಸಬೇಕಾಗಿಲ್ಲ. ಲೋಹದ ಯಾವುದೇ ಬಗೆಯ ಸೌಟನ್ನೂ ಬಳಸಬಹುದು. ಅದರ ಮೂಲಕ ಪಾತ್ರೆಗೆ ಯಾವುದೇ ಹಾನಿಯಾಗದು.

Iron Pot

ಆರೋಗ್ಯ ದೃಷ್ಟಿಯಿಂದ ಒಳ್ಳೆಯದು

ಕಬ್ಬಿಣದ ಪಾತ್ರೆಯ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ನಮ್ಮ ದೇಹಕ್ಕೆ ಕಬ್ಬಿಣಾಂಶವೂ ಇದರಿಂದ ದೊರೆಯುತ್ತದೆ. ರಕ್ತಹೀನತೆಯಂತಹ ಸಮಸ್ಯೆ ಇದರಿಂದ ಬರದು. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಕಬ್ಬಿಣದ ಸ್ವಲ್ಪ ಅಂಶ ಆಹಾರಕ್ಕೆ ಸೇರುವುದರಿಂದ ದೇಹಕ್ಕೆ ಕಬ್ಬಿಣಾಂಶವೂ ದೊರೆಯುತ್ತದೆ. ನಮ್ಮ ದೇಹದ ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಹೆಚ್ಚಳಕ್ಕೆ ಕಬ್ಬಿಣಾಂಶ ಬೇಕೇಬೇಕು. ಹಾಗಾಗಿ ಇದು ಆರೋಗ್ಯಕ್ಕೆ ಪೂರಕ.

ಇದನ್ನೂ ಓದಿ: Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!

ಯಾವ ನಿರ್ಬಂಧವೂ ಇಲ್ಲ

ಕಬ್ಬಿಣದ ಪಾತ್ರೆಯಲ್ಲಿ ಅಸಿಡಿಕ್‌ ಅಥವಾ ಆಮ್ಲೀಯ ಗುಣಗಳ ಆಹಾರವನ್ನು ಇಡುವಂತಿಲ್ಲ ಎಂಬ ಯಾವ ನಿರ್ಬಂಧವೂ ಇಲ್ಲ. ಆದರೆ, ಇಂಥ ಅಡುಗೆಯನ್ನು ಬಹಳ ಹೊತ್ತು ಇಟ್ಟುಕೊಂಡು ಕುದಿಸುವಂಥ ಪ್ರಕ್ರಿಯೆ ಮಾಡದೆ ಇರುವುದು ಒಳ್ಳೆಯದು.

Continue Reading

ಆಹಾರ/ಅಡುಗೆ

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಹಲವಾರು ರೀತಿಯ ರೊಟ್ಟಿಗಳು ಆಹಾರವಾಗಿ ಜನಪ್ರಿಯತೆ ಗಳಿಸಿವೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಧಾನ್ಯ ಪರಂಪರಾಗತ ಆಹಾರವಾಗಿಯೂ ಬಳಕೆಯಲ್ಲಿದೆ. ಆದರೆ ಯಾರಿಗೆ ಯಾವ ರೊಟ್ಟಿ ಒಳ್ಳೆಯದು? ಯಾವ ರೊಟ್ಟಿಯಲ್ಲಿ ಏನೇನು ಸತ್ವಗಳು ದೊರೆಯುತ್ತವೆ? ಇಲ್ಲಿವೆ (Which Type Of Roti Is Best) ವಿವರ.

VISTARANEWS.COM


on

Which Type Of Roti Is Best
Koo

ಭಾರತದಲ್ಲಿ ಎಲ್ಲವೂ ವೈವಿಧ್ಯಮಯ, ಊಟವೂ ಸೇರಿ. ಅನ್ನ ಎಂದರೆ ಎಲ್ಲವೂ ಒಂದೇ ಅಲ್ಲ. ಬಿಳಿಯಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ ಮುಂತಾದ ಹಲವು ರೀತಿಯ ಅಕ್ಕಿಗಳಲ್ಲಿ ಅನ್ನ ಮಾಡಲಾಗುತ್ತದೆ. ರೊಟ್ಟಿ ಎಂದರೆ ಅದರಲ್ಲೂ ಭಿನ್ನತೆಯಿದೆ. ಅಕ್ಕಿರೊಟ್ಟಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತ; ಗೋಧಿ ರೊಟ್ಟಿ ಭಾರತದೆಲ್ಲೆಡೆ ಚಾಲ್ತಿಯಲ್ಲಿದೆ; ಜೋಳದ್ದು ಕರ್ನಾಟಕವೂ ಸೇರಿದಂತೆ ಹಲವೆಡೆ ಬಳಕೆಯಲ್ಲಿದೆ; ರಾಗಿ ರೊಟ್ಟಿ ಕರ್ನಾಟಕದಲ್ಲಿ ಹೆಚ್ಚು ಪ್ರಿಯ; ಸಜ್ಜೆ ರೊಟ್ಟಿ ಗುಜರಾತ್‌, ರಾಜಸ್ಥಾನಗಳಲ್ಲಿ ಮುಖ್ಯ ಆಹಾರ; ಪಂಜಾಬ್‌ ಪ್ರಾಂತ್ಯದಲ್ಲಿ ಮೈದಾ ನಾನ್‌ಗಳು ಜನಪ್ರಿಯ. ಆದರೆ ಈ ಎಲ್ಲಾ ರೊಟ್ಟಿಗಳಲ್ಲಿ ತೂಕ ಇಳಿಸುವವರಿಗೆ ಸೂಕ್ತವಾಗಿದ್ದು (Which Type Of Roti Is Best) ಯಾವುದು? ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯದ ಬಳಕೆ ಹೆಚ್ಚಿದೆ. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಿರುವುದರಿಂದ, ಯಾವುದು ಹೆಚ್ಚು ಆರೋಗ್ಯಕರ ಎಂಬ ಚರ್ಚೆಗೆ ಕಾವೇರಿದೆ. ಆಹಾರ ತಜ್ಞರು ಈ ಬಗ್ಗೆ ನಾನಾ ರೀತಿಯ ವಿವರಣೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರೀತಿಯ ರೊಟ್ಟಿಗಳ ಸತ್ವ ಮತ್ತು ಕ್ಯಾಲೊರಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಒಂದೊಂದು ಧಾನ್ಯಗಳಿಗೂ ಅದರದ್ದೇ ಆದ ಅನನ್ಯತೆಯಿದೆ. ಹಾಗಾಗಿ ಅವುಗಳ ಸತ್ವಗಳು ಭಿನ್ನವಾಗುತ್ತವೆ.

Wheat Roti

ಗೋಧಿ ರೊಟ್ಟಿ

ಒಂದು ಮಧ್ಯಮ ಗಾತ್ರದ ಗೋಧಿ ರೊಟ್ಟಿಯಲ್ಲಿ 70-80 ಕ್ಯಾಲರಿ ಶಕ್ತಿ ದೊರೆಯುತ್ತದೆ. ಇದರಲ್ಲಿ ನಾರು, ಪಿಷ್ಟ, ಅಲ್ಪ ಪ್ರಮಾಣದ ಪ್ರೊಟೀನ್‌ ಮತ್ತು ಕೊಬ್ಬು, ಮ್ಯಾಂಗನೀಸ್‌, ಫಾಸ್ಫರಸ್‌ನಂಥ ಖನಿಜಗಳು, ಹಲವು ರೀತಿಯ ಬಿ ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಈ ಧಾನ್ಯ ದೊರೆಯುವುದು, ಇದರಲ್ಲಿ ಆಹಾರ ತಯಾರಿಸುವುದು ಕಷ್ವವಲ್ಲ ಮತ್ತು ಇದರ ರುಚಿಯೂ ಇಷ್ಟವಾಗುವಂಥದ್ದು.

Millet Roti

ರಾಗಿ ರೊಟ್ಟಿ

ಒಂದು ರಾಗಿ ರೊಟ್ಟಿಯಲ್ಲಿ 80-90 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, ಕ್ಯಾಲ್ಶಿಯಂ, ಕಬ್ಬಿಣ, ನಾರು, ಪ್ರೊಟೀನ್‌, ಪಿಷ್ಟ, ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಹಲವು ರೀತಿಯ ಖನಿಜಾಂಶಗಳು ಇದರಲ್ಲಿವೆ. ಮೂಳೆಗಳ ಆರೋಗ್ಯಕ್ಕೆ ಇದು ಸೂಕ್ತವಾದದ್ದು ಮಾತ್ರವಲ್ಲ, ಮಧುಮೇಹಿಗಳಿಗೆ ಇದು ಒಳ್ಳೆಯ ಆಹಾರವಾಗಿದ್ದು, ರಕ್ತದಲ್ಲಿ ಸಕ್ಕರೆಯಂಶ ಏರದಂತೆ ಕಾಪಾಡಲು ನೆರವಾಗುತ್ತದೆ. ರಾಗಿ ತಿಂದವ ನಿರೋಗಿ ಎಂಬ ಮಾತು ವ್ಯಾಪಕ ಮನ್ನಣೆ ಪಡೆದಿದೆ.

jolada Roti

ಜೋಳದ ರೊಟ್ಟಿ

ಒಂದು ದೊಡ್ಡ ಜೋಳದ ರೊಟ್ಟಿಯಲ್ಲಿ 50-60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೋಳ ತಿಂದವ ತೋಳದಂತಿರಬಹುದು ಎಂಬುದು ಜನಪ್ರಿಯ ಗಾದೆ. ಗ್ಲೂಟೆನ್‌ ರಹಿತವಾದ ಆಹಾರ ಇದಾಗಿದ್ದು, ಮಧುಮೇಹಿಗಳಿಗೆ ಸೂಕ್ತವಾದ ಆಹಾರವಿದು. ಇದರಲ್ಲಿ ಪ್ರೊಟೀನ್‌, ಕೊಬ್ಬು, ನಾರು, ಪಿಷ್ಟ, ಕ್ಯಾಲ್ಶಿಯಂ, ರಂಜಕ, ಕಬ್ಬಿಣ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ.

Multigrain Roti

ಬಹುಧಾನ್ಯಗಳ ರೊಟ್ಟಿ

ಇದರಲ್ಲಿ ಹಲವಾರು ರೀತಿಯ ಧಾನ್ಯಗಳನ್ನು ಮಿಶ್ರ ಮಾಡಲಾಗುತ್ತದೆ. ಅಂದಾಜಿಗೆ ಹೇಳುವುದಾದರೆ, ಒಂದು ರೊಟ್ಟಿಯಲ್ಲಿ 80-100 ಕ್ಯಾಲರಿ ಶಕ್ತಿ ದೊರೆಯಬಹುದು. ಆದರೆ ಯಾವ್ಯಾವ ಧಾನ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಲಾಗುತ್ತದೆ ಎನ್ನುವುದರ ಮೇಲೆ, ಇದರ ಕ್ಯಾಲರಿಗಳು ನಿರ್ಧಾರವಾಗುತ್ತದೆ. ಇದರಿಂದ ಹಲವು ರೀತಿಯ ಧಾನ್ಯಗಳು ಮತ್ತು ಸಿರಿಧಾನ್ಯಗಳು ಒಟ್ಟಿಗೇ ದೇಹಕ್ಕೆ ದೊರೆಯುವುದಕ್ಕೆ ಸಾಧ್ಯ. ಇದರಲ್ಲಿ ಹಲವು ರೀತಿಯ ವಿಟಮಿನ್‌ ಮತ್ತು ಖನಿಜಗಳು, ನಾರು ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ಯಾವುದು ಸೂಕ್ತ?

ಗ್ಲೂಟೆನ್‌ ಮುಕ್ತ ಆಹಾರ ಬೇಕೆಂದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಸೂಕ್ತ. ಬಹುಧಾನ್ಯಗಳಲ್ಲಿ ಗೋಧಿ ಮಿಶ್ರವಾಗಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಬಿಡುವುದು ಒಳಿತು. ಮಧುಮೇಹ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಒಳ್ಳೆಯದು. ಹೆಚ್ಚು ಸಮತೋಲಿತ ಆಹಾರದ ಬಗ್ಗೆ ಗಮನ ಹೊಂದಿದ್ದರೆ ಬಹುಧಾನ್ಯಗಳ ರೊಟ್ಟಿ ಒಳ್ಳೆಯ ಆಯ್ಕೆ. ತೂಕ ಇಳಿಸುವುದು ಮುಖ್ಯ ಉದ್ದೇಶವಾಗಿದ್ದರೆ ಜೋಳದ ರೊಟ್ಟಿ ಸೂಕ್ತವಾದದ್ದು.

Continue Reading

ಕರ್ನಾಟಕ

Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

Fortis Hospital: ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿದ್ದ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದೆ. ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ ಮತ್ತು ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆಯನ್ನು ನೆರವೇರಿಸಿದೆ

VISTARANEWS.COM


on

Fortis Hospital doctors team performed complex surgery for three different diseases simultaneously
Koo

ಬೆಂಗಳೂರು: ವಿಶ್ವದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲೇ ಒಬ್ಬ ವ್ಯಕ್ತಿಗೆ ಮೂರು ವಿಭಿನ್ನ ಕಾಯಿಲೆಗಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯಕೀಯ ತಂಡ ಯಶಸ್ವಿಯಾಗಿ ನಡೆಸಿದೆ.

ನಗರದ ಕನ್ನಿಂಗ್‌ಹ್ಯಾಮ್‌ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹೃದ್ರೋಗ ಸಮಸ್ಯೆ, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಕೋಶದಲ್ಲಿ ಕಲ್ಲು ಹೊಂದಿದ್ದ 44 ವರ್ಷದ ವ್ಯಕ್ತಿಗೆ ಏಕಕಾಲದಲ್ಲೇ ಮೂರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ ಮತ್ತು ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ನಿರ್ದೇಶಕ ಡಾ. ಜಿ. ಐ. ಗಣೇಶ್ ಶೆಣೈ ಅವರ ವೈದ್ಯರ ತಂಡ ಈ ಚಿಕಿತ್ಸೆಯನ್ನು ನೆರವೇರಿಸಿದೆ.

ಇದನ್ನೂ ಓದಿ: Karnataka Congress: ಬೂತ್ ಮಟ್ಟದಲ್ಲಿ ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ; ಪಕ್ಷ ಬಲವರ್ಧನೆಗೆ ಡಿ.ಕೆ.ಶಿ ಪ್ಲ್ಯಾನ್‌

ಈ ಕುರಿತು ಮಾತನಾಡಿದ ಡಾ. ವಿವೇಕ್‌ ಜವಳಿ, 44 ವರ್ಷದ ಕೊಪ್ಪರಂ ಎಂಬ ವ್ಯಕ್ತಿಯು ಹೃದ್ರೋಗ ಸಮಸ್ಯೆಯನ್ನು ಹೊಂದಿದ್ದರು. ಇದಕ್ಕೆ ಚಿಕಿತ್ಸೆ ಪಡೆಯಲು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರಿಗೆ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ ಮಾಡುವ ಅವಶ್ಯಕತೆ ಇತ್ತು.

ರೋಗಿಯು ತಾವು ಮೊದಲಿನಿಂದಲೂ ಹೊಟ್ಟೆ ನೋವು ಅನುಭವಿಸುತ್ತಿರುವ ಬಗ್ಗೆಯೂ ನಮಗೆ ತಿಳಿಸಿದರು, ಇದಕ್ಕೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದೆವು. ಈ ವೇಳೆ ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂತು. ಹೀಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕರುಳಿನ ಕ್ಯಾನ್ಸರ್‌ ಇರುವುದು ಸಹ ಪತ್ತೆಯಾಯಿತು. ಕರುಳಿನ ಕ್ಯಾನ್ಸರ್‌ ಬಹುಪಾಲು ದೊಡ್ಡಮಟ್ಟದಲ್ಲಿಯೇ ಅವರಿಗೆ ಹಾನಿ ಮಾಡುತ್ತಿತ್ತು. ಹೀಗಾಗಿ ಅವರಿಗೆ ಹೃದಯ ಬೈಪಾಸ್‌ ಸರ್ಜರಿಯ ಜತೆಗೆ ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯೂ ಹೆಚ್ಚು ಅನಿವಾರ್ಯವಾಗಿತ್ತು.

ಆದರೆ, ಹೃದಯದ ಬೈಪಾಸ್‌ ಸರ್ಜರಿ ಬಳಿಕ 3 ತಿಂಗಳು ಯಾವುದೇ ಚಿಕಿತ್ಸೆಗೆ ಒಳಪಡುವುದು ಹೆಚ್ಚು ಅಪಾಯಕಾರಿ. ಆದರೆ, ಮೂರು ತಿಂಗಳವರೆಗೂ ಕರುಳಿನ ಕ್ಯಾನ್ಸರ್‌ನನ್ನು ಹಾಗೇ ಬಿಡಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಏಕಕಾಲದಲ್ಲೇ ಹೃದಯದ ಬೈಪಾಸ್‌ ಸರ್ಜರಿ, ಕರುಳಿನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಹಾಗೂ ಪಿತ್ತಕೋಶದಲ್ಲಿ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅವರ ಕುಟುಂಬದವರ ಒಪ್ಪಿಗೆ ಪಡೆದುಕೊಂಡೆವು.

ಇದನ್ನೂ ಓದಿ: IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ಮೊದಲಿಗೆ ಆಫ್-ಪಂಪ್ ಕರೋನರಿ ಆರ್ಟರಿ ಬೈಪಾಸ್ (OPCAB)ನ ವಿಶೇಷ ಶಸ್ತ್ರಚಿಕಿತ್ಸಾ ತಂತ್ರದ ಮೂಲಕ ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿಗೆ ನಡೆಸಿದೆವು. ಈ ಅವಧಿಯಲ್ಲೇ ಬಾರಿಯಾಟ್ರಿಕ್ ಸರ್ಜನ್‌ ಡಾ. ಜಿ. ಐ. ಗಣೇಶ್ ಶೆಣೈ ಅವರು, ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನ ಬಳಸಿಕೊಂಡು, ಲ್ಯಾಪರೊಸ್ಕೋಪಿಕ್ ಎಕ್ಸ್ಟೆಂಡೆಡ್ ರೈಟ್ ಹೆಮಿಕೊಲೆಕ್ಟಮಿ (LERHC) ಅನ್ನು ಕ್ಯಾನ್ಸರ್‌ನ ಕರುಳಿನ ಭಾಗವನ್ನು ತೆಗೆದುಹಾಕಿದರು, ಜತೆಗೆ ಪಿತ್ತಕೋಶದ ಕಲ್ಲುಗಳನ್ನು ಸಹ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ (LC) ಮೂಲಕ ತೆಗೆದು ಹಾಕುವಲ್ಲಿ ಯಶಸ್ವಿಯಾದರು. ಈ ಎಲ್ಲಾ ಶಸ್ತ್ರಚಿಕಿತ್ಸೆಯನ್ನು 7 ಗಂಟೆಗಳಲ್ಲಿ ನಡೆಸಲಾಯಿತು. ರೋಗಿಯು ಶಸ್ತ್ರಚಿಕಿತ್ಸೆಯಾದ 15 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಅವರು ವಿವರಿಸಿದರು.

Continue Reading

ಆರೋಗ್ಯ

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಮೌತ್‌ವಾಷ್‌ಗಳನ್ನು (Mouthwashes) ಬಳಸದವರ ಸಂಖ್ಯೆ ವಿರಳ. ಕೆಲವರು ನಿಯಮಿತವಾಗಿ ಬಳಸಿದರೆ, ಹಲವರು ಅಪರೂಪಕ್ಕಾದರೂ ಬಳಸುತ್ತಾರೆ. ವ್ಯಾಪಕವಾಗಿ ಬಳಕೆಯಲ್ಲಿರುವ ಈ ಮೌತ್‌ವಾಷ್‌ನ ಇತಿ-ಮಿತಿಗಳೇನು? ಇದನ್ನು ಬಳಸಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು? ಇಲ್ಲಿದೆ ವಿವರ.

VISTARANEWS.COM


on

Mouthwashes
Koo

ಜಾಹೀರಾತುಗಳನ್ನು ನೋಡಿ ಮರುಳಾಗುವುದು, ಅದನ್ನೇ ಅನುಸರಿಸುವುದು ಹೊಸದೇನಲ್ಲ. ಉದಾಹರಣೆಗೆ ಹೇಳುವುದಾದರೆ, ಯಾವುದೋ ಟೂತ್‌ಪೇಸ್ಟ್‌ ಉಪಯೋಗಿಸಿದರೆ ಹಲ್ಲುಗಳೆಲ್ಲ ಫಳಫಳಿಸಿ, ಉಸಿರು ತಾಜಾ ಆಗುತ್ತದೆ ಎಂದಿದ್ದರೆ, ಅದು ಸತ್ಯ ಎಂದು ಭಾವಿಸಿಯೇ ನಾವು ಉಪಯೋಗಿಸುತ್ತೇವೆ. ಮೌತ್‌ವಾಷ್‌ ಸಹ ಅದೇ ಸಾಲಿಗೆ ಸೇರುವಂಥದ್ದು. ಯಾವುದೇ ಮನೆಯ ಬಾತ್‌ರೂಂಗಳಲ್ಲಿ ಅದೀಗ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಬಣ್ಣದ ಬಾಟಲಿಗಳ ಮೇಲಿನ ಮೋಹವನ್ನೋ ಅಥವಾ ಜಾಹೀರಾತುಗಳ ಭರವಸೆಯನ್ನೋ ಒಂದೆಡೆ ಇಟ್ಟು, ಮೌತ್‌ವಾಷ್‌ (Mouthwashes) ಬಳಕೆ ಇತಿ-ಮಿತಿಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

Mouthwashes

ದುರ್ಗಂಧ ದೂರ

ಬಾಯಿಯ ದುರ್ಗಂಧ ಎಷ್ಟೋ ಸಂದರ್ಭಗಳಲ್ಲಿ ಮುಜುಗರ ತರುವಂತಹದ್ದು. ಸಾಮಾಜಿಕ, ವೈಯಕ್ತಿಕ ಅಥವಾ ವೃತ್ತಿಯ ಸಂದರ್ಭಗಗಳಲ್ಲಿ ಇದನ್ನು ನಿಭಾಯಿಸುವುದು ಕಷ್ಟವಾಗಬಹುದು. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್‌ವಾಷ್‌ ಬಳಕೆ ಸಹ ಈ ಸಮಸ್ಯೆಗೆ ಸಮರ್ಥ ಪರಿಹಾರವನ್ನು ಒದಗಿಸಬಲ್ಲದು.

ಒಸಡಿನ ಸಮಸ್ಯೆ ದೂರ

ಕೆಲವು ಮೌತ್‌ವಾಷ್‌ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಪ್ಲೇಕ್‌ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್‌ವಾಷ್‌ಗಳು ಪರಿಹಾರ ಒದಗಿಸಬಲ್ಲವು.

Woman using mouthwash after brushing

ಉಪಯೋಗ ಸುಲಭ

ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್‌ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್‌ವಾಷ್‌ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ.

ಹೆಚ್ಚುವರಿ ರಕ್ಷಣೆ

ಫ್ಲೂರೈಡ್‌ ಹೊಂದಿರುವ ಮೌತ್‌ವಾಷ್‌ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್‌ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.

Woman with mouthwash

ಮಿತಿಗಳಿಲ್ಲವೇ?

ಹಾಗೆಂದು ಮೌತ್‌ವಾಷ್‌ ಬಳಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೇ? ಅದನ್ನು ಬಳಸಿದಾಗ ಆಗುವುದೆಲ್ಲ ಒಳ್ಳೆಯದು ಎಂದು ತೀರ್ಮಾನಿಸಲು ಸಾಧ್ಯವೇ? ಎಂದು ಕೇಳಿದರೆ, ಹಾಗೇನಿಲ್ಲ. ಅದರಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಬಾಯಿಯ ಸರ್ವರೋಗಗಳಿಗೆ ಇದೊಂದೇ ಮದ್ದು ಎಂದು ಖಂಡಿತಕ್ಕೂ ಭಾವಿಸುವಂತಿಲ್ಲ. ಹಾಗಾದರೆ ಮೌತ್‌ವಾಷ್‌ ಬಳಸುವುದರಲ್ಲಿ ಇರುವಂಥ ಸಮಸ್ಯೆಗಳೇನು? ಯಾವುದರ ಬಗ್ಗೆ ಗಮನ ನೀಡಬೇಕು ಇದನ್ನು ಬಳಸುವಾಗ?

ಆಲ್ಕೋಹಾಲ್‌ ಕಿರಿಕಿರಿ

ಬಹಳಷ್ಟು ಮೌತ್‌ವಾಷ್‌ಗಳು ಆಲ್ಕೋಹಾಲ್‌ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್‌ವಾಷ್‌ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್‌ ಇಲ್ಲದಂಥ ಮೌತ್‌ವಾಷ್‌ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

Female with mouthwash

ಸಮಸ್ಯೆ ತಿಳಿಯದು

ಬಾಯಿಯ ದುರ್ಗಂಧದ ಸಮಸ್ಯೆಗಳನ್ನು ಮೌತ್‌ವಾಷ್‌ಗಳು ತಡೆಯುವುದು ಹೌದಾದರೂ ಅದು ತಾತ್ಕಾಲಿಕ. ಬಾಯಿಯ ದುರ್ಗಂಧಕ್ಕೆ ಮೂಲ ಕಾರಣವೇನು ಎಂಬುದನ್ನು ಹುಡುಕಿ, ಅದನ್ನು ಪರಿಹರಿಸಿಕೊಳ್ಳುವುದು ಮುಖ್ಯ. ಹಲ್ಲುಗಳು ಹುಳುಕಾಗಿವೆಯೇ ಅಥವಾ ಜೀರ್ಣಾಂಗಗಳ ಸಮಸ್ಯೆಯಿಂದ ಹೀಗಾಗುತ್ತಿದೆಯೇ- ಅಂತೂ ಕಾರಣವೇನು ಎಂಬುದನ್ನು ಪತ್ತೆ ಮಾಡುವುದು ಅಗತ್ಯ. ಹಾಗಾಗಿ ಸಮಸ್ಯೆಗಳನ್ನು ಮೌತ್‌ವಾಷ್‌ ತಾತ್ಕಾಲಿಕವಾಗಿ ಮಾತ್ರವೇ ನಿವಾರಣೆ ಮಾಡಬಲ್ಲದು.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಬಿಡುವಂತಿಲ್ಲ

ಮೌತ್‌ವಾಷ್‌ಗಳ ಬಳಕೆಯ ನೆವದಿಂದ ನಿತ್ಯದ ಸ್ವಚ್ಛತೆಯ ಅಭ್ಯಾಸಗಳನ್ನು ಬಿಡುವಂತಿಲ್ಲ. ಅಂದರೆ ನಿಯಮಿತವಾಗಿ ಬ್ರಷ್‌ ಮಾಡುವುದು, ಫ್ಲೋಸ್‌ ಮಾಡುವುದು, ಊಟ-ತಿಂಡಿಯ ನಂತರ ಬಾಯಿಗೆ ನೀರು ಹಾಕಿ ಮುಕ್ಕಳಿಸುವುದು- ಇವೆಲ್ಲ ಅಗತ್ಯ ಅಭ್ಯಾಸಗಳು. ಎಂದೋ ಪ್ರಯಾಣದ ಸಂದರ್ಭದಲ್ಲಿ ಬ್ರಷ್‌ ಮಾಡುವುದಕ್ಕೆ ಅನುಕೂಲವಿಲ್ಲ ಎನ್ನುವಾಗ ಮಾತ್ರವೇ ಮೌತ್‌ವಾಷ್‌ ಬಳಕೆಯನ್ನು ಪರ್ಯಾಯ ಆಗಿಸಿಕೊಳ್ಳಬಹುದೇ ಹೊರತು, ಸದಾ ಅಲ್ಲ.

Continue Reading
Advertisement
Road Accident in Anekal
ಕ್ರೈಂ20 mins ago

Road Accident : ತಿರುವಿನಲ್ಲಿದ್ದ ಜವರಾಯ; ಸ್ಪೀಡಾಗಿ ಬಂದು ಫೆನ್ಸಿಂಗ್ ಕಂಬಕ್ಕೆ ಡಿಕ್ಕಿ, ಬೈಕ್‌ ಸವಾರ ಸಾವು

T20 World Cup 2024
ಕ್ರೀಡೆ21 mins ago

T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು

Human trafficking
ದೇಶ29 mins ago

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Stone Quarry Collapses
ದೇಶ34 mins ago

Stone Quarry Collapses: ಕಲ್ಲಿನ ಗಣಿ ಕುಸಿದು 10 ಮಂದಿ ಜೀವಂತ ಸಮಾಧಿ; ರಕ್ಷಣಾ ಕಾರ್ಯಾಚರಣೆಗೆ ಭೀಕರ ಮಳೆ ಅಡ್ಡಿ

tumkur murder
ತುಮಕೂರು48 mins ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

deep fake case
ಕ್ರೈಂ1 hour ago

Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Rashmika Mandanna
South Cinema1 hour ago

Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾದ ಮುಂದಿರುವ ಸವಾಲುಗಳೇನು?

murder case belagavi news
ಕ್ರೈಂ2 hours ago

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Pune Porsche Accident
ದೇಶ2 hours ago

Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌