BBK SEASON 10: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ತನಿಷಾ; ಕಾರಣವೇನು? - Vistara News

ಕಿರುತೆರೆ

BBK SEASON 10: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ತನಿಷಾ; ಕಾರಣವೇನು?

BBK SEASON 10: ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ ನಿರ್ವಹಿಸುವ ವೇಳೆ ಸ್ಪರ್ಧಿ ತನಿಷಾ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರು ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಡಿದೆ.

VISTARANEWS.COM


on

thanisha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸ್ಪರ್ಧಿಗಳ ಜಗಳ, ಸ್ನೇಹ, ಕಿತ್ತಾಟಗಳಿಂದ ಸದ್ದು ಮಾಡುತ್ತಿರುವ ಬಿಗ್‌ ಬಾಸ್‌ ಮನೆಯಲ್ಲಿ ಅವಘಡವೊಂದು ನಡೆದಿದೆ ಎನ್ನಲಾಗಿದೆ. ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ (Tanisha Kuppanda) ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಬಲ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ಅವರನ್ನು ಮನೆಯಿಂದ ಕಳುಹಿಸಲಾಗಿದೆಯಂತೆ.

ಎಂದಿನಂತೆ ಬಿಗ್‌ ಬಾಸ್‌ ಸ್ಪರ್ಧಿಗಳ ಎರಡು ತಂಡ ಮಾಡಿ ಟಾಸ್ಕ್‌ ಕೊಟ್ಟಿದ್ದರು. ಅದರ ಪ್ರಕಾರ, ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತಂದು ದೂರದಲ್ಲಿ ಇಟ್ಟಿರುವ ಕೊಳವೆಯೊಂದರಕ್ಕೆ ತುಂಬಿಸಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರ ಆಗುತ್ತಿತ್ತು. ಎದುರು ತಂಡದವರು ಇದಕ್ಕೆ ಅಡ್ಡಿ ಪಡಿಸಬಹುದಿತ್ತು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಅದರಂತೆ ಎರಡು ತಂಡಗಳು ಅಖಾಡಕ್ಕೆ ಇಳಿದಿದ್ದವು.

ಒಂದು ತಂಡದಲ್ಲಿ ಡ್ರೋನ್ ಪ್ರತಾಪ್‌, ಪವಿ ಪೂವಪ್ಪ, ತುಕಾಲಿ ಸಂತೋಷ್‌, ನಮ್ರತಾ, ವರ್ತೂರು, ಸಿರಿ ಇದ್ದರೆ ಇನ್ನೊಂದು ತಂಡದಲ್ಲಿ ಮೈಕಲ್, ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ಇದ್ದರು. ಈ ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೇರ ನಡೆನುಡಿಯ ತನಿಷಾ ಮೊದಲಿನಿಂದಲೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ತನಿಷಾ ಅವರಿಗೆ ಏನಾಗಿದೆ? ಯಾವಾಗ ಮತ್ತೆ ಬಿಗ್‌ ಬಾಸ್ ಮನೆಗೆ ಮರಳಲಿದ್ದಾರೆ? ಎಂದು ಅಭಿಮಾನಿಗಳು ಪ್ರಶ್ನಿಸತೊಡಗಿದ್ದಾರೆ.

BBK Season 10: ರಕ್ತ ಬಂದ್ರೂ ಜಗ್ಗಲ್ಲ; ಸಂಗೀತಾ-ತನಿಷಾ ಜಗಳ ಮುಗಿಯಲ್ಲ!

20 ಮೆಣಸಿನಕಾಯಿ ತಿಂದಿದ್ದ ತನಿಷಾ

ಈ ಹಿಂದೆ ಟಾಸ್ಕ್‌ನಲ್ಲಿ ಸವಾಲು ಸ್ವೀಕರಿಸಿದ್ದ ತನಿಷಾ 20 ಮೆಣಸಿನಕಾಯಿಯನ್ನು ತಿಂದು ಗಮನ ಸೆಳೆದಿದ್ದರು. ಕಾರ್ತಿಕ್, ವರ್ತೂರು ಸಂತೋಷ್ ಜತೆ ಅವರು ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದ್ದಾರೆ. ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಕೆಲವು ದಿನಗಳ ಹಿಂದೆ ತನಿಷಾ ಹಾಗೂ ಸಂಗೀತಾ ಮಧ್ಯೆ ವಾಗ್ವಾದ ನಡೆದಿತ್ತು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಿ ಬಿಗ್‌ ಬಾಸ್‌ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comments

  1. N. S. Divakar

    29 November 2023, 8:12 PM at 8:12 pm

    Very sad, we wish cor speedy recovery. Vrry plessent personslity in the hole big boss team through her behavier& active participation. Strongest & probable current season winner

Leave a Reply

Your email address will not be published. Required fields are marked *

ಕಿರುತೆರೆ

Mahanati Show: ಫಿನಾಲೆಗೆ ಆಯ್ಕೆಯಾಗಿಲ್ಲ ದಾವಣಗೆರೆ ಟೀಚರ್; ಕೋಪಗೊಂಡ ನೆಟ್ಟಿಗರು!

Mahanati Show: ಆರಂಭದಲ್ಲಿ ಬಿಂದು ಹೊನ್ನಾಳ್ಳಿ ಅವರ ಪ್ರತಿಭೆಗೆ ತೀರ್ಪುಗಾರರು ಮೆಚ್ಚುಗೆ ಹೊರ ಹಾಕಿದ್ದರು. ರಮೇಶ್‌ ಅರವಿಂದ್‌, ಪ್ರೇಮಾ ಹಾಗೂ ತರುಣ್‌ ಸೇರಿದಂತೆ ಬಿಂದು ಅವರ ನಟನೆಗೆ ಹಾಡಿ ಹೊಗಳುತ್ತಿದ್ದರು. ಇದೀಗ ಕೊನೆಯ ಹಂತದಲ್ಲಿ ಅವರನ್ನು ಕೈ ಬಿಡಲಾಗಿದ್ದು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

VISTARANEWS.COM


on

Mahanati Show bindu honnali not selected
Koo

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ (Mahanati Show) ಪ್ರಸಾರ ಕಾಣುತ್ತಿದೆ. ಈಗಾಗಲೇ ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಫಿನಾಲೆ ಹಂತದಲ್ಲಿ ಇರುವ ಈ ಮಹಾನಟಿ ಶೋಗೆ ಟಾಪ್‌ ಐದು ಮಂದಿ ಆಯ್ಕೆ ಮಾಡಲಾಗಿದೆ. ಗಗನ, ಪ್ರಿಯಾಂಕಾ, ಶ್ವೇತಾ ಭಟ್, ಆರಾಧನಾ ಭಟ್ ಹಾಗೂ ಧನ್ಯಶ್ರೀ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಆದರೆ ಗ್ರಾಮೀಣ ಪ್ರತಿಭೆ ಸ್ಪರ್ಧಿ ಬಿಂದು ಹೊನ್ನಾಳಿ ಆಯ್ಕೆ ಆಗಿಲ್ಲ. ಈ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

ಆರಂಭದಲ್ಲಿ ಬಿಂದು ಹೊನ್ನಾಳ್ಳಿ ಅವರ ಪ್ರತಿಭೆಗೆ ತೀರ್ಪುಗಾರರು ಮೆಚ್ಚುಗೆ ಹೊರ ಹಾಕಿದ್ದರು. ರಮೇಶ್‌ ಅರವಿಂದ್‌, ಪ್ರೇಮಾ ಹಾಗೂ ತರುಣ್‌ ಸೇರಿದಂತೆ ಬಿಂದು ಅವರ ನಟನೆಗೆ ಹಾಡಿ ಹೊಗಳುತ್ತಿದ್ದರು. ಇದೀಗ ಕೊನೆಯ ಹಂತದಲ್ಲಿ ಅವರನ್ನು ಕೈ ಬಿಡಲಾಗಿದ್ದು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

ಬಿಂದು ಹೊನ್ನಾಳಿ ಅವರು ದಾವಣಗೆರೆ ಮೂಲದವರು ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದಾರೆ. ಹಾಗಂತ ಇವರು ಕೇವಲ ಶಿಕ್ಷಕಿಯಷ್ಟೇ ಅಲ್ಲ. ಇವರು ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇವರು ದಾವಣಗೆರೆಯಲ್ಲಿ ಎಲ್‌ಐಸಿ ಎಜೆಂಟ್ ಕೂಡ ಆಗಿದ್ದಾರೆ. ಇದೀಗ ಅವರಿಗೆ ಓಟ್‌ ಬಿದ್ದ ಮೇಲೆಯೂ ಫಿನಾಲೆಗೆ ಸೆಲೆಕ್ಟೆ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ ನೆಟ್ಟಿಗರು. ಇದೀಗ ನೆಟ್ಟಿಗರು ಟಿಆರ್‌ಪಿಗೆ ಬೆಲೆ ಕೊಡುವ ಬದಲು, ಪ್ರತಿಭೆಗೆ ಬೆಲೆ ಕೊಟ್ಟರೆ ಚೆನ್ನಾಗಿರುತ್ತಿತ್ತು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

ಮಹಾನಟಿ’ ರಿಯಾಲಿಟಿ ಶೋಗೆ ಈ ಬಾರಿ ಮೂರು ಹೊಸ ತೀರ್ಪುಗಾರರು ವೇದಿಕೆಯನ್ನ ಅಲಂಕರಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ನಟ ರಮೇಶ್‌ ಅರವಿಂದ್‌, ಖ್ಯಾತ ನಾಯಕ ನಟಿ ಪ್ರೇಮಾ, ‘ಕಾಟೇರ’ದಂತಹ ಯಶಸ್ವಿ ಚಿತ್ರಕೊಟ್ಟ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಯುವ ನಾಯಕ ನಟಿ ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Continue Reading

ಬಾಲಿವುಡ್

Hina Khan: ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ `ಹಿನಾ ಖಾನ್’ ತಬ್ಬಿ ಕಣ್ಣೀರಿಟ್ಟ ತಾಯಿ; ಕೂದಲಿಗೆ ಬಿತ್ತು ಕತ್ತರಿ!

Hina Khan: ಹೀನಾ ಕನ್ನಡಿಯ ಮುಂದೆ ಕೂತಿದ್ದರು. ಅವರ ಸ್ನೇಹಿತೆ ನಟಿಯ ಕೂದಲನ್ನು ಹೆಣೆದಿದ್ದರು. ನಟಿಯ ಪಕ್ಕದಲ್ಲಿ, ತಾಯಿ ಕೂಡ ಇದ್ದರು. ಹಿನಾ ಆ ಕ್ಷಣಕ್ಕೆ ತಾಯಿಯನ್ನು ಸಮಾಧಾನ ಮಾಡುತ್ತಿದ್ದರು. ಅಳಬೇಡ ಅಮ್ಮ ಎಂದು ಸಮಾಧಾನ ಪಡಿಸುತ್ತಲೇ ಇದ್ದರು. ತಾಯಿ ಕೂಡ ಕೂದಲನ್ನು ಕತ್ತರಿಸಬೇಡಿ ಎಂದು ಭಾವುಕಾರಾದರು.

VISTARANEWS.COM


on

Hina Khan mom weeps as actor cuts her hair
Koo

ಬೆಂಗಳೂರು: ಬಾಲಿವುಡ್‌ ಹಾಗೂ ಕಿರುತೆರೆ ನಟಿ ಹಿನಾ ಖಾನ್ (Hina Khan) ಅವರಿಗೆ  ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಕ್ಯಾನ್ಸರ್‌ ಮೂರನೇ ಹಂತದಲ್ಲಿದೆ. ಇದೀಗ ನಟಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿರುವ ಹೊಸ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕೂದಲು ಕತ್ತರಿಸಿಕೊಂಡಿರುವ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಜತೆಗೆ ಅಮ್ಮ ಮಗಳನ್ನು ತಬ್ಬಿ ಭಾವುಕರಾದರು. ಈ ವಿಡಿಯೊ ಕಂಡು ಹೀನಾ ಫ್ಯಾನ್ಸ್‌ ಬೇಸರ ಹೊರಹಾಕಿದ್ದಾರೆ. ಆದರೆ ವಿಡಿಯೊದುದ್ದಕ್ಕೂ ಹಿನಾ ಮುಖದಲ್ಲಿ ನಗು ಇತ್ತು. ಒಳಗೆ ಎಷ್ಟೇ ನೋವು ಇದ್ದರೂ ಹೊರಗಡೆ ನಟಿ ನಗುತ್ತಲೇ ಇರುವುದು ಕಂಡು ಬಂತು.

ಹೀನಾ ಕನ್ನಡಿಯ ಮುಂದೆ ಕೂತಿದ್ದರು. ಅವರ ಸ್ನೇಹಿತೆ ನಟಿಯ ಕೂದಲನ್ನು ಹೆಣೆದಿದ್ದರು. ನಟಿಯ ಪಕ್ಕದಲ್ಲಿ, ತಾಯಿ ಕೂಡ ಇದ್ದರು. ಹಿನಾ ಆ ಕ್ಷಣಕ್ಕೆ ತಾಯಿಯನ್ನು ಸಮಾಧಾನ ಮಾಡುತ್ತಿದ್ದರು. ಅಳಬೇಡ ಅಮ್ಮ ಎಂದು ಸಮಾಧಾನ ಪಡಿಸುತ್ತಲೇ ಇದ್ದರು. ತಾಯಿ ಕೂಡ ಕೂದಲನ್ನು ಕತ್ತರಿಸಬೇಡಿ ಎಂದು ಭಾವುಕಾರಾದರು. ಬಳಿಕ ನಟಿ ಕೂದಲಿಗೆ ಕತ್ತರಿ ಹಾಕೇ ಬಿಟ್ಟರು. ಈಗಾಗಲೇ ನಟಿಗೆ ಚಿಕಿತ್ಸೆ ಆರಂಭವಾಗಿದೆ. ಈ ಹೋರಾಟದಲ್ಲಿ ತನ್ನ ತಾಯಿ ಜತೆಗಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರು ನನ್ನ ಹೋರಾಟಕ್ಕೆ ದೊಡ್ಡ ಭರವಸೆ. ನಾನು ಗೆದ್ದು ಬರುತ್ತೇನೆ ಎಂದು ತಮ್ಮ ಕೂದಲನ್ನು ಕಟ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ ಹೀನಾ.

ಕೂದಲು ಕತ್ತರಿಸಿದ ಬಳಿಕ ತಾಯಿ ಮಗಳನ್ನು ತಬ್ಬಿಕೊಂಡು ಮತ್ತಿಟ್ಟರು. ಈ ಬಗ್ಗೆ ಹೀನಾ ಸೋಷಿಯಲ್‌ ಮೀಡಿಯಾದಲ್ಲಿ ನಟಿ ಬರೆದುಕೊಂಡಿದ್ದಾರೆ. ʻವಿಶೇಷವಾಗಿ ಈ ರೀತಿಯ ಯುದ್ಧದಲ್ಲಿ ಹೋರಾಡುವ ಮಹಿಳೆಯರಿಗೆ ಈ ಸಂದರ್ಭ ಕಷ್ಟ ಎಂದು ನನಗೆ ತಿಳಿದಿದೆ.ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ, ನಮ್ಮ ಕೂದಲು ನಾವು ಎಂದಿಗೂ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನೀವು ಗೆಲ್ಲಲು ಬಯಸಿದರೆ ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ನಾನು ಗೆಲ್ಲಲು ನಿರ್ಧರಿಸಿದೆ. ಕೂದಲು ಉದುರಲು ಪ್ರಾರಂಭಿಸುವ ಮೊದಲು ನಾನೇ ಕೂದಲಿಗೆ ಕತ್ತರಿ ಹಾಕಿದೆ. ಈ ಯುದ್ಧವನ್ನು ಗೆಲ್ಲಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ನೀಡಲು ನಾನು ನಿರ್ಧರಿಸಿದ್ದೇನೆ. ನನ್ನ ಸುಂದರವಾದ ಕೂದಲು ಉದುರಲು ಪ್ರಾರಂಭಿಸುವ ಮೊದಲು ನಾನು ಅದನ್ನು ಕಟ್‌ ಮಾಡಬೇಕು. ನನ್ನ ಧೈರ್ಯ, ನನ್ನ ಶಕ್ತಿ ಮತ್ತು ನನ್ನ ಮೇಲೆ ನಾನು ಹೊಂದಿರುವ ಪ್ರೀತಿಯಿಂದಾಗಿ ಈ ನಿರ್ಧಾರ ತೆಗೆದುಕೊಂಡೆ. ಕೂದಲು ಮತ್ತೆ ಬೆಳೆಯುತ್ತದೆ, ಹುಬ್ಬುಗಳು ಹಿಂತಿರುಗುತ್ತವೆ, ಕಲೆಗಳು ಮಸುಕಾಗುತ್ತವೆ, ಆದರೆ ಆತ್ಮವು ಸಂಪೂರ್ಣವಾಗಿ ಉಳಿಯಬೇಕು. ನಾನು ನನ್ನ ಈ ಪ್ರಯಾಣವನ್ನು ರೆಕಾರ್ಡ್ ಮಾಡುತ್ತಿದ್ದೇನೆ. ದೇವರು ನಮ್ಮ ನೋವನ್ನು ಕಡಿಮೆ ಮಾಡಿ ವಿಜಯಶಾಲಿಯಾಗಿ ಬನ್ನಿ ಎಂದು ನನಗಾಗಿ ಪ್ರಾರ್ಥಿಸಿ, ”ಎಂದು ಹಿನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Hina Khan: ಬಿಗ್ ಬಾಸ್ ಸ್ಪರ್ಧಿ, ʻಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಧಾರಾವಾಹಿ ಖ್ಯಾತಿಯ ನಟಿಗೆ ಸ್ತನ ಕ್ಯಾನ್ಸರ್!

ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ. ಹೀನಾ ಫ್ಯಾನ್ಸ್‌ ಕೂಡ ಬೇಗ ಗುಣಮುಖರಾಗಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಹಿನಾ ಖಾನ್ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಜನಪ್ರಿಯ TV ಧಾರಾವಾಹಿ, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ನಲ್ಲಿ ಅಕ್ಷರ ಪಾತ್ರಕ್ಕಾಗಿ ಅವರು ಖ್ಯಾತಿ ಪಡೆದರು. ಹಿನಾ ‘ಬಿಗ್ ಬಾಸ್’ ಮತ್ತು ‘ಖತ್ರೋನ್ ಕೆ ಖಿಲಾಡಿ’ ಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ‘ಹ್ಯಾಕ್ಡ್’ ಮತ್ತು ‘ಡ್ಯಾಮೇಜ್ಡ್ 2’ ನಂತಹ ಸಿನಿಮಾಗಳಲ್ಲಿಯೂ ನಟಿಸಿದ್ದರು.

Continue Reading

ಕಿರುತೆರೆ

Kannada Serials TRP: ಟ್ರ್ಯಾಕ್‌ಗೆ ಮರಳಿದ `ಶ್ರೀಗೌರಿ’; ಟಿಆರ್​ಪಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Kannada Serials TRP: ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಈ ಧಾರಾವಾಹಿ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಆರನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’, ಏಳನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ, ಎಂಟನೇ ಸ್ಥಾನದಲ್ಲಿ ‘ನಿನಗಾಗಿ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳು ಇವೆ. ಒಂಭತ್ತನೇ ಸ್ಥಾನದಲ್ಲಿ ‘ಶ್ರೀಗೌರಿ’ ಹಾಗೂ ಹತ್ತನೇ ಸ್ಥಾನದಲ್ಲಿ ‘ಕರಿಮಣಿ’ ಧಾರಾವಾಹಿ ಇದೆ.. ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ.

VISTARANEWS.COM


on

Kannada Serials TRP Gowri in trp puttakkana makkalu number 1
Koo

ಬೆಂಗಳೂರು: 26ನೇ ವಾರದ ಟಿಆರ್​ಪಿ ಬಂದಿದೆ. ಟಿಆರ್​ಪಿಯಲ್ಲಿ (TRP) ಏರಿಳಿತ ಆಗುತ್ತಲೇ ಇರುತ್ತದೆ. ಅದೇ ರೀತಿ ಟಿಆರ್​ಪಿ ವಿವರ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಈ ಧಾರಾವಾಹಿ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ಈಗ ಅದೇ ಬೇಡಿಕೆಯನ್ನು ಧಾರಾವಾಹಿ ಉಳಿಸಿಕೊಂಡಿದೆಯಾದರೂ, ‘ಪುಟ್ಟಕನ ಮಕ್ಕಳು’ ಧಾರಾವಾಹಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಾ ರಾಮ

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಅಮೃತಧಾರೆ

ಐದನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. 

ಆರನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’, ಏಳನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ, ಎಂಟನೇ ಸ್ಥಾನದಲ್ಲಿ ‘ನಿನಗಾಗಿ’ ಹಾಗೂ ‘ರಾಮಾಚಾರಿ’ ಧಾರಾವಾಹಿಗಳು ಇವೆ. ಒಂಭತ್ತನೇ ಸ್ಥಾನದಲ್ಲಿ ‘ಶ್ರೀಗೌರಿ’ ಹಾಗೂ ಹತ್ತನೇ ಸ್ಥಾನದಲ್ಲಿ ‘ಕರಿಮಣಿ’ ಧಾರಾವಾಹಿ ಇದೆ.. ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

Continue Reading

ಕಿರುತೆರೆ

Nanna Devaru Serial: ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ ಮಯೂರಿ;  ‘ನನ್ನ ದೇವ್ರು’ ಧಾರಾವಾಹಿಗೆ ನರಸಿಂಹರಾಜು ಮೊಮ್ಮಗ ಹೀರೊ!

Nanna Devaru Serial: ‘ಅಶ್ವಿನಿ ನಕ್ಷತ್ರ’ದಿಂದ ಹೆಸರಾದ ಮಯೂರಿ ತುಂಬಾ ವರ್ಷಗಳ ನಂತರ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ.

VISTARANEWS.COM


on

Nanna Devaru Serial Mayuri And NarasimhaRaju Grand Son Acting
Koo

ಬೆಂಗಳೂರು: ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ (Nanna Devaru Serial) ಕತೆಯನ್ನು ಹೊತ್ತು ತಂದಿದೆ. ಜುಲೈ 8ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ 6.30ಕ್ಕೆ ಪ್ರಸಾರ ಕಾಣುತ್ತಿದೆ.

‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ ಎಂಬುದು ಕುತೂಹಲ.

‘ಅಶ್ವಿನಿ ನಕ್ಷತ್ರ’ದಿಂದ ಹೆಸರಾದ ಮಯೂರಿ ತುಂಬಾ ವರ್ಷಗಳ ನಂತರ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ ‘ನನ್ನ ದೇವ್ರು’ ತಾರಾಗಣದಲ್ಲಿ ಜನಪ್ರಿಯ ನಟ ನಟಿಯರು ತುಂಬಾನೇ ಇದ್ದಾರೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ʻಲಕ್ಷ್ಮೀ ಬಾರಮ್ಮʼ; ಹೊಸ ಧಾರಾವಾಹಿಗಿಲ್ಲ ಬೇಡಿಕೆ!

ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ಬೆಳ್ಳಿತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಹೊಸ ಧಾರಾವಾಹಿ ಬಗ್ಗೆ ಉತ್ಸುಕತೆ ತೋರಿದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ‘ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್ ಕನ್ನಡ ಈ ಹೊಸ ಧಾರಾವಾಹಿಯ ಮುಖಾಂತರ ಮುಗ್ಧತೆ ಮತ್ತು ಪ್ರಾಮಾಣಿಕತೆ ತಂದೊಡ್ಡುವ ಸವಾಲುಗಳ ಕತೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ’ ಎಂದು ಹೇಳಿದರು.

ಕಲರ್ಸ್ ಕನ್ನಡದಲ್ಲಿ ಜುಲೈ 8ರ ಸಂಜೆ ಆರೂವರೆಗೆ ‘ನನ್ನ ದೇವ್ರು’ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ಜಿಯೋ ಸಿನಿಮಾ ಮುಖಾಂತರ ಫೋನಿನಲ್ಲೂ ನೋಡಬಹುದಾಗಿದೆ.

Continue Reading
Advertisement
Menopause
ಆರೋಗ್ಯ8 seconds ago

Yoga For Menopause: ಋತುಬಂಧ ಸಮಸ್ಯೆ ನಿಭಾಯಿಸಲು ಯೋಗ ನೆರವಾಗುವುದೇ?

ಉಡುಪಿ1 min ago

Gururaj Gantihole: ಬೈಂದೂರಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ಭೇಟಿ; ಪರಿಹಾರ ನೀಡಲು ಸೂಚನೆ

Maldives
ಕ್ರೀಡೆ18 mins ago

Maldives: ವಿಶ್ವಕಪ್​ ಗೆಲುವಿನ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ಡೀವ್ಸ್‌

Sequins Lehenga Trend
ಫ್ಯಾಷನ್29 mins ago

Sequins Lehenga Trend: ಅಂಬಾನಿ ಮಗನ ಮದುವೆ ಎಫೆಕ್ಟ್‌; ಸಿಕ್ವಿನ್ಸ್ ಲೆಹೆಂಗಾಗಳಿಗೆ ಡಿಮ್ಯಾಂಡ್‌!

Viral News
Latest49 mins ago

Viral News: ಎಮ್ಮೆಗಾಗಿ ಮಾಲೀಕರ ಕಿತ್ತಾಟ; ಮಾಲೀಕನ ಹುಡುಕಲು ಎಮ್ಮೆಯ ಮೊರೆ ಹೋದ ಪೊಲೀಸರು!

Ambedkar's portrait
ಪ್ರಮುಖ ಸುದ್ದಿ1 hour ago

Ambedkar’s Portrait: ಸ್ವಾತಂತ್ರ್ಯೋತ್ಸವ, ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್‌ ಭಾವಚಿತ್ರ ಕಡ್ಡಾಯ: ಸರ್ಕಾರ ಆದೇಶ

PM Modi Russia Visit
ದೇಶ1 hour ago

PM Modi Russia Visit: ರಷ್ಯಾ ತಲುಪಿದ ಮೋದಿಗೆ ಭಾರತದ ಸಂಪ್ರದಾಯದಂತೆ ಅದ್ಧೂರಿ ಸ್ವಾಗತ; Video ಇದೆ

Viral Video
ಕ್ರಿಕೆಟ್1 hour ago

Viral Video: ಲಂಡನ್​ನ ಇಸ್ಕಾನ್​ ಮಂದಿರದ ಸಂಕೀರ್ತನೆಯಲ್ಲಿ ಪಾಲ್ಗೊಂಡ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ

Ambani Family's Jewels
ಫ್ಯಾಷನ್1 hour ago

Ambani Family’s Jewels: ನೀತಾ ಅಂಬಾನಿಯ ನೆಕ್‌ಲೆಸ್‌ ಬೆಲೆ 500 ಕೋಟಿ ರೂ! ಅಂಬಾನಿ ಮಹಿಳೆಯರ ಬಳಿ ಎಂಥೆಂಥ ಆಭರಣಗಳಿವೆ ನೋಡಿ!

Self Harming
ಪ್ರಮುಖ ಸುದ್ದಿ2 hours ago

Self Harming: ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ; ಕಾರಿನಲ್ಲೇ ವಿಷ ಸೇವನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ2 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ7 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು8 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ23 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌