Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ - Vistara News

ಪ್ರಮುಖ ಸುದ್ದಿ

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Lok Sabha Election: ಎನ್‌ಡಿಎ, ಬಿಹಾರದಲ್ಲಿ ಎಲ್‌ಜೆಪಿ (ರಾಮ್‌ವಿಲಾಸ್) ಗಾಗಿ ಐದು ಲೋಕಸಭಾ ಸ್ಥಾನಗಳನ್ನು ನೀಡಿದೆ. ಇದರಿಂದ ಅವರ ಚಿಕ್ಕಪ್ಪ ಪರಾಸ್‌ ಸಿಟ್ಟಿಗೆದ್ದಿದ್ದಾರೆ.

VISTARANEWS.COM


on

Pashupati Kumar Paras
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ (Lok Sabha Election) ಮುನ್ನ ಲೋಕಜನ ಶಕ್ತಿ ಪಕ್ಷ (ರಾಮ್‌ವಿಲಾಸ್‌) (Lok Janshakti party- Ram Vilas) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿರುವುದರಿಂದ ಸಿಟ್ಟಿಗೆದ್ದಿರುವ ಚಿರಾಗ್‌ ಚಿಕ್ಕಪ್ಪ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ (Pashupati Kumar Paras) ಮಂಗಳವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

“ಎನ್‌ಡಿಎ ಮಿತ್ರಪಕ್ಷಗಳನ್ನು ಘೋಷಿಸಲಾಗಿದೆ. ನಾನು ಪ್ರಧಾನಿಗೆ ಕೃತಜ್ಞನಾಗಿದ್ದೇನೆ. ನನ್ನ ಪಕ್ಷ ಮತ್ತು ನಾನು ಅನ್ಯಾಯಕ್ಕೆ ಒಳಗಾಗಿದ್ದೇವೆ. ಹಾಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪರಾಸ್ ಹೇಳಿದ್ದಾರೆ.

ಪರಾಸ್‌ ಅವರು ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಆಗಿದ್ದು, ಅವರ ಪ್ರತಿಸ್ಪರ್ಧಿ ಬಣದ ನಾಯಕನಾಗಿದ್ದಾರೆ. 2021ರಲ್ಲಿ ಎಲ್‌ಜೆಪಿ ಅದರ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಬಿಹಾರದಲ್ಲಿ ವಿಭಜನೆಯಾಯಿತು. ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪರಾಸ್ ಅವರು ಪಕ್ಷದಲ್ಲಿ ಪ್ರಾಬಲ್ಯ ಹೊಂದಿದ್ದು, ಐವರು ಸಂಸದರನ್ನು ತಮ್ಮೊಂದಿಗೆ ಕರೆದುಕೊಂಡರು. ಪಾಸ್ವಾನ್ ಅವರ ಮಗ ಚಿರಾಗ್ ಪ್ರತ್ಯೇಕ ಪಕ್ಷವನ್ನು (ಲೋಕಜನ ಶಕ್ತಿ ಪಕ್ಷ- ರಾಮ್‌ವಿಲಾಸ್‌) ರಚಿಸಬೇಕಾಗಿ ಬಂದಿತ್ತು.

ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ, ಚಿರಾಗ್‌ ಅವರ ವಯಸ್ಸು ಮತ್ತು ರಾಜ್ಯದಲ್ಲಿ ಅವರ ಆಕ್ರಮಣಕಾರಿ ಬೆಳವಣಿಗೆಯನ್ನು ಕಂಡಿದ್ದು, ಅವರನ್ನು ಬಿಹಾರ ರಾಜಕೀಯದ ದೀರ್ಘಾವಧಿಯ ಆಟಗಾರನಾಗಿ ಗುರುತಿಸಿದೆ. ರ್ಯಾಲಿಗಳಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವ ಚಿರಾಗ್ ಪಾಸ್ವಾನ್ ಅವರ ಸಾಮರ್ಥ್ಯವನ್ನು ಗ್ರಹಿಸಿದ ಎನ್‌ಡಿಎ, ಬಿಹಾರದಲ್ಲಿ ಎಲ್‌ಜೆಪಿ (ರಾಮ್‌ವಿಲಾಸ್) ಗಾಗಿ ಐದು ಲೋಕಸಭಾ ಸ್ಥಾನಗಳನ್ನು ಹಂಚಿತು. ದಿವಂಗತ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ವಾರಸುದಾರರು ಚಿರಾಗ್‌ ಎಂದು ಬಿಜೆಪಿ ಈ ನಡೆಯ ಮೂಲಕ ಒತ್ತಿಹೇಳಿದಂತಾಗಿದೆ.

ಇದರಿಂದ ರೊಚ್ಚಿಗೆದ್ದಿರುವ ಪಾರಸ್ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು. ಅಲ್ಲಿ ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಯಿತು. “ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವಾಗ ನಮ್ಮ ಪಕ್ಷಕ್ಕೆ ಸರಿಯಾದ ಗೌರವ ನೀಡಿಲ್ಲ. ಈಗ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರರಾಗಿದ್ದೇವೆ” ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಸೋಮವಾರದ ಸಭೆಯಲ್ಲಿ ಪರಾಸ್ ಅವರಲ್ಲದೆ, ಸಂಸದರಾದ ಪ್ರಿನ್ಸ್ ರಾಜ್ (ಸಮಸ್ತಿಪುರ), ಚಂದನ್ ಸಿಂಗ್ (ನವಾಡ), ಮತ್ತು ಮಾಜಿ ಸಂಸದ ಸೂರಜ್‌ಭಾನ್ ಸಿಂಗ್ ಉಪಸ್ಥಿತರಿದ್ದರು. ಬಿಹಾರದಲ್ಲಿ ಆಪ್ ಮಹಾ ಮೈತ್ರಿಕೂಟದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆದಿದೆ. ವರದಿಗಳ ಪ್ರಕಾರ, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್) ಗೆ ಹಂಚಿಕೆಯಾಗಿರುವ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಪರಾಸ್ ತಿಳಿಸಿದ್ದಾರೆ.

ಸೀಟು ಹಂಚಿಕೆಯಾದ ನಂತರ ಚಿರಾಗ್ ಪಾಸ್ವಾನ್ ಶಿಬಿರ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಪರಾಸ್ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಬಿಜೆಪಿ ನಿರ್ಲಕ್ಷಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಸಂತೋಷಗೊಂಡರು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ; ಯಾವ ಸಮೀಕ್ಷೆ, ಎಷ್ಟು ಸೀಟು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

HD Revanna: ರೇವಣ್ಣ ಬಿಡುಗಡೆಯಾಗಿ ಇಂದಿಗೆ ಮೂರನೇ ದಿನವಾಗಿದೆ. ಆದರೆ, ಒಮ್ಮೆ ಭೇಟಿ ನೀಡಿದ ಬಳಿಕ ಮತ್ತೆ ಆ ಕಡೆ ಸುಳಿಯುತ್ತಿಲ್ಲ. ಈ ಘಟನೆ ಬಳಿಕ ಎಚ್.ಡಿ. ದೇವೇಗೌಡರ ನಿವಾಸದಲ್ಲಿಯೇ ರೇವಣ್ಣ ವಾಸ್ತವ್ಯ ಹೂಡುತ್ತಿದ್ದಾರೆ. ಹೀಗಾಗಿ ರೇವಣ್ಣ ಅವರ ನಿವಾಸದಲ್ಲಿ ಯಾರೂ ಇಲ್ಲದಂತಾಗಿದೆ. ವಾಸ್ತು ದೋಷ ಇದೆ ಎಂದು ರೇವಣ್ಣ ಅಂಜಿದರೇ? ಅಥವಾ ಜ್ಯೋತಿಷಿಗಳು ಏನಾದರೂ ಸಲಹೆ ನೀಡಿದ್ದಾರೆಯೇ? ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧಿತರಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್‌.‌ಡಿ. ರೇವಣ್ಣ (HD Revanna) ಅವರು ತಮ್ಮ ಬೆಂಗಳೂರಿನ ಸ್ವಂತ ನಿವಾಸದಿಂದ ದೂರವೇ ಉಳಿದಿದ್ದಾರೆ. ಇದು ಜ್ಯೋತಿಷಿಗಳ ಸಲಹೆ ಇರಬಹುದೇ ಎಂಬ ಚರ್ಚೆ ಪ್ರಾರಂಭವಾಗಿದೆ.

ಇಲ್ಲಿನ ಬಸವನಗುಡಿಯಲ್ಲಿರುವ ನಿವಾಸದಿಂದ ದೂರ ಉಳಿಯುವಂತೆ ಎಚ್‌.ಡಿ. ರೇವಣ್ಣ ಅವರಿಗೆ ಜ್ಯೋತಿಷಿಗಳು ನೀಡಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಕಾರಣ, ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದ ರೇವಣ್ಣ ಅವರು ಒಮ್ಮೆ ಮಾತ್ರ ಆ ನಿವಾಸಕ್ಕೆ ಭೇಟಿ ನೀಡಿದ್ದರು. ಅದೂ ಸಹ ಕೇವಲ ಎರಡೇ ನಿಮಿಷಗಳಲ್ಲಿ ಮನೆ ಪ್ರವೇಶಿಸಿ ಆಚೆ ಬಂದುಬಿಟ್ಟಿದ್ದರು.

ರೇವಣ್ಣ ಬಿಡುಗಡೆಯಾಗಿ ಇಂದಿಗೆ ಮೂರನೇ ದಿನವಾಗಿದೆ. ಆದರೆ, ಒಮ್ಮೆ ಭೇಟಿ ನೀಡಿದ ಬಳಿಕ ಮತ್ತೆ ಆ ಕಡೆ ಸುಳಿಯುತ್ತಿಲ್ಲ. ಈ ಘಟನೆ ಬಳಿಕ ಎಚ್.ಡಿ. ದೇವೇಗೌಡರ ನಿವಾಸದಲ್ಲಿಯೇ ರೇವಣ್ಣ ವಾಸ್ತವ್ಯ ಹೂಡುತ್ತಿದ್ದಾರೆ. ಹೀಗಾಗಿ ರೇವಣ್ಣ ಅವರ ನಿವಾಸದಲ್ಲಿ ಯಾರೂ ಇಲ್ಲದಂತಾಗಿದೆ. ವಾಸ್ತು ದೋಷ ಇದೆ ಎಂದು ರೇವಣ್ಣ ಅಂಜಿದರೇ? ಅಥವಾ ಜ್ಯೋತಿಷಿಗಳು ಏನಾದರೂ ಸಲಹೆ ನೀಡಿದ್ದಾರೆಯೇ? ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ.

Prajwal Revanna Case: ಸೆಕ್ಸ್‌ ಕೇಸಲ್ಲಿ ಎಕ್ಸ್‌ ಮಾನ್ಯತೆ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ!

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ವೇರಿಫೈಡ್‌ ಅಕೌಂಟ್‌ ಸ್ಟೇಟಸ್‌ನಿಂದ ಪ್ರಜ್ವಲ್‌ ಹೊರಬಿದ್ದಿದ್ದಾರೆ. ಅವರಿಗಿದ್ದ ಬ್ಲ್ಯೂ ಟಿಕ್‌ ಮಾನ್ಯತೆ ಈಗ ಅಮಾನ್ಯಗೊಂಡಿದೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ ಈ ಮೊದಲು ಟ್ವಿಟರ್‌ ಆಗಿತ್ತು. ಆಗಿನಿಂದಲೂ ಅಫೀಶಿಯಲ್‌ ಖಾತೆದಾರರಿಗೆ ಬ್ಲ್ಯೂ ಟಿಕ್‌ ಅನ್ನು ನೀಡಲಾಗುತ್ತಿತ್ತು. ಅದಕ್ಕೆ ಕೆಲವೊಂದಿಷ್ಟು ಪ್ರಕ್ರಿಯೆಗಳು ಇದ್ದವು. ಈ ಕಾರಣಕ್ಕೆ ಗಣ್ಯರು, ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವರು ಈ ಬ್ಲ್ಯೂಟಿಕ್‌ ಅನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಎಲಾನ್‌ ಮಸ್ಕ್‌ ಟ್ವಿಟರ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಹಲವು ಬದಲಾವಣೆಯನ್ನು ತಂದರು. ಬ್ಲ್ಯೂ ಟಿಕ್‌ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಹ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಲ್ಯೂಟಿಕ್‌ ಅನ್ನು ವಾಪಸ್‌ ಪಡೆಯುವ ಅಧಿಕಾರವನ್ನು ಎಕ್ಸ್‌ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಏನಾಗಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಬ್ಲ್ಯೂ ಟಿಕ್‌ ಬೇಕೆಂದರೆ ದುಡ್ಡೆಷ್ಟು?

ಗ್ರಾಹಕರು ದುಡ್ಡು ಕೊಟ್ಟು ಈ ಬ್ಲ್ಯೂ ಟಿಕ್ ಮಾರ್ಕ್ ಖರೀದಿಸಬಹುದು. ಮೆಟಾ ವೆರಿಫೈಡ್ ಸಬ್ಸ್‌ಕ್ರಿಪ್ಷನ್ ಆಧಾರಿತ ಸೇವೆಯ ಅನ್ವಯ ಬಳಕೆದಾರರು ತಿಂಗಳಿಗೆ 699 ರೂ. ಪಾವತಿಸಿದರೆ ಬ್ಲೂ ಟಿಕ್ ದೊರೆಯಲಿದೆ. ಇದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಎರಡಕ್ಕೂ ಅನ್ವಯವಾಗಲಿದೆ. ಆದರೆ, ಈಗ ಪ್ರಜ್ವಲ್‌ ಕೇಸ್‌ನಲ್ಲಿ ಯಾವ ಕಾರಣಕ್ಕೆ ಬ್ಲ್ಯೂಟಿಕ್‌ ಅನ್ನು ತೆಗೆಯಲಾಗಿದೆ ಎಂದು ಈವರೆಗೂ ಎಕ್ಸ್‌ ಸ್ಪಷ್ಟನೆ ನೀಡಿಲ್ಲ.

ವಿದೇಶಕ್ಕೆ ಹೋದ ಬಳಿಕ ಕೊನೆಯದಾಗಿ ಟ್ವೀಟ್‌ ಮಾಡಿದ್ದ ಪ್ರಜ್ವಲ್‌

ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

ಪ್ರಜ್ವಲ್‌ ರೇವಣ್ಣ ದೇಶಬಿಟ್ಟು 19 ದಿನ ಕಳೆದಿದರೂ ಸುಳಿವಿಲ್ಲ. ಈಗಿನ ಪ್ರಕಾರ, ಸದ್ಯಕ್ಕೆ ಪ್ರಜ್ವಲ್ ವಾಪಸಾಗುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಎಸ್‌ಐಟಿ ಅಧಿಕಾರಿಗಳ ಮುಂದಿನ ನಡೆ ಏನು? ಬೇರೆ ದೇಶಕ್ಕೆ ಹೋಗಿ ಅವರನ್ನು ಬಂಧಿಸಿ ಕರೆತರಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲವಾದರೆ ಬೇರೆ ಯಾವ ಮಾರ್ಗವಿದೆ? ಅಥವಾ ಪ್ರಜ್ವಲ್‌ ಬರುವವರೆಗೂ ಕಾಯುತ್ತಾ ಕೂರಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.

ಈಗಿನ ಮಾಹಿತಿ ಪ್ರಕಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸದ್ಯ ಎಸ್‌ಐಟಿ ತಂಡದವರು ಬೇರೆ ದೇಶಕ್ಕೆ ತೆರಳಿ ಪ್ರಜ್ವಲ್‌ ಅವರನ್ನು ಕರೆತರಲು ಸಾಧ್ಯವಿಲ್ಲ. ಇನ್ನು ಪ್ರಜ್ವಲ್‌ ಇಲ್ಲಿಂದ ಜರ್ಮನಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿ ಹೋಗಿದ್ದಾರಾದರೂ ಅವರು ಜರ್ಮನಿಯಲ್ಲಿಯೇ ಇದ್ದಾರಾ? ಅಥವಾ ಅಲ್ಲಿಂದ ಬೇರೆ ದೇಶಕ್ಕೇನಾದರೂ ಹೋಗಿದ್ದಾರಾ ಎಂಬುದೂ ಖಾತ್ರಿಯಾಗಿಲ್ಲ. ಆದರೆ, ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಂತೆ ಫ್ಲೈಟ್‌ ಟಿಕೆಟ್‌ ಅನ್ನು ಮಾತ್ರ ಬುಕ್‌ ಮಾಡುತ್ತಾ ಕುಳಿತಿದ್ದಾರೆ. ಕೊನೇ ಕ್ಷಣದಲ್ಲಿ ಫ್ಲೈಟ್‌ ಹತ್ತದೆ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಅದು ಬಿಟ್ಟರೆ ಇತ್ತ ಸುಳಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.

ಹೀಗಾಗಿ ಮೊದಲು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲದೆ ಹೋದರೆ ಈಗಾಗಲೇ ಜಾರಿ ಮಾಡಲಾಗಿರುವ ಬ್ಲೂ ಕಾರ್ನರ್ ನೋಟಿಸ್‌ನಿಂದಾಗಿ ಯಾವ ದೇಶದಿಂದಾದರೂ ಮಾಹಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳಿಂದ ಮಾಹಿತಿ ಬರುವವರೆಗೂ ಕಾಯಲೇಬೇಕು.

ಇದನ್ನೂ ಓದಿ: Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

ಪ್ರಜ್ವಲ್‌ ಇರುವ ದೇಶ ಗೊತ್ತಾದರೆ ಎಸ್‌ಐಟಿ ಅರೆಸ್ಟ್‌ ಮಾಡಬಹುದಾ?

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿಯೇ ಅಥವಾ ಇನ್ಯಾವುದೋ ದೇಶದಲ್ಲಿ ಅಡಗಿದ್ದಾರೆ ಎಂಬುದು ಗೊತ್ತಾದರೆ ಎಸ್‌ಐಟಿ ಹೋಗಿ ಅರೆಸ್ಟ್‌ ಮಾಡಬಹುದಾ ಎಂದು ಕೇಳಿದರೆ, ಅದು ಸಾಧ್ಯವಿಲ್ಲ ಎಂಬ ಉತ್ತರ ಸಿಗಲಿದೆ. ಹಾಗಾಗಿ ಅವರು ಯಾವ ದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕರೆ ಇಂಟರ್ ಪೋಲ್ ಮುಖಾಂತರ ಹಸ್ತಾಂತರ ಮಾಡಿಕೊಳ್ಳಬಹುದು. ಅದು ಕೂಡ ಆ ದೇಶ ಹಾಗೂ ನಮ್ಮ ದೇಶದ ನಡುವೆ ಹಸ್ತಾಂತರ ಒಪ್ಪಂದ (Extradition Treaty) ಇರಬೇಕು. ಆಗ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿ ಹಸ್ತಾಂತರ ಮಾಡಿಕೊಳ್ಳಬಹುದು. ಅದೂ ಆಗದೇ ಹೋದರೆ, ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನೆ ಕೂರಬಹುದೇ ಹೊರತು ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ಆಗ ಪ್ರಜ್ವಲ್ ತಾನಾಗಿಯೇ ಬರುವವರೆಗೂ ಕಾಯಲೇಬೇಕು.

Continue Reading

ಕ್ರೀಡೆ

Sunil Chhetri: 20 ವರ್ಷಗಳ ಫುಟ್ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಸುನೀಲ್‌ ಚೆಟ್ರಿ; ಕುವೈತ್ ವಿರುದ್ಧ ಅಂತಿಮ ಪಂದ್ಯ

Sunil Chhetri: 2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ ಸುನೀಲ್‌ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

VISTARANEWS.COM


on

Sunil Chhetri
Koo

ಮುಂಬಯಿ: ಭಾರತದ ಖ್ಯಾತ ಫುಟ್ಬಾಲ್(Indian football icon)​ ಆಟಗಾರ ಸುನೀಲ್‌ ಚೆಟ್ರಿ(Sunil Chhetri) ಅವರು ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಜೂನ್ 6 ರಂದು ಕುವೈತ್(Kuwait) ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯದ ನಂತರ ಚೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ಚೆಟ್ರಿ ತಮ್ಮ ನಿವೃತ್ತಿಯ ವಿಚಾರವನ್ನು ತಿಳಿಸಿದ್ದಾರೆ. ಭಾರತಕ್ಕಾಗಿ 145 ಪಂದ್ಯಗಳನ್ನು ಆಡಿರುವ ಅವರು 20 ವರ್ಷಗಳ ವೃತ್ತಿಜೀವನದಲ್ಲಿ 93 ಗೋಲುಗಳನ್ನು ಗಳಿಸಿದ್ದಾರೆ.

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ ಸುನೀಲ್‌ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಕೆಲವು ದಿನಗಳ ಹಿಂದೆಯೇ ಸುನೀಲ್‌ ಚೆಟ್ರಿ ಅವರ ನಿವೃತ್ತಿಯ ವಿಚಾರ ಮುನ್ನಕೆಗೆ ಬಂದಿತ್ತು. ಈ ವಿಚಾರವನ್ನು ಕೋಚ್‌ ಐಗರ್‌ ಸ್ಟಿಮ್ಯಾಕ್‌ ಹೇಳಿದ್ದರು. “ಸುನೀಲ್‌ ಚೆಟ್ರಿ ಅವರಿಗೆ ಈಗ 38 ವಯಸ್ಸಾಗಿದೆ. ಇದು ಅವರಿಗೂ ಅರಿವಿಗೂ ಬಂದಿದೆ. ಇಷ್ಟು ವಯಸ್ಸಿನಲ್ಲಿ ಅವರಿಗೆ 90 ನಿಮಿಷಗಳ ಆಟ ಆಡಲು ದೇಹ ಸ್ಪಂದಿಸುವುದು ಕೂಡ ಕಷ್ಟಕರ. ಅವರು ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನನ್ನ ಪ್ರಕಾರ ಈ ಬಾರಿ ಏಷ್ಯಾ ಕಪ್​ ಅವರ ವಿದಾಯದ ಋತು ಆಗಿರುವ ಸಾಧ್ಯತೆಯೇ ಹೆಚ್ಚು ಎಂಬುದಾಗಿ ಸ್ಟಿಮ್ಯಾಕ್‌ ಹೇಳಿದ್ದರು. ಇದೀಗ ಅಂತಿಮವಾಗಿ ಚೆಟ್ರಿ ತಮ್ಮ ನಿವೃತ್ತಿ ನಿರ್ಧಾರವನ್ನು ಕೈಗೊಂಡಿದ್ದಾರೆ.

“ನಾನು ಎಂದಿಗೂ ಮರೆಯದ ಮತ್ತು ಆಗಾಗ ನೆನಪಿಸಿಕೊಳ್ಳುವ ಒಂದು ದಿನವಿದೆ, ಅದು ನಾನು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯ. ಅದು ನಂಬಲಸಾಧ್ಯವಾಗಿತ್ತು. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ ಮತ್ತು ನನ್ನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ” ಎಂದು ಚೆಟ್ರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ನಾನು ದೆಹಲಿಯಲ್ಲಿ ಸುಬ್ರೊಟೊ ಕಪ್ ಆಡುವಾಗ, ದೇಶಕ್ಕಾಗಿ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಅಥವಾ ಕನಸು ಕಾಣಲಿಲ್ಲ. ಕ್ಲಬ್‌ಗಾಗಿ ಆಡುವ ವೃತ್ತಿಪರ ಸೆಟಪ್ ತುಂಬಾ ದೂರವಾಗಿತ್ತು. ಏಕೆಣದರೆ ಆ ದಿನಗಳಲ್ಲಿ ಅದು ಬಹಳ ಕಷ್ಟಕರವಾಗಿತ್ತು. ಹಾಗಾಗಿ ನಾನು ಆಡುವ ಕನಸು ಕಾಣಲಿಲ್ಲ. ಆದರೆ ದೇವರ ದಯೆಯಿಂದ ನನಗೆ ಈ ಅವಕಾಶ ಒದಗಿ ಬಂತು. ದೇಶವನ್ನು ಪ್ರತಿನಿಧಿಸುವ ಪ್ರತಿ ಕ್ಷಣವೂ ಕೂಡ ವಿಶೇಷ” ಎಂದರು.

ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್​ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.

“ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ ಎಂದು ನಿಮಗೆ ತಿಳಿದಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ, ಇವು ದೇಶಕ್ಕಾಗಿ ನಾನು ಆಡಿದ ಹಲವಾರು ಆಟಗಳಾಗಿವೆ” ಎಂದರು.

“ನಾನು ನನ್ನ ತಾಯಿ, ತಂದೆ ಮತ್ತು ನನ್ನ ಹೆಂಡತಿ, ಕುಟುಂಬ ಮತ್ತು ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ನಾನು ಒತ್ತಡದಲ್ಲಿದ್ದ ವೇಳೆ ಇವರೆಲ್ಲ ನನ್ನ ಜತೆಗಿದ್ದು ನನ್ನನು ಬೆಂಬಲಿಸಿದ್ದಾರೆ. ದೇಶಕ್ಕಾಗಿ ಒಷ್ಟು ವರ್ಷ ಆಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದರು.

Continue Reading

ಉದ್ಯೋಗ

Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

Job Alert: ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ 277 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನ ಎಂದು ಹೇಳಲಾಗಿತ್ತು. ಇದೀಗ ದಿನಾಂಕವನ್ನು ವಿಸ್ತರಿಸಲಾಗಿದ್ದು, ಮೇ 24ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 35 ವರ್ಷ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌. ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ (KPSC) ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ (KPSC Group B (RPC) Recruitment 2024). ಈ ಹಿಂದೆ 277 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನ ಎಂದು ಹೇಳಲಾಗಿತ್ತು. ಇದೀಗ ದಿನಾಂಕವನ್ನು ವಿಸ್ತರಿಸಲಾಗಿದ್ದು, ಮೇ 24ರವರೆಗೆ ಅವಕಾಶ ನೀಡಲಾಗಿದೆ (Job Alert).

ಬಿ.ಟೆಕ್‌ ವಿದ್ಯಾರ್ಹತೆಯುಳ್ಳವರಿಗೂ ಅವಕಾಶ

ಈ ಹಿಂದಿನ ಅಧಿಸೂಚನೆಯಲ್ಲಿನ ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ 1) – 90 ಮತ್ತು ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) (ವಿಭಾಗ-1) – 10 ಹುದ್ದೆಗಳಿಗೆ ಇಲಾಖೆಯ ಪ್ರಸ್ತಾವನೆಯಂತೆ ನಿಗದಿಪಡಿಸಲಾಗಿದ್ದ ವಿದ್ಯಾರ್ಹತೆಯ ಕೋರ್ಸ್‌ಗಳಲ್ಲಿ ಕೇವಲ ಬಿಇ ಪದವಿಗಳನ್ನು ಮಾತ್ರ ಈ ಹಿಂದೆ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಈ ಹುದ್ದೆಗಳಿಗೆ ಬಿ.ಟೆಕ್ ಪದವಿಯನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಉಳಿದಂತೆ ಹಿಂದಿನ ಅಧಿಸೂಚನೆಯ ಷರತ್ತು ಅನ್ವಯ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಹಾಯಕ ಎಂಜಿನಿಯರ್‌ (ಸಿವಿಲ್‌) (ವಿಭಾಗ 1)- 92 ಹುದ್ದೆ, ವಿದ್ಯಾರ್ಹತೆ: ಬಿ.ಇ / ಬಿ.ಟೆಕ್‌ (ಸಿವಿಲ್‌ ಎಂಜಿನಿಯರಿಂಗ್‌)
ಸಹಾಯಕ ಎಂಜಿನಿಯರ್‌ (ಸಿವಿಲ್‌) (ವಿಭಾಗ 1)-90 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್‌)
ಭೂ ದಾಖಲೆಗಳ ಸಹಾಯಕ ನಿರ್ದೇಶಕರು-24 ಹುದ್ದೆ, ವಿದ್ಯಾರ್ಹತೆ: ಪದವಿ (ಸಿವಿಲ್‌ ಎಂಜಿನಿಯರಿಂಗ್‌)
ಪತ್ರಾಂಕಿತ ವ್ಯವಸ್ಥಾಪಕರು / ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು-21 ಹುದ್ದೆ, ವಿದ್ಯಾರ್ಹತೆ: ಪದವಿ
ಸಹಾಯಕ ನಿರ್ದೇಶಕರು – 20 ಹುದ್ದೆ, ವಿದ್ಯಾರ್ಹತೆ: ಬಿ.ಇ / ಬಿ.ಟೆಕ್‌ (ಎಂಜಿನಿಯರಿಂಗ್‌) ಅಥವಾ ಎಂಬಿಎ
ಸಹಾಯಕ ಎಂಜಿನಿಯರ್‌ (ಮೆಕ್ಯಾನಿಕಲ್‌) (ವಿಭಾಗ-1) – 10 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್‌)
ಕಾರ್ಖಾನೆಗಳ ಸಹಾಯಕ ನಿರ್ದೇಶಕರು – 7 ಹುದ್ದೆ, ವಿದ್ಯಾರ್ಹತೆ: ಪದವಿ (ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್‌)
ಬಾಯ್ಲರುಗಳ ಸಹಾಯಕ ನಿರ್ದೇಶಕರು – 3 ಹುದ್ದೆ, ವಿದ್ಯಾರ್ಹತೆ: (ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್‌)
ಭೂ ವಿಜ್ಞಾನಿ – 10 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ಜಿಯೋಲಜಿ / ಅಪ್ಲೈಡ್‌ ಜಿಯಾಲಜಿ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ಅಭ್ಯರ್ಥಿಗಳು 300 ರೂ., ಇತರ ಹಿಂದುಳಿದ ಅಭ್ಯರ್ಥಿಗಳು 150 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.

ಪರಿಷ್ಕೃತ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Continue Reading

ಪ್ರಮುಖ ಸುದ್ದಿ

Robert Fico: ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು, ಅಮೆರಿಕ ವಿರೋಧಿ ನಾಯಕ ಗಂಭೀರ

Robert Fico: ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 59 ವರ್ಷದ ರಾಬರ್ಟ್ ಫಿಕೊ ಅವರು ಸ್ಥಳೀಯ ಸಭಾಂಗಣದ ಮುಂದೆ ತಮ್ಮ ಬೆಂಬಲಿಗರನ್ನು ಭೇಟಿಯಾಗುವ ಸಂದರ್ಭದಲ್ಲಿ ದುಷ್ಕರ್ಮಿ ಅವರ ಹೊಟ್ಟೆಗೆ ನಾಲ್ಕು ಗುಂಡುಗಳನ್ನು ಹಾರಿಸಿದ್ದಾನೆ.

VISTARANEWS.COM


on

Slovakian PM Robert Fico critical after assassination attempt
Koo

ಹೊಸದಿಲ್ಲಿ: ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ (Slovakia Prime minister Robert Fico) ಹತ್ಯೆ ಯತ್ನ (Assassination attempt) ಬುಧವಾರ ನಡೆದಿದೆ. ದುಷ್ಕರ್ಮಿಯೊಬ್ಬ ಅವರತ್ತ ಗುಂಡು ಹಾರಿಸಿದ್ದು, ರಾಬರ್ಟ್‌ ಫಿಕೊ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸುದ್ದಿ ದೂರದರ್ಶನ ಕೇಂದ್ರ TA3 ಪ್ರಕಾರ, ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 59 ವರ್ಷದ ರಾಬರ್ಟ್ ಫಿಕೊ ಅವರು ಸ್ಥಳೀಯ ಸಭಾಂಗಣದ ಮುಂದೆ ತಮ್ಮ ಬೆಂಬಲಿಗರನ್ನು ಭೇಟಿಯಾಗುವ ಸಂದರ್ಭದಲ್ಲಿ ದುಷ್ಕರ್ಮಿ ಅವರ ಹೊಟ್ಟೆಗೆ ನಾಲ್ಕು ಗುಂಡುಗಳನ್ನು ಹಾರಿಸಿದ್ದಾನೆ.

“ಇಂದು ಹ್ಯಾಂಡ್ಲೋವಾದಲ್ಲಿ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಹತ್ಯೆ ಪ್ರಯತ್ನ ನಡೆದಿದೆ. ಗಾಯಗೊಂಡ ಅವರನ್ನು ಹೆಲಿಕಾಪ್ಟರ್ ಮೂಲಕ ಬನ್ಸ್ಕಾ ಬೈಸ್ಟ್ರಿಕಾಗೆ ಸಾಗಿಸಲಾಗುತ್ತಿದೆ. ಅವರಿಗೆ ತೀವ್ರವಾದ ಶಸ್ತ್ರಕ್ರಿಯೆಯ ಅಗತ್ಯವಿದೆ” ಎಂದು ಎಂದು ಸರ್ಕಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸ್ಲೊವಾಕಿಯಾ ಸಂಸತ್ತಿನ ಉಪ ಸ್ಪೀಕರ್ ಲುಬೊಸ್ ಬ್ಲಾಹಾ ಅವರು ಸಂಸತ್ತಿನ ಅಧಿವೇಶನದಲ್ಲಿ ರಾಬರ್ಟ್ ಫಿಕೊ ಮೇಲಿನ ದಾಳಿಯನ್ನು ದೃಢಪಡಿಸಿದರು. ಸ್ಲೋವಾಕಿಯಾದ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಈ ದಾಳಿಯನ್ನು ಖಂಡಿಸಿದ್ದು, ಇದು ಪ್ರಧಾನ ಮಂತ್ರಿಯವರ ಮೇಲಿನ “ಕ್ರೂರ ಮತ್ತು ನಿರ್ದಯ” ದಾಳಿ ಎಂದು ಕರೆದರು. “ನಾನು ಆಘಾತಕ್ಕೊಳಗಾಗಿದ್ದೇನೆ. ಈ ನಿರ್ಣಾಯಕ ಕ್ಷಣದಲ್ಲಿ ರಾಬರ್ಟ್ ಫಿಕೊಗೆ ಹೆಚ್ಚಿನ ಶಕ್ತಿ ಮತ್ತು ಚೇತರಿಕೆ ದೊರೆಯಲಿ ಎಂದು ಹಾರೈಸುತ್ತೇನೆ” ಎಂದರು.

ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿರುವ ರಾಬರ್ಟ್ ಫಿಕೊ ಮತ್ತು ಅವರ ಎಡಪಂಥೀಯ ಸ್ಮರ್ (ದಿಕ್ಕು) ಪಕ್ಷವು ಸ್ಲೋವಾಕಿಯಾದಲ್ಲಿ ಸೆಪ್ಟೆಂಬರ್ 30ರಂದು ನಡೆದ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿತು. ಈ ಗೆಲುವು ಫಿಕೊ ಅವರ ರಾಜಕೀಯ ಪುನರಾಗಮನಕ್ಕೆ ದಾರಿಯಾಗಿದೆ. ಅವರು ರಷ್ಯಾದ ಪರ ಮತ್ತು ಅಮೇರಿಕನ್ ವಿರೋಧಿ ನಿಲುವನ್ನು ಹೊಂದಿದ್ದಾರೆ. ಫಿಕೊ ನೀತಿಗಳನ್ನು ಪ್ರತಿಭಟಿಸಲು ಸಾವಿರಾರು ಜನರು ರಾಜಧಾನಿಯಲ್ಲಿ ಮತ್ತು ಸ್ಲೋವಾಕಿಯಾದಾದ್ಯಂತ ಪದೇ ಪದೆ ರ್ಯಾಲಿ, ಪ್ರತಿಭಟನೆ ಮಾಡಿದ್ದಾರೆ.

ರಾಬರ್ಟ್ ಫಿಕೊ ಹತ್ಯೆಯ ಯತ್ನದ ಬಗ್ಗೆ ವಿಶ್ವದಾದ್ಯಂತ ಹಲವಾರು ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. Xನಲ್ಲಿನ ಪೋಸ್ಟ್‌ನಲ್ಲಿ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ʼಯುರೋಪಿಯನ್ ರಾಜಕೀಯದಲ್ಲಿ ಹಿಂಸೆಗೆ ಯಾವುದೇ ಸ್ಥಳವಿಲ್ಲʼ ಎಂದು ಹೇಳಿದರು.

ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು, “ನಮ್ಮ ಪ್ರಜಾಪ್ರಭುತ್ವಗಳಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಆಸ್ಪದ ಕೊಡಬಾರದು. ಅತ್ಯಂತ ನಿರ್ಣಯದಿಂದ ಇದರ ವಿರುದ್ಧ ಹೋರಾಡಬೇಕು” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

Continue Reading
Advertisement
ರಾಜಕೀಯ1 min ago

HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

Bomb threat
ದೇಶ11 mins ago

Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

sunil chhetri
ಕ್ರೀಡೆ22 mins ago

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Success Story
ದೇಶ27 mins ago

Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Kiccha Sudeep Max Cinema shooting completed
ಸ್ಯಾಂಡಲ್ ವುಡ್31 mins ago

Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

gold rate today priyamani
ಚಿನ್ನದ ದರ46 mins ago

Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

Swati maliwal
ದೇಶ50 mins ago

Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

Murder case in Bengaluru
ಬೆಂಗಳೂರು52 mins ago

Murder case : ಮನೆ ಓನರ್ ಕೊಲೆ ಕೇಸ್; ಇದು ಕಳ್ಳಿ ಕೊಲೆಗಾರ್ತಿಯಾದ ಕಥೆ

Cannes 2024 Urvashi Rautela pink gown remind Deepika Padukone
ಬಾಲಿವುಡ್1 hour ago

Cannes 2024: ಕಾನ್ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಊರ್ವಶಿ ರೌಟೇಲಾ: ದೀಪಿಕಾ ಸ್ಟೈಲ್ ಕಾಪಿ ಮಾಡಿದ್ರಾ?

Sanju Samson
ಕ್ರೀಡೆ1 hour ago

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌