Mitchell Starc : ಲಸಿತ್​ ಮಾಲಿಂಗ ದಾಖಲೆ ಮುರಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​​ - Vistara News

ಪ್ರಮುಖ ಸುದ್ದಿ

Mitchell Starc : ಲಸಿತ್​ ಮಾಲಿಂಗ ದಾಖಲೆ ಮುರಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​​

Mitchell Starc : ಸೂಪರ್​ 8 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​​, ಬಾಂಗ್ಲಾ ಇನಿಂಗ್ಸ್​​ನಲ್ಲಿ ತಮ್ಮ ಮೂರನೇ ಎಸೆತಕ್ಕೆ ತಂಜಿದ್ ಹಸನ್​ ಅವರನ್ನು ಔಟ್ ಮಾಡಿದರು. ಈ ವೇಳೆ ಅವರು 2014ರ ಟಿ20 ವಿಶ್ವಕಪ್ ವಿಜೇತ ನಾಯಕ ಲಸಿತ್ ಮಾಲಿಂಗ ಅವರನ್ನು ಬೌಲಿಂಗ್ ಸಾಧನೆಯಲ್ಲಿ ಹಿಮ್ಮೆಟ್ಟಿಸಿದರು.

VISTARANEWS.COM


on

Mitchell Starc
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್​​ ಮಿಚೆಲ್ ಸ್ಟಾರ್ಕ್ ವಿಶ್ವ ಕಪ್​ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ ಅವರು ಶ್ರೀಲಂಕಾದ ದಿಗ್ಗಜ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಿ ಎಲೈಟ್ ಬೌಲರ್​ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ. ಟ್ರಿನಿಡಾಡ್​ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ಅವರು ಈ ದಾಖಲೆ ಬರೆದಿದ್ದಾರೆ.

ಸೂಪರ್ 8 ಹಂತದ ಪಂದ್ಯದಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 8 ವಿಕೆಟ್​ಗಳಿಮದ ಸೋತರೆ, ಅಫ್ಘಾನಿಸ್ತಾನವು ಭಾರತದ ವಿರುದ್ಧ 47 ರನ್​ಗಳಿಂದ ಸೋತಿದೆ. ಬಾಂಗ್ಲಾದೇಶವೂ ಆಸ್ಟ್ರೇಲಿಯಾಕ್ಕೆ ಮಣಿಸಿದೆ. ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 2021 ರ ಚಾಂಪಿಯನ್ ಆಸ್ಟ್ರೇಲಿಯಾ ನಜ್ಮುಲ್ ಹುಸೇನ್ ಶಾಂಟೊ ಅವರ ಬಾಂಗ್ಲಾದೇಶವನ್ನು ಎದುರಿಸಿತು.

ಇದನ್ನೂ ಓದಿ: Team India : ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಪ್ರಕಟ

ಮಳೆಯಿಂದ ಅಡಚಣೆಗೊಳಗಾದ ಆ ಪಂದ್ಯದಲ್ಲಿ ಆಸೀಸ್ ತಂಡ ಉತ್ತಮ ಪ್ರದರ್ಶನ ನೀಡಿತು. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಬೌಲಿಂಗ್​ನಲ್ಲಿ ಸಾಧನೆ ಮಾಡಿದರೆ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಬ್ಯಾಟಿಂಗ್​ನಲ್ಲಿ ತಮ್ಮ ಪ್ರಭಾವ ತೋರಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಗ್ರೂಪ್ 1ರಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಭಾರತ ಮೊದಲ ಗೆಲುವಿನ ಬಳಿಕ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ. ಈ ಎಲ್ಲದರ ನಡುವೆ ಮಿಚೆಲ್​ ಸ್ಟಾರ್ಕ್​ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ.

ಮಿಚೆಲ್ ಸ್ಟಾರ್ಕ್ ಹೊಸ ಸಾಧನೆ

ಸೂಪರ್​ 8 ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​​, ಬಾಂಗ್ಲಾ ಇನಿಂಗ್ಸ್​​ನಲ್ಲಿ ತಮ್ಮ ಮೂರನೇ ಎಸೆತಕ್ಕೆ ತಂಜಿದ್ ಹಸನ್​ ಅವರನ್ನು ಔಟ್ ಮಾಡಿದರು. ಈ ವೇಳೆ ಅವರು 2014ರ ಟಿ20 ವಿಶ್ವಕಪ್ ವಿಜೇತ ನಾಯಕ ಲಸಿತ್ ಮಾಲಿಂಗ ಅವರನ್ನು ಬೌಲಿಂಗ್ ಸಾಧನೆಯಲ್ಲಿ ಹಿಮ್ಮೆಟ್ಟಿಸಿದರು. ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ 50 ಓವರ್ ಮತ್ತು 20 ಓವರ್​ಗಳ ವಿಶ್ವ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಸ್ಟಾರ್ಕ್ ಪಾತ್ರರಾದರು.

ಮಿಚೆಲ್ ಸ್ಟಾರ್ಕ್ ವಿಶ್ವಕಪ್​​ನಲ್ಲಿ ತಮ್ಮ 95 ನೇ ವಿಕೆಟ್ ಪಡೆದರು ಮತ್ತು ಈ ಪಂದ್ಯಕ್ಕೆ ಮೊದಲು ಅವರು ಲಸಿತ್ ಮಾಲಿಂಗ ಅವರೊಂದಿಗೆ 94 ವಿಕೆಟ್​ಗಳ ಸಾಧನೆ ಸರಿಗಟ್ಟಿದ್ದರು. ತಂಜಿದ್ ಹಸನ್ ಅವರ ವಿಕೆಟ್ ಟಿ 20 ವಿಶ್ವಕಪ್​​ಗಳಲ್ಲಿ ಸ್ಟಾರ್ಕ್ ಅವರ 30 ನೇ ವಿಕೆಟ್ ಆಗಿದೆ. ಐಸಿಸಿ ವೈಟ್-ಬಾಲ್ ಸ್ಪರ್ಧೆಗಳಲ್ಲಿ ಅವರ ಸರಾಸರಿಯೂ ಮಾಲಿಂಗ ಅವರಿಗಿಂತ ಉತ್ತಮವಾಗಿದೆ.

ಎಡಗೈ ವೇಗಿ 21.11 ಸರಾಸರಿಯನ್ನು ಹೊಂದಿದ್ದರೆ, ಶ್ರೀಲಂಕಾದ ಮಾಜಿ ವೇಗಿ 21.74 ಸರಾಸರಿ ಹೊಂದಿದ್ದರು. ಮಿಚೆಲ್ ಸ್ಟಾರ್ಕ್ ತಮ್ಮ 52 ನೇ ಪಂದ್ಯದಲ್ಲಿ 95 ನೇ ವಿಶ್ವಕಪ್ ವಿಕೆಟ್ ಪಡೆದರು ಮತ್ತು ಈ ಟಿ 20 ವಿಶ್ವಕಪ್ ಅಂತ್ಯದ ವೇಳೆಗೆ ಶತಕ ಪೂರ್ಣಗೊಳಿಸುವ ಅವಕಾಶವಿದೆ. ಆಸ್ಟ್ರೇಲಿಯಾ 3ನೇ ಟಿ20 ವಿಶ್ವಕಪ್ ಫೈನಲ್ ತಲುಪಿದರೆ ಸ್ಟಾರ್ಕ್ ಇನ್ನು ಮುಂದೆ 4 ಪಂದ್ಯಗಳನ್ನು ಆಡಲಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಆಸೀಸ್ ತನ್ನ ಮುಂದಿನ ಪಂದ್ಯವನ್ನು ಗೆದ್ದರೆ, ಜೂನ್ 23 ರಂದು ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ನಂತರ ಸ್ಟಾರ್ಕ್ ಇನ್ನೂ 2 ಪಂದ್ಯಗಳನ್ನು ಆಡುವುದು ಖಚಿತ. ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಟಾಪ್ 5 ಪಟ್ಟಿಯಲ್ಲಿ, ಸ್ಟಾರ್ಕ್ 77 ಪಂದ್ಯಗಳಿಂದ 92 ವಿಕೆಟ್​​ಗಳನ್ನು ಪಡೆದಿರುವ ಶಕೀಬ್ ಅಲ್ ಹಸನ್ ಅವರೊಂದಿಗೆ ಏಕೈಕ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್​ಗಳು

  • ಮಿಚೆಲ್ ಸ್ಟಾರ್ಕ್ 95 ವಿಕೆಟ್, 65 ವಿಕೆಟ್ (ಏಕದಿನ), 30 ವಿಕೆಟ್ (ಟಿ20)
  • ಲಸಿತ್ ಮಾಲಿಂಗ 94 ವಿಕೆಟ್, 56 ವಿಕೆಟ್ (ಏಕದಿನ), 38 ವಿಕೆಟ್ (ಟಿ20)
  • ಶಕೀಬ್ ಅಲ್ ಹಸನ್ 92 ವಿಕೆಟ್, 43 ವಿಕೆಟ್ (ಏಕದಿನ), 49 ವಿಕೆಟ್ (ಟಿ20)
  • ಟ್ರೆಂಟ್ ಬೌಲ್ಟ್ 87 ವಿಕೆಟ್, 53 ವಿಕೆಟ್ (ಏಕದಿನ), 34 ವಿಕೆಟ್ (ಟಿ20)
  • ಮುತ್ತಯ್ಯ ಮುರಳೀಧರನ್ 79 ವಿಕೆಟ್, 68 ವಿಕೆಟ್ (ಏಕದಿನ), 11 ವಿಕೆಟ್ (ಟಿ20)
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

HD Kumaraswamy: ಕೇಂದ್ರ ಸಚಿವರ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಸಾಕಷ್ಟು ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನೂ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಎಚ್‌ಡಿಕೆ ತೆರಳುವ ಹೊತ್ತಿಗೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಯಾರೂ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.

VISTARANEWS.COM


on

hd kumaraswamy nanjanagudu
Koo

ಮೈಸೂರು: ಕೇಂದ್ರ ಸಚಿವರೇ (Union minister) ವಿಶ್ರಾಂತಿಗಾಗಿ ಬಂದರೂ ಬಾಗಿಲು ಬೀಗ ತೆಗೆಯದೆ ಅಧಿಕಾರಿಗಳು ಅವಮಾನ (insult) ಮಾಡಿ ಕಳಿಸಿದ ಘಟನೆ ನಂಜನಗೂಡಿನಲ್ಲಿ (Nanjanagudu) ನಡೆದಿದೆ. ಕೇಂದ್ರ ಸಚಿವ, ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದು ನಂಜನಗೂಡು ಪ್ರವಾಸದಲ್ಲಿದ್ದು, ಕೆಲ ನಿಮಿಷಗಳ ವಿಶ್ರಾಂತಿಗಾಗಿ ನಂಜನಗೂಡು ಪ್ರವಾಸಿ ಮಂದಿರಕ್ಕೆ (Tourist Guesthouse) ತೆರಳಿದ್ದರು.

ಕೇಂದ್ರ ಸಚಿವರ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಸಾಕಷ್ಟು ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನೂ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಎಚ್‌ಡಿಕೆ ತೆರಳುವ ಹೊತ್ತಿಗೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಯಾರೂ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.

10 ನಿಮಿಷಕ್ಕೂ ಅಧಿಕ ಸಮಯ ಕಾದರೂ ಯಾವುದೇ ಸಿಬ್ಬಂದಿ ಬಾಗಿಲು ತೆಗೆಯಲು ಬರಲಿಲ್ಲ. ಈ ಸಂದರ್ಭದಲ್ಲಿ ಎಚ್‌ಡಿಕೆ ಕಾರಿನಲ್ಲೇ ಕುಳಿತಿದ್ದರು. ಜೊತೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರೂ ಇದ್ದರು. ಕಾದು ಸುಸ್ತಾದ ಎಚ್‌ಡಿ ಕುಮಾರಸ್ವಾಮಿ ಬಳಿಕ ಅಲ್ಲಿಂದ ತೆರಳಿದರು.

ಈ ಬಗ್ಗೆ ಸಾ.ರಾ ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ಬಂದರೂ ಬಾಗಿಲು ತೆರೆಯದೆ ಇರುವುದರ ಹಿಂದೆ ರಾಜ್ಯ ಸರಕಾರದ ಚಿತಾವಣೆ ಇದೆ. ಅವಮಾನ ಮಾಡುವ ಉದ್ದೇಶಕ್ಕಾಗಿಯೇ ಹೀಗೆ ಮಾಡಲಾಗಿದೆ ಎಂದು ಜೆಡಿಎಸ್‌ ಮುಖಂಡರು ಆರೋಪಿಸಿದ್ದಾರೆ.

ʼಸಮಯ ಬಂದಾಗ ಮಿಲಿಟರಿಯನ್ನೂ ತರುತ್ತೇವೆʼ ಎಂದ ಎಚ್‌ಡಿಕೆ

ಹಾಸನ: ʼʼನಾನು ಅಂಕೋಲಾಕ್ಕೆ ಭೇಟಿ ನೀಡಿದ ವಿಚಾರ ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು, ಕುಮಾರಸ್ವಾಮಿ ಇಲ್ಲಿ ಏಕೆ ಬರ್ತಾರೆ, ಮಿಲಿಟರಿ ಕರೆದುಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅವರು ಏಕೆ ಆ ರೀತಿ ಹೇಳಿಕೆ ಕೊಟ್ಟರು ಅಂತ ಯೋಚನೆ ಮಾಡಿದೆ. ಈ ರಾಜ್ಯದಲ್ಲಿ ನಡೆಯುತ್ತಿರುವ ದರೋಡೆಯನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂದಿದ್ದಾರೆ. ಅದಕ್ಕೊಂದು ಕಾಲ ಬರುತ್ತೆ, ಆಗ ಕರೆದುಕೊಂಡು ಬರೋಣʼʼ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಹಾಸಕ್ಕೆ ಆಗಮಿಸಿದ ಅವರು ಕಾಂಗ್ರೆಸ್‌ ಮತ್ತು ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು. ಶನಿವಾರ ಅಂಕೋಲಾಕ್ಕೆ ಎಚ್.ಡಿ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ, ʼʼಮಿಲಿಟರಿ ಕರೆದುಕೊಂಡು ಇಳಿದಿದ್ದರೆ ಎಚ್‌ಡಿಕೆ ಫೀಲ್ಡಿಗೆ ಬಂದಿದ್ದಾರೆ ಅಂತ ಹೇಳಬಹುದು. ಸುಮ್ಮನೇ ವಿಸಿಟ್ ಮಾಡಿ ಬಂದರೆ ಏನಾದ್ರೂ ಆಗುತ್ತಾ? ಒಂದೇ ಗಂಟೆಯಲ್ಲಿ ನಮ್ಮ ಕ್ಯಾಬಿನೆಟ್ ಸಚಿವರನ್ನು ಅಲ್ಲಿಗೆ‌ ಓಡಿಸಿದ್ದೇವೆ. ಮಂಕಾಳ್ ವೈದ್ಯ, ಕೃಷ್ಣಬೈರೇಗೌಡ ಅಲ್ಲಿಗೆ ಹೋಗಿದ್ದರು. ಏನೇನು ಮಾಡಬೇಕೊ ಅದನ್ನು ಮಾಡಿದ್ದಾರೆ, ಅಧಿಕಾರಿಗಳಿಗೆ ಸೂಚನೆ‌ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಈಗ ರಾಜಕಾರಣ ಬೇಡ, ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣʼʼ ಎಂದು ತಿಳಿಸಿದ್ದರು.

ʼʼಡಿಕೆಶಿ ಪಾಪ ಕನಕಪುರದವರು. ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇನೆ ಎಂದು ಹೇಳುತ್ತಾರೆ. ಇನ್ನು ಕುಮಾರಸ್ವಾಮಿ 39 ಸೀಟ್ ಗೆದ್ದರೂ ಮುಖ್ಯಮಂತ್ರಿ ಮಾಡಿದ್ವಿ, ದೇವೇಗೌಡರು 16 ಸೀಟ್ ಗೆದ್ದರು ಪ್ರಧಾನಮಂತ್ರಿ ಮಾಡಿದ್ವು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಅದರ ಜತೆಗೆ ಸರ್ಕಾರವನ್ನು ತೆಗೆದವರು ಯಾರು ಎನ್ನುವುದನ್ನೂ ಹೇಳಬೇಕಲ್ವಾ?ಕಾಂಗ್ರೆಸ್‌ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ? ಅದೂ ಅಲ್ಲದೆ ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯೂನಿಸ್ಟ್‌ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಅಂತ ಸರ್ಕಾರ ತೆಗೆದರು?ʼʼ ಎಂದು ಎಚ್‌ಡಿಕೆ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡರು.

ʼʼದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಅಂತಾ ಎಷ್ಟು ವರ್ಷದಿಂದ ಹೆಸರು ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರ. ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿಕೊಂಡಿದ್ದೀರಿʼʼ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಇದನ್ನೂ ಓದಿ: DK Shivakumar: ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ, ಡಿ ಗ್ರೇಡ್ ಕ್ಲರ್ಕ್‌ಗಳೆಲ್ಲಾ ಅಧೀಕ್ಷಕ, ಎಂಡಿಗಳಾಗಿದ್ದಾರೆ ಎಂದ ಡಿಕೆಶಿ

Continue Reading

ಉದ್ಯೋಗ

RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

RRB Recruitment 2024: ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 7,951 ಜೂನಿಯರ್‌ ಎಂಜಿನಿಯರ್‌, ಕೆಮಿಕಲ್‌ ಸೂಪರ್‌ವೈಸರ್‌ ಹುದ್ದೆಗಳು ಇದಾಗಿದ್ದು, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಜುಲೈ 30ರಿಂದ ಅರ್ಜಿ ಸಲ್ಲಿಬೇಕಿದ್ದು, ಕೊನೆಯ ದಿನ ಆಗಸ್ಟ್‌ 29. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

VISTARANEWS.COM


on

RRB Recruitment 2024
Koo

ಬೆಂಗಳೂರು: ಶಿಕ್ಷಣ ಮುಗಿಸಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ (Railway Recruitment Board) ಗುಡ್‌ನ್ಯೂಸ್‌ ನೀಡಿದೆ. ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿನಿಸಿದೆ (RRB Recruitment 2024). ಬರೋಬ್ಬರಿ 7,951 ಜೂನಿಯರ್‌ ಎಂಜಿನಿಯರ್‌, ಕೆಮಿಕಲ್‌ ಸೂಪರ್‌ವೈಸರ್‌ ಹುದ್ದೆಗಳು ಇದಾಗಿದ್ದು, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಜುಲೈ 30ರಿಂದ ಅರ್ಜಿ ಸಲ್ಲಿಬೇಕಿದ್ದು, ಕೊನೆಯ ದಿನ ಆಗಸ್ಟ್‌ 29 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕೆಮಿಲ್‌ ಮೇಲ್ವಿಚಾರಕ / ಸಂಶೋಧನೆ ಮತ್ತು ಮೆಟಲರ್ಜಿಕಲ್ ಮೇಲ್ವಿಚಾರಕ / ಸಂಶೋಧನೆ (Chemical Supervisor / Research and Metallurgical Supervisor / Research)- 17 ಹುದ್ದೆ, ವಿದ್ಯಾರ್ಹತೆ: ಕೆಮಿಕಲ್ ಟೆಕ್ನಾಲಜಿ, ಮೆಟಲರ್ಜಿ ಎಂಜಿನಿಯರಿಂಗ್‌ನಲ್ಲಿ ಪದವಿ.
ಕಿರಿಯ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಹಾಗೂ ಮೆಟಲರ್ಜಿಕಲ್ ಅಸಿಸ್ಟೆಂಟ್ (Junior Engineer, Depot Material Superintendent and Chemical & Metallurgical Assistant)- 7,934 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ ಇನ್ ಇಂಜಿನಿಯರಿಂಗ್, ಬಿ.ಎಸ್‌ಸಿ, ಪದವಿ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 36 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಯುರ್‌ & ಇಡಬ್ಲ್ಯುಎಸ್‌) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಮಹಿಳಾ ಅಭ್ಯರ್ಥಿಗಳು / ತೃತೀಯ ಲಿಂಗಿಗಳು / ಅಲ್ಪಸಂಖ್ಯಾತರು / ಇಬಿಸಿ ವಿಭಾಗದ ಅಭ್ಯರ್ಥಿಗಳು 250 ರೂ. ಮತ್ತು ಇತರ ವಿಭಾಗದ ಅಭ್ಯರ್ಥಿಗಳು 500 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಉದ್ಯೋಗದ ಸ್ಥಳ: ಭಾರತದಾದ್ಯಂತ.

RRB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.rrbapply.gov.in/)
  • ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: indianrailways.gov.inಗೆ ಭೇಟಿ ನೀಡಿ ಅಥವಾ ಹೆಲ್ಪ್‌ಲೈನ್‌ ನಂಬರ್‌: Helpline No: 9592001188, 01725653333ಕ್ಕೆ ಕರೆ ಮಾಡಿ.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

Continue Reading

ಪ್ರಮುಖ ಸುದ್ದಿ

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

CH Vijayashankar: ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

VISTARANEWS.COM


on

CH Vijayashankar
Koo

ಮೈಸೂರು: ಮೇಘಾಲಯದ (Meghalaya) ರಾಜ್ಯಪಾಲರಾಗಿ (Meghalaya Governor) ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ (CH Vijayashankar) ಅವರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್‌ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜಯಶಂಕರ್‌ ಅವರು ಮೈಸೂರಿನ ಮಾಜಿ ಸಂಸದ ಹಾಗೂ ಮಾಜಿ ಸಚಿವರಾಗಿದ್ದಾರೆ.

ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 12ನೇ ಲೋಕಸಭೆಗೆ ಆಯ್ಕೆಯಾದರು. ಮೈಸೂರಿನ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಿಂತು ಮರು ಆಯ್ಕೆಯಾದರು.

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಅರಣ್ಯ, ಪರಿಸರ ಇಲಾಖೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 15 ಜೂನ್ 2010ರಿಂದ ಜನವರಿ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

6 ಮಂದಿ ನೂತನ ರಾಜ್ಯಪಾಲರ ನೇಮಕ

ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್‌ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಮೂವರು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ ಮಾನ್‌ ನೇತೃತ್ವದ ಎಎಪಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜತೆಗೆ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

Continue Reading

ಪ್ರಮುಖ ಸುದ್ದಿ

INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

INDW vs SLW Final: ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

VISTARANEWS.COM


on

INDW vs SLW Final
Koo

ದಾಂಬುಲಾ,(ಶ್ರೀಲಂಕಾ): ಇಂದು ನಡೆಯುವ 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್​ ಫೈನಲ್​(Womens Asia Cup Final) ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್​ ಭಾರತ(India Women vs Sri Lanka Women Final) ಮುಖಾಮುಖಿಯಾಗಲಿವೆ. 7 ಬಾರಿಯ ಚಾಂಪಿಯನ್​ ಭಾರತವೇ(INDW vs SLW Final) ಈ ಬಾರಿಯ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದೆ. ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಭಾರತ ಪರ ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್​ ಗಳಿಸಿ ಕೂಟದ ಅತ್ಯಧಿಕ ರನ್​ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್​ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್​, ಆಲ್​ರೌಂಡರ್​ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್​ಗಳಾದರೆ, ವೇಗಿ ರೇಣುಕಾ ಸಿಂಗ್​ ಮತ್ತು ಪೂಜಾ ವಸ್ತ್ರಾಕರ್​ ವೇಗಿಗಳಾಗಿದ್ದಾರೆ.

ಎದುರಾಳಿ ಶ್ರೀಲಂಕಾವನ್ನು ಕಡೆಗಣಿಸುವಂತಿಲ್ಲ. ಕೂಟದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿರುವ ನಾಯಕಿ ಚಾಮರಿ ಅತಪಟ್ಟು ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಆಡಿದ 4 ಪಂದ್ಯಗಳಿಂದ 243 ರನ್​ ಕಲೆ ಹಾಕಿದ್ದಾರೆ. ಇವರು ಸಿಡಿದು ನಿಂತರೆ ಪಂದ್ಯದ ಗತಿಯೇ ಬದಲಾಗಬಹುದು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳುವ ಅಗತ್ಯವಿದೆ.

ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

ಇದುವರೆಗಿನ ಮಹಿಳಾ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 5 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತವೇ ಗೆದ್ದು ಬೀಗಿದೆ. ಈ ಬಾರಿಯದ್ದು 6ನೇ ಮುಖಾಮುಖಿ. ಮಹಿಳಾ ಏಷ್ಯಾ ಕಪ್​ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್​ ಪಂದ್ಯದಲ್ಲಿ ಭಾರತ 3 ವಿಕೆಟ್‌ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.

ಸಂಭಾವ್ಯ ತಂಡಗಳು


ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ (ವಾಕ್), ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.

Continue Reading
Advertisement
sunil bose savitha viral news
ವೈರಲ್ ನ್ಯೂಸ್1 min ago

Viral News: ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು!

Geyser Blast
ತಂತ್ರಜ್ಞಾನ4 mins ago

Geyser Blast: ಬಾಂಬ್‌‌ನಂತೆ ಬ್ಲಾಸ್ಟ್ ಆಗಬಹುದು ಗೀಸರ್! ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಇರಲಿ

Mysuru News
ಕ್ರೈಂ25 mins ago

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Actor Darshan case Police Serve Notice To Siddarudha Who Claimed To Met Darshan
ಸ್ಯಾಂಡಲ್ ವುಡ್29 mins ago

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

hd kumaraswamy nanjanagudu
ಪ್ರಮುಖ ಸುದ್ದಿ32 mins ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

RRB Recruitment 2024
ಉದ್ಯೋಗ34 mins ago

RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Paris 2024 Olympics
ಕ್ರೀಡೆ35 mins ago

Paris 2024 Olympics: ಭಾರತೀಯ ಕ್ರೀಡಾಪಟುಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದ ತರುಣ್‌ ವಿರುದ್ಧ ಟೀಕೆಗಳ ಸುರಿಮಳೆ

road Accident
ರಾಯಚೂರು49 mins ago

Road Accident : ಕುಡಿದು ಕಾರು ಓಡಿಸಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು ; ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ

Delhi Floods
ದೇಶ57 mins ago

Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

dog meat abdul razak
ಕ್ರೈಂ1 hour ago

Dog Meat: ಅಬ್ದುಲ್‌ ರಜಾಕ್‌ ತರಿಸುವ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ17 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ22 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ23 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ3 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌