Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಹ್ಮದ್‌ ಎಂಬಾತನಿಂದ ಅಶ್ಲೀಲ ಕಮೆಂಟ್, ಭುಗಿಲೆದ್ದ ಜನಾಕ್ರೋಶ; ದುಷ್ಕರ್ಮಿ ಬಂಧನಕ್ಕೆ ಆಗ್ರಹ - Vistara News

ದೇಶ

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಹ್ಮದ್‌ ಎಂಬಾತನಿಂದ ಅಶ್ಲೀಲ ಕಮೆಂಟ್, ಭುಗಿಲೆದ್ದ ಜನಾಕ್ರೋಶ; ದುಷ್ಕರ್ಮಿ ಬಂಧನಕ್ಕೆ ಆಗ್ರಹ

Smriti Singh: ಹುತಾತ್ಮ ಯೋಧ ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ ಅವರ ಪತ್ನಿ ಸ್ಮೃತಿ ಸಿಂಗ್‌ ಅವರ ಫೋಟೊಗೆ ಸಾಮಾಜಿಕ ಜಾಲತಾಣದಲ್ಲಿ ಅಹ್ಮದ್‌ ಕೆ. ಎಂಬಾತನು ಕಮೆಂಟ್‌ ಮಾಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಮೃತಿ ಸಿಂಗ್‌ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಕೂಡಲೇ ಬಂಧಿಸುವಂತೆ ಪೊಲೀಸರಿಗೂ ಆಗ್ರಹಿಸಿದೆ.

VISTARANEWS.COM


on

Smriti Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲಿ ರಾಜಕಾರಣಿಗಳಿಗೆ, ಕ್ರೀಡಾಪಟುಗಳಿಗೆ, ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳು ಇರುತ್ತಾರೆ. ಒಬ್ಬೊಬ್ಬ ಸೆಲೆಬ್ರಿಟಿಗೂ ಅಭಿಮಾನಿಗಳು ಇರುತ್ತಾರೆ. ಆದರೆ, ದೇಶದ ಪ್ರತಿಯೊಬ್ಬರೂ ಯೋಧರನ್ನು ಗೌರವಿಸುತ್ತಾರೆ. ನಮ್ಮ ದೇಶವನ್ನು, ನಮ್ಮನ್ನು ಕಾಯುವವರು ಎಂದು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಯೋಧರ ಮೇಲೆ ಗೌರವ ಹೊಂದಿರುತ್ತಾರೆ. ಆದರೆ, ಕಳೆದ ವರ್ಷ ಗಡಿಯಲ್ಲಿ ಹುತಾತ್ಮರಾದ ಯೋಧ, ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ (Captain Anshuman Singh) ಎಂಬುವರ ಪತ್ನಿ ಸ್ಮೃತಿ ಸಿಂಗ್‌ (Smriti Singh) ಬಗ್ಗೆ ಅಹ್ಮದ್‌ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದು, ಈತನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ ಅವರಿಗೆ ಕೆಲ ದಿನಗಳ ಹಿಂದಷ್ಟೇ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸ್ಮೃತಿ ಸಿಂಗ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಸ್ಮೃತಿ ಸಿಂಗ್‌ ಮಾತನಾಡಿದ್ದು, ಪತಿಯ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ, ಅಹ್ಮದ್‌ ಕೆ ಎಂಬಾತನು ಸ್ಮೃತಿ ಸಿಂಗ್‌ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದಾನೆ. ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಜನ ಆಗ್ರಹಿಸುತ್ತಿದ್ದಾರೆ.

ಬಂಧಿಸುವಂತೆ ಮಹಿಳಾ ಆಯೋಗ ಆಗ್ರಹ

ಸ್ಮೃತಿ ಸಿಂಗ್‌ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. “ಸ್ಮೃತಿ ಸಿಂಗ್‌ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದವನನ್ನು ದೆಹಲಿಯ ಅಹ್ಮದ್‌ ಕೆ. ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧ ಪೊಲೀಸರು ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆರೋಪಿಯನ್ನು ಬಂಧಿಸಬೇಕು. ಈ ಕುರಿತು ಮೂರು ದಿನಗಳಲ್ಲಿ ವರದಿ ನೀಡಬೇಕು” ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ದೆಹಲಿ ಪೊಲೀಸರಿಗೆ ನೋಟಿಸ್‌ ನೀಡಿದ್ದಾರೆ.

ಪತಿಯ ಬಗ್ಗೆ ಸ್ಮೃತಿ ಸಿಂಗ್‌ ಏನು ಹೇಳಿದ್ದರು?

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ಸ್ಮೃತಿ ಸಿಂಗ್‌, ಪತಿಯ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. “ನಾವಿಬ್ಬರು ಪ್ರೀತಿಸುತ್ತಿದ್ದೆವು. 2023ರ ಫೆಬ್ರವರಿಯಲ್ಲಿ ನಮ್ಮ ಮದುವೆಯಾಗಿತ್ತು. ಇದಾದ ಬಳಿಕ ಅನ್ಶುಮಾನ್‌ ಸಿಂಗ್‌ ಸೇನೆಯ ಕರ್ತವ್ಯಕ್ಕಾಗಿ ಗಡಿಗೆ ತೆರಳಿದ್ದರು. ನಾನು ಮತ್ತು ಅನ್ಶುಮಾನ್‌ ಸಿಂಗ್‌ 2023ರ ಜುಲೈ 18ರಂದು ದೂರವಾಣಿ ಮೂಲಕ ಮಾತನಾಡಿದ್ದೆವು. ಅವರು ನಮ್ಮ ಬಗ್ಗೆ ನೂರು ಕನಸು ಕಂಡಿದ್ದರು. ಮನೆ ಕಟ್ಟಿಸುವುದು, ಮಗು, ಇಬ್ಬರೂ 50 ವರ್ಷ ಜತೆಯಾಗಿ ಇರೋಣ ಎಂದೆಲ್ಲ ಅವರು ಹೇಳಿದ್ದರು. ಆದರೆ, ಜುಲೈ 19ರಂದು ಬೆಳಗ್ಗೆ ನಮಗೆ ಕರೆ ಬಂತು. ಅನ್ಶುಮಾನ್‌ ಸಿಂಗ್‌ ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತವಾಯಿತು” ಎಂಬುದಾಗಿ ಸ್ಮೃತಿ ಸಿಂಗ್‌ ಸ್ಮರಿಸಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿತು.

ಕಳೆದ ವರ್ಷ ಏನಾಗಿತ್ತು?

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Pooja Khedkar: ಇನ್ನು ಮಹಿಳಾ ಪೊಲೀಸ್‌ ಪೇದೆ ಪೂಜಾ ಮನೆಗೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಮನೆಗೆ ಪೊಲೀಸರು ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದ ಪೂಜಾ, ಸ್ವಲ್ಪ ಕೆಲಸ ಇತ್ತು. ಹಾಗಾಗಿ ಪೊಲೀಸರನ್ನು ಮನೆಗೆ ಕರೆಸಿಕೊಂಡಿದ್ದೆ ಎಂದಿದ್ದರು.

VISTARANEWS.COM


on

Pooja Khedkar
Koo

ಮುಂಬೈ: ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್‌ (Pooja Khedkar) ಪುಣೆ ಜಿಲ್ಲಾಧಿಕಾರಿ ಸುಹಾಸ್‌ ದಿವಾಸೆ ವಿರುದ್ಧ ಲೈಂಗಿಕ ಕಿರುಕುಳ(Sexual Harassment)ದ ಆರೋಪ ಹೊರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮನ್ನು ಪುಣೆಯಿಂದ ವಾಸಿಂಗೆ ವರ್ಗಾವಣೆ ಮಾಡಿದ್ದ ಸುಹಾಸ್‌ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೂಜಾ ದೂರಿದ್ದಾರೆ. ಇನ್ನು ಮಹಿಳಾ ಪೊಲೀಸ್‌ ಪೇದೆ ಪೂಜಾ ಮನೆಗೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಮನೆಗೆ ಪೊಲೀಸರು ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದ ಪೂಜಾ, ಸ್ವಲ್ಪ ಕೆಲಸ ಇತ್ತು. ಹಾಗಾಗಿ ಪೊಲೀಸರನ್ನು ಮನೆಗೆ ಕರೆಸಿಕೊಂಡಿದ್ದೆ ಎಂದಿದ್ದರು. ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ, ಅತಿಯಾದ ದರ್ಪ, ನಕಲಿ ದಾಖಲೆ ಸೃಷ್ಟಿಯಿಂದಲೇ ದೇಶಾದ್ಯಂತ ಗಮನ ಸೆಳೆದಿರುವ ಟ್ರೈನಿ ಅಧಿಕಾರಿ (Trainee IAS Officer) ಪೂಜಾ ಖೇಡ್ಕರ್‌ ಅವರ ಒಂದೊಂದೇ ಕಳ್ಳಾಟಗಳು ಬಯಲಾಗುತ್ತಿವೆ.

ಇನ್ನು ಮಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಸೇವಾ ಅಕಾಡೆಮಿ ಖೇಡ್ಕರ್‌ ಅವರನ್ನು ತರಬೇತಿ ಶಿಬಿರಕ್ಕೆ ಕರೆದು ಅವರ ತರಬೇತಿಯನ್ನು ತಡೆ ಹಿಡಿದಿರುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಮಹಾರಾಷ್ಟ್ರದ ರಾಜ್ಯ ಸರ್ಕಾರದ ಜಿಲ್ಲಾ ತರಬೇತಿ ಕಾರ್ಯಕ್ರಮದಿಂದ “ನಿಮ್ಮನ್ನು ತರಬೇತಿಯಿಂದ ರಿಲೀವ್‌ ಮಾಡಲಾಗಿದೆ. ಆದಷ್ಟು ಬೇಗ ಅಕಾಡೆಮಿಗೆ ಬಂದು ಸೇರಿಕೊಳ್ಳಿ” ಎಂದು ಅಕಾಡೆಮಿ ಖೇಡ್ಕರ್‌ ಅವರಿಗೆ ಹೇಳಿದೆ.

ತಮ್ಮ ಖಾಸಗಿ ಕಾರಿಗೆ ‘ಕೆಂಪು ಗೂಟ’ ಅಳವಡಿಸಿದ್ದು ಸೇರಿ ಹಲವು ರೀತಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ವರ್ಗಾವಣೆಯ ಶಿಕ್ಷೆ ಅನುಭವಿಸುತ್ತಿರುವ ಪೂಜಾ ಖೇಡ್ಕರ್‌ ಅವರು ನಕಲಿ ಜಾತಿ ಪ್ರಮಾಣಪತ್ರ, ವಿಶೇಷ ಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ಕೂಡ ಫೇಕ್‌ ಡಾಕ್ಯುಮೆಂಟ್‌ ತಯಾರಿಸಿದ ಆರೋಪಗಳನ್ನೂ ಎದುರಿಸುತ್ತಿದ್ದಾರೆ.

ನಿಯಮಿತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪುಣೆಯಿಂದ (ಅಸಿಸ್ಟಂಟ್‌ ಕಲೆಕ್ಟರ್)‌ ವಾಶಿಂಗೆ ವರ್ಗಾವಣೆಗೊಂಡಿರುವ 34 ವರ್ಷದ ಅಧಿಕಾರಿಯು, ಒಬಿಸಿ ಜಾತಿ ಪ್ರಮಾಣಪತ್ರ ಲಗತ್ತಿಸಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಆದರೆ, ಅವರು ಒಬಿಸಿ ಜಾತಿ ಪ್ರಮಾಣಪತ್ರದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ವಿಶೇಷ ಚೇತನ ಎಂಬುದಾಗಿಯೂ ಫೇಕ್‌ ಡಾಕ್ಯುಮೆಂಟ್‌ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮೆಡಿಕಲ್‌ ಟೆಸ್ಟ್‌ ಪ್ರಕಾರ ಪೂಜಾ ಖೇಡ್ಕರ್‌ ಅವರು ಫಿಟ್‌ ಇದ್ದಾರೆ ಎಂದು ಹೇಳಲಾಗುತ್ತಿದೆ.‌ 2007ರಲ್ಲಿ ಅವರು ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸಿದಾಗ ದೈಹಿಕವಾಗಿ ಫಿಟ್‌ ಇರುವುದಾಗಿ ದಾಖಲೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಯಸ್ಸಿನ ಕುರಿತೂ ಸುಳ್ಳು ದಾಖಲೆ

ಜಾತಿ, ವಿಶೇಷ ಚೇತನ ಪ್ರಮಾಣಪತ್ರದ ಜತೆಗೆ ಪೂಜಾ ಖೇಡ್ಕರ್‌ ಅವರು ವಯಸ್ಸಿನ ಕುರಿತು ಕೂಡ ಸುಳ್ಳು ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2020ರಿಂದ 2023ರ ಅವಧಿಯಲ್ಲಿ ಅವರು ಸಲ್ಲಿಸಿದ ದಾಖಲೆಗಳ ಪ್ರಕಾರ, ಮೂರು ವರ್ಷದಲ್ಲಿ ಅವರ ವಯಸ್ಸು ದಾಖಲೆಯಲ್ಲಿ ಒಂದೇ ವರ್ಷ ಹೆಚ್ಚಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಯಸ್ಸಿನ ಮಿತಿ ಇರುವ ಕಾರಣ ಅವರು ವಯಸ್ಸಿನ ಕುರಿತು ಕೂಡ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ.

27 ಸಾವಿರ ರೂ. ದಂಡ ಬಿದ್ದಿದ್ದೇಕೆ?

ಅಧಿಕಾರದ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಜತೆಗೆ ಸಂಚಾರ ದಟ್ಟಣೆ ನಿಯಮಗಳ ಉಲ್ಲಂಘನೆಯಲ್ಲೂ ಮುಂದಿದ್ದಾರೆ. ವಾಶಿಂ ಮಹಿಳಾ ಪೊಲೀಸರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಪೂಜಾ ಖೇಡ್ಕರ್‌ ಅವರು ಎರಡು ತಾಸು ಚರ್ಚಿಸಿದ್ದಾರೆ. ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗದಿದ್ದರೂ, ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 27 ಸಾವಿರ ರೂ. ದಂಡ ವಿಧಿಸಲಾಗಿದ್ದು, ಅದರ ನೋಟಿಸ್‌ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Manorathangal Trailer: ಗಮನ ಸೆಳೆದ ʼಮನೋರಥಂಗಳ್‌ʼ ಟ್ರೈಲರ್‌; 8 ನಿರ್ದೇಶಕರ 9 ಎಪಿಸೋಡ್‌ನಲ್ಲಿ ಸ್ಟಾರ್‌ಗಳ ಸಮಾಗಮ

Continue Reading

ವಿದೇಶ

Muscat Terrorist Attack: ಮಸ್ಕತ್‌ನಲ್ಲಿ ಉಗ್ರರ ಅಟ್ಟಹಾಸ; ಭಾರತೀಯ ಸೇರಿ 9ಮಂದಿ ಸಾವು

Muscat Terrorist Attack: ಒಮಾನ್’ನ ಶಿಯಾ ಮುಸ್ಲಿಂ ಮಸೀದಿಯ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ದಾಳಿಕೋರರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಮತ್ತು ಒಬ್ಬ ಪೊಲೀಸ್ ಸೇರಿದ್ದಾರೆ ಎಂದು ಪಾಕಿಸ್ತಾನ ಮತ್ತು ಒಮಾನ್ ಅಧಿಕಾರಿಗಳು ತಿಳಿಸಿದ್ದಾರೆ

VISTARANEWS.COM


on

Muscat Terrorist Attack
Koo

ಮಸ್ಕತ್: ಒಮಾನ್‌(Oman)ನ ರಾಜಧಾನಿ ಮಸ್ಕತ್‌(Muscat Terrorist Attack)ನಲ್ಲಿರುವ ವಾದಿ ಕಬೀರ್ ಪ್ರದೇಶದ ಮಸೀದಿಯೊಂದರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಭಾರತೀಯ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಮಾನ್’ನ ಶಿಯಾ ಮುಸ್ಲಿಂ ಮಸೀದಿಯ ಮೇಲೆ ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ದಾಳಿಕೋರರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಮತ್ತು ಒಬ್ಬ ಪೊಲೀಸ್ ಸೇರಿದ್ದಾರೆ ಎಂದು ಪಾಕಿಸ್ತಾನ ಮತ್ತು ಒಮಾನ್ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿದಂತೆ ವಿವಿಧ ರಾಷ್ಟ್ರಗಳ 28 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಮಾನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ಗುಂಡಿನ ದಾಳಿಯನ್ನು ಖಂಡಿಸಿದೆ ಮತ್ತು ಸತ್ತ ಪಾಕಿಸ್ತಾನಿಗಳ ಪಾರ್ಥಿವ ಶರೀರವನ್ನು ಮರಳಿ ತರಲು ಒಮಾನಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

Continue Reading

ದೇಶ

Delhi Liquor Policy Case: ತಿಹಾರ್‌ ಜೈಲಿನಲ್ಲಿರುವ ಕೆ.ಕವಿತಾ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Delhi Liquor Policy Case: ಪ್ರಸ್ತುತ ತಿಹಾರ್‌ ಜೈಲಿನಲ್ಲಿರುವ ಕವಿತಾ, ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್‌ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

VISTARANEWS.COM


on

K Kavitha
Koo

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಬಂಧನದಲ್ಲಿರುವ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ಕೆ. ಕವಿತಾ(K Kavitha)ರನ್ನು ಡಿಡಿಯು ಆಸ್ಪತ್ರೆ(DDU Hospital) ದಾಖಲಿಸಲಾಗಿದೆ. ಪ್ರಸ್ತುತ ತಿಹಾರ್‌ ಜೈಲಿನಲ್ಲಿರುವ ಕವಿತಾ, ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್‌ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೀಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಇಲ್ಲಿಯ ತನಕ ನಡೆದ ತನಿಖೆಯ ಪ್ರಕಾರ ಒಟ್ಟು 1,100 ಕೋಟಿ ರೂ. ಮೊತ್ತದ ಹಗರಣ ನಡೆದಿರುವುದು ಕಂಡು ಬಂದಿದೆ. ಕವಿತಾ, ಚಂಪ್ರೀತ್ ಸಿಂಗ್, ಪ್ರಿನ್ಸ್ ಕುಮಾರ್, ದಾಮೋದರ್ ಶರ್ಮಾ ಮತ್ತು ಅರವಿಂದ್ ಸಿಂಗ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಈ ಪೈಕಿ ಕವಿತಾ ಅವರು 292.8 ಕೋಟಿ ರೂ.ಗಳ ಪಿಒಸಿ (Money generated and laundered in crime)ಯಲ್ಲಿ ಭಾಗಿಯಾಗಿದ್ದಾರೆ. 100 ಕೋಟಿ ರೂ.ಗಳ ಕಿಕ್‌ಬ್ಯಾಕ್‌ ಅನ್ನು ಎಎಪಿ ನಾಯಕರಿಗೆ ನೀಡಲಾಗಿದೆ. ಮಾತ್ರವಲ್ಲ ಕವಿತಾ ಅವರು ಮೊಬೈಲ್‌ನಲ್ಲಿದ್ದ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂದೂ ದೂರಲಾಗಿದೆ.

ಆರೋಪಿ ವಿಜಯ್ ನಾಯರ್ (ಎಎಪಿಯ ಉನ್ನತ ನಾಯಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ) ಮೂಲಕ ಕವಿತಾ ಅವರು ಸೌತ್ ಗ್ರೂಪ್ ಸದಸ್ಯರು ಮತ್ತು ಎಎಪಿ ನಾಯಕರೊಂದಿಗೆ ಸೇರಿ 100 ಕೋಟಿ ರೂ.ಗಳನ್ನು ಪಾವತಿಸಲು ಮತ್ತು ಅನಗತ್ಯ ಪ್ರಯೋಜನಗಳನ್ನು ಪಡೆಯಲು ಸಂಚು ರೂಪಿಸಿದ್ದರು ಎಂದು ವಿವರಿಸಲಾಗಿದೆ.

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Arvind Kejriwal: “ಜೈಲಿನಲ್ಲಿ ಕೇಜ್ರಿವಾಲ್‌ ಹತ್ಯೆಗೆ ಸಂಚು”- ಸಂಚಲನ ಮೂಡಿಸ್ತಿದೆ ಆಪ್‌ ಆರೋಪ

Continue Reading

ಗ್ಯಾಜೆಟ್ಸ್

SIM Cards: ಮಿತಿ ಮೀರಿ ಮೊಬೈಲ್‌ ಸಿಮ್ ಹೊಂದಿದ್ದೀರಾ? ಕಾದಿದೆ ಭಾರಿ ದಂಡ, ಶಿಕ್ಷೆ!

ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು (SIM Cards) ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು. ನಮ್ಮ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

SIM Cards
Koo

ನವದೆಹಲಿ: ಹಲವಾರು ಸಿಮ್ ಕಾರ್ಡ್‌ಗಳು ನಿಮ್ಮ (SIM Cards) ಹೆಸರಲ್ಲಿದೆಯೆ? ಹಾಗಿದ್ದರೆ ಎಚ್ಚರಿಕೆ (alert) ಸೂಚನೆ ಒಂದಿದೆ ಗಮನಿಸಿ. ಕಾನೂನು ಪ್ರಕಾರ ನಿಗದಿಪಡಿಸಿದ ಸಿಮ್‌ಗಿಂತ ಹೆಚ್ಚಿನ ಸಂಖ್ಯೆಯ ಸಿಮ್ ನಿಮ್ಮ ಬಳಿ ಇದ್ದರೆ ಭಾರಿ ದಂಡ (fine) ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಬಹುದು. ನಿಮ್ಮ ಹೆಸರಲ್ಲಿ ಬೇರೆ ಯಾರೋ ಸಿಮ್‌ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಪತ್ತೆ ಹಚ್ಚಿ ಆದಷ್ಟು ಬೇಗ ನಿಷ್ಕ್ರಿಯಗೊಳಿಸಿ.

ಈಗಿನ ಡಿಜಿಟಲ್ ಯುಗದಲ್ಲಿ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ವಿಶೇಷವಾಗಿ ಅನಧಿಕೃತ ಸಿಮ್ ಕಾರ್ಡ್ ವಿತರಣೆಯ ಬಗ್ಗೆ ಕಾಳಜಿಯೊಂದಿಗೆ ಮೊಬೈಲ್ ಸಂಪರ್ಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಕೂಡ ಮುಖ್ಯವಾಗಿದೆ. ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು.

ಏನು ಶಿಕ್ಷೆ?

2023ರ ದೂರಸಂಪರ್ಕ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯು ಎಷ್ಟು ಸಿಮ್ ಕಾರ್ಡ್‌ಗಳನ್ನು ಹೊಂದಬಹುದು ಎಂಬುದರ ಕುರಿತು ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಮೊದಲ ಅಪರಾಧಕ್ಕಾಗಿ 50,000 ರೂ. ವರೆಗೆ ದಂಡ ವಿಧಿಸಬಹುದು ಮತ್ತು ಅ ನಂತರದ ಅಪರಾಧಗಳಿಗೆ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

SIM Cards


ಗರಿಷ್ಠ ಎಷ್ಟು ಸಿಮ್ ಹೊಂದಿರಬಹುದು?

ಅನುಮತಿಸಲಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್‌ಗಳು ಪ್ರದೇಶವಾರು ಬದಲಾಗುತ್ತವೆ. ರಾಷ್ಟ್ರೀಯವಾಗಿ ಪ್ರತಿ ವ್ಯಕ್ತಿಗೆ ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿ ಇದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಕೆಲವು ಈಶಾನ್ಯ ಪ್ರದೇಶಗಳಲ್ಲಿ ಇದು ಆರಕ್ಕೆ ಸೀಮಿತವಾಗಿದೆ.

ಸಿಮ್ ಕಾರ್ಡ್ ಮಾಲೀಕತ್ವದ ಪ್ರಸ್ತುತ ನಿಯಮಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದು ಅಷ್ಟೇ ಅಗತ್ಯವಾಗಿದೆ.

ಹೇಗೆ ಪರಿಶೀಲಿಸುವುದು?

ಆಧಾರ್ ಕಾರ್ಡ್‌ಗೆ ನೀಡಲಾದ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಆನ್‌ಲೈನ್ ಮೂಲಕ ನಾವೇ ಪರೀಕ್ಷಿಸಿಕೊಳ್ಳಬಹುದು. ಇದಕ್ಕಾಗಿ TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಅಲ್ಲಿ ಇರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಬಳಿಕ ಒದಗಿಸಲಾಗುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಅನಂತರ ಒಟಿಪಿ ಬಟನ್ ಕ್ಲಿಕ್ ಮಾಡಿ.
ಒಟಿಪಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಬಳಿಕ ಅಲ್ಲಿ ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್‌; ಜಿಯೊ, ಏರ್‌ಟೆಲ್‌ಗೆ ಸೆಡ್ಡು

ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಬಹುದು. ಎಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಸೇರಿವೆ ಎಂಬುದನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಿ.

ಯಾವುದೇ ಗುರುತಿಸದ ಸಂಖ್ಯೆಗಳನ್ನು ಕಂಡುಕೊಂಡರೆ, ವೆಬ್‌ಸೈಟ್ ಮೂರು ಆಯ್ಕೆಗಳನ್ನು ನೀಡುತ್ತದೆ. ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಮತ್ತು ಬೇಕಾಗಿದೆ. ಇದರಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ತಿಳಿಸಿ. ನನ್ನ ಸಂಖ್ಯೆ ಅಲ್ಲ ಅಥವಾ ಅಗತ್ಯವಿಲ್ಲ ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿರುವ ಅನಗತ್ಯ ಸಿಮ್‌ಗಳು ನಿಷ್ಕ್ರಿಯಗೊಳ್ಳುತ್ತವೆ.

Continue Reading
Advertisement
T20 World Cup 2024
ಪ್ರಮುಖ ಸುದ್ದಿ33 mins ago

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

Assembly Session
ಕರ್ನಾಟಕ47 mins ago

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

A 15 year old boy weighing 111 kg underwent successful spinal disc surgery that avoided potential paralysis
ಕರ್ನಾಟಕ54 mins ago

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Pooja Khedkar
ದೇಶ59 mins ago

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Larva survey Show the old photo without GPS and get crores of rupees to the government Cheating Alleged by MLC TA Sharavana
ಕರ್ನಾಟಕ1 hour ago

Assembly Session: ಲಾರ್ವಾ ಸರ್ವೇ; ಜಿಪಿಎಸ್ ಇಲ್ಲದ ಹಳೆ ಫೋಟೋ ತೋರಿಸಿ ಕೋಟ್ಯಂತರ ರೂ. ಮೋಸ; ಶರವಣ ಆರೋಪ

A permanent solution to artificial flood on national highways says MP Vishweshwar Hegde Kageri
ಉತ್ತರ ಕನ್ನಡ1 hour ago

Uttara Kannada News: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ; ಕಾಗೇರಿ

ಕರ್ನಾಟಕ1 hour ago

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

Chennai Super King
ಕ್ರೀಡೆ1 hour ago

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

Anushka Sharma
ಪ್ರಮುಖ ಸುದ್ದಿ2 hours ago

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Muscat Terrorist Attack
ವಿದೇಶ2 hours ago

Muscat Terrorist Attack: ಮಸ್ಕತ್‌ನಲ್ಲಿ ಉಗ್ರರ ಅಟ್ಟಹಾಸ; ಭಾರತೀಯ ಸೇರಿ 9ಮಂದಿ ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌