V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ - Vistara News

ಪ್ರಮುಖ ಸುದ್ದಿ

V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ

V Somanna: 1996-97ರಲ್ಲಿ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೇ ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

V Somanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೆಜ್ಜಾಲದಿಂದ ಆರಂಭಿಸಿ ಕನಕಪುರ, ಸಾತನೂರು, ಹಲಗೂರು , ಕೊಳ್ಳೇಗಾಲ- ಚಾಮರಾಜನಗರದವರೆಗೆ ಬರಲಿರುವ 142 km ರೈಲು ಮಾರ್ಗದ (Railway Line) ಸರ್ವೇ ಕಾರ್ಯ (Survey) ಮತ್ತೆ ಕೈಗೆತ್ತಿಕೊಳ್ಳಲಾಗುವುದು. 2019ರಲ್ಲೇ ಸರ್ವೆ ಆಗಿ ಸ್ಥಗಿತ ಆಗಿತ್ತು, ಈಗ ಮತ್ತೆ ಸರ್ವೇ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ (Karnataka Govt) ಜಾಗ ಕೊಡಬೇಕಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ (Central minister) ವಿ. ಸೋಮಣ್ಣ (V Somanna) ಹೇಳಿದ್ದಾರೆ.

ರೈಲ್ವೆ ಯೋಜನೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಸಭೆ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. 1996-97ರಲ್ಲಿ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೇ ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ಸ್ಟೇಷನ್‌ಗಳನ್ನು ವಿಶ್ವದರ್ಜೆಗೆ ಏರಿಸಲು 2022-23ರಲ್ಲಿ ಮಂಜೂರಾತಿ ನೀಡಲಾಗಿದೆ. ಇದರ ಯೋಜನೆಯ ಮೊತ್ತ ಬೆಂಗಳೂರು ಕಂಟೋನ್ಮೆಂಟ್ 485 ಕೋಟಿ ರೂ. ಹಾಗೂ ಯಶವಂತಪುರ ಸ್ಟೇಷನ್ 387 ಕೋಟಿ ರೂ. ಈ ಎರಡೂ ನಿಲ್ದಾಣ ಪುನರಾಭಿವೃದ್ಧಿ ಕಾರ್ಯವೂ 2025ರಲ್ಲಿ ಪೂರೈಸಲಾಗುವುದು. 2018-19ರ ಯಶವಂತಪುರ – ಚನ್ನಸಂದ್ರ 25 km ಹಾಗೂ ಬೈಯಪ್ಪನಹಳ್ಳಿ – ಹೊಸೂರು 48 km ಡಬಲಿಂಗ್ ಯೋಜನೆಗಳನ್ನು ಕ್ರಮವಾಗಿ ರೂ 314 ಕೋಟಿ ಹಾಗೂ ರೂ 500 ಕೋಟಿ ಮೊತ್ತದಲ್ಲಿ ಮಂಜೂರು ಮಾಡಲಾಗಿದ್ದು, ಕಾಮಗಾರಿ ಮುಂದುವರೆದಿದೆ ಎಂದಿದ್ದಾರೆ ಸೋಮಣ್ಣ.

ಯಶವಂತಪುರ – ಚನ್ನಸಂದ್ರ ಯೋಜನೆಯಲ್ಲಿ ಈಗಾಗಲೇ ಯಶವಂತಪುರ ಹೆಬ್ಬಾಳ 10.3 km ಗಳನ್ನೂ ಪೂರ್ಣಗೊಳಿಸಲಾಗಿದೆ. ಮೇ 2025ರಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. 1997-98 ರಲ್ಲಿ ಮಂಜೂರಾದ, ನೆನೆನಗುದಿಗೆ ಬಿದ್ದಿದ್ದ ಮಹತ್ವದ ಬೆಂಗಳೂರು – ವೈಟ್‌ಫೀಲ್ಡ್ 38 km ಕ್ವಾಡ್ರುಪ್ಲಿಂಗ್ ಯೋಜನೆಗಳನ್ನು ಈಗ ಕೈಗೆತ್ತಿಗೊಂಡು ಕಾಮಗಾರಿಗೆ ವೇಗ ನೀಡಲಾಗಿದ್ದು, ಬೆಂಗಳೂರು ದಂಡು – ಬೈಯಪ್ಪನಹಳ್ಳಿ ನಡುವೆ 13 ಕಾಮಗಾರಿ ನಡೆಯುತ್ತಿದೆ. ಇದರ ಯೋಜನೆ ಮೊತ್ತ ರೂ. 492 ಕೋಟಿ. ಜೂನ್ 2025ರಲ್ಲಿ ಈ ಯೋಜನೆಯನ್ನು ಪೂರ್ಣ ಮಾಡುವ ಗುರಿಯಿದೆ. ನನ್ನ ಮತ ಕ್ಷೇತ್ರದ ವಿಜಯನಗರ, ನಾಯಂಡಹಳ್ಳಿ, ಯೂನಿವರ್ಸಿಟಿಯಲ್ಲಿ ಕಾಮಗಾರಿಗಳನ್ನು ಸರಿಪಡಿಸುತ್ತೇವೆ ಎಂದು ಸೋಮಣ್ಣ ತಿಳಿಸಿದರು.

11ರಂದು ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ ಜೊತ ಚರ್ಚೆ ಮಾಡಿದ್ದೇನೆ. ಇಲಾಖೆಯ ಸಾಧಕ ಭಾದಕಗಳ ಅರಿಯುವ ಕೆಲಸ ಮಾಡ್ತಿದ್ದೇನೆ. ರೈಲ್ವೆ ಇಲಾಖೆಗೆ ರಾಜ್ಯದಿಂದ ಅತಿರಥ ಮಹಾರಥರು ಮಂತ್ರಿಗಳಾಗಿ ಕೊಡುಗೆ ಕೊಟ್ಟಿದ್ದಾರೆ. ಅಶ್ವಿನಿ ವೈಷ್ಣವ್ ಹಾಗೂ ಜಲಶಕ್ತಿ ಸಚಿವ ಸಿ. ಆರ್ ಪಾಟೀಲ್ ನನಗೆ ಹೆಚ್ಚಿನ ಹುಮ್ಮಸ್ಸು ಕೊಟ್ಟಿದ್ದಾರೆ. ಐವತ್ತು ವರ್ಷಗಳಲ್ಲಿ ಆಗದಿರುವುದನ್ನು ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆ ಮಾಡಿ ತೋರಿಸಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿ ಮಿಲಿಟರಿ ಇದ್ದಂತೆ. ಇನ್ನೂ ಎರಡು ವರ್ಷಗಳಲ್ಲಿ ಕರ್ನಾಟಕ, ವಿಭಿನ್ನ ರೀತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಬದಲಾವಣೆ ಆಗುತ್ತದೆ. ನನ್ನ ನಲವತ್ತು ವರ್ಷಗಳ ಅನುಭವದೊಂದಿಗೆ ಬದಲಾವಣೆ ಆಗುತ್ತದೆ. ರೈಲ್ವೆ ಮೇಲ್ಸುತುವೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರ್ಧ ಅರ್ಧ ಹಣ ಕೊಡಬೇಕು. ಜಾಗವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದಿದ್ದಾರೆ ಸೋಮಣ್ಣ.

ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಮಾಹಿತಿ ಅವರು ನೀಡಿದರು.
ಹಾಸನ – ಬೆಂಗಳೂರು ಹೊಸ ಲೈನ್ : 166 km ರೂ 2010 ಕೋಟಿ ವೆಚ್ಚದಲ್ಲಿ 2017 ರಲ್ಲಿ ನಿರ್ಮಾಣಗೊಂಡಿದೆ
ಯಲಹಂಕ – ದೇವರಪಲ್ಲಿ ಡಬಲಿಂಗ್ : 72 km ರೂ 882 ಕೋಟಿ ವೆಚ್ಚದಲ್ಲಿ 2021ರಲ್ಲಿ ಪೂರ್ಣ ಗೊಂಡಿದೆ
2016 ರಲ್ಲಿ ರೂ 167 ಕೋಟಿ ವೆಚ್ಚದಲ್ಲಿ ಯಲಹಂಕ – ಚನ್ನಸಂದ್ರ 13km ಡಬಲಿಂಗ್
95 ಕೋಟೆ ವೆಚ್ಚದಲ್ಲಿ ಯಲಹಂಕ – ಯಶವಂತಪುರ 7km ಡಬಲಿಂಗ್ ಪೂರ್ಣಗೊಂಡಿದೆ
ಪ್ರಧಾನಿ ಮೋದಿಯವರ ಸಂಕಲ್ಪದಂತೆ ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ಉತ್ತಮ್ಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೈಯಪ್ಪನಹಳ್ಳಿಯಲ್ಲಿ ರೂ 314 ಕೋಟಿ ವೆಚ್ಚದಲ್ಲಿ 2022ರಲ್ಲಿ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣಗೊಂಡಿದೆ.
ರೂ 280 ಕೋಟಿ ವೆಚ್ಚದಲ್ಲಿ 11 RUB ಗಳ ಹಾಗೂ ರೂ 285 ಕೋಟಿ ವೆಚ್ಚದಲ್ಲಿ 12 ROB ಗಳ ನಿರ್ಮಾಣಗೊಂಡಿದೆ.

ಇದನ್ನೂ ಓದಿ: V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Sexual Harassment: ಕಾಮ, ಕ್ರೋಧ, ಮೋಹ, ಮದ, ಮತ್ಸರ ಇವೆಲ್ಲವೂ ಅಂಕೆಯಲ್ಲಿದ್ದರೆ ಚೆನ್ನ. ಆದರೆ ಈಗ ಎಳೆಯ ಮಕ್ಕಳನ್ನು ಕೂಡ ಕಾಮುಕ ದೃಷ್ಟಿಯಲ್ಲಿ ನೋಡುವ ದುರಂತ ಕಾಲದಲ್ಲಿದ್ದೇವೆ. ರೈಲಿನಲ್ಲಿ ಅಜ್ಜಿಯೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯ ಸನ್ನೆಗಳನ್ನು ಸಹ ಮಾಡಿ ಕಿರುಕುಳ ಕೊಟ್ಟಿದ್ದಾನೆ.

VISTARANEWS.COM


on

Sexual Harassment
Koo

ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ಆಗಾಗ ಕೇಳಿ ಬರುತ್ತಲೇ ಇದೆ. ಬಸ್,
ರೈಲುಗಳಲ್ಲಿ , ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳಂತಹ ಹೊರಗಿನ ಸ್ಥಳದಲ್ಲಿ ಮಾತ್ರವಲ್ಲ ಕೆಲವೊಮ್ಮೆ ಕೆಲವು ಮಹಿಳೆಯರು ತಮ್ಮ ಮನೆಯೊಳಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಒಟ್ಟಾರೆ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗುವುದಿಲ್ಲ. ಇದೀಗ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment )ನೀಡಿದ ಘಟನೆ ಬೆಳಕಿಗೆ ಬಂದಿದೆ.

ಇಟಾರ್ಸಿಯಿಂದ ಭೋಪಾಲ್‍ಗೆ ತೆರಳುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಸೆಕೆಂಡ್ ಕ್ಲಾಸ್ ಎಸಿ ಕೋಚ್ ಎ -1 ರಲ್ಲಿ 14 ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಬಾಲಕಿ ತನ್ನ ಅಜ್ಜಿಯ ಜೊತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆಗ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಅಶ್ಲೀಲ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯ ಸನ್ನೆಗಳನ್ನು ಸಹ ಮಾಡಿದ್ದಾನೆ. ಕಿರುಕುಳವನ್ನು ಸಹಿಸಲಾಗದೆ ಭಯಭೀತಳಾದ ಬಾಲಕಿ ತನ್ನ ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ಈ ಘಟನೆಯ ಬಗ್ಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿ ಆರ್ ಪಿ) ನಿಯಂತ್ರಣ ಕೊಠಡಿಗೆ ವರದಿ ಮಾಡಿದ್ದಾಳೆ. ರೈಲು ಬೀನಾ ತಲುಪಿದಾಗ, ಜಿಆರ್‌ಪಿ ಅಧಿಕಾರಿಗಳು ಬಂದು, ತಕ್ಷಣದ ಕ್ರಮ ತೆಗೆದುಕೊಳ್ಳುವ ಬದಲು, ಎಫ್ಐಆರ್ ದಾಖಲಿಸಲು ರೈಲಿನಿಂದ ಇಳಿಯುವಂತೆ ಅವರು ಹುಡುಗಿಗೆ ಸೂಚಿಸಿದರು. ಆದರೆ ಅವಳು ಅದಕ್ಕೆ ನಿರಾಕರಿಸಿದಳು.

ಕೊನೆಗೆ ಬಾಲಕಿ ಗ್ವಾಲಿಯರ್‌ಗೆ ಬಂದು ತನ್ನ ತಂದೆಯನ್ನು ಭೇಟಿಯಾಗಿ ಅವರ ಜೊತೆ ಗ್ವಾಲಿಯರ್‌ನ ಜಿಆರ್‌ಪಿ ಠಾಣೆಯಲ್ಲಿ ಸೆಕ್ಷನ್ 74 ಬಿಎನ್ಎಸ್ 11/12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾಳೆ. ರಾಣಿ ಕಮಲಾಪತಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡ ಗ್ವಾಲಿಯರ್‌ನ ಜಿರ್‌ಪಿ ಠಾಣೆ ಮುಂದಿನ ಕ್ರಮಕ್ಕಾಗಿ ರಾಣಿ ಕಮಲಪತಿ ಠಾಣೆಯ ಜಿಆರ್‌ಪಿಗೆ ವರ್ಗಾಯಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

ಲೈಂಗಿಕ ಕಿರುಕುಳ ಬಾಲಕಿಯರ ಮೇಲೆ ಮಾತ್ರ ನಡೆಯುತ್ತಿಲ್ಲ. ಈ ವರ್ಷದ ಮೇ ತಿಂಗಳಿನಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ತಾನು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದೇನೆ ಎಂದು 16 ವರ್ಷದ ಬಾಲಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದು ಸಖತ್ ವೈರಲ್ ಆಗಿತ್ತು. ಸಮಯ್ ಪುರ್ ಬದ್ಲಿ ಕಡೆಗೆ ಹೋಗುತ್ತಿದ್ದ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ ನಂತರ ತನ್ನ ಸಹ ಪ್ರಯಾಣಿಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದಾತ ದೂರಿದ್ದ.

Continue Reading

ದೇಶ

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

ಬಿಹಾರದ ಸರಣ್‌ ಜಿಲ್ಲೆಯಲ್ಲಿ ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿಯು ಗೆಳೆಯನ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ. ಜುಲೈ 1ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮರ್ಹೌರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿಯೇ ಘಟನೆ ನಡೆದಿದೆ. ನರ್ಸಿಂಗ್‌ ಹೋಮ್‌ನಲ್ಲಿಯೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ-ಯುವತಿ ಮಧ್ಯೆ ವಾಗ್ವಾದ ನಡೆದಿದೆ. ಯುವಕನು ಮದುವೆಯಾಗಲು ಸುತಾರಾಂ ಒಪ್ಪದ ಕಾರಣ ಇಂತಹ ಕೃತ್ಯ ಎಸಗಿದ್ದಾಳೆ.

VISTARANEWS.COM


on

Woman Doctor
Koo

ಪಟನಾ: ಬಣ್ಣದ ಮಾತನಾಡಿ, ನೂರು ಕನಸು ಬಿತ್ತಿ, ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕವನ್ನೂ ಬೆಳೆಸಿ, ಕೊನೆಗೆ ಮೋಸ ಮಾಡುವ ಯುವಕರು ಹಾಗೂ ಯುವತಿಯರ ಸಂಖ್ಯೆ ಜಾಸ್ತಿ ಇದೆ. ಬ್ರೇಕಪ್‌ (Breakup) ಎಂದು ಒಂದೇ ಒಂದು ಮಾತಿನಲ್ಲಿ ಸಂಬಂಧವನ್ನು, ಪ್ರೀತಿಯನ್ನು ಕಡಿದುಕೊಳ್ಳುವವರ ಸಂಖ್ಯೆ ಜಾಸ್ತಿಯೇ ಆಗುತ್ತಿದೆ. ಹೀಗೆ, ಮದುವೆಯಾಗುವುದಾಗಿ ಭರವಸೆ ನೀಡಿ, ದೈಹಿಕ ಸಂಪರ್ಕ ಬೆಳೆಸಿ, ಕೊನೆಗೆ ಮದುವೆಯಾಗುವುದಿಲ್ಲ (Marriage) ಎಂದು ಹೇಳಿದ ಯುವಕನ ಮರ್ಮಾಂಗವನ್ನೇ ಲೇಡಿ ಡಾಕ್ಟರ್‌ ಒಬ್ಬರು ಕತ್ತರಿಸಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

ಹೌದು, ಸರಣ್‌ ಜಿಲ್ಲೆಯಲ್ಲಿ ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿಯು ಗೆಳೆಯನ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ. ಜುಲೈ 1ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮರ್ಹೌರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ನರ್ಸಿಂಗ್‌ ಹೋಮ್‌ನಲ್ಲಿಯೇ ಘಟನೆ ನಡೆದಿದೆ. ನರ್ಸಿಂಗ್‌ ಹೋಮ್‌ನಲ್ಲಿಯೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ-ಯುವತಿ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ, ಮದುವೆಯಾಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದ ಗೆಳೆಯನ ಮೇಲೆ ದಾಳಿ ಮಾಡಿದ ಯುವತಿಯು, ಆತನ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ.

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಪರಿಸ್ಥಿತಿ ಗಂಭೀರವಾದ ಕಾರಣ ಪಟನಾದಲ್ಲಿರುವ ಸೃಷ್ಟಿ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಜುಲೈ 1ರಂದು ಛಪ್ರಾದಲ್ಲಿಯೇ ಯುವಕ-ಯುವತಿಯು ಮದುವೆಯಾಗಲು ತೀರ್ಮಾನಿಸಿದ್ದರು. ಸಿಂಪಲ್‌ ಆಗಿ ರಿಜಿಸ್ಟರ್‌ ಮದುವೆಯಾಗಲು ನಿರ್ಧರಿಸಿದ್ದರು. ನೂರು ಕನಸುಗಳನ್ನು ಇಟ್ಟುಕೊಂಡು ಯುವತಿಯು ಕಾಯುತ್ತಿದ್ದಳು. ಆದರೆ, ಏಕಾಏಕಿ ಮದುವೆಯಾಗುವುದಿಲ್ಲ ಎಂದು ಹೇಳಿದ ಕಾರಣ ಇಂತಹ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಯುವತಿ ಹೇಳುವುದೇನು?

ಘಟನೆಯ ಬಳಿಕ ಯುವತಿಯನ್ನು ವಶಕ್ಕೆ ಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. “ಇಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ. ಮೂರು ಬಾರಿ ನನಗೆ ಗರ್ಭಪಾತ ಆಗಿದೆ. ಮದುವೆಯಾಗುವುದಾಗಿ ನಂಬಿಸಿ ಈಗ ಮೋಸ ಮಾಡಿದ್ದಾನೆ. ನನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಬೇರೆ ಯುವತಿಯರಿಗೆ ಹೀಗೆ ಮೋಸ ಆಗಬಾರದು ಎಂದು ಇಂತಹ ಕೃತ್ಯ ಎಸಗಿದ್ದೇನೆ” ಎಂಬುದಾಗಿ ಯುವತಿ ಪೊಲೀಸರ ಎದುರು ಹೇಳಿರುವ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

Continue Reading

ದೇಶ

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Bridge Collapse: ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸಿವಾನ್‌ ಜಿಲ್ಲೆಯಲ್ಲಿ ಬುಧವಾರ ಸುಮಾರು 35 ವರ್ಷಗಳಷ್ಟು ಹಳೆಯದಾದ ಸೇತುವೆಗಳು ಕುಸಿದಿವೆ. ದಿಯೋರಿಯಾ ಬ್ಲಾಕ್‌ನಲ್ಲಿ ಸೇತುವೆಗಳು ಕುಸಿದಿದ್ದು, ಯಾವುದೇ ಪ್ರಾಣಾಪಾಯ, ಜನರಿಗೆ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ಜನರ ಸಂಚಾರಕ್ಕೆ ಮಾತ್ರ ಭಾರಿ ಅಡಚಣೆಯಾಗಿದೆ.

VISTARANEWS.COM


on

Bridge Collapse
Koo

ಪಟನಾ: ಬಿಹಾರದಲ್ಲಿ (Bihar) ಕಳಪೆ ಕಾಮಗಾರಿಗಳು, ಸರ್ಕಾರದ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಲೇ ಇವೆ. ಅದರಲ್ಲೂ, ಕಳೆದ ಕೆಲ ದಿನಗಳಲ್ಲಿ ಸಾಲು ಸಾಲು ನಿರ್ಮಾಣ ಹಂತದ ಸೇತುವೆಗಳು ಕುಸಿಯುತ್ತಿರುವುದು (Bridge Collapse) ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬುಧವಾರ (ಜುಲೈ 3) ಸಿವಾನ್‌ ಜಿಲ್ಲೆಯೊಂದರಲ್ಲಿಯೇ (Siwan District) ಎರಡು ಸೇತುವೆಗಳು ಕುಸಿದಿದ್ದು, ಕಳೆದ ಎರಡು ವಾರಗಳಲ್ಲಿಯೇ ಒಟ್ಟು 7 ಸೇತುವೆಗಳು ಕುಸಿದಂತಾಗಿದೆ. ಇದರಿಂದಾಗಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸಿವಾನ್‌ ಜಿಲ್ಲೆಯಲ್ಲಿ ಬುಧವಾರ ಸುಮಾರು 35 ವರ್ಷಗಳಷ್ಟು ಹಳೆಯದಾದ ಸೇತುವೆಗಳು ಕುಸಿದಿವೆ. ದಿಯೋರಿಯಾ ಬ್ಲಾಕ್‌ನಲ್ಲಿ ಸೇತುವೆಗಳು ಕುಸಿದಿದ್ದು, ಯಾವುದೇ ಪ್ರಾಣಾಪಾಯ, ಜನರಿಗೆ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ಮಹಾರಾಜ್‌ಗಂಜ್‌ ಸೇರಿ ಹಲವು ಗ್ರಾಮಗಳಿಗೆ ಸೇತುವೆಗಳು ಸಂಪರ್ಕ ಒದಗಿಸುತ್ತಿದ್ದವು. ಈಗ ಸೇತುವೆಗಳು ಕುಸಿದ ಕಾರಣ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜೂನ್‌ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್‌ 27ರಂದು ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್‌ 23ರಂದು ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್‌ 22ರಂದು ಕೂಡ ಸಿವಾನ್‌ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್‌ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.  

ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತ; 9 ದಿನದಲ್ಲಿ 5ನೇ ಪ್ರಕರಣ!

Continue Reading

ಕರ್ನಾಟಕ

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

Stabbing Case: ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಮದ್ಯ ಸೇವಿಸಿದ್ದರಿಂದ ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

VISTARANEWS.COM


on

Stabbing Case
Koo

ಬೆಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್‌ನ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ (Stabbing Case) ಬುಧವಾರ ನಡೆದಿದೆ. ಜೈ ಕಿಶೋರ್‌ ರಾಯ್ ಮೃತ ಸೆಕ್ಯೂರಿಟಿ ಗಾರ್ಡ್, ಭಾರ್ಗವ್ ಕೊಲೆ ಆರೋಪಿಯಾಗಿದ್ದಾನೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜಿಗೆ ವಿದ್ಯಾರ್ಥಿ ಮದ್ಯ ಸೇವಿಸಿ ಹೋಗಿದ್ದ. ಹೀಗಾಗಿ ಆತನನ್ನು ಒಳಗೆ ಹೋಗಲು ಸೆಕ್ಯೂರಿಟಿ ಗಾರ್ಡ್ ಜೈ ಕಿಶೋರ್ ರಾಯ್ ಬಿಟ್ಟಿಲ್ಲ. ಈ ವೇಳೆ ಜಗಳ ತೆಗೆದ ವಿದ್ಯಾರ್ಥಿ ಆತನನ್ನು ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸೆಕ್ಯೂರಿಟಿ ಗಾರ್ಡ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಅಮೃತಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಮಾಡಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಕಾಲೇಜಿನ ಮುಂಭಾಗದಲ್ಲಿ ಮೃತ ಕಿಶೋರ್ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನೂ ಓದಿ | Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ

ಬೆಳಗಾವಿ: ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ. ಪ್ರಿಯಾ ರವಿ ತಳವಾರ (11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ನೆನ್ನೆ ಶಾಲೆಯಿಂದ ಮನೆಗೆ ಬಂದ ಬೆನ್ನಲ್ಲೇ ಬಾಲಕಿ ಬಾವಿಗೆ ಹಾರಿದ್ದಾಳೆ. ಸುಮಾರು 50 ಅಡಿ ಆಳದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿ ಶವ ಹೊರಕ್ಕೆ ತೆಗೆಯಲಾಗಿದೆ.

ಕಾರು-ಖಾಸಗಿ ಬಸ್ ಡಿಕ್ಕಿಯಾಗಿ ಚಾಲಕ ಸಾವು

ಶಿವಮೊಗ್ಗ: ಕಾರು- ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಐದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ದೇವಿಕೊಪ್ಪ ಬಳಿ ನಡೆದಿದೆ. ಶಿವಮೊಗ್ಗ ಮೂಲದ ಪ್ರಸಾದ್ ಮೃತ ಯುವಕ. ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದ್ದು, ಬಸ್ ಪಲ್ಟಿಯಾಗಿದೆ. ಇದರಿಂದ ಬಸ್‌ನಲ್ಲಿದ್ದ ಐದಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಶಿರಾಳಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನವಟ್ಟಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಹಾಗೂ ಶಿರಾಳಕೊಪ್ಪದ ಕಡೆದಿಂದ ಹೋಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಕಾರಿಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರು ಚಾಲಕ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ | Physical Abuse: ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಸವಾರನ ತಲೆ ಮೇಲೆ ಹರಿದ ಲಾರಿ

ಬೆಂಗಳೂರು: ಲಾರಿ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೈಸ್‌ ರಸ್ತೆಯಲ್ಲಿ ನಡೆದಿದೆ. ಲಾರಿ ಡಿಕ್ಕಿ ಹೊಡೆದು ದ್ವಿಚಕ್ರವಾಹನ ಸವಾರನ ತಲೆ ಮೇಲೆ ಹರಿದಿದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement
Viral Video
ವೈರಲ್ ನ್ಯೂಸ್13 seconds ago

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

OTT Releases
ಸಿನಿಮಾ10 mins ago

OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

Sexual Harassment
Latest16 mins ago

Sexual Harassment: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

Woman Doctor
ದೇಶ28 mins ago

ಬೇರೆ ಹುಡುಗಿಗೆ ಮೋಸ ಆಗಬಾರದು; ಮದುವೆಯಾಗಲ್ಲ ಎಂದ ಗೆಳೆಯನ ಗುಪ್ತಾಂಗ ಕತ್ತರಿಸಿದ ಯುವತಿ! Video ಇದೆ

Designer Hairpins Fashion
ಫ್ಯಾಷನ್40 mins ago

Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

Amritpal Singh
ದೇಶ1 hour ago

Amritpal Singh: ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ಗೆ ಪೆರೋಲ್‌

Bridge Collapse
ದೇಶ1 hour ago

Bridge Collapse: ಬಿಹಾರದಲ್ಲಿ ಮತ್ತೆರಡು ಸೇತುವೆ ಕುಸಿತ; 15 ದಿನಗಳಲ್ಲಿ ಇದು 7ನೇ ಪ್ರಕರಣ!

Stabbing Case
ಕರ್ನಾಟಕ2 hours ago

Stabbing Case: ಕಾಲೇಜಿನೊಳಗೆ ಬಿಡದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ನ ಇರಿದು ಕೊಂದ ವಿದ್ಯಾರ್ಥಿ!

ಕರ್ನಾಟಕ2 hours ago

Rain News: ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಅಬ್ಬರ; ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಪರದಾಟ

Cabinet Committees
ದೇಶ2 hours ago

Cabinet Committees: ಸಂಪುಟ ಸಮಿತಿಗಳನ್ನು ರಚಿಸಿದ ಕೇಂದ್ರ; ಭದ್ರತಾ ಸಮಿತಿಗೆ ಮೋದಿಯೇ ಮುಖ್ಯಸ್ಥ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌