Salary Hike: 300 ಶೇಕಡಾ ಸಂಬಳ ಹೆಚ್ಚಳ! ಯಾವ ಕಂಪನಿಯಲ್ಲಿ ನೋಡಿ - Vistara News

ವೈರಲ್ ನ್ಯೂಸ್

Salary Hike: 300 ಶೇಕಡಾ ಸಂಬಳ ಹೆಚ್ಚಳ! ಯಾವ ಕಂಪನಿಯಲ್ಲಿ ನೋಡಿ

Salary Hike: ಕಂಪನಿಯಲ್ಲೇ ಉಳಿದುಕೊಂಡರೆ ಆ ಉದ್ಯೋಗಿಯ ಸಂಬಳವನ್ನು ನಾಲ್ಕು ಪಟ್ಟು ಹೆಚ್ಚು ಮಾಡುವ (300 ಪ್ರತಿಶತ) ಆಫರ್‌ ಅನ್ನು ಆ ಕಂಪನಿ ನೀಡಿತು.

VISTARANEWS.COM


on

Google has to Rs 1337 crore within 30 days, Say Tribunal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಉದ್ಯೋಗಿಗಳಿಗೆ 300 ಪ್ರತಿಶತ ಸಂಬಳ ಹೆಚ್ಚಳ (Salary Hike)? ಕಲ್ಪಿಸಿಕೊಳ್ಳಲು ಸಾಧ್ಯವೇ? ಖಂಡಿತಾ ಇಲ್ಲ. ಆದರೆ ಗೂಗಲ್‌ ಕಂಪನಿಯಲ್ಲಿ (Google) ಇದು ಸಾಧ್ಯವಾಗಿದೆಯಂತೆ. ಇದು ಗೂಗಲ್‌ ಆ ಉದ್ಯೋಗಿಗಳನ್ನು ಎಷ್ಟು ಮಹತ್ವದವರು ಎಂದು ಪರಿಗಣಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.

ಅಲೆಕ್ಸ್ ಕಾಂಟ್ರೋವಿಟ್ಜ್ ನಡೆಸಿದ ಬಿಗ್ ಟೆಕ್ನಾಲಜಿ ಪಾಡ್‌ಕ್ಯಾಸ್ಟ್ ಶೋನಲ್ಲಿ ಯುಎಸ್ ಮೂಲದ ಪರ್ಪ್ಲೆಕ್ಸಿಟಿ ಎಐ ಸ್ಟಾರ್ಟ್‌ಅಪ್‌ನ ಸಿಇಒ ಅರವಿಂದ್ ಶ್ರೀನಿವಾಸ್ ಈ ನೇಮಕಾತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಂಪೂರ್ಣ ಕಥೆ ಇಲ್ಲಿದೆ.

ಐಐಟಿ ಮದ್ರಾಸ್‌ನ ಶ್ರೀನಿವಾಸ್ ಅವರು ಇತ್ತೀಚೆಗೆ ತಮ್ಮ ಪರ್ಪ್ಲೆಕ್ಸಿಟಿ ಎಐ ಸ್ಟಾರ್ಟ್‌ಅಪ್‌ಗಾಗಿ ಗೂಗಲ್‌ನ ಉದ್ಯೋಗಿಯನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದರು. ಹೊಸ ಕಂಪನಿಯೊಂದಿಗೆ ಮಾತನಾಡಿದ ನಂತರ ಸಹಜವಾಗಿಯೇ ಆ ಉದ್ಯೋಗಿ ತನ್ನ ಉದ್ಯೋಗದಾತರೊಂದಿಗೆ ಹೊಸ ಉದ್ಯೋಗ ಪ್ರಸ್ತಾಪದ ವಿಷಯ ಹೇಳಿದ್ದಾರೆ.

ಆದರೆ ಅವರು ಆಶ್ಚರ್ಯಚಕಿತರಾಗುವಂತೆ, ಕಂಪನಿಯಲ್ಲೇ ಉಳಿದುಕೊಂಡರೆ ಆ ಉದ್ಯೋಗಿಯ ಸಂಬಳವನ್ನು ನಾಲ್ಕು ಪಟ್ಟು ಹೆಚ್ಚು ಮಾಡುವ (300 ಪ್ರತಿಶತ) ಆಫರ್‌ ಅನ್ನು ಗೂಗಲ್ ನೀಡಿತು. ಅದನ್ನು ಆ ಉದ್ಯೋಗಿ ಪಡೆದುಕೊಂಡಿದ್ದಾರೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಒಳ್ಳೆಯ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಕೆಲವು ಶೇಕಡಾ ಸಂಬಳ ಏರಿಸುವುದು ಸಹಜ. ಇದನ್ನು ಕೌಂಟರ್‌ಆಫರ್‌ ಎನ್ನುತ್ತಾರೆ. ಆದರೆ ಗೂಗಲ್ ನಿರೀಕ್ಷೆಗೂ ಮೀರಿ ವರ್ತಿಸಿದೆ. ಆ ಉದ್ಯೋಗಿ ಇನ್ನೂ ಅಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಅಂದರೆ ವ್ಯಕ್ತಿಯು ಗೂಗಲ್‌ನ ಶೇಕಡಾ 300ರಷ್ಟು ಸಂಬಳ ಹೆಚ್ಚಳವನ್ನು ಒಪ್ಪಿಕೊಂಡಿದ್ದಾರೆ. Google ಉದ್ಯೋಗಿಗಳಿಗೆ AI ಸ್ಟಾರ್ಟ್‌ಅಪ್‌ನ ಕೊಡುಗೆ ಏನಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ Googleನ ಪ್ರತಿಕ್ರಿಯೆಯು, ಉನ್ನತ ಮಟ್ಟದ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಅದರ ಗಂಭೀರತೆಯನ್ನು ಪ್ರದರ್ಶಿಸಿದೆ.

ಈ ಕೌಂಟರ್‌ಆಫರ್‌ನ ಸಮಯವು ವಿಶೇಷವಾಗಿ ಗಮನಾರ್ಹವಾಗಿದೆ. Googleನಲ್ಲಿ ಇತ್ತೀಚೆಗೆ ಹಲವು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಕಳೆದ ವರ್ಷದಿಂದ ಗೂಗಲ್ ಅನೇಕ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಕಳೆದ 1.5 ತಿಂಗಳುಗಳಲ್ಲಿ, ಕಂಪನಿಯು ಗೂಗಲ್ ಅಸಿಸ್ಟೆಂಟ್, ಹಾರ್ಡ್‌ವೇರ್ ಮತ್ತು ಸೆಂಟ್ರಲ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಾದ್ಯಂತ ವಜಾಗೊಳಿಸುವಿಕೆಯನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: Job Cuts: ಏಐ ಏಟು; ಗೂಗಲ್‌, ಅಮೆಜಾನ್‌ ಮುಂತಾದ ಟೆಕ್‌ ಕಂಪನಿಗಳಲ್ಲಿ 7,500 ಉದ್ಯೋಗ ಕಡಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

CAA: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಈಗ ಸಿಎಎ ನಿಯಮಗಳ ಅಡಿಯಲ್ಲಿ 14 ಜನರಿಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ನೀಡಿದೆ. ಪೌರತ್ವ ಪಡೆದ ಹಿಂದುಗಳು ಸಂತಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

CAA
Koo

ನವದೆಹಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ (Indian Citizenship) ನೀಡುವುದು ಕಾಯ್ದೆಯ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರವು (Central Government) 300 ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿಯೇ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು (Citizenship Papers) ಹಸ್ತಾಂತರಿಸಲಾಗಿದೆ. ಹೀಗೆ, ಪಾಕಿಸ್ತಾನದಲ್ಲಿ ಬಹುಸಂಖ್ಯಾತರಿಂದ ಸಂಕಷ್ಟ ಅನುಭವಿಸಿ, ಭಾರತಕ್ಕೆ ಬಂದು ನೆಲೆಸಿದ ಹಿಂದುಗಳಿಗೆ ಪೌರತ್ವ ದೊರೆತಿದ್ದು, ಅವರ ಇಡೀ ಕುಟುಂಬವು ಸಂತಸ ವ್ಯಕ್ತಪಡಿಸಿದೆ.

ಹೌದು, ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿದ್ದು, ಅವರೀಗ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಹಿಡಿದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. “ಪಾಕಿಸ್ತಾನದಲ್ಲಿ ಹಿಂದು ಹೆಣ್ಣುಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಹಿಂದು ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಮನೆಯಿಂದಲೂ ಹೊರಗೆ ಬರಲು ಆಗುವುದಿಲ್ಲ. ಮುಸ್ಲಿಮರು ಹಿಂದು ಹೆಣ್ಣುಮಕ್ಕಳನ್ನು ಅಪಹರಣ ಮಾಡುತ್ತಾರೆ. ಬಲವಂತವಾಗಿ ಮತಾಂತರ ಮಾಡುತ್ತಾರೆ, ಕಿರುಕುಳ ನೀಡುತ್ತಾರೆ. ಈಗ ಭಾರತದ ಪೌರತ್ವ ಸಿಕ್ಕಿರುವುದು ಖುಷಿಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಧನ್ಯವಾದಗಳು” ಎಂದು ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಭಾವನಾ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Continue Reading

ವೈರಲ್ ನ್ಯೂಸ್

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral News: ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ. ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.

VISTARANEWS.COM


on

Viral News
Koo

ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಯಿ ದಾಳಿಯಿಂದ ಮಕ್ಕಳು ಬಲಿಯಾಗಿರುವ ಘಟನೆಯೂ ಅಲ್ಲಲ್ಲಿ ವರದಿಯಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ನಾಯಿ ಕಂಡರೆ ಬೆಚ್ಚಿ ಬೀಳುವಂತಾಗಿದೆ. ಈ ಮಧ್ಯೆ ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ (Viral News).

ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ವಿವಿಧ ಸೆಕ್ಷನ್‌ ಅಡಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಮಧು, ಆತನ ಸಹೋದರ ಶ್ರೀನಾಥ್‌ ಮತ್ತು ಆತನ ಸ್ನೇಹಿತ ತಮ್ಮ ನೆಚ್ಚಿನ ಸಾಕು ನಾಯಿ ಸೈಬೇರಿಯನ್‌ ಹಸ್ಕಿ ಜತೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಯಿ ತಮ್ಮ ಮೇಲೆ ದಾಳಿ ನಡೆಸಿದೆ ಎಂದು ನೆರೆಮನೆಯ ಧನಂಜಯ್‌ ಮತ್ತು ಆತನ ಮನೆಯವರು ಆರೋಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಎರಡೂ ಕಡೆಯವರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಘಟನೆ ವಿವರ

ಶ್ರೀನಾಥ್ ಅವರು ತಮ್ಮ ನಾಯಿಯನ್ನು ಕರೆದುಕೊಂಡು ವಾಕಿಂಗ್‌ ಹೋಗಿದ್ದರು. ಇದೇ ಸಮಯದಲ್ಲಿ ಧನಂಜಯ್ ಮತ್ತು ಆತನ ಇಬ್ಬರು ಸ್ನೇಹಿತರೂ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ವೇಳೆ ಶ್ರೀನಾಥ್ ನಾಯಿಯ ಹಗ್ಗವನ್ನು ಬಿಗಿಯಾಗಿ ಹಿಡಿದಿರುವುದು ಕಂಡು ಬಂದಿದೆ. ಜತೆಗೆ ನಾಯಿ ಧನಂಜಯ್‌ ಮೇಲೆ ದಾಳಿ ನಡೆಸಲು ಮುಂದಾಗಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಆತ ಅಲ್ಲಿಂದ ಆಚೆ ಬರುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಧನಂಜಯ್‌ ಮತ್ತು ಇತರರು ದೊಣ್ಣೆ ಹಿಡಿದುಕೊಂಡು ಶ್ರೀನಾಥ್‌ ಬಳಿಗೆ ಬರುತ್ತಾರೆ. ನಂತರ ಹಲ್ಲೆ ನಡೆಸುತ್ತಾರೆ. ಶ್ರೀನಾಥ್‌ ನೆಲದ ಮೇಲೆ ಬಿದ್ದಾಗಲೂ ಸುಮ್ಮನಾಗದ ಧನಂಜಯ್‌ ಮತ್ತು ತಂಡ ಮತ್ತೂ ಹೊಡೆಯುತ್ತಾರೆ. ಇದೇ ವೇಳೆ ಶ್ರೀನಾಥ್‌ ಮನೆಯವರು ಆತನ ನೆರವಿಗೆ ಧಾವಿಸುತ್ತಾರೆ. ಧಾವಿಸಿ ಬಂದ ಶ್ರೀನಾಥ್‌ ಕುಟುಂಬದ ಮಹಿಳೆಗೂ ಹೊಡೆತ ಬೀಳುತ್ತದೆ.

ಸ್ವಲ್ಪ ಹೊತ್ತೆನಲ್ಲೇ ನೆರೆಹೊರೆಯವರೆಲ್ಲ ಗುಂಪುಗೂಡುತ್ತಾರೆ. ಬಳಿಕ ಹಲ್ಲೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗುತ್ತಾರೆ. ಗಾಯಗೊಂಡ ಶ್ರೀನಾಥ್‌ ಮತ್ತು ಆತನ ಮನೆಯವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೊಳಗಾದ ನಾಯಿಗೂ ಚಿಕಿತ್ಸೆ ನೀಡಲಾಗಿದೆ. ದೂರುಗಳ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು ತೀವ್ರ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

Continue Reading

ಕ್ರಿಕೆಟ್

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Viral Video: ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಸಯೀದ್ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

viral video
Koo

ಕರಾಚಿ: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಕೇಸ್​ ಹೆಚ್ಚಳವಾಗಲು(Rising divorce rate) ಪ್ರಮುಖ ಕಾರಣ ಏನೆಂಬುದನ್ನು ಪಾಕಿಸ್ತಾನ ಮಾಜಿ ಆಟಗಾರ ಮತ್ತು ನಾಯಕ ಸಯೀದ್ ಅನ್ವರ್(Saeed Anwar) ವಿವರಿಸಿದ್ದಾರೆ. ಮಹಿಳೆಯರು ಕೆಲಸ ಮಾಡಲು ಆರಂಭಿಸಿದ್ದೇ ವಿಚ್ಛೇದನ ಹೆಚ್ಚಳಕ್ಕೆ ಕಾರಣ ಎಂದು ಹೇಳಿದ್ದಾರೆ. ಅವರು ನೀಡಿರುವ ಈ ಹೇಳಿಕೆ ಇದೀಗ ಭಾರೀ ವಿವಾದ ಮತ್ತು ವೈರಲ್(Viral Video) ಆಗಿದೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 30 ಪ್ರತಿಶತದಷ್ಟು ಹೆಚ್ಚಳವಾಗಿದೆ. ಮಹಿಳೆಯರ ದುಡಿಯಲು ಆರಂಭಿಸಿದ ಕಾರಣ ಅವರು ಕೂಡ ಆರ್ಥಿಕವಾಗಿ ಸಧೃಡವಾಗಿದ್ದಾರೆ. ಹೀಗಾಗಿ ಅವರು ಮನೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾರೆ. ಬೈಗುಳ ಕೇಳಿ ನರಕದಲ್ಲಿ ಜೀವನ ಮಾಡುವುದಕ್ಕಿಂತ, ನಾನೇ ಸಂಪಾದಿಸಬಲ್ಲೆ. ನಾನು ಸ್ವಂತವಾಗಿ ಸಂಸಾರ ನಡೆಸಬಲ್ಲೆ ಎಂಬ ಬಲವಾದ ನಂಬಿಕೆ ಬರುತ್ತದೆ. ಇದೇ ಕಾರಣದಿಂದ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ ಎಂದು ಅನ್ವರ್ ಹೇಳಿದರು.

“1.05 ನಿಮಿಷಗಳ ವಿಡಿಯೊದಲ್ಲಿ ಮಾತನಾಡಿದ ಅನ್ವರ್, ನಾನು ಜಗತ್ತಿನ ಹಲವು ರಾಷ್ಟ್ರಗಳಿಗೆ ಪ್ರಯಾಣಿಸಿದ್ದೇನೆ. ನಾನು ಈಗಷ್ಟೇ ಆಸ್ಟ್ರೇಲಿಯಾ, ಯುರೋಪ್‍ನಿಂದ ಹಿಂತಿರುಗುತ್ತಿದ್ದೇನೆ. ಅಲ್ಲಿ ಯುವಕರು ನರಳುತ್ತಿದ್ದಾರೆ. ಕುಟುಂಬಗಳು ಕೆಟ್ಟ ಸ್ಥಿತಿಯಲ್ಲಿವೆ. ದಂಪತಿಗಳು ಜಗಳವಾಡುತ್ತಿದ್ದಾರೆ. ವ್ಯವಹಾರದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನ್ಯೂಜಿಲ್ಯಾಂಡ್​ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅನ್ವರ್ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅನ್ವರ್ ಹೇಳಿಕೆಗೆ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲಭೂತವಾಗಿ ನೀವು ಮಹಿಳೆಯರನ್ನು ಗುಲಾಮರನ್ನಾಗಿ ಮಾಡಬೇಕೆಂದು ಹೇಳುತ್ತಿದ್ದೀರಿ. ಮಹಿಳೆಯರಿಗೂ ರೆಕ್ಕೆಗಳನ್ನು ಬಿಚ್ಚಿ ಹಾರಾಡುವ ಅಕಾಶ ನೀಡಬೇಕು. ಆದರೆ ನೀವು ಅವರನ್ನು ಸಾಕುಪ್ರಾಣಿಗಳಂತೆ ಪುರುಷರಿಗೆ ಸೇವೆ ಸಲ್ಲಿಸಬೇಕೆಂಬ ಮನಸ್ಥಿತಿ ಹೊಂದಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

“ಮಹಿಳೆಯರು ಕೆಲಸ ಮಾಡಲು ಮತ್ತು ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸುರಕ್ಷಿತ ವಾತಾವರಣವನ್ನು ಕೇಳುವ ಬದಲು, ಅವರು ಮಹಿಳೆಯರನ್ನು ಮನೆಯಲ್ಲಿಯೇ ಇರಲು ಕೇಳುತ್ತಿದ್ದಾರೆ. ಸಿದ್ಧಾಂತದಲ್ಲಿ ಏನೋ ತಪ್ಪಾಗಿದೆ” ಎಂದು ಮತ್ತೊಬ್ಬ ಮಹಿಳೆ ಕಮೆಂಟ್​ ಮಾಡಿದ್ದಾರೆ. “ ಜಗತ್ತು ಮತಾಂತರಗೊಳ್ಳಬೇಕೆಂದು ಬಯಸುವ ನಿಮ್ಮಿಂದ ಇನ್ನೇನು ನಿರೀಕ್ಷಿಸಬಹುದು. “ಇದು ಮಹಿಳೆಯರಿಗೆ ತುಂಬಾ ಅವಮಾನಕರವಾಗಿದೆ” ಹೀಗೆ ಹಲವು ಮಹಿಳೇಯರು ಅನ್ವರ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Viral Video:ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನ್ನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನ್ನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನ್ನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

VISTARANEWS.COM


on

Viral video
Koo

ಪುಣೆ: ಹಸಿರು ಸಮವಸ್ತ್ರದ ಮೂಲಕ ವಿವಾದಕ್ಕೀಡಾಗಿದ್ದ ಜೊಮ್ಯಾಟೊ(Zomato) ಇದೀಗ ಮತ್ತೆ ಸುದ್ದಿಯಲ್ಲಿದೆ. ಜೊಮ್ಯಾಟೊದಿಂದ ಆರ್ಡರ್‌ ಮಾಡಲಾಗಿದ್ದ ಪನೀರ್‌ ಬಿರಿಯಾನಿ(Paneer Biriyani)ಯಲ್ಲಿ ಚಿಕನ್‌ ಪೀಸ್‌ ಸಿಕ್ಕಿದ್ದು, ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ ಎಂದು ಗ್ರಾಹಕರೊಬ್ಬರು ಆರೋಪಿಸಿರುವ ಘಟನೆ ವರದಿಯಾಗಿದೆ. ಪುಣೆ ಮೂಲದ ಪಂಕಜ್‌ ಶುಕ್ಲಾ ಎಂಬ ವ್ಯಕ್ತಿ ಎಕ್ಸ್‌ನಲ್ಲಿ ವಿಡಿಯೋ ಸಮೇತ ಪೋಸ್ಟ್‌ವೊಂದನ್ನು ಮಾಡಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಶುಕ್ಲಾ ಆರೋಪ ಏನು?

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ತುಂಡುಗಳು ಪತ್ತೆಯಾಗಿರುವ ಬಗ್ಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಶುಕ್ಲಾ ಮಹಾರಾಷ್ಟ್ರದ ಪುಣೆ ಕರವೇನಗರದ ನಿವಾಸಿ. ಅವರು ಜೊಮ್ಯಾಟೊದಲ್ಲಿ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್‌ ಬಿರಿಯಾನಿ ಆರ್ಡರ್‌ ಮಾಡಿದ್ದರು. ಆರ್ಡರ್‌ ಬಂದಂತೆ ಅದನ್ನು ತೆರೆದು ನೋಡಿದಾಗ ಅದರಲ್ಲಿ ಪನೀರ್‌ ಜೊತೆಗೆ ಚಿಕನ್‌ ಪೀಸ್‌ಗಳೂ ಮಿಕ್ಸ್‌ ಆಗಿದ್ದು ಕಂಡು ಬಂದಿದೆ. ತಕ್ಷಣ ಅವರು ಈ ಬಗ್ಗೆ ಜೊಮ್ಯಾಟೊಗೆ ದೂರು ನೀಡಿದ್ದು, ಅವರಿಗೆ ಹಣವನ್ನು ಹಿಂದಿರುಗಿಸಲಾಗಿದೆ.

ಇದಾದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶುಕ್ಲಾ, ನನಗೆ ಪೂರ್ತಿ ಹಣ ರೀಫಂಡ್‌ ಆಗಿದೆಯಾದರೂ ಇದರಿಂದ ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ನಾನು ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿರುವ ಕಾರಣ ಇದು ಪಾಪ ಕೃತ್ಯ ಆದಂತಾಗಿದೆ. ಜೊಮ್ಯಾಟೊದ ಎಡವಟ್ಟಿನಿಂದಾಗಿ ನನ್ನ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ಗೆ ತಕ್ಷಣ ರಿಯಾಕ್ಟ್‌ ಮಾಡಿರುವ ಜೊಮ್ಯಾಟೊ, ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಿಮ್ಮ ಆರ್ಡರ್ನ ಡಿಟೇಲ್ಸ್‌ ಕಳುಹಿಸಿ. ನಾವು ಚೆಕ್‌ ಮಾಡುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ:Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ಇನ್ನು ಪಂಕಜ್‌ ಶುಕ್ಲಾ ಟ್ವೀಟ್‌ಗೆ ಅನೇಕ ನೆಟ್ಟಿಗರು ಪರ ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಶುದ್ಧ ಸಸ್ಯಹಾರಿ ಆಗಿರುವ ನೀವು ಏಕೆ ಮಾಂಸಾಹಾರ ಹೊಟೇಲ್‌ನಿಂದ ಆರ್ಡರ್‌ ಮಾಡಿದ್ದೀರಿ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೂ ಕೆಲವರು ಶುದ್ಧ ಸಸ್ಯಹಾರಿ ಹೊಟೇಲ್‌ಗಳಿಂದಲೇ ಆರ್ಡರ್‌ ಮಾಡಿ. ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

Continue Reading
Advertisement
IPL 2024
ಕ್ರಿಕೆಟ್8 mins ago

IPL 2024: ಸಿಎಸ್​​ಕೆ ಮಾಜಿ ಆಟಗಾರನಾಗಿದ್ದರೂ ಈ ಸಲ ಕೊಹ್ಲಿ ಗೆಲ್ಲಲಿ ಎಂದ ಸುರೇಶ್​ ರೈನಾ!

Prajwal Revanna Case KR Nagar victim kidnapping case Satish sent to judicial custody
ಕ್ರೈಂ10 mins ago

Prajwal Revanna Case: ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್;‌ 2, 6ನೇ ಆರೋಪಿಗಿಲ್ಲ ಬಿಡುಗಡೆ ಭಾಗ್ಯ! ಸತೀಶ್‌ಗೆ ನ್ಯಾಯಾಂಗ ಬಂಧನ

Pay attention to childrens safety during holidays Minister Lakshmi Hebbalkar appeals to parents
ಬೆಳಗಾವಿ16 mins ago

Lakshmi Hebbalkar: ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ; ಪಾಲಕರಿಗೆ ಹೆಬ್ಬಾಳ್ಕರ್ ಮನವಿ

Four Digit PIN
ತಂತ್ರಜ್ಞಾನ28 mins ago

Four Digit PIN: ಇಂಥ ಪಿನ್ ನಂಬರ್ ಕೊಡ್ತಾ ಇದ್ದೀರಾ? ನಿಮ್ಮ ದುಡ್ಡಿಗೆ ಕಾದಿದೆ ಅಪಾಯ!

Nitish Kumar Reddy
Latest31 mins ago

Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

Medicine Price
ದೇಶ39 mins ago

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Belagavi News Masked man stabs TC and four others for asking them to show tickets on train
ಕ್ರೈಂ42 mins ago

Belagavi News: ರೈಲಲ್ಲಿ ಟಿಕೆಟ್‌ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ನಾಲ್ವರಿಗೆ ಚಾಕು ಇರಿದ ಮುಸುಕುಧಾರಿ; ಒಬ್ಬ ಸಾವು, ನಾಲ್ವರು ಗಂಭೀರ

Skin Care Tips in Kannada
ಆರೋಗ್ಯ57 mins ago

Skin Care Tips in Kannada: ಈ ಕಾರಣಕ್ಕಾಗಿ ನೀವು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಲೇಬೇಕು!

Car Care tips
ಪ್ರಮುಖ ಸುದ್ದಿ1 hour ago

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ASOS brand products are available at Reliance Retail
ದೇಶ1 hour ago

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ6 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು10 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಟ್ರೆಂಡಿಂಗ್‌