Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು! - Vistara News

ದೇಶ

Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Indian Armed Forces: ಜನರಲ್‌ ದ್ವಿವೇದಿ ಅವರ ರೋಲ್‌ ನಂಬರ್‌ 931 ಹಾಗೂ ಅಡ್ಮಿರಲ್‌ ತ್ರಿಪಾಠಿ ಅವರು ರೋಲ್‌ ನಂಬರ್‌ 938. ಶಾಲಾ ದಿನಗಳಿಂದಲೇ ಇವರಿಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಜೊತೆಯಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದಾದ ಬಳಿಕ ಇಬ್ಬರೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

VISTARANEWS.COM


on

Indian Armed Forces
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತರಗತಿಯಲ್ಲಿ ಓದಿದ್ದ ಇಬ್ಬರು ಭಾರತೀಯ ಸೇನೆ(Indian Army) ಮತ್ತು ನೌಕಾಪಡೆ(Navy)ಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ(Indian Armed Forces). ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ(Upendra Dwivedi) ಹಾಗೂ ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ(Dinesh Tripati) ನೇಮಕಗೊಂಡಿದ್ದಾರೆ. ಇವರಿಬ್ಬರೂ 70ರ ದಶಕದಲ್ಲಿ ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಯಲ್ಲಿ 5A ತರಗತಿಯಲ್ಲಿ ಜೊತೆಯಲ್ಲಿ ಓದಿದ್ದರು.

ಇವರಿಬ್ಬರೂ ಶಾಲಾ ದಿನಗಳಿಂದ ಬಹಳ ಬಾಂದವ್ಯದಿಂದ ಇದ್ದರು. ಜನರಲ್‌ ದ್ವಿವೇದಿ ಅವರ ರೋಲ್‌ ನಂಬರ್‌ 931 ಹಾಗೂ ಅಡ್ಮಿರಲ್‌ ತ್ರಿಪಾಠಿ ಅವರು ರೋಲ್‌ ನಂಬರ್‌ 938. ಶಾಲಾ ದಿನಗಳಿಂದಲೇ ಇವರಿಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಜೊತೆಯಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದಾದ ಬಳಿಕ ಇಬ್ಬರೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

ರಕ್ಷಣಾ ಸಚಿವರ ಅಧಿಕೃತ ವಕ್ತಾರ ಎ ಭರತ್ ಭೂಷಣ್ ಬಾಬು ಅವರು ಎಕ್ಸ್ ಪೋಸ್ಟ್‌ನಲ್ಲಿ, “ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದೇ ಶಾಲೆಯ ವಿದ್ಯಾರ್ಥಿಗಳು ನೌಕಾಪಡೆ ಮತ್ತು ಸೇನಾ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಅದ್ಭುತ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. 50 ವರ್ಷಗಳ ನಂತರ ಜೊತೆಯಾಗಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಎರಡು ತಿಂಗಳ ಅಂತರದಲ್ಲಿ ಇಬ್ಬರು ಸಹಪಾಠಿಗಳ ನೇಮಕಾತಿಗಳು ಒಂದೇ ಸಮಯದಲ್ಲಿ ಬಂದಿವೆ. ಅಡ್ಮಿರಲ್ ಅವರು ಮೇ 1 ರಂದು ಭಾರತೀಯ ನೌಕಾಪಡೆಯ ಕಮಾಂಡ್ ಅನ್ನು ವಹಿಸಿಕೊಂಡರು, ಲೆಫ್ಟಿನೆಂಟ್ ಜನರಲ್ ದ್ವಿವೇದಿ ಇಂದು (ಜೂನ್ 30) ತಮ್ಮ ಹೊಸ ನೇಮಕಾತಿಯನ್ನು ವಹಿಸಿಕೊಳ್ಳಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಯಾರು?

ಜುಲೈ 1, 1964 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್ ಆಗಿ ಸುದೀರ್ಘ ಅಧಿಕಾರಾವಧಿಯನ್ನು ಹೊಂದಿದ್ದರು, ಅಲ್ಲಿ ಅವರು ಪೂರ್ವ ಲಡಾಖ್‌ನಲ್ಲಿನ ಎಲ್‌ಎಸಿಯಲ್ಲಿನ ಮಿಲಿಟರಿ ಸ್ಟ್ಯಾಂಡ್‌ಫ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಮಾನ್ಯತೆ ಹೊಂದಿದ್ದಾರೆ.

ಅವರು ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು US ಆರ್ಮಿ ವಾರ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ ಮತ್ತು DSSC ವೆಲ್ಲಿಂಗ್‌ಟನ್ ಮತ್ತು ಆರ್ಮಿ ವಾರ್ ಕಾಲೇಜ್, Mhow ನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ. ಅಧಿಕಾರಿಯು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂ ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ಅಡ್ಮಿರಲ್ ದಿನೇಶ್ ತ್ರಿಪಾಠಿ ಯಾರು?

1985 ರಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲ್ಪಟ್ಟ ಅಡ್ಮಿರಲ್ ತ್ರಿಪಾಠಿ, ವಿವಿಧ ನಿರ್ಣಾಯಕ ಕಾರ್ಯಯೋಜನೆಗಳಲ್ಲಿ ಸೇವೆ ಸಲ್ಲಿಸಿದ, ಸುಮಾರು 40 ವರ್ಷಗಳ ಅನುಭವ ಇರುವ ಹಿರಿಯ ಅಧಿಕಾರಿ. ಅವರು ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ವೆಸ್ಟರ್ನ್ ನೇವಲ್ ಕಮಾಂಡ್ ಮತ್ತು ಕೇರಳದ ಎಝಿಮಲದಲ್ಲಿರುವ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ಮುಂತಾದ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಅನುಭವಸ್ಥರು. ಅವರ ವೃತ್ತಿಜೀವನದುದ್ದಕ್ಕೂ, ಅವರು ಐಎನ್‌ಎಸ್ ವಿನಾಶ್, ಕಿರ್ಚ್ ಮತ್ತು ತ್ರಿಶೂಲ್ ಸೇರಿದಂತೆ ಹಲವಾರು ನೌಕಾ ಹಡಗುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

Hathras Stampede:ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 105, 110, 126(2), 223, ಮತ್ತು 238ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಕಾಲ್ತುಳಿತ(Hathras Stampede)ಕ್ಕೆ ಧಾರ್ಮಿಕ ಕಾರ್ಯಕ್ರಮ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ಮುಖ್ಯ ಸೇವಾಧರ್‌ ದೇವ್‌ಪ್ರಕಾಶ್‌ ಮಧುಕರ್‌ ಮತ್ತು ಇತರೆ ಆಯೋಜಕರ ವಿರುದ್ಧ ಸಿಕಂದ್ರ ರಾವ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಸತ್ಸಂಗ ನಡೆಸಿದ್ದ ಭೋಲೇ ಬಾಬಾ(Bhole Baba) ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 105, 110, 126(2), 223, ಮತ್ತು 238ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಭೋಲೆ ಬಾಬಾ ಅವರಿಗಾಗಿ ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಅವರು ಕ್ಯಾಂಪಸ್ ಒಳಗೆ ಕಂಡುಬಂದಿಲ್ಲʼʼ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದರು.

ಇನ್ನು ಭೋಲೆ ಬಾಬಾ ಮೈನ್‌ಪುರಿ ನಗರದ ಹೊರವಲಯದಲ್ಲಿರುವ ಅವರ ಆಶ್ರಮದಲ್ಲಿದ್ದಾರೆ ಎನ್ನಲಾಗಿದ್ದು, ಆಶ್ರಮಕ್ಕೆ ಬಿಗಿ ಬಂದೋಬಸ್ತ್‌ ನೀಡಲಾಗಿದೆ. ಆದರೆ ಮೈನ್‌ಪುರಿಯಲ್ಲಿರುವ ಆಶ್ರಮದ ಬಳಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಭೋಲೆ ಬಾಬಾ ಆಶ್ರಮದಲ್ಲಿ ಇರುವುದನ್ನು ತಳ್ಳಿಹಾಕಿದ್ದಾರೆ ಮತ್ತು ಮಂಗಳವಾರದ ಘಟನೆಯ ಹಿನ್ನೆಲೆಯಲ್ಲಿ ಆಶ್ರಮದೊಳಗಿನ ಭೋಲೆ ಬಾಬಾ ಅವರ ಅನುಯಾಯಿಗಳ ಸುರಕ್ಷತೆಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ಫುಲ್ರೈ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಸತ್ಸಂಗ’ದಲ್ಲಿ ಸುಮಾರು 2.5 ಲಕ್ಷ ಜನ ಸೇರಿದ್ದರು. ಆದರೆ ಸಂಘಟಕರು ಇದನ್ನು ಮರೆಮಾಚಿದ್ದರು. ಸಂಘಟಕರು ಕೇವಲ 80,000 ಜನ ಭಾಗಿಯಾಗಿದ್ದರು ಎಂದು ಹೇಳಿದ್ದರು. ಹೀಗಾಗಿ ಸತ್ಸಂಗ’ದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಲಕ್ಷಗಟ್ಟಲೆ ಇರುತ್ತದೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ಸಂಘಟಕರನ್ನು ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

ಸತ್ಯಂಗ ಮುಗಿಸಿ ಭೋಲೆ ಬಾಬಾ ಅವರು ಅಪರಾಹ್ನ 3.30ರ ಸುಮಾರಿಗೆ ಸ್ಥಳದಿಂದ ಹೊರಡುವಾಗ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರವು ಎಸ್‌ಐಟಿ ರಚಿಸಿದ್ದಲ್ಲದೇ, ಹೈಕೋರ್ಟ್‌ನ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿದೆ. ಹತ್ರಾಸ್‌ನ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುಗಳನ್ನು ವಿಚಾರಿಸಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ”ಈ ದುರಂತ ಅತೀವ ಬೇಸರ ತರಿಸಿದೆ. ಇದೊಂದು ಆಕಸ್ಮಿಕವೋ ಅಥವಾ ದೊಡ್ಡ ಸಂಚಿನ ಭಾಗವೋ ಎಂಬುದು ಗೊತ್ತಾಗಬೇಕಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಬೇಕಿದೆ. ಸರಕಾರವು ಆಗ್ರಾದ ಎಡಿಜಿ ಅನುಪಮ್‌ ಕುಲಶ್ರೇಷ್ಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಹಾಗೆಯೇ ಹೈಕೋರ್ಟ್‌ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಲಾಗಿದೆ,” ಎಂದು ಮಾಧ್ಯಮಗಳಿಗೆ ವಿವರ ನೀಡಿದರು.

ಇದನ್ನೂ ಓದಿ:BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Continue Reading

ವಾಣಿಜ್ಯ

Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Stock Market: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ ಜೋರಾಗಿದೆ. ಗುರುವಾರ ಕೂಡ ಸೆನ್ಸೆಕ್ಸ್  ಮತ್ತು ನಿಫ್ಟಿ ಜಿಗಿದು ನೂತನ ದಾಖಲೆ ಬರೆದಿದೆ. ಇಂದು ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಸೆನ್ಸೆಕ್ಸ್‌ 336.51 ಅಂಕ ಅಥವಾ ಶೇ. 0.42 ಏರಿಕೆಯೊಂದಿಗೆ ಸಾರ್ವಕಾಲಿಕ 80,323.30 ಗಡಿ ತಲುಪಿದೆ. ಇನ್ನು ನಿಫ್ಟಿ 83.50 ಪಾಯಿಂಟ್‌ ಅಥವಾ ಶೇ. 0.34 ಹೆಚ್ಚಳದೊಂದಿಗೆ 24 ಸಾವಿರದ ಗಡಿ ದಾಟಿ 24,370ಕ್ಕೆ ಏರಿದೆ. ಬುಧವಾರ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿತ್ತು.

VISTARANEWS.COM


on

Stock Market
Koo

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market)ಯಲ್ಲಿ ಗೂಳಿ ಅಬ್ಬರ ಜೋರಾಗಿದೆ. ಗುರುವಾರ (ಜುಲೈ 3) ಕೂಡ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಜಿಗಿದು ನೂತನ ದಾಖಲೆ ಬರೆದಿದೆ. ಇಂದು ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಸೆನ್ಸೆಕ್ಸ್‌ 336.51 ಅಂಕ ಅಥವಾ ಶೇ. 0.42 ಏರಿಕೆಯೊಂದಿಗೆ ಸಾರ್ವಕಾಲಿಕ 80,323.30 ಗಡಿ ತಲುಪಿದೆ. ಇನ್ನು ನಿಫ್ಟಿ 83.50 ಪಾಯಿಂಟ್‌ ಅಥವಾ ಶೇ. 0.34 ಹೆಚ್ಚಳದೊಂದಿಗೆ 24 ಸಾವಿರದ ಗಡಿ ದಾಟಿ 24,370ಕ್ಕೆ ಏರಿದೆ.

ಬುಧವಾರ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿತ್ತು. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿತ್ತು. ಜಾಗತಿಕವಾಗಿ ಪೂರಕ ವಾತಾವರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಸಂಚಲನ ಮೂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೂನ್ 10ರ ನಂತರ ಇಲ್ಲಿಯವರೆಗೆ ಸೆನ್ಸೆಕ್ಸ್‌ನಲ್ಲಿ 3,000ಕ್ಕೂ ಹೆಚ್ಚು ಪಾಯಿಂಟ್‌ಗಳು ಏರಿವೆ. ವಿಶೇಷ ಎಂದರೆ 1980ರ ದಶಕದಲ್ಲಿ ಪ್ರಾರಂಭವಾದ ನಂತರ ಸೆಕ್ಸೆಕ್ಸ್‌ ಮೊದಲ ಬಾರಿಗೆ 80,400ರ ಗಡಿಯನ್ನು ಸಮೀಪಿಸಿದೆ. ಭಾರತದಲ್ಲಿ ಮಾನ್ಸೂನ್ ಪ್ರಗತಿಯೂ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಚ್‌ಸಿಎಲ್‌ ಟೆಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಎಂ & ಎಂ, ಟಿಸಿಎಸ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಟೆಕ್ ಎಂ ಮುಂತಾದ ಪ್ರಮುಖ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಶೇ. 1.35ರಷ್ಟು ಏರಿಕೆಯಾಗಿದೆ. ಜತೆಗೆ ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೆನ್ಸೆಕ್ಸ್ ಕ್ರಮವಾಗಿ ಶೇ. 0.36 ಮತ್ತು ಶೇ. 0.57ರಷ್ಟು ಏರಿಕೆ ದಾಖಲಿಸಿವೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ಸಿಪ್ಲಾ, ಡಾ.ರೆಡ್ಡೀಸ್, ಶ್ರೀರಾಮ್ ಫೈನಾನ್ಸ್ ಮತ್ತು ಅದಾನಿ ಎಂಟರ್‌ಟೈನ್‌ಮೆಂಟ್‌ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಮಾರುಕಟ್ಟೆಯ ಜತೆಗೆ ಜಾಗತಿಕ ಮಾರುಕಟ್ಟೆಗಳೂ ಸಕಾರಾತ್ಮಕವಾಗಿ ಸ್ಪಂದಿಸಿವೆ. ಟೆಕ್ ಷೇರುಗಳ ಲಾಭದಿಂದ ವಾಲ್ ಸ್ಟ್ರೀಟ್ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿದೆ. ಎಸ್ & ಪಿ 500 ಶೇ. 0.51ರಷ್ಟು ಮತ್ತು ನಾಸ್ಡಾಕ್ ಕಾಂಪೊಸಿಟ್ ಶೇ. 0.88ರಷ್ಟು ಏರಿಕೆಯಾಗಿದೆ. ಇನ್ನು ಜಪಾನ್‌ನ ನಿಕೈ 225 ಶೇ. 0.27, ಕೊರಿಯಾದ ಕೋಸ್ಪಿ ಶೇ. 0.87 ಮತ್ತು ಏಷ್ಯಾ ಡೌ ಶೇ. 1ರಷ್ಟು ಏರಿಕೆ ದಾಖಲಿಸಿವೆ. ಹಾಂಗ್‌ಕಾಂಗ್‌ನ ಹಾಂಗ್ ಸೆಂಗ್ ಕೂಡಾ ಶೇ. 0.56ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಮಾರುಕಟ್ಟೆಗಳು ಧನಾತ್ಮಕ ಪ್ರದರ್ಶನ ತೋರುತ್ತಿವೆ. ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. 

Continue Reading

ವಾಣಿಜ್ಯ

Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

Price Hike: ರಿಲಯನ್ಸ್‌ ಜಿಯೋ, ಏರ್‌ಟೆಲ್‌, ವೋಡಾಫೋನ್‌ ಐಡಿಯಾ ಮುಂತಾದ ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿವೆ. ಇದೀಗ ಮೊಬೈಲ್‌ ಕಂಪನಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಕ ಸಂಸ್ಥೆ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನು ತಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Price Hike
Koo

ನವದೆಹಲಿ: ದೇಶದ ಟೆಲಿಕಾಂ ಕಂಪನಿಗಳು ಕೆಲ ದಿನಗಳ ಹಿಂದೆ ಗ್ರಾಹಕರಿಗೆ ಬೆಲೆಯೇರಿಕೆಯ ಬಿಸಿ ಮುಟ್ಟಿಸಿವೆ (Price Hike). ರಿಲಯನ್ಸ್‌ ಜಿಯೋ (Reliance Jio), ಏರ್‌ಟೆಲ್‌ (Airtel), ವೋಡಾಫೋನ್‌ ಐಡಿಯಾ (Vodafone Idea) ಮುಂತಾದ ಕಂಪನಿಗಳು ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ ಪೇಯ್ಡ್‌ ಬೆಲೆಗಳನ್ನು ಏರಿಕೆ ಮಾಡಿವೆ. ಇದೀಗ ಮೊಬೈಲ್‌ ಕಂಪನಿಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದು ಸಾಧ್ಯವೆ? ಈ ಕುರಿತಾದ ನಿಯಮ ಏನು ಹೇಳುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಕ ಸಂಸ್ಥೆ ಟೆಲಿಕಾಂ ಕಂಪನಿಗಳ ಬೆಲೆ ಹೆಚ್ಚಳವನ್ನು ತಡೆಯುವುದಿಲ್ಲ ಮತ್ತು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ʼʼಹಾಗೆ ನೋಡಿದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ದರ ಇನ್ನೂ ಅಗ್ಗವಾಗಿದೆ. ಕಂಪನಿಗಳು ಸೇವೆಗಳ ಗುಣಮಟ್ಟದ ಸೇವೆ ನೀಡಲು ತಮ್ಮ ಗಮನವನ್ನು ಹರಿಸಬೇಕುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಟೆಲಿಕಾಂ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಇದೀಗ ಸರ್ಕಾರ ಮಧ್ಯಪ್ರವೇಶಿಸುವಷ್ಟು ಪರಿಸ್ಥಿತಿ ಗಂಭೀರವಾಗಿಲ್ಲ. ಸುಮಾರು ಮೂರು ವರ್ಷಗಳ ನಂತರ ಸ್ವಲ್ಪ ಮಟ್ಟಿನ ಬೆಲೆ ಏರಿಕೆಯಾಗಿದೆಯಷ್ಟೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಲೆ ಏರಿಕೆಯ ಬಿಸಿ

ಈ ವಾರ ಭಾರತದ ಮೂರು ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್‌ ಜಿಯೋ, ಏರ್‌ಟೆಲ್‌ ಮತ್ತು ವೋಡಾಫೋನ್‌ ಐಡಿಯಾ ಮೊಬೈಲ್ ರೀಚಾರ್ಜ್‌ ದರವನ್ನು ಶೇ. 11-25ರಷ್ಟು ಹೆಚ್ಚಿಸಿವೆ. ʼʼಮೊಬೈಲ್‌ ರೀಚಾರ್ಜ್‌ ದರದಲ್ಲಿನ ಶೇ. 13 ಹೆಚ್ಚಳವು ತೀರಾ ಹೊರೆ ಎನಿಸಿಕೊಂಡಿಲ್ಲ. ದರ ಹೆಚ್ಚಳ ಮಧ್ಯಮವಾಗಿದೆ. ಇದು ಮನೆಯ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (Trai) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, “ಟೆಲಿಕಾಂ ಕಂಪನಿಗಳು ದರ ನಿರ್ಧರಿಸುವ ವಿಚಾರದಲ್ಲಿ ಸ್ವತಂತ್ರರಾಗಿದ್ದಾರೆ. ಅವರ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಸಿಸುವುದಿಲ್ಲ. ಆದರೆ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಬೇಕು. ಗುಣಮಟ್ಟದಲ್ಲಿ ರಾಜಿಯಾದರೆ ನಾವು ಮಧ್ಯಪ್ರವೇಶಿಸುತ್ತೇವೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್‌ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್‌ ಜಿಯೋ ಟೆಲಿಕಾಂ ಹೇಳಿಕೊಂಡಿದೆ.

ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29ರಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.

Continue Reading

ಶಿಕ್ಷಣ

Teachers Transfer: 10 ವರ್ಷ ಒಂದೇ ಕಡೆ ಇದ್ದ 5,000 ಶಿಕ್ಷಕರ ವರ್ಗಾವಣೆ

Teachers Transfer: ಒಂದೇ ಕಡೆ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ದೆಹಲಿ ಸರ್ಕಾರ ಶಾಕ್‌ ನೀಡಿದೆ. ಒಂದೇ ಶಾಲೆಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಸುಮಾರು 5,000 ಶಿಕ್ಷಕರ ವರ್ಗಾವಣೆ ಆಗಲಿದೆ. ಇತ್ತ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

VISTARANEWS.COM


on

Teachers Transfer
Koo

ನವದೆಹಲಿ: ಒಂದೇ ಕಡೆ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ದೆಹಲಿ ಸರ್ಕಾರ ಶಾಕ್‌ ನೀಡಿದೆ. ಒಂದೇ ಶಾಲೆಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಸುಮಾರು 5,000 ಶಿಕ್ಷಕರ ವರ್ಗಾವಣೆ (Teachers Transfer) ಆಗಲಿದೆ. ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯನ್ನು ನಿಲ್ಲಿಸುವಂತೆ ಶಿಕ್ಷಣ ಸಚಿವೆ ಅತಿಶಿ (Atishi) ಸೂಚಿಸಿದ ಎರಡು ದಿನಗಳ ನಂತರ ಈ ಹೊಸ ಆದೇಶ ಹೊರಬಿದ್ದಿದೆ.

ಸರ್ಕಾರಿ ಶಾಲಾ ಶಿಕ್ಷಕರ ಸಂಘ (Government Schools Teachers’ Association) ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಿಎಸ್‌ಟಿಎ ಪ್ರಧಾನ ಕಾರ್ಯದರ್ಶಿ ಅಜಯ್ ವೀರ್ ಯಾದವ್ ಅವರು ಶಿಕ್ಷಣ ನಿರ್ದೇಶನಾಲಯ (Directorate of Education) ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದು, ವರ್ಗಾವಣೆಗೊಂಡ ಎಲ್ಲ ಶಿಕ್ಷಕರಿಗಾಗಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಅಜಯ್ ವೀರ್ ಯಾದವ್ ಸೇರಿದಂತೆ ನಾಲ್ಕೈದು ಸರ್ಕಾರಿ ಶಾಲಾ ಶಿಕ್ಷಕರ ನಿಯೋಗ ಗುರುವಾರ ಶಿಕ್ಷಣ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ವರ್ಗಾವಣೆಗೆ ಮುನ್ನ ಶಿಕ್ಷಕರ ವೈದ್ಯಕೀಯ ಸ್ಥಿತಿ, ವಯಸ್ಸು, ಅಂಗವಿಕಲತೆ ಮುಂತಾದ ಅಂಶಗಳನ್ನು ಪರಿಗಣಿಸಬೇಕು ಎಂದು ಮನವಿ ಸಲ್ಲಿಸಲಿದೆ.

ಕಳೆದ 14 ವರ್ಷಗಳಿಂದ ಸುಲ್ತಾನ್ಪುರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ 36 ವರ್ಷದ ಪ್ರವೀಣ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, “ಈ ನಿರ್ಧಾರವು ವಿದ್ಯಾರ್ಥಿ-ಶಿಕ್ಷಕ ಸಂಬಂಧದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ. ಇದಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಅಂಗವಿಕಲರಾಗಿರುವ ಶಿಕ್ಷಕರ ಮೇಲೆ ದುಷ್ಪರಿಣಾಮ ಬೀರುತ್ತದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸುಶಿತಾ ಬಿಜು ಅವರು ಜೂನ್ 11ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿನ ಬೋಧಕ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಆನ್‌ಲೈನ್‌ ಮೂಲಕ ಮನವಿ ಸಲ್ಲಿಸುವಂತೆ ಸೂಚಿಸಿದ್ದರು. “ಒಂದೇ ಶಾಲೆಯಲ್ಲಿ ಸತತವಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸುತ್ತೋಲೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Board Exam: ಈ ವರ್ಷ 5, 8, 9ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇಲ್ಲ: ಶಿಕ್ಷಣ ಇಲಾಖೆ

ಈ ಸುತ್ತೋಲೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ಜಿಎಸ್‌ಟಿಎ, ಈ ನಿರ್ಧಾರವು ವಿದ್ಯಾರ್ಥಿ-ಶಿಕ್ಷಕರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಈ ಅಂಶವನ್ನು ಪರಿಗಣಿಸಬೇಕು ಎಂದು ಡಿಒಇಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರವು ವರ್ಗಾವಣೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಮೌಖಿಕ ಭರವಸೆ ನೀಡಿತ್ತು ಮತ್ತು ವರ್ಗಾವಣೆ ಐಚ್ಛಿಕವಾಗಿರುತ್ತದೆ ತಿಳಿಸಿತ್ತು. ಇದೀಗ ವರ್ಗಾವಣೆ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಅಜಯ್ ವೀರ್ ಯಾದವ್ ಆರೋಪಿಸಿದ್ದಾರೆ. ಸದ್ಯ ಸರ್ಕಾರಿ ಶಾಲಾ ಶಿಕ್ಷಕರ ನಿಯೋಗ ಶಿಕ್ಷಣ ನಿರ್ದೇಶಕರನ್ನು ಭೇಟಿಯಾಗಲಿದ್ದು, ಅವರು ಆದೇಶದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Continue Reading
Advertisement
Tornado Effect in Udupi
ಉಡುಪಿ2 mins ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

MS Dhoni
ಕ್ರೀಡೆ6 mins ago

MS Dhoni: ಪತ್ನಿಗೆ ಕೇಕ್​ ತಿನ್ನಿಸಿ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ ಧೋನಿ; ವಿಡಿಯೊ ವೈರಲ್​

Hathras Stampede
ದೇಶ19 mins ago

Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

Stock Market
ವಾಣಿಜ್ಯ21 mins ago

Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Team India Arrival
ಕ್ರೀಡೆ24 mins ago

Team India Arrival: ಪ್ರಧಾನಿ ಮೋದಿ ಔತಣ ಕೂಟಕ್ಕೆ ತೆರಳಿದ ಟೀಮ್​ ಇಂಡಿಯಾ

murder Case in hasana
ಹಾಸನ26 mins ago

Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ

Prajwal Devaraj birthday Karavali Cinema Update
ಸ್ಯಾಂಡಲ್ ವುಡ್58 mins ago

Prajwal Devaraj: ಪ್ರಜ್ವಲ್ ದೇವರಾಜ್‌ ಬರ್ತ್‌ಡೇ; ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್!

prajwal revanna case test
ಪ್ರಮುಖ ಸುದ್ದಿ1 hour ago

Prajwal Revanna Case: 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ತಿದ್ದ ಪ್ರಜ್ವಲ್ ರೇವಣ್ಣ!

Actor Darshan Will Attend The Court Hearing From Online
ಸಿನಿಮಾ1 hour ago

Actor Darshan: ಇಂದು ನ್ಯಾಯಾಲಯಕ್ಕೆ ಹಾಜರಾಗ್ತಿಲ್ಲ ದರ್ಶನ್ &ಟೀಂ; ಕಾರಣವೇನು?

Price Hike
ವಾಣಿಜ್ಯ1 hour ago

Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tornado Effect in Udupi
ಉಡುಪಿ2 mins ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ7 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

ಟ್ರೆಂಡಿಂಗ್‌