KCC 4: ಕೆಸಿಸಿ ಸೀಸನ್ 4ರ ಆಟಗಾರರ ಹರಾಜು ಬಹುತೇಕ ಮುಕ್ತಾಯ - Vistara News

ಕ್ರೀಡೆ

KCC 4: ಕೆಸಿಸಿ ಸೀಸನ್ 4ರ ಆಟಗಾರರ ಹರಾಜು ಬಹುತೇಕ ಮುಕ್ತಾಯ

ಸುದೀಪ್, ಶಿವಣ್ಣ, ಗಣೇಶ್, ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಕೆಸಿಸಿ ಕಪ್‌ ಸೀಸನ್‌ 4ರ (KCC 4- Kannada Chalanachitra Cup) ಹರಾಜು ಆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ.

VISTARANEWS.COM


on

KCC Cup 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಿತ್ರರಂಗದ ಗಣ್ಯರ ಕ್ರಿಕೆಟ್‌ ಪಂದ್ಯಾಟ ಸರಣಿ ಕೆಸಿಸಿ ಕಪ್‌ ಸೀಸನ್‌ 4ರ (KCC 4- Kannada Chalanachitra Cup) ಹರಾಜು ಆರಂಭವಾಗಿದೆ. ಹೊಸಕೆರೆಹಳ್ಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಇಂದು ನಡೆಯುತ್ತಿದೆ.

ಹರಾಜು ಪ್ರಕ್ರಿಯೆಯಲ್ಲಿ ಬಹುತೇಕ ಕಲಾವಿದರು ಭಾಗಿಯಾಗಿದ್ದರು. ಈ ಬಾರಿ ಆರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಆರು ತಂಡಗಳಿಗೂ ಸ್ಟಾರ್ ನಟರು ಕ್ಯಾಪ್ಟನ್ ಆಗಿರುತ್ತಾರೆ. ಡಿಸೆಂಬರ್ 23,24, 25ರಂದು ಕೆಸಿಸಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್ 4 ನಡೆಯಲಿದೆ.

ಸುದೀಪ್, ಶಿವಣ್ಣ, ಗಣೇಶ್, ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ದುನಿಯಾ ವಿಜಯ್, ಡಾಲಿ ಧನಂಜಯ್, ಲಹರಿ ವೇಲು, ಮನೋಹರ್ ನಾಯ್ಡು, ಶ್ರೀನಗರ ಕಿಟ್ಟಿ, ರವಿಶಂಕರ್, ಸುದೀಪ್ ಅಳಿಯ ಸಂಜಿತ್ ಸುದೀಪ್ ಸೇರಿದಂತೆ ಹಲವರ ಆಗಮನವಾಗಿದೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಗಳಾಗಲಿದ್ದಾರೆ. ಎಸ್ ಭದ್ರಿನಾಥ್, ಸುರೇಶ್ ರೈನಾ, ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ. ಗಿಫ್ಸ್ ಆಡಲಿದ್ದಾರೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.

ತಂಡಗಳು ಹಾಗೂ ನಾಯಕರ ಹೆಸರು ಹೀಗಿವೆ:

1) ಒಡೆಯರ್ ಚಾರ್ಜರ್ಸ್. ಕ್ಯಾಪ್ಟನ್ ವಿಕ್ರಾಂತ್, ಸ್ಟಾರ್ ಉಪೇಂದ್ರ

2) ಕದಂಬ ಲಯನ್ಸ್: ಕ್ಯಾಪ್ಟನ್ ರಾಜೀವ್, ಸ್ಟಾರ್ ಡಾಲಿ ಧನಂಜಯ್.

3) ಗಂಗಾ ವಾರಿಯರ್ಸ್: ಕ್ಯಾಪ್ಟನ್ ಪ್ರಿನ್ಸ್. ಸ್ಟಾರ್ ಗಣೇಶ್.

4) ರಾಷ್ಟ್ರಕೂಟ ಪ್ಯಾಂತರ್ಸ್: ಕ್ಯಾಪ್ಟನ್ ಪ್ರದೀಪ್, ಸ್ಟಾರ್ ಶಿವಣ್ಣ.

5) ಹೊಯ್ಸಳ ಈಗಲ್ಸ್: ಕಿಚ್ಚ ಸುದೀಪ್ ಕ್ಯಾಪ್ಟನ್ ಆಂಡ್ ಸ್ಟಾರ್

ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್‌, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. 

ಇದನ್ನೂ ಓದಿ: KCC Cup 2023: ಡಿಸೆಂಬರ್‌ನಲ್ಲಿ KCC ಕಪ್‌; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK : ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ.

VISTARANEWS.COM


on

IND vs PAK
Koo

ಬೆಂಗಳೂರು: ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ವಿರುದ್ಧ 6 ರನ್​ಗಳ ವಿಜಯ ದಾಖಲಿಸಿದೆ. ಈ ಮೂಲಕ ನೆರೆಯ ದೇಶದ ವಿರುದ್ಧದ ವಿಶ್ವ ಕಪ್ ಪ್ರಾಬಲ್ಯವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು. ಈ ವೇಳೆ ಪಾಕ್(Pakistan Cricket Team)​ ಗೆಲ್ಲುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಭಾರತದ (India Cricket Team) ಬೌಲರ್​ಗಳು ತನ್ನ ಪ್ರಭಾವಿ ಸ್ಪೆಲ್​ಗಳ ಮೂಲಕ ಪಾಕಿಸ್ತಾನ ತಂಡವನ್ನು 113 ರನ್​ಗಳಿಗೆ ಕಟ್ಟಿ ಹಾಕಿತು. ಹೀಗಅಗಿ ಭಾರತ ತಂಡದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಇದೇ ವೇಳೆ ಕೆನಡಾದ ರ್ಯಾಪರ್​ ಡ್ರೇಕ್​ಗೂ ಸಾಕಷ್ಟು ಖುಷಿ ಸಿಕ್ಕಿದೆ. ಹೇಗೆಂದರೆ ಅವರು ಭಾರತ ಪರ 5.4 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಇದೀಗ ಅವರಿಗೆ ಅದರ ಎರಡು ಪಟ್ಟು ಹಣ ಸಿಕ್ಕಿದೆ.

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿಯೇ ಸೋಲಿಸುತ್ತದೆ ಎಂಬ ವಿಶ್ವಾಸದಲ್ಲಿ ಕೆನಡಾದ ರ್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ ಟೀಮ್ ಇಂಡಿಯಾ ಪರ 5 ಕೋಟಿ ರೂಪಾಯಿ ಬೆಟ್​ ಕಟ್ಟಿದ್ದರು. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂಬತ್ತನೇ ಬಾರಿಗೆ ಮುಖಾಮುಖಿಯಾಗಿದ್ದು ಎಂಟು ಸಲ ಭಾರತವೇ ಗೆದ್ದಿದೆ. ಹೀಗಾಗಿ ಅವರು ಸಹಜವಾಗಿ ಭಾರತ ಪರವೇ ಬೆಟ್ಟಿಂಗ್​ ಕಟ್ಟಿದ್ದಾರೆ. ಇನ್ನು 2021ರ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದೆ. ಇದು ಆ ತಂಡಕ್ಕೆ ವಿಶ್ವ ಕಪ್​ನಲ್ಲಿ ಏಕೈಕ ಗೆಲುವು.

ಟಿ 20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪ್ರಾಬಲ್ಯ ಹೊಂದಿರುವ ಕಾರಣ ಪಂದ್ಯವನ್ನು ಗೆಲ್ಲುವ ಪ್ರಬಲ ನೆಚ್ಚಿನ ತಂಡವೆಂದು ಬೆಟ್ಟಿಂಗ್​ ಆ್ಯಪ್​ಗಳ ಪರಿಗಣಿಸಿದ್ದವು. ಮೆನ್ ಇನ್ ಗ್ರೀನ್ ವಿರುದ್ಧದ ಮೆನ್ ಇನ್ ಬ್ಲೂ ಗಮನಾರ್ಹ ಟ್ರ್ಯಾಕ್ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು, ಡ್ರೇಕ್ ನ್ಯೂಯಾರ್ಕ್​​ನಲ್ಲಿ ನಡೆದ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಮೇಲೆ ಪಣತೊಡಲು ನಿರ್ಧರಿಸಿದ್ದರು.

ಇದನ್ನೂ ಓದಿ: IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

ಡ್ರೇಕ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಐಪಿಎಲ್ 2024 ರ ಫೈನಲ್​​ಗೆ ಮುಂಚಿತವಾಗಿ, ಕೆನಡಾದ ರ್ಯಾಪರ್ ಕೋಲ್ಕತಾ ನೈಟ್ ರೈಡರ್ಸ್​ ಪರ ಸನ್​​​ರೈಸರ್ಸ್​ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ 2 ಕೋಟಿ ರೂ. ಕಟ್ಟಿದ್ದರು. ಆದರೆ ಫಲಿತಾಂಶ ಅವರಿಗೆ ಪೂರಕವಾಗಿ ಬರಲಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಡ್ರೇಕ್ ಹಣ ಕಳೆದುಕೊಂಡಿದ್ದರು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು. To Beat Pakistan

Continue Reading

ಕ್ರೀಡೆ

IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

IND vs PAK: ಭಾರತ ತಂಡ ಪಾಕಿಸ್ತಾನದ ಆಟಗಾರರಿಗೆ ಕಣ್ಣೀರು ಹಾಕಿಸುವುದು ಇದೇ ಮೊದಲಲ್ಲ. ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪಂದ್ಯಗಳು ಅತ್ಯಂತ ರೋಚಕವಾಗಿಯೇ ಕೊನೆಗೊಳ್ಳುತ್ತದೆ. ಈ ಹಿಂದಿನ ಆವೃತ್ತಿಯಲ್ಲೂ ಇದೇ ಮುಂದುವರಿದಿತ್ತು. ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 2 ರನ್ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆ ವೇಳೆಯೂ ಕಣ್ಣೀರು ಹಾಕುವುದು ಪಾಕಿಸ್ತಾನ ತಂಡದ ಆಟಗಾರರ ಸರದಿಯಾಯಿತು.

VISTARANEWS.COM


on

IND vs PAK
Koo

ಬೆಂಗಳೂರು: ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವ ಕಪ್​ನ (T20 World Cup) ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 6 ರನ್​​ಗಳಿಂದ ಸೋಲಿಸಿದೆ. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಏರುಪೇರಿನ ಬ್ಯಾಟಿಂಗ್ ಬಳಿಕ ಮೆನ್ ಇನ್ ಬ್ಲೂ ತಂಡವು 18.3 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 120 ರನ್ ಗಳ ಗುರಿಯನ್ನು ನೀಡಿತು. ಪ್ರತಿಯಾಗಿ ಆಡಿದ ಪಾಕಿಸ್ತಾನ 20 ಓವರ್​ಗಳಲ್ಲಿ 113 ರನ್​ಗಳಿಗೆ ಸೀಮಿತಗೊಂಡಿತು.

ಸೋಲಿನ ನಂತರ ಪಾಕಿಸ್ತಾನದ ಸ್ಟಾರ್ ಬೌಲರ್ ನಸೀಮ್ ಶಾ ಅಳುತ್ತಿರುವುದು ಕಂಡುಬಂತು. ಅವರು 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು. ಅವರು ತಂಡಕ್ಕೆ 4 ಎಸೆತಗಳಲ್ಲಿ 14 ರನ್​ಗಳ ಅಗತ್ಯವಿದ್ದಾಗ 2 ಬೌಂಡರಿಗಳನ್ನು ಹೊಡೆದರು. ಅಸಾಧ್ಯವಾದ ಗುರಿಯನ್ನು ಬೆನ್ನಟ್ಟುವಲ್ಲಿ ಧೈರ್ಯ ತೋರಿದ ಅವರಿಗೆ ಗೆಲುವು ಸಿಗದೇ ಹೋದಾಗ ಅಳು ಬಂತು. ಅವರು ಮೊದಲ ಇನ್ನಿಂಗ್ಸ್​​ನಲ್ಲಿ ಶಾ ತಮ್ಮ ನಾಲ್ಕು ಓವರ್​ಗಳಲ್ಲಿ 5.25 ಎಕಾನಮಿಯೊಂದಿಗೆ ಮೂರು ವಿಕೆಟ್​ಗಳನ್ನು ಪಡೆದಿದ್ದರು. ಹೀಗಾಗಿ ಅವರಿಗೆ ನಿರಾಸೆ ಎದುರಾಯಿತು. ಭಾರತ ವಿರುದ್ಧ ಸೋಲುವುದು ಅವಮಾನ ಎಂದುಕೊಂಡ ಅವರು ಮೈದಾನದಿಂದ ಮರಳುವ ವೇಳೆ ಕಣ್ಣೀರು ಸುರಿಸಿದರು.

ಭಾರತ ತಂಡ ಪಾಕಿಸ್ತಾನದ ಆಟಗಾರರಿಗೆ ಕಣ್ಣೀರು ಹಾಕಿಸುವುದು ಇದೇ ಮೊದಲಲ್ಲ. ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪಂದ್ಯಗಳು ಅತ್ಯಂತ ರೋಚಕವಾಗಿಯೇ ಕೊನೆಗೊಳ್ಳುತ್ತದೆ. ಈ ಹಿಂದಿನ ಆವೃತ್ತಿಯಲ್ಲೂ ಇದೇ ಆಗಿತ್ತು. ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 82 ರನ್ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆ ವೇಳೆಯೂ ಕಣ್ಣೀರು ಹಾಕುವುದು ಪಾಕಿಸ್ತಾನ ತಂಡದ ಆಟಗಾರರ ಸರದಿಯಾಗಿತ್ತು.

ಪಾಕಿಸ್ತಾನ ವಿರುದ್ಧ ಬುಮ್ರಾ ಭರ್ಜರಿ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ರಕ್ಷಕನಂತೆ ಆಡಿದರು. ಅವರು ಕೆಲವು ನಿರ್ಣಾಯಕ ವಿಕೆಟ್​ಗಳನ್ನು ಗಳಿಸಿದರು. ಇನ್ನಿಂಗ್ಸ್​ನ 19 ನೇ ಓವರ್​ನಲ್ಲಿ ಒಂದು ವಿಕೆಟ್ ಪಡೆದರು. ಅವರು ತಂಡಕ್ಕೆ ಅಗತ್ಯವಿದ್ದಾಗ ನಿಖರವಾಗಿ ಪ್ರದರ್ಶನ ನೀಡಿದರು ಮತ್ತು ಪಾಕಿಸ್ತಾನ ವಿರುದ್ಧದ ಸೋಲಿನಿಂದ ಭಾರತವನ್ನು ಕಾಪಾಡಿದರು.

ಇದನ್ನೂ ಓದಿ: IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

120 ರನ್​ಗಳ ಗುರಿ ಬೆನ್ನತ್ತಿದ ಪಾಕ್​​ ಹೀನಾಯ ಸೋಲಿಗೆ ಒಳಗಾಯಿತು. ಇದೇ ವೇಳೆ ಮೆನ್ ಇನ್ ಬ್ಲೂ ನಿಜವಾದ ವಿಜೇತರಂತೆ ಆಡಿತು. ಟಿ 20 ಐ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿತು. ಜಸ್ಪ್ರೀತ್ ಬುಮ್ರಾ ನಿಗದಿತ 4 ಓವರ್ಗಳಲ್ಲಿ 3.50 ಎಕಾನಮಿಯೊಂದಿಗೆ 3 ವಿಕೆಟ್ ಪಡೆದರು. ಆರಂಭಿಕ ವೇಗಿ ಭಾರತ ತಂಡವನ್ನು ನಿರಾಶಾದಾಯಕ ಸೋಲಿನಿಂದ ರಕ್ಷಿಸಿದರು.

ಮೆನ್ ಇನ್ ಗ್ರೀನ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಾರ್ಕರ್ ಕಿಂಗ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಾಕಿಸ್ತಾನ ಎರಡನೇ ಇನ್ನಿಂಗ್ಸ್ ನಲ್ಲಿಯೂ ಕಠಿಣ ಆರಂಭ ನೀಡಿತು. ಆದರೆ ಭಾರತೀಯ ಬೌಲರ್​ಗಳು ಅವಕಾಶ ನೀಡಲಿಲ್ಲ.

ಟಾಸ್ ಗೆದ್ದ ಪಾಕಿಸ್ತಾನ ನಾಯಕ ಅಝಾಮ್ ಭಾರತವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿದರು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕ್ರಮವಾಗಿ 13 ಮತ್ತು 4 ರನ್​ಗಳಿಗೆ ಔಟ್ ಆದರು. ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ 39 ರನ್ಗಳ ಜೊತೆಯಾಟದ ಮೂಲಕ ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ನಾಸಿಮ್​ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಮಧ್ಯಮ ಮತ್ತು ಕೆಳ ಕ್ರಮಾಂಕ ಕುಸಿಯುವಂತೆ ಮಾಡಿದರು. ಆದರೆ ಪಂತ್​ 42 ರನ್ ಬಾರಿಸಿ ಸಹಾಯ ಮಾಡಿದರು. ಪ್ರತಿಯಾಗಿ ಆಡಿದ ಪಾ ಕಿಸ್ತಾನವು ಏಳು ಬ್ಯಾಟರ್​ಗಳನ್ನು ಕಳೆದುಕೊಂಡು ತಮ್ಮ ಸ್ಕೋರ್ ಕಾರ್ಡ್​ಗೆ ಕೇವಲ 113 ರನ್​​ ಸೇರಿಸಿತು.

Continue Reading

ಕ್ರೀಡೆ

IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

IND vs PAK: 2024 ರ ಟಿ 20 ವಿಶ್ವಕಪ್​ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸುತ್ತಿದ್ದಂತೆ, ಟ್ವಿಟರ್​ನಲ್ಲಿ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಚೆಂಡಿನೊಂದಿಗೆ ನೀಡಿದ ಅಮೋಘ ಪ್ರದರ್ಶನಕ್ಕಾಗಿ ಶ್ಲಾಘಿಸಿದ್ದಾರೆ. ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ ಅವರ ಆಟಕ್ಕೆ ತಲೆಬಾಗಿದ್ದಾರೆ. ಭಾರತವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ಅಷ್ಟೊಂದು ಸುಲಭವಲ್ಲ ಎಂದು ಹೇಳಿದ್ದಾರೆ.

VISTARANEWS.COM


on

IND vs PAK
Koo

ಬೆಂಗಳೂರು: ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ರ 19 ನೇ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು (IND vs PAK ) ಸೋಲಿಸಿದೆ. ಆ ಬಳಿಕ ಟ್ವಿಟರ್​​ನಲ್ಲಿ ಭಾರತ ತಂಡದ ಅಭಿಮಾನಿಗಳು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ಹಂತದಲ್ಲಿ ಭಾರತ ಸೋಲಿನ ದವಡೆಗೆ ಸಿಲುಕಿತ್ತು. ಬಳಿಕ ಎದ್ದು ಬಂದು ತಿರುಗೇಟು ಕೊಟ್ಟಿತು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅಭಿಮಾನಿಗಳು , ‘ಮೊದಲೇ ಸಂಭ್ರಮಿಸಬೇಡಿ. ತಿರುಗೇಟು ಕೊಡುವುದು ಗ್ಯಾರಂಟಿ’ ಎಂದು ಬರೆದುಕೊಂಡಿದ್ದಾರೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ(Rohit Sharma) ನೇತೃತ್ವದ ತಂಡವು 6 ರನ್​ಗಳಿಂದ ಜಯಗಳಿಸಿತ್ತು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ (4) ಮತ್ತು ರೋಹಿತ್ ಶರ್ಮಾ (13) ಇಬ್ಬರೂ ಬೇಗನೆ ಪೆವಿಲಿಯನ್​ಗೆ ಮರಳಿದ್ದರಿಂದ ಭಾರತವು ಬಯಸಿದ ರೀತಿಯ ಆರಂಭ ದೊರೆಯಲಿಲ್ಲ. ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ (20) ತಮ್ಮ ತಂಡಕ್ಕಾಗಿ ಉತ್ತಮ ಆಟವನ್ನು ಆಡಿದರೂ ಮುಂದುವರಿಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ (42) ಆಕ್ರಮಣಕಾರಿಯಾಗಿ ಆಡಿದರು. ಹೆಚ್ಚಿನ ಒತ್ತಡದ ಪಂದ್ಯದಲ್ಲಿ ತಂಡದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಆದರೆ ಅವರೂ ಹಾದಿಯು ಮೊಟಕಾಯಿತು.

ರಿಷಭ್ ಪಂತ್ ಔಟಾದ ನಂತರ ತಂಡದ ರನ್ ಗಳಿಕೆ ಭಾರತದ ಹಾದಿಯಲ್ಲಿ ಸಾಗಲಿಲ್ಲ. 3 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ಭಾರತ 19 ಓವರ್ ಗಳಲ್ಲಿ 119 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಭಾರತದ ಪರ ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಾ ತಲಾ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಅಮೀರ್ 1 ವಿಕೆಟ್ ಪಡೆದರು.

ಚೇಸ್​ ಮಾಡಲು ಹೊರಟ ಪಾಕ್​ ಪರ ನಾಯಕ ಬಾಬರ್ ಅಝಾಮ್ (13) ಬೇಗನೆ ವಿಕೆಟ್ ಕಳೆದುಕೊಂಡರೂ ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಉಸ್ಮಾನ್ ಖಾನ್ (13) ಕೂಡ ಬೇಗ ಮರಳಿದರು. ಮೊಹಮ್ಮದ್ ರಿಜ್ವಾನ್ತಂ ಡವನ್ನು ಹಿಡಿದಿಟ್ಟುಕೊಂಡರು ಮತ್ತು ಅದ್ಭುತ ಇನ್ನಿಂಗ್ಸ್ ಆಡಿದರು. ಈ ವೇಳೆ ಪಾಕ್​ ಗೆಲ್ಲುವುದು ನಿಶ್ಚಿತ ಎಂಬ ವಿಶ್ಲೇಷಣೆಗಳು ಬಂದವು. ಆದರೆ ಆದರೆ ಅವರು ಔಟಾದ ನಂತರ ಪಾಕಿಸ್ತಾನದ ಅದೃಷ್ಟ ಕೈಕೊಟ್ಟಿತು. ಅವರು ತ್ವರಿತವಾಗಿ ವಿಕೆಟ್​ಗಳನ್ನು ಕಳೆದುಕೊಂಡರು. ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಹಿನ್ನಡೆಯ ಹಿಂದಿನ ಶಕ್ತಿಗಳು. ಇವರಿಬ್ಬರು ಮಧ್ಯಮ ಕ್ರಮಾಂಕದಲ್ಲಿ ಮೂರು ವಿಕೆಟ್ ಗಳನ್ನು ಪಡೆದು ಆಟವನ್ನು ಭಾರತದ ಪರವಾಗಿ ತಿರುಗಿಸಿದರು. ಕೊನೆಯಲ್ಲಿ ಅರ್ಶ್​ದೀಪ್​ ಸಿಂಗ್ ಭಾರತಕ್ಕೆ ಗೆಲುವು ತಂದುಕೊಟ್ಟರು.

ಟ್ವಿಟರ್​ನಲ್ಲಿ ಅಭಿಮಾನಿಗಳು ಸಂಭ್ರಮ

2024 ರ ಟಿ 20 ವಿಶ್ವಕಪ್​ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸುತ್ತಿದ್ದಂತೆ, ಟ್ವಿಟರ್​ನಲ್ಲಿ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಚೆಂಡಿನೊಂದಿಗೆ ನೀಡಿದ ಅಮೋಘ ಪ್ರದರ್ಶನಕ್ಕಾಗಿ ಶ್ಲಾಘಿಸಿದ್ದಾರೆ. ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ ಅವರ ಆಟಕ್ಕೆ ತಲೆಬಾಗಿದ್ದಾರೆ. ಭಾರತವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ಅಷ್ಟೊಂದು ಸುಲಭವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK : ಸಿರಾಜ್​ ಚೆಂಡಿನ ಹೊಡೆತಕ್ಕೆ ಪಿಚ್​ನಲ್ಲೇ ಅಡ್ಡಡ್ಡ ಮಲಗಿದ​ ರಿಜ್ವಾನ್​; ಇಲ್ಲಿದೆ ವಿಡಿಯೊ

2007ರ ನಂತರದ ಟಿ20 ವಿಶ್ವ ಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ 9 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ 8 ಬಾರಿ ಗೆದ್ದಿದ್ದರೆ ಪಾಕಿಸ್ತಾನ ಏಕೈಕ ಗೆಲುವು ದಾಖಲಿಸಿದರು. ಇನ್ನು ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದ ಈ ಹಿಂದಿನ ಆವೃತ್ತಿಯ ವಿಶ್ವ ಕಪ್​ ಪಂದ್ಯವಲ್ಲೂ ವಿರಾಟ್​ ಕೊಹ್ಲಿ ಅಜೇಯ 82 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಪವರ್ ಪ್ಲೇ ಅವಧಿಯಲ್ಲಿ ಭಾರತ 4 ವಿಕೆಟ್​ ಕಳೆದುಕೊಂಡಾಗ ಸೋಲುತ್ತದೆ ಎಂದು ಅಂದುಕೊಂಡಿದ್ದರು. ಅದರೆ, ಭಾರತ ತಂಡ ತಿರುಗೇಟು ಕೊಟ್ಟಿತ್ತು. ವಿಜಯವನ್ನು ತನ್ನದಾಗಿಸಿಕೊಂಡಿತ್ತು.

Continue Reading

ಪ್ರಮುಖ ಸುದ್ದಿ

IND vs PAK : ಸಿರಾಜ್​ ಚೆಂಡಿನ ಹೊಡೆತಕ್ಕೆ ಪಿಚ್​ನಲ್ಲೇ ಅಡ್ಡಡ್ಡ ಮಲಗಿದ​ ರಿಜ್ವಾನ್​; ಇಲ್ಲಿದೆ ವಿಡಿಯೊ

IND vs PAK : ಟಿ 20 ವಿಶ್ವಕಪ್​ ಪಂದ್ಯದಲಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 119 ರನ್​ಗಳಿಗೆ ಆಲೌಟ್ ಆದ ನಂತರ, ಭಾರತೀಯ ವೇಗಿಗಳು ಎದುರಾಳಿ ತಂಡವನ್ನು ಕಟ್ಟಿ ಹಾಕಿದರು. ಅವರು ಅದ್ಭುತ ಲೈನ್ ಆ್ಯಂಡ್ ಲೆಂತ್​​ ಬೌಲ್ ಮಾಡಿದರು. ಬಾಬರ್ ಅಜಮ್ ನೇತೃತ್ವದ ತಂಡಕ್ಕೆ ರನ್ ಗಳಿಸಲು ಬಿಡಲೇ ಇಲ್ಲ.

VISTARANEWS.COM


on

IND vs PAK
Koo

ಬೆಂಗಳೂರು: 2024 ರ ಟಿ 20 ವಿಶ್ವಕಪ್​​ನಲ್ಲಿ (T20 World Cup) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ (IND vs PAK) ಭಾರತದ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್​​ನಲ್ಲಿ ತಮ್ಮ ಅತ್ಯುತ್ತಮT20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ ಪ್ರದರ್ಶನ ನೀಡಿದರು. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯ ನಡೆಯಿತು. ಪಂದ್ಯದಲ್ಲಿ ಆರು ರನ್​ಗಳಿಂದ ಗೆದ್ದ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧದ ಪಾರಮ್ಯವನ್ನು ಮುಂದುವರಿಸಿತು.

ಟಿ 20 ವಿಶ್ವಕಪ್​ ಪಂದ್ಯದಲಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 119 ರನ್​ಗಳಿಗೆ ಆಲೌಟ್ ಆದ ನಂತರ, ಭಾರತೀಯ ವೇಗಿಗಳು ಎದುರಾಳಿ ತಂಡವನ್ನು ಕಟ್ಟಿ ಹಾಕಿದರು. ಅವರು ಅದ್ಭುತ ಲೈನ್ ಆ್ಯಂಡ್ ಲೆಂತ್​​ ಬೌಲ್ ಮಾಡಿದರು. ಬಾಬರ್ ಅಜಮ್ ನೇತೃತ್ವದ ತಂಡಕ್ಕೆ ರನ್ ಗಳಿಸಲು ಬಿಡಲೇ ಇಲ್ಲ.

ವಿಶೇಷವಾಗಿ ಮೊಹಮ್ಮದ್ ಸಿರಾಜ್ ಮೊದಲ ಕೆಲವು ಓವರ್​ನಲ್ಲಿ ಚೆಂಡಿನೊಂದಿಗೆ ಅಸಾಧಾರಣವಾಗಿ ಬೌಲಿಂಗ್ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಅವರು ತಮ್ಮ ಮೊದಲ ಮೂರು ಓವರ್​ಗಳಲ್ಲಿ ವಿಕೆಟ್ ಪಡೆಯದಿದ್ದರೂ, ಹೆಚ್ಚಿನ ಒತ್ತಡದ ಪಂದ್ಯದಲ್ಲಿ ತಮ್ಮ ತಂಡಕ್ಕೆ ಪೂರಕ ಎಕಾನಮಿ ಕೊಟ್ಟರು.

ರಿಟರ್ನ್​ ಥ್ರೋ

ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಸ್ಪೆಲ್​​ನಲ್ಲಿ ಮೊಹಮ್ಮದ್ ರಿಜ್ವಾನ್ ಅವರಿಗೆ ಜೋರಾಗಿ ರಿಟರ್ನ್​ ಥ್ರೋ ಎಸೆದರು. ಇನಿಂಗ್ಸ್​​ನ ಎರಡನೇ ಓವರ್​ನಲ್ಲಿ ಕೊನೆಯ ಎಸೆತದಲ್ಲಿ ವೇಗದ ಬೌಲರ್ ಪೂರ್ಣ ಎಸೆತವನ್ನು ಎಸೆದರು. ರಿಜ್ವಾನ್​ ಅದನ್ನು ರಿಟರ್ನ್​ ಕಳುಹಿಸಿದರು. ಮೊಹಮ್ಮದ್ ರಿಜ್ವಾನ್ ಕ್ರೀಸ್ ನಿಂದ ಹೊರಗುಳಿದಿದ್ದರಿಂದ ಮೊಹಮ್ಮದ್ ಸಿರಾಜ್ ಚೆಂಡನ್ನು ಹಿಡಿದು ಸ್ಟಂಪ್ ಗಳ ಕಡೆ ವಾಪಸ್​ ಕಳುಹಿಸಿದರು. ಆದರೆ ವೇಗದ ಬೌಲರ್ ನ ಥ್ರೋ ಪಾಕಿಸ್ತಾನದ ಕೀಪರ್-ಬ್ಯಾಟ್ಸ್ ಮನ್ ಕೈಗೆ ತಗುಲಿತು. ಗಾಯಗೊಂಡ ಅವರು ತೀವ್ರ ನೋವಿನಿಂದ ಕಿರುಚಿದರು.

ಇದನ್ನೂ ಓದಿ: IND vs PAK : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 6 ರನ್​ ಜಯ

ನೋವಿನಿಂದ ಬಳಲುತ್ತಿದ್ದ ಮೊಹಮ್ಮದ್ ರಿಜ್ವಾನ್​​ ಬಳಿಗೆ ಹೋದ ಸಿರಾಜ್​ ತಪ್ಪಿಗಾಗಿ ಕ್ಷಮೆಯಾಚಿಸಿದರು. ಈ ವೇಳೆ ನ್ಯೂಯಾರ್ಕ್ನ ನಸ್ಸಾವು ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಂದ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು 4 ಓವರ್ ಎಸೆದು ಕೇವಲ 19 ರನ್ ನೀಡಿದರು.

ಮೊಹಮ್ಮದ್ ರಿಜ್ವಾನ್ ಉತ್ತಮ ಆಟ

ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನಕ್ಕೆ ಸ್ವಲ್ಪ ಹೊತ್ತು ಆಸರೆಯಾದರು. ಕೀಪರ್-ಬ್ಯಾಟರ್​ ಒಂದು ಕಡೆ ಕ್ರೀಸ್​ಗೆ ಅಂಟಿಕೊಂಡರೆ ವಿಕೆಟ್​​ಗಳು ಇನ್ನೊಂದು ತುದಿಯಲ್ಲಿ ಉರುಳುತ್ತಲೇ ಇದ್ದವು.

ಮೊಹಮ್ಮದ್ ರಿಜ್ವಾನ್ ತಮ್ಮ ತಂಡಕ್ಕಾಗಿ ಪ್ರಮುಖ ಇನ್ನಿಂಗ್ಸ್ ಆಡಿದರು ಮತ್ತು ಅವರು ಕ್ರೀಸ್​​ನಲ್ಲಿ ಇರುವವರೆಗೂ, ಪಾಕಿಸ್ತಾನವು ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿತ್ತು. ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಅವರನ್ನು ಹೊರಗಟ್ಟಿದರು.

ಜಸ್ಪ್ರೀತ್ ಬುಮ್ರಾ ಲೆಂತ್​ ಎಸೆತವನ್ನು ಎಸೆದರು. ಚೆಂಡು ಕೆಳಮಟ್ಟದಲ್ಲಿ ಉಳಿದು ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟ್ ಅಡಿಯಲ್ಲಿ ಹೋಯಿತು. ಚೆಂಡು ಹೊಡೆದು ಮಧ್ಯದ ಸ್ಟಂಪ್​ಗೆ ಬಡಿಯಿತು. ಅವರು 44 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 31 ರನ್ ಗಳಿಸಿದರು.

Continue Reading
Advertisement
Vastu Tips
ಧಾರ್ಮಿಕ4 mins ago

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

pm narendra Modi Cabinet
ಪ್ರಮುಖ ಸುದ್ದಿ4 mins ago

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

Narendra Modi Oath Ceremony Celebs Congratulate PM Modi
ಸಿನಿಮಾ21 mins ago

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

IND vs PAK
ಪ್ರಮುಖ ಸುದ್ದಿ24 mins ago

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

IND vs PAK
ಕ್ರೀಡೆ50 mins ago

IND vs PAK : ಪಾಕಿಸ್ತಾನದ ಆಟಗಾರನಿಗೆ ಕಣ್ಣೀರು ಹಾಕಿಸಿದ ಭಾರತ ತಂಡ!

PM Narendra Modi and Siddaramaiah
ಪ್ರಮುಖ ಸುದ್ದಿ1 hour ago

PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

IND vs PAK
ಕ್ರೀಡೆ1 hour ago

IND vs PAK : ‘ಗೆಲುವಿಗೆ ಮೊದಲೇ ಸಂಭ್ರಮಿಸಬೇಡಿ, ವಿಶ್ವ ಕಪ್​ನಲ್ಲಿ ನಮ್ದೇ ಹವಾ’; ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಭಾರತದ ಅಭಿಮಾನಿಗಳು

road rage assault case
ಕ್ರೈಂ2 hours ago

Assault Case: ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ತಡೆಗಟ್ಟಿ ಹಲ್ಲೆ ಮಾಡಿದ ಕ್ರೂರಿಗಳು!

IND vs PAK
ಪ್ರಮುಖ ಸುದ್ದಿ2 hours ago

IND vs PAK : ಸಿರಾಜ್​ ಚೆಂಡಿನ ಹೊಡೆತಕ್ಕೆ ಪಿಚ್​ನಲ್ಲೇ ಅಡ್ಡಡ್ಡ ಮಲಗಿದ​ ರಿಜ್ವಾನ್​; ಇಲ್ಲಿದೆ ವಿಡಿಯೊ

Shikakai For Hair
ಆರೋಗ್ಯ2 hours ago

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌