Darshan: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ - Vistara News

ಸಿನಿಮಾ

Darshan: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ ಅಭಿನಯದ ಮುಂದಿನ ಚಿತ್ರ ʼಕಾಟೇರʼದ ರಿಲೀಸ್‌ ಡೇಟ್‌ ಘೋಷಿಸಲಾಗಿದೆ.

VISTARANEWS.COM


on

katera
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ (Darshan Thoogudeepa) ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿರುವ ಆ ದಿನ ಬಂದೇ ಬಿಟ್ಟಿದೆ. ದರ್ಶನ್‌ ಅಭಿನಯದ ಮುಂದಿನ ಚಿತ್ರ ‘ಕಾಟೇರ’ (Kaatera)ದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಅಭಿಮಾನಿಗಳು ದರ್ಶನ್‌ ಅವರನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು. ಡಿಸೆಂಬರ್‌ 29ರಂದು ಕಾಟೇರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಹೊಸದಾಗಿ ಪ್ರೋಮೊ ಬಿಡುಗಡೆ ಮಾಡಿ ಚಿತ್ರತಂಡ ರಿಲೀಸ್‌ ದಿನಾಂಕವನ್ನು ಘೋಷಿಸಿದೆ. ಈ ಚಿತ್ರಕ್ಕೆ ನಿರ್ದೇಶಕ ತರುಣ್​ ಸುಧೀರ್​ ಆ್ಯಕ್ಷನ್​-ಕಟ್​ ಹೇಳಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಿಸಿದ್ದಾರೆ. ‘ಕಾಟೇರ’ ದರ್ಶನ್‌ ಅಭಿನಯದ 56ನೇ ಸಿನಿಮಾ. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದರ್ಶನ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಾರಂಭದಲ್ಲಿ ʼಕ್ರಾಂತಿʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಚಾಲೆಂಜಿಂಗ್‌ ಸ್ಟಾರ್‌ ವರ್ಷಾಂತ್ಯದಲ್ಲಿ ʼಕಾಟೇರʼ ಮೂಲಕ ದರ್ಶನ ನೀಡುತ್ತಿದ್ದಾರೆ.

ಮಾಲಾಶ್ರೀ ಪುತ್ರಿಯ ಮೊದಲ ಚಿತ್ರ

ಮತ್ತೊಂದು ವಿಶೇಷ ಎಂದರೆ ಸ್ಯಾಂಡಲ್‌ವುಡ್‌ ʼಕನಸಿನ ರಾಣಿʼ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ನಾಯಕಿಯಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡುತ್ತಿದ್ದಾರೆ. ಪ್ರಭಾವತಿ ಎನ್ನುವ ಹಳ್ಳಿ ಹುಡುಗಿಯಾಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ಶ್ರುತಿ ಕೂಡಾ ನಟಿಸಿದ್ದಾರೆ. ಅಲ್ಲದೆ ಹಿರಿಯ ಕಲಾವಿದರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ತೆರೆಕಂಡ ಯೋಗರಾಜ್‌ ಭಟ್‌ ನಿರ್ದೇಶನದ ʼಗರಡಿʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಿನಿಮಾ ರಿಲೀಸ್‌ ಡೇಟ್‌ ರಿವೀಲ್‌ ಆಗಿದ್ದು ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನದ ʼಚೌಕʼ ಚಿತ್ರದಲ್ಲಿ ದರ್ಶನ್‌ ಅತಿಥಿ ಪಾತ್ರ ಮಾಡಿದ್ದರು.

”ಕಾಟೇರ ಏನು ಅಂತ ಎಲ್ರೂ ಕೇಳ್ತಾ ಇದ್ದರು. ಇದು 70ರ ದಶಕದ ಸಿನಿಮಾ. ಎಲ್ಲ ಸ್ಟಾರ್‌ಗಳಿಗಿಂತ ಸಿನಿಮಾ ದೊಡ್ಡದು. ಈ ಸಿನಿಮಾಕ್ಕೆ 85 ದಿನ ಮೀಸಲಿಟ್ಟಿದ್ದೆ. ವಿನೋದ್ ಆಳ್ವಾ ಸರ್ ಜತೆ ನಂಗೆ ಮೊದಲ ಸಿನಿಮಾ. ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿದ್ದೆʼʼ ಎಂದು ಈ ಹಿಂದೆ ಚಿತ್ರದ ಬಗ್ಗೆ ಮಾತನಾಡುತ್ತ ದರ್ಶನ್‌ ಹೇಳಿದ್ದರು. ʼʼಈ ಸಿನಿಮಾದಲ್ಲಿ ಆಶ್ಲೀಲತೆ ಇಲ್ಲ. ಸಭ್ಯವಾದ ಸಂಭಾಷಣೆ ಇದೆʼʼ ಎಂದು ತಿಳಿಸಿ ನಿರೀಕ್ಷೆ ಹೆಚ್ಚಿಸಿದ್ದರು.

ಇದನ್ನೂ ಓದಿ: Kaatera Press Meet: ಬರೋಬ್ಬರಿ 2 ವರ್ಷದ ಬಳಿಕ ಮಾಧ್ಯಮಗಳ ಮುಂದೆ ನಟ ದರ್ಶನ್! ‘ಕಾಟೇರ’ ಬಗ್ಗೆ ಹೇಳಿದ್ದೇನು?

ʼಕಾಟೇರʼ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಸುಧಾಕರ್ ಎಸ್‌. ರಾಜ್ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪಂಚೆಯುಟ್ಟು ಹಳ್ಳಿ ಹೈದನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಭರಪೂರ ಮನರಂಜನೆ ಜತೆಗೆ ಮಾಸ್ ದೃಶ್ಯಗಳು ರೋಮಾಂಚನಗೊಳಿಸಲಿದೆ ಎಂದು ಅಭಿಮಾನಿಗಳು ಈಗಾಗಲೆ ಲೆಕ್ಕಾಚಾರ ಹಾಕಲು ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Shah Rukh Khan: ಡಾನ್ 2 ಚಿತ್ರೀಕರಣದ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಅವರ ಸ್ನೇಹಿತ ವಿವೇಕ್ ವಾಸ್ವಾನಿ ಹೇಳಿದ್ದೇನು? ಇಲ್ಲಿದೆ ವಿವರ.

VISTARANEWS.COM


on

Shah Rukh Khan Friend BREAKS Silence on Rumour of Him Dating
Koo

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅವರ ಆಪ್ತ ಸ್ನೇಹಿತ ವಿವೇಕ್ ವಾಸ್ವಾನಿ (Vivek Vaswani)ʻ ರಾಜು ಬನ್ ಗಯಾ ಜಂಟಲ್‌ಮ್ಯಾನ್‌ʼ ಸಿನಿಮಾ ಮೂಲಕ ನಟನೆಯನ್ನು ಪ್ರಾರಂಭಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಶಾರುಖ್ ಡೇಟಿಂಗ್ ವದಂತಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಅವರೀಗ ಮಾತನಾಡಿದ್ದಾರೆ. ಡಾನ್ 2 ಚಿತ್ರೀಕರಣದ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ವಿವೇಕ್ ವಾಸ್ವಾನಿ ಹೇಳಿದ್ದು ಹೀಗೆ:

ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ವಿವೇಕ್ ವಾಸ್ವಾನಿ ಮಾತನಾಡಿ ʻʻಶಾರುಖ್‌ ಕುರಿತು ಇರುವ ವದಂತಿಗಳು ಸುಳ್ಳು. ನಾನು ಶಾರುಖ್‌ ಒಂದೇ ಮನೆಯಲ್ಲಿ ಇದ್ದಿದ್ದು. ನನ್ನ ಜತೆ ಹೆತ್ತವರು ಇದ್ದರು. ಶಾರುಖ್‌ಗೆ ಆಗ ಇದಿದ್ದು, ವೃತ್ತಿಜೀವನದ ಬಗ್ಗೆ ಒತ್ತಡ. ಗೌರಿಯನ್ನು ಮದುವೆಯಾಗಬೇಕಿತ್ತು, ನನಗೆ ಗೊತ್ತಿರುವ ಸಮಯದಿಂದ, ಅವನು ಪ್ರೀತಿ ಮಾಡಿದ್ದು ಒಬ್ಬರನ್ನೇ. ಅದು ಗೌರಿ ಅವರನ್ನು ಮಾತ್ರʼʼ ಎಂದರು.

ಬಾಲಿವುಡ್‌ನಲ್ಲಿ ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಪ್ರಿಯಾಂಕಾ ಅವರು ಶಾಹಿದ್ ಕಪೂರ್, ಹರ್ಮನ್ ಬವೇಜಾ ಮತ್ತು ಶಾರುಖ್‌ ಹೆಸರುಗಳ ಜತೆ ತುಳುಕು ಹಾಕಿಕೊಂಡಿತ್ತು. ಕೊನೆಗೆ ಪ್ರಿಯಾಂಕಾ 2018ರಲ್ಲಿ ನಿಕ್ ಜೋನಾಸ್ ಅವರೊಂದಿಗೆ ಮದುವೆಯಾದರು. ಮಾಲತಿ ಮೇರಿ ಚೋಪ್ರಾ ಜೋನಾಸ್ ಎಂಬ ಮಗಳೂ ಇದ್ದಾಳೆ.

ಇದನ್ನೂ ಓದಿ: Shah Rukh Khan: ಹಾಲಿವುಡ್‌ನಿಂದ ನನಗೆ ಈವರೆಗೂ ಆಫರ್‌ ಬಂದಿಲ್ಲ ಎಂದ ಶಾರುಖ್ ಖಾನ್

ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್‌ 2024 (Dadasaheb Phalke International Film Festival Awards 2024)ರ ವಿಜೇತರ ಹೆಸರನ್ನು ಇತ್ತೀಚೆಗೆ ಘೋಷಿಸಲಾಗಿತ್ತು. ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ಅಭಿನಯದ ʼಜವಾನ್‌ʼ (Jawan) ಚಿತ್ರ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

Continue Reading

ಸ್ಯಾಂಡಲ್ ವುಡ್

Harish Raj: ದಾರೀಲಿ ನಟ ಹರೀಶ್‌ ರಾಜ್‌ಗೆ ಜನ ಏನಂತ ಕರೆಯುತ್ತಿದ್ದರು? ಅವರೇ ಹೇಳಿದ್ದಿಷ್ಟು

Harish Raj: ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ.

VISTARANEWS.COM


on

Harish Raj serial Journey shares in interview
Koo

ಬೆಂಗಳೂರು: ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ “ಪ್ರೇತ’ ಸಿನಿಮಾ ಇಂದು (ಫೆ.23) ರಾಜ್ಯಾದ್ಯಂತ ತೆರೆ ಕಂಡಿದೆ. ಪ್ರೇತ’ ಸಿನಿಮಾದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ. ಇದೀಗ ಹರೀಶ್‌ ರಾಜ್‌ ತಮ್ಮ ಸೀರಿಯಲ್‌ ಜರ್ನಿ ಹೇಗೆ ಇತ್ತು ಎಂಬುದರ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ.

ಹರೀಶ್‌ ರಾಜ್‌ ಮಾತನಾಡಿ ʻʻನಾನು ಅಭಿನಯಿಸಿದ ʻದಂಡಪಿಂಡಗಳುʼ ಧಾರಾವಾಹಿ ಬರುವ ಸಮಯದಲ್ಲಿ ಎಲ್ಲಿ ಹೋದರು ʻದಂಡ ಪಿಂಡʼ ಎಂದೇ ಕರೆಯುತ್ತಿದ್ದರು. ಅದರಲ್ಲಿ ಬರಗೆಟ್ಟ ರಮೇಶ ಪಾತ್ರ ಆಗಿತ್ತು. ಅದರಲ್ಲಿ ಪ್ರತಿ ಪಾತ್ರದಲ್ಲಿ ಐದು ಜನ ಹುಡುಗರು ಒಂದೊಂದು ಸಾಧನೆ ಮಾಡುತ್ತಾರೆ. ಆದರೆ ಈ ಬರಗೆಟ್ಟ ರಮೆಶ ಮಾತ್ರ ನಿರ್ದೇಶಕನಾಗುತ್ತಾನೆ. ಇದು 2000 ಇಸವಿಯ ಕಥೆ. ಆದರೆ ಅಂದು ನಾನು ನಿರ್ದೇಶಕ ಆಗುತ್ತೀನಾ ಎಂದು ಅಂದುಕೊಂಡಿರಲಿಲ್ಲ. ಈಗ ಅದು ನಿಜ ಆಗಿದೆ. ಪಾತ್ರದಲ್ಲಿ ನಿರ್ದೇಶಕ ಆದವನು ಇದೀಗ ರಿಯಲ್‌ ಲೈಫ್‌ನಲ್ಲಿ ಆಗಿದ್ದೇನೆʼʼಎಂದಿದ್ದಾರೆ.

ಇದನ್ನೂ ಓದಿ: Actor Prakash Raj: ಮಾರ್ಚ್ 15ಕ್ಕೆ ಪ್ರೇಕ್ಷಕರ ಎದುರು ಬರ್ತಿದೆ ʻಫೋಟೋʼಸಿನಿಮಾ!

ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಪ್ರೇತ ಸಿನಿಮಾಗೆ ಇದೆ. ಪ್ರಮೋದ್ ಮರವಂತೆ, ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆರ್ಟ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡಿದ್ದಾರೆ.

Continue Reading

ಸಿನಿಮಾ

WPL 2024: ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟ ಶಾರುಖ್‌: ವಿಡಿಯೊ ವೈರಲ್‌!

WPL 2024: ವುಮೆನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೂ ಮೊದಲು ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ಇದೇ ವೇಳೆ ಅವರು ಆಸ್ಟ್ರೇಲಿಯಾ ಆಟಗಾರ್ತಿಗೆ ತಮ್ಮ ಸಿಗ್ನೇಚರ್‌ ಸ್ಟೆಪ್ಸ್‌ ಹೇಳಿಕೊಟ್ಟರು.

VISTARANEWS.COM


on

Shah Rukh Khan teaches Meg Lanning his iconic pose
Koo

ಬೆಂಗಳೂರು: ಮಹಿಳೆಯರ ವರ್ಣರಂಜಿತ ಟಿ20 ಕ್ರಿಕೆಟ್​ ಲೀಗ್ ಡಬ್ಲ್ಯೂಪಿಎಲ್ (WPL 2024) 2ನೇ ಆವೃತ್ತಿಗೆ ಇಂದು (ಫೆ.23) ಚಾಲನೆ ಸಿಗಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(chinnaswamy stadium) ಬಾಲಿವುಡ್‌ ಗ್ಲ್ಯಾಮರ್‌ನೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡಲು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್‌ಖಾನ್‌ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರ್ತಿ ಮೆಗ್ ಲ್ಯಾನಿಂಗ್ (Meg Lanning) ಅವರಿಗೆ ತಮ್ಮ ಸಿಗ್ನೇಚರ್ ಸ್ಟೆಪ್ಸ್‌ ಹೇಳಿಕೊಟ್ಟಿದ್ದಾರೆ ಶಾರುಖ್‌. ಜತೆಗೆ ಶಾತುಖ್‌ ಅವರು ಮೈದಾನದಲ್ಲಿ ತಮ್ಮ ಸಣ್ಣ ಪುಟ್ಟ ಚೇಷ್ಟೆಗಳನ್ನು ಮಾಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻಚಕ್ ದೇ! ಇಂಡಿಯಾʼ ಶಾರುಖ್‌ ನಟನೆಯ ಸಿನಿಮಾ. 2007ರಲ್ಲಿ ತೆರೆ ಕಂಡಿತ್ತು. ಭಾರತದ ಹಾಕಿ ಕುರಿತ ಈ ಸಿನಿಮಾ ಇತ್ತು. ಇದರಲ್ಲಿ ಶಾರುಖ್‌ ಅವರು ʻಕೋಚ್ ಕಬೀರ್ ಖಾನ್ʼ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ತಂಡದ ಜತೆಗೂ ಶಾರುಖ್‌ ಸಮಯ ಕಳೆದಿದ್ದಾರೆ. ʻಕೋಚ್ ಕಬೀರ್ ಖಾನ್’ ಪ್ರೀತಿಯಿಂದ ನಮಗೆ ಹಾರೈಸಿದರು ಎಂದು ಜೆಮಿಮಾ ರಾಡ್ರಿಗಸ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವೀಡಿಯೊಗಳಲ್ಲಿ, ಶಾರುಖ್ ಅವರು ಮುಂಬರುವ ಪಂದ್ಯದ ಆಟಗಾರರಿಗೆ ಶುಭ ಹಾರೈಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: WPL 2024: ನಾಳೆಯಿಂದ ಡಬ್ಲ್ಯೂಪಿಎಲ್ ಆರಂಭ; ವೇಳಾಪಟ್ಟಿ, ತಂಡಗಳ ಮಾಹಿತಿ ಹೀಗಿದೆ

ಅಷ್ಟೇ ಅಲ್ಲದೆ, ಉದ್ಘಾಟನಾ ಸಮಾರಂಭಕ್ಕೆ ಶಾರುಖ್‌ ಪಠಾಣ್ ಸಿನಿಮಾ ಹಾಡಿಗೆ ಸ್ಟೆಪ್ಸ್‌ ಕೂಡ ಹಾಕಲಿದ್ದಾರೆ. ರಿಹರ್ಸಲ್‌ ಮಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿವೆ.

ಮಾರ್ಚ್ 17ಕ್ಕೆ ಫೈನಲ್​


ಕಳೆದ ವರ್ಷದ ಸಂಪೂರ್ಣ ಕೂಟವು ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

Continue Reading

ಬಾಲಿವುಡ್

Rakul Preet Singh: ರಕುಲ್‌ ಪ್ರೀತ್‌ ಸಿಂಗ್‌ ವಿವಾಹದ ಇನ್ನಷ್ಟು ಫೋಟೊಗಳು ರಿವೀಲ್‌!

Rakul Preet Singh: ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆಯ ಫೋಟೊಗಳು ಇದೀಗ ವೈರಲ್‌ ಆಗಿದ್ದು, ಗಮನ ಸೆಳೆದಿವೆ.

VISTARANEWS.COM


on

Rakul Preet Singh, Jackky Bhagnani reveal their stunning second look
Koo

ಬೆಂಗಳೂರು: ನಟಿ ರಕುಲ್‌ ಪ್ರೀತ್‌ ಸಿಂಗ್‌ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು. ಮೊದಲು ಸಿಖ್‌ ಸಂಪ್ರದಾಯವಾದ ಆನಂದ್ ಕರಜ್‌ (Anand Karaj)ನಂತೆ ಈ ಜೋಡಿ ವಿವಾಹವಾದರು. ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆಯ ಫೋಟೊಗಳು ಇದೀಗ ವೈರಲ್‌ ಆಗಿದ್ದು, ಗಮನ ಸೆಳೆದಿವೆ.

ತರುಣ್ ತಹಿಲಿಯಾನಿ ಲೆಹೆಂಗಾದಲ್ಲಿ ರಕುಲ್ ಪ್ರೀತ್ ಸಿಂಗ್ ಮಿಂಚಿದರೆ, ಜಾಕಿ ಭಗ್ನಾನಿ ಅವರ ಗೋಲ್ಡನ್ ಶೇರ್ವಾನಿಯಲ್ಲಿ ಮಸ್ತಾಗಿ ಕಂಡರು. ಮದುವೆ ಸಂಭ್ರಮಾಚರಣೆಯ ನಡುವೆ, ಜಾಕಿ ಅವರು ರಕುಲ್ ಪ್ರೀತ್‌ಗಾಗಿ ವಿಶೇಷ ಉಡುಗೊರೆಯನ್ನು ಸಹ ನೀಡಿದರು. ʻಬಿನ್ ತೇರೆʼ ಎಂಬ ಗೀತೆಯನ್ನು, ಸ್ವತಃ ಅವರೇ ಬರೆದು, ಸಂಯೋಜಿಸಿ ಹಾಡಿದ್ದಾರೆ.

ಎರಡು ಸಂಪ್ರದಾಯದಂತೆ ವಿವಾಹ

ಇದಕ್ಕೂ ಮೊದಲು ಜೋಡಿಯ ಆಪ್ತ ಮೂಲಗಳು ಮಾಹಿತಿ ನೀಡಿ, ಎರಡು ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂಬ ಮಾಹಿತಿ ನೀಡಿದ್ದರು. ಆನಂದ್ ಕರಜ್ (ಸಿಖ್‌) ಮತ್ತು ಸಿಂಧಿ ಶೈಲಿಯಲ್ಲಿ ಸಮಾರಂಭ ಆಯೋಜಿಸಲಾಗಿದೆ. 2021ರ ಅಕ್ಟೋಬರ್‌ನಲ್ಲಿ ರಕುಲ್‌ ಪ್ರೀತ್‌ ಸಿಂಗ್‌ ಮತ್ತು ಜಾಕಿ ಭಗ್ನಾನಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು.

ಇದನ್ನೂ ಓದಿ: Rakul Preet Singh: ರಕುಲ್‌ ಪ್ರೀತ್‌ ಸಿಂಗ್‌-ಜಾಕಿ ಭಗ್ನಾನಿ ಜೋಡಿಗೆ ಮೋದಿ ಅಭಿನಂದನೆ

ಸ್ಯಾಂಡಲ್‌ವುಡ್‌ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಕುಲ್‌ ಪ್ರೀತ್‌

ವಿಶೇಷ ಎಂದರೆ ರಕುಲ್‌ ಪ್ರೀತ್‌ ಸಿಂಗ್‌ ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್‌ ಜಗ್ಗೇಶ್‌ಗೆ ನಾಯಕಿಯಾಗಿದ್ದರು. ತಮಿಳಿನ ʼ7ಜಿ ರೈನ್‌ಬೋ ಕಾಲನಿʼ ಚಿತ್ರದ ರಿಮೇಕ್‌ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಬಳಿಕ 3 ವರ್ಷ ಬ್ರೇಕ್‌ ಪಡೆದುಕೊಂಡಿದ್ದ ರಕುಲ್‌ ಪ್ರೀತ್‌ 2011ರಲ್ಲಿ ʼಕೆರಾಟನ್‌ʼ, ʼಯುವನ್‌ʼ ದ್ವಿಭಾಷಾ ಸಿನಿಮಾ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಇನ್ನು 2014ರಲ್ಲಿ ಬಿಡುಗಡೆಯಾದ ʼಯಾರಿಯಾನ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಬಳಿಕ ತಮಿಳು, ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ʼಮೇರಿ ಪತ್ನಿ ಕʼ ರಿಮೇಕ್‌ ಚಿತ್ರದಲ್ಲಿ ಮತ್ತು ʼಇಂಡಿಯನ್‌ 2ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ನಿರೀಕ್ಷೆ ಮೂಡಿಸಿದೆ.

Continue Reading
Advertisement
Shah Rukh Khan Friend BREAKS Silence on Rumour of Him Dating
ಸಿನಿಮಾ4 mins ago

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Namma Metro
ಬೆಂಗಳೂರು31 mins ago

Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

Talibans
ವಿದೇಶ36 mins ago

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

dks
ಕರ್ನಾಟಕ55 mins ago

ನೀರಾ ಕುಡಿದಾಗ ನನಗೆ ಅಮಲಾಗಲಿಲ್ಲ: ಅನುಭವ ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್

s jaishankar raisina dialogue
ಪ್ರಮುಖ ಸುದ್ದಿ1 hour ago

S Jaishankar: ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದನೆ

Sumalatha Ambareesh and Pralhad Joshi
ಧಾರವಾಡ2 hours ago

Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

Rahul Gandhi
ದೇಶ2 hours ago

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

divorce
ವೈರಲ್ ನ್ಯೂಸ್2 hours ago

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

Hindu temples money used for development of Hindu communities CM Siddaramaiah
ರಾಜಕೀಯ2 hours ago

Hindu Temples: ಹಿಂದೂ ದೇಗುಲದ ಹಣವು ಮುಂದೂ ಆ ಸಮುದಾಯಗಳ ಅಭಿವೃದ್ಧಿಗೇ ಬಳಕೆ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು23 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌