Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ - Vistara News

ದೇಶ

Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ವಿವಿಧ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಅವರು ತೆಲಂಗಾಣ ಮತ್ತು ಒಡಿಶಾದಲ್ಲಿ 26,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

VISTARANEWS.COM


on

modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭುವನೇಶ್ವರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸದ್ಯ ವಿವಿಧ ರಾಜ್ಯಗಳ ಪ್ರವಾಸದಲ್ಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಅವರು ತೆಲಂಗಾಣ ಮತ್ತು ಒಡಿಶಾದಲ್ಲಿ 26,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ತೆಲಂಗಾಣದಲ್ಲಿ 6,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮತ್ತು ಒಡಿಶಾದಲ್ಲಿ 19,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸೇರಿದೆ. ಈ ಯೋಜನೆಗಳು ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಹಲವಾರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ ಎನ್ನುವುದು ವಿಶೇಷ.

ಉಜ್ಜಯಿನಿ ದೇಗುಲಕ್ಕೆ ಭೇಟಿ

ಸೋಮವಾರ ಬೆಳಗ್ಗೆ ತೆಲಂಗಾಣದ ಉಜ್ಜಯಿನಿ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೋದಿ ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇತರ ಯೋಜನೆಗಳ ಜತೆಗೆ ಪೆದ್ದಪಲ್ಲಿಯಲ್ಲಿನ ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌ ತೆಲಂಗಾಣ ಸೂಪರ್‌ ಥರ್ಮಲ್‌ ಪವರ್‌ ಪ್ರಾಜೆಕ್ಟ್‌ನ 800 ಎಂಡಬ್ಲ್ಯು ಅನ್ನು ಲೋಕಾರ್ಪಣೆಗೊಳಿಸಿದರು. ಈ ಹಿಂದೆ ಈ ಯೋಜನೆಗೆ ಮೋದಿ ಅವರೇ ಶಂಕು ಸ್ಥಾಪನೆ ನೆರವೇರಿಸಿದ್ದರು.

ಇಂದಿನ ಕಾರ್ಯಕ್ರಮ

ಮೋದಿ ಅವರು ಇಂದು ತೆಲಂಗಾಣ ಮತ್ತು ಒಡಿಶಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅದರ ವಿವರ ಇಲ್ಲಿದೆ.

ತೆಲಂಗಾಣ

  • ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಹೈದರಾಬಾದ್‌ನ ನಾಗರಿಕ ವಿಮಾನಯಾನ ಸಂಶೋಧನಾ ಸಂಸ್ಥೆ (CARO) ಕೇಂದ್ರವನ್ನು ಮೋದಿ ಉದ್ಘಾಟಿಸಲಿದ್ದಾರೆ. 350 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
  • ಪ್ರಧಾನಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65ರ 29 ಕಿ.ಮೀ ಉದ್ದದ ಪುಣೆ-ಹೈದರಾಬಾದ್ ವಿಭಾಗದ ಆರು ಪಥದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
  • ಘಾಟ್ಕೇಸರ್-ಲಿಂಗಂಪಲ್ಲಿಯಿಂದ ಮೌಲಾ ಅಲಿ-ಸನತನಗರ ಮಾರ್ಗವಾಗಿ ಸಾಗುವ ಬಹು ಮಾದರಿ ಸಾರಿಗೆ ಸೇವೆ(ಗೆMMTS) ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ.
  • 4.5 ಎಂಎಂಟಿಪಿಎ ಸಾಮರ್ಥ್ಯದ 1,212 ಕಿ.ಮೀ. ಉದ್ದದ ಪಾರಾದೀಪ್-ಹೈದರಾಬಾದ್ ಇಂಡಿಯನ್ ಆಯಿಲ್ ಉತ್ಪನ್ನ ಸಾಗಾಟದ ಪೈಪ್‌ಲೈನ್‌ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಪ್‌ಲೈನ್‌ ಒಡಿಶಾ (329 ಕಿ.ಮೀ.), ಆಂಧ್ರಪ್ರದೇಶ (723 ಕಿ.ಮೀ.) ಮತ್ತು ತೆಲಂಗಾಣ (160 ಕಿ.ಮೀ.) ಮೂಲಕ ಹಾದುಹೋಗುತ್ತದೆ.

ಒಡಿಶಾ

  • ಪಾರಾದೀಪ್ ಸಂಸ್ಕರಣಾಗಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮೊನೊ ಎಥಿಲೀನ್ ಗ್ಲೈಕಾಲ್ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಜತೆಗೆ ಒಡಿಶಾದ ಪಾರಾದೀಪ್‌ನಿಂದ ಪಶ್ಚಿಮ ಬಂಗಾಳದ ಹಲ್ದಿಯಾವರೆಗಿನ ಪೈಪ್‌ಲೈನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.
  • ರಾಷ್ಟ್ರೀಯ ಹೆದ್ದಾರಿ 49ರ ಸಿಂಘಾರದಿಂದ ಬಿಂಜಬಹಲ್ ವಿಭಾಗ, ರಾಷ್ಟ್ರೀಯ ಹೆದ್ದಾರಿ 49ರ ಬಿಂಜಬಹಾರ್‌ನಿಂದ ತಿಲೇಬಾನಿ ವಿಭಾಗ, ರಾಷ್ಟ್ರೀಯ ಹೆದ್ದಾರಿ 18ರ ಬಾಲಸೋರ್-ಜಾರ್ಪೋಖಾರಿಯಾ ವಿಭಾಗ ಮತ್ತು ರಾಷ್ಟ್ರೀಯ ಹೆದ್ದಾರಿ 16ರ ತಂಗಿ-ಭುವನೇಶ್ವರ ವಿಭಾಗವನ್ನು ಚತುಷ್ಪಥಗೊಳಿಸುವ ಕಾಮಗಾರಿಯನ್ನೂ ಅವರು ಉದ್ಘಾಟಿಸಲಿದ್ದಾರೆ. ಮಾತ್ರವಲ್ಲ ಚಂಡಿಖೋಲ್-ಪಾರಾದೀಪ್ ರಸ್ತೆಯ ಎಂಟು ಪಥದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  • 162 ಕಿ.ಮೀ. ಉದ್ದದ ಬನ್ಸಪಾನಿ-ದೈತಾರಿ-ತೋಮ್ಕಾ-ಜಖಾಪುರ ರೈಲು ಮಾರ್ಗವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸ್ತುತ ಸಾಮರ್ಥ್ಯವನ್ನು ಹೆಚ್ಚಿಸುವುದರ ಹೊರತಾಗಿ, ಇದು ಕಿಯೋಂಜಾರ್‌ನಿಂದ ಬಂದರು ಮತ್ತು ಉಕ್ಕಿನ ಸ್ಥಾವರಗಳಿಗೆ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಸಮರ್ಥವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ.
  • ಒಡಿಶಾ ಸ್ಯಾಂಡ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (Indian Rare Earths Ltd)ನ 5 ಎಂಎಲ್‌ಡಿ ಸಾಮರ್ಥ್ಯದ ಸಮುದ್ರದ ಉಪ್ಪುನೀರು ಶುದ್ಧೀಕರಣ ಘಟಕವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Sunita Williams: ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಈಗ ಮತ್ತೆ ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದಾರೆ.

VISTARANEWS.COM


on

Sunita Williams
Koo

ವಾಷಿಂಗ್ಟನ್:‌ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ (Boeing Starliner) ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ. ಸುನೀತಾ ವಿಲಿಯಮ್ಸ್‌ ಅವರು ಬಾಹ್ಯಾಕಾಶಯಾನ ಕೈಗೊಳ್ಳುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಫ್ಲೊರಿಡಾದಲ್ಲಿರುವ ಕೇಪ್‌ ಕ್ಯಾನವರಲ್‌ ಸ್ಪೇಸ್‌ ಫೋರ್ಸ್‌ ಸೆಂಟರ್‌ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಒಂದು ವಾರ ಇರಲಿದ್ದಾರೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಆರನೇ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಸ್ಟಾರ್‌ಲೈನರ್‌ ಭಾಜನವಾಯಿತು. ಇದಕ್ಕೂ ಮೊದಲು ಮರ್ಕ್ಯುರಿ, ಜೆಮಿನಿ, ಅಪೋಲೊ, ಸ್ಪೇಸ್‌ ಶಟಲ್‌ ಹಾಗೂ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಲಾಗಿತ್ತು.

ಸುನೀತಾ ವಿಲಿಯಮ್ಸ್‌ ಹಿನ್ನೆಲೆ

ಭಾರತದ ಮೂಲದ ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.

ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.

ಗಣೇಶನ ಆರಾಧಕಿ

ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ತಿಳಿಸಿದ್ದರು. ಈ ಹಿಂದೆ ಅವರು ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ಯುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು.

ಇದನ್ನೂ ಓದಿ: Gaganyaan : ಗಗನಯಾನ ಪೈಲೆಟ್​ ಪ್ರಶಾಂತ್​ ನಾಯರ್​ ​ಮದುವೆಯಾದ ಕೇರಳದ ನಟಿ ಲೆನಾ

Continue Reading

Latest

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ತಮ್ಮತಮ್ಮ ಕ್ಷೇತ್ರದ ಸಂಸದರಿಗೆ (Minister Of Parliament) ಸಿಗುವ ವಿವಿಧ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಇದರಲ್ಲಿ ಅವರ ವೇತನ, ಸೌಲಭ್ಯಗಳು ಸೇರಿವೆ. ಹಾಗಾದರೆ ಪ್ರತಿ ಕ್ಷೇತ್ರದ ಸಂಸದರು ಐದು ವರ್ಷಗಳ ಅಧಿಕಾರಾವಧಿಯಲ್ಲಿ ಏನೆಲ್ಲಾ ಸೌಲಭ್ಯ ಪಡೆಯುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Minister Of Parliament
Koo

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ (result) ಈಗಾಗಲೇ ಹೊರಬಿದ್ದಿದೆ. ಇದರೊಂದಿಗೆ ತಮ್ಮತಮ್ಮ ಕ್ಷೇತ್ರದ ಸಂಸದರ (Minister Of Parliament) ಅಧಿಕಾರ, ಅವರ ವಿಶೇಷ ಸೌಲಭ್ಯಗಳ ಕುರಿತಾಗಿ ಒಂದಷ್ಟು ತಿಳಿದುಕೊಳ್ಳುವ ಆಸಕ್ತಿಯಂತೂ ಎಲ್ಲರಲ್ಲೂ ಇದ್ದೇ ಇರುತ್ತದೆ.

ಭಾರತೀಯ ಸಂಸತ್ತಿನ ಎರಡು ಸದನಗಳಲ್ಲಿ ಒಂದಾಗಿರುವ ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಸದಸ್ಯರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲು ಸಾರ್ವಜನಿಕರಿಂದ ಚುನಾಯಿತರಾಗುತ್ತಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಬಳ ಎಷ್ಟು?:

ಸಂಸದರು ಮಾಸಿಕವಾಗಿ 1 ಲಕ್ಷ ರೂ. ವೇತನವನ್ನು ಪಡೆಯುತ್ತಾರೆ. ಅವರ ಸಂಬಳವು ಪ್ರತಿ ಐದು ವರ್ಷಗಳಿಗೊಮ್ಮೆ ದೈನಂದಿನ ಭತ್ಯೆಗಳ ರೂಪದಲ್ಲಿ ಹೆಚ್ಚಾಗುತ್ತದೆ.

ಸಂಸತ್ತಿನ ಸದಸ್ಯರ ಭತ್ಯೆಗಳು ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ 2010ರ ಪ್ರಕಾರ ಅವರ ಮೂಲ ವೇತನವು ತಿಂಗಳಿಗೆ 50,000 ರೂ. ಅನ್ನು ಒಳಗೊಂಡಿರುತ್ತದೆ, ಸಂಬಳದ ಪ್ರಕಾರ, ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗಲು ದೈನಂದಿನ ಭತ್ಯೆಯಾಗಿ ಅವರು 2,000 ರೂಪಾಯಿಗಳನ್ನು ಪಡೆಯುತ್ತಾರೆ. ಸಂಸದರು ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರೆ ಪ್ರತಿ ಕಿ.ಮೀ.ಗೆ 16 ರೂ.ನಂತೆ ಪ್ರಯಾಣ ಭತ್ಯೆಗೆ ಅರ್ಹರಾಗಿರುತ್ತಾರೆ.

ಅವರು ತಿಂಗಳಿಗೆ 45,000 ರೂ.ಗಳ ಕ್ಷೇತ್ರ ಭತ್ಯೆಯನ್ನೂ ಪಡೆಯುತ್ತಾರೆ. ದೂರವಾಣಿ ಮತ್ತು ಅಂಚೆ ವೆಚ್ಚಕ್ಕೆ 15,000 ರೂ. ಸೇರಿದಂತೆ ಕಚೇರಿ ವೆಚ್ಚವಾಗಿ ತಿಂಗಳಿಗೆ 45,000 ರೂ. ಪಡೆಯುತ್ತಾರೆ.

ಇದನ್ನೂ ಓದಿ: Muslim Women: ಟಕಾ ಟಕ್‌ ಅಂದ್ರಲ್ಲ, 1 ಲಕ್ಷ ರೂ. ಕೊಡಿ; ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟ ಮುಸ್ಲಿಂ ಮಹಿಳೆಯರು!

ಕಾರ್ಯದರ್ಶಿ, ಸಹಾಯಕರ ವೇತನ ನೀಡಲು ಅವರು ಭತ್ಯೆ ಬಳಸಿಕೊಳ್ಳಬಹುದು. ಪ್ರತಿ ತಿಂಗಳು ಸದಸ್ಯರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಪಡೆಯಲು 500 ರೂ. ಪಡೆಯುತ್ತಾರೆ.

ಸಂಸದರಿಗೆ ವಿವಿಧ ಸಭೆಗಳಿಗೆ ಹಾಜರಾಗಲು ಸೇರಿದಂತೆ ತಮ್ಮ ಕರ್ತವ್ಯಗಳ ನಿರ್ವಹಣೆಗೆ ಉಂಟಾಗುವ ಪ್ರಯಾಣ ವೆಚ್ಚಗಳಿಗೆ ಮರುಪಾವತಿಗಳನ್ನು ನೀಡಲಾಗುತ್ತದೆ. ಸಂಸದರು ತಮ್ಮ ಅಧಿಕಾರ ಅವಧಿಗೆ ಬಾಡಿಗೆ ರಹಿತ ವಸತಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಇದಲ್ಲದೆ ಸಂಸದರಿಗೆ ಮತ್ತು ಅವರ ಕುಟುಂಬದವರಿಗೆ ಬಸ್‌, ರೈಲು ಮತ್ತು ವಿಮಾನ ಪ್ರಯಾಣ ಉಚಿತವಾಗಿರುತ್ತದೆ. ಸಂಸದರು ಮತ್ತು ಅವರ ಕುಟುಂಬದವರಿಗೆ ಚಿಕಿತ್ಸೆ ಉಚಿತವಾಗಿರುತ್ತದೆ. ಒಂದೇ ಒಂದು ದಿನ ಸಂಸದರಾಗಿದ್ದರೂ ಬದುಕಿರುವವರೆಗೂ ಪ್ರತಿ ತಿಂಗಳು 25,000 ರೂ. ಪಿಂಚಣಿ ಸಿಗುತ್ತದೆ. ಹತ್ತು ವರ್ಷ ಎಂಪಿ ಆಗಿದ್ದರೆ 35,000 ರೂ. ಪಿಂಚಣಿ ಸಿಗುತ್ತದೆ. ಜತೆಗೆ ಇತರ ಸೌಲಭ್ಯಗಳೂ ಮುಂದುವರಿಯುತ್ತವೆ.

Continue Reading

ದೇಶ

India Bloc Meeting: ಆಡಳಿತದ ಆಸೆ ಕೈಬಿಟ್ಟ ಇಂಡಿಯಾ ಒಕ್ಕೂಟ; ಒಗ್ಗಟ್ಟಿಗಾಗಿ ಸಭೆ, ಬಲಿಷ್ಠ ಪ್ರತಿಪಕ್ಷದ ಗುರಿ!

India Bloc Meeting: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆದಿದೆ. ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುವುದು, ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳ ಮಧ್ಯೆ ಸಮನ್ವಯತೆ, ಒಗ್ಗಟ್ಟು ಸಾಧಿಸುವುದು ಸೇರಿ ಹಲವು ವಿಷಯಗಳ ಕುರಿತು ಇಂಡಿಯಾ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

India Bloc Meeting
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎನ್‌ಡಿಎ ಮೈತ್ರಿಕೂಟವು ನರೇಂದ್ರ ಮೋದಿ ಅವರನ್ನೇ ನಾಯಕನನ್ನಾಗಿ ಘೋಷಣೆ ಮಾಡಿದೆ. ಎನ್‌ಡಿಎ ಸಭೆಯಲ್ಲಿ (NDA Meeting) ಎಲ್ಲ ಪಕ್ಷಗಳ ನಾಯಕರು ಮೋದಿ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಜೂನ್‌ 8ರಂದು ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪವಾಡ ನಡೆದು, ಅಧಿಕಾರದ ಆಸೆಯಲ್ಲಿದ್ದ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ಸಭೆ (India Bloc Meeting) ನಡೆಸಿದ್ದು, ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆದಿದೆ. ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುವುದು, ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳ ಮಧ್ಯೆ ಸಮನ್ವಯತೆ, ಒಗ್ಗಟ್ಟು ಸಾಧಿಸುವುದು, ರಚನೆಯಾದ ನೂತನ ಸರ್ಕಾರದ ವಿರುದ್ಧ ಹೋರಾಡುವುದು, ಅದನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು ಸೇರಿ ಹಲವು ರಣತಂತ್ರಗಳ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಎನ್‌ಸಿಪಿಯ ಶರದ್‌ ಪವಾರ್‌, ಸುಪ್ರಿಯಾ ಸುಳೆ, ಡಿಎಂಕೆಯ ಎಂ.ಕೆ.ಸ್ಟಾಲಿನ್‌, ಟಿ.ಆರ್‌.ಬಾಲು, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಜತೆಗೆ ಟಿಎಂಸಿ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ), ಆರ್‌ಜೆಡಿ, ಸಿಪಿಐ (ಎಂ), ಸಿಪಿಐ, ಜೆಜೆಎಂ, ಆಮ್‌ ಆದ್ಮಿ ಪಾರ್ಟಿ, ವಿಸಿಕೆ, ಕೆಎಂಡಿಕೆ ಸೇರಿ ಹಲವು ಪಕ್ಷಗಳ ನಾಯಕರು, ಪ್ರತಿನಿಧಿಗಳು ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪವಾಡದ ನಿರೀಕ್ಷೆಯಲ್ಲಿದ್ದ ಒಕ್ಕೂಟ

ಲೋಕಸಭೆ ಚುನಾವಣೆಯಲ್ಲಿ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಇಂಡಿಯಾ ಒಕ್ಕೂಟವು ಪವಾಡ ನಡೆಯುವ ನಿರೀಕ್ಷೆಯಲ್ಲಿತ್ತು. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ನಿತೀಶ್‌ ಕುಮಾರ್‌ ಅವರ ಜೆಡಿಯು ಕೂಡ ಇಂಡಿಯಾ ಒಕ್ಕೂಟದ ಜತೆಗೆ ಕೈಜೋಡಿಸಿದರೆ ಸರ್ಕಾರ ರಚಿಸುವ ಕನಸಿತ್ತು. ಆದರೆ, ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ. ನರೇಂದ್ರ ಮೋದಿ ಅವರೇ ನಾಯಕ ಎಂಬುದಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟವು ಅಧಿಕಾರದ ಆಸೆಯನ್ನು ಕೈಬಿಡುವಂತಾಗಿದೆ.

ಇನ್ನೂ ಓದಿ: HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!

Continue Reading

ದೇಶ

Lowest Margin of Wins: ಕೇವಲ 48 ಮತ ಅಂತರದ ಗೆಲುವು! ಕಡಿಮೆ ಅಂತರದಿಂದ ಗೆದ್ದವರ ಪಟ್ಟಿ ಇಲ್ಲಿದೆ

Lowest Margin of Wins: ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

VISTARANEWS.COM


on

Lowest Margin of Wins
Koo

ನವದೆಹಲಿ: 2024 ರ ಲೋಕಸಭಾ ಚುನಾವಣೆ ಫಲಿತಾಂಶ(Lok Sabha Election 2024) ಹೊರಬಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಮುಗಿದಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು, ಅತಿ ಹೆಚ್ಚು ಬಾರಿ ಗೆದ್ದವರು ಹೀಗೆ ಚುನಾವಣೆ ಕುರಿತ ಇಂಟ್ರೆಸ್ಟಿಂಗ್‌ ಸುದ್ದಿಗಳನ್ನು ನೋಡಿದ್ದೇವೆ. ಹೀಗಿರುವಾಗ ಈ ಬಾರಿ ಅತ್ಯಂತ ಕಡಿಮೆ ಮತಗಳಲ್ಲಿ ಅಂದರೆ ಇನ್ನೇನು ಸೋತೆ ಬಿಟ್ರು ಅನ್ನೋವಾಗ ಗೆಲುವಿನ ನಗೆ ಬೀರಿದವರ ಬಗ್ಗೆ ತಿಳಿದುಕೊಳ್ಳಬೇಕು. ನೆಕ್‌ ಟು ನೆಕ್‌ ಫೈಟ್‌ ನೀಡಿ ಕೇವಲ ಕೆಲವೇ ಕೆಲವು ಮತಗಳ ಅಂತರದಲ್ಲಿ ಗೆದ್ದವರು(Lowest Margin of Wins) ಯಾರು ಗೊತ್ತೇ?

ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳು

ಇಡೀ ದೇಶದಲ್ಲಿಯೇ ಈ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವವರು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್. ಇವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅಂದರೆ 1989 ಮತ್ತು 1998 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನಕಾಪಲ್ಲಿಯಿಂದ ಕೊನತ್ತಲ ರಾಮಕೃಷ್ಣ ಮತ್ತು ಬಿಹಾರದ ರಾಜಮಹಲ್‌ನಿಂದ ಸೋಮ್ ಮರಾಂಡಿ ಅವರು ಕ್ರಮವಾಗಿ ಒಂಬತ್ತು ಮತಗಳಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಅವರ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಮತಗಳ ಅಂತರದಿಂದ ರವೀಂದ್ರ ವೈಕರ್‌ ಗೆಲುವು ಸಾಧಿಸಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿರುವವರು ಕೇರಳದ ಅಟ್ಟಿಂಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್. ಈ ಚುನಾವಣೆಯಲ್ಲಿ, 684 ಮತಗಳಿಂದ ಜಯಗಳಿಸಿದ್ದಾರೆ. ಜೈಪುರ ಗ್ರಾಮಾಂತರದಿಂದ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ (1,615 ಮತಗಳು) ಮತ್ತು ಛತ್ತೀಸ್‌ಗಢದ ಕಂಕೇರ್‌ನಿಂದ ಅವರ ಪಕ್ಷದ ಸಹೋದ್ಯೋಗಿ ಬ್ರೋಜರಾಜ್ ನಾಗ್ (1,884 ಮತಗಳು) 2,000 ಮತಗಳಿಗಿಂತ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಲ್ಲಿ ಪಟ್ಟಿಗೆ ಸೇರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಇತರ ಅಭ್ಯರ್ಥಿಗಳೆಂದರೆ ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಬಿಜೆಪಿಯ ಮುಖೇಶ್ ರಜಪೂತ್ (2,678 ಮತಗಳು), ಬಿಜೆಪಿಯ ಪ್ರವೀಣ್ ಪಟೇಲ್ ಫುಲ್ಪುರ (4,332 ಮತಗಳು), ಪಂಜಾಬ್‌ನ ಫಿರೋಜ್‌ಪುರದಿಂದ ಕಾಂಗ್ರೆಸ್‌ನ ಶೇರ್ ಸಿಂಗ್ ಘುಬಯಾ (3,242 ಮತಗಳು). ಮತಗಳು), ಚಂಡೀಗಢದಿಂದ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ (2,504 ಮತಗಳು), ಲಕ್ಷದ್ವೀಪದಿಂದ ಕಾಂಗ್ರೆಸ್‌ನ ಮುಹಮ್ಮದ್ ಹಮ್ದುಲ್ಲಾ ಸಯೀದ್ (2,647 ಮತಗಳು) ಮತ್ತು ಉತ್ತರ ಪ್ರದೇಶದ ಧೌರಾಹ್ರಾದಿಂದ ಸಮಾಜವಾದಿ ಪಕ್ಷದ ಆನಂದ್ ಭದೌರಿಯಾ (4,449 ಮತಗಳು).

ಉತ್ತರ ಪ್ರದೇಶದ ಬನ್ಸ್‌ಗಾಂವ್‌ನಿಂದ ಬಿಜೆಪಿಯ ಕಮಲೇಶ್ ಪಾಸ್ವಾನ್ 3,150 ಮತಗಳ ಅಂತರದಿಂದ, ಬಿಷ್ಣುಪುರದಿಂದ ಕೇಸರಿ ಪಕ್ಷದ ಸೌಮಿತ್ರಾ ಖಾನ್ 5,567 ಮತಗಳಿಂದ, ತೆಲಂಗಾಣದ ಮಹಬೂಬ್‌ನಗರದಿಂದ ಅದರ ಅಭ್ಯರ್ಥಿ ಅರುಣಾ ಡಿಕೆ 4,500 ಮತಗಳಿಂದ ಗೆದ್ದಿದ್ದಾರೆ. ಸಮಾಜವಾದಿ ಪಕ್ಷದ ಅಜೇಂದ್ರ ಸಿಂಗ್ ಲೋಧಿ ಅವರು ಉತ್ತರ ಪ್ರದೇಶದ ಹಮೀರ್‌ಪುರದಿಂದ 2,629 ಮತಗಳಿಂದ ಗೆದ್ದಿದ್ದರೆ, ಸೇಲಂಪುರದಿಂದ ಅದರ ಅಭ್ಯರ್ಥಿ ರಾಮಶಂಕರ್ ರಾಜ್‌ಭರ್ 3,573 ಮತಗಳಿಂದ ಜಯಗಳಿಸಿದ್ದಾರೆ.

ಪಶ್ಚಿಮ ಬಂಗಾಳದ ಅರಾಂಬಾಗ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಮಿತಾಲಿ ಬಾಗ್ 6,399 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್‌ನ ಮಾಣಿಕ್ಕಂ ಟ್ಯಾಗೋರ್ ತಮಿಳುನಾಡಿನ ವಿರುದುನಗರದಿಂದ 4,633 ಮತಗಳಿಂದ ಮುನ್ನಡೆಯಲ್ಲಿದ್ದರೆ, ಮಹಾರಾಷ್ಟದ ಧುಲೆಯಲ್ಲಿ ಗ್ರ್ಯಾಂಡ್ ಓಲ್ಡ್ ಪಕ್ಷದ ಬಚ್ಚವ್ ಶೋಭಾ ದಿನೇಶ್ 3,831 ಮತಗಳಿಂದ ಮುಂದಿದ್ದಾರೆ.

ಇದನ್ನೂ ಓದಿ:Bangalore Central Election Result 2024 : ಪಿ.ಸಿ ಮೋಹನ್​ ಮರ್ಯಾದೆ ಉಳಿಸಿದ ಮಹದೇವರಪುರ ಕ್ಷೇತ್ರ!

Continue Reading
Advertisement
India vs Ireland
ಕ್ರೀಡೆ2 mins ago

India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

Sunita Williams
ಪ್ರಮುಖ ಸುದ್ದಿ28 mins ago

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Dr C N Manjunath
ಕರ್ನಾಟಕ48 mins ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ1 hour ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ1 hour ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

500 Rs deposit in the name of new admission children by old students of Government Kannada School Lingasugur
ಕರ್ನಾಟಕ1 hour ago

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

Koti Movie
ಸಿನಿಮಾ1 hour ago

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Belagavi Election Result 2024
ಬೆಳಗಾವಿ2 hours ago

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

French Open 2024
ಕ್ರೀಡೆ2 hours ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest2 hours ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌