Bharat Jodo Nyaya Yatra: ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಅಖಿಲೇಶ್‌ ಯಾದವ್‌ - Vistara News

ದೇಶ

Bharat Jodo Nyaya Yatra: ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಅಖಿಲೇಶ್‌ ಯಾದವ್‌

Bharat Jodo Nyaya Yatra: ಉತ್ತರ ಪ್ರದೇಶದ ಆಗ್ರಾದಲ್ಲಿ ಹಾದು ಹೋಗಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

VISTARANEWS.COM


on

rahul akhilesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆ (Bharat Jodo Nyaya Yatra) ಫೆಬ್ರವರಿ 25ರಂದು ಉತ್ತರ ಪ್ರದೇಶದ ಆಗ್ರಾ ತಲುಪಲಿದ್ದು, ಅದರಲ್ಲಿ ಭಾಗವಹಿಸುವುದಾಗಿ ಸಮಾಜವಾದಿ ಪಾರ್ಟಿ (Samajwadi Party) ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎಸ್‌ಪಿ ಮತ್ತು ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಶಮನಗೊಂಡ ಹಿನ್ನೆಲೆಯಲ್ಲಿ ಅಖಿಲೇಶ್‌ ಯಾದವ್‌ ಈ ತೀರ್ಮಾನ ಪ್ರಕಟಿಸಿದರು.

ಮುಜಾಫರ್ ನಗರದಲ್ಲಿ ಮಾತನಾಡಿದ ಅಖಿಲೇಶ್ ಯಾದವ್‌, “ಶೀಘ್ರದಲ್ಲೇ ಸಂಘಟಕರು ಆಗ್ರಾದಲ್ಲಿ ನಡೆಯಲಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆಯ ಮಾರ್ಗ ಮತ್ತು ಸಮಯದ ವಿವರವನ್ನು ನಮಗೆ ಕಳುಹಿಸಲಿದ್ದಾರೆ” ಎಂದು ತಿಳಿಸಿದರು. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಅಜಯ್ ರಾಯ್, ಹಿರಿಯ ಮುಖಂಡ ಪಿಎಲ್ ಪುನಿಯಾ ಮತ್ತಿತರರು ಲಕ್ನೋದ ಎಸ್‌ಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಯಾತ್ರೆಗೆ ಔಪಚಾರಿಕ ಆಹ್ವಾನ ನೀಡಿದರು.

ಯಾತ್ರೆಯಲ್ಲಿ ಕೆಲವು ಬದಲಾವಣೆ

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್‌ ಗಾಂಧಿ ಹೆಚ್ಚುವರಿಯಾಗಿ ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಸಲಿದ್ದಾರೆ. ಈ ಹಿಂದೆ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಮೈತ್ರಿ ಮಾತುಕತೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಪ್ರದೇಶದಲ್ಲಿ ತೆರಳದಿರಲು ನಿರ್ಧಿರಿಸತ್ತು. ಆದರೆ ಮನಸ್ಸು ಬದಲಾಯಿಸಿ ಈ ಪ್ರದೇಶಗಳಿಗೆ ತೆರಳಲು ನಿರ್ಧರಿಸಲಾಗಿದೆ. ಇದೀಗ ಯಾತ್ರೆಯು ಪಶ್ಚಿಮ ಉತ್ತರ ಪ್ರದೇಶದ ಮೊರಾದಾಬಾದ್, ಸಂಭಾಲ್, ಅಲಿಗಢ, ಹತ್ರಾಸ್ ಮತ್ತು ಆಗ್ರಾ ಪ್ರದೇಶದ ಮೂಲಕ ಹಾದುಹೋಗಲಿದೆ.

ಗೊಂದಲ ನಿವಾರಣೆ

ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಹಾಗೂ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿವೆ ಎಂದು ಫೆಬ್ರವರಿ 21ರಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾಹಿತಿ ನೀಡಿದ್ದರು.

ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿ ಜತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್‌ಪುರ್, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಕೇತ್ರಗಳಲ್ಲಿ ಸ್ಪರ್ಧಿಸಲಿದೆ.

ಇದನ್ನೂ ಓದಿ: INDIA Bloc: ಉತ್ತರ ಪ್ರದೇಶದಲ್ಲಿ ಎಸ್‌ಪಿ-ಕಾಂಗ್ರೆಸ್ ಸೀಟ್ ಷೇರಿಂಗ್ ಫೈನಲ್, ಸೂತ್ರ ಹೀಗಿದೆ

ʼʼಸಮಾಜವಾದಿ ಪಕ್ಷವು ತನ್ನ ಪಾಲಿಗೆ ದೊರೆತಿರುವ ಕ್ಷೇತ್ರಗಳಲ್ಲೇ ಪ್ರಾದೇಶಿಕ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಿದೆ. ಕಳೆದ ತಿಂಗಳು ಎಸ್‌ಪಿಯೊಂದಿಗೆ ಏಳು ಸ್ಥಾನಗಳ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ಹೊರತಾಗಿಯೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆʼʼ ಎಂದು ಅಖಿಲೇಶ್ ಯಾದವ್ ತಿಳಿಸಿದ್ದರು. ʼʼಮೈತ್ರಿಯು ದೇಶಕ್ಕೆ ಒಂದು ಸಂದೇಶವಾಗಿದೆ. ಯುಪಿಯಲ್ಲಿ 80 ಲೋಕಸಭಾ ಸ್ಥಾನಗಳಿವೆ. ಉತ್ತರ ಪ್ರದೇಶದ ಸಹಾಯದಿಂದಲೇ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿಅಧಿಕಾರಕ್ಕೆ ಬಂದಿದೆ. ಅದೇ ಉತ್ತರ ಪ್ರದೇಶದಿಂದಾಗಿಯೇ ಬಿಜೆಪಿ 2024 ರಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತದೆʼʼ ಎಂದು ಅವರು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Ebola Virus: ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಸೋಂಕು ತಗುಲಿದವರು ಬಹು ಅಂಗಾಂಗ ವೈಫಲ್ಯದಿಂದ ಮೃತಪಡುತ್ತಾರೆ ಎಂಬುದಾಗಿ ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದಾಗಿ ಭಾರತ ಸೇರಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

VISTARANEWS.COM


on

Ebola Virus
Koo

ಬೀಜಿಂಗ್: ಜಗತ್ತಿಗೇ ಕೊರೊನಾ (Corona Virus) ಎಂಬ ಮಹಾಮಾರಿಯನ್ನು ಹರಡಿ, ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸಿರಿಯಾ ಮೂಲದ, ಮೂರು ವಾರಗಳ ಹಿಂದೆ ಜನಿಸಿದ ಹ್ಯಾಮ್‌ಸ್ಟರ್‌ಗಳಿಗೆ ಎಬೋಲಾ ರೂಪಾಂತರಿ ತಳಿಯ ವೈರಸ್‌ಅನ್ನು ಇಂಜೆಕ್ಟ್‌ ಮಾಡಲಾಗಿತ್ತು. 5 ಗಂಡು ಹಾಗೂ 5 ಹೆಣ್ಣು ಹ್ಯಾಮ್‌ಸ್ಟರ್‌ಗಳಿಗೆ ಸೋಂಕನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿತ್ತು. ಮೂರು ದಿನಗಳಲ್ಲಿಯೇ ಅವರು ಮೃತಪಟ್ಟವು” ಎಂಬುದಾಗಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ, ಇದು ಕೂಡ ಕೊರೊನಾ ಸಾಂಕ್ರಾಮಿಕದಂತೆ ಮಾರಣಾಂತಿಕವಾಗಿದ್ದು, ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮನುಷ್ಯರಿಗೆ ಹೇಗೆ ಅಪಾಯ?

ಹ್ಯಾಮ್‌ಸ್ಟರ್‌ಗಳಿಗೆ ಉಂಟಾದ ಪರಿಣಾಮವೇ ಮನುಷ್ಯರಿಗೂ ಆಗಲಿದೆ. ಮೊದಲು ಜೀವಕೋಶಗಳಿಗೆ ಹರಡುವ ಸೋಂಕು, ಹೃದಯ, ಶ್ವಾಸಕೋಶ, ಹೊಟ್ಟೆ, ಲಿವರ್‌ ಸೇರಿ ಹಲವು ಅಂಗಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಕೊನೆಗೆ, ಬಹು ಅಂಗಾಂಗ ವೈಫಲ್ಯದಿಂದ ಮನುಷ್ಯನು ಕೂಡ ಮೂರ್ನಾಲ್ಕು ದಿನಗಳಲ್ಲಿಯೇ ಮೃತಪಡಲಿದ್ದಾನೆ ಎಂಬುದಾಗಿ ಚೀನಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

ಎಬೋಲಾ ಹರಡುವುದು ಹೇಗೆ?

ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ ಇದರ ಲಕ್ಷಣಗಳಾಗಿವೆ. ಬಾವಲಿ, ಕೋತಿಯಂತಹ ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Continue Reading

ಕ್ರೈಂ

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

ಜನಿಸಲಿರುವ ಮಗು ಗಂಡು ಅಥವಾ ಹೆಣ್ಣು ಎಂದು ತಿಳಿಯಲು ಐವರು ಹೆಣ್ಣು ಮಕ್ಕಳ ತಂದೆ ಪತ್ನಿಯ ಹೊಟ್ಟೆಯನ್ನು ಸೀಳಿದ್ದ. (Murder Attempt). ಇದರಿಂದ ಆಘಾತಗೊಂಡ ಆಕೆ ಬೀದಿಗೆ ಓಡಿ ಹೋಗಿ ತನ್ನನ್ನು ತಾನು ರಕ್ಷಿಸಿಕೊಂಡರೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿತ್ತು. ಅದು ಗಂಡು ಮಗುವಾಗಿತ್ತು!

VISTARANEWS.COM


on

By

Murder Attempt
Koo

ಉತ್ತರ ಪ್ರದೇಶ: ಹುಟ್ಟಲಿರುವ ಮಗು ಗಂಡೋ ಹೆಣ್ಣೋ (gender check) ಎಂಬುದನ್ನು ಪರೀಕ್ಷಿಸಲು ಹೆಂಡತಿಯ ಹೊಟ್ಟೆಯನ್ನೇ ಕತ್ತಿಯಿಂದ ಸೀಳಿದ್ದ (Murder Attempt) ಉತ್ತರ ಪ್ರದೇಶದ (uttarpradesh) ಬದೌನ್‌ ಗ್ರಾಮದ ಐವರು ಹೆಣ್ಣು ಮಕ್ಕಳ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಶಿಕ್ಷೆಗೆ ಗುರಿಯಾದ ವ್ಯಕ್ತಿ.

2020ರ ಸೆಪ್ಟೆಂಬರ್‌ನಲ್ಲಿ ಪನ್ನಾಲಾಲ್ ಗರ್ಭಿಣಿಯಾಗಿದ್ದ ತನ್ನ ಪತ್ನಿ ಅನಿತಾ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿತ್ತು. ಐದು ಹೆಣ್ಣು ಮಕ್ಕಳಿದ್ದರೂ ಪನ್ನಾ ಲಾಲ್‌ಗೆ ಗಂಡು ಮಗು ಬೇಕೆಂಬ ಹಠವಿತ್ತು. ಇದು ಪತಿ ಪತ್ನಿಯ ನಡುವೆ ನಿರಂತರ ಜಗಳಕ್ಕೆ ಕಾರಣವಾಗುತ್ತಿತ್ತು.

ಇವರಿಬ್ಬರ ಜಗಳದ ಬಗ್ಗೆ ಅನಿತಾ ಅವರ ಕುಟುಂಬಕ್ಕೂ ತಿಳಿದಿತ್ತು. ಅವರು ಇವರಿಬ್ಬರ ನಡುವಿನ ಜಗಳವನ್ನು ನಿಲ್ಲಿಸಲು ಪನ್ನಾ ಲಾಲ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪನ್ನಾಲಾಲ್ ಅನಿತಾಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ.

ಘಟನೆ ನಡೆದ ದಿನದಂದು ದಂಪತಿ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿದ್ದಾರೆ. ಇದರಿಂದ ಕುಪಿತಗೊಂಡ ಪನ್ನಾ ಲಾಲ್ ಅನಿತಾಗೆ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಅನಿತಾ ಅವರ ಹೊಟ್ಟೆಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಅನಿತಾ ಜಗಳವಾಡಿದಾಗ ಆಕೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದ.

ಪನ್ನಾಲಾಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಅವನು ಅವಳನ್ನು ಹಿಡಿದು ಹರಿತವಾದ ಕತ್ತಿಯಿಂದ ಅವಳ ಹೊಟ್ಟೆಯನ್ನು ಕತ್ತರಿಸಿ, ಮಗು ಹೆಣ್ಣೋ ಗಂಡೋ ನೋಡಿಯೇ ಬಿಡುತ್ತೇನೆ ಎಂದು ಅಬ್ಬರಿಸಿದ್ದ. ಆಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಕರುಳು ಹೊಟ್ಟೆಯಿಂದ ನೇತಾಡುವಷ್ಟು ಆಳವಾದ ಗಾಯವಾಗಿತ್ತು.

ಇದನ್ನೂ ಓದಿ: Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

ತೀವ್ರವಾಗಿ ಗಾಯಗೊಂಡರೂ ಆಕೆ ಬೀದಿಗೆ ಓಡಿದಳು. ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಅವಳ ಕಿರುಚಾಟವನ್ನು ಕೇಳಿ ಅವಳನ್ನು ರಕ್ಷಿಸಲು ಬಂದ. ಆತನನ್ನು ಕಂಡ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾದ. ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಬದುಕುಳಿದಿದ್ದರೂ, ಆಕೆಯ ಹೊಟ್ಟೆಯಲ್ಲಿದ್ದ ಗಂಡು ಸಾವನ್ನಪ್ಪಿತ್ತು. ಅದು ಗಂಡು ಮಗುವಾಗಿತ್ತು ಎಂದು ಅನಿತಾ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಆಸ್ತಿ ವಿವಾದದ ಕಾರಣ ಅನಿತಾ ತನ್ನ ಸಹೋದರರೊಂದಿಗೆ ಸೇರಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ. ಆದರೆ ಪನ್ನಾಲಾಲ್ ವಿರುದ್ಧ ಆರೋಪ ಸಾಬೀತಾಗಿರುವುದರಿಂಅ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Continue Reading

ವೈರಲ್ ನ್ಯೂಸ್

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Viral Video: ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ. ಇದರ ಹಿಂದಿನ ಕತೆ ಏನು? ಇಲ್ಲಿದೆ ವಿವರ.

VISTARANEWS.COM


on

By

Viral Video
Koo

ಮೈದುನನ ಮಗನಿಗೆ ಮಹಿಳೆಯೊಬ್ಬಳು ವಿಷವಿಕ್ಕಿರುವ (poison) ಘಟನೆ ರಾಜಸ್ಥಾನದ (Rajasthan) ಬಾರ್ಮರ್ ಜಿಲ್ಲೆಯ ಭದ್ರೇಸ್ ಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ.

ರಾಜಸ್ಥಾನದ ಭದ್ರೇಸ್ ಗ್ರಾಮದಲ್ಲಿ ಹಿರಿಯ ಸಹೋದರನ ಪತ್ನಿ ಗಂಡನ ಕಿರಿಯ ಸಹೋದರನ ಮಗುವಿಗೆ ವಿಷ ನೀಡಿರುವುದಾಗಿ ಹೇಳಲಾಗಿದೆ. ಕಿರಿಯ ಸಹೋದರನ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರು. ಈ ಬಗ್ಗೆ ಮಗುವಿನ ತಾಯಿಯು ಗಂಡನ ಸಹೋದರನ ಪತ್ನಿ ಜೇಥನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು.

ಹಿಂದೆ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಇದ್ದಳು. ಮಗುವಿನ ಹಾಸಿಗೆಯ ಬಳಿ ರೆಕಾರ್ಡ್ ಮಾಡಲು ಕೆಮರಾ ಇರಿಸಿದ್ದಳು. ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ಪರೀಕ್ಷಿಸುತ್ತಿದ್ದಳು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೇಥನಿ ಎಂಬಾಕೆ ಕೋಣೆಗೆ ಪ್ರವೇಶಿಸುತ್ತಾಳೆ. ಮಗು ಒಂಟಿಯಾಗಿ ಮಲಗಿರುವುದನ್ನು ನೋಡಿ ಮಗುವಿನ ಮೇಲೆ ಇರಿಸಿದ್ದ ಸೊಳ್ಳೆ ಪರದೆಯನ್ನು ಸದ್ದಿಲ್ಲದೆ ತೆಗೆದು ಕೆಲವು ಹನಿಗಳನ್ನು ಮಗುವಿನ ಬಾಯಿಗೆ ಹಾಕಿದಳು.


ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೂರು ದಿನಗಳ ಕಾಲ ಐಸಿಯುನಲ್ಲಿ ಹೋರಾಡಿದ ಮಗು ಈಗ ಚೇತರಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಈ ವಿಡಿಯೋವನ್ನು ಈವರೆಗೆ 17.9 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದನ್ನು ನೋಡಿರುವ ಸಾಕಷ್ಟು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Miracle case : ಮುರ್ತುಜಾ ಖಾದ್ರಿ ಪವಾಡ; ಅಂತ್ಯಕ್ರಿಯೆ ಮಾಡುವಾಗಲೇ ಕೆಮ್ಮಿದ ಮಗು!

ವೈರಲ್ ಆಗಿರುವ ಈ ವಿಡಿಯೋ ಕುರಿತು ಬಾರ್ಮರ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಭದ್ರೇಸ್ ಗ್ರಾಮದ ಮುಖೇಶ್ ಪ್ರಜಾಪತ್ ಅವರ ಮಗನಿಗೆ ವಿಷವಿಕ್ಕಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಆಕೆ ಈ ರೀತಿ ಮಾಡಿದ್ದಳೆಂದು ಹೇಳಿಲ್ಲ ಎನ್ನಲಾಗಿದೆ.

Continue Reading

ದೇಶ

Laila Khan Case: ನಟಿ ಲೈಲಾ ಖಾನ್‌ ಸೇರಿ 6 ಜನರ ಹತ್ಯೆ;‌ ನಟಿಯ ತಂದೆ ಪರ್ವೇಜ್‌ ತಕ್‌ಗೆ ಗಲ್ಲು ಶಿಕ್ಷೆ!

Laila Khan Case: ಸೆಲಿನಾ ಅವರಿಗೆ ಪರ್ವೇಜ್‌ ತಕ್‌ ಮೂರನೇ ಪತಿಯಾಗಿದ್ದ. ಸೆಲಿನಾ ತಕ್‌ ಅವರು ಶ್ರೀಮಂತರಾಗಿದ್ದ ಕಾರಣ, ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಹೊಡೆಯಲು ಪರ್ವೇಜ್‌ ತಕ್‌ ಕುತಂತ್ರ ಮಾಡುತ್ತಿದ್ದ. ಇದಕ್ಕಾಗಿ, ಅವರ ಜತೆ ಜಗಳವಾಡುತ್ತಿದ್ದ. ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಆಸ್ತಿಗಾಗಿ ಜಗಳ ಕಾಯುತ್ತಿದ್ದ. ಕೊನೆಗೊಂದು ದಿನ ಲೈಲಾ ಖಾನ್‌ ಸೇರಿ ಆರು ಮಂದಿಯನ್ನು ಕೊಲೆ ಮಾಡಿದ್ದ. ಈಗ ಈತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

VISTARANEWS.COM


on

Laila Khan Case
Koo

ಮುಂಬೈ: ಬಾಲಿವುಡ್‌ ನಟಿ, ವಫಾ, ಫರಾರ್‌ ಸಿನಿಮಾಗಳ ಖ್ಯಾತಿಯ ಲೈಲಾ ಖಾನ್‌ (Laila Khan Case) ಹಾಗೂ ಅವರ ಐವರು ಸಂಬಂಧಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು (Mumbai Court) ನಟಿಯ ಮಲ ತಂದೆ ಪರ್ವೇಜ್‌ ತಕ್‌ಗೆ (Parvez Tak) ಗಲ್ಲು ಶಿಕ್ಷೆ ವಿಧಿಸಿದೆ. ಆ ಮೂಲಕ 13 ವರ್ಷಗಳ ಪ್ರಕರಣಕ್ಕೆ ಮುಂಬೈ ನ್ಯಾಯಾಲಯವು ಅಂತ್ಯ ಹಾಡಿದೆ. ಆರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಪವಾರ್‌ ಅವರು ಆದೇಶ ಹೊರಡಿಸಿದ್ದಾರೆ. ಇವರು ಮೇ 9ರಂದು ವಿಚಾರಣೆ ಅಂತ್ಯಗೊಳಿಸಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು.

ಏನಿದು ಪ್ರಕರಣ?

2011ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಇಗಟ್‌ಪುರಿಯಲ್ಲಿರುವ ನಿವಾಸದಲ್ಲಿ ನಟಿ ಲೈಲಾ ಖಾನ್‌, ಲೈಲಾ ಖಾನ್‌ ತಾಯಿ ಸೆಲಿನಾ ಸೇರಿ ಆರು ಜನರನ್ನು ಪರ್ವೇಜ್‌ ತಕ್‌ ಸೇರಿ ಹಲವರು ಕೊಲೆ ಮಾಡಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಲಿನಾ ಸೇರಿ ಆರು ಮಂದಿಯನ್ನು ಹತ್ಯೆಗೈದು, ಫಾರ್ಮ್‌ಹೌಸ್‌ನಲ್ಲಿಯೇ ಸಮಾಧಿ ಮಾಡಲಾಗಿತ್ತು. ಜಮ್ಮು-ಕಾಶ್ಮೀರ ಪೊಲೀಸರು ಪರ್ವೇಜ್‌ ತಕ್‌ನನ್ನು ಬಂಧಿಸಿದ ಬಳಿಕವೇ ಫಾರ್ಮ್‌ಹೌಸ್‌ನಲ್ಲಿ ಲೈಲಾ ಖಾನ್‌ ಸೇರಿ ಎಲ್ಲರ ಶವಗಳು ಪತ್ತೆಯಾಗಿದ್ದವು.

Court Order

ಕೊಲೆ ಮಾಡಲು ಏನು ಕಾರಣ?

ಸೆಲಿನಾ ಅವರಿಗೆ ಪರ್ವೇಜ್‌ ತಕ್‌ ಮೂರನೇ ಪತಿಯಾಗಿದ್ದ. ಸೆಲಿನಾ ತಕ್‌ ಅವರು ಶ್ರೀಮಂತರಾಗಿದ್ದ ಕಾರಣ, ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಹೊಡೆಯಲು ಪರ್ವೇಜ್‌ ತಕ್‌ ಕುತಂತ್ರ ಮಾಡುತ್ತಿದ್ದ. ಇದಕ್ಕಾಗಿ, ಅವರ ಜತೆ ಜಗಳವಾಡುತ್ತಿದ್ದ. ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಆಸ್ತಿಗಾಗಿ ಜಗಳ ಕಾಯುತ್ತಿದ್ದ ಕಾರಣ ಪರ್ವೇಜ್‌ ತಕ್‌ನನ್ನು ಸೆಲಿನಾ ಅವರು ಮನೆಗೆಲಸದವನ ರೀತಿ ನೋಡುತ್ತಿದ್ದರು. ಮನೆಯಿಂದ ಈತನನ್ನು ದೂರವೇ ಇಟ್ಟಿದ್ದರು ಎಂದು ತಿಳಿದುಬಂದಿತ್ತು.

2011ರ ಫೆಬ್ರವರಿಯಲ್ಲಿ ಸೆಲಿನಾ ಸೇರಿ ಎಲ್ಲರನ್ನೂ ಕೊಲೆ ಮಾಡಲು ಪ್ಲಾನ್‌ ರೂಪಿಸಿದ್ದ. ಇದಕ್ಕಾಗಿ ಆತ ಹಲವರಿಗೆ ಹಣವನ್ನೂ ಕೊಟ್ಟು ಕರೆದುಕೊಂಡು ಹೋಗಿದ್ದ. ಮನೆಗೆ ಹೋದವನೇ, ಸೆಲಿನಾ ಅವರ ಜತೆ ಜಗಳವಾಡಿದ್ದಾನೆ. ಮೊದಲು ಸೆಲಿನಾ ಅವರನ್ನು ಕೊಂದ ಪರ್ವೇಜ್‌ ತಕ್‌, ಬಳಿಕ ಲೈಲಾ ಖಾನ್‌ ಸೇರಿ ಆರು ಮಂದಿಯನ್ನು ಕೊಂದು, ಅದೇ ಫಾರ್ಮ್‌ಹೌಸ್‌ನಲ್ಲಿ ಹೂತು ಹಾಕಿದ್ದ. ಕೆಲ ತಿಂಗಳ ಬಳಿಕ ಈತನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದಾಗ ಆರೂ ಮಂದಿಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

Continue Reading
Advertisement
Crocodile Attack
ಕರ್ನಾಟಕ5 mins ago

Crocodile Attack: ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

Washing Machine Cleaning Tips
ಲೈಫ್‌ಸ್ಟೈಲ್6 mins ago

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

Ebola Virus
ಪ್ರಮುಖ ಸುದ್ದಿ15 mins ago

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Karnataka Weather Forecast
ಮಳೆ23 mins ago

Karnataka Weather : ಕೈಯಲ್ಲಿ ಛತ್ರಿ ಹಿಡಿದು ಬಸ್ ಡ್ರೈವಿಂಗ್; ಮಳೆಗೆ ಕುಸಿದು ಬಿದ್ದ ಮಾಳಿಗೆ ಮನೆ

Murder Attempt
ಕ್ರೈಂ24 mins ago

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

Sunil Chhetri Farewell
ಕ್ರೀಡೆ31 mins ago

Sunil Chhetri Farewell: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಭಾರತ ತಂಡ ಪ್ರಕಟ; ಚೆಟ್ರಿಗೆ ವಿದಾಯ ಪಂದ್ಯ

Drinking Water in Bangalore DK Shivakumar warns of disciplinary action against officials if Water causes health problem
ಕರ್ನಾಟಕ46 mins ago

D‌rinking Water: ಅಧಿಕಾರಿಗಳೇ ಹುಷಾರ್! ನೀರಿನಿಂದ ಆರೋಗ್ಯ ಕೈಕೊಟ್ರೆ ಶಿಸ್ತು ಕ್ರಮ: ಡಿಕೆಶಿ ವಾರ್ನಿಂಗ್

Physical Abuse
ಕ್ರೈಂ1 hour ago

Physical Abuse: ರಾಬರಿ ಎಂದು ದೂರು ಕೊಟ್ಟವನೇ ಕಾಮುಕ; ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಆಟೋ ಚಾಲಕ!

Jeans Fashion
ಫ್ಯಾಷನ್1 hour ago

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌