Lok Sabha Election 2024: ಇಂದಿನಿಂದ ಅಂಚೆ ಮತದಾನ; ಯಾರು ಮತ ಹಾಕಬಹುದು? - Vistara News

ಪ್ರಮುಖ ಸುದ್ದಿ

Lok Sabha Election 2024: ಇಂದಿನಿಂದ ಅಂಚೆ ಮತದಾನ; ಯಾರು ಮತ ಹಾಕಬಹುದು?

Lok Sabha Election 2024: ಇವತ್ತಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ (Secret voting) ಅವಕಾಶವಿದೆ. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಿಗೆ ಮನೆಯಿಂದಲೇ ಕುಳಿತು ಅಂಚೆ ಮತದಾನ ಮಾಡುವ ಸೌಲಭ್ಯ ನೀಡಲಾಗಿದೆ.

VISTARANEWS.COM


on

lok sabha election 2024 voting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ʼಅಂಚೆ ಮತದಾನʼ (Postal ballet) ಇಂದು ಆರಂಭವಾಗುತ್ತಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು (Senior citizen) ಹಾಗೂ ಹಾಗೂ ವಿಶೇಷ ಚೇತನರಿಗೆ (Specially abled) ಮನೆಯಿಂದಲೇ ಅಂಚೆ ಮತದಾನ ಮಾಡುವ ಸೌಲಭ್ಯ ನೀಡಲಾಗಿದೆ.

ಇವತ್ತಿನಿಂದ ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ (Secret voting) ಅವಕಾಶವಿದೆ. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಿಗೆ ಮನೆಯಿಂದಲೇ ಕುಳಿತು ಅಂಚೆ ಮತದಾನ ಮಾಡುವ ಸೌಲಭ್ಯ ನೀಡಲಾಗಿದ್ದು, ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 95,128 ಮಂದಿ ಇದ್ದಾರೆ. 22,222 ಮಂದಿ ವಿಶೇಷ ಚೇತನರನ್ನು ಪಟ್ಟಿ ಮಾಡಲಾಗಿದೆ. ಇವರಲ್ಲಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ 201 ವಿಶೇಷ ಚೇತನ ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

ಅಂಚೆ ಮತದಾನ ಪ್ರಕ್ರಿಯೆ

ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ತಂಡ ಭೇಟಿ ನೀಡಲಿದ್ದು, ಜೊತೆಗೆ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಅಬ್ಸರ್ವರ್ ಕಡ್ಡಾಯವಿದೆ. ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲನೆ ಮಾಡಲಿದ್ದು, ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಈ ಎಲ್ಲಾ ಪ್ರಕ್ರಿಯೆ ವೀಡಿಯೋಗ್ರಫಿ ಮೂಲಕ ಕಡ್ಡಾಯ ಸೆರೆ ಹಿಡಿಯಲಾಗುತ್ತದೆ. ಪ್ರತಿ ಮತದಾರರ ಮನೆಗೆ ಎರಡು ಬಾರಿ ಟೀಮ್‌ ಭೇಟಿ ನೀಡಲಿದ್ದು, ಎರಡು ಬಾರಿಯೂ ಮತದಾನ ಪ್ರಕ್ರಿಯೆ ನಡೆಯದೇ ಇದ್ದರೆ ಮತ್ತೆ ಮತದಾನ ನಡೆಸಲು ಅವಕಾಶವಿರುವುದಿಲ್ಲ.

ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ. ಆದರೆ, ವೋಟರ್ ಐಟಿ ಕಾರ್ಡ್‌ ಅಥವಾ ಮತದಾರರ ಫೋಟೋ ಸಹಿತ ಗುರುತಿನ ಚೀಟಿ ಕಾಣೆಯಾಗಿದ್ದರೆ ಮತದಾನ ಮಾಡಲು ಅವಕಾಶ ಇದೆ. ಆದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇ ಬೇಕು. ಮತದಾರರು ಚುನಾವಣಾ ಆಯೋಗ ಪಟ್ಟಿ ಮಾಡಿರುವ 14 ವಿಧದ ಫೋಟೋ ಸಹಿತ ಗುರುತಿನ ಚೀಟಿಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಫೋಟೋ ತೋರಿಸುವ ಅಗತ್ಯ ಇಲ್ಲ. ಆದರೆ, ಇವೆಲ್ಲವೂ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದಾಗ ಮಾತ್ರ ಸಾಧ್ಯ..

ಹೊಸ ಮತದಾರರ ಗಮನಕ್ಕೆ

2024ರ ಲೋಕಸಭಾ ಚುನಾವಣೆಯಲ್ಲಿ ಯುವಕರು ದೇಶದ ಉಜ್ವಲ ಭವಿಷ್ಯಕ್ಕಾಗಿ ಹೆಚ್ಚು ಒಳ್ಳಗೊಳ್ಳಬೇಕು ಮಾತ್ರವಲ್ಲ ಮೊದಲ ಬಾರಿ ಮತದಾನ ಮಾಡುವ ಯುವ ಶಕ್ತಿ ಮತದಾನದ ಪ್ರಾಮುಖ್ಯವನ್ನು ಅರಿತು ತಿಳುವಳಿಕೆಯಿಂದ ಭಾಗವಹಿಸಬೇಕು ಎನ್ನುವ ಎನ್ನುವ ಆಶಯದೊಂದಿಗೆ ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುವವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Hema Malini: ಪ್ರಚಾರದ ಮಧ್ಯೆಯೇ ಗದ್ದೆಗೆ ಇಳಿದು ಗೋಧಿ ಕಟಾವು ಮಾಡಿದ ಹೇಮಾಮಾಲಿನಿ!

ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ?

ಮತಗಟ್ಟೆಗೆ ತೆರಳುವ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇದರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಅರ್ಹತೆ ಮತ್ತು ನೋಂದಣಿ ಸ್ಥಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು.

lok sabha election


ಎಲ್ಲಿ, ಹೇಗೆ ?

ಮತದಾನ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇದಕ್ಕಾಗಿ ಮತದಾನ ಕೇಂದ್ರದ ಸ್ಥಳ, ಮತದಾರರ ಗುರುತಿನ ಅವಶ್ಯಕತೆಗಳು ಮತ್ತು ನಿಮ್ಮ ಮತವನ್ನು ಹೇಗೆ ಚಲಾಯಿಸುವುದು ಸೇರಿದಂತೆ ಮತದಾನ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ತಿಳಿದವರಿಂದ ಕೇಳಿ ಪಡೆಯಿರಿ.

ಮಾಹಿತಿ ಪರಿಶೀಲಿಸಿ

ಮತದಾನ ಮಾಡುವ ಬಗ್ಗೆ ಯಾವುದೇ ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೊದಲು ಬಹು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ. ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಿ. ಸ್ನೇಹಿತರು, ಕುಟುಂಬ ಮತ್ತು ಸಮುದಾಯದ ಸದಸ್ಯರೊಂದಿಗೆ ಗೌರವಯುತವಾಗಿ ರಾಜಕೀಯದ ಬಗ್ಗೆ ಚರ್ಚೆ ನಡೆಸಿ.

ಸುಳ್ಳು ಮಾಹಿತಿ ಬಗ್ಗೆ ಎಚ್ಚರ

ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಸುಳ್ಳು ಮಾಹಿತಿ ಗಳು ಪ್ರಚಾರವಾಗುತ್ತಿರುತ್ತದೆ. ಮತಗಟ್ಟೆಗಳ ಬಳಿ ಸುಳ್ಳು ಮಾಹಿತಿಗಳಿಗೆ ಅವಕಾಶ ನೀಡಬೇಡಿ. ಯಾವುದೇ ರೀತಿಯ ಸುಳ್ಳು ಮಾಹಿತಿ ಹರಡದಂತೆ ಎಚ್ಚರಿಕೆ ವಹಿಸಬೇಕು. ಅಧಿಕೃತಭಾರತೀಯ ಚುನಾವಣಾ ಆಯೋಗ ನೀಡುವ ಮಾಹಿತಿ ಮತ್ತು ಮತಗಟ್ಟೆ ಅಧಿಕಾರಿಗಳು ನೀಡುವ ಮಾಹಿತಿಯನ್ನು ಮಾತ್ರ ನಂಬಿ.


ಮತದಾರರನ್ನು ಪ್ರೋತ್ಸಾಹಿಸಿ

ವಿಶ್ವಾಸಾರ್ಹ ಮಾಹಿತಿಯನ್ನು ಹಂಚಿಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಇತರರನ್ನು ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಮತದಾನದ ಅಗತ್ಯವನ್ನು ತಿಳಿಸಿ, ಅವರು ಮತದಾನ ಮಾಡಿ, ಇತರರಿಗೂ ಮತದಾನ ಮಾಡಲು ಪ್ರೋತ್ಸಾಹಿಸುವಂತೆ ತಿಳಿಸಿ.

ಗುರುತು ಚೀಟಿ ಇರಲಿ

ಮತಗಟ್ಟೆಗೆ ತೆರಳುವಾಗ ನಿಮಗೆ ನೀಡಿರುವ ಮತ ಪತ್ರ, ಮತದಾರರ ಗುರುತು ಚೀಟಿ, ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಹೆಚ್ಚುವರಿ ಗುರುತು ಚೀಟಿಯನ್ನು ಇಟ್ಟುಕೊಂಡಿರಿ. ಅವಶ್ಯಕವಿದ್ದಾಗ ಇದನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಇದನ್ನೂ ಓದಿ: First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Actor Darshan Arrested : ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650!

VISTARANEWS.COM


on

Actor Darshan Arrested
Koo

ಬೆಂಗಳೂರು : ತನ್ನ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರುವ ನಟ ದರ್ಶನ್ (Actor Darshan Arrested) ಹಾಗೂ ಆತನ ಸಹಚರರಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಮಂಗಳವಾರ ರಾತ್ರಿಯ ಊಟಕ್ಕೆ ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟಿದ್ದಾರೆ. ಪ್ರಕರಣದಲ್ಲಿ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ. ಪವಿತ್ರಾ ಸಾಂತ್ವನ ಕೇಂದ್ರದಲ್ಲಿ ಇದ್ದರೆ ಉಳಿದವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ರಾತ್ರಿಯ ಊಟಕ್ಕೆ ಪೊಲೀಸರು ಅವರೆಲ್ಲರಿಗೂ ಚಿಕ್ಕಪೇಟೆ ಬಿರಿಯಾನಿ ಪ್ಯಾಕೇಟ್​ಗಳನ್ನು ತೆಗೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ.

ದೊಡ್ಡ ಪ್ರಮಾಣದಲ್ಲಿ ಬಿರಿಯಾನಿ ಪ್ಯಾಕೆಟ್​ಗಳನ್ನು ಕ್ಯಾರಿ ಬ್ಯಾಗ್​ನಲ್ಲಿ ತುಂಬಿಸಿಕೊಂಡು ಹೋಗಿದ್ದು, ಜತೆಗೆ ಎಲ್ಲರಿಗೂ ಮಿನರಲ್ ವಾಟರ್​ ನೀಡಲಾಗಿದೆ. ಆರೋಪಿಗಳು ಕೆಲವರು ಬೆಳಗ್ಗಿನಿಂದ ಬಂಧನ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮೈಕೈ ನೋವು, ತಲೆ ನೋವು ಎಂದಿದ್ದು ಅವರೆಲ್ಲರಿಗೂ ಡೋಲೋ 650 ಮಾತ್ರೆಯನ್ನೂ ತಂದಕೊಟ್ಟಿದ್ದಾರೆ.

ಆರೋಪಿ ಚಿತ್ರನಟ ಹಾಗೂ ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣವಾಗಿರುವ ಕಾರಣ ತಮ್ಮ ವಶದಲ್ಲಿರುವ ಆರೋಪಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಪೊಲೀಸರಿಗೆ ಅನಿವಾರ್ಯ. ಹೀಗಾಗಿ ಅವರ ಊಟ, ತಿಂಡಿ ಹಾಗೂ ಇನ್ನಿತರ ಉಪಚಾರಗಳನ್ನು ಮಾಡಲು ಪೊಲೀಸರ ತಂಡ ನಾನಾ ರೀತಿಯ ಶ್ರಮಗಳನ್ನು ಹಾಕುತ್ತಿದೆ.

ಹಾಸಿಗೆ, ತಲೆದಿಂಬು

ಆರೋಪಿ ನಂಬರ್ 1 ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ರಾತ್ರಿ ವೇಳೆ ಮಲಗಲು ಹಾಸಿಗೆ ಹಾಗೂ ತಲೆ ದಿಂಬು ವ್ಯವಸ್ಥೆಯನ್ನೂ ಮಾಡಿದ್ದಾರೆ. 9 ಗಂಟೆ ವೇಳೆಗೆ ಪೊಲೀಸರು ನಾನಾ ಕಡೆಯಿಂದ ಆರೋಪಿಗಳೆಲ್ಲರಿಗೂ ಮಲಗಲು ಕಾರ್ಪೆಟ್​, ಬೆಡ್​ಶೀಟ್​ ಹಾಗೂ ತಲೆ ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರುವ ಪೊಲೀಸರಿಗೆ ಮುಂದಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡುವೆ ಇಷ್ಟೊಂದು ವ್ಯವಸ್ಥೆಗಳನ್ನು ಮಾಡಲೇಬೇಕಾಗುತ್ತದೆ.

ಇದನ್ನೂ ಓದಿ: Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

ಏತನ್ಮಧ್ಯೆ, ಆರೋಪಿ ನಂಬರ್​ 2 ಪವಿತ್ರಾಗೌಡ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಪೊಲೀಸರು ಅವರನ್ನು ಅಲ್ಲಿಗೆ ಜೀಪ್​ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತಿದ್ದಂತೆ ನಗುನಗುತ್ತಾ ಅವರು ಸಾಂತ್ವನ ಕೇಂದ್ರ ಸೇರಿಕೊಂಡಿದ್ದಾರೆ. ನಡೆದ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಅವರು ಕೇಂದ್ರ ಸೇರಿಕೊಂಡಿದ್ದಾರೆ.

ಕೊಲೆಗೆ ಕಾರಣ

ರೇಣುಕಾಸ್ವಾಮಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ. ಈ ವಿಷಯ ತಿಳಿದು ದರ್ಶನ್ ಆಪ್ತರು ನಕಲಿ ಅಕೌಂಟ್ ತೆರೆದಿದ್ದರು. ಬಳಿಕ ರೇಣುಕಾಸ್ವಾಮಿ ಜತೆ ಚಾಟಿಂಗ್ ನಡೆಸಲಾಗಿತ್ತು. ಬಳಿಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ನಡೆಸಲಾಗಿತ್ತು. ಈ ವೇಳೆ ಆತ ಸಾವನ್ನಪ್ಪಿದ್ದ. ಆತ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ದರ್ಶನ್‌ ಆಪ್ತರು ಸ್ಕಾರ್ಪಿಯೋ ಕಾರಿನಲ್ಲಿ ಶವವನ್ನು ತಂದು ಬಿಸಾಡಿ ಹೋಗಿದ್ದರು. ಬಳಿಕ ಪೊಲೀಸರಿಗೆ ಕಾಲ್‌ ಮಾಡಿ ತಪ್ಪಾಗಿದೆ ಸರ್ ಅಂದಿದ್ದರು. ಬಳಿಕ ಬಂದು ಮೂವರು ಪೊಲೀಸರ ಮುಂದೆ ಶರಣಾಗಿದ್ದರು ಎನ್ನಲಾಗಿದೆ.

ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಅವರ ಗೆಳತಿಯೂ ಆದ ನಟಿ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಯಾರು?

ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 28 ವರ್ಷದ ಯುವಕನು ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್‌ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್‌ ಅಭಿಮಾನಿಯಾಗಿದ್ದ ಎನ್ನಲಾಗಿದೆ.

Continue Reading

ಭವಿಷ್ಯ

Dina Bhavishya : ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ; ಪ್ರಭಾವಿ ವ್ಯಕ್ತಿಗಳ ಬೆಂಬಲ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಸಿಂಹ ರಾಶಿಯಿಂದ ಬುಧವಾರ 01:38ಕ್ಕೆ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಉತ್ಸಾಹದ ದಿನವಿದು. ಪ್ರಭಾವಿತ ವ್ಯಕ್ತಿಗಳ ಬೆಂಬಲ ಸಿಗಲಿದೆ. ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕಟಕ ರಾಶಿಯವರು ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಹೊಸ ಯೋಜನೆ, ಯೋಚನೆಗಳು ಫಲ ನೀಡಲಿವೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (12-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಷಷ್ಠಿ 19:16 ವಾರ: ಬುಧವಾರ
ನಕ್ಷತ್ರ: ಮಘಾ 26:10 ಯೋಗ: ಹರ್ಷಣ 17:13
ಕರಣ: ಕೌಲವ 06:17 ಅಮೃತ ಕಾಲ: ರಾತ್ರಿ 11:33ರಿಂದ 01:19ವರೆಗೆ
ದಿನದ ವಿಶೇಷ: ಶಿರಸಿಂಗಿ ಕಾಶಿ ರಥ

ಸೂರ್ಯೋದಯ : 05:53   ಸೂರ್ಯಾಸ್ತ : 06:46

ರಾಹುಕಾಲ ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ:ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉತ್ಸಾಹದ ದಿನವಿದು. ಪ್ರಭಾವಿತ ವ್ಯಕ್ತಿಗಳ ಬೆಂಬಲ ಸಿಗಲಿದೆ. ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ:ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ. ಸಂಗಾತಿಯೊಂದಿಗೆ ಮಾತಿಗೆ ಇಳಿಯುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಜನರ ಸಹಕಾರ ಸಿಗಲಿದೆ. ನಿಮ್ಮ ಕೋಪದಿಂದ ಇತರರ ಮೇಲೆ ಒತ್ತಡ ಹೇರುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ:ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಹೊಸ ಯೋಜನೆ, ಯೋಚನೆಗಳು ಫಲ ನೀಡಲಿವೆ. ಹಣಕಾಸು ವ್ಯವಹಾರ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ:ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕಾಳಜಿ ವಹಿಸಿ. ಕುಟುಂಬದ ಬೆಂಬಲ ಸಿಗಲಿದೆ. ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ನಕಾರಾತ್ಮಕ ಆಲೋಚನೆಗಳಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ, ಅದರಿಂದ ದೂರ ಇರಿ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ:ಅತಿಯಾದ ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಆಲಸ್ಯದಿಂದ ಕೆಲಸ ಕಾರ್ಯಗಳನ್ನು ಮುಂದೂಡುವುದು ಬೇಡ. ಅತಿಥಿಗಳ ಆಗಮನ ಸಂತಸ ತಂದೀತು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ :ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗುವುದು. ಅನುಮಾನ ಸಂಬಂಧಗಳನ್ನು ಹಾಳು ಮಾಡುವುದು. ಕುಟುಂಬದಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಅತಿರೇಕದ ಮಾತುಗಳು ಬೇಡ. ಹೂಡಿಕೆಯಲ್ಲಿ ತೊಡಗಿಸಿದ ಹಣ ಇಮ್ಮಡಿ ಲಾಭ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಜೀವನದಲ್ಲಿ ಭರವಸೆ ಸಿಗಲಿದೆ. ಅನಿರೀಕ್ಷಿತವಾಗಿ ಹಣ ಖರ್ಚು ಮಾಡುವಿರಿ. ಸಂಬಂಧಿಗಳಿಂದ ಕುಟುಂಬಕ್ಕೆ ಶುಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ದಿನದ ಕೊನೆಯ ಗಳಿಗೆಯಲ್ಲಿ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಮೀನ: ಅನುಮಾನದಿಂದ ಕಾರ್ಯದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬಂದಾವು. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

T20 World Cup : ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್‌ ಪೇರಿಸಿತು. ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರೂ ಉಳಿದವರ ನೆರವು ಸಿಗಲಿಲ್ಲ. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಗೆದ್ದಿತು.

VISTARANEWS.COM


on

T20 World Cup
Koo

ಬೆಂಗಳೂರು: ಟಿ20 ವಿಶ್ವ ಕಪ್​ನ ಲೀಗ್ ಹಂತದಲ್ಲಿ ಎ ಗುಂಪಿನಲ್ಲಿರುವ (T20 World Cup) ಅಮೆರಿಕ ಮತ್ತು ಭಾರತ ತಂಡದ ವಿರುದ್ಧ ಸೋತು ಮುಖಭಂಗ ಎದುರಿಸಿದ್ದ ಪಾಕಿಸ್ತಾನ ತಂಡ ಕೊನೆಗೂ ಒಂದು ಗೆಲುವು ತನ್ನದಾಗಿಸಿಕೊಂಡಿದದೆ. ಮಂಗಳವಾರ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಪಾಕ್ ಪಾಲಿಗೆ ಅಗತ್ಯ ಪಂದ್ಯವಾಗಿತ್ತು. ಇಲ್ಲಿ ಸೋತಿದ್ದರೆ ಗುಂಪು ಹಂತದ ನಿರ್ಗಮನ ನಿರ್ಧಾರವಾಗುತ್ತಿತ್ತು. ಆದರೆ, ದುರ್ಬಲ ತಂಡದ ವಿರುದ್ಧ ಕೊನೆಗೂ ಗೆದ್ದಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮತ್ತೊಂದು ಕಡಿಮೆ ಮೊತ್ತದ ಪಂದ್ಯದಲ್ಲಿ ಬಾಬರ್‌ ಅಜಮ್‌ ಪಡೆಯು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್‌ ಪೇರಿಸಿತು. ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರೂ ಉಳಿದವರ ನೆರವು ಸಿಗಲಿಲ್ಲ. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಗೆದ್ದಿತು.

ಹೆದರಿಕೊಂಡೇ ಆಡಿದ ಪಾಕಿಸ್ತಾನ ತಂಡದ ಪರ ಆರಂಭಿಕ ಬ್ಯಾಟರ್​ ಸೈಮ್‌ ಅಯೂಬ್‌ 6 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಮ್ ಅರ್ಧಶತಕದ ಜೊತೆಯಾಟವಾಡಿದರು. 33 ರನ್‌ ಗಳಿಸಿದ ಪಾಕ್‌ ನಾಯಕ ಔಟಾದರು. ಜವಾಬ್ದಾರಿಯುತವಾಗಿ ಆಡಿದ ರಿಜ್ವಾನ್ ಆಕರ್ಷಕ ಅರ್ಧಶತಕ ಸಿಡಿಸಿ ಗೆಲ್ಲಿಸಿದರು ಗೆಲುವಿಗೆ 3 ರನ್‌ ಅಗತ್ಯವಿದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಕರ್‌ ಜಮಾನ್‌ 4(6) ತನ್ನ ವಿಕೆಟ್ ಒಪ್ಪಿಸಿದರು.

ಕೆನಡಾದ ನಿಧಾನಗತಿಯ ಆಟ

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ದೊಡ್ಡ ಮೊತ್ತ ಪೇರಿಸಲು ಯತ್ನಿಸಲಿಲ್ಲ. ಆದಾಗ್ಯೂ ಬೌಲಿಂಗ್​ಗೆ ಪೂರಕ ಪಿಚ್‌ನಲ್ಲಿ ಪಾಕಿಸ್ತಾನದ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ ಆ್ಯರೋನ್ ಜಾನ್ಸನ್ 44 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್ ಹಾಗೂ 4 ಬೌಂಡರಿಗಳವೆ . ಆರಂಭಿಕರಾಗಿ ಕಣಕ್ಕಿಳಿದ ಜಾನ್ಸನ್, ಆರನೆಯವರಾಗಿ ಔಟಾದರು.

ಸಾದ್ ಬಿನ್ ಜಾಫರ್ 10 ರನ್‌ ಗಳಿಸಿದರೆ, ಕಲೀಮ್ ಸನಾ 13 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಆರಂಭಿಕ ಆಟಗಾರ ನವನೀತ್‌ (4). ಪರ್ಗತ್ ಸಿಂಗ್ ಗಳಿಕೆ 2 ರನ್​. ನಿಕೋಲಸ್ ಕಿರ್ಟನ್ (1) ಔಟಾಗುವುದರೊಂದಿಗೆ ಜಾನ್ಸನ್ ಮೇಲೆ ಒತ್ತಡವನ್ನು ಹೆಚ್ಚಿಸಿತು.

ಹ್ಯಾರಿಸ್ ರವೂಫ್​ ಎಸೆದ ಇನಿಂಗ್ಸ್​​ 10ನೇ ಓವರ್‌ನಲ್ಲಿ ಶ್ರೇಯಸ್ ಮೊವ್ವಾ (2) ಹಾಗೂ ರವೀಂದರ್ಪಾಲ್ ಸಿಂಗ್ (0) ವಿಕೆಟ್ ಒಪ್ಪಿಸಿದರು. ಇದು ಹ್ಯಾರಿಸ್‌ ರೌಫ್‌ ಅವರ ಟಿ20 ಸ್ವರೂಪದಲ್ಲಿ 100 ವಿಕೆಟ್. ಮೊಹಮ್ಮದ್ ಅಮೀರ್ 13 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರೆ, ಹ್ಯಾರಿಸ್ ರೌಫ್ 26ಕ್ಕೆ 2 ಹಾಗೂ ಶಾಹೀನ್ ಶಾ ಅಫ್ರಿದಿ 21ಕ್ಕೆ 1 ವಿಕೆಟ್‌ ಪಡೆದರು.

Continue Reading

ಪ್ರಮುಖ ಸುದ್ದಿ

Lt. General Upendra Dwivedi : ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

VISTARANEWS.COM


on

Lt. General Upendra Dwivedi
Koo

ಬೆಂಗಳೂರು: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ (Lt. General Upendra Dwivedi ) ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಮನೋಜ್ ಸಿ ಪಾಂಡೆ ಅವರ ಅಧಿಕಾರವಧಿ ಜೂನ್ 30, 2024 ರಂದು ಕೊನೆಗೊಳ್ಳಲಿದೆ. ಹೀಗಾಗಿ ಉಮೇಂದ್ರ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ.

ಜುಲೈ 1, 1964 ರಂದು ಜನಿಸಿದ ದ್ವಿವೇದಿ ಅವರನ್ನು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಇನ್ಫೆಂಟ್ರಿ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ಗೆ ನಿಯೋಜಿಸಲಾಯಿತು. ಸುಮಾರು 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅವರು ವಿವಿಧ ಕಮಾಂಡ್​ಗಳಲ್ಲಿ, ಸಿಬ್ಬಂದಿ, ಸೂಚನೆ ಮತ್ತು ವಿದೇಶಿ ನೇಮಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು, ರೆಜಿಮೆಂಟ್ ಕಮಾಂಡ್ (18 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ, ಅಸ್ಸಾಂ ರೈಫಲ್ಸ್ (ಪೂರ್ವ) ಮತ್ತು 9 ಕಾರ್ಪ್ಸ್​​ನ ಕಮಾಂಡ್​ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

2022-2024 ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಉಪೇಂದ್ರ ದ್ವಿವೇದಿ ಅವರು ಡೈರೆಕ್ಟರ್ ಜನರಲ್ ಇನ್ಫೆಂಟ್ರಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಪ್ರಧಾನ ಕಚೇರಿ ನಾರ್ತ್​ ಕಮಾಂಡ್) ಸೇರಿದಂತೆ ಪ್ರಮುಖ ನೇಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ ;Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಎಸ್ಎಸ್ಸಿ ವೆಲ್ಲಿಂಗ್ಟನ್ ಮತ್ತು ಮೋವ್​​ನ ಆರ್ಮಿ ವಾರ್ ಕಾಲೇಜಿನಲ್ಲಿ ಕೋರ್ಸ್​ಗಳನ್ನು ಪಡೆದಿದ್ದಾರೆ. ಅಮೆರಿಕದ ಕಾರ್ಲೈಲ್​ನ ಯುಎಸ್ಎಡಬ್ಲ್ಯೂಸಿಯಲ್ಲಿ ಎನ್​ಡಿಸಿ ಸಮಾನ ಕೋರ್ಸ್​​ನಲ್ಲಿ ‘ವಿಶೇಷ ಡಾಕ್ಟರೇಟ್​’ ಪಡೆದಿದ್ದಾರೆ. ಡಿಫೆನ್ಸ್ ಮತ್ತು ಮ್ಯಾನೇಜ್ಮೆಂಟ್ ಸ್ಟಡೀಸ್​ನಲ್ಲಿ ಎಂ.ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿಯಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.

Continue Reading
Advertisement
Actor Darshan Arrested
ಪ್ರಮುಖ ಸುದ್ದಿ8 mins ago

Actor Darshan Arrested : ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650!

Dina Bhavishya
ಭವಿಷ್ಯ8 mins ago

Dina Bhavishya : ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ; ಪ್ರಭಾವಿ ವ್ಯಕ್ತಿಗಳ ಬೆಂಬಲ

Health Benefits Of Jaggery
ಆರೋಗ್ಯ8 mins ago

Health Benefits Of Jaggery: ಬೆಲ್ಲ ಉಳಿದ ಆಹಾರದಂಥಲ್ಲ; ಇದರ ಲಾಭಗಳು ಏನೇನು ತಿಳಿದುಕೊಂಡಿರಿ

T20 World Cup
ಪ್ರಮುಖ ಸುದ್ದಿ5 hours ago

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

Lt. General Upendra Dwivedi
ಪ್ರಮುಖ ಸುದ್ದಿ6 hours ago

Lt. General Upendra Dwivedi : ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

Terrorist Killed
ಪ್ರಮುಖ ಸುದ್ದಿ6 hours ago

Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

Joe Biden
ಪ್ರಮುಖ ಸುದ್ದಿ7 hours ago

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Pavithra Gowda
ಕರ್ನಾಟಕ7 hours ago

Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

Priyanka Gandhi:
ಪ್ರಮುಖ ಸುದ್ದಿ8 hours ago

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

CM Siddaramaiah
ಕರ್ನಾಟಕ8 hours ago

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ13 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ14 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ16 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ18 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌