Couple Death: ಮದುವೆಯಾಗಿ ಮೂರೇ ತಿಂಗಳು; ಹೃದಯಾಘಾತವಾಗಿ ಸತ್ತ ಪತಿಯ ಹಿಂದೆಯೇ ತೆರಳಿದ ಪತ್ನಿ - Vistara News

ವೈರಲ್ ನ್ಯೂಸ್

Couple Death: ಮದುವೆಯಾಗಿ ಮೂರೇ ತಿಂಗಳು; ಹೃದಯಾಘಾತವಾಗಿ ಸತ್ತ ಪತಿಯ ಹಿಂದೆಯೇ ತೆರಳಿದ ಪತ್ನಿ

Couple Death: ಮುಂಜಾನೆ ದಿಲ್ಲಿ ಮೃಗಾಲಯಕ್ಕೆ ಭೇಟಿ ನೀಡುವ ಮೂಲಕ ಈ ನವವಿವಾಹಿತ ಜೋಡಿ ಉಲ್ಲಾಸದಿಂದ ದಿನವನ್ನು ಆರಂಭಿಸಿತ್ತು. ಆದರೆ 24 ಗಂಟೆಗಳಲ್ಲಿ ಇಬ್ಬರೂ ಜೀವ ತ್ಯಜಿಸಿದ್ದಾರೆ.

VISTARANEWS.COM


on

couple death ghaziabad
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಗಾಜಿಯಾಬಾದ್‌ನಲ್ಲಿ ಯುವ ಜೋಡಿಯ ಜೀವನ ದುರಂತ ಅಂತ್ಯ (Couple Death) ಕಂಡಿದೆ. ಮೂರು ತಿಂಗಳ ಹಿಂದೆ ಮದುವೆಯಾದ ಈ ಜೋಡಿ (New Married couple) ಕೇವಲ 24 ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ.

ಅಭಿಷೇಕ್ ಮತ್ತು ಅಂಜಲಿ, ಕಳೆದ ನವೆಂಬರ್ 30ರಂದು ವಿವಾಹವಾಗಿದ್ದರು. ನಿನ್ನೆ ಮುಂಜಾನೆ ದಿಲ್ಲಿ ಮೃಗಾಲಯಕ್ಕೆ (Delhi Zoo) ಭೇಟಿ ನೀಡುವ ಮೂಲಕ ಈ ಜೋಡಿ ದಿನವನ್ನು ಆರಂಭಿಸಿತ್ತು. ಆದರೆ 24 ಗಂಟೆಗಳಲ್ಲಿ ಇಬ್ಬರೂ ಜೀವ ತ್ಯಜಿಸಿದ್ದಾರೆ. 25ರ ಹರೆಯದ ಅಭಿಷೇಕ್ ಅಹ್ಲುವಾಲಿಯ ಹೃದಯಾಘಾತದಿಂದ (Heart attack, heart Failure) ಮೃತಪಟ್ಟರೆ, ಅವರ ಪತ್ನಿ ಅಂಜಲಿ ಆಘಾತ ತಡೆದುಕೊಳ್ಳಲಾಗದೆ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದರು. ಕೂಡಲೇ ಅಭಿಷೇಕ್‌ನನ್ನು ಮೊದಲು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಮತ್ತು ನಂತರ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಗುರುತಿಸಲಾಯಿತು.

ಅವರ ಪಾರ್ಥಿವ ಶರೀರವನ್ನು ಗಾಜಿಯಾಬಾದ್‌ನ ವೈಶಾಲಿಯಲ್ಲಿರುವ ಅಹ್ಲ್ಕಾನ್ ಅಪಾರ್ಟ್‌ಮೆಂಟ್‌ನಲ್ಲಿರುವ ನವವಿವಾಹಿತರ ಮನೆಗೆ ರಾತ್ರಿ 9 ಗಂಟೆಗೆ ತರಲಾಯಿತು. ತುಸು ಹೊತ್ತು ಶವದ ಬಳಿ ಸುಮ್ಮನೆ ಕುಳಿತಿದ್ದ ಅಂಜಲಿ, ನಂತರ ಓಡಿ ಹೋಗಿ ಏಳನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಆಕೆ ಕೊನೆಯುಸಿರೆಳೆದಿದ್ದಾರೆ.

ಅಭಿಷೇಕ್ ಅವರ ಸಂಬಂಧಿ ಬಬಿತಾ, “ದೇಹವನ್ನು ಮನೆಗೆ ತಂದ ನಂತರ, ಅವಳು ಅದರ ಪಕ್ಕದಲ್ಲಿ ಕುಳಿತು ಅಳುತ್ತಿದ್ದಳು. ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿ ಕಡೆಗೆ ಓಡಿದಳು. ಅವಳು ಜಿಗಿಯುತ್ತಾಳೆ ಎಂದು ಭಾವಿಸಿ ಅವಳ ಹಿಂದೆ ಓಡಿದೆ. ಆದರೆ ನಾನು ಅವಳನ್ನು ಹಿಡಿಯುವ ಮೊದಲು ಅವಳು ಕೆಳಗೆ ಹಾರಿದ್ದಳು” ಎಂದರು.

25 ವರ್ಷದ ಯುವಕನ ದುರಂತ ಸಾವು, ಹೃದಯಾಘಾತಕ್ಕೆ ಬಲಿಯಾಗುವ ಯುವ ವಯಸ್ಕರ ಸಂಖ್ಯೆಯಲ್ಲಿ ಆಗಿರುವ ಆತಂಕಕಾರಿ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ಗಾರ್ಬಾ ಕಾರ್ಯಕ್ರಮಗಳಿಂದ ಹಿಡಿದು ಜಿಮ್‌ಗಳು ಹಾಗೂ ಮದುವೆಯ ಮೆರವಣಿಗೆಗಳವರೆಗೆ ಯುವಕರು ಕುಸಿದು ಬೀಳುವ ಮತ್ತು ಹೃದಯಾಘಾತದಿಂದ ಸಾಯುವ ಹಲವಾರು ಘಟನೆಗಳು ಕಳೆದ ಎರಡು ವರ್ಷಗಳಿಂದ ವರದಿಯಾಗಿವೆ.

ಇದನ್ನೂ ಓದಿ: Viral News: ಹಲ್ಲಿನ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದವಳ ತುಟಿಯನ್ನೇ ಕತ್ತರಿಸಿದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Rahul Gandhi: ರಾಹುಲ್‌ ಗಾಂಧಿ ಅವರು ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ನೀಟ್‌ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸಿ, ಅವರ ಸಮಸ್ಯೆ, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕೇಳಿದ್ದಾರೆ. ಇದೇ ವೇಳೆ, ಪರೀಕ್ಷೆಯಲ್ಲಿ ಎಷ್ಟು ವೋಟ್‌ ಪಡೆದಿದ್ದೀರಿ ಎಂಬುದಾಗಿ ಬಾಯಿತಪ್ಪಿ ಕೇಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Rahul Gandhi
Koo

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG 2024) ‌ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಛೀಮಾರಿ ಹಾಕಿದೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ, ನೀಟ್‌ ಅಭ್ಯರ್ಥಿಗಳಿಗೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೇಳಿದ ಪ್ರಶ್ನೆ ಈಗ ಭಾರಿ ವೈರಲ್‌ ಆಗಿದೆ.

ಹೌದು, ರಾಹುಲ್‌ ಗಾಂಧಿ ಅವರು ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ನೀಟ್‌ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸಿ, ಅವರ ಸಮಸ್ಯೆ, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕೇಳಿದ್ದಾರೆ. “ನೀಟ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆಯೇ” ಎಂಬುದಾಗಿ ರಾಹುಲ್‌ ಗಾಂಧಿ ಅವರು ವಿದ್ಯಾರ್ಥಿಗಳಿಗೆ ಕೇಳಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳು ಹೌದು ಎಂದಿದ್ದಾರೆ. ಆಗ, ರಾಹುಲ್‌ ಗಾಂಧಿ ಅವರು, “ಪರೀಕ್ಷೆಯಲ್ಲಿ ಎಷ್ಟು ವೋಟು ಗಳಿಸಿದ್ದೀರಿ” ಎಂಬುದಾಗಿ ಪ್ರಶ್ನಿಸಿದ್ದಾರೆ. ಎಷ್ಟು ಅಂಕ ಪಡೆದಿದ್ದೀರಿ ಎಂಬುದಾಗಿ ಹೇಳುವ ಬದಲು ಅವರು ಎಷ್ಟು ವೋಟು ಗಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಜನ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ 240 ಎಂಬುದಾಗಿ ವಿದ್ಯಾರ್ಥಿ ಹೇಳಬೇಕಿತ್ತು” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಚುನಾವಣೆ ಮುಗಿದರೂ ರಾಹುಲ್‌ ಗಾಂಧಿ ಅವರು ಇನ್ನೂ ಅದರಿಂದ ಹೊರಬಂದಿಲ್ಲ” ಎಂಬುದಾಗಿ ಮತ್ತೊಬ್ಬರು ಕಾಲೆಳೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಡಿಯೊಗೆ ಕಮೆಂಟ್‌ ಮಾಡಿದ್ದಾರೆ.

ಏನಿದು ನೀಟ್‌ ಪ್ರಕರಣ?

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

Continue Reading

ವೈರಲ್ ನ್ಯೂಸ್

Viral Video: ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡ ಐಫೋನ್‌ಧಾರಿ! ದೊಡ್ಡವರ ಸಣ್ಣತನ ಎಂದ ನೆಟ್ಟಿಗರು

Viral Video: ಸಾಮಾನ್ಯವಾಗಿ ರಸ್ತೆ ಅಪಘಾತವಾದಾಗ ಅಕ್ಕಪಕ್ಕ ಇದ್ದವರು ನೆರವಿಗೆ ಧಾವಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತ್ ಅಪಘಾತವಾದ ಲಾರಿಯಿಂದ ಜ್ಯೂಸ್‌ ಪ್ಯಾಕ್‌ ಎತ್ತಿಕೊಂಡು ಹೋಗುತ್ತಿದ್ದಾನೆ! ಅಲ್ಲದೆ ಆತ ಕೈಯಲ್ಲಿ ದುಬಾರಿ ಐಫೋನ್‌ ಹಿಡಿದುಕೊಂಡಿದ್ದಾನೆ. ಸದ್ಯ ಆತನ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ವೈರಲ್‌ ವಿಡಿಯೊ ನೀವೂ ನೋಡಿ.

VISTARANEWS.COM


on

Viral Video
Koo

ಲಕ್ನೋ: ಐಫೋನ್‌ ಹೊಂದಿದವರು ತಕ್ಕಮಟ್ಟಿನ ಶ್ರೀಮಂತರು ಎನ್ನುವ ಮಾತಿದೆ. ಈ ಫೋನ್‌ಗಳಿಗೆ ದುಬಾರಿ ಬೆಲೆ ಆಗಿರುವ ಕಾರಣ ಹೀಗೆ ಹೇಳಲಾಗುತ್ತದೆ. ಜತೆಗೆ ಐಫೋನ್‌ ಪ್ರತಿಷ್ಠೆಯ ವಿಷಯ ಎಂದೂ ಕೆಲವರು ಭಾವಿಸುತ್ತಾರೆ. ಇದೇ ಕಾರಣಕ್ಕೆ ಐಫೋನ್‌ ಕುರುತಾದ ತಹೇವಾರಿ ಮೀಮ್ಸ್‌, ರೀಲ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತವೆ. ಇದೆಲ್ಲೆ ಫನ್ನಿ ವಿಡಿಯೊ ಬಿಡಿ. ಆದರೆ ಇದೀಗ ವೈರಲ್‌ ಆಗುತ್ತಿರುವ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ. ಅಂತಹದ್ದೇನಿದೆ ಈ ವಿಡಿಯೊದಲ್ಲಿ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Viral Video).

ಹೆದ್ದಾರಿಯೊಂದರಲ್ಲಿ ಲಾರಿ ಅಪಘಾತವಾಗಿದ್ದು, ಅದರಿಂದ ಹೊರಬಿದ್ದ ಜ್ಯೂಸ್‌ನ ಬಾಕ್ಸ್‌ ಅನ್ನು ಯುಕನೊಬ್ಬ ಎತ್ತಿಕೊಂಡು ಹೋಗುವ ದೃಶ್ಯ ಇದಾಗಿದೆ. ಅಪಘಾತಗೊಂಡ ಲಾರಿಯಲ್ಲಿದ್ದವರಿಗೆ ನೆರವಾಗುವುದು ಬಿಟ್ಟು ಈತ ಜ್ಯೂಸ್‌ ಎಗರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿ ಏನಿದೆ?

ಉತ್ತರಪ್ರದೇಶದ ಗಾಜಿಯಾಬಾದ್‌ನ ಲಾಲ್ ಕುವಾನ್ ಪ್ರದೇಶದಲ್ಲಿ ಸರಕು ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿತ್ತು. ಇದರಿಂದ ಹೊರ ಚೆಲ್ಲಿದ ತಂಪು ಪಾನೀಯಗಳ ಪ್ಯಾಕ್, ಬಾಕ್ಸ್‌ ರಸ್ತೆಯಲ್ಲಿ ಹರಡಿತ್ತು. ʼಕರ್ಮ್ ಕರೋ ಕಾಂಡ್ ನಹೀಂʼ (ಒಳ್ಳೆಯ ಕಾರ್ಯಗಳನ್ನು ಮಾಡಿ, ಕಿಡಿಗೇಡಿತನವನ್ನು ಮಾಡಬೇಡಿ) ಎಂದು ಬರೆದಿರುವ ಕಪ್ಪು ಟೀ ಶರ್ಟ್ ಧರಿಸಿದ ವ್ಯಕ್ತಿ ಅಪಘಾತ ಸಂಭವಿಸಿದ ಸ್ಥಳದ ಬಳಿ ನಡೆದುಕೊಂಡು ಬರುತ್ತಾನೆ. ಅವನು ಟ್ರಕ್‌ನಲ್ಲಿದ್ದವರಿಗೆ ನೆರವಾಗಲು ಬರುತ್ತಿದ್ದಾನೆ ಎಂದುಕೊಂಡರೆ ಅದು ತಪ್ಪು. ಅವನು ಫೋನಿನಲ್ಲಿ ಮಾತನಾಡುತ್ತ ರಸ್ತೆಯಲ್ಲಿ ಬಿದ್ದಿರುವ ತಂಪು ಪಾನೀಯದ ಪ್ಯಾಕ್‌ ಎತ್ತಿ ಏನೂ ನಡೆದೇ ಇಲ್ಲವೆನ್ನುವಂತೆ ತನ್ನ ಪಾಡಿಗೆ ತಾನು ಹೊರಟು ಹೋಗುತ್ತಾನೆ. ವಿಶೇಷ ಎಂದರೆ ಆತನ ಕೈಯಲ್ಲಿರುವುದು ದುಬಾರಿ ಐಫೋನ್‌ ಎನ್ನುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಒಟ್ಟಿನಲ್ಲಿ ಆತನ ಟೀಷರ್ಟ್‌ನ ಸಂದೇಶಕ್ಕೂ, ಕೈಯಲ್ಲಿರುವ ಐಫೋನ್‌ಗೂ ಆತನ ವರ್ತನೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.

“ಬ್ರೋ, ತಂಪು ಪಾನೀಯವನ್ನು ಏಕೆ ಕದಿಯುತ್ತಿದ್ದೀಯಾ? ಅಪಘಾತ ಸಂಭವಿಸಿದೆ. ಕನಿಷ್ಠ ಅಪಘಾತ ಸ್ಥಳದಿಂದಾದರೂ ಕದಿಯಬೇಡ” ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅದಾಗ್ಯೂ ಐಫೋನ್‌ಧಾರಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ತಂಪು ಪಾನೀಯ ಪ್ಯಾಕ್‌ನೊಂದಿಗೆ ಹೊರಟು ಹೋಗುತ್ತಾನೆ.

ಇದನ್ನೂ ಓದಿ: Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್‌ ಭೇಟಿ ನೀಡಿ, ಚಪ್ಪಲಿ ಹೊಲಿದ ರಾಹುಲ್‌ ಗಾಂಧಿ; Video ಇಲ್ಲಿದೆ

ನೆಟ್ಟಿಗರಿಂದ ಟೀಕೆ

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಆ ವ್ಯಕ್ತಿಯ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ʼʼಆತನ ನಿಜವಾದ ಸ್ವಭಾವ ಹೊರ ಬಂದಿದೆʼʼ ಎಂದು ಒಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ. ʼʼಇಂತಹ ವ್ಯಕ್ತಿಗಳಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?ʼʼ ಎಂದು ಇನ್ನೊಬ್ಬರು ಹತಾಶೆ ವ್ಯಕ್ತಪಡಿಸಿದ್ದಾರೆ. ʼʼತೀರ ಬಡವʼʼ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಇಎಂಐ ಪಾವತಿಸಿ ಐಫೋನ್‌ ಖರೀದಿಸಿರಬೇಕುʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಮಾನವೀಯತೆ ಮರೆಯಾಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಕೆಲವರಂತೂ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಜಿಯಾಬಾದ್‌ ಪೊಲೀಸರನ್ನು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಆತನ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.

Continue Reading

ಪ್ರಮುಖ ಸುದ್ದಿ

Viral News: ಜೈಲಿಂದ ಹೊರಬಂದ ಖುಷಿಗೆ ರೌಡಿಯ ಬೃಹತ್ ಮೆರವಣಿಗೆ; ಮತ್ತೆ ಜೈಲಿಗೇ ಕಳುಹಿಸಿದ ಪೊಲೀಸರು!

Viral News ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಹರ್ಷದ್ ಪಟಾಂಕರ್ ಅನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

VISTARANEWS.COM


on

Viral News
Koo

ಮಹಾರಾಷ್ಟ್ರ : ಮದುವೆ, ದೇವಸ್ಥಾನದ ಪ್ರತಿಷ್ಠಾಪನೆ ಸಮಾರಂಭದ ವೇಳೆ ಬೃಹತ್ ಮೆರವಣಿಗೆಯನ್ನು ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರದ ಕುಖ್ಯಾತ ರೌಡಿನೊಬ್ಬನನ್ನು ಸ್ವಾಗತಿಸಲು ಆತನ ಬೆಂಬಲಿಗರು ಬೃಹತ್‌ ರ‍್ಯಾಲಿಯನ್ನು  ಆಯೋಜಿಸಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ. ಆದರೆ ಈ ರ‍್ಯಾಲಿ ನಡೆಸಿ ಮತ್ತೆ ಆತ ಜೈಲು ಪಾಲಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರ ಅಪಾಯಕಾರಿ ಚಟುವಟಿಕೆಗಳ ತಡೆ (ಎಂಪಿಡಿಎ) ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23 ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3:30 ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು.

ವರದಿ ಪ್ರಕಾರ, ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟಾಂಕರ್ ಅವರನ್ನು ಈ ಹಿಂದೆ ಕೊಲೆ ಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಬಂಧಿಸಲಾಗಿತ್ತು ಮತ್ತು ಜೈಲಿಗೆ ಹಾಕಲಾಗಿತ್ತು.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಒಂದು ವರ್ಷದ ಹಿಂದೆ ಎಂಪಿಡಿಎ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಸಂಭ್ರಮಾಚರಣೆಯ ರ‍್ಯಾಲಿಯಿಂದಾಗಿ ಪೊಲೀಸ್ ಕ್ರಮಕೈಗೊಂಡು ಈಗ ಅವರನ್ನು ಮತ್ತೆ ಜೈಲಿಗೆ ತಳ್ಳಿದೆ ಎನ್ನಲಾಗಿದೆ. ಅವರ ಆರು ಸಹಚರರನ್ನು ಗೋಪಾಲ್ ನಾಗೋರ್ಕರ್, ವೇದಾಂತ್ ಚಾಲ್ಡೆ, ಶಾನ್ ಮೈಕೆಲ್, ಜಾಯ್ ಮೈಕೆಲ್, ರಾಬಿನ್ಸನ್ ಬ್ಯಾಟಿಸ್, ವೈಭವ್ ಖಂಡ್ರೆ ಮತ್ತು ವಿಕಾಸ್ ನೇಪಾಳಿ ಎಂದು ಗುರುತಿಸಲಾಗಿದೆ.

Continue Reading

Latest

Viral Video: ಕೈದಿಗೆ ಕೈಕೋಳ ಹಾಕಿ ತಾಜ್ ಮಹಲ್‌ ತೋರಿಸಲು ಹೋಗಿದ್ದ ಪೊಲೀಸರು! ವಿಡಿಯೊ ನೋಡಿ

Viral Video: ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‌ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ಈ ಘಟನೆ ಈಗ ರಾಜಸ್ಥಾನದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Viral Video
Koo


ಆಗ್ರಾ: ಕೈಗೆ ಬೇಡಿ ಹಾಕಿದ ಎಂದ ಮೇಲೆ ಅವರು ಕೈದಿಯಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಕೈದಿ ಜೈಲಿನಲ್ಲಿರಬೇಕು. ಅವರನ್ನು ಮನಬಂದಂತೆ ಹೊರಗಡೆ ಬಿಡುವ ಹಾಗಿಲ್ಲ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳನ್ನು ಕರೆದುಕೊಂಡು ಬರುವಂತಿಲ್ಲ. ಆದರೆ ಇತ್ತೀಚೆಗೆ ಕೈಕೋಳ ಧರಿಸಿದ ಕೈದಿಯೊಬ್ಬನನ್ನು ಪೊಲೀಸ್ ಅಧಿಕಾರಿಯೊಬ್ಬರು ತಾಜ್ ಮಹಲ್‍ಗೆ ಕರೆದೊಯ್ಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಕೈಕೋಳ ತೊಡಿಸಿದ್ದರಿಂದ ಕೈದಿಗೆ ತಾಜ್ ಮಹಲ್ ಒಳಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ತಿಳಿಸಿದೆ. ತಾಜ್ ಮಹಲ್‌ ಬಳಿ ರಕ್ಷಣೆಗೆ ನಿಯೋಜಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಆರೀಬ್ ಅಹ್ಮದ್ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊ ಹಳೆಯದು ಎಂದು ತಿಳಿಸಿದ್ದಾರೆ. ಅಲ್ಲದೇ ಕೈದಿಯ ಜೊತೆಗಿದ್ದ ಪೊಲೀಸ್ ಅಧಿಕಾರಿಯನ್ನು ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಹಿಮಾಚಲ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಮತ್ತು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜ್ ಮಹಲ್‍ನಿಂದ 500 ಮೀಟರ್ ದೂರದಲ್ಲಿ ಬಿಳಿ ಪೊಲೀಸ್ ಜೀಪ್ ನಿಲ್ಲಿಸಲಾಗಿತ್ತು ಮತ್ತು ಅಲ್ಲಿ ರಕ್ಷಣೆಗೆ ನಿಯೋಜಿಸಲಾದ ಸ್ಥಳೀಯ ಪೊಲೀಸರು ಹಿಮಾಚಲ ಪ್ರದೇಶದ ಅಧಿಕಾರಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡುವಂತೆ ಕೇಳಿಕೊಂಡರು. ಇದರ ನಂತರ, ಒಬ್ಬ ಅಧಿಕಾರಿ ಕೈದಿಯೊಂದಿಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಎಎಸ್ಐ ಸಿಬ್ಬಂದಿ ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 34 ಲಕ್ಷ ರೂ.ಗೆ ಮಾರಾಟವಾಯಿತು ʼರಾಮ ಜನ್ಮಭೂಮಿʼ ಸ್ಪೆಷಲ್‌ ವಾಚ್!

ಸ್ಥಳೀಯರು ಈ ಘಟನೆಯನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದು, ಇದರಲ್ಲಿ ಕೈಕೋಳ ಧರಿಸಿದ ಕೈದಿ ಮತ್ತು ಅವರ ಬೆಂಗಾವಲಿಗೆ ಇದ್ದ ಅಧಿಕಾರಿಯನ್ನು ತೋರಿಸಿದ್ದಾರೆ. ಅಲ್ಲದೇ ವಿಡಿಯೊ ತೆಗೆಯದಂತೆ ಅಧಿಕಾರಿಗಳು ಆಕ್ಷೇಪ ಮಾಡುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

Continue Reading
Advertisement
Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು9 mins ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ10 mins ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ10 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು11 mins ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Karnataka weather Forecast
ಮಳೆ13 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Drowned in water
ಬಳ್ಳಾರಿ25 mins ago

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

HD Kumaraswamy
ಪ್ರಮುಖ ಸುದ್ದಿ48 mins ago

HD Kumaraswamy: ರಾಜ್ಯದಲ್ಲಿ ನಾಳೆ ಚುನಾವಣೆ ನಡೆದ್ರೂ ಕಾಂಗ್ರೆಸ್‌ ಮನೆಗೆ; ಭವಿಷ್ಯ ನುಡಿದ ಕುಮಾರಸ್ವಾಮಿ

Paris Olympics 2024
ಪ್ರಮುಖ ಸುದ್ದಿ52 mins ago

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024
ಫ್ಯಾಷನ್55 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ1 hour ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ5 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ6 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌