Money Guide : ಬೇಡಿಕೆ ಗಳಿಸಿರುವ ಬಿಎಲ್‌ಎಸ್-ಸರ್ವೀಸ್‌ ಐಪಿಒ, ಈ ಕಂಪನಿಯ ವಿಶೇಷತೆ ಏನು? - Vistara News

ವಾಣಿಜ್ಯ

Money Guide : ಬೇಡಿಕೆ ಗಳಿಸಿರುವ ಬಿಎಲ್‌ಎಸ್-ಸರ್ವೀಸ್‌ ಐಪಿಒ, ಈ ಕಂಪನಿಯ ವಿಶೇಷತೆ ಏನು?

ಜನ ಸಾಮಾನ್ಯರಿಗೆ ನಾನಾ ದಿನೋಪಯೋಗಿ ಸೇವೆಗಳನ್ನು (Money Guide) ಏಜೆಂಟರ ಮೂಲಕ ಒದಗಿಸುವ ಬಿಎಲ್‌ಎಸ್‌ ಸರ್ವೀಸ್‌ ಕಂಪನಿಯ ಐಪಿಒ ಬೇಡಿಕೆ ಗಳಿಸಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

BSE
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿಎಲ್‌ಎಸ್‌ ಇ- ಸರ್ವೀಸ್‌ ಲಿಮಿಟೆಡ್‌ ಕಂಪನಿಯ ಐಪಿಒ ಈಗ ನಡೆಯುತ್ತಿದೆ. ( Money Guide ) ಜನವರಿ 30ಕ್ಕೆ ಐಪಿಒ ಶುರುವಾಗಿದ್ದು ಫೆಬ್ರವರಿ 1ಕ್ಕೆ ಮುಕ್ತಾಯವಾಗುತ್ತಿದೆ. ಇದರ ಇಶ್ಯೂ ಪ್ರೈಸ್‌ ಪ್ರತಿ ಷೇರಿಗೆ 129 ರೂ.ಗಳಿಂದ 135 ರೂ.ಗಳಾಗಿದೆ. ಐಪಿಒ ಗಾತ್ರ 310 ಕೋಟಿ ರೂ.ಗಳಾಗಿದೆ. 2.3 ಕೋಟಿ ಷೇರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ಎಂಟು ಪಟ್ಟು ಸಬ್‌ ಸ್ಕ್ರೈಬ್‌ ಆಗಿರುವುದು ಗಮನಾರ್ಹ. ಗ್ರೇ ಮಾರ್ಕೆಟ್‌ ನಲ್ಲೂ ಷೇರಿಗೆ ಡಿಮಾಂಡ್‌ ಇತ್ತು. ಈಗ ಕಂಪನಿಯ ಹಿನ್ನೆಲೆ ಬಗ್ಗೆ ತಿಳಿಯೋಣ.

ಬಿಎಸ್‌ಇ-ಇ ಸರ್ವೀಸ್‌ ಕಂಪನಿಯು ಬಿಎಲ್‌ ಎಸ್‌ ಇಂಟರ್‌ ನ್ಯಾಶನಲ್‌ ಸರ್ವೀಸ್‌ ಲಿಮಿಟೆಡ್‌ನ ಅಧೀನ ಸಂಸ್ಥೆಯಾಗಿದೆ. ಇದು ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ. ವೀಸಾ ಅರ್ಜಿಗಳ ಹೊರಗುತ್ತಿಗೆಯ ವಲಯದಲ್ಲಿ ಅತಿ ದೊಡ್ಡ ಕಂಪನಿಯಾಗಿದೆ. ಬಿಎಲ್‌ಎಸ್‌ ಜಿ2ಸಿ ವಲಯದಲ್ಲಿ (ಸರ್ಕಾರದಿಂದ ನಾಗರಿಕರು) ಡಿಜಿಟಲ್‌ ಮತ್ತು ಫಿಸಿಕಲ್‌ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಬಿ2ಬಿ ( ಬಿಸಿನೆಸ್‌ನಿಂದ ಬಿಸಿನೆಸ್‌ಗೆ) ವಲಯದಲ್ಲೂ ಸೇವೆ ನೀಡುತ್ತದೆ.

ಬಿಎಸ್‌ಇ-ಇ ಸರ್ವೀಸ್‌ ಕಂಪನಿಯು ಭಾರತದಲ್ಲಿ ಮೂರು ಪ್ರಮುಖ ಬ್ಯಾಂಕ್‌ಗಳಗೆ ಬಿಸಿನೆಸ್‌ ಕರೆಸ್ಪಾಂಡೆನ್ಸ್‌ ಇ-ಸರ್ವೀಸ್‌ ಮತ್ತು ಇ-ಗವರ್ನೆನ್ಸ್‌ ಸೇವೆಯನ್ನು ತಳ ಮಟ್ಟದಲ್ಲಿ ನೀಡುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇವೆ ಒದಗಿಸುತ್ತಿದೆ. ಪಂಜಾಬ್‌, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: Money plus : ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರ ನಿರೀಕ್ಷೆಗಳು ಈಡೇರಲಿದೆಯೇ?

ಬಿಎಲ್‌ಎಸ್‌ ತನ್ನ ಏಜೆಂಟರಿಗೆ ಅರ್ನ್‌ ಮನಿ ಸರ್ವೀಸ್‌ ಒದಗಿಸುತ್ತದೆ. ಆಯುಷ್ಮಾನ್‌ ಭಾರತ್‌, ಪ್ಯಾನ್‌ ಕಾರ್ಡ್‌, ರಿಚಾರ್ಜ್‌ ( ಟೆಲಿಕಾಂ, ಡಿಟಿಎಚ್‌, ಫಾಸ್ಟ್‌ ಟ್ಯಾಗ್‌, ಡೇಟಾ ಕಾರ್ಡ್)‌, ಬಿಲ್‌ ಪೇಮೆಂಟ್‌ ( ವಿದ್ಯುತ್‌, ನೀರು, ಗ್ಯಾಸ್‌, ಟೆಲಿಫೋನ್‌ ಇತ್ಯಾದಿ) , ಮನಿ ಟ್ರಾನ್ಸ್‌ ಫರ್‌, ಟ್ರಾವೆಲ್‌ ಬುಕಿಂಗ್‌, ಆಧಾರ್‌ ಪೇಮೆಂಟ್‌, ಮಿನಿ ಎಟಿಎಂ, ಪಾಸ್‌ ಪೋರ್ಟ್‌ ಮತ್ತು ವೀಸಾ ಅರ್ಜಿ ಸಲ್ಲಿಕೆ, ವಿಮೆ, ರಿಫರ್ಬೀಷ್ಡ್‌ ಮೊಬೈಲ್‌ ಫೋನ್‌, ಹಮಾರಾ ಕ್ಲಿನಿಕ್‌ ( ವೈದ್ಯರ ಸಮಾಲೋಚನೆ) ಇತ್ಯಾದಿ ಸೇವೆಗಳನ್ನು ಏಜೆಂಟರ ಮೂಲಕ ಒದಗಿಸುತ್ತದೆ. ಏಜೆಂಟರಿಗೂ ಹಣ ಸಂಪಾದನೆಗೆ ಅವಕಾಶ ಸಿಗುತ್ತದೆ. ಬಿಎಲ್‌ಎಸ್‌ ತನ್ನದೇ ವೆಬ್‌ ಎನೇಬಲ್ಡ್‌ ಸೇವೆಗಳ ಪೋರ್ಟಲ್‌ ಅನ್ನು ಒಳಗೊಂಡಿದೆ. ಗ್ರಾಮೀಣ ಮಟ್ಟದಲ್ಲಿ ವಿಲೇಜ್‌ ಲೆವೆಲ್‌ ಎಂತ್ರೆಪ್ರೆನ್ಯೂರ್‌ ( VLE) ನೆಟ್‌ ವರ್ಕ್‌ ಅನ್ನು ಒಳಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Gold Rate Today:ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,725ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,800 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,250 ಮತ್ತು ₹6,72,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,755 ಆಗಿದ್ದರೆ, ಎಂಟು ಗ್ರಾಂ ಬೆಲೆ ₹54,040 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹67,550 ಮತ್ತು ₹6,75,500 ವೆಚ್ಚವಾಗಲಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹30 ಹಾಗೂ ₹33 ಇಳಿಕೆಯಾಗಿವೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ವ್ಯಾಪಾರ ಏರಿಕೆ ಆಗಿದ್ದು, ಹೀಗಾಗಿ ನಿನ್ನೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,725ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,800 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,250 ಮತ್ತು ₹6,72,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,755 ಆಗಿದ್ದರೆ, ಎಂಟು ಗ್ರಾಂ ಬೆಲೆ ₹54,040 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹67,550 ಮತ್ತು ₹6,75,500 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹87.10, ಎಂಟು ಗ್ರಾಂ ₹696.80 ಮತ್ತು 10 ಗ್ರಾಂ ₹871ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,710 ಮತ್ತು 1 ಕಿಲೋಗ್ರಾಂಗೆ ₹87,100 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ. ನಿನ್ನೆಗೆ ಹೋಲಿಸಿದರೆ ಈ ದರ ಕೊಂಚ ಏರಿಕೆ ಕಂಡಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,40073,510
ಮುಂಬಯಿ67,25073,360
ಬೆಂಗಳೂರು67,25073,360
ಚೆನ್ನೈ67,50072,640

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

Continue Reading

ತಂತ್ರಜ್ಞಾನ

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Reliance Jio: ರಿಲಯನ್ಸ್ ಜಿಯೋದಿಂದ ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂ. ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಲಭ್ಯವಿದೆ. ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ ಡೇಟಾ ಸಹ ದೊರೆಯುತ್ತಿದೆ.

VISTARANEWS.COM


on

888 rupees postpaid plan with 15 OTT applications for JioFiber AirFiber customers
Koo

ನವದೆಹಲಿ: ಜಿಯೋಫೈಬರ್ (Jio Fiber) ಹಾಗೂ ಜಿಯೋ ಏರ್ ಫೈಬರ್ (Jio Air Fiber) ಗ್ರಾಹಕರಿಗಾಗಿ ರಿಲಯನ್ಸ್ ಜಿಯೋದಿಂದ (Reliance Jio) ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಒಟಿಟಿ ಪ್ಲಾಟ್ ಫಾರ್ಮ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. ಈ ಪ್ಲಾನ್‌ಗೆ ತಿಂಗಳಿಗೆ 888 ರೂಪಾಯಿ ಆಗಲಿದೆ.

ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು 15 ಪ್ರೀಮಿಯಂ ಒಟಿಟಿ ಅಪ್ಲಿಕೇಷನ್‌ಗಳನ್ನು ಪಡೆಯಲಿದ್ದು, ಅನಿಯಮಿತ (Unlimited) ಡೇಟಾ ಸಹ ದೊರೆಯುತ್ತಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್‌ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಬಹುದಾಗಿದೆ.

ಇದನ್ನೂ ಓದಿ: Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

ಈ ಹೊಸ ಯೋಜನೆಯ ಅಡಿಯಲ್ಲಿ ಗ್ರಾಹಕರು 30 ಎಂಬಿಪಿಎಸ್ (Mbps) ವೇಗವನ್ನು ಪಡೆಯಲಿದ್ದು, ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋಸಿನಿಮಾ ಪ್ರೀಮಿಯಂ ರೀತಿಯ ಹದಿನೈದಕ್ಕೂ ಹೆಚ್ಚು ಪ್ರಮುಖ ಒಟಿಟಿ ಅಪ್ಲಿಕೇಷನ್‌ಗಳು ದೊರೆಯುತ್ತವೆ. ಈ ಅಪ್ಲಿಕೇಷನ್‌ನ ಸಬ್‌ಸ್ಕ್ರಿಪ್ಷನ್ ದೊರೆಯುವುದು ಯೋಜನೆಯ ಜತೆಗೆ ಮಾತ್ರ. ಈ ಯೋಜನೆಯನ್ನು ಹೊಸ ಚಂದಾದಾರಷ್ಟೇ ಅಲ್ಲ, 10 ಅಥವಾ 30 ಎಂಬಿಪಿಎಸ್ ಯೋಜನೆಯನ್ನು ಈಗಾಗಲೇ ಬಳಸುತ್ತಿರುವ ಜಿಯೋದ ಈಗಿನ ಬಳಕೆದಾರರು ಸಹ ಪಡೆಯಬಹುದಾಗಿದೆ.

ಇನ್ನು ಈ 888 ರೂಪಾಯಿಯ ಪೋಸ್ಟ್‌ಪೇಯ್ಡ್ ಯೋಜನೆಯು ಪ್ರತಿಯೊಬ್ಬರಿಗೂ ದೊರೆಯಲಿದ್ದು, ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್‌ಗ್ರೇಡ್ ಮಾಡಬಹುದು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

ಇನ್ನೊಂದು ವಿಶೇಷತೆಯೆಂದರೆ ಇತ್ತೀಚೆಗೆ ಘೋಷಣೆಯಾದ ಜಿಯೋ ಐಪಿಎಲ್ ಧನ್ ಧನಾ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋಫೈಬರ್ ಅಥವಾ ಏರ್ ಫೈಬರ್‌ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆಯಬಹುದು. ಈ ಪ್ಲಾನ್ ಮೇ 31, 2024ರ ವರೆಗೆ ಲಭ್ಯವಿರುತ್ತದೆ, ಜಿಯೋ ಡಿಡಿಡಿ (Jio Dhan Dhana Dhan) ಕೊಡುಗೆಯನ್ನು ವಿಶೇಷವಾಗಿ ಟಿ20 ಋತುವಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ವಾಣಿಜ್ಯ

Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

Tata Motors: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಇದು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದೆ.

VISTARANEWS.COM


on

New Tata Ace EV 1000 launched by Tata Motors
Koo

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors) ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಕಟ್ಟಕಡೆಯ ಮೈಲು ತಲುಪಲು ಪೂರಕವಾಗಿ ಈ ವಾಹನವನ್ನು ಕ್ರಾಂತಿಕಾರಕವಾಗಿ ಅಭಿವೃದ್ಧಿಪಡಿಸಲಾಗಿದೆ.

ಏಸ್ ಇವಿ ವಿಶೇಷತೆ ಏನು?

ಹೊಸದಾದ ಏಸ್ ಇವಿ ವಾಹನವು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದ್ದು, 1 ಟನ್‌ವರೆಗೆ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 161 ಕಿಲೋಮೀಟರ್‌ವರೆಗೆ ಕ್ರಮಿಸಬಲ್ಲದು. ತನ್ನ ಗ್ರಾಹಕರಿಂದ ಅತ್ಯಮೂಲ್ಯವಾದ ಸಲಹೆಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆ ಈ ಏಸ್ ಇವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಶ್ರೇಣಿಯ ವಾಹನವು ಎಫ್ಎಂಸಿಜಿ, ಬೇವರೇಜಸ್, ಪೇಂಟ್ಸ್ & ಲ್ಯೂಬ್ರಿಕೆಂಟ್ಸ್, ಎಲ್‌ಪಿಜಿ & ಡೈರಿ ಉತ್ಪನ್ನಗಳ ಸಾಗಣೆ ಅಗತ್ಯತೆಗಳನ್ನು ಪೂರೈಸಲಿದೆ.

ಇದನ್ನೂ ಓದಿ: UGCET 2024: ಯುಜಿಸಿಇಟಿ ಅರ್ಜಿ ತಿದ್ದುಪಡಿಗೆ ಅಂತಿಮ ಅವಕಾಶ ನೀಡಿದ ಕೆಇಎ; ಕೊನೆಯ ದಿನಾಂಕ ಯಾವಾಗ?

ದೇಶಾದ್ಯಂತ 150ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಸಪೋರ್ಟ್ ಸೆಂಟರ್‌ಗಳ ಬೆಂಬಲದೊಂದಿಗೆ ಈ ಏಸ್ ಇವಿ ವಾಹನವು ಅತ್ಯಾಧುನಿಕ, ಸುಧಾರಿತ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮತ್ತು ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ ವಾಹನವಾಗಿದೆ.

ಟಾಟಾ ಸಮೂಹ ಸಂಸ್ಥೆಗಳ ಅಂಗವಾಗಿರುವ Tata UniEVerse ಅಗಾಧವಾದ ಸಾಮರ್ಥ್ಯಗಳನ್ನು ಬಳಸಿಕೊಂಡು ಈ ಏಸ್ ಇವಿಯನ್ನು ಸಿದ್ಧಪಡಿಸಲಾಗಿದೆ. ಗ್ರಾಹಕರಿಗೆ ಸಮಗ್ರ ಇ-ಕಾರ್ಗೊ ಮೊಬಿಲಿಟಿ ಪರಿಹಾರವನ್ನು ನೀಡಲು ದೇಶದ ಪ್ರಮುಖ ಹಣಕಾಸು ಸಂಸ್ಥೆಗಳ ಪಾಲುದಾರಿಕೆಯನ್ನೂ ಸಹ ಹೊಂದಲಾಗಿದೆ. ಇದು ಬಹುಮುಖ ಕಾರ್ಗೊ ಡೆಕ್‌ಗಳೊಂದಿಗೆ ಲಭ್ಯವಿದೆ ಮತ್ತು ದೇಶಾದ್ಯಂತ ಎಲ್ಲಾ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಡೀಲರ್ ಶಿಪ್‌ಗಳಲ್ಲಿ ಮಾರಾಟವಾಗಲಿದೆ. ಇದರ ಬೆಲೆ ಸುಮಾರು 9 ಲಕ್ಷ ರೂ. ಆಗುತ್ತದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಎಸ್‌ಸಿವಿ & ಪಿಯು ವಿಭಾಗದ ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ವಿನಯ್ ಪಾಠಕ್ ಈ ಕುರಿತು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ನಮ್ಮ ಏಸ್ ಇವಿ ಗ್ರಾಹಕರು ಸರಿಸಾಟಿಯಿಲ್ಲದ ಅನುಭವವನ್ನು ಪಡೆಯುವ ಮೂಲಕ ಅತ್ಯಮೂಲ್ಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಲಾಭವನ್ನು ಮತ್ತು ಸುಸ್ಥಿರತೆಯನ್ನು ಪಡೆದುಕೊಂಡಿದ್ದಾರೆ. ಕ್ರಾಂತಿಕಾರಕ ಶೂನ್ಯ ಮಾಲಿನ್ಯದ ಕಟ್ಟಕಡೆಯ ಸಾರಿಗೆ ಪರಿಹಾರಗಳ ರಾಯಭಾರಿಗಳಾಗಿ ಈ ಗ್ರಾಹಕರು ಹೊರಹೊಮ್ಮಿದ್ದಾರೆ.

ಇದೀಗ ಏಸ್ ಇವಿ 1000 ಬಿಡುಗಡೆಯೊಂದಿಗೆ ಗ್ರಾಹಕರಿಗೆ ಸುಧಾರಿತ ಅನುಭವವನ್ನು ನೀಡುತ್ತಿದ್ದೇವೆ. ಈ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಆರ್ಥಿಕತೆಯನ್ನು ಸುಧಾರಣೆ ಮಾಡಲಾಗುತ್ತಿದೆ. ಏಸ್ ಇವಿ 1000 ಉತ್ಕೃಷ್ಟ ಮೌಲ್ಯ ಮತ್ತು ಕಡಿಮೆ ವೆಚ್ಚದ ಮಾಲೀಕತ್ವವನ್ನು ನೀಡುವ ಮೂಲಕ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.

ಏಸ್ ಇವಿಯು EVOGEN ಪವರ್ ಟ್ರೇನ್‌ನಿಂದ ಚಾಲಿತವಾಗಿದ್ದು, ಇದು 7 ವರ್ಷಗಳ ಬ್ಯಾಟರಿ ವಾರಂಟಿ ಮತ್ತು 5 ವರ್ಷದ ಸಮಗ್ರ ನಿರ್ವಹಣೆ ಪ್ಯಾಕೇಜ್‌ನೊಂದಿಗೆ ಸರಿಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡುತ್ತದೆ. ಇದು ಚಾಲನಾ ಶ್ರೇಣಿಯನ್ನು ಹೆಚ್ಚಿಸಲು ಸುಧಾರಿತ ಬ್ಯಾಟರಿ ಕೂಲಿಂಗ್ ಸಿಸ್ಟಂ ಮತ್ತು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂನೊಂದಿಗೆ ಸುರಕ್ಷಿತ, ಎಲ್ಲಾ ಹವಾಮಾನ ಕಾರ್ಯಾಚರಣೆಗಳನ್ನು ನೀಡುತ್ತದೆ.

ಇದನ್ನೂ ಓದಿ: IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

ಇದು ಹೆಚ್ಚಿನ ಸಮಯಕ್ಕಾಗಿ ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು 27kW (36hp) ಮೋಟರ್ ನಿಂದ 130Nm ಪೀಕ್ ಟಾರ್ಕ್ ನೊಂದಿಗೆ ಚಾಲಿತವಾಗಿದೆ. ಬೆಸ್ಟ್-ಇನ್-ಕ್ಲಾಸ್ ಪಿಕಪ್ ಮತ್ತು ಗ್ರೇಡ್ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.

Continue Reading

ಮನಿ-ಗೈಡ್

Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Money Guide: ಭಾರತದಲ್ಲಿ ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ ಜಾರಿಯಲ್ಲಿದೆ. ಹೀಗಾಗಿ ಗೂಗಲ್‌ ಪೇ ಜನಪ್ರಿಯವಾಗಿದೆ. ಇದೀಗ ಗೂಗಲ್‌ ಕಂಪೆನಿ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಗೂಗಲ್‌ ಪೇ (Google Pay) ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದಲ್ಲಿ ಸದ್ಯ ಡಿಜಿಟಲ್‌ ಪೇಮೆಂಟ್‌ ಜನಪ್ರಿಯಾಗಿದ್ದು, ಗೂಗಲ್‌ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಗ್ರಾಹಕ ಸ್ನೇಹಿಯಾಗಿರುವ ಗೂಗಲ್‌ ಪೇಯ ಬಳಕೆಯೂ ವ್ಯಾಪಕವಾಗಿದೆ. ಈ ಮಧ್ಯೆ ಇದೀಗ ಗೂಗಲ್‌ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್‌ (Google Wallet) ಎಂದರೇನು? ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಗೂಗಲ್‌ ಪೇ ಆ್ಯಪ್‌ಗಿಂತ ಗೂಗಲ್‌ ವ್ಯಾಲೆಟ್‌ನ ಕಾರ್ಯ ವೈಖರಿ ಭಿನ್ನ. ಗೂಗಲ್ ವಾಲೆಟ್ ಹೆಸರಿಗೆ ತಕ್ಕಂತೆ ನಮ್ಮ ವ್ಯಾಲೆಟ್‌ (ಪರ್ಸ್‌)ನಂತೆಯೇ ಕಾರ್ಯ ನಿರ್ವಹಿಸಲಿದೆ. ಈ ಆ್ಯಪ್‌ನ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್, ಬಸ್‌, ಮೆಟ್ರೋ ಟಿಕೆಟ್‌ ಸೇರಿದಂತೆ ಇತರ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳುವುದಾದರೆ ಗೂಗಲ್ ವ್ಯಾಲೆಟ್‌ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಡಿಜಿಲಾಕರ್‌ನಂತೆಯೇ ಕಾರ್ಯ ನಿರ್ವಹಿಸಲಿದೆ.

ಸುರಕ್ಷಿತ ವಿಧಾನ

ಇದು ಅತ್ಯಂತ ಸುರಕ್ಷಿತ ಖಾಸಗಿ ಡಿಜಿಟಲ್ ವ್ಯಾಲೆಟ್ ಎಂದು ಕಂಪನಿ ಹೇಳಿದೆ. ಗೂಗಲ್‌ 2022ರಲ್ಲಿ ಅಮೇರಿಕಾದಲ್ಲಿ ಈ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಇದಾಗಿ ಸುಮಾರು 2 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಾಚರಿಸುತ್ತಿದೆ. ಗೂಗಲ್‌ ವ್ಯಾಲೆಟ್‌ ಇದೀಗ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಸದ್ಯಕ್ಕೆ ಗೂಗಲ್ ತನ್ನ ವ್ಯಾಲೆಟ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ.

ನೀವು ಗೂಗಲ್‌ ವ್ಯಾಲೆಟ್‌ನಲ್ಲಿ ಹಣಕಾಸಿನ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಉದಾಹರಣೆಗೆ ನಿಮ್ಮ ಚಲನಚಿತ್ರ ಟಿಕೆಟ್‌ಗಳು ಮತ್ತು ಈವೆಂಟ್ ಟಿಕೆಟ್‌ಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವ ಬದಲು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ದೇಶದ ದೊಡ್ಡ ಕಂಪನಿಗಳಾದ ಪಿವಿಪಿ ಮತ್ತು ಐನಾಕ್ಸ್‌ಗಳು ಈಗಾಗಲೇ ಗೂಗಲ್ ವ್ಯಾಲೆಟ್‌ನಲ್ಲಿ ಲಭ್ಯ.

ಬಳಸುವುದು ಹೇಗೆ?

  • ಗೂಗಲ್‌ ಪ್ಲೇ ಸ್ಟೋರ್‌ (Play Store)ಗೆ ಹೋಗಿ ಗೂಗಲ್‌ ವ್ಯಾಲೆಟ್‌ (Google Wallet) ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ.
  • ಅಪ್ಲಿಕೇಷನ್‌ ಓಪನ್‌ ಮಾಡಿ ‘Add to Walletʼ ಆಯ್ಕೆನ್ನು ಸೆಲೆಕ್ಟ್‌ ಮಾಡಿ. ಈಗ ನೀವು ಫೋಟೊ, ಲಾಯಲ್ಟಿ, ಗಿಫ್ಟ್‌ ಕಾರ್ಡ್‌ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಎನ್ನುವ ನಾಲ್ಕು ಆಯ್ಕೆಯನ್ನು ಪಡೆಯುತ್ತೀರಿ.
  • ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಬಳಸಿ ಪಾಸ್ ರಚಿಸಲು ಫೋಟೊ ಆಯ್ಕೆ ಮಾಡಿ.
  • ವಿವಿಧ ಬ್ರ್ಯಾಂಡ್‌ಗಳಿಂದ ನಿಮ್ಮ ಲಾಯಲ್ಟಿ ಪಾಯಿಂಟ್‌ಗಳನ್ನು ಸೇರಿಸಲು ಲಾಯಲ್ಟಿ ಆಯ್ಕೆ ಬಳಸಿ. ಅದೇ ರೀತಿ ಗಿಫ್ಟ್‌ ಕಾರ್ಡ್ ಮತ್ತು ಟ್ರಾನ್ಸ್‌ಪೋರ್ಟ್‌ ಪಾಸ್‌ ಅನ್ನು ನಿಮ್ಮ ವ್ಯಾಲೆಟ್‌ಗೆ ಸೇರಿಸಿ.

ಗಮನಿಸಿ ಈ ಆ್ಯಪ್‌ನಲ್ಲಿ ಮೊದಲೇ ಹೇಳಿದಂತೆ ನಗದು ಪಾವತಿ ಸಾಧ್ಯವಿಲ್ಲ. ಅದಕ್ಕಾಗಿ ಗೂಗಲ್‌ ಪೇಯನ್ನು ಬಳಸಿ.

ಇದನ್ನೂ ಓದಿ: Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್‌ ಪಾಠ ಮಾಡಿ

Continue Reading
Advertisement
Karnataka rain
ಮಳೆ8 mins ago

Karnataka Rain: ಶನಿವಾರ ಸಂಜೆ ಅಬ್ಬರಿಸಿದ ಗಾಳಿ ಮಳೆಗೆ ತೊಯ್ದು ತೊಪ್ಪೆಯಾದ ಮಂದಿ; ರಸ್ತೆಗೆ ಬಿದ್ದ ಮರಗಳು

IPL 2024
ಕ್ರೀಡೆ28 mins ago

IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

Arvind Kejriwal
ದೇಶ37 mins ago

ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Hair Color Fashion
ಫೋಟೊ38 mins ago

Hair Color Fashion: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

Akshaya Tritiya
ಬೆಂಗಳೂರು54 mins ago

Akshaya Tritiya: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಬಾಲ ರಾಮನ ಬೆಳ್ಳಿ ವಿಗ್ರಹದ ಪೂಜೆ ಸಂಪನ್ನ

Rishabh Pant
ಕ್ರೀಡೆ55 mins ago

Rishabh Pant : 2024ರ ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

Pooja Hegde
ಸಿನಿಮಾ1 hour ago

Pooja Hegde: ಕಾರ್ಕಳದ ಕಣಜಾರು ದೇಗುಲಕ್ಕೆ ಭೇಟಿ ನೀಡಿದ ನಟಿ ಪೂಜಾ ಹೆಗ್ಡೆ

Road Accident in chikodi maharashtra
ಬೆಳಗಾವಿ1 hour ago

Road Accident : ಟೈರ್‌ ಸ್ಫೋಟಕ್ಕೆ ಕ್ರೂಸರ್ ವಾಹನ ಪಲ್ಟಿ; ಮೂವರು ಮಹಿಳೆಯರ ದುರ್ಮರಣ

HD Deve Gowda
ಕರ್ನಾಟಕ1 hour ago

ಮಗ ಜೈಲಿಗೆ, ಮೊಮ್ಮಗ ನಾಪತ್ತೆ; ದೇವೇಗೌಡರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಮಠಾಧೀಶರು

Artificial Intelligence
ದೇಶ2 hours ago

Artificial Intelligence: 98 ವಿವಿಧ ಭಾಷೆಗಳಲ್ಲಿ ಹನುಮಾನ್‌ AI ತಂತ್ರಜ್ಞಾನ; ಏನಿದರ ವಿಶೇಷ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌