Poonam Pandey: ಪೂನಂ ಪಾಂಡೆ 'ಸತ್ತದ್ದು' ಸರಿ ಎಂದ ರಾಮ್​ ಗೋಪಾಲ್​ ವರ್ಮಾ! - Vistara News

ಬಾಲಿವುಡ್

Poonam Pandey: ಪೂನಂ ಪಾಂಡೆ ‘ಸತ್ತದ್ದು’ ಸರಿ ಎಂದ ರಾಮ್​ ಗೋಪಾಲ್​ ವರ್ಮಾ!

Poonam Pandey:  ʻಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ನಿಮಗೆ ಖುಷಿಯ ಜೊತೆ ದೀರ್ಘ ಆಯಸ್ಸು ಸಿಗಲಿ’ಎಂದು ಟ್ವೀಟ್‌ ಮಾಡಿದ್ದಾರೆ ರಾಮ್‌ಗೋಪಾಲ್‌ ವರ್ಮಾ.

VISTARANEWS.COM


on

Ram Gopal Varma reacts to Poonam Pandey facing criticism
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ಪೂನಂ ಪಾಂಡೆ (Poonam Pandey) ಸುಳ್ಳು ಸುದ್ದಿ ಹಬ್ಬಿಸಿರುವ ಬಗ್ಗೆ ನಟಿಯನ್ನು ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ನಟಿಯ ಈ ಸಾಹಸವನ್ನು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್‌ ವರ್ಮಾ ಶ್ಲಾಘಿಸಿದ್ದಾರೆ. ʻಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ನಿಮಗೆ ಖುಷಿಯ ಜತೆ ದೀರ್ಘ ಆಯಸ್ಸು ಸಿಗಲಿ’ಎಂದು ಟ್ವೀಟ್‌ ಮಾಡಿದ್ದಾರೆ ರಾಮ್‌ಗೋಪಾಲ್‌ ವರ್ಮಾ.

ರಾಮ್‌ಗೋಪಾಲ್‌ ವರ್ಮಾ ಈ ಬಗ್ಗೆ ಟ್ವೀಟ್‌ ಮಾಡಿ ʻʻಹೇ..ಪೂನಂ ಪಾಂಡೆ! ಈ ವಿಷಯದ ಬಗ್ಗೆ ನೀವು ಇಟ್ಟ ಹೆಜ್ಜೆಗೆ ಟೀಕೆಗಳು ಬರಬಹುದು. ಸಾವಿನ ಸುಳ್ಳು ಸುದ್ದಿ ಮೂಲಕ ನೀವು ಮೂಡಿಸಿದ ಜಾಗೃತಿ ಮತ್ತು ಮಾಡಿದ ಸಾಧನೆ, ನಿಮ್ಮ ಉದ್ದೇಶವನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ . ಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ .ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ. ನಿಮಗೆ ಖುಷಿಯ ಜತೆ ದೀರ್ಘ ಆಯಸ್ಸು ಸಿಗಲಿ’ ಎಂದು ರಾಮ್​ ಗೋಪಾಲ್​ ವರ್ಮಾ ಹಾರೈಸಿದ್ದಾರೆ.

ಪೂನಂ ಪಾಂಡೆಯ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚುಗೆಯ ಮಾತುಗಳಿಗೆ ನೆಟ್ಟಿಗರು ಪ್ರತಿಕ್ರಿಯಿಸಿ ಟ್ರೋಲ್‌ ಮಾಡುತ್ತಿದ್ದಾರೆ. “ಜಾಗೃತಿ ಮೂಡಿಸಲು ಹಲವು ಮಾರ್ಗಗಳಿವೆ. ಆದರೆ ಪೂನಂಪಾಂಡೆ ಮಾಡಿದ್ದು ಸರಿ ಅಲ್ಲʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು “ಸರ್, ನೀವು ಮಾತ್ರ ಇಂತಹ ಹುಚ್ಚು ಮಟ್ಟದ ಪ್ರಚಾರವನ್ನು ಪ್ರಶಂಸಿಸಿದ್ದು!ʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Oscars 2023 : ಆಸ್ಕರ್ ವಿಜೇತ ʼನಾಟು ನಾಟುʼ ಹಾಡಿನ ರೂವಾರಿ ಇವರು

ಘಟನೆ ಏನು?

ಬಾಲಿವುಡ್‌ ನಟಿ, ರೂಪದರ್ಶಿ ಪೂನಂ ಪಾಂಡೆ (Poonam Pandey) (32) ಫೆ.2ರಂದು ಮೃತಪಟ್ಟಿದ್ದಾರೆ ಎಂದು ಅವರ ಮ್ಯಾನೇಜರ್‌ ಪೋಸ್ಟ್‌ ಹಂಚಿಕೊಂಡಿದ್ದರು. ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಬಳಲುತ್ತಿದ್ದ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. “ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವ್ಯಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಅವರ ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

ನಾನು ಸತ್ತಿಲ್ಲ. ನಾನು ಜೀವಂತವಾಗಿದ್ದೇನೆ

ಇದಾದ ಒಂದು ದಿನದ ಬಳಿಕ ʻನಾನು ಸತ್ತಿಲ್ಲ. ನಾನು ಜೀವಂತವಾಗಿದ್ದೇನೆʼಎಂದು ಪೂನಂ ವಿಡಿಯೊ ಹಂಚಿಕೊಂಡರು. ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್​ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು.

ಇದಾದ ಬಳಿಕ ನಟಿಯ ವಿರುದ್ಧ ಅನೇಕರು ಭಾರಿ ಆಕ್ರೋಶ ಹೊರ ಹಾಕಿದರು. ಅರೆಸ್ಟ್‌ ಮಾಡಬೇಕು ಎಂದು ಉತ್ತಾಯಿಸಿದರು. ಕೆಲವು ಕಡೆಗಳಲ್ಲಿ ಕೇಸ್​ ಕೂಡ ದಾಖಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Lok Sabha Election 2024: ಬಾಲಿವುಡ್ ನಟ ಆಮೀರ್ ಖಾನ್ ಅವರು ಮುಂಬೈನಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ವೋಟ್‌ ಮಾಡಿದರು. ಆಮೀರ್‌ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಬಾಂದ್ರಾದ ಮತಗಟ್ಟೆಯಲ್ಲಿ ಆಮೀರ್ ಪುತ್ರಿ ಇರಾ ಖಾನ್ ಮತ್ತು ಜುನೈದ್ ಕೂಡ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಪರಾಜಿಗಳಿಗೂ ಪೋಸ್ ನೀಡಿದರು. ಆಮೀರ್ ತಾಯಿ ಜೀನತ್ ಖಾನ್ ಕೂಡ ಮತದಾನ ಮಾಡಿದರು.

VISTARANEWS.COM


on

Lok Sabha Election 2024 Shah Rukh Khan booth in Mumbai
Koo

ಬೆಂಗಳೂರು: ಲೋಕಸಭೆ 2024ರ (Lok Sabha Election 2024) ಚುನಾವಣೆಯಲ್ಲಿ ಮತ ಚಲಾಯಿಸಲು ನಟ ಶಾರುಖ್ ಖಾನ್ ಮುಂಬೈನ ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಮಗ ಅಬ್ರಾಮ್ ಕೂಡ ಅವರೊಂದಿಗೆ ಇದ್ದರು. ಶಾರುಖ್ (sharukh khan) ಕಪ್ಪು ಟಿ-ಶರ್ಟ್ ಧರಿಸಿ ಮತದಾನ ಕೇಂದ್ರಕ್ಕೆ ಆಗಮಿಸಿದರು. ಸುಹಾನಾ ನೀಲಿ ಸೂಟ್ ಮತ್ತು ಗೌರಿ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು.

ಮೇ 18ರಂದು ಶಾರುಖ್ ತಮ್ಮ ಅಭಿಮಾನಿಗಳಿಗೆ ಈ ವರ್ಷ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ಎಕ್ಸ್ ಪೋಸ್ಟ್‌ನಲ್ಲಿ, ಶಾರುಖ್‌ ʻʻಜವಾಬ್ದಾರಿಯುತ ಭಾರತೀಯ ಪ್ರಜೆಗಳಾದ ನಾವು ಈ ಸೋಮವಾರ ಮಹಾರಾಷ್ಟ್ರದಲ್ಲಿ ಮತದಾನದ ಹಕ್ಕನ್ನು ಚಲಾಯಿಸಬೇಕು. ಭಾರತೀಯರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಮತ್ತು ನಮ್ಮ ದೇಶದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸೋಣʼʼ ಎಂದು ಮನವಿ ಮಾಡಿದ್ದರು.

ಮುಂಜಾನೆ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಕಿಯಾರಾ ಆಡ್ವಾಣಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನಾದ್ಯಂತ ಮತದಾನ ಮಾಡಿದರು.

ಬಾಲಿವುಡ್ ನಟ ಆಮೀರ್ ಖಾನ್ ಅವರು ಮುಂಬೈನಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ವೋಟ್‌ ಮಾಡಿದರು. ಆಮೀರ್‌ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಬಾಂದ್ರಾದ ಮತಗಟ್ಟೆಯಲ್ಲಿ ಆಮೀರ್ ಪುತ್ರಿ ಇರಾ ಖಾನ್ ಮತ್ತು ಜುನೈದ್ ಕೂಡ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಪರಾಜಿಗಳಿಗೂ ಪೋಸ್ ನೀಡಿದರು. ಆಮೀರ್ ತಾಯಿ ಜೀನತ್ ಖಾನ್ ಕೂಡ ಮತದಾನ ಮಾಡಿದರು.

ಇದನ್ನೂ ಓದಿ: Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಇನ್ನು ಮುಂಬೈನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ವೋಟ್‌ ಮಾಡಿದ ಬಳಿಕ ಅಕ್ಷಯ್‌ ಕುಮಾರ್‌ ಮಾತನಾಡಿ ʻʻನನ್ನ ಭಾರತ ಅಭಿವೃದ್ಧಿ ಮತ್ತು ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಭಾರತವು ನನಗೆಸರಿ ಎನಿಸುವದಕ್ಕೆ ಮತ ಚಲಾಯಿಸಬೇಕುʼʼಎಂದರು.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

Continue Reading

ಬಾಲಿವುಡ್

Deepika Padukone: ವೋಟ್‌ ಮಾಡಿದ ದೀಪಿಕಾ ಪಡುಕೋಣೆ; ಅವರ ಹೊಟ್ಟೆ ನೋಡಿ ಗಂಡು ಮಗು ಎಂದ ನೆಟ್ಟಿಗರು!

Deepika Padukone: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

VISTARANEWS.COM


on

Deepika Padukone Enjoy Lunch Date After Casting Their Vote
Koo

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ ಆಗುತ್ತಿದೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಮತ ಚಲಾಯಿಸಿದ್ದಾರೆ. ಇದೀಗ ದೀಪಿಕಾ ಅವರ ಬೇಬಿ ಬಂಪ್‌ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗುತ್ತಿವೆ. ಈ ಮೂಲಕ ಜೋಡಿ ಬಾಡಿಗೆ ತಾಯ್ತನ ಆಶ್ರಯಿಸಿದ್ದಾರೆ ಎಂಬ ವದಂತಿಗೂ ತೆರೆ ಬಿದ್ದಿದೆ. ಲೂಸ್ ಶರ್ಟ್ ಧರಿಸಿದ್ದರೂ ಐದು ತಿಂಗಳ ಗರ್ಭಿಣಿಯಾಗಿರುವ ದೀಪಿಕಾಳ ಬೇಬಿ ಬಂಪ್ ಎದ್ದು ಕಾಣಿಸುತ್ತಿತ್ತು. ನೆಟ್ಟಿಗರು ದೀಪಿಕಾ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ, ಈ ಜೋಡಿಗೆ ಗಂಡು ಮಗುವೇ ಆಗುವುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲಿ ದೀಪಿಕಾ ʻʻಬಿಳಿ ಶರ್ಟ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡರು. ರಣವೀರ್ ಹೆಂಡತಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ದೀಪಿಕಾ ಮತ್ತು ರಣವೀರ್ ಮತಗಟ್ಟೆಗೆ ತೆರಳುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ರಣವೀರ್ ಅವರು ದೀಪಿಕಾ ಅವರನ್ನು ಬೂತ್‌ಗೆ ಕರೆದೊಯ್ಯುವಾಗ ಕೈ ಹಿಡಿದು ಕರೆದುಕೊಂಡು ಹೋದರು. ದೀಪಿಕಾ ಇದೇ ಮೊದಲ ಬಾರಿಗೆ ತನ್ನ ಬೇಬಿ ಬಂಪ್ ತೋರಿಸಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼ ಎನ್ನಲಾಗಿತ್ತು.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ಇದನ್ನೂ ಓದಿ: Deepika Padukone: ಕ್ಯಾಮೆರಾ ತಳ್ಳಿ ಮುಂದೆ ನಡೆದ ದೀಪಿಕಾ! ನಾಚಿಕೆಗೇಡಿನ ವರ್ತನೆ ಅಂದ್ರು ನೆಟ್ಟಿಗರು!

ಮಗುವಿನ ನಿರೀಕ್ಷೆ ಹೊಸ್ತಿಲಲ್ಲೇ ಮದುವೆ ಫೋಟೊಗಳು ಡಿಲಿಟ್‌!

ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸಂದರ್ಭದಲ್ಲೇ ತಮ್ಮ ಮದುವೆ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಡಿಲಿಟ್‌ ಮಾಡಿದ್ದರು. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿತ್ತು.

Continue Reading

ಬಾಲಿವುಡ್

Yami Gautam: ನಟಿ ಯಾಮಿ ಗೌತಮ್‌ಗೆ ಗಂಡು ಮಗು; ಕಂದಮ್ಮನ ಹೆಸರೇನು?

Yami Gautam: ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕೆ ಆದಿತ್ಯಾ ಧಾರ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ಯಾಮಿ ಮಿಂಚಿದ್ದರು. ಕನ್ನಡದ ‘ಉಲ್ಲಾಸ ಉತ್ಸಾಹ’ ಆಕೆ ನಟಿಸಿದ ಮೊದಲ ಸಿನಿಮಾ. ಬಾಲಿವುಡ್‌ನಲ್ಲಿ ‘ವಿಕ್ಕಿ ಡೋನರ್’ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು.

VISTARANEWS.COM


on

Yami Gautam welcome baby boy
Koo
ನಟಿ ಯಾಮಿ ಗೌತಮ್‌ (Yami Gautam) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಕ್ಷಯ ತೃತೀಯ ದಿನವೇ(ಮೇ 10) ಮಗುವಿಗೆ ಜನ್ಮ ನೀಡಿದ್ದು ಇದೀಗ ಆ ವಿಚಾರ ಬಹಿರಂಗಪಡಿಸಿದ್ದಾರೆ.

ʻʻಪೋಷಕರಾಗಿ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ. ಅವನು ಸಾಧಿಸುವ ಪ್ರತಿ ಮೈಲುಗಲ್ಲು, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದಾರಿದೀಪವಾಗಿ ಬೆಳೆಯುತ್ತಾನೆ ಎಂಬ ಭರವಸೆ ಮತ್ತು ನಂಬಿಕೆಯಿಂದ ನಾವಿದ್ದೇವೆʼʼ‌ ಎಂದು ಯಾಮಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹಾಗೇ ಮಗನ ಹೆಸರನ್ನು ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: Kamal Haasan: ಕಮಲ್‌ ಹಾಸನ್‌ ಅಭಿನಯದ ‘ಇಂಡಿಯನ್ 2′  ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

‘ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ.

Continue Reading

ಬಾಲಿವುಡ್

Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Salman Khan: ಅರ್ಹಾನ್ ಖಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಏಕೈಕ ಪುತ್ರ, ಈತ 2002ರಲ್ಲಿ ಜನಿಸಿದನು. ಅರ್ಹಾನ್ ಖಾನ್ ಮಲೈಕಾ ಅರೋರಾ ಅವರು ವಿವಾಹವಾಗಿ 19 ವರ್ಷಗಳ ಕಾಲ ಜೊತೆಗಿದ್ದರು. ನಂತರ 2016ರಲ್ಲಿ ಬೇರ್ಪಟ್ಟು 2017ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು. ನಂತರ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಕಾನ್ ಅವರನ್ನು ಮದುವೆಯಾದರು. ಮಲೈಕಾ ಅರೋರಾ ಅವರು ಮಾತ್ರ ವರ್ಷಗಳಿಂದ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

VISTARANEWS.COM


on

Salman Khan Ultimate Sex Symbol Says Malaika Arora
Koo

ಬೆಂಗಳೂರು: ಸಲ್ಮಾನ್ ಖಾನ್ (Salman Khan) ಅವರ ಮಾಜಿ ಅತ್ತಿಗೆ ಮಲೈಕಾ ಅರೋರಾ (Malaika Arora) ಅವರು ಬಾಲಿವುಡ್‌ನ ಹಾಟೆಸ್ಟ್ ಸ್ಟಾರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸಂದರ್ಶನವೊಂದರಲ್ಲಿ ʻʻಅರ್ಬಾಜ್ ಖಾನ್ ನನ್ನ ಪಾಲಿಗೆ ಪರ್ಮನೆಂಟ್ ಗಂಡ. ಆದರೆ ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ಅಲ್ಟಿಮೇಟ್ ಸೆಕ್ಸ್ ಸಿಂಬಲ್ʼʼಎಂದು ಹೇಳಿಕೊಂಡಿದ್ದಾರೆ.

ಇದೀಗ ಮಲೈಕಾ ಅವರ ಹಳೆಯ ಸಂದರ್ಶನದ ವಿಡಿಯೊ ವೈರಲ್‌ ಆಗುತ್ತಿದೆ. ʻʻಭಾರತದ ಪ್ರಮುಖ ಸೆಕ್ಸ್‌ ಸಿಂಬಾಲ್‌ ಪುರುಷ ಯಾರು?ʼʼ ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ, “ನಾನು ನಿಸ್ಸಂದೇಹವಾಗಿ ಸಲ್ಮಾನ್ ಖಾನ್ ಎಂದು ಭಾವಿಸುತ್ತೇನೆʼʼ ಎಂದು ಹೇಳಿದ್ದಾರೆ.

“ನನಗೆ, ಅರ್ಬಾಜ್ ನನ್ನ ಪಾಲಿಗೆ ಶಾಶ್ವತ ಗಂಡಸು (Arbaaz is my eternal man). ಇಲ್ಲಿಯವರೆಗೆ, ನಾವು ನಿಶ್ಚಿತಾರ್ಥ ಅಷ್ಟೇ ಮಾಡಿಕೊಂಡಿದ್ದೇವೆ ಎಂದು ಅನ್ನಿಸುತ್ತದೆ. ನಾವು ಮದುವೆಯಾಗಿದ್ದೇವೆ. ಮಗುವನ್ನು ಹೊಂದಿದ್ದೇವೆ ಎಂದು ನನಗೆ ಈಗಲೂ ಅನಿಸುವುದಿಲ್ಲ. ಆದರೆ ಸಲ್ಮಾನ್ ಖಾನ್ ಭಾರತದ ಅಲ್ಟಿಮೇಟ್ ಸೆಕ್ಸ್ ಸಿಂಬಲ್ ವ್ಯಕ್ತಿ ಎಂದು ನಾನು ಭಾವಿಸುತ್ತೇನೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

Malaika arora reveal male sex symbol in the country in old zoom tv interview
byu/Sea-Fix691 inBollyBlindsNGossip

ಅರ್ಹಾನ್ ಖಾನ್ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಏಕೈಕ ಪುತ್ರ, ಈತ 2002ರಲ್ಲಿ ಜನಿಸಿದ್ದ. ಅರ್ಬಾಜ್ ಖಾನ್ – ಮಲೈಕಾ ಅರೋರಾ ಅವರು ವಿವಾಹವಾಗಿ 19 ವರ್ಷಗಳ ಕಾಲ ಜೊತೆಗಿದ್ದರು. ನಂತರ 2016ರಲ್ಲಿ ಬೇರ್ಪಟ್ಟು 2017ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡರು. ನಂತರ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ಮದುವೆಯಾದರು. ಮಲೈಕಾ ಅರೋರಾ ಅವರು ಮಾತ್ರ ವರ್ಷಗಳಿಂದ ತನಗಿಂತ ಕಿರಿಯ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

ನಟಿ ಮಲೈಕಾ ಅರೋರಾ (Malaika Arora) ಮತ್ತು ಅವರ ಮಾಜಿ ಪತಿ ಅರ್ಬಾಜ್ ಖಾನ್ ( Arbaaz Khan) ಅವರ ಮಗ ಅರ್ಹಾನ್ ಖಾನ್ ಅವರ ʻಪಾಡ್‌ಕಾಸ್ಟ್ ದಮ್ ಬಿರಿಯಾನಿʼಯ (‘Dumb Biryani’) ಎರಡನೇ ಸಂಚಿಕೆಯಲ್ಲಿ ನಟಿ ಈ ಹಿಂದೆ ಮಾಜಿ ಪತಿ ಅರ್ಬಾಜ್ ಖಾನ್‌ರಿಂದ ತನ್ನ ಮಗ ಯಾವ ಗುಣಗಳನ್ನು ಅನುವಂಶಿಕವಾಗಿ ಪಡೆದಿದ್ದಾನೆ ಎಂಬುದನ್ನು ಮಲೈಕಾ ಅರೋರಾ ಹೇಳಿದ್ದರು. ಮೊದಲಿಗೆ ಅರ್ಹಾನ್ ಮಲೈಕಾಗೆ ತಂದೆ ಅರ್ಬಾಜ್‌ ಅವರ ಕೆಲವು ಗುಣಗಳ ಬಗ್ಗೆ ಕೇಳಿದರು. ಅದಕ್ಕೆ ಮಲೈಕಾ ಉತ್ತರಿಸಿ ʻʻನಿನ್ನ ಮ್ಯಾನರಿಸಂ ನಿನ್ನ ತಂದೆಯಂತೆಯೇ ಇದೆ. ಇಬ್ಬರೂ ನಡುವೆ ಹಲವು ವಿಚಾರಗಳಿಗೆ ಹೋಲಿಕೆ ಇದೆ. ಅರ್ಬಾಜ್ ಅವರ ಮ್ಯಾನರಿಸಂ ಅಷ್ಟಾಗಿ ಅಟ್ರ್ಯಾಕ್ಟಿವ್‌ ಆಗಿಲ್ಲʼʼ ಎಂದಿದ್ದರು.

ಮಲೈಕಾ ಮಾತು ಮುಂದುವರಿಸಿ ʻʻಅರ್ಬಾಜ್ ನ್ಯಾಯಯುತ ವ್ಯಕ್ತಿ. ಅವರು ಎಂದಿಗೂ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸಲು ಹೋಗುವುದಿಲ್ಲ, ಕೆಲವು ವಿಷಯಗಳ ಬಗ್ಗೆ ತುಂಬಾ ಸ್ಪಷ್ಟವಾಗಿರುತ್ತಾರೆ. ಆ ಗುಣ ನಿನ್ನಲ್ಲಿ ಕೂಡ ಇದೆʼʼ ಎಂದಿದ್ದರು.

Continue Reading
Advertisement
KKR vs SRH
ಕ್ರೀಡೆ9 mins ago

KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ

Air Crashes
ವಿದೇಶ11 mins ago

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

Phone Tapping
ಕರ್ನಾಟಕ21 mins ago

Phone Tapping: ಎಚ್‌ಡಿಕೆ ಫೋನ್‌ ಟ್ಯಾಪ್‌ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ

Star Fashion
ಫ್ಯಾಷನ್22 mins ago

Star Fashion: ಮಾಲಾಶ್ರೀ ಮಗಳ ಬಿಗ್‌ ಬ್ಲ್ಯಾಕ್‌ ಜುಮ್ಕಾ ಲವ್‌!

Benjamin Netanyhu
ವಿದೇಶ24 mins ago

ಇಸ್ರೇಲ್‌ ಪಿಎಂ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಉಗ್ರರಿಗೆ ಜಾಗತಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್! ಶೀಘ್ರ ಬಂಧನ?

Legislative Council Election dates fixedVoting on June 13
ರಾಜಕೀಯ27 mins ago

Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Covaxin Safety
ದೇಶ1 hour ago

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Food department deletes name from ration card list even though it is alive
ವಿಜಯನಗರ1 hour ago

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

History Of Ice Cream
ಆಹಾರ/ಅಡುಗೆ1 hour ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ1 hour ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌