Dawood Ibrahim: ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ - Vistara News

ದೇಶ

Dawood Ibrahim: ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ

Dawood Ibrahim: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಸುಳ್ಳು ಎಂದು ಆತನ ಸಹಚರ ಛೋಟಾ ಶಕೀಲ್ ಹೇಳಿದ್ದಾನೆ.

VISTARANEWS.COM


on

Dawood Ibrahim not dead, he is alive Says Chhota Shakeel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ (Most Wanted Criminal) ದಾವೂದ್ ಇಬ್ರಾಹಿಂಗೆ (Dawood Ibrahim) ವಿಷಪ್ರಾಶನ ಮಾಡಿದ್ದು, ಸಾವಿಗೀಡಾಗಿದ್ದಾನೆ ಎಂಬ ಸುದ್ದಿಯನ್ನು ಆತನ ಸಹಚರ ಛೋಟಾ ಶಕೀಲ್ ಅಲ್ಲಗಳೆದಿದ್ದಾನೆ(Chhota Shakeel). ಅಲ್ಲದೇ, ದಾವೂದ್ ಇಬ್ರಾಹಿಂ ಜೀವಂತವಾಗಿದ್ದು, ಆರೋಗ್ಯವಾಗಿದ್ದಾನೆ. ದಾವೂದ್ ಮೃತಪಟ್ಟಿದ್ದಾನೆ ಎಂಬ ಫೇಕ್ ನ್ಯೂಸ್ (Fake News) ನೋಡಿ ನನಗೂ ಶಾಕ್ ಆಯ್ತು. ನಿನ್ನೆಯಷ್ಟೇ ಅನೇಕ ಬಾರಿ ದಾವೂದ್‌ನನ್ನು ಭೇಟಿ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ.

ದಾವೂದ್‌ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರೀ ಸುದ್ದಿಯಾಗಿತ್ತು. ಕೆಲವರು, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್‌ ಕಾಕರ್ ಅವರ ಖಾತೆಯ ಸ್ಕ್ರೀನ್ ಶಾಟ್‌ಗಳನ್ನು ಷೇರ್ ಮಾಡಿ ದಾವೂದ್ ಮೃತಪಟ್ಟಿದ್ದಾನೆಂದು ಸುದ್ದಿ ಹಬ್ಬಿಸಿದ್ದರು. ಬಳಿಕ ಅದು ಫೇಕ್ ಖಾತೆ ಎಂಬುದು ಗೊತ್ತಾಯಿತು.

ಈ ಮೊದಲು ಸುದ್ದಿ ಏನಾಗಿತ್ತು?

ಭಾರತಕ್ಕೆ ಹಲವು ಅಪರಾಧಗಳ ಮೂಲಕ ಕಂಟಕವಾಗಿದ್ದ, ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪೈಕಿ ಒಬ್ಬನಾದ ದಾವೂದ್ ಇಬ್ರಾಹಿಂ ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಭಾರತ ಹಾಗೂ ಪಾಕಿಸ್ತಾನದ ತನಿಖಾ ಅಧಿಕಾರಿಗಳು ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಖಚಿತಪಡಿಸಿಲ್ಲ. ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದ್ದು, ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಜನವರಿಯಲ್ಲಿ, ಭೂಗತ ಲೋಕದ ಡಾನ್ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದ್ದರು.

ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಆಗಿದ್ದಾನೆ. ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.

ಈ ಸುದ್ದಿಯನ್ನೂ ಓದಿ: Dawood Ibrahim: ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ; ಭಾರತದಲ್ಲಿ ಈತನ ಪಾತಕ ಕೃತ್ಯಗಳೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

GST Collection : ಜೂನ್​ನಲ್ಲಿ 1.74 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ, ಶೇಕಡಾ 8 ಏರಿಕೆ

VISTARANEWS.COM


on

GST Collection
Koo

ನವದೆಹಲಿ: 2024-25ನೇ ಹಣಕಾಸು ವರ್ಷದ ಜೂನ್​​ನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು (GST Collection) 1.74 ಲಕ್ಷ ಕೋಟಿ ರೂಪಾಯಿ ಆಗಿದ್ದು ಶೇಕಡಾ 8 ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಆದಾಗ್ಯೂ, ಮಾಸಿಕ ಜಿಎಸ್ಟಿ ಸಂಗ್ರಹದ ದತ್ತಾಂಶದ ಅಧಿಕೃತ ಬಿಡುಗಡೆಯನ್ನು ಸರ್ಕಾರ ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಣಕಾಸು ವರ್ಷದ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ​) ಸಂಗ್ರಹವು 5.57 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ.

ಜೂನ್​​ನ ಸಂಗ್ರಹವು ಮೇ 2024 ರಲ್ಲಿ ಸಂಗ್ರಹಿಸಿದ 1.73 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದು ಜೂನ್ 2023 ರಲ್ಲಿ ಸಂಗ್ರಹಿಸಿದ 1.61 ಲಕ್ಷ ಕೋಟಿ ರೂ.ಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ. ಕೇಂದ್ರ ಜಿಎಸ್ಟಿ (ಸಿಜಿಎಸ್​ಟಿ) ಗೆ 39,586 ಕೋಟಿ ರೂ., ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ಗೆ 33,548 ಕೋಟಿ ರೂ. ಜಿಎಸ್ಟಿ ಸಂಗ್ರಹವು ಏಪ್ರಿಲ್​​ನಲ್ಲಿ ದಾಖಲೆಯ ಗರಿಷ್ಠ 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು.

ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಹೇಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ತೆರಿಗೆ ಪಾಲುದಾರ ಸೌರಭ್ ಅಗರ್ವಾಲ್ ಮಾತನಾಡಿ, ಈ ದೃಢ ಕಾರ್ಯಕ್ಷಮತೆಯು ಉತ್ಸಾಹಭರಿತ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ. ಸಮಯೋಚಿತ ಲೆಕ್ಕಪರಿಶೋಧನೆ, ಪರಿಶೀಲನಾ ಕ್ರಮಗಳು ಮತ್ತು ಇಲಾಖೆಯ ಪರಿಣಾಮಕಾರಿ ಜಾರಿ ಇವೆಲ್ಲವೂ ಈ ಜಿಎಸ್​ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

“ಸಂಗ್ರಹದಲ್ಲಿನ ಗಮನಾರ್ಹ ಏರಿಕೆಯು ಜಿಎಸ್ಟಿ ಸುಧಾರಣೆಗಳ ಮುಂದಿನ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಸುಧಾರಣೆಗಳು ಬಂಡವಾಳದ ಅಡೆತಡೆಗಳನ್ನು ಪರಿಹರಿಸಬಹುದು. ತೆರಿಗೆ ದರಗಳನ್ನು ಸುಗಮಗೊಳಿಸಬಹುದು, ನಿರ್ಬಂಧಗಳನ್ನು ಸರಾಗಗೊಳಿಸಬಹುದು. ಅಸ್ತಿತ್ವದಲ್ಲಿರುವ ಸವಾಲುಗಳನ್ನು ನಿಭಾಯಿಸಲು ಪರಿಹಾರಗಳನ್ನು ಜಾರಿಗೆ ತರಬಹುದು ಎಂದು ಅಗರ್ವಾಲ್ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

Maharashtra Politics: ಪರಬ್ 44,784 ಮತಗಳನ್ನು ಪಡೆದರೆ, ಶೆಲಾರ್ 18,772 ಮತಗಳನ್ನು ಪಡೆದರು. ಜೂನ್ 26 ರಂದು ನಡೆದ ಮತದಾನದಲ್ಲಿ ಒಟ್ಟು 67,644 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಚಲಾವಣೆಯಾದ ಒಟ್ಟು ಮತಗಳಲ್ಲಿ 64,222 ಮತಗಳು ಕ್ರಮಬದ್ಧವಾಗಿದ್ದು, ಗೆಲುವಿನ ಕೋಟಾ 32,112 ಮತಗಳಾಗಿದ್ದವು.

VISTARANEWS.COM


on

Maharashtra Politics
Koo

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ (Maharashtra Politics) ಶಿವಸೇನೆ (ಉದ್ಧವ್​ ಠಾಕ್ರೆ ಬಣ) ಮುಖಂಡ ಅನಿಲ್ ಪರಬ್ ಅವರು ಬಿಜೆಪಿಯ ಕಿರಣ್ ಶೆಲಾರ್ ಅವರನ್ನು ಸೋಲಿಸಿದ್ದಾರೆ. ಪರಬ್ 44,784 ಮತಗಳನ್ನು ಪಡೆದರೆ, ಶೆಲಾರ್ 18,772 ಮತಗಳನ್ನು ಪಡೆದರು. ಜೂನ್ 26 ರಂದು ನಡೆದ ಮತದಾನದಲ್ಲಿ ಒಟ್ಟು 67,644 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಚಲಾವಣೆಯಾದ ಒಟ್ಟು ಮತಗಳಲ್ಲಿ 64,222 ಮತಗಳು ಕ್ರಮಬದ್ಧವಾಗಿದ್ದು, ಗೆಲುವಿನ ಕೋಟಾ 32,112 ಮತಗಳಾಗಿದ್ದವು.

ಮೊದಲ ಪ್ರಾಶಸ್ತ್ಯದ ಮತದಾನದಲ್ಲಿ ಪರಬ್ 44,784 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಜುಲೈ 12 ರಂದು ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ನಡೆಯಲಿರುವ

ದ್ವೈವಾರ್ಷಿಕ ಚುನಾವಣೆಗೆ ಎಂಎಲ್​​ಸಿ ಪ್ರಜ್ಞಾ ಸತವ್ ಅವರನ್ನು ಕಾಂಗ್ರೆಸ್ ಇಂದು ಶಾಸಕರ ಕೋಟಾದಿಂದ ತನ್ನ ಅಭ್ಯರ್ಥಿಯಾಗಿ ಮರು ನಾಮಕರಣ ಮಾಡಿದೆ. ರಾಜ್ಯ ವಿಧಾನಸಭೆಯ ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ (ಜುಲೈ 2) ಕೊನೆಯ ದಿನವಾಗಿದೆ. ಹಾಲಿ ಸದಸ್ಯರು ಜುಲೈ 27 ರಂದು ನಿವೃತ್ತರಾಗುವುದರಿಂದ ಖಾಲಿಯಾಗುವ 11 ಸ್ಥಾನಗಳನ್ನು ತುಂಬಲು ಈ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

ವಿಧಾನಸಭೆಯ ಸದಸ್ಯರು (ಶಾಸಕರು) ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ನಿವೃತ್ತರಾಗುತ್ತಿರುವ 11 ಎಂಎಲ್ಸಿಗಳಲ್ಲಿ ಇಬ್ಬರು ಕಾಂಗ್ರೆಸ್​ನವರು. ಆದಾಗ್ಯೂ, ವಿಧಾನಸಭೆಯಲ್ಲಿ ಕಾಂಗ್ರೆಸ್​​ನ ಪ್ರಸ್ತುತ ಬಲವನ್ನು ಗಮನಿಸಿದರೆ, ವಿರೋಧ ಪಕ್ಷವು ಮೇಲ್ಮನೆಗೆ ಒಬ್ಬ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಬಹುದು.

ಪ್ರದ್ನ್ಯಾ ಸತವ್ ಅವರು ದಿವಂಗತ ಕಾಂಗ್ರೆಸ್ ಸಂಸದ ರಾಜೀವ್ ಸತವ್ ಅವರ ಪತ್ನಿ. ಹಾಲಿ ಕಾಂಗ್ರೆಸ್ ಎಂಎಲ್ಸಿ ಶರದ್ ರಾನ್ಪೈಸ್ ಅವರ ನಿಧನದ ನಂತರ ಉಪಚುನಾವಣೆ ಅನಿವಾರ್ಯವಾದಾಗ 2021 ರಲ್ಲಿ ಅವರು ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. ಮಧ್ಯ ಮಹಾರಾಷ್ಟ್ರದ ಬೀಡ್ ನಿಂದ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಸೋತ ಮಾಜಿ ರಾಜ್ಯ ಸಚಿವೆ ಪಂಕಜಾ ಮುಂಡೆ ಸೇರಿದಂತೆ ಆಡಳಿತಾರೂಢ ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್​ನ ಮಿತ್ರ ಪಕ್ಷವಾದ ಎನ್ಸಿಪಿ (ಶರದ್​​ ಪವಾರ್) ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ (ಪಿಡಬ್ಲ್ಯೂಪಿ) ಅಭ್ಯರ್ಥಿ ಜಯಂತ್ ಪಾಟೀಲ್ ಅವರಿಗೆ ಬೆಂಬಲ ಘೋಷಿಸಿದೆ. 288 ಸದಸ್ಯರ ವಿಧಾನಸಭೆಯಲ್ಲಿ 14 ಸ್ಥಾನಗಳು ಖಾಲಿ ಇದ್ದು, ಎಲೆಕ್ಟೋರಲ್ ಕಾಲೇಜ್ 274 ಮತ್ತು ವಿಜೇತ ಅಭ್ಯರ್ಥಿಯ ಕೋಟಾ 23 ಆಗಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ದ್ವೈವಾರ್ಷಿಕ ಚುನಾವಣೆಗಳು ನಡೆಯುತ್ತಿವೆ.

Continue Reading

ವಾಣಿಜ್ಯ

Challa Sreenivasulu Setty: ಚಲ್ಲಾ ಶ್ರೀನಿವಾಸುಲು ಸೆಟ್ಟಿ; ಅಂದು ಪ್ರೊಬೆಷನರಿ ಅಧಿಕಾರಿ, ಈಗ ಎಸ್‌ಬಿಐ ಅಧ್ಯಕ್ಷ!

2020ರ ಜನವರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದ ಚಲ್ಲಾ ಶ್ರೀನಿವಾಸುಲು ಸೆಟ್ಟಿ (Challa Sreenivasulu Setty) ಪ್ರಸ್ತುತ ಎಸ್‌ಬಿಐನ ಇಂಟರ್ನ್ಯಾಷನಲ್ ಬ್ಯಾಂಕಿಂಗ್, ಗ್ಲೋಬಲ್ ಮಾರ್ಕೆಟ್ಸ್ ಮತ್ತು ಟೆಕ್ನಾಲಜಿ ವರ್ಟಿಕಲ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆಗಸ್ಟ್ 28ರಂದು ನಿವೃತ್ತರಾಗಲಿರುವ ದಿನೇಶ್ ಕುಮಾರ್ ಖರಾ ಅವರ ಬಳಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ.

VISTARANEWS.COM


on

By

Challa Sreenivasulu Setty
Koo

ಸರ್ಕಾರಿ ನೇಮಕಾತಿ ಆಯ್ಕೆ ಸಮಿತಿ ಹಣಕಾಸು ಸೇವೆ ಸಂಸ್ಥೆಗಳ ಬ್ಯೂರೋ (FSBI) ಶನಿವಾರ ದೇಶದ ಅತಿ ದೊಡ್ಡ ಹಣಕಾಸು ವಹಿವಾಟು ನಡೆಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಚಲ್ಲಾ ಶ್ರೀನಿವಾಸುಲು ಸೆಟ್ಟಿ ( Challa Sreenivasulu Setty) ಅವರನ್ನು ಆಯ್ಕೆ ಮಾಡಿದೆ.

ಯಾರು ಚಲ್ಲಾ ಶ್ರೀನಿವಾಸುಲು ಸೆಟ್ಟಿ?

2020ರ ಜನವರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವ ಸೆಟ್ಟಿ ಪ್ರಸ್ತುತ ಎಸ್‌ಬಿಐನ ಇಂಟರ್ನ್ಯಾಷನಲ್ ಬ್ಯಾಂಕಿಂಗ್, ಗ್ಲೋಬಲ್ ಮಾರ್ಕೆಟ್ಸ್ ಮತ್ತು ಟೆಕ್ನಾಲಜಿ ವರ್ಟಿಕಲ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಎಸ್‌ಬಿಐ ಅಧ್ಯಕ್ಷ ಸ್ಥಾನಕ್ಕೆ ಗರಿಷ್ಠ ವಯೋಮಿತಿಯಾದ 63ನೇ ವರ್ಷಕ್ಕೆ ಕಾಲಿಟ್ಟಿರುವ ಅವರು ಆಗಸ್ಟ್ 28ರಂದು ನಿವೃತ್ತರಾಗಲಿರುವ ದಿನೇಶ್ ಕುಮಾರ್ ಖರಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಸೆಟ್ಟಿ ಅವರು ಭಾರತ ಸರ್ಕಾರದಿಂದ ರಚಿಸಲಾದ ವಿವಿಧ ಕಾರ್ಯಪಡೆಗಳು, ಸಮಿತಿಗಳ ಮುಖ್ಯಸ್ಥರೂ ಆಗಿದ್ದು, ಈ ಹಿಂದೆ ಬ್ಯಾಂಕಿನ ಚಿಲ್ಲರೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಪೋರ್ಟ್‌ಫೋಲಿಯೊವನ್ನು ನೋಡಿಕೊಳ್ಳುತ್ತಿದ್ದರು.
ಕೃಷಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಪ್ರಮಾಣೀಕೃತ ಸಹವರ್ತಿಯಾಗಿರುವ ಅವರು 1988 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಎಸ್‌ಬಿಐನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಮೂರು ದಶಕಗಳ ಕಾಲ ವೃತ್ತಿಜೀವನದ ಉದ್ದಕ್ಕೂ ಅವರು ಕಾರ್ಪೊರೇಟ್ ಕ್ರೆಡಿಟ್, ಚಿಲ್ಲರೆ ವ್ಯಾಪಾರ, ಡಿಜಿಟಲ್ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಬ್ಯಾಂಕಿಂಗ್‌ನಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಸೆಟ್ಟಿ ಅವರು ಎಸ್‌ಬಿಐನಲ್ಲಿ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ – ಸ್ಟ್ರೆಸ್ಡ್ ಅಸೆಟ್ಸ್ ರೆಸಲ್ಯೂಶನ್ ಗ್ರೂಪ್, ಕಾರ್ಪೊರೇಟ್ ಅಕೌಂಟ್ಸ್ ಗ್ರೂಪ್‌ನಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಮತ್ತು ಜನರಲ್ ಮ್ಯಾನೇಜರ್, ಇಂದೋರ್‌ನ ವಾಣಿಜ್ಯ ಶಾಖೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಎಸ್‌ಬಿಐ, ನ್ಯೂಯಾರ್ಕ್ ಬ್ರಾಂಚ್‌ನಲ್ಲಿ ವಿಪಿ ಮತ್ತು ಹೆಡ್ (ಸಿಂಡಿಕೇಶನ್ಸ್) ಸೇರಿದಂತೆ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸಿದ್ದಾರೆ. .

ಎಸ್‌ಬಿಐ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಿರ್ದೇಶಕರ ಮುಖ್ಯಸ್ಥರಾಗಿರುವ ಎಫ್ ಎಸ್ ಐಬಿ 2024ರ ಜೂನ್ 29ರಂದು ಸ್ಥಾನಕ್ಕಾಗಿ ಮೂವರು ಅಭ್ಯರ್ಥಿಗಳನ್ನು ಸಂದರ್ಶಿಸಿದೆ.

ಇಂಟರ್‌ಫೇಸ್‌ನಲ್ಲಿ ಕಾರ್ಯಕ್ಷಮತೆ, ಒಟ್ಟಾರೆ ಅನುಭವ ಮತ್ತು ಅಸ್ತಿತ್ವದಲ್ಲಿರುವ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು ಬ್ಯೂರೋ ಚಲ್ಲಾ ಶ್ರೀನಿವಾಸಲು ಸೆಟ್ಟಿ ಅವರನ್ನು ಎಸ್‌ಬಿಐನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದೆ ಎಂದು ಎಫ್‌ಎಸ್‌ಐಬಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

ಅಧ್ಯಕ್ಷರನ್ನು ಎಸ್‌ಬಿಐನ ಸೇವೆಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರ ಪೂಲ್‌ನಿಂದ ನೇಮಿಸಲಾಗುತ್ತದೆ. ಸಾಮಾನ್ಯವಾಗಿ, ಅತ್ಯಂತ ಹಿರಿಯ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕಿನ ಅಧ್ಯಕ್ಷರಾಗುತ್ತಾರೆ. ಎಫ್‌ಎಸ್‌ಐಬಿ ಶಿಫಾರಸಿನ ಕುರಿತು ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ತೆಗೆದುಕೊಳ್ಳುತ್ತದೆ. ಎಫ್‌ಎಸ್‌ಐಬಿಯ ನೇತೃತ್ವವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಅವರು ವಹಿಸಿದ್ದಾರೆ.

Continue Reading

ವಾಣಿಜ್ಯ

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Hero MotoCorp: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ ಸ್ಥಾಪಕ, ಅಧ್ಯಕ್ಷ ದಿ. ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

VISTARANEWS.COM


on

Hero MotoCorp has introduced the new motorcycle The Centennial
Koo

ಬೆಂಗಳೂರು: ಸ್ಕೂಟರ್‌ಗಳು ಹಾಗೂ ಮೋಟಾರ್‌ ಸೈಕಲ್‌ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ (Hero MotoCorp) ಸ್ಥಾಪಕ, ಅಧ್ಯಕ್ಷ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಗ್ರಹಕಾರರ ಆವೃತ್ತಿಯ ಮೋಟಾರ್‌ ಸೈಕಲ್ ‘ದಿ ಸೆಂಟೆನಿಯಲ್’ ಅನ್ನು ಪರಿಚಯಿಸಿದೆ.

ಈ ಕುರಿತು ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಮಾತನಾಡಿ, ತಮ್ಮ ತಂದೆ ಹಾಗೂ ಹೀರೋ ಮೋಟೋಕಾರ್ಪ್‌ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ ಎಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್” (The Centennial) ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಭಾರತದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (CIT) ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್ (TCG) ನ ಜಾಗತಿಕ ನಿಪುಣರು ʼದಿ ಸೆಂಟೆನಿಯಲ್ʼ ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಇದರ ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್‌ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.

ದಿ ಸೆಂಟೆನಿಯಲ್

ʼದಿ ಸೆಂಟೆನಿಯಲ್‌ʼ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್‌ಗರ್ಮ್ ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್‌ನ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಹ್ಯಾಂಡಲ್‌ಬಾರ್‌ಗಳು, ಹ್ಯಾಂಡಲ್‌ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್ʼ ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.

ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್‌ನೊಂದಿಗೆ ಸಜ್ಜುಗೊಂಡಿದೆ.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ʼದಿ ಸೆಂಟೆನಿಯಲ್‌ʼ ಬೈಕ್‌ 158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ಅತ್ಯಂತ ಹಗುರವಾಗಿದ್ದು, ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ. ʼದಿ ಸೆಂಟೆನಿಯಲ್ʼ ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.

Continue Reading
Advertisement
T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

GST Collection
ಪ್ರಮುಖ ಸುದ್ದಿ2 hours ago

GST Collection : ಜೂನ್​ನಲ್ಲಿ 1.74 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ, ಶೇಕಡಾ 8 ಏರಿಕೆ

2nd National Pediatric Stroke Conclave 2024 inauguration in Bengaluru
ಕರ್ನಾಟಕ2 hours ago

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Maharashtra Politics
ಪ್ರಮುಖ ಸುದ್ದಿ2 hours ago

Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

Press Day and Pratibha Puraskara programme in Ballari
ಬಳ್ಳಾರಿ2 hours ago

Press Day: ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರ: ಡಾ.ಕರಿಯಪ್ಪ ಮಾಳಿಗಿ

Manufacturing of auto parts in the state Increased propensity for capital investment
ಕರ್ನಾಟಕ2 hours ago

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Kannada New Movie kagada film released on 5th July
ಕರ್ನಾಟಕ2 hours ago

Kannada New Movie: ಮೊಬೈಲ್ ಮುಂಚಿನ ಪ್ರೇಮಕಥೆ ‘ಕಾಗದ’ ಜುಲೈ 5ರಂದು ಬಿಡುಗಡೆ

Afghanistan cricket
ಪ್ರಮುಖ ಸುದ್ದಿ2 hours ago

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

IND vs SA
ಪ್ರಮುಖ ಸುದ್ದಿ4 hours ago

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

Mangalore Jail
ಕರ್ನಾಟಕ4 hours ago

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ8 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌