Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು? - Vistara News

ವಾಣಿಜ್ಯ

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Highest Paid CEO: 2024ರ ಹಣಕಾಸು ವರ್ಷದಲ್ಲಿ ಅತ್ಯಧಿಕ ಸಂಭಾವನೆ ಪಡೆದ ಐಟಿ ಸಿಇಒ ವಿಪ್ರೊದ ಥಿಯೆರ್ರಿ ಡೆಲಾಪೋರ್ಟೆ ಅವರು ಏಪ್ರಿಲ್ 6ರಂದು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ 32 ವರ್ಷಗಳ ಕಾಲ ಅನುಭವಿ ಶ್ರೀನಿವಾಸ್ ಪಾಲ್ಲಿಯಾ ಅವರನ್ನು
ನೇಮಿಸಲಾಗಿದೆ. ಬೃಹತ್‌ ಐಟಿ ಕಂಪನಿಗಳ ಸಿಇಒಗಳು ಹೆಚ್ಚು ಸಂಬಳ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

VISTARANEWS.COM


on

Highest Paid CEO
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಪ್ರೋದ (Wipro) ಮಾಜಿ ಸಿಇಒ (ex-ceo) ಮತ್ತು ಆಡಳಿತ ನಿರ್ದೇಶಕ ಥಿಯೆರ್ರಿ ಡೆಲಾಪೋರ್ಟೆ (Thierry Delaporte) ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಗಳಿಸಿ ಸತತ ಎರಡನೇ ವರ್ಷ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ (Highest Paid CEO) ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಥಿಯೆರಿ ಡೆಲಾಪೋರ್ಟೆ ಅವರು ಏಪ್ರಿಲ್‌ 6ರಂದು ಕಂಪನಿಗೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಕಂಪನಿಯು 32 ವರ್ಷಗಳ ಕಾಲ ಅನುಭವ ಹೊಂದಿರುವ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ನೇಮಕ ಮಾಡಿದೆ. ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ವಿಪ್ರೊ ಸಲ್ಲಿಸಿರುವ 20 ಎಫ್ ಫೈಲಿಂಗ್‌ಗಳ ಪ್ರಕಾರ ಡೆಲಾಪೋರ್ಟೆ 3.9 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಸಂಬಳ ಮತ್ತು ಭತ್ಯೆ, 5 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಕಮಿಷನ್/ ವೇರಿಯಬಲ್ ಪೇ, ಸುಮಾರು 7 ಮಿಲಿಯನ್ ಡಾಲರ್ ಇತರ ಮತ್ತು 4 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ದೀರ್ಘಾವಧಿಯ ಪರಿಹಾರವನ್ನು ಗಳಿಸಿದ್ದಾರೆ.

ಶ್ರೀನಿವಾಸ್ ಪಲ್ಲಿಯಾ ಅವರು ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ಸಂಭಾವನೆ ಪ್ಯಾಕೇಜ್‌ ಸ್ವೀಕರಿಸಿದ್ದಾರೆ. ಇದರಿಂದ ಅವರು ಆರ್ಥಿಕ ವರ್ಷ 2025ರಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸಿಇಒ ಆಗಿದ್ದಾರೆ. ಕಂಪನಿಯ ಆದಾಯವು ಇಳಿಮುಖವಾಗುತ್ತಿರುವ ಹೊತ್ತಲ್ಲಿ ಹೊಸ ಸಿಇಒ ನೇಮಕ ವೇತನದ ನಡುವಿನ ಅಸಮಾನತೆಯನ್ನು ಹೆಚ್ಚಿಸಿದೆ. ಸಿಇಒ ವೇತನವು ಸತತ ಎರಡನೇ ವರ್ಷಕ್ಕೆ ಹೆಚ್ಚಾಗಿದೆ.

ಮತ್ತೊಂದೆಡೆ ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ಅವರು ಹೆಚ್ಚುತ್ತಿರುವ ಏಕೀಕೃತ ನಿವ್ವಳ ಲಾಭದ ಮೇಲೆ ಶೇ. 0.35ರಷ್ಟು ಕಮಿಷನ್‌ಗೆ ಅರ್ಹರಾಗಿದ್ದಾರೆ. ಕಂಪನಿಯ ಹಣಕಾಸಿನ ವರ್ಷದಲ್ಲಿ ನಷ್ಟವನ್ನು ಅನುಭವಿಸಿದ ಕಾರಣ ಅದನ್ನು ತಡೆಹಿಡಿಯಲಾಗಿದೆ.

ಕಂಪನಿಯ ಆದಾಯ ಇಳಿಕೆ

ಆರ್ಥಿಕ ವರ್ಷ 2024ರ ಪೂರ್ಣ ವರ್ಷದಲ್ಲಿ ವಿಪ್ರೋ ಆದಾಯವು ವರ್ಷಕ್ಕೆ 90,486 ಕೋಟಿಗಳಿಂದ 89,760 ಕೋಟಿಗೆ ಇಳಿದಿದೆ.

ಅತಿ ಹೆಚ್ಚು ವಾರ್ಷಿಕ ಸಂಭಾವನೆ

2023- 24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ವಾರ್ಷಿಕ ಸಂಭಾವನೆ ಪ್ಯಾಕೇಜ್‌ನಲ್ಲಿ 56 ಕೋಟಿ ರೂ. ಆಗಿದೆ. ಎಚ್‌ಸಿಎಲ್‌ಟೆಕ್‌ನ ಸಿ ವಿಜಯಕುಮಾರ್, 28.4 ಕೋಟಿ ರೂ. ಗಳಿಸಿದ್ದಾರೆ. L&T ಮತ್ತು Mindtree ವಿಲೀನದ ಅನಂತರ ನವೆಂಬರ್ 2022 ರಲ್ಲಿ ಚುಕ್ಕಾಣಿ ಹಿಡಿದ ಅದರ ಸಿಇಒ ದೇಬಾಶಿಸ್ ಚಟರ್ಜಿ ಆರ್ಥಿಕ ವರ್ಷ 22-23ರಲ್ಲಿ 17.5 ಕೋಟಿ ರೂ. ಗಳಿಸಿದ್ದಾರೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

ಟೆಕ್ ಮಹೀಂದ್ರಾದ ಮೋಹಿತ್ ಜೋಶಿ ಅವರು ವಾರ್ಷಿಕವಾಗಿ 6.5 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಿಇಒ ಮತ್ತು ಎಂಡಿ ಕೆ. ಕೃತಿವಾಸನ್ ಅವರು 2024ರಲ್ಲಿ ವಾರ್ಷಿಕ ಪರಿಹಾರದಲ್ಲಿ 25.36 ಕೋಟಿ ರೂ. ಗಳನ್ನು ಪಡೆದರು.

2024ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಡೆಲಾಪೋರ್ಟೆ ಅವರಿಗೆ ನೀಡಿದ ಪರಿಹಾರವು 9,89,130 ಅನ್ವೆಸ್ಟೆಡ್ ಸ್ಟಾಕ್ ಆಯ್ಕೆ ಮತ್ತು 4.33 ಮಿಲಿಯನ್ ಡಾಲರ್ ಮೊತ್ತದ ನಗದು ಪರಿಹಾರವನ್ನು ಒಳಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

SBI: ದೇಶಾದ್ಯಂತ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಬ್ಯಾಂಕ್‌ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ದೇಶಾದ್ಯಂತ 2024-25ನೇ ಹಣಕಾಸು ವರ್ಷದಲ್ಲಿ 400 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಿದೆ. ಈ ಕುರಿತು ಎಸ್‌ಬಿಐ ಚೇರ್ಮನ್‌ ಮಾಹಿತಿ ನೀಡಿದ್ದಾರೆ.

VISTARANEWS.COM


on

SBI
Koo

ಮುಂಬೈ: ದೇಶದಲ್ಲೇ ಬೃಹತ್‌ ಬ್ಯಾಂಕ್‌ ಎನಿಸಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (SBI) ಹೊಸ ಶಾಖೆಗಳನ್ನು (SBI New Branches) ಇನ್ನು ನಿಮ್ಮೂರಿಗೂ ಬರುವ ದಿನಗಳು ದೂರವಿಲ್ಲ. ಹೌದು, 2024-25ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಗ್ರಾಮೀಣ ಭಾಗಗಳೂ ಸೇರಿ 400 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲೂ ಜನ ಬ್ಯಾಂಕ್‌ಗಳನ್ನು ಹೊಂದಬಹುದಾಗಿದೆ. ಹೊಸ ಶಾಖೆಗಳನ್ನು ತೆರೆಯುವ ಕುರಿತು ಎಸ್‌ಬಿಐ ಚೇರ್ಮನ್‌ ದಿನೇಶ್‌ ಕುಮಾರ್‌ ಖಾರಾ (Dinesh Kumar Khara) ಅವರು ಮಾಹಿತಿ ನೀಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, “ದೇಶದಲ್ಲಿ ಶೇ.89ರಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ಹಾಗೂ ಶೇ.98ರಷ್ಟು ವಹಿವಾಟು ಬ್ಯಾಂಕ್‌ ಹೊರತಾಗಿ ನಡೆಯುತ್ತಿವೆ. ಹೀಗಿರುವಾಗ ಬ್ಯಾಂಕ್‌ಗಳ ಬ್ರ್ಯಾಂಚ್‌ಗಳು ಏಕೆ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ದೇಶದ ಪ್ರತಿಯೊಂದು ಭಾಗದಲ್ಲೂ, ಹೊಸ ಹೊಸ ಪಟ್ಟಣ, ಗ್ರಾಮಗಳಿಗೂ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿಯೇ 2024-25ನೇ ಹಣಕಾಸು ವರ್ಷದಲ್ಲಿ ದೇಶದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ರ್ಯಾಂಚ್‌ಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

electoral bonds

“ದೇಶಾದ್ಯಂತ ಹೊಸ ಹೊಸ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್‌ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸ್ಥಳಗಳನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ. ದೇಶದ ಜನರಿಗೆ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ದೇಶದ ಪ್ರತಿಯೊಂದು ಭಾಗದಲ್ಲಿ ಬ್ಯಾಂಕ್‌ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಆ ಅವಶ್ಯಕತೆಯನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪಿಟಿಐಗೆ ವಿವರಿಸಿದರು.

2023-24ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ 59 ಗ್ರಾಮಗಳು ಸೇರಿ 137 ಕಡೆ ಹೊಸ ಶಾಖೆಗಳನ್ನು ಎಸ್‌ಬಿಐ ತೆರೆದಿದೆ ಹಾಗೂ ಅವುಗಳಲ್ಲಿ ವಹಿವಾಟು ನಡೆಯುತ್ತಿದೆ. 2024ರ ಮಾರ್ಚ್‌ ಅಂತ್ಯಕ್ಕೆ ದೇಶಾದ್ಯಂತ ಎಸ್‌ಬಿಐ 22,542 ಬ್ರ್ಯಾಂಚ್‌ಗಳನ್ನು ಹೊಂದಿರುವ ಬೃಹತ್‌ ನೆಟ್‌ವರ್ಕ್‌ ಎನಿಸಿದೆ. ದೇಶದ ವಿಶ್ವಾಸಾರ್ಹ, ಗ್ರಾಹಕರನ್ನು ಸೆಳೆಯುವ ಬ್ಯಾಂಕ್‌ ಎಂಬ ಖ್ಯಾತಿಯನ್ನೂ ಎಸ್‌ಬಿಐ ಗಳಿಸಿದೆ.

ಇದನ್ನೂ ಓದಿ: SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

Continue Reading

ಮನಿ ಗೈಡ್

Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!

ತಿಂಗಳಿಗೆ ಇರುವುದು ಕೇವಲ 25 ರಿಂದ 30 ಸಾವಿರ ಸಂಬಳ. ಇನ್ನು ಕೋಟ್ಯಧಿಪತಿ ಆಗುವುದು ಕನಸಿನ ಮಾತು ಎಂದು ನಿರಾಶೆಗೆ ಒಳಗಾಗುವರೇ ಹೆಚ್ಚು. ಆದರೆ ಮನಸ್ಸು ಮಾಡಿದರೆ ಕಡಿಮೆ ಸಂಬಳವಿದ್ದರೂ ಸರಿಯಾದ ಯೋಜನೆ (Money Guide) ಹಾಕಿಕೊಂಡರೆ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಬಹುದು. ಕಡಿಮೆ ಸಂಬಳ ಇರುವವರೂ ಹೆಚ್ಚು ಸಂಪಾದನೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್.

VISTARANEWS.COM


on

By

Money Guide
Koo

ಕೋಟ್ಯಧಿಪತಿ (Crorepati) ಆಗುವ ಕನಸು (dream) ಪ್ರತಿಯೊಬ್ಬರಿಗೂ ಇದೆ. ಆದರೆ ಬರುವ ಸಂಬಳ (salary) ಮನೆ ಖರ್ಚಿಗೂ ಸಾಲುವುದಿಲ್ಲ ಎಂದು ದುಃಖಿಸುವವರೇ ಹೆಚ್ಚು. ಆದರೆ ಸರಿಯಾದ ಯೋಜನೆ (Money Guide ) ರೂಪಿಸಿಕೊಂಡರೆ ಇದು ಕಷ್ಟವೇನಲ್ಲ. ಹಣಕಾಸಿನ ಲೆಕ್ಕಾಚಾರದ ಜೊತೆಜೊತೆಗೆ ಒಂದಷ್ಟು ಯೋಜನೆ ಹಾಕಿಕೊಂಡರೆ ಬಹುತೇಕ ಎಲ್ಲರೂ ಕೋಟ್ಯಧಿಪತಿಗಳಬಹುದು.

ಈಗ ಬಹುತೇಕ ಮಂದಿ ದುಡಿಯುವವರೇ. ಇದರಲ್ಲಿ ಬಹುಪಾಲು ಮಂದಿ ದೊಡ್ಡದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಕಷ್ಟು ಹಣವನ್ನೂ ಗಳಿಸುತ್ತಿದ್ದಾರೆ. ಕೆಲವು ವರ್ಗದವರ ಆದಾಯ ಬಹುತೇಕ 1 ಕೋಟಿ ರೂ. ಹತ್ತಿರವೂ ಇದೆ. ತಿಂಗಳಿಗೆ 25 ರಿಂದ 30,000 ರೂಪಾಯಿ ಸಂಬಳ ಪಡೆಯುವವರಿಗೆ ಕೋಟ್ಯಾಧಿಪತಿ ಆಗುವ ಕನಸಿದೆ. ಆದರೆ ಇದು ಅಸಾಧ್ಯ ಎಂದು ಬಹುತೇಕ ಮಂದಿ ಕೈಚೆಲ್ಲುತ್ತಾರೆ. ಆದರೆ ಸರಿಯಾದ ಹಣಕಾಸು ಯೋಜನೆಯನ್ನು ರೂಪಿಸಿದರೆ ಇಂದಿನ ಕಾಲದಲ್ಲಿ ಕೋಟ್ಯಾಧಿಪತಿಯಾಗುವುದು ಕಷ್ಟವೇನಲ್ಲ.

ಕೋಟ್ಯಧಿಪತಿಗಳಾಗುವುದು ಇಂದಿನ ಕಾಲದಲ್ಲಿ ಕಷ್ಟವಲ್ಲ. ಇದಕ್ಕಾಗಿ ಅನೇಕ ಹೂಡಿಕೆಯ ವಿಧಾನಗಳಿವೆ. ಅದರ ಮೂಲಕ ಕಡಿಮೆ ಸಂಬಳ ಪಡೆಯುವ ಜನರೂ ಕೋಟ್ಯಾಧಿಪತಿಯಾಗುವ ತಮ್ಮ ಕನಸನ್ನು ನನಸಾಗಿಸಬಹುದು.
ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ ಐಪಿ ನಿಮ್ಮ ಕೋಟ್ಯಾಧಿಪತಿಯಾಗುವ ಕನಸನ್ನು ನನಸು ಮಾಡಬಹುದು. ಎಸ್ ಐಪಿ ಮಾಸಿಕ 30,000 ರೂಪಾಯಿಗಳನ್ನು ಗಳಿಸುವ ವ್ಯಕ್ತಿಯನ್ನು ಸಹ ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ.

ಎಸ್ ಐ ಪಿ ಹೇಗೆ ಪ್ರಯೋಜನಕಾರಿ?

ಮ್ಯೂಚುವಲ್ ಫಂಡ್‌ಗಳು ಎಸ್ ಐ ಪಿ ಮಾರುಕಟ್ಟೆ- ಸಂಯೋಜಿತ ಯೋಜನೆಯಾಗಿದೆ. ಆದ್ದರಿಂದ ಅದರಲ್ಲಿ ಲಾಭದ ಗ್ಯಾರಂಟಿ ಇಲ್ಲ. ಆದರೆ ನೇರವಾಗಿ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಹೋಲಿಸಿದರೆ ಅಪಾಯವು ಕಡಿಮೆ. ದೀರ್ಘಾವಧಿಯಲ್ಲಿ ಅದರ ಸರಾಸರಿ ಆದಾಯವು ಸುಮಾರು ಶೇ. 12ರಷ್ಟು ಇದೆ ಎಂದು ತಜ್ಞರು ಹೇಳುತ್ತಾರೆ.

Money Guide


ಇದು ಯಾವುದೇ ಇತರ ಯೋಜನೆಗಳಿಗಿಂತ ಹೆಚ್ಚು ಲಾಭಕರ. ಕೆಲವೊಮ್ಮೆ ಅದರಿಂದ ಉತ್ತಮ ಆದಾಯ ಪಡೆಯುವ ಅವಕಾಶವಿರುತ್ತದೆ. ಈ ಸಂಯೋಜನೆಯಿಂದಾಗಿ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವು ವೇಗವಾಗಿ ಬೆಳೆಯುತ್ತದೆ. ಆದ್ದರಿಂದ, ಇಂದಿನ ಸಮಯದಲ್ಲಿ ಜನರು ಇದನ್ನು ಲಾಭದಾಯಕ ವ್ಯವಹಾರವೆಂದು ಪರಿಗಣಿಸುತ್ತಾರೆ ಮತ್ತು ಹೆಚ್ಚಿನ ತಜ್ಞರು ಅದನ್ನು ಪೋರ್ಟ್ ಫೋಲಿಯೋದಲ್ಲಿ ಸೇರಿಸಲು ಹೇಳುತ್ತಾರೆ.

ಮಿಲಿಯನೇರ್ ಆಗುವುದು ಹೇಗೆ?

ತಿಂಗಳಿಗೆ 30,000 ರೂ. ಸಂಬಳ ಪಡೆಯುವವರೂ ಮಿಲಿಯನೇರ್ ಆಗಬಹುದು. ಇದಕ್ಕಾಗಿ 50- 30- 20 ನಿಯಮವನ್ನು ಅನುಸರಿಸಬೇಕು. ಅಂದರೆ ಆದಾಯದ ಶೇ. 20ರಷ್ಟನ್ನು ಎಸ್ ಐ ಪಿಯಲ್ಲಿ ಹೂಡಿಕೆ ಮಾಡಬೇಕು. 30,000 ರೂ. ಶೇ. 20ರಷ್ಟು ಎಂದರೆ 6,000 ರೂ. ಆಗಿರುತ್ತದೆ. ಎಸ್ ಐಪಿಯಲ್ಲಿ ಪ್ರತಿ ತಿಂಗಳು 6,000 ರೂ. ಹೂಡಿಕೆ ಮಾಡಿದರೆ 24 ವರ್ಷಗಳಲ್ಲಿ ಕೋಟ್ಯಧಿಪತಿ ಆಗಬಹುದು.

ಇದನ್ನೂ ಓದಿ: GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

24 ವರ್ಷಗಳಲ್ಲಿ ಒಟ್ಟು 17,28,000 ರೂ. ಅಂದರೆ ಶೇ.12ರಷ್ಟು ಬಡ್ಡಿ ದರದಲ್ಲಿ 83,08,123 ರೂ. ಆಗುತ್ತದೆ. ಸಮಯದೊಂದಿಗೆ ಆದಾಯವೂ ಹೆಚ್ಚಾಗುವುದರಿಂದ ಹೂಡಿಕೆಯನ್ನು ಹೆಚ್ಚಿಸಿ 24 ವರ್ಷಗಳಲ್ಲಿ 1,00,36,123 ರೂ. ಗಳಿಸಿ 24 ವರ್ಷಗಳ ಮುಂಚೆಯೇ ಮಿಲಿಯನೇರ್ ಆಗಬಹುದು!

Continue Reading

ಚಿನ್ನದ ದರ

Gold Rate Today: ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ವೀಕೆಂಡ್‌ ಶಾಪಿಂಗ್‌ಗೆ ತೆರಳುವ ಮುನ್ನ ಬೆಲೆ ಚೆಕ್‌ ಮಾಡಿ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಜೂನ್‌ 23) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಶನಿವಾರ ಬೆಲೆ ಇಳಿಕೆಯಾಗಿ ಗ್ರಾಹಕರು ಕೊಂಚ ನಿರಾಳರಾಗಿದ್ದರು. ಇಂದು ಮತ್ತೆ ಬೆಲೆ ಏರಿಕೆಯಾಗದೆ ಸಮಾಧಾನ ಪಟ್ಟುಕೊಂಡಿದ್ದಾರೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಜೂನ್‌ 23) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿ ಗ್ರಾಹಕರು ಕೊಂಚ ನಿರಾಳರಾಗಿದ್ದರು. ಇಂದು ಮತ್ತೆ ಬೆಲೆ ಏರಿಕೆಯಾಗದೆ ಸಮಾಧಾನ ಪಟ್ಟುಕೊಂಡಿದ್ದಾರೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,635 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,238 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,080ಕ್ಕೆ ತಲುಪಿದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,150 ಮತ್ತು ₹ 6,63,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,904 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,380 ಮತ್ತು ₹ 7,23,800 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,650₹ 7,253
ಮುಂಬೈ₹ 6,635₹ 7,238
ಬೆಂಗಳೂರು₹ 6,635₹ 7,238
ಚೆನ್ನೈ₹ 6,695₹ 7,304

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಯಥಾಸ್ಥಿಯಲ್ಲಿ ಮುಂದುವರಿದಿದೆ. ಬೆಳ್ಳಿ ಒಂದು ಗ್ರಾಂಗೆ ₹ 92.95 ಹಾಗೂ 8 ಗ್ರಾಂಗೆ ₹ 743.60 ಇದೆ. 10 ಗ್ರಾಂಗೆ ₹ 929.50 ಹಾಗೂ 1 ಕಿಲೋಗ್ರಾಂಗೆ ₹ 92,950 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?

Continue Reading

ವಾಣಿಜ್ಯ

CNG Price: ಸಿಎನ್‌ಜಿ ದರ ಹೆಚ್ಚಳ; ಬೆಂಗಳೂರಿನಲ್ಲಿ ಏರಿಕೆ ಇಲ್ಲ

CNG Price: ಸಿಎನ್‌ಜಿ ಬೆಲೆ ಕೆಜಿಗೆ 1 ರೂ. ಹೆಚ್ಚಾಗಿದೆ. ತುಸು ಸಮಾಧಾನದ ಸುದ್ದಿ ಎಂದರೆ ಬೆಂಗಳೂರಿನಲ್ಲಿ ಬೆಲೆ ಏರಿಕೆಯಾಗಿಲ್ಲ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಮೀರತ್, ಶಾಮ್ಲಿ, ಮುಜಾಫರ್‌ನಗರ ಮತ್ತು ರಾಜಸ್ಥಾನ ರೇವಾರಿಯದ ಗ್ರಾಹಕರಿಗೆ ಬೆಲೆ ಹೆಚ್ಚಳದ ಶಾಕ್‌ ತಟ್ಟಲಿದೆ.

VISTARANEWS.COM


on

CNG Price
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್‌ (Compressed Natural Gas – CNG)ಬಳಕೆಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಅಂತಹ ವಾಹನ ಸವಾರರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಸಿಎನ್‌ಜಿ ಬೆಲೆ ಕೆಜಿಗೆ 1 ರೂ. ಹೆಚ್ಚಾಗಿದೆ. ತುಸು ಸಮಾಧಾನದ ಸುದ್ದಿ ಎಂದರೆ ಬೆಂಗಳೂರಿನಲ್ಲಿ ಬೆಲೆ ಏರಿಕೆಯಾಗಿಲ್ಲ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಮೀರತ್, ಶಾಮ್ಲಿ, ಮುಜಾಫರ್‌ನಗರ ಮತ್ತು ರಾಜಸ್ಥಾನ ರೇವಾರಿಯದ ಗ್ರಾಹಕರಿಗೆ ಬೆಲೆ ಹೆಚ್ಚಳದ ಶಾಕ್‌ ತಟ್ಟಲಿದೆ (CNG Price).

ದೆಹಲಿ ಮತ್ತು ಪಕ್ಕದ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಶನಿವಾರದಿಂದಲೇ (ಜೂನ್‌ 22) ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈಗ ಸಿಎನ್‌ಜಿ ಪ್ರತಿ ಕೆ.ಜಿ.ಗೆ 75.09 ರೂ. ಇದೆ, ಹಿಂದಿನ ದರ 74.09 ರೂ. ಆಗಿತ್ತು. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಬೆಲೆ ಪ್ರತಿ ಕೆ.ಜಿ.ಗೆ 78.70 ರೂ.ಗಳಿಂದ 79.70 ರೂ.ಗೆ ಏರಿಕೆಯಾಗಿದೆ. ಆದಾಗ್ಯೂ ಗುರುಗ್ರಾಮದಲ್ಲಿ ಸಿಎನ್‌ಜಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇತ್ತ ಪೈಪ್‌ ಮೂಲಕ ಪೂರೈಕೆಯಾಗುವ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಸಿಎನ್‌ಜಿ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌ (Indraprastha Gas Ltd-IGL) ಬೆಲೆ ಹೆಚ್ಚಳಕ್ಕೆ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಪೂರೈಕೆಯ ಕುಸಿತದಿಂದ ಸಂಸ್ಥೆ ಈಗ ಅನಿಲವನ್ನು ಹೆಚ್ಚು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ನೆಲ ಮತ್ತು ಸಮುದ್ರದ ತಳದಿಂದ ಪಂಪ್ ಮಾಡಲಾದ ನೈಸರ್ಗಿಕ ಅನಿಲವನ್ನು ವಾಹನಗಳನ್ನು ಚಲಾಯಿಸಲು ಸಿಎನ್‌ಜಿ ಆಗಿ ಪರಿವರ್ತಿಸಲಾಗುತ್ತದೆ. ಆದರೆ ದೇಶೀಯ ಬೇಡಿಕೆಗೆ ಅನುಗುಣವಾಗಿ ಸಿಎನ್‌ಜಿ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ ಆಮದು ಮಾಡಿಕೊಳ‍್ಳಬೇಕಾದ ಅನಿವಾರ್ಯತೆ ಇದೆ. ಐಜಿಎಲ್‌ ಬೇಡಿಕೆಯ ಶೇ. 66-67ರಷ್ಟು ಸಿಎನ್‌ಜಿ ಉತ್ಪಾದಿಸುತ್ತಿದೆ. ಉಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ವಿವಿಧ ನಗರದಲ್ಲಿನ ದರ (ಪ್ರತಿ ಕೆಜಿಗೆ)

ನಗರಹಿಂದಿನ ದರ (ರೂ.ಗಳಲ್ಲಿ)ಪರಿಷ್ಕೃತ ದರ (ರೂ.ಗಳಲ್ಲಿ)
ದೆಹಲಿ74.0975.09
ನೋಯ್ಡಾ78.7079.70
ಗ್ರೇಟರ್ ನೋಯ್ಡಾ78.7079.70
ಗಾಜಿಯಾಬಾದ್‌78.7079.70
ಅಜ್ಮೀರ್81.9482.94
ಪಾಲಿ80.9481.94
ರಾಜ್ಸಮಂದ್‌80.9481.94

ಇದನ್ನೂ ಓದಿ: GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?

ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್‌, ಡೀಸೆಲ್‌ ಬೆಲೆ 3 ರೂ. ಏರಿಕೆ

ಕರ್ನಾಟಕದಲ್ಲಿ ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಹೆಚ್ಚಾಗಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್‌ ಡೀಸೆಲ್‌ಗೆ 89.20 ರೂ. ಲೀಟರ್‌ ಪೆಟ್ರೋಲ್‌ಗೆ 103 ರೂ. ಆಗಿದೆ.

ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ. 25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಇದನ್ನು ಶೇ. 3.9ರಷ್ಟು ಹೆಚ್ಚಳ ಮಾಡಿದೆ. ಈಗ ಒಟ್ಟು ಶೇ. 29.84ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಇನ್ನು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ. 4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ. 18.44ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ.

Continue Reading
Advertisement
Surrogacy Leaves
ಪ್ರಮುಖ ಸುದ್ದಿ34 mins ago

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

T20 world Cup 2024
ಕ್ರೀಡೆ1 hour ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ1 hour ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ1 hour ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ2 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ3 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ4 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ4 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ4 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು7 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌