IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ - Vistara News

ಪ್ರಮುಖ ಸುದ್ದಿ

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

IPS Transfer: ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

VISTARANEWS.COM


on

IPS transfer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದ 25 ಐಪಿಎಸ್‌ ಅಧಿಕಾರಿಗಳನ್ನು (IPS Officers) ನಾನಾ ಕಡೆಗಳಿಗೆ ವರ್ಗಾವಣೆ (IPS Transfer) ಮಾಡಿ ಸರ್ಕಾರ (Karnataka Govt) ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ:

ಲಾಭೂರಾಮ್ : ಐಜಿಪಿ ಕೇಂದ್ರ ವಲಯ
ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)
ಡಾ.ಕೆ ತ್ಯಾಗರಾಜನ್ : ಐಜಿಪಿ ,ಐಎಸ್ ಡಿ.
ಎನ್ ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.
ಬಿ ರಮೇಶ್ : ಡಿಐಜಿಪಿ ಈಸ್ಟರ್ನ್ ರೇಂಜ್ ದಾವಣಗೆರೆ .
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತರು ಮೈಸೂರು ನಗರ
ರೇಣುಕಾ ಸುಕುಮಾರ್ : ಎಐಜಿಪಿ ( ಡಿಜಿ ಕಛೇರಿ)
ಸಿಕೆ ಬಾಬಾ: ಎಸ್‌ಪಿ ಬೆಂಗಳೂರು ಗ್ರಾಮಾಂತರ.
ಎನ್ ವಿಷ್ಣುವರ್ಧನ್ : ಎಸ್‌ಪಿ ಮೈಸೂರು ಜಿಲ್ಲೆ.
ಸುಮನ್ ಡಿ ಪೆನ್ನೆಕರ್ : ಎಸ್ ಪಿ , ಬಿಎಂಟಿಎಫ್.
ಸಿ.ಬಿ ರಿಷ್ಯಂತ್: ಎಸ್ ಪಿ ವೇರ್ ಲೆಸ್ .
ಚನ್ನಬಸವಣ್ಣ : ಎಐಜಿಪಿ, (ಆಡಳಿತ ) ಡಿಜಿ ಕಛೇರಿ.
ನಾರಾಯಣ್ ಎಂ, : ಎಸ್ ಪಿ ಉತ್ತರ ಕನ್ನಡ.
ಸಾರ ಫಾತಿಮಾ: ಡಿಸಿಪಿ ಆಗ್ನೇಯ ವಿಭಾಗ , ಬೆಂಗಳೂರು ನಗರ
ಅರುಣಾಂಗ್ಷು ಗಿರಿ : ( Arunngshu giri ) SP ,CID
ನಾಗೇಶ್ ಡಿ ಎಲ್ : ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ .
ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ.
ಪ್ರದೀಪ್ ಗುಂಟಿ: ಎಸ್ ಪಿ ಬೀದರ್ ಜಿಲ್ಲೆ.
ಯತೀಶ್ ಎನ್ : ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ.
ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಮಂಡ್ಯ ಜಿಲ್ಲೆ.
ಡಾ ಶೋಭಾ ರಾಣಿ ವಿ.ಜೆ. ಎಸ್ ಪಿ .ಬಳ್ಳಾರಿ ಜಿಲ್ಲೆ.
ಡಾ ಕವಿತಾ ಟಿ: ಎಸ್ ಪಿ ಚಾಮರಾಜನಗರ ಜಿಲ್ಲೆ.
ನಿಖಿಲ್ ಬಿ : ಎಸ್ ಪಿ ಕೋಲಾರ ಜಿಲ್ಲೆ.
ಕುಶಾಲ್ ಚೌಕ್ಸಿ : ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.
ಮಹಾನಿಂಗ್ ನಂದಗಾವಿ ಡಿಸಿಪಿ ( ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ

ಇದನ್ನೂ ಓದಿ: BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

Viral Video: ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ನೋಡಿದರೆ ಆ ಯುವತಿಯ ಕುರಿತು ಕನಿಕರ ಬರುತ್ತದೆ.

VISTARANEWS.COM


on

Viral Video
Koo

ಕೆಲವೊಂದು ದೇಶಗಳಲ್ಲಿ ಕಪ್ಪು ವರ್ಣದ ಜನರನ್ನು ಕಡೆಗಣಿಸುತ್ತಾರೆ. ಈ ಬಗ್ಗೆ ಅನೇಕರು ಹೋರಾಟ ನಡೆಸಿದರೂ ಕೂಡ ಕಪ್ಪು ಮತ್ತು ಬಿಳಿ ಮನುಷ್ಯರ ನಡುವಿನ ತಾರತಮ್ಯ ನಿಂತಿಲ್ಲ. ಅದರಲ್ಲೂ ಎಲ್ಲರಿಗೂ ಮಾದರಿಯಾಗಬೇಕಾಗಿದ್ದ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳೇ ಇಂತಹ ತಾರತಮ್ಯ ಮಾಡುತ್ತಿರುವುದು ನಿಜವಾಗಲೂ ಬೇಸರದ ವಿಚಾರವೇ ಸರಿ. ಅಮೆರಿಕದಲ್ಲಂತೂ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿರುತ್ತದೆ. ಇದೀಗ ಯುಎಸ್ ಅಧ್ಯಕ್ಷ ಜೋ ಬೈಡನ್ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ನಿರ್ಲಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.

ವಿಸ್ಕಾನ್ಸಿನ್‍ನ ಮ್ಯಾಡಿಸನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್ ಜನರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿ ಇವರಿಗಾಗಿ ಕಾತುರದಿಂದ ಕಾಯುತ್ತಿದ್ದ ಕಪ್ಪು ವರ್ಣದ ಅಮೆರಿಕನ್ ಮಹಿಳೆಯನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚರ್ಚೆಯ ನಂತರ ರಿಪಬ್ಲಿಕನ್ನರು ಈ ವಿಡಿಯೊವನ್ನು ಬಳಸಿಕೊಂಡು ಇದೀಗ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಡಿಯೊದಲ್ಲಿ, ಕಪ್ಪು ಅಮೆರಿಕನ್ ಯುವತಿ ಕೈಯಲ್ಲಿ ಬೈಡನ್‌-ಹ್ಯಾರಿಸ್ ಬೋರ್ಡ್‌ ಹಿಡಿದು ಬೈಡನ್ ಅವರನ್ನು ಸ್ವಾಗತಿಸಲು ಆ ಮಹಿಳೆ ಕಾಯುತ್ತಿದ್ದಳು. ಆದರೆ ಯುಎಸ್ ಅಧ್ಯಕ್ಷ ಬೈಡನ್ ಮಹಿಳೆಯನ್ನು ಕಡೆಗಣಿಸಿದ್ದಾರೆ. ಆಕೆಯ ಮೊದಲು ನಿಂತಿದ್ದ ಬಿಳಿ ವರ್ಣದ ಮಹಿಳೆಯರನ್ನು ಹಗ್ ಮಾಡಿದ ಅವರು ಆಕೆಯನ್ನು ಬಿಟ್ಟು ಆಕೆಯ ನಂತರ ನಿಂತ ಬಿಳಿ ವರ್ಣದ ಮತ್ತೊಬ್ಬ ಮಹಿಳೆಯನ್ನು ಹಗ್ ಮಾಡಿದ್ದಾರೆ. ಆಕೆಯನ್ನು ಕಣ್ಣೆತ್ತಿ ನೋಡದ ಅಧ್ಯಕ್ಷರನ್ನು ಕಂಡು ಆಕೆ ಬೇಸರಗೊಂಡಿದ್ದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ಅಧ್ಯಕ್ಷರನ್ನು ನೋಡಿದಾಗ ತುಂಬಾ ಖುಷಿಯಾಗಿದ್ದರು ಆದರೆ ಅವಳನ್ನು ಗುರುತಿಸದಿದ್ದಾಗ ನಿರಾಶೆಗೊಂಡರು ಎಂದು ಅದರಲ್ಲಿ ಬರೆಯಲಾಗಿದೆ. ಅಲ್ಲದೇ “ತನ್ನ “ಹೀರೋ ತನ್ನ ಬಣ್ಣದ ಜನರನ್ನು ಇಷ್ಟಪಡುವುದಿಲ್ಲ ಎಂದು ಅವಳು ಅರಿತುಕೊಂಡ ಕ್ಷಣ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬೈಡನ್ ಪ್ರಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಕೆಂದರೆ ಬೈಡನ್ ಅವರನ್ನು ಶ್ವೇತಭವನಕ್ಕೆ ಕರೆದೊಯ್ದ ಕಪ್ಪು ವರ್ಣದ ಮತದಾರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತೋರಿಸಿವೆ. ಅಲ್ಲದೇ ಕೆಲವು ಕಪ್ಪು ಮತದಾರರು, ವಿಶೇಷವಾಗಿ ಯುವಕರ ಆರ್ಥಿಕತೆ ಮತ್ತು ಮತದಾರರ ಹಕ್ಕುಗಳ ಆದ್ಯತೆಗಳನ್ನು ನಿಭಾಯಿಸುವಲ್ಲಿ ಬೈಡನ್ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

“ಟ್ರಂಪ್ ಇದನ್ನು ಪ್ರಚಾರದ ಜಾಹೀರಾತಾಗಿ ನಡೆಸಬೇಕು” ಎಂದು ಕೆಲವರು ಹೇಳಿದ್ದಾರೆ. ಈಗಾಗಲೇ ಜೂನ್‌ನಲ್ಲಿ ಡೆಟ್ರಾಯಿಟ್‍ನ 180 ಚರ್ಚ್‍ನಲ್ಲಿ ಸುಮಾರು 200 ಜನರನ್ನುದ್ದೇಶಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಜೋ ಬೈಡನ್ ಅವರ ಪಾತ್ರವನ್ನು ಟೀಕಿಸುವ ಮೂಲಕ ಕಪ್ಪು ಮತದಾರರನ್ನು ಆಕರ್ಷಿಸಿದರು ಎನ್ನಲಾಗಿದೆ. ಹಾಗಾಗಿ ಅಮೆರಿಕದಲ್ಲಿ ಹೆಚ್ಚಿನ ಬೆಂಬಲ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿದೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Viral Video : ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ! ವಿಡಿಯೊ ನೋಡಿ

Viral Video: ಕೆಲವರು ದುಡಿಯುವುದಕ್ಕೆ ಆಗದೇ ಕಳ್ಳತನ ಮಾರ್ಗ ಹಿಡಿಯುತ್ತಾರೆ. ಇನ್ನು ಕೆಲವರು ಕಳ್ಳತನವನ್ನೇ ದುಡಿಮೆಯನ್ನಾಗಿಸಿಕೊಳ್ಳುತ್ತಾರೆ. ದೆಹಲಿ ಮೆಟ್ರೋದಲ್ಲಿ ಪರ್ಸ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಈ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ, ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ನೇಮಿಸಲಾದ ಮೆಟ್ರೋ ಮಾರ್ಷಲ್‌ಗಳು ಎಲ್ಲಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಬಸ್, ರೈಲು, ಮಾರುಕಟ್ಟೆ, ರಸ್ತೆಗಳಲ್ಲಿ ಜನರ ಬೆಲೆಬಾಳುವ ವಸ್ತುಗಳನ್ನು, ಪರ್ಸ್‌ಗಳನ್ನು ಹಾಡುಹಗಲಿನಲ್ಲಿಯೇ ಜನಸಂದಣಿ ಇರುವಂತಹ ಸ್ಥಳಗಳಲ್ಲಿಯೇ ದರೋಡೆ ಮಾಡುತ್ತಿದ್ದಾರೆ. ಇದೀಗ ದೆಹಲಿ ಮೆಟ್ರೋದಲ್ಲಿ ಪರ್ಸ್ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ ಕದಿಯಲು ಕಳ್ಳ ಮುಂದಾದಾಗ ವ್ಯಕ್ತಿಯೊಬ್ಬ ಕಳ್ಳನನ್ನು ಹಿಡಿದು ಥಳಿಸಿದ್ದಾನೆ. ಮೆಟ್ರೋ ಒಳಗೆ ಕಳ್ಳನನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಮಧ್ಯವಯಸ್ಕ ವ್ಯಕ್ತಿಯೊಬ್ಬ ಜನಜಂಗುಳಿ ಇರುವ ರೈಲಿನಲ್ಲಿ ಪರ್ಸ್ ಕದಿಯುತ್ತಿದ್ದ ಕಳ್ಳನನ್ನು ಒದೆಯುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆರೋಪಿಯು ಆ ವ್ಯಕ್ತಿಯ ಬಳಿ ಮತ್ತೆ ಈ ಕೆಲಸ ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಆ ವ್ಯಕ್ತಿಯು ಅವನ ವಿನಂತಿಯನ್ನು ಕೇಳದೆ ಜನಗಳ ಮುಂದೆ ಅವನಿಗೆ ಕಪಾಳಮೋಕ್ಷ ಮಾಡುತ್ತಿದ್ದಾನೆ. ನಂತರ ಆರೋಪಿಯು ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸುತ್ತಾ ವ್ಯಕ್ತಿಯ ಪಾದಗಳನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಆರೋಪಿಯು ಅವನ ಪಾದಗಳನ್ನು ಸ್ಪರ್ಶಿಸಲು ಬಂದಾಗ ಆ ವ್ಯಕ್ತಿ ಅವನ ಎದೆಗೆ ಒದೆಯುತ್ತಾನೆ ಮತ್ತು ನಂತರ ಪದೇ ಪದೇ ಕಪಾಳಮೋಕ್ಷ ಮಾಡುತ್ತಾನೆ.

ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಘಟನೆ ನೆಡೆದ ನಿಖರವಾದ ದಿನಾಂಕ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಈ ವಿಡಿಯೊ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಈ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ, ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ನೇಮಿಸಲಾದ ಮೆಟ್ರೋ ಮಾರ್ಷಲ್‌ಗಳು ಎಲ್ಲಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

ಇಂತಹ ಕಳ್ಳತನದ ಪ್ರಕರಣಗಳು ದಿನಕ್ಕೊಂದು ಬೆಳಕಿಗೆ ಬರುತ್ತಿದೆ. ಅದರಲ್ಲೂ ಮೆಟ್ರೋ ಸಿಟಿಗಳಾದ ದೆಹಲಿ, ಬೆಂಗಳೂರಿನಂತಹ ಸ್ಥಳಗಳಲ್ಲಿ ಈ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಜನಸಂದಣಿ ಇರುವ ಸ್ಥಳದಲ್ಲಿ ಹಾಡುಹಗಲಿನಲ್ಲಿಯೇ ಕಳ್ಳನೊಬ್ಬ ವಯಸ್ಕ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿ ಓಡಿ ಹೋಗುತ್ತಿರುವುದು ಕಂಡುಬಂದಿದೆ.

Continue Reading

ಪ್ರಮುಖ ಸುದ್ದಿ

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

Team India : ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

VISTARANEWS.COM


on

Team India
Koo

ಬೆಂಗಳೂರು: ಅಮೆರಿಕದ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ (Team India ) ಟ್ರೋಫಿ ಗೆದ್ದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಜೂನ್ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬಹುಮಾನದ ಮೊತ್ತವನ್ನು ಹಸ್ತಾಂತರಿಸಲಾಗಿತ್ತು. ಅದರಲ್ಲಿ ಯಾರಿಗೆ ಎಷ್ಟು ಎಂಬ ಕುತೂಹಲ ಮೂಡಿತ್ತು. ಆ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ವರದಿಗಳ ಪ್ರಕಾರ, ತಂಡದ ಎಲ್ಲಾ 15 ಸದಸ್ಯರು ತಲಾ 5 ಕೋಟಿ ರೂ ಪಡೆದಿದ್ದಾರೆ. ಮುಖ್ಯ ಕೋಚ್ ದ್ರಾವಿಡ್ ಕೂಡ ಇದೇ ಮೊತ್ತವನ್ನು ಪಡೆದಿದ್ದಾರೆ. ಉಳಿದ ಕೋಚಿಂಗ್ ಗ್ರೂಪ್ ತಲಾ 2.5 ರೂಪಾಯಿ ಪಡೆದುಕೊಂಡಿದ್ದಾರೆ. ವಿಡಿಯೋ ನಿರ್ಮಾಣ ತಂಡ ಸೇರಿದಂತೆ ಬ್ಯಾಕ್ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂ., ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ತಲಾ 1 ಕೋಟಿ ರೂಪಾಯಿ, ಮೀಸಲು ಆಟಗಾರರಾದ ರಿಂಕು ಸಿಂಗ್, ಖಲೀಲ್ ಅಹ್ಮದ್, ಶುಭ್ಮನ್ ಗಿಲ್ ಮತ್ತು ಅವೇಶ್ ಖಾನ್ ಅವರಿಗೆ ತಲಾ 1 ಕೋಟಿ ರೂಪಾಯಿ ದೊರಕಿದೆ.

ಬಿಸಿಸಿಐ ಹೊರತುಪಡಿಸಿ, ರಾಜ್ಯ ಸರ್ಕಾರಗಳು ಸಹ ಆಯಾ ಆಟಗಾರರಿಗೆ ಬಹುಮಾನದ ಮೊತ್ತ ಘೋಷಿಸಿವೆ. ಮಹಾರಾಷ್ಟ್ರ ಸರ್ಕಾರವು ರೋಹಿತ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ 11 ಕೋಟಿ ರೂ.ಗಳನ್ನು ನೀಡಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಮ್ ಇಂಡಿಯಾಕ್ಕೆ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.37 ಕೋಟಿ ರೂಪಾಯಿ ಬಹುಮಾನ ಕೊಟ್ಟಿತ್ತು. ಬಿಸಿಸಿಐನ ಆರ್ಥಿಕ ಸ್ಥಿರತೆಯು ಎಲ್ಲಾ ಆಟಗಾರರಿಗೆ ಟ್ರೋಫಿ ಜತೆ ಸಿಕ್ಕ ಬಹುಮಾನ ಮೊತ್ತಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು ನಗದು ಸಿಗಲು ಸಹಾಯ ಮಾಡಿತು. ಇದು ಇವರೆಗಿನ ಗರಿಷ್ಠ ಗಳಿಕೆಯಾಗಿದೆ. 1983 ರಲ್ಲಿ ಏಕದಿನ ವಿಶ್ವಕಪ್ ಗೆಲುವಿನ ನಂತರ, ಆಡಳಿತ ಮಂಡಳಿಯು ಪ್ರತಿ ಆಟಗಾರನಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಿತು. ಇದು ಆಧುನಿಕ ಕಾಲದಲ್ಲಿ ಆಟಗಾರರು ಪಡೆದ ಮೊತ್ತಕ್ಕೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಮೊತ್ತವಾಗಿದೆ.

ಇದನ್ನೂ ಓದಿ: Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

ಐಪಿಎಲ್​ನ ಶಕ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಭಾರತೀಯ ಕ್ರಿಕೆಟ್ ದೊಡ್ಡ ಗಳಿಕೆಯಲ್ಲಿದೆ. ಆದಾಗ್ಯೂ ಆಟಗಾರರು ಐಪಿಎಲ್ ಕಡೆಗೆ ಹೆಚ್ಚಿನ ಗಮನ ಸೆಳೆಯುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ನಿವಾರಿಸಲೂ ಬಿಸಿಸಿಐ 125 ಕೋಟಿ ರೂಪಾಯಿ ಘೋಷಿಸಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆದ್ಯತೆ ನೀಡಿದವರಿಗೂ ದೊಡ್ಡ ಮೊತ್ತ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ಎಲ್ಲಾ ಆಟಗಾರರಿಗೆ ಕಳುಹಿಸಿದೆ.

“ಐಪಿಎಲ್ ಯುಗದಲ್ಲಿ, ಆಟಗಾರರಿಗೆ ಅವರ ಫ್ರಾಂಚೈಸಿಗಳು ಸಾಕಷ್ಟು ಸಂಭಾವನೆ ನೀಡುತ್ತವೆ. ಟಿ 20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ರೂ.ಗಳು ಆಟಗಾರರಿಗೆ ಸರಳ ಸಂದೇಶವಾಗಿದೆ. ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲಿರಿ ಮತ್ತು ನೀವು ಶ್ರೀಮಂತರಾಗುತ್ತೀರಿ” ಎಂಬುದು ಬಿಸಿಸಿಐ ಸಂದೇಶ ಎಂಬುದಾಗಿ ಅಧಿಕಾರಿ ಹೇಳಿದ್ದಾರೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಮತ್ತು ಚಾಂಪಿಯನ್ಸ್ ಟ್ರೋಫಿಗೆ ರೋಹಿತ್ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

PM Narendra Modi: ಟಕಾಟಕ್‌ ಆಯ್ತು, ಈಗ ಮೋದಿ 3 ಸಾವಿರಕ್ಕಾಗಿ ಪೋಸ್ಟ್‌ ಆಫೀಸ್‌ ಮುಂದೆ ಮಹಿಳೆಯರ ಕ್ಯೂ!

PM Narendra Modi: ಮಹಿಳೆಯರನ್ನು ವಿಚಾರಿಸಿದಾಗ, ಮೋದಿ 3 ಸಾವಿರ ಹಾಕ್ತಾರಂತೆ ಎಂದು ಸುದ್ದಿ ಸಿಕ್ಕಿತು, ಅದಕ್ಕೆ ಬಂದೆವು ಎನ್ನುತ್ತಿದ್ದಾರೆ. ಹೆಚ್ಚಿನವರು ಯಾವುದೇ ಅಧಿಕೃತ ಮಾಹಿತಿ ಪಡೆಯದೆ, ಅಕ್ಕಪಕ್ಕದವರು ಹೇಳಿದ ಮಾತುಗಳನ್ನು ಕೇಳಿಕೊಂಡು ಬಂದಿದ್ದಾರೆ.

VISTARANEWS.COM


on

ರಾಹುಲ್‌ ಗಾಂಧಿ rahul gandhi ippb account 2 pm narendra modi
Koo

ಬೆಂಗಳೂರು: ಒಂದೆರಡು ತಿಂಗಳ ಹಿಂದೆ ಪೋಸ್ಟ್‌ ಆಫೀಸ್‌ (Post Office) ಮುಂದೆ ಮಹಿಳೆಯರು (Women) ಭಾರಿ ಪ್ರಮಾಣದಲ್ಲಿ ಅಕೌಂಟ್‌ (account) ತೆರೆಯಲು ಕ್ಯೂ ನಿಂತಿದ್ದರು. ಇದೀಗ ಮತ್ತೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪೋಸ್ಟ್‌ ಆಫೀಸ್‌ ಮುಂದೆ ಜಮಾಯಿಸಿ ತಮ್ಮ ಅಕೌಂಟ್‌ ತೆರೆಯಲು ಮುಂದಾಗಿದ್ದಾರೆ. ಅಕೌಂಟ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹಣ ಹಾಕಲಿದ್ದಾರೆ ಎಂಬ ವದಂತಿಯೇ ಇದಕ್ಕೆ ಕಾರಣವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೋಸ್ಟ್‌ ಆಫೀಸ್‌ನಲ್ಲಿರುವ ಮಹಿಳೆಯರ ಅಕೌಮಟ್‌ಗಳಿಗೆ ತಲಾ 3 ಸಾವಿರ ರೂಪಾಯಿ ಹಾಕಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಪೋಸ್ಟ್‌ ಆಫೀಸ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದು, ಅಕೌಂಟ್‌ ಓಪನ್‌ ಮಾಡುತ್ತಿದ್ದಾರೆ. ಜೊತೆಗೆ ಮೋದಿ ಸ್ಕೀಮ್‌ ಬಗ್ಗೆಯೂ ವಿಚಾರಿಸುತ್ತಿದ್ದಾರೆ.

ಈ ಬಗ್ಗೆ ಮಹಿಳೆಯರನ್ನು ವಿಚಾರಿಸಿದಾಗ, ಮೋದಿ 3 ಸಾವಿರ ಹಾಕ್ತಾರಂತೆ ಎಂದು ಸುದ್ದಿ ಸಿಕ್ಕಿತು, ಅದಕ್ಕೆ ಬಂದೆವು ಎನ್ನುತ್ತಿದ್ದಾರೆ. ಹೆಚ್ಚಿನವರು ಯಾವುದೇ ಅಧಿಕೃತ ಮಾಹಿತಿ ಪಡೆಯದೆ, ಅಕ್ಕಪಕ್ಕದವರು ಹೇಳಿದ ಮಾತುಗಳನ್ನು ಕೇಳಿಕೊಂಡು ಬಂದಿದ್ದಾರೆ. ಹೀಗೆ ಬಂದವರಿಗೆ ನಿಜ ಮಾಹಿತಿ ನೀಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಯತ್ನಿಸುತ್ತಿದ್ದು, ಪ್ರತಿದಿನ ಇಂಥ ನೂರಾರು ಮಂದಿಗೆ ತಿಳಿಹೇಳಿ ಹೈರಾಣಾಗುತ್ತಿದ್ದಾರೆ.

“ಅಂಥ ಯಾವುದೇ ಸ್ಕೀಮ್‌ಗಳ ಮಾಹಿತಿ ನಮಗೆ ಇಲ್ಲ. ಆದರೆ ಅಕೌಂಟ್‌ ತೆರೆಯುತ್ತೇವೆ ಎಂದು ಬಂದವರನ್ನು ವಾಪಸ್‌ ಕಳಿಸುವುದಿಲ್ಲ. ಮಿನಿಮಮ್‌ ಹಣ ಕಟ್ಟಿಸಿಕೊಂಡು ಖಾತೆ ತೆರೆದು ಕಳಿಸುತ್ತಿದ್ದೇವೆ. ಯಾವುದಾದರೂ ಸರ್ಕಾರಿ ಸ್ಕೀಮ್‌ ಇದ್ದರೆ ಹಣ ಬರುತ್ತದೆ. ಆದರೆ ನಾವು ಇದಕ್ಕೆ ಖಾತ್ರಿ ಕೊಡುವುದಿಲ್ಲ” ಎಂದು ಅಂಚೆ ಕಚೇರಿ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

ಒಂದು ತಿಂಗಳ ಹಿಂದೆ, ರಾಹುಲ್‌ ಗಾಂಧಿ ತಮ್ಮ ಖಾತೆಗಳಿಗೆ ʼಟಕಾಟಕ್‌ʼ ಹಣ ಹಾಕುತ್ತಾರಂತೆ ಎಂದು ಮಹಿಳೆಯರು ಅಕೌಂಟ್‌ ತೆರೆಯಲು ಮುಗಿಬಿದ್ದಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಧನಸಹಾಯದ ಆಶ್ವಾಸನೆ ನೀಡಲಾಗಿತ್ತು. ಜೊತೆಗೆ ರಾಹುಲ್‌ ಗಾಂಧಿ ಕೂಡ ತಮ್ಮ ಭಾಷಣದಲ್ಲಿ ʼಟಕಾಟಕ್‌ʼ ಹಣ ಹಾಕುವ ಬಗ್ಗೆ ಭರವಸೆ ನೀಡಿದ್ದರು. ಈ ಟಕಾಟಕ್‌ ನಂಬಿ ಸಾವಿರಾರು ಮಹಿಳೆಯರು ಖಾತೆ ತೆರೆದಿದ್ದರು. ಇದೀಗ ʼಟಕಾಟಕ್‌ʼ ಕೈಕೊಟ್ಟಿದ್ದರೂ, ಮೋದಿಯಾದರೂ ಹಣ ಹಾಕಬಹುದು ಎಂಬ ಆಸೆಯಲ್ಲಿ ಮಹಿಳೆಯರು ಬರುತ್ತಿದ್ದಾರೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

Continue Reading
Advertisement
Student death Nursing college student commits suicide in Bengaluru
ಬೆಂಗಳೂರು3 mins ago

Student Death : ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Pakistan
ವಿದೇಶ15 mins ago

Pakistan: ಛೇ..ಇವನೆಂಥಾ ಪಾಪಿ ತಂದೆ! ಚಿಕಿತ್ಸೆಗೆ ಹಣ ಇಲ್ಲವೆಂದು 15 ದಿನದ ಹಸುಳೆಯ ಜೀವಂತ ಸಮಾಧಿ

Kalki 2898 AD box office collection weekend 2
ಟಾಲಿವುಡ್16 mins ago

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!

Viral Video
Latest16 mins ago

Viral Video: ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದ ಕಪ್ಪು ವರ್ಣದ ಮಹಿಳೆಗೆ ಜೋ ಬೈಡನ್ ಅವಮಾನ; ನಾಚಿಕೆಯಾಗಬೇಕು ಅಮೆರಿಕಕ್ಕೆ!

murder case hosakote
ಕ್ರೈಂ17 mins ago

Murder Case: ‌ಹಳೇ ವೈಷಮ್ಯದಿಂದ ಗ್ರಾಮ ಪಂಚಾಯಿತಿ ಸದಸ್ಯನ ಕೊಚ್ಚಿ ಕೊಲೆ

Viral Video
ಪ್ರಮುಖ ಸುದ್ದಿ21 mins ago

Viral Video : ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ! ವಿಡಿಯೊ ನೋಡಿ

Team India
ಪ್ರಮುಖ ಸುದ್ದಿ25 mins ago

Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

ರಾಹುಲ್‌ ಗಾಂಧಿ rahul gandhi ippb account 2 pm narendra modi
ಪ್ರಮುಖ ಸುದ್ದಿ42 mins ago

PM Narendra Modi: ಟಕಾಟಕ್‌ ಆಯ್ತು, ಈಗ ಮೋದಿ 3 ಸಾವಿರಕ್ಕಾಗಿ ಪೋಸ್ಟ್‌ ಆಫೀಸ್‌ ಮುಂದೆ ಮಹಿಳೆಯರ ಕ್ಯೂ!

Gautam Gambhir
ಪ್ರಮುಖ ಸುದ್ದಿ1 hour ago

Gautam Gambhir : ಗಂಭೀರ್ ಕೆಕೆಆರ್ ತೊರೆಯುವುದು ನಿಶ್ಚಿತ​; ಈಡನ್​ ಗಾರ್ಡನ್ಸ್​​ನಲ್ಲಿ ವಿದಾಯದ ಶೂಟಿಂಗ್

Actor Darshan Lost KG In 25 Days
ಕ್ರೈಂ1 hour ago

Actor Darshan: 25 ದಿನಕ್ಕೆ ದರ್ಶನ್‌ ತೂಕ ಕಳೆದುಕೊಂಡಿದ್ದು ಇಷ್ಟೊಂದಾ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ15 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ18 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ18 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌