Share Market Crash: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ - Vistara News

ವಾಣಿಜ್ಯ

Share Market Crash: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ

Share Market Crash: ಬಿಎಸ್‌ಇನಲ್ಲಿ ಸುಮಾರು 208 ಸ್ಟಾಕ್‌ಗಳು ಕಳೆದ 52 ವಾರಗಳಲ್ಲಿಯೇ ಅತಿ ಹೆಚ್ಚು ನಷ್ಟ ಅನುಭವಿಸಿದವು. ಇದರಲ್ಲಿ ಕೇವಲ 21 ಸ್ಟಾಕ್‌ಗಳು ಮಾತ್ರ 52 ವಾರಗಳಲ್ಲಿಯೇ ಗರಿಷ್ಠ ಲಾಭ ಗಳಿಸಿದವು. ಆಟೋಮೊಬೈಲ್‌, ದುಬಾರಿ ಸರಕು, ಮೆಟಲ್‌, ತೈಲ ಹಾಗೂ ಗ್ಯಾಸ್‌ ಷೇರುಗಳು ಗಣನೀಯವಾಗಿ ಕುಸಿತ ಕಂಡವು. ಸೆನ್ಸೆಕ್ಸ್‌ನಲ್ಲಿ ಮಾರುತಿ ಸುಜುಕಿ ಮಾತ್ರ ಶೇ.2ರಷ್ಟು ಲಾಭ ಗಳಿಸಿತು. ಬಹುತೇಕ ಹೂಡಿಕೆದಾರರು ನಷ್ಟವನ್ನೇ ಅನುಭವಿಸಿದರು.

VISTARANEWS.COM


on

Share Market Crash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಷೇರುಪೇಟೆಯಲ್ಲಿ ನಿಫ್ಟಿ ಹಾಗೂ ಸೆನ್ಸೆಕ್ಸ್‌ ಸತತ ಏರಿಕೆ ಮೂಲಕ ಭಾರಿ ಪ್ರಮಾಣದಲ್ಲಿ ಲಾಭ ಕಂಡಿದ್ದ ಹೂಡಿಕೆದಾರರಿಗೆ ಬುಧವಾರ (ಜುಲೈ 10) ಭಾರಿ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಸೆನ್ಸೆಕ್ಸ್‌ (Sensex) ಹಾಗೂ ನಿಫ್ಟಿ (Nifty) ಕುಸಿತ ಕಂಡ ಕಾರಣ ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಸುಮಾರು 7.38 ಲಕ್ಷ ಕೋಟಿ ರೂ. (Share Market Crash) ನಷ್ಟವಾಗಿದೆ. ಸೆನ್ಸೆಕ್‌ 900 ಪಾಯಿಂಟ್‌ಗಳ ಕುಸಿತದೊಂದಿಗೆ 79,446 ಅಂಕಗಳಿಗೆ ವಹಿವಾಟು ಮುಗಿಸಿತು. ಇನ್ನು ನಿಫ್ಟಿ ಕೂಡ 259 ಪಾಯಿಂಟ್‌ಗಳ ಕುಸಿತದೊಂದಿಗೆ 24,173 ಪಾಯಿಂಟ್‌ಗಳಿಗೆ ವಹಿವಾಟು ಅಂತ್ಯಗೊಂಡಿತು. ಇದರಿಂದ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದರು.

ಬಿಎಸ್‌ಇನಲ್ಲಿ ಸುಮಾರು 208 ಸ್ಟಾಕ್‌ಗಳು ಕಳೆದ 52 ವಾರಗಳಲ್ಲಿಯೇ ಅತಿ ಹೆಚ್ಚು ನಷ್ಟ ಅನುಭವಿಸಿದವು. ಇದರಲ್ಲಿ ಕೇವಲ 21 ಸ್ಟಾಕ್‌ಗಳು ಮಾತ್ರ 52 ವಾರಗಳಲ್ಲಿಯೇ ಗರಿಷ್ಠ ಲಾಭ ಗಳಿಸಿದವು. ಆಟೋಮೊಬೈಲ್‌, ದುಬಾರಿ ಸರಕು, ಮೆಟಲ್‌, ತೈಲ ಹಾಗೂ ಗ್ಯಾಸ್‌ ಷೇರುಗಳು ಗಣನೀಯವಾಗಿ ಕುಸಿತ ಕಂಡವು. ಇದರಿಂದಾಗಿ ಹೂಡಿಕೆದಾರರಿಗೆ ಹಣ ನಷ್ಟವಾಯಿತು. ಷೇರುಪೇಟೆಯಲ್ಲಿ ಹೂಡಿಕೆದಾರರ ನಂಬಿಕೆಯು ನಲುಗಿದ ಕಾರಣ ಹೆಚ್ಚಿನ ಹೂಡಿಕೆದಾರರು ನಷ್ಟ ಅನುಭವಿಸಬೇಕಾಯಿತು ಎಂಬುದಾಗಿ ಮೂಲಗಳು ತಿಳಿಸಿವೆ.

Share Market

ಬಿಎಸ್‌ಇ ಮಿಡ್‌ಕ್ಯಾಪ್‌ ಇಂಡೆಕ್ಸ್‌ ಕೂಡ 678 ಅಂಕಗಳನ್ನು ಕುಸಿತ ಕಂಡುಉ, 46,861 ಪಾಯಿಂಟ್‌ಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು. ಸ್ಮಾಲ್‌ ಕ್ಯಾಪ್‌ ಸ್ಟಾಕ್‌ಗಳ ಸೂಚ್ಯಂಕದಲ್ಲೂ 909 ಪಾಯಿಂಟ್‌ಗಳ ಕುಸಿತವಾಗಿ, 53,245 ಪಾಯಿಂಟ್‌ಗಳಿಗೆ ದಿನದ ವಹಿವಾಟು ಅಂತ್ಯವಾಯಿತು. ಸೆನ್ಸೆಕ್ಸ್‌ನಲ್ಲಿ ಮಾರುತಿ ಸುಜುಕಿ ಮಾತ್ರ ಶೇ.2ರಷ್ಟು ಲಾಭ ಗಳಿಸಿತು.

“ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಂಬಿಕೆ ನಲುಗಿದ ಕಾರಣ ಷೇರುಪೇಟೆ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು ಹೂಡಿಕೆ ಮಾಡುವ ಎಚ್ಚರದಿಂದ ಇರಬೇಕು. ಸ್ಮಾಲ್‌ ಕ್ಯಾಪ್‌ ಹೂಡಿಕೆದಾರರು ಇನ್ನೂ ಎಚ್ಚರದಿಂದ ಇರಬೇಕು. ಕಡಿಮೆ ಬೆಲೆಗೆ ಷೇರುಗಳನ್ನು ಆಫರ್‌ ಮಾಡಲಾಗುತ್ತಿರುವ ಕುರಿತು ಶಂಕೆಗಳು ವ್ಯಕ್ತವಾಗಿವೆ. ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು” ಎಂಬುದಾಗಿ ಷೇರುಪೇಟೆ ತಜ್ಞರು ಎಚ್ಚರಿಸಿದ್ದಾರೆ.

ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ ಏರಿಕೆ?

ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇದೆ. ಇದನ್ನು, 70 ಸಾವಿರ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು 70 ಸಾವಿರ ರೂ.ಗೆ ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್‌ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ.

ಇದನ್ನೂ ಓದಿ: Rahul Gandhi: ಷೇರುಪೇಟೆಯಲ್ಲಿ ಭಾರಿ ಹಗರಣವಾಗಿದೆ ಎಂದಿದ್ದ ರಾಹುಲ್ ಗಾಂಧಿಗೆ ಐದೇ ದಿನದಲ್ಲಿ 25 ಲಕ್ಷ ರೂ. ಲಾಭ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

SIM Cards: ಮಿತಿ ಮೀರಿ ಮೊಬೈಲ್‌ ಸಿಮ್ ಹೊಂದಿದ್ದೀರಾ? ಕಾದಿದೆ ಭಾರಿ ದಂಡ, ಶಿಕ್ಷೆ!

ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು (SIM Cards) ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು. ನಮ್ಮ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

SIM Cards
Koo

ನವದೆಹಲಿ: ಹಲವಾರು ಸಿಮ್ ಕಾರ್ಡ್‌ಗಳು ನಿಮ್ಮ (SIM Cards) ಹೆಸರಲ್ಲಿದೆಯೆ? ಹಾಗಿದ್ದರೆ ಎಚ್ಚರಿಕೆ (alert) ಸೂಚನೆ ಒಂದಿದೆ ಗಮನಿಸಿ. ಕಾನೂನು ಪ್ರಕಾರ ನಿಗದಿಪಡಿಸಿದ ಸಿಮ್‌ಗಿಂತ ಹೆಚ್ಚಿನ ಸಂಖ್ಯೆಯ ಸಿಮ್ ನಿಮ್ಮ ಬಳಿ ಇದ್ದರೆ ಭಾರಿ ದಂಡ (fine) ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಬಹುದು. ನಿಮ್ಮ ಹೆಸರಲ್ಲಿ ಬೇರೆ ಯಾರೋ ಸಿಮ್‌ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಪತ್ತೆ ಹಚ್ಚಿ ಆದಷ್ಟು ಬೇಗ ನಿಷ್ಕ್ರಿಯಗೊಳಿಸಿ.

ಈಗಿನ ಡಿಜಿಟಲ್ ಯುಗದಲ್ಲಿ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ವಿಶೇಷವಾಗಿ ಅನಧಿಕೃತ ಸಿಮ್ ಕಾರ್ಡ್ ವಿತರಣೆಯ ಬಗ್ಗೆ ಕಾಳಜಿಯೊಂದಿಗೆ ಮೊಬೈಲ್ ಸಂಪರ್ಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಕೂಡ ಮುಖ್ಯವಾಗಿದೆ. ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು.

ಏನು ಶಿಕ್ಷೆ?

2023ರ ದೂರಸಂಪರ್ಕ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯು ಎಷ್ಟು ಸಿಮ್ ಕಾರ್ಡ್‌ಗಳನ್ನು ಹೊಂದಬಹುದು ಎಂಬುದರ ಕುರಿತು ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಮೊದಲ ಅಪರಾಧಕ್ಕಾಗಿ 50,000 ರೂ. ವರೆಗೆ ದಂಡ ವಿಧಿಸಬಹುದು ಮತ್ತು ಅ ನಂತರದ ಅಪರಾಧಗಳಿಗೆ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

SIM Cards


ಗರಿಷ್ಠ ಎಷ್ಟು ಸಿಮ್ ಹೊಂದಿರಬಹುದು?

ಅನುಮತಿಸಲಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್‌ಗಳು ಪ್ರದೇಶವಾರು ಬದಲಾಗುತ್ತವೆ. ರಾಷ್ಟ್ರೀಯವಾಗಿ ಪ್ರತಿ ವ್ಯಕ್ತಿಗೆ ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿ ಇದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಕೆಲವು ಈಶಾನ್ಯ ಪ್ರದೇಶಗಳಲ್ಲಿ ಇದು ಆರಕ್ಕೆ ಸೀಮಿತವಾಗಿದೆ.

ಸಿಮ್ ಕಾರ್ಡ್ ಮಾಲೀಕತ್ವದ ಪ್ರಸ್ತುತ ನಿಯಮಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದು ಅಷ್ಟೇ ಅಗತ್ಯವಾಗಿದೆ.

ಹೇಗೆ ಪರಿಶೀಲಿಸುವುದು?

ಆಧಾರ್ ಕಾರ್ಡ್‌ಗೆ ನೀಡಲಾದ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಆನ್‌ಲೈನ್ ಮೂಲಕ ನಾವೇ ಪರೀಕ್ಷಿಸಿಕೊಳ್ಳಬಹುದು. ಇದಕ್ಕಾಗಿ TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಅಲ್ಲಿ ಇರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಬಳಿಕ ಒದಗಿಸಲಾಗುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಅನಂತರ ಒಟಿಪಿ ಬಟನ್ ಕ್ಲಿಕ್ ಮಾಡಿ.
ಒಟಿಪಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಬಳಿಕ ಅಲ್ಲಿ ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್‌; ಜಿಯೊ, ಏರ್‌ಟೆಲ್‌ಗೆ ಸೆಡ್ಡು

ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಬಹುದು. ಎಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಸೇರಿವೆ ಎಂಬುದನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಿ.

ಯಾವುದೇ ಗುರುತಿಸದ ಸಂಖ್ಯೆಗಳನ್ನು ಕಂಡುಕೊಂಡರೆ, ವೆಬ್‌ಸೈಟ್ ಮೂರು ಆಯ್ಕೆಗಳನ್ನು ನೀಡುತ್ತದೆ. ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಮತ್ತು ಬೇಕಾಗಿದೆ. ಇದರಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ತಿಳಿಸಿ. ನನ್ನ ಸಂಖ್ಯೆ ಅಲ್ಲ ಅಥವಾ ಅಗತ್ಯವಿಲ್ಲ ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿರುವ ಅನಗತ್ಯ ಸಿಮ್‌ಗಳು ನಿಷ್ಕ್ರಿಯಗೊಳ್ಳುತ್ತವೆ.

Continue Reading

ಮನಿ-ಗೈಡ್

Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?

Money Guide: ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ ಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

VISTARANEWS.COM


on

Money Guide
Koo

ಬೆಂಗಳೂರು: ಬದಲಾದ ಜೀವನ ಶೈಲಿ, ಒತ್ತಡ ಬದುಕು ಇತ್ಯಾದಿ ಕಾರಣಗಳಿಂದ ದಿನ ಕಳೆದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳಿಂದ ಹಿಡಿದು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಅದರಲ್ಲಿಯೂ ಕೆಲವೊಮ್ಮೆ ಆದಾಯದ ಬಹುಪಾಲು ಚಿಕಿತ್ಸೆಗಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದೇ ಕಾರಣಕ್ಕೆ ಹಲವರು ಸೋತು ಹೈರಾಣಾಗುತ್ತಾರೆ. ಆದರೆ ನೆನಪಿರಲಿ ಕೆಲವೊಂದು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವುದಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಬಹುದು. ಆ ಪೈಕಿ ಆರೋಗ್ಯ ವಿಮೆ (Health Insuranceಮಾಡಿಸುವುದು ಮುಖ್ಯವಾದುದು. ಈಗ ಕಿರಿಯರು ಮಾತ್ರವಲ್ಲ ಹಿರಿಯರಿಗೂ ಹೆಲ್ತ್‌ ಇನ್ಶೂರೆನ್ಸ್‌ ಲಭ್ಯ (Senior Health Insurance). ಈ ಬಗೆಗಿನ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾಕಾಗಿ ಅಗತ್ಯ?

ವಯಸ್ಸಾದವರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭಾರತದಲ್ಲಿನ ಬಹುಪಾಲು ಹಿರಿಯ ನಾಗರಿಕರು ಆರೋಗ್ಯ ವಿಮೆ ಹೊಂದಿಲ್ಲ. ಆರೋಗ್ಯ ಸೇವೆಗಳ ವೆಚ್ಚಗಳು ಏರುತ್ತಲೇ ಇದ್ದರೂ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸಿಲ್ಲ ಎನ್ನುವ ಕಳವಳಕಾರಿ ಅಂಶ ಬಹಿರಂಗಗೊಂಡಿದೆ. ಜನಗಣತಿ ವರದಿಗಳ ಪ್ರಕಾರ ಭಾರತದಲ್ಲಿ ಪ್ರಸ್ತುತ 13.8 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. 2031ರ ವೇಳೆಗೆ ಈ ಸಂಖ್ಯೆ ಸುಮಾರು 19 ಕೋಟಿಗೆ ತಲುಪಲಿದೆ. ಹೀಗಾಗಿ ಹಿರಿಯ ನಾಗರಿಕರ ಆರೋಗ್ಯಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸುವುದು ಅಗತ್ಯ. ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮಾತ್ರವಲ್ಲ ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಲು ಆರೋಗ್ಯ ವಿಮೆ ಮಾಡಿಸಬೇಕಾಗಿದೆ.

ಹಿರಿಯ ನಾಗರಿಕರ ಆರೋಗ್ಯ ವಿಮೆಯಲ್ಲಿನ ವಿಧಗಳು

ಫ್ಯಾಮಿಲಿ ಫ್ಲೋಟರ್ ಯೋಜನೆ: ಹಿರಿಯರು ಸೇರಿದಂತೆ ಇಡೀ ಕುಟುಂಬವನ್ನು ಒಳಗೊಂಡಿರುವ ಒಂದೇ ಪಾಲಿಸಿ.

ವೈಯಕ್ತಿಕ ಯೋಜನೆ: ಹಿರಿಯರ ಆರೋಗ್ಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರ ಹೆಸರಿನಲ್ಲಿ ಮಾಡಿಸುವ ಪಾಲಿಸಿ.

ಹಿರಿಯ ನಾಗರಿಕರ ಆರೋಗ್ಯ ಯೋಜನೆ: ವೃದ್ಧರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗಾಗಿ ಜಾರಿಯಲ್ಲಿರುವ ಪಾಲಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಇದು ಒಳಗೊಂಡಿರುತ್ತದೆ.

ಗಂಭೀರ ಆರೋಗ್ಯ ಸಮಸ್ಯೆಯಿಂದ ರಕ್ಷಣೆ: ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ನಿರ್ದಿಷ್ಟ ಗಂಭೀರ ಕಾಯಿಲೆಗಳಿಗೆ ಮಾಡಿಬಹುದಾದ ವಿಮೆ.

ವೈಯಕ್ತಿಕ ಅಪಘಾತ(ಪಿಎ)ದಿಂದ ರಕ್ಷಣೆ: ಆಕಸ್ಮಿಕವಾಗಿ ಉಂಟಾಗುವ ಗಾಯಗಳು, ಸಾವು, ಅಂಗವೈಕಲ್ಯ ಮತ್ತು ಅನಾರೋಗ್ಯದ ವೈದ್ಯಕೀಯ ವೆಚ್ಚಗಳಿಗೆ ಮಾಡಿಸಬಹುದಾದ ಪಾಲಿಸಿ.

ಆರೈಕೆ ಯೋಜನೆ: ಒಟ್ಟಾರೆ ಆರೋಗ್ಯ, ನಿಯಮಿತ ತಪಾಸಣೆ, ಲಸಿಕೆಗಳ ಅಗತ್ಯಕ್ಕಾಗಿ ಮಾಡಿಸಬಹುದಾದ ವಿಮಾ ಯೋಜನೆ.

ಆರೋಗ್ಯ ಸಂಜೀವಿನಿ ಯೋಜನೆ: ಹಿರಿಯರು ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಸರಳೀಕೃತ ಆಯ್ಕೆ.

ಹೊಸ ನಿಯಮ ಏನು ಹೇಳುತ್ತದೆ?

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇತ್ತೀಚೆಗೆ ಹಿರಿಯರ ಆರೋಗ್ಯ ವಿಮೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಯಿಸಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಲು ಒಬ್ಬ ವ್ಯಕ್ತಿಗೆ ಇದ್ದ 65 ವರ್ಷಗಳ ಮಿತಿಯನ್ನು ತೆಗೆದುಹಾಕಿದೆ. ಆರೋಗ್ಯ ವಿಮೆಯ ಕಾಯುವ ಅವಧಿಯನ್ನು (Waiting period) 48 ತಿಂಗಳಿಂದ 36ಕ್ಕೆ ಇಳಿಸಲಾಗಿದೆ. ನಿರ್ಧಿಷ್ಟ ಕಾಯಿಲೆಗಳಿಗೆ ಕಾಯುವ ಅವಧಿಯನ್ನು 8ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ. 

ಭವಿಷ್ಯದ ಭರವಸೆ

ಒಟ್ಟಿನಲ್ಲಿ ಹಲವು ಸುಧಾರಣೆಗಳ ಮೂಲಕ ಹಿರಿಯರ ಆರೋಗ್ಯ ವಿಮೆಯ ಭವಿಷ್ಯದ ಭರವಸೆಯಾಗಿ ಗೋಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯಮವು ವಿಕಸನಗೊಳ್ಳುತ್ತಲೇ ಇರುವುದರಿಂದ ಮುಂದೆ ನಾವು ಹೆಚ್ಚು ಸೂಕ್ತವಾದ ಯೋಜನೆ, ವರ್ಧಿತ ವ್ಯಾಪ್ತಿಯ ಆಯ್ಕೆಗಳನ್ನು ನಿರೀಕ್ಷಿಸಬಹುದು. ಜತೆಗೆ ವಿಮಾ ಪೂರೈಕೆದಾರರು ಹಿರಿಯರ ವೈವಿಧ್ಯಮಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಹೊಸ ಪಾಲಿಸಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಖರೀದಿಗೆ ಇನ್ನು ವಯಸ್ಸಿನ ನಿರ್ಬಂಧ ಇಲ್ಲ; ಹೊಸ ಬದಲಾವಣೆ ಏನೇನು?

Continue Reading

ಚಿನ್ನದ ದರ

Gold Rate Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಆಭರಣ ಕೊಂಡುಕೊಳ್ಳುವ ಮುನ್ನ ದರ ಗಮನಿಸಿ

Gold Rate Today:  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 16) ಏರಿಕೆಯಾಗಿದೆ. ಸೋಮವಾರ ದರ ಇಳಿಕೆಯಾಗಿ ಗ್ರಾಹಕರು ಸಮಾಧಾನದ ನಿಟ್ಟುಸಿರು ಬಿಡುವಷ್ಟರಲ್ಲಿ ಇಂದು ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 38 ಹೆಚ್ಚಾಗಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 16) ಏರಿಕೆಯಾಗಿದೆ (Gold Rate Today). ಸೋಮವಾರ ದರ ಇಳಿಕೆಯಾಗಿ ಗ್ರಾಹಕರು ಸಮಾಧಾನದ ನಿಟ್ಟುಸಿರು ಬಿಡುವಷ್ಟರಲ್ಲಿ ಇಂದು ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 38 ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,785 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,402 ಇದೆ. 22 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ ₹ 54,280 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,850 ಮತ್ತು ₹ 6,78,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 59,216 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನವನ್ನು ₹ 74,020 ಮತ್ತು ₹ 7,40,200 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,800 ₹ 7,417
ಮುಂಬೈ₹ 6,785 ₹ 7,402
ಬೆಂಗಳೂರು₹ 6,785 ₹ 7,402
ಚೆನ್ನೈ₹ 6,830 ₹ 7,451

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 94.25 ಹಾಗೂ 8 ಗ್ರಾಂಗೆ ₹ 754 ಇದೆ. 10 ಗ್ರಾಂಗೆ ₹ 942.50 ಹಾಗೂ 1 ಕಿಲೋಗ್ರಾಂಗೆ ₹ 94,250 ಬೆಲೆ ಬಾಳುತ್ತದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.

ಜಾಗತಿಕ ಉದ್ವಿಗ್ನತೆಗಳು: ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ಹೂಡಿಕೆ ಮಾಡಬಹುದೆ?: ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ ಜಾರಿ ಸಾಧ್ಯತೆ

    Continue Reading

    ವಾಣಿಜ್ಯ

    Anant Radhika Wedding: ನಮ್ಮಿಂದ ಏನಾದರು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ; ನೀತಾ ಅಂಬಾನಿ ವಿನಮ್ರ ಮನವಿ!

    ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ (Anant Radhika Wedding) ಪ್ರಯುಕ್ತ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ನೀತಾ ಅಂಬಾನಿ ಅವರ ಹೇಳಿಕೆಯ ವಿಡಿಯೊ ಇಲ್ಲಿದೆ.

    VISTARANEWS.COM


    on

    By

    Anant Radhika Wedding
    Koo

    ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ (Anant Radhika Wedding) ನೀತಾ ಅಂಬಾನಿ (nita ambani) ವೈಯಕ್ತಿಕವಾಗಿ (ಮಾಧ್ಯಮ ಛಾಯಾಗ್ರಾಹಕರು) ಪಾಪರಾಜಿಗಳನ್ನು (paparazzi) ಆಹ್ವಾನಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಇದು ಈಗ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

    ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಪ್ರಯುಕ್ತ ನಡೆದ ಮಂಗಲ್ ಉತ್ಸವ ಅಥವಾ ಅದ್ಧೂರಿ ವಿವಾಹದ ಆರತಕ್ಷತೆಯಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ಎ.ಆರ್. ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಅವರಿಬ್ಬರ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಧೀರೂಬಾಯಿ ಅಂಬಾನಿಯವರ ಜೀವನವನ್ನು ಆಧರಿಸಿದ ಸಂಗೀತ ಕಾರ್ಯಕ್ರಮದ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

    ಈ ನಡುವೆ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ.


    ಈ ವಿಡಿಯೋದಲ್ಲಿ ನೀತಾ ಅಂಬಾನಿ, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ಯಾವುದಾದರೂ ತಪ್ಪಾಗಿದ್ದರೆ ದಯವಿಟ್ಟು ನಮ್ಮನ್ನು ಕ್ಷಮಿಸಿ. ಯಾಕೆಂದರೆ ನಮ್ಮದು ಈಗ ಮದುವೆ ನಡೆಯುತ್ತಿರುವ ಮನೆ. ನಾಳೆ ನಮ್ಮ ಅತಿಥಿಗಳಾಗಿ ಬನ್ನಿ, ನೀವೆಲ್ಲರೂ ಆಹ್ವಾನವನ್ನು ಸ್ವೀಕರಿಸಿದ್ದೀರಿ. ನಮ್ಮ ಅತಿಥಿಗಳಾಗಿ ನಾಳೆ ನಿಮ್ಮನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. ದಯವಿಟ್ಟು ನಿಮ್ಮ ಕುಟುಂಬಗಳೊಂದಿಗೆ ಬನ್ನಿ ಎಂದು ಪಾಪರಾಜಿಗಳನ್ನು ಆಮಂತ್ರಿಸಿದರು.

    ಇದನ್ನೂ ಓದಿ: Anant Ambani Wedding: ಕೌಟುಂಬಿಕ ಮುನಿಸು ಮರೆತು ವರನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ-ಅನಿಲ್ ಅಂಬಾನಿ

    ಈ ಕಾರ್ಯಕ್ರಮದ ಮೂಲಕ ಅವರು ಪಾಪರಾಜಿಗಳ ಮನ ಗೆದ್ದಿರುವುದು ಮಾತ್ರವಲ್ಲ ಅವರ ವಿನಮ್ರಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

    ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹದ ವಿಧಿವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಮಾರಂಭಕ್ಕೆ ಸಾಕ್ಷಿಯಾಗಲು ಪ್ರಪಂಚದಾದ್ಯಂತದ ಹಲವಾರು ಅತಿಥಿಗಳು ಸಾಕ್ಷಿಯಾಗಿದ್ದರು. ಕಿಮ್, ಕ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಮತ್ತು ಜಾನ್ ಸೆನಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ರಾಜಕಾರಣಿಗಳು ಹಾಗೂ ಖ್ಯಾತನಾಮರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸಿದ್ದರು.

    Continue Reading
    Advertisement
    Oil Tanker Capsizes
    ವಿದೇಶ4 hours ago

    Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

    Team India
    ಪ್ರಮುಖ ಸುದ್ದಿ4 hours ago

    Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

    Ananth Ambani Wedding
    ದೇಶ4 hours ago

    Anant Ambani Wedding: ಅನಂತ್‌ ಅಂಬಾನಿ ಮದುವೆಯಲ್ಲಿ ಬಾಂಬ್‌ ಸ್ಫೋಟಕ್ಕೆ ನಡೆದಿತ್ತಾ ಸಂಚು? ಕಿಡಿಗೇಡಿ ಅರೆಸ್ಟ್‌

    Yuvraj Singh
    ಕ್ರೀಡೆ4 hours ago

    Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

    Mosaic of Modernity art exhibition by Gallery G in Bengaluru
    ಕರ್ನಾಟಕ5 hours ago

    Bengaluru News: ಬೆಂಗಳೂರಿನಲ್ಲಿ ಗ್ಯಾಲರಿ ಜಿ ಯಿಂದ ‘ಮೊಸಾಯಿಕ್ ಆಫ್ ಮಾಡರ್ನಿಟಿ’ ಕಲಾ ಪ್ರದರ್ಶನ

    Viral Video
    ವೈರಲ್ ನ್ಯೂಸ್5 hours ago

    Viral Video: ಪಕ್ಷದ ಕಾರ್ಯಕರ್ತನಿಗೆ ರಪ್‌ ಅಂತಾ ಕೆನ್ನೆಗೆ ಬಾರಿಸಿದ ಟಿಎಂಸಿ ನಾಯಕಿ; ವಿಡಿಯೋ ಇದೆ

    T20 World Cup 2024
    ಪ್ರಮುಖ ಸುದ್ದಿ6 hours ago

    T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

    Assembly Session
    ಕರ್ನಾಟಕ6 hours ago

    Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

    A 15 year old boy weighing 111 kg underwent successful spinal disc surgery that avoided potential paralysis
    ಕರ್ನಾಟಕ6 hours ago

    Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

    Pooja Khedkar
    ದೇಶ6 hours ago

    Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

    Sharmitha Gowda in bikini
    ಕಿರುತೆರೆ9 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ9 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ9 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ8 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ10 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ7 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ8 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    Karnataka Rain
    ಮಳೆ15 hours ago

    Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

    karnataka Rain
    ಮಳೆ16 hours ago

    Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

    karnataka Weather Forecast
    ಮಳೆ1 day ago

    Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    karnataka Rain
    ಮಳೆ2 days ago

    Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

    karnataka weather Forecast
    ಮಳೆ2 days ago

    Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

    Karnataka Rain
    ಮಳೆ2 days ago

    Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

    karnataka Rain
    ಮಳೆ2 days ago

    Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

    haveri News
    ಹಾವೇರಿ3 days ago

    Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

    karnataka Rain
    ಮಳೆ3 days ago

    Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

    karnataka Weather Forecast
    ಮಳೆ3 days ago

    Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

    ಟ್ರೆಂಡಿಂಗ್‌