Sadguru Column : ಹಿಂದು ಒಂದು `ಇಸಂ' ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ - Vistara News

ಧಾರ್ಮಿಕ

Sadguru Column : ಹಿಂದು ಒಂದು `ಇಸಂ’ ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ

Sadguru Column : ಸದ್ಗುರು ಜಗ್ಗಿ ವಾಸುದೇವ್‌ ಅವರು ಹಿಂದುತ್ವವನ್ನು ಇಲ್ಲಿ ಪರಿಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಯಾಕೆ ಹಿಂದುತ್ವ ಒಂದು ಇಸಂ ಅಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಯಾಕೆ ಹಿಂದು ಧರ್ಮ ಎಲ್ಲವನ್ನೂ ಒಳಗೊಂಡಿದೆ ಎನ್ನುವುದಕ್ಕೂ ಉತ್ತರ ನೀಡಿದ್ದಾರೆ.

VISTARANEWS.COM


on

Sadguru Column hindu god
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Sadhuru Jaggi Vasudev

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ವಾಸ್ತವದಲ್ಲಿ ಹಿಂದುತ್ವ ಎಂಬುದಿಲ್ಲ (Hindutva does not exist). ಈ ಪದ ಹಾಗೂ ಕಲ್ಪನೆಯು ಇತ್ತೀಚಿನದು. ಹಿಂದು ನಾಗರಿಕತೆಯು ಸಿಂಧು ನದಿಯ ತೀರದಲ್ಲಿ ಹುಟ್ಟಿಕೊಂಡಿತು (Sadguru Column). ಇಂದು ಅದನ್ನು ಆಂಗ್ಲ ಭಾಷೆಯಲ್ಲಿ ಇಂಡಸ್ ಎಂದು ಕರೆದರು. ಪರ್ಷಿಯನ್ನರು ಬಂದಾಗ ಹಿಂದು ಎಂಬ ಪದವನ್ನು ಬಳಸಿದರು. ಸಿಂಧು ನದಿಯಾಚೆ ನೆಲೆಸಿದವರನ್ನು ಸೂಚಿಸಲು ಸಂಸ್ಕೃತ ಮೂಲದ ಸಿಂಧು ಎಂಬುದು ಹಿಂದು ಎಂದಾಯಿತು. ಮೂಲಭೂತವಾಗಿ, ಹಿಂದು ಎನ್ನುವುದು ಒಂದು ಭೌಗೋಳಿಕ ಹಾಗೂ ಸಂಸ್ಕೃತಿಯ ಗುರುತಷ್ಟೆ. ಅದನ್ನು ಪ್ರತ್ಯೇಕವಾಗಿ ಸಂಘಟಿಸುವ ಉದ್ದೇಶ ಎಂದಿಗೂ ಇರಲಿಲ್ಲ. ಮೂಲಭೂತವಾಗಿ ಈ ಪರಿಪೂರ್ಣ ಸಂಸ್ಕೃತಿಯು ವ್ಯಕ್ತಿಯ ಪೂರ್ಣ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟದ್ದು.

Sadguru Column hindu Dharma

ಹಿಂದು, ಎಂದಿಗೂ ಒಂದು “ಇಸಂ” ಆಗಿರಲಿಲ್ಲ (Hinduism). ಈ ಭೌಗೋಳಿಕ ಹಾಗೂ ಸಂಸ್ಕೃತಿಯ ಅನನ್ಯತೆಯನ್ನು ಒಂದು ಧರ್ಮವನ್ನಾಗಿ ಸಂಘಟಿಸುವ ಪ್ರಯತ್ನವು ಇದುವರೆಗೂ ಫಲಕಾರಿಯಾಗಿಲ್ಲ. ಏಕೆಂದರೆ ಸನಾತನ ಧರ್ಮವೆಂದು ಕರೆಯುವ ಹಿಂದು ಪದ್ಧತಿಯ ಜೀವನ ಅಥವಾ ಸಾರ್ವತ್ರಿಕ ನಿಯಮವು ಎಲ್ಲ ಗುಣಗಳನ್ನೂ ಒಳಗೊಂಡಿದ್ದಾಗಿದೆ ಮತ್ತು ಯಾವುದನ್ನೂ ಅದರಿಂದ ತೆಗೆದು ಹಾಕಿಲ್ಲ. ಹಿಂದು ಮಾದರಿಯ ಜೀವನವು ಒಂದು ಸಂಘಟಿತ ನಂಬಿಕೆಯ ಪದ್ಧತಿಯಲ್ಲ. ಅದೊಂದು ಮುಕ್ತಿ ಮಾರ್ಗದ ವಿಜ್ಞಾನವಾಗಿದೆ.

ಪ್ರಪಂಚದ ಘರ್ಷಣೆಗಳನ್ನು ಸದಾ ಒಳ್ಳೆಯದರ ವಿರುದ್ಧ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಘರ್ಷಣೆಯು – ಒಬ್ಬರ ನಂಬಿಕೆಯ ವಿರುದ್ಧ ಇನ್ನೊಬ್ಬರ ನಂಬಿಕೆಯದ್ದಾಗಿದೆ. ಆದರೆ ಈ ಸಂಸ್ಕೃತಿಯಲ್ಲಿ ಪುರೋಹಿತಶಾಹಿ ದೇವಪ್ರಭುತ್ವವಾದಿ ರಾಜ್ಯಗಳಿರಲಿಲ್ಲ. ಆಳುವವನಿಗೆ ಅವನದೇ ಆದ ಮತಧರ್ಮವಿದ್ದರೆ, ಪ್ರಜೆಗಳು ತಮ್ಮ ಆಯ್ಕೆಯ ಮತಧರ್ಮವನ್ನು ಅನುಸರಿಸಬಹುದಾಗಿತ್ತು. ಅಲ್ಲಿ ಘರ್ಷಣೆಯೇ ಇರಲಿಲ್ಲ. ಜನರು ಮತಧರ್ಮವನ್ನು ಒಂದು ಸಂಘಟಿತ ಪ್ರಕ್ರಿಯೆಯಾಗಿ ನೋಡಲಿಲ್ಲ.

Sadguru Column : ಬೇರೆ ಧರ್ಮಗಳು ವಿರೋಧಿಸಿದವರನ್ನು ಮೊದಲು ಹೇಳಿದ್ದೇ ʻಸಾಯಿಸಿʼ!

ಪ್ರಪಂಚದ ಇತರ ಸಂಸ್ಕೃತಿಗಳಲ್ಲಿ, ಆ ಕಾಲದಲ್ಲಿ ಪ್ರಸ್ತುತದಲ್ಲಿದ್ದ ಯಾವುದೇ ಸಂಘಟಿತ ಮತಧರ್ಮದ ವಿರುದ್ಧ ಮಾತನಾಡಿದರೆ, ಜನರ ಮೊದಲ ಪ್ರತಿಕ್ರಿಯೆ, ಸಾಯಿಸಿ!!! ಎಂದಾಗಿತ್ತು. ಸಾಕ್ರಟೀಸ್, ಮನ್ಸೂರ್ ಅಥವಾ ಜೀಸಸ್ ರಂತಹ ಎಷ್ಟೋ ಜನ ಪ್ರಸಿದ್ಧರನ್ನು ಇದೇ ಕಾರಣಕ್ಕಾಗಿಯೇ ಕೊಲ್ಲಲಾಗಿದ್ದು. ಪ್ರಪಂಚದ ಪಾಶ್ಚಾತ್ಯ ಭಾಗಗಳಲ್ಲಿ ಸಾಧಕರು ಬುದ್ಧಿವಂತಿಕೆಯಿಂದ ಮೌನವಾಗಿದ್ದು, ಸಾಧನೆಯಲ್ಲಿ ತೊಡಗಿರುತ್ತಿದ್ದರು. ಏನಾದರು ಜೋರಾಗಿ ಧ್ವನಿ ಎತ್ತಿದರೆ ಮರಣಶಿಕ್ಷೆ. ಯೂರೋಪಿನಲ್ಲಿ ಎರಡು ಮಿಲಿಯನ್ ಸ್ತ್ರೀಯರನ್ನು ಸುಟ್ಟು ಹಾಕಲಾಯಿತು, ಏಕೆಂದರೆ ಸಂಘಟಿತ ಮತಧರ್ಮದ ವಿರುದ್ಧ ಅವರ ಪ್ರದರ್ಶನವು ಒಂದು ಬೆದರಿಕೆ ಎಂದು ಪರಿಗಣಿಸಲಾಯಿತು.

Sadguru Column Jesus Christ

ಜೀಸಸ್ ಬಂಡಾಯವಾಗುವಂತದೇನನ್ನೂ ಮಾಡಲಿಲ್ಲ. ಪೂಜಾ ಮಂದಿರಗಳನ್ನು ಕೆಡವಲು ಹೇಳಲಿಲ್ಲ, ದೇವರುಗಳನ್ನು ಸ್ಥಾನಪಲ್ಲಟಗೊಳಿಸಿರೆಂದಾಗಲಿ, ಅಥವಾ ಮತಧರ್ಮವನ್ನು ಬದಲಾಯಿಸಿ ಎಂದಾಗಲಿ ಕರೆ ನೀಡಲಿಲ್ಲ. ಅವರು ಕೇವಲ ದೇವಮಂದಿರದಾಚೆ ತಮ್ಮ ವ್ಯವಹಾರಗಳನ್ನು ಮಾಡಿರೆಂದರು. ಅದಕ್ಕಾಗಿ ಅವರಿಗೆ ಘೋರ ಶಿಕ್ಷೆ ನೀಡಲಾಯಿತು.

Sadguru Column : ಬುದ್ಧ ದೇವರಿಲ್ಲ ಎಂದಾಗಲೂ ವಿರೋಧಿಸಲಿಲ್ಲ

ಜೀಸಸ್‌ಗಿಂತಲೂ ಐನೂರು ವರ್ಷಗಳ ಹಿಂದೆ ಗೌತಮಬುದ್ಧನು, ಹಿಂದು ದೇವರುಗಳನ್ನು ಪರಿಹಾಸ್ಯ ಮಾಡಿ, ನೀವು ಸರ್ಪಗಳು, ಮರಗಳು, ಗೋವುಗಳ ಆರಾಧಕರಾಗಿದ್ದೀರಿ, ನಿಮಗೆ ದೇವರೆಂದರೆ ಏನೆಂಬುದೇ ತಿಳಿದಿಲ್ಲ ಎಂದ. ಅದಕ್ಕೆ ಉತ್ತರವಾಗಿ ಜನರು ಒಬ್ಬನೇ ದೇವನೆಂಬುದು ನಮಗೂ ತಿಳಿದಿದೆ, ಆದರೆ ನಾವು ವಿಭಿನ್ನತೆಯನ್ನು ಆನಂದಿಸುತ್ತೇವೆ ಎಂದರು. ಮುಂದುವರಿದು ಗೌತಮನು, ದೇವರೇ ಇಲ್ಲ ಎಂದನು. ಹಿಂದುಗಳು ಹಿಮ್ಮೆಟ್ಟಿದರು. ಉಪನಿಷತ್ತುಗಳ ಮೊರೆ ಹೊಕ್ಕರು, “ನೋಡಿಲ್ಲಿ, ನಮ್ಮ ಉಪನಿಷತ್ತುಗಳು ದೇವರಿಲ್ಲವೆಂದು ಹೇಳುತ್ತವೆಯಾದರೂ, ಆತ್ಮ ಎಂಬುದಿದೆ ಹಾಗೂ ಸಾರ್ವತ್ರಿಕ ಆತ್ಮವಾದ ಪರಮಾತ್ಮ ಎಂಬುದಿದೆ ಎಂದು ಸಾರುತ್ತದೆ” ಎಂದರು. ಗೌತಮಬುದ್ಧನು “ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ, ನೀವು ಅನಾತ್ಮ” ಎಂದನು.

Sadguru Column buddha

ಹೀಗೆ ಆತನು ಎಲ್ಲವನ್ನೂ ವಿರೋಧಿಸಿ ಪರಿಹಾಸ್ಯ ಮಾಡಿದರೂ ಅವನಿಗೆ ಯಾರೂ ಕಲ್ಲು ಹೊಡೆಯಲಿಲ್ಲ. ವಿಷ ಉಣಿಸಲಿಲ್ಲ ಅಥವಾ ಶಿಲುಬೆಗೇರಿಸಲಿಲ್ಲ. ಬದಲಿಗೆ, ಅವನೊಡನೆ ವಾದಿಸಿದರು. ತಿಂಗಳಾನುಗಟ್ಟಲೆ ವಾದವಿವಾದ ನಡೆದು ವಾದದಲ್ಲಿ ಸೋತಾಗ ಅವನ ಶಿಷ್ಯರಾದರು! ಏಕೆಂದರೆ ಅನ್ವೇಷಣೆಯು ಸತ್ಯವಾದುದು. ಜನರು ಕುಳಿತು ‘ನಾವು ತಿಳಿದುಕೊಂಡಿರುವುದು ಸರಿಯೋ ಅಥವಾ ಅವರ ವಾದವು ಸರಿಯೋ’ ಎಂದು ಸಮಾಲೋಚಿಸುತ್ತಿದ್ದರು. ಅದೊಂದು ವಿಭಿನ್ನ ರೀತಿಯ ಪರಿಶೋಧನೆ. ಜನರು ಜ್ಞಾನಕ್ಕಾಗಿ ಅನ್ವೇಷಿಸುತ್ತಿದ್ದರು. ಅವರು ಕೇವಲ ತಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಪ್ರಯತ್ನಿಸಲಿಲ್ಲ. ಹಿಂದೂಗಳ ಜೀವನಶೈಲಿ ನಂಬಿಕೆಯದಲ್ಲ. ಕೆಲವರು ದೇವರನ್ನು ನಂಬಿದರೆ ಮತ್ತೆ ಕೆಲವರು ದೇವರಿಲ್ಲವೆಂಬ ಆಯ್ಕೆಯನ್ನೂ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆರಾಧನೆಯ ಮಾರ್ಗವಿದೆ, ಮುಕ್ತಿಯ ಮಾರ್ಗವಿದೆ. ಒಂದೇ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಚ್ಛೆಯ ದೇವರುಗಳನ್ನು ಪೂಜಿಸಬಹುದು, ಪೂಜಿಸದೆಯೂ ಒಳ್ಳೆಯ ಹಿಂದುವಾಗಬಹುದು.

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯರ ಜೀವನದ ಏಕಮಾತ್ರ ಗುರಿಯೆಂದರೆ ಮುಕ್ತಿ, ಸೀಮಿತವನ್ನು ಮೀರಿ ಹೋಗುವುದು. ಈ ಸಂಸ್ಕೃತಿಯಲ್ಲಿ ದೇವರೇ ಅಂತಿಮವೆಂದು ಪರಿಗಣಿಸುವುದಿಲ್ಲ. ಜಗತ್ತಿನಲ್ಲಿ ಹಿಂದು ಜನತೆ ಮಾತ್ರ – ದೇವರಿಲ್ಲದ ಕಲ್ಪನೆಗೂ ಮಾನ್ಯತೆ ನೀಡಿದೆ. ನೀವೊಂದು ಕಲ್ಲನ್ನಾಗಲಿ, ಗೋವನ್ನಾಗಲಿ, ನಿಮ್ಮ ತಾಯಿಯನ್ನಾಗಲಿ ಪೂಜಿಸಬಹುದು – ನಿಮಗಿಷ್ಟವಾದುದನ್ನು ಪೂಜಿಸಬಹುದು. ಬೇರೆಲ್ಲ ಕಡೆ ದೇವರು ನಮ್ಮನ್ನು ಸೃಷ್ಟಿಸಿದ ಎಂದು ಜನರು ನಂಬುತ್ತಾರೆ. ಭಾರತದಲ್ಲಿ, ನಾವು ದೇವರನ್ನು ಸೃಷ್ಟಿಸಿದೆವೆಂದು’, ನಮಗೆ ತಿಳಿದಿದೆ. ಅದಕ್ಕಾಗಿಯೇ ನಮಗೆ ಯಾವ ರೀತಿಯ ದೇವರನ್ನಾದರೂ ಸೃಷ್ಟಿಸಲು ಸ್ವಾತಂತ್ರ್ಯವಿದೆ.

ಇದನ್ನೂ ಓದಿ: Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

ಪ್ರಾಚ್ಯ ದೇಶಗಳಲ್ಲಿ ಆಧ್ಯಾತ್ಮಿಕತೆ ಹಾಗೂ ಮತಧರ್ಮ ಇವೆರಡೂ ಎಂದಿಗೂ ಸಂಘಟಿತ ಪ್ರಕ್ರಿಯೆಯಾಗಿರಲಿಲ್ಲ – ಕೇವಲ ಸರ್ವರಿಗೂ ಆಧ್ಯಾತ್ಮಿಕತೆ ದೊರೆಯುವಂತೆ ಮಾಡುವುದಾಗಿತ್ತು. ಗೆಲುವು ಸಾಧಿಸುವುದಕ್ಕಲ್ಲ. ರೈತನು ತನ್ನ ನೇಗಿಲನ್ನು ಪೂಜಿಸಿದರೆ, ಮೀನುಗಾರನು ತನ್ನ ದೋಣಿಯನ್ನು ಪೂಜಿಸಿದನು; ಜನರು ತಮ್ಮ ಜೀವನದ ಪ್ರಮುಖ ವಿಷಯಕ್ಕೆ ಸಂಬಂಧ ಕಲ್ಪಿಸಿ ಅದನ್ನು ಪೂಜಿಸಲು ಮೊದಲಾದರು. ಅದು ಒಳ್ಳೆಯದೇ, ಮೂಲಭೂತವಾಗಿ, ಪ್ರಾಚ್ಯ ರಾಷ್ಟ್ರಗಳಲ್ಲಿ ಮತಧರ್ಮವು ನಿಮ್ಮನ್ನು ಕುರಿತದ್ದೇ ಹೊರತು ದೇವರನ್ನು ಕುರಿತದ್ದಲ್ಲ. ಮತಧರ್ಮವು ಮುಕ್ತಿಯ ಕುರಿತದ್ದಾಗಿದೆ. ದೇವರು ಕೇವಲ ಮತ್ತೊಂದು ಮುನ್ನಡೆಯ ಸೋಪಾನವಷ್ಟೇ – ಅದನ್ನು ನೀವು ಅಂತಿಮ ಮುಕ್ತಿಗೆ ಉಪಯೋಗಿಸಬಹುದು ಅಥವಾ ಬಿಡಬಹುದು. ಈ ಸಂಸ್ಕೃತಿಯಲ್ಲಿ ದೇವರ ಪ್ರಾಮುಖ್ಯತೆಗಿಂತಲೂ, ಮನುಷ್ಯನ ಯೋಗಕ್ಷೇಮ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚು ಮಾನ್ಯತೆ ನೀಡಲಾಗಿದೆ.

ನಮ್ಮದೊಂದು ದೇವರಿಲ್ಲದ ಆದರೆ ಭಕ್ತಿಯುತ ದೇಶ. “ದೇವರಿಲ್ಲದ” ಎನ್ನುವುದರರ್ಥ, ಮನುಷ್ಯರು ದೇವರುಗಳ ಆಯ್ಕೆಯನ್ನು ಮಾಡಿಕೊಳ್ಳುವುದಷ್ಟೇ ಅಲ್ಲದೆ, ಅವರಿಗೆ ಸಂಬಂಧಿಸಿದ ದೇವರನ್ನು ಸೃಷ್ಟಿಸಿಕೊಳ್ಳಬಹುದಾದ ಸ್ವಾತಂತ್ರ್ಯವಿದೆ. ಆದ್ದರಿಂದ ದೇವರನ್ನು ಸೃಷ್ಟಿಸುವ ತಂತ್ರಜ್ಞಾನ, ವಿಜ್ಞಾನವನ್ನು ವಿಕಸಿತಗೊಳಿಸಿ ನಾನಾ ರೀತಿಯ ರೂಪಗಳು, ಶಕ್ತಿರೂಪಗಳು ಹಾಗೂ ಕ್ಷೇತ್ರಗಳನ್ನು ಪವಿತ್ರಗೊಳಿಸಲಾಗಿದೆ.

Sadguru Column Hindu

Sadguru Column : ವ್ಯಕ್ತಿಯಲ್ಲಿ ಪೂಜ್ಯ ಭಾವನೆ ಸೃಷ್ಟಿಸುವ ಪ್ರಕ್ರಿಯೆಯೇ ದೇವರ ಕಲ್ಪನೆ

ದೇವರು ಎಂಬ ಕಲ್ಪನೆಯ ಮೂಲೋದ್ದೇಶವೆಂದರೆ, ವ್ಯಕ್ತಿಯಲ್ಲಿ ಭಕ್ತಿ, ಪೂಜ್ಯ ಭಾವನೆಯನ್ನು ಸೃಷ್ಟಿಸುವುದು. ನೀವು ಏನನ್ನು ಆರಾಧಿಸುತ್ತೀರೆಂಬುದು ಮುಖ್ಯವಲ್ಲ. ಒಂದನ್ನು ಇಷ್ಟಪಟ್ಟು ಮತ್ತೊಂದನ್ನು ಇಷ್ಟಪಡದೇ ಇರುವುದಲ್ಲ. ನಿಮ್ಮ ಜೀವನದ ಗುಣಮಟ್ಟವನ್ನು ಭಕ್ತಿಭಾವನೆಯಿಂದ ಯೋಜಿಸಿಕೊಂಡಾಗ ನೀವು ಜೀವನಕ್ಕೆ ಹೆಚ್ಚು ಸ್ಪಂದಿಸುವಿರಿ ಅಥವಾ ಜೀವನವನ್ನು ಗ್ರಹಿಸುವಿರಿ. ನಿಮ್ಮ ಜೀವನವು ಮಹತ್ತರವಾಗಿರುತ್ತದೆ. ಒಂದು ರೀತಿಯಲ್ಲಿ ಹಿಂದು ಎಂದು ಹೇಳಲಾಗುವ ಈ ಸಮಗ್ರ ಸಂಸ್ಕೃತಿಯು ಪ್ರತಿ ವ್ಯಕ್ತಿಯು ತನ್ನ ಜೀವನದ ಮೂಲಗುರಿಯಾಗಿ ಪರಮಮುಕ್ತಿಯನ್ನು ಪಡೆಯುವತ್ತ ಶ್ರಮಿಸುವ ಒಂದು ವಿಶಿಷ್ಟ ಆಧ್ಯಾತ್ಮಿಕ ಲಕ್ಷಣವಾಗಿದೆ.

ಭಾರತದ ಅಧ್ಯಾತ್ಮವನ್ನು ಪರಿಶೋಧಿಸಿದರೆ, ಅದು ಅಚ್ಚರಿಗೊಳಿಸುವಂತಹದು. ಇದು ನಂಬಿಕೆ ಪದ್ಧತಿಯಿಂದ ಬಂದದ್ದಲ್ಲ, ಆದರೆ ಭೌತಿಕವನ್ನೂ ಮೀರಿದ ಆಯಾಮಗಳ ಪರಿಶೋಧನೆಯ ವೈಜ್ಞಾನಿಕ ಸಾಧನೆಗಳ ಮೂಲಕ ಸಂಭವಿಸಿರುವುದು.

ಭಾರತವು ಒಂದು ಸಾಧ್ಯತೆಯ ಸಂಗತಿಯಾಗಿದೆ. ಅದೊಂದು ಅನೇಕ ಸಂಸ್ಕೃತಿಗಳ, ಜನಾಂಗಗಳ, ಧರ್ಮಗಳ ಹಾಗೂ ಭಾಷೆಗಳ ಕಲಸುಮೇಲೋಗರವಾಗಿದೆ. ಇವೆಲ್ಲವನ್ನೂ ಒಂದೇ ಅನ್ವೇಷಣೆಯ ಸೂತ್ರದಿಂದ ಬಂಧಿಸಲಾಗಿದೆ. ಮಹತ್ತರವಾದ ಮುಕ್ತಿಯ ಹಂಬಲವನ್ನು ದೇಶದ ಜನರಲ್ಲಿ ಪೋಷಿಸಲಾಗಿದೆ.

ಭಾರತವನ್ನು ಅಧ್ಯಯನ ಮಾಡಲಾಗುವುದಿಲ್ಲ, ಆದರೆ ವ್ಯಕ್ತಿಯು ಅದರಲ್ಲಿ ನೆನೆಯಬೇಕು, ಹಾಗೆಯೇ ಕರಗಿ ಹೋಗಬೇಕು. ಇದೊಂದೇ ಮಾರ್ಗ. ಅದರ ಅಧ್ಯಯನ ಅಸಾಧ್ಯ. ಭಾರತವನ್ನು ಕುರಿತ ಪಾಶ್ಚಾತ್ಯ ದೇಶಗಳ ವಿಶ್ಲೇಷಣೆಯು ಇನ್ನೂ ಪ್ರಾರಂಭಾವಸ್ಥೆಯಲ್ಲಿದೆ, ಏಕೆಂದರೆ ಭಾರತದ ಲಕ್ಷಣದ ವಿಶ್ಲೇಷಣೆಯು ದೇಶವನ್ನು ಅತ್ಯಂತ ತಪ್ಪುಗ್ರಹಿಕೆಯ ತೀರ್ಮಾನದತ್ತ ಒಯ್ಯುವಂತೆ ಮಾಡುತ್ತಿದೆ. ಭಾರತದ ಸಂಸ್ಕೃತಿ ಅವ್ಯವಸ್ಥಿತವಾಗಿ ವರ್ಧಿಸುತ್ತಿದ್ದರೂ ಸಹ ಅದು ಸುಸಂಘಟಿತ ಹಾಗೂ ಸಮೃದ್ಧವಾಗಿದೆ.

ಭೂಮಿಯ ಮೇಲಣ ಈ ಪ್ರಾಚೀನ ದೇಶವು, ಇದರ ಪ್ರಖ್ಯಾತ ಪೌರರ ಆಧಾರ ತತ್ತ್ವಗಳ ಮೇಲಾಗಲಿ ಅಥವಾ ನಂಬಿಕೆಗಳ ಮೇಲಾಗಲಿ ಅಥವಾ ಅವರ ಮಹತ್ವಾಕಾಂಕ್ಷೆಗಳ ಮೇಲಾಗಲಿ ನಿರ್ಮಿತವಾಗಿಲ್ಲ. ಇದು ಅನ್ವೇಷಕರ ದೇಶವಾಗಿದೆ, ಐಶ್ವರ್ಯ ಮತ್ತು ಸುಖ ಸಂತೋಷದ ಅನ್ವೇಷಣೆಯಲ್ಲ, ಆದರೆ ವಿಮೋಚನೆಯ ಅನ್ವೇಷಣೆ – ಆರ್ಥಿಕ ಅಥವಾ ರಾಜಕೀಯದ್ದಲ್ಲ, ಆದರೆ ಉತ್ಕೃಷ್ಟ ಮುಕ್ತಿಯ ಅನ್ವೇಷಣೆ.

Sadguru Column Adiyogi

ಜ್ಞಾನೋದಯಕ್ಕೆ 112 ಮಾರ್ಗಗಳಿವೆ ಎಂದ ಆದಿಯೋಗಿ

ಆದಿಯೋಗಿಯನ್ನು ಜ್ಞಾನೋದಯಕ್ಕೆ ಎಷ್ಟು ಮಾರ್ಗಗಳಿವೆ ಎಂದು ಕೇಳಿದಾಗ, ನೀವು ನಿಮ್ಮ ಶಾರೀರಿಕ ವ್ಯವಸ್ಥೆಯ ಕ್ಷೇತ್ರದಲ್ಲಿರುವಾಗ 112 ಮಾರ್ಗಗಳಿವೆ, ಆದರೆ ನೀವು ಭೌತಿಕವನ್ನು ಮೀರಿದಾಗ ವಿಶ್ವದಲ್ಲಿನ ಪ್ರತಿಯೊಂದು ಅಣುವೂ ಸಹ ಒಂದು ಬಾಗಿಲ ದಾರಿಯಾಗುತ್ತದೆ ಎಂದನು.

ಭಾರತವು ಒಂದು ಆಧ್ಯಾತ್ಮಿಕ ಸಾಧ್ಯತೆಗಳ, ವೈವಿದ್ಯತೆಗಳ ಸಂಮಿಶ್ರಿತ ಸಂಯೋಜನೆಯಾಗಿದೆ. ನೀವು ಮಹಾಕುಂಭದಲ್ಲಿ ಭಾಗವಹಿಸಿದ್ದರೆ ಇದರ ಪ್ರದರ್ಶನವನ್ನು ಕಾಣಬಹುದು. ಮಾರ್ಕ್‌ಟ್ವೈನ್ ಹೇಳಿರುವಂತೆ, “ನನ್ನ ಅಭಿಪ್ರಾಯದಲ್ಲಿ, ಮಾನವರಿಂದಾಗಲಿ ಅಥವಾ ಪ್ರಕೃತಿಯಿಂದಾಗಲಿ ಭಾರತವನ್ನು ಹೆಚ್ಚು ಅಸಾಧಾರಣ ದೇಶವನ್ನಾಗಿ ಮಾಡಲು ಎಲ್ಲ ಕಾರ್ಯಗಳನ್ನೂ ಮಾಡಲಾಗಿದೆ. ಯಾವುದನ್ನೂ ಮರೆತಿಲ್ಲ. ಯಾವುದನ್ನೂ ಉದಾಸೀನ ಮಾಡಿಲ್ಲ”.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು

VISTARANEWS.COM


on

ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ತಿರುಪತಿಯ ಭವ್ಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಬೆಳಗಾವಿಯಲ್ಲಿಯೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸನ ಸನ್ನಿಧಿ ತಲೆಯೆತ್ತಲಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದ ಸುಮಾರು 7 ಎಕರೆ ಪ್ರದೇಶದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಭೂಮಿಯನ್ನು ಖರೀದಿಸಿ ಈಗಾಗಲೇ ಟಿಟಿಡಿ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಮೂಲಕ ಕುಂದಾನಗರಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಮೊದಲ ಭದ್ರ ಬುನಾದಿ ಬಿದ್ದಿದೆ.

ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ವಾಸ್ತುಶಿಲ್ಪ, ಲಡ್ಡು ವಿತರಣೆ ಮತ್ತು ಭಕ್ತರ ವಾಸ್ತವ್ಯದ ಸೌಲಭ್ಯ ಸೇರಿದಂತೆ ಪ್ರತಿಯೊಂದೂ ಅಂಶದಲ್ಲೂ ಮೂಲ ತಿರುಪತಿ ಕ್ಷೇತ್ರವನ್ನೇ ಹೋಲುವಂತೆ ನಿರ್ಮಾಣವಾಗಲಿದೆ. ನೂರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಶೇ. 10ರಷ್ಟು ಹಣವನ್ನು ಮಾತ್ರ ದಾನಿಗಳಿಂದ ಸಂಗ್ರಹಿಸಿ, ಉಳಿದ ವೆಚ್ಚವನ್ನು ಟಿಟಿಡಿ ಭರಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಟಿಟಿಡಿ ಪ್ರತ್ಯೇಕ ಟ್ರಸ್ಟ್ ರಚಿಸಿ ಸ್ಥಳೀಯರನ್ನು ಒಳಗೊಳ್ಳಲಿದೆ. ಈ ದೇವಾಲಯದ ನಿರ್ಮಾಣದಿಂದ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೆ, ನೆರೆಯ ಗೋವಾ ಮತ್ತು ಮಹಾರಾಷ್ಟ್ರದ ಭಕ್ತರಿಗೂ ತಿಮ್ಮಪ್ಪನ ದರ್ಶನ ಪಡೆಯಲು ಸುಲಭವಾಗಲಿದೆ.

ನೂತನ ದೇವಾಲಯಗಳ ನಿರ್ಮಾಣಕ್ಕಾಗಿ ಟಿಟಿಡಿ ಮೀಸಲಿಟ್ಟಿರುವ ಒಂಬತ್ತು ಸಾವಿರ ಕೋಟಿ ರೂಪಾಯಿ ನಿಧಿಯಲ್ಲಿ ಬೆಳಗಾವಿ ಯೋಜನೆಯೂ ಸೇರಿದೆ. ದೇಶದ ಆರು ಪ್ರಮುಖ ಸ್ಥಳಗಳಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಟಿಟಿಡಿ, ಬೆಳಗಾವಿಯಲ್ಲಿ ಶೀಘ್ರವೇ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದೆ. ರೆಡ್ಡಿ ಸಂಘದ ಈ ಉದಾರ ಕಾರ್ಯಕ್ಕೆ ಟಿಟಿಡಿ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ಬೆಳಗಾವಿ ನಗರವು ಧಾರ್ಮಿಕ ಭೂಪಟದಲ್ಲಿಯೂ ಹೊಸ ಗುರುತು ಪಡೆಯಲಿದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿರುವ ಬೆಳಗಾವಿಗೆ ಈ ವೆಂಕಟರಮಣನ ಸನ್ನಿಧಿ ಮತ್ತಷ್ಟು ಮೆರುಗು ನೀಡಲಿದೆ.

Continue Reading

ಕೊಡಗು

Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ

Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.

VISTARANEWS.COM


on

Deepavali festival held in Madikeri

ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ‌ ಸಂತೋಷವಾಗಿದೆ‌. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ‌. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

Deepavali festival held in Madikeri

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ‌ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್‌.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು‌‌. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ; ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ

Mysore Dasara : ವಿಜಯ ದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರವಾಗಿದ್ದು, ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತಿದೆ. ಜತೆಗೆ ಮೈಸೂರು ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯುತ್ತಿದೆ.

VISTARANEWS.COM


on

mysore dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara ) ಜಂಬೂ ಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶನಿವಾರ ಮುಂಜಾನೆಯಿಂದಲೇ ಬಿರುಸಿನ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿಯನ್ನು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಸಮಯ ಸನ್ನಿಹಿತವಾಗುತ್ತಿದೆ. ಇದಕ್ಕಿಂತ ಮೊದಲು ಚಾಮುಂಡಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೂಲಕ ಅರಮನೆಗೆ ಮೆರವಣಿಗೆ ಮೂಲಕ ಕಳಿಸಿಕೊಡಲಾಯಿತು.

ವಿಜಯ ದಶಮಿಯ ಜಂಬೂ ಸವಾರಿಗೆ ಅಂಬಾವಿಲಾಸ ಅರಮನೆ ಸಜ್ಜಾಗಿದೆ. ಅರಮನೆ ಅಂಗಳದಲ್ಲಿ 35 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಶುರುವಾಗಿದ್ದು, ಅಂಬಾವಿಲಾಸ ಅರಮನೆ ತಲುಪಲಿದೆ. ನೇರಳೆ ಬಣ್ಣದ ಸೀರೆಯಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಅಶ್ವಾರೋಹಣ ಅಲಂಕಾರದಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಅಲ್ಲಿಂದ ಅರಮನೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

Mysore dasara 2024

ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ 1:41 ರಿಂದ 2:10ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ನಂದಿ ಧ್ವಜ ಪೂಜೆಯನ್ನು ಉದ್ಘಾಟಕ ಹಂಪನಾ, ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ನಂದಿಧ್ವಜ ಪೂಜೆ ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಅರಮನೆ ಒಳಂಗಣದಿಂದ ಪ್ರಾರಂಭಗೊಂಡು ಬನ್ನಿ ಮಂಟಪದ ವರಗೆ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ಇಲಾಖೆಗಳಿಂದ 49 ಸ್ಥಬ್ದ ಚಿತ್ರಗಳು ಸಂಚಾರ ಇರಲಿದೆ. ಸಂಜೆ 4ಗಂಟೆಯಿಂದ 4:30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಹಾಗೂ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ರವರಿಂದ ಪುಷ್ಪರ್ಚನೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು, ರಾಜ್ಯಪಾಲ ಥಾವರ ಚಂದ್ ಗೆಹಲೊಟ್ ರಿಂದ ಕವಯತು ವೀಕ್ಷಣೆಯೊಂದಿಗೆ ಗೌರವ ವಂದನೆ ಸ್ವೀಕಾರ ಆಗಲಿದೆ.

Continue Reading

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

Ayudha Puja celebrations across the karnataka state Temples housefull by devotees

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Latest2 hours ago

ಮರು ಮತ ಎಣಿಕೆಯಲ್ಲೂ ಜಯ ಸಾಧಿಸಿದ ಶಾಸಕ ಟಿ.ಡಿ ರಾಜೇಗೌಡ

Latest7 hours ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest8 hours ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest1 day ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest2 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest2 days ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest2 days ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest2 days ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest2 days ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

Latest2 days ago

ಪಂಚರಾಜ್ಯ ಚುನಾವಣಾ ಫಲಿತಾಂಶ: “ಎಕ್ಸಿಟ್ ಪೋಲ್‌ಗಿಂತ ಉತ್ತಮ ಪ್ರದರ್ಶನ ನಿರೀಕ್ಷೆ” – ಖರ್ಗೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌